ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 20/05/2021 ರಂದು ಪಿರ್ಯಾದಿದಾರರಾದ ಮನೋಜ್ ಕುಮಾರ್ ಟಿ. ಪೂಜಾರಿ (32), ತಂದೆ: ತಾರಾನಾಥ ಪೂಜಾರಿ, ವಾಸ: ದೊಡ್ಡಮನೆ, ಮಟಪಾಡಿ ಅಂಚೆ ಮತ್ತು ಗ್ರಾಮ, ಬ್ರಹ್ಮಾವರ ತಾಲೂಕು ಇವರು ತನ್ನ ಮೋಟಾರ್ ಸೈಕಲ್‌ನಲ್ಲಿ ಬ್ರಹ್ಮಾವರದಿಂದ ಚಾಂತಾರು – ಮಟಪಾಡಿ ರಸ್ತೆಯಲ್ಲಿ ಮನೆಗೆ ಹೋಗುತ್ತಿರುವಾಗ ಬೆಳಿಗ್ಗೆ 07:15 ಗಂಟೆಗೆ ಅವರ ಮುಂಭಾಗದಲ್ಲಿ ಆರೋಪಿ ಪ್ರಸನ್ನ ಎಂಬುವವರು KA-20-ER-1036 ನೇ Bajaj Pulsar ಮೋಟಾರ್ ಸೈಕಲ್‌ನಲ್ಲಿ ತನ್ನ ತಾಯಿ ಲಲಿತಾ (46) ಎಂಬುವವರನ್ನು ಸಹಸವಾರಿಣಿಯಾಗಿ ಕುಳ್ಳಿರಿಸಿಕೊಂಡು  ಮಟಪಾಡಿ ಕಡೆಗೆ ಅತೀ ವೇಗ ಹಾಗೂ   ಅಜಾಗರೂಕತೆಯಿಂದ ಸವಾರಿ ಮಾಡುತ್ತಿದ್ದಾಗ ಚಾಂತಾರು ಗ್ರಾಮದ ಚಂದ್ರಕಾಂತ ಎಂಬವರ ಮನೆಯ ಸಮೀಪ ಸದ್ರಿ ಮೋಟಾರ್‌ ಸೈಕಲ್‌ ನಿಂದ ಒಮ್ಮೇಲೆ ಲಲಿತಾ ರವರು  ಕೆಳಗೆ ಬಿದ್ದ ಪರಿಣಾಮ ಲಲಿತಾ ರವರ ಹಣೆಯ ಎಡಭಾಗಕ್ಕೆ ಜಖಂ ಆಗಿ ಮೂಗಿನಲ್ಲಿ ರಕ್ತ ಬರುತ್ತಿದ್ದು, ಅರೆಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದು, ಕೂಡಲೇ ಅವರನ್ನ ಕರೆದುಕೊಂಡು ಬ್ರಹ್ಮಾವರ ಮಹೇಶ್ ಆಸ್ಪತ್ರೆಗೆ ಹೋಗಿ ಅಲ್ಲಿ  ಪ್ರಥಮ ಚಿಕಿತ್ಸೆ ನೀಡಿ, ವೈಧ್ಯರು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಲಲಿತಾ ರವರನ್ನು ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈಧ್ಯರು ಲಲಿತಾ ರವರನ್ನು ಪರೀಕ್ಷಿಸಿ ಚಿಕಿತ್ಸೆ ನೀಡಿದರೂ ಕೂಡ ಬದುಕುವ ಸಾಧ್ಯತೆ ಕಡಿಮೆ ಇದೆ, ಮನೆಗೆ ಕರೆದುಕೊಂಡು ಹೋಗಿ ಎಂದು ತಿಳಿಸಿದ್ದು, ಅದರಂತೆ ಲಲಿತಾ ರವರನ್ನು ಕರೆದುಕೊಂಡು ಮಟಪಾಡಿಯಲ್ಲಿರುವ ಲಲಿತಾ ರವರ ತಾಯಿಯ ಮನೆಗೆ ಕರೆದುಕೊಂಡು ಬಂದಿರುವುದಾಗಿದೆ. ಮನೆಯಲ್ಲಿಇರುವಾಗ ಮಧ್ಯಾಹ್ನ 3:45 ಗಂಟೆಗೆ ಲಲಿತಾರವರ ಉಸಿರಾಟ ಇಲ್ಲದೇ ಇರುವ ಬಗ್ಗೆ ಗಮನಿಸಿ ಅವರನ್ನ ಬ್ರಹ್ಮಾವರ ಸರ್ಕಾರಿ ಆಸ್ಪತ್ರೆಗೆ ಕರೆತಂದಾಗ ಮಧ್ಯಾಹ್ನ 4:10 ಗಂಟೆಗೆ ಪರೀಕ್ಷಿಸಿದ ವೈಧ್ಯರು ಲಲಿತಾ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 84/2021 ಕಲಂ: 279, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣಗಳು

  • ಕಾರ್ಕಳ: ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ಕೋವಿಡ್ ಕರ್ಪ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಪ್ಯೂ ಜಾರಿಗೊಳಿಸುವ ಬಗ್ಗೆ ಪೋಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಈ ಸಮಯದಲ್ಲಿ ಅನಗತ್ಯವಾಗಿ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ನಿಷೇಧ ಇದ್ದು ಈ ಬಗ್ಗೆ ದಾಮೋದರ ಕೆ ಬಿ, ಪೊಲೀಸ್ ಉಪನಿರೀಕ್ಷಕರು, ಕಾರ್ಕಳ ನಗರ ಪೊಲೀಸ್ ಠಾಣೆ ಇವರು ದಿನಾಂಕ  20/05/2021 ರಂದು ಸಿಬ್ಬಂದಿಯವರೊಂದಿಗೆ ಕಾರ್ಕಳ ನಗರ ಠಾಣಾ ಸರಹದ್ದಿನ ಕುಕ್ಕಂದೂರು ಗ್ರಾಮದ  ಜೋಡುರಸ್ತೆ ಬಳಿ ಸಾರ್ವಜನಿಕ ರಸ್ತೆಯಲ್ಲಿ  ಮದ್ಯಾಹ್ನ 13:00 ಗಂಟೆಗೆ ಅನಗತ್ಯವಾಗಿ ವಾಹನಗಳ ಓಡಾಟದ ಬಗ್ಗೆ ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ ಅನಗತ್ಯವಾಗಿ ಓಡಾಡುತ್ತಿದ್ದ KA-20-EL-9452 ನೇ ನಂಬ್ರದ ಹೊಂಡಾ ಕಂಪೆನಿಯ ಆ್ಯಕ್ಟೀವಾ ಮಾದರಿಯ ದ್ವಿ ಚಕ್ರ ವಾಹನವನ್ನು ತಡೆದು ನಿಲ್ಲಿಸಿ ರಾಮ ಭಂಡಾರಿ (44), ತಂದೆ:ಸಾಧು ಭಂಡಾರಿ, ವಾಸ: ಅಯ್ಯಪ್ಪ ನಗರ, ಕುಕ್ಕುಂದೂರು ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರನ್ನು ವಿಚಾರಿಸಲಾಗಿ ಸಮಂಜಸವಾಗಿ ಉತ್ತರಿಸದೇ ಇದ್ದುದ್ದಲ್ಲದೆ ಆಪಾದಿತನಿಗೆ ಘನ ಕರ್ನಾಟಕ ಸರಕಾರವು ಕೋವಿಡ್ ಮಹಾಮಾರಿ ಕರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ನಿಯಮಗಳ ಬಗ್ಗೆ ತಿಳುವಳಿಕೆ ಇದ್ದರೂ ಅನಗತ್ಯವಾಗಿ ಸರಕಾರ ಮತ್ತು ಜಿಲ್ಲಾಡಳಿತ ಆದೇಶ, ಕೋವಿಡ್ ನಿಯಮ ಉಲ್ಲಂಘಿಸಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 65/2021 ಕಲಂ:  269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ದಿನಾಂಕ 20/05/2021 ರಂದು ಸಂಜೆ 18:30  ಗಂಟೆಗೆ ಸಕ್ತಿವೇಲು ಈ,  ಪೊಲೀಸ್  ಉಪನಿರೀಕ್ಷಕರು, ಮಲ್ಪೆ ಪೊಲೀಸ್ ಠಾಣೆ ಇವರು ಮಲ್ಪೆ  ಜಂಕ್ಷನ್   ಬಳಿ  ರಸ್ತೆಯಲ್ಲಿ ರೌಂಡ್ಸ್ ನಲ್ಲಿರುವಾಗ KA-29-EM-6950 Hond Activa ಸ್ಕೂಟರ್ ನ ಸವಾರನು ಸ್ಕೂಟರನ್ನು ಚಲಾಯಿಸಿಕೊಂಡು ಮಲ್ಪೆ ಸಿಟಿಜನ್ ಸರ್ಕಲ್ ಕಡೆಯಿಂದ  ಮಲ್ಪೆ ಜಂಕ್ಷನ್ ಕಡೆಗೆ  ಬರುತ್ತಿದ್ದರು. . ಮಾನ್ಯ ಜಿಲ್ಲಾಧಿಕಾರಿಗಳು ಉಡುಪಿ ಜಿಲ್ಲೆಯವರು ಜಿಲ್ಲೆಯಾದ್ಯಂತ ಕಲಂ 144(3) ಸಿಆರ್‌ಪಿಸಿ ಯಂತೆ ನಿಷೆದಾಜ್ಙೆ ಹೊರಡಿಸಿದ್ದು ಈ ಬಗ್ಗೆ ಆರೋಪಿತನು ಕೊರೊನಾ ಮಾರಾಣಾಂತಿಕ ಕಾಯಿಲೆ ಹರಡದಂತೆ ಮುಂಜಾಗೃತ ಕ್ರಮವಾಗಿ ಮುಖಕ್ಕೆ ಯಾವುದೇ ಮಾಸ್ಕ್ ಧರಿಸದೆ ಸ್ವೆಚ್ಚಾಚಾರದಿಂದ ತಿರುಗಾಡಿಕೊಂಡು ಮುಂಜಾಗೃತ ಕ್ರಮಕೈಗೊಳ್ಳದೆ ಬೇಜವಾಬ್ದಾರಿಯುತವಾಗಿ   ಸ್ಕೂಟರ್  ಸವಾರಿ  ಮಾಡಿಕೊಂಡಿದ್ದ ದಿನೇಶ್ ಮೆಂಡನ್ (41), ತಂದೆ: ಸಂಜೀವ ಕಾಂಚನ್, ವಾಸ:  ಹೊಸತೋಟ ಕೊಳ ಮಲ್ಪೆ ಕೊಡವೂರು ಗ್ರಾಮ ಇವರು ಕೊವಿಡ್ 19  ಸೋಂಕು ಸಾರ್ವಜನಿಕರಿಗೆ ಹರಡುವ ಸಂಭವವಿರುವುದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಸರಕಾರದ ಸ್ಪಷ್ಟ ಆದೇಶವಿದ್ದರೂ ಸಹಾ ಆದೇಶವನ್ನು ಪಾಲಿಸದೆ ಕಾನೂನು ಉಲ್ಲಂಘಿಸಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 54/2021  ಕಲಂ:  269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ದಿನಾಂಕ 20/05/2021 ರಂದು ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಬಂದ ದೂರಿನಂತೆ ದಿನಾಂಕ 20/05/2021 ರಂದು ಪಿರ್ಯಾದಿದಾರರಾಧ ಪ್ರಭಾಕರ ಆಚಾರ್ಯ (40), ಕಾನೂನು ಪರಿವೀಕ್ಷಣಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ರಜತಾದ್ರಿ, ಮಣಿಪಾಲ ಮತ್ತು ಬ್ರಹ್ಮಾವರ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀ ಕುಮಾರ್ ನಾಯ್ಕ ಮತ್ತು ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಅಂಗನವಾಡಿ ವಲಯ ಮೇಲ್ವಿಚಾರಕಿಯವರಾದ ಶ್ರೀಮತಿ ಲಕ್ಷ್ಮೀ ರವರೊಂದಿಗೆ ಬ್ರಹ್ಮಾವರ ತಾಲೂಕು ಬಾಳಕುದ್ರು ಗ್ರಾಮದ ಶಾಹಿಸ್ತ ಕೋಂ ಫಯಾಝ್, ಮನೆ ನಂಬ್ರ.1-90, ಬಾಳ್ಕುದ್ರು,ದುರ್ಗಾಪರಮೇಶ್ವರಿ ದೇವಸ್ಥಾನದ ಹತ್ತಿರ, ಬಾಳ್ಕುದ್ರು ಗ್ರಾಮ, ಹಂಗಾರಕಟ್ಟೆ ಅಂಚೆ ಇಲ್ಲಿಗೆ ಭೇಟಿ ನೀಡಿ, ಕಾನೂನು ಬಾಹಿರ ದತ್ತು ಪ್ರಕ್ರಿಯೆ ನಡೆದಿರುವ ಬಗ್ಗೆ ವಿಚಾರಿಸಲಾಗಿ. ವಿಚಾರಣೆ ವೇಳೆ  ಶಾಹಿಸ್ತ ಮತ್ತು ಆಕೆಯ ಗಂಡ ಫಯಾಝ್ ರವರು ಮದುವೆಯಾಗಿ ಸುಮಾರು 10 ವರ್ಷವಾಗಿದ್ದು, ಇದುವರೆಗೂ ಮಕ್ಕಳಾಗದೆ ಇದ್ದು, ಮಗುವನ್ನು ದತ್ತು ಪಡೆಯಲು ಇಚ್ಛಿಸಿದ್ದು, ಉಡುಪಿಯ ಪರಿಚಯದ ಹುಸೇನ್ ಎಂಬುವವರು ತಿಳಿಸಿದಂತೆ, ದಿನಾಂಕ 26/03/2020 ರಂದು ಕಾರ್ಕಳ ತಾಲೂಕಿನ ಸ್ಪಂದನ ಹೆರಿಗೆ ಆಸ್ಪತ್ರೆಯಲ್ಲಿ ಕಾರ್ಕಳದ ಪಡ್ಯ, ದರ್ಖಾಸು, ಕಲ್ಯಾ ಗ್ರಾಮದ ಕುಂಟಾಡಿಯ ರಾಜೇಶ್ ಮತ್ತು ಸುಕನ್ಯರವರಿಗೆ ಹುಟ್ಟಿದ್ದ ಹೆಣ್ಣು ಮಗುವನ್ನು ಸಾಕಲು ಕಷ್ಟವಾಗುವುದಾಗಿ ಹೇಳಿದ್ದರಿಂದ  ಆಸ್ಪತ್ರೆಯ ಬಿಲ್ಲನ್ನು ಕಟ್ಟಿ, ಅವರು ಆಸ್ಪತ್ರೆಯಿಂದ ಬಿಡುಗಡೆಗೊಂಡ ನಂತರ ಅವರಿಂದ ಮಗುವನ್ನು ಪಡೆದು, ಅವರಿಗೆ ರೂಪಾಯಿ 80,000/- ಹಣವನ್ನು ಕೊಟ್ಟು, ನಂತರ ಬಾಳ್ಕುದ್ರುವಿನಲ್ಲಿರುವ ಅವರ ಮನೆಗೆ ಕರೆತಂದಿರುವುದಾಗಿ ತಿಳಿಸಿರುತ್ತಾರೆ. ನಂತರ ಮಗುವಿನ ಜನನ ಪ್ರಮಾಣ ಪತ್ರ ಪಡೆಯುವ ಉದ್ದೇಶದಿಂದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ತಾಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ:ಬಾಲಕೃಷ್ಣ ರವರನ್ನು ಸಂಪರ್ಕಿಸಿ ಸ್ಪಂದನ ಹೆರಿಗೆ ಆಸ್ಪತ್ರೆಯಲ್ಲಿ ದಿನಾಂಕ 05/06/2020 ರಂದು ಜನಿಸಿರುವ ಹೆಣ್ಣು ಮಗುವಿಗೆ ಕೊಪ್ಪದ ತಾಲೂಕು  ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿರುವುದಾಗಿ ಜನನ ಪ್ರಮಾಣ ಪತ್ರ ಪಡೆಯಲು ಸಹಕರಿಸಿರುತ್ತಾರೆ. ಈ ಬಗ್ಗೆ ರೂಪಾಯಿ 30,000/- ವನ್ನು ಆ ವೈದ್ಯಾಧಿಕಾರಿಯವರಿಗೆ ನೀಡಿರುವುದಾಗಿಯೂ ತಿಳಿಸಿರುತ್ತಾರೆ.  ಆದುದರಿಂದ  ಹೆಣ್ಣು ಮಗುವಿನ ಕಾನೂನು ಬಾಹಿರವಾಗಿ  ದತ್ತು ಪಡೆದಿರುವ ಬಾಳ್ಕುದ್ರುವಿನ ಶಾಹಿಸ್ತ, ಫಯಾಝ್ ಹಾಗೂ ಸದ್ರಿ ಮಗುವಿನ ಸ್ವಂತ ತಂದೆ ರಾಜೇಶ್, ತಾಯಿ ಸುಕನ್ಯ  ಹಾಗೂ ಮಗುವಿಗೆ ಕಾನೂನು ಬಾಹಿರವಾಗಿ ಜನನ ಪ್ರಮಾಣ ಪತ್ರವನ್ನು ಪಡೆಯಲು ಸಹಕರಿಸಿರುವ ವೈದ್ಯಾಧಿಕಾರಿಯವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 104/2021 ಕಲಂ: 80, 81, 87 JJ ACT ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಕೋವಿಡ್-19 ಕೋರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ  ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ 12/05/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಹೊರಡಿಸಿರುವ ಆದೇಶವನ್ನು ಪರಿಷ್ಕರಿಸಿ ದಿನಾಂಕ 10/05/2021 ಬೆಳಿಗ್ಗೆ 6:00 ಗಂಟೆಯಿಂದ ದಿನಾಂಕ 24/05/2021ರ ಬೆಳಿಗ್ಗೆ 6:00 ಗಂಟೆಯ ವರೆಗೆ ಲಾಕ್ ಡೌನ್ ಘೋಷಿಸಿದ್ದು ಈ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಈ ಬಗ್ಗೆ ವಾಹನ  ತಪಾಸಣೆ ನಡೆಸುವಂತೆ ಮೇಲಾಧಿಕಾರಿಯವರ ಆದೇಶದಂತೆ ರಾಘವೇಂದ್ರ ಸಿ, ಪೊಲೀಸ್ ಉಪನಿರೀಕ್ಷಕರು, ಕಾಪು ಪೊಲೀಸ್ ಠಾಣೆ ಇವರು ಸಿಬ್ಬಂದಿಯವರೊಂದಿಗೆ  ದಿನಾಂಕ 20/05/2021 ರಂದು 16:00 ಗಂಟೆಯಿಂದ 16:30 ಗಂಟೆಯವರೆಗೆ ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಪಡು ಗ್ರಾಮದ ಪೊಲಿಪು ಜಂಕ್ಷನ್ ನಲ್ಲಿ ಸಿಬ್ಬಂದಿಯವರ ಸಹಾಯದಿಂದ ಸಾರ್ವಜನಿಕ ರಸ್ತೆಯಲ್ಲಿ ವಾಹನ ತಪಾಸಣೆಯಲ್ಲಿರುತ್ತಾ  ಅಗತ್ಯ ವಸ್ತುಗಳ ಖರೀದಿ ಬಗ್ಗೆ ಸರಕಾರ ನಿಗದಿಪಡಿಸಿದ ಸಮಯ ಅವಕಾಶದ ಬಳಿಕವೂ  ಅನಗತ್ಯವಾಗಿ ಗುಂಪು ಸೇರಿ  ಸಂಚರಿಸುತ್ತಿರುವವರ ವಾಹನಗಳನ್ನು ತಪಾಸಣೆಗಾಗಿ ನಿಲ್ಲಿಸಿ ಪರಿಶೀಲಿಸಿದಲ್ಲಿ  1. ಟಾಟಾ ಇಂಡಿಕಾ ಕಾರು ನಂಬ್ರ ಕೆ.ಎ. 50 ಎ. 2391 ನೇದರ ಚಾಲಕ  ಹೆಸರು ಈಶ್ವರ ಬಿ. ವನಗೇರಿ  2. ಸ್ಕೂಟರ್ ನಂಬ್ರ ಕೆ.ಎ. 20 ಇ.ಪಿ. 8288 ನೇದರ  ಸವಾರನ  ಹೆಸರು ರಮೇಶ ಕೋಟ್ಯಾನ್ ಸದ್ರಿಯವರ ಓಡಾಟದ ಕಾರಣವನ್ನು ವಿಚಾರಿಸಲಾಗಿ, ಯಾವುದೇ ತುರ್ತು ಕಾರಣವಿಲ್ಲದೇ, ಅನಗತ್ಯವಾಗಿ ಸಂಚರಿಸುವುದು ಕಂಡು ಬಂದಿರುತ್ತದೆ. ಆರೋಪಿಗಳು  ಘನ ಕರ್ನಾಟಕ ಸರಕಾರವು ಕೋವಿಡ್‌ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಕೋವಿಡ್‌ನಿಯಮ ಉಲ್ಲಂಘಿಸಿ ಅನಗತ್ಯವಾಗಿ ವಾಹನದಲ್ಲಿ ಸಂಚರಿಸುತ್ತಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 80/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ: 24/05/2021 ರವೆರೆಗೆ ಕೋವಿಡ್ ಕರ್ಪ್ಯೂ ವಿಧಿಸಿ ಆದೇಶ ಹೊರಡಿಸಿದ್ದು ಈ ಕರ್ಪ್ಯೂ ಜಾರಿಗೊಳಿಸುವ ಬಗ್ಗೆ ಪೋಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು ಈ ಸಮಯದಲ್ಲಿ ಅನಗತ್ಯವಾಗಿ ಸಾರ್ವಜನಿಕರ ಓಡಾಟಕ್ಕೆ ನಿಷೇಧ ಇದ್ದು ಜನಾರ್ಧನ, ಪೊಲೀಸ್ ಉಪನಿರೀಕ್ಷಕರು, ಕಾರ್ಕಳ  ಗ್ರಾಮಾಂತರ ಪೊಲೀಸ್ ಠಾಣೆ ಇವರು ದಿನಾಂಕ 20/05/2021 ರಂದು ಸಿಬ್ಬಂದಿಯವರೊಂದಿಗೆ 12:30 ಗಂಟೆಯಿಂದ 13:00 ಗಂಟೆಯವರೆಗೆ ಕಾರ್ಕಳ ತಾಲೂಕು ಕಲ್ಯಾ ಗ್ರಾಮದ ಕಲ್ಯಾ ಗ್ರಾಮ ಪಂಚಾಯತ್ ಬಳಿಯ ಗರಡಿ ನಗರ ಎಂಬಲ್ಲಿ ತಪಾಸಣೆ ಮಾಡುತ್ತಿರುವಾಗ ಅನಗತ್ಯವಾಗಿ ಓಡಾಡಿ ಘನ ಕರ್ನಾಟಕ ಸರಕಾರವು ಕೋವಿಡ್ ಮಹಾಮಾರಿ ಕರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ನಿಯಮಗಳ ಬಗ್ಗೆ ತಿಳುವಳಿಕೆ ಇದ್ದರೂ ಅನಗತ್ಯವಾಗಿ ವಾಹನಗಳಲ್ಲಿ ತಿರುಗಾಡಿ ಕೋವಿಡ್ ನಿಯಮ ಉಲ್ಲಂಘಿಸಿ ಅಪರಾಧ ಎಸಗಿರುವುದಾಗಿದ. KA-20-EP-6041 ನೇ ನಂಬ್ರದ Active ನೀಲಿ ಬಣ್ಣದ ಮೋಟಾರು ಸೈಕಲ್, KA-20-EL-8016 ನೇ ನಂಬ್ರದ ಕ್ರಿಂ ಬಣ್ಣದ ಟಿ.ವಿ.ಎಸ್ ಜುಪಿಟರ್ ದ್ವಿಚಕ್ರ ವಾಹನ, KA-20-V-6024 ನೇ ಹಾಂಡ ಕಂಪನಿಯ ನೀಲಿ ಬಣ್ಣದ ಮೋಟಾರ್ ಸೈಕಲ್, ವಶಕ್ಕೆ ಪಡೆದು  ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 59/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ಕೋವಿಡ್ ಕರ್ಪ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಪ್ಯೂ ಜಾರಿಗೊಳಿಸುವ ಬಗ್ಗೆ ಪೋಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಈ ಸಮಯದಲ್ಲಿ ಅನಗತ್ಯವಾಗಿ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ನಿಷೇಧ ಇರುತ್ತದೆ. ಈ ಬಗ್ಗೆ ಮಧು ಬಿ.ಇ, ಪೊಲೀಸ್ ಉಪನಿರೀಕ್ಷಕರು ಕಾರ್ಕಳ ನಗರ ಪೊಲೀಸ್ ಠಾಣೆ ಇವರು ದಿನಾಂಕ 20/05/2021 ರಂದು ಠಾಣಾ ಸಿಬ್ಬಂದಿಯವರೊಂದಿಗೆ ಕಾರ್ಕಳ ನಗರ ಠಾಣಾ ಸರಹದ್ದಿನ ಕಾರ್ಕಳ ಕಸಬ  ಗ್ರಾಮದ  ಮೂರು ಮಾರ್ಗ ಬಳಿ  ಸಾರ್ವಜನಿಕ ರಸ್ತೆಯಲ್ಲಿ  ಮಧ್ಯಾಹ್ನ 12:45 ಗಂಟೆಗೆ ಅನಗತ್ಯವಾಗಿ ವಾಹನಗಳ ಓಡಾಟದ ಬಗ್ಗೆ ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ ಅನಗತ್ಯವಾಗಿ ಓಡಾಡುತ್ತಿದ್ದ KA-19-EE-3945 ನೇ ನಂಬ್ರದ ಸುಜುಕಿ ಕಂಪೆನಿ  ತಯಾರಿಕೆಯ ಅಕ್ಸೆಸ್ 125 ಮಾದರಿಯ ಸ್ಕೂಟರ್ ಮಾದರಿಯ ಮತ್ತು KA-20-EV-7821 ನೇ ನಂಬ್ರದ ಟಿವಿಎಸ್ ಕಂಪೆನಿ ತಯಾರಿಕೆಯ ನೊಟ್ರೋ 125 ಮಾದರಿಯ ದ್ವಿ ಚಕ್ರ ವಾಹನಗಳನ್ನು ತಡೆದು ನಿಲ್ಲಿಸಿ ಅವರಲ್ಲಿ ವಿಚಾರಿಸಲಾಗಿ ಸಮಂಜಸವಾಗಿ ಉತ್ತರಿಸದೇ ಇದ್ದುದ್ದಲ್ಲದೆ ಆಪಾದಿತರಿಗೆ ಘನ ಕರ್ನಾಟಕ ಸರಕಾರವು ಕೋವಿಡ್ ಮಹಾಮಾರಿ ಕರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ನಿಯಮಗಳ ಬಗ್ಗೆ ತಿಳುವಳಿಕೆ ಇದ್ದರೂ ಅನಗತ್ಯವಾಗಿ ಸರಕಾರ ಮತ್ತು ಜಿಲ್ಲಾಡಳಿತ ಆದೇಶ, ಕೋವಿಡ್ ನಿಯಮ ಉಲ್ಲಂಘಿಸಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 64/2021 ಕಲಂ:  269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹೆಬ್ರಿ: ದಿನಾಂಕ 20/05/2021 ರಂದು ಮಹೇಶ.ಟಿ.ಎಂ, ಪೊಲೀಸ್ ಉಪನಿರೀಕ್ಷಕರು, ಹೆಬ್ರಿ ಪೊಲೀಸ್ ಠಾಣೆ ಇವರು ಹೆಬ್ರಿ  ಗ್ರಾಮ ಹೆಬ್ರಿ ತಾಲೂಕು ಸಿಬ್ಬಂದಿಗಳೊಂದಿಗೆ ರೌಂಡ್ಸ್ ನಲ್ಲಿರುವಾಗ ಬಂದ ಮಾಹಿತಿಯಂತೆ ವರಂಗ ಗ್ರಾಮದ ಮುನಿಯಾಲು ಎಂಬಲ್ಲಿಗೆ ತಲುಪಿ ನೋಡಿದಾಗ ಓರ್ವ ವ್ಯಕ್ತಿಯು ರಸ್ತೆಯ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಂದು ಮರದ ಅಡಿಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಮದ್ಯದ ಪ್ಯಾಕೆಟ್ ಗಳನ್ನು ಇಟ್ಟುಕೊಂಡು ಬಂದ ವ್ಯಕ್ತಿಗಳಿಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡುವುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಆರೊಪಿತ  ಶರತ್ ಶೆಟ್ಟಿ (24), ತಂದೆ: ಸದಾನಂದ ಶೆಟ್ಟಿ, ವಾಸ: ಪದ್ಮಾವತಿ ನಿವಾಸ ಹೊಸನಡಕ ವರಂಗ ಗ್ರಾಮ ಹೆಬ್ರಿ ತಾಲೂಕು ಎಂಬಾತನನ್ನು ವಶಕ್ಕೆ ಪಡೆದು ಆತನಲ್ಲಿ ಮದ್ಯವನ್ನು ಮಾರಾಟ ಮಾಡಲು ಮತ್ತು ಸಂಗ್ರಹ ಇಡಲು ಪರವಾನಿಗೆ ಇದೆಯೇ ಎಂದು ಕೇಳಿದಾಗ ಇಲ್ಲವೆಂದು ತಿಳಿಸಿರುತ್ತಾನೆ. ಆತನ ಬಳಿ ಇದ್ದ ಪ್ಲಾಸ್ಟಿಕ್ ಚೀಲದಲ್ಲಿದಲ್ಲಿದ್ದ 1696/ ರೂಪಾಯಿ ಮೌಲ್ಯದ  Old Tavern whisky ಎಂದು ಬರೆದಿರುವ ಮದ್ಯ ತುಂಬಿರುವ 180 ಎಂ.ಎಲ್ ನ ಪ್ಯಾಕೆಟ್ ಒಟ್ಟು 4, ಮತ್ತು Bagpiper whisky ಎಂದು ಬರೆದಿರುವ ಮದ್ಯ ತುಂಬಿರುವ 180 ಎಂ.ಎಲ್ ನ ಪ್ಯಾಕೆಟ್ ಒಟ್ಟು 3 ಮತ್ತು Officers Choice star supreme whisky ಎಂದು ಬರೆದಿರುವ ಮದ್ಯ ತುಂಬಿರುವ 180 ಎಂ.ಎಲ್ ನ ಪ್ಯಾಕೆಟ್ ಒಟ್ಟು 7  ಮತ್ತು Old monk XXX Rum ಎಂದು ಬರೆದಿರುವ ಮದ್ಯ ತುಂಬಿರುವ 180 ಎಂ.ಎಲ್ ನ ಪ್ಯಾಕೆಟ್ ಒಟ್ಟು 4, ಮತ್ತು ಮದ್ಯ ಮಾರಾಟದಿಂದ ಸಂಗ್ರಹವಾದ ನಗದು 410/- ರೂಪಾಯಿ ಮತ್ತು ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲ-1 ಇವುಗಳನ್ನುಸ್ವಾದೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 29/2021 ಕಲಂ: 269 ಐಪಿಸಿ  ಕಲಂ: 32, 34 KE ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ.          
     

ಇತ್ತೀಚಿನ ನವೀಕರಣ​ : 21-05-2021 10:16 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080