ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣ

 • ಕಾಪು: ಕೋವಿಡ್-19 ಕೋರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ  ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ 12/05/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಹೊರಡಿಸಿರುವ ಆದೇಶವನ್ನು ಪರಿಷ್ಕರಿಸಿ ದಿನಾಂಕ 10/05/2021 ,  ಬೆಳಿಗ್ಗೆ 6:00 ಗಂಟೆಯಿಂದ ದಿನಾಂಕ 24/05/2021ರ ಬೆಳಿಗ್ಗೆ 6:00 ಗಂಟೆಯ ವರೆಗೆ ಲಾಕ್ ಡೌನ್ ಘೋಷಿಸಿದ್ದು ಈ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಈ ಬಗ್ಗೆ ವಾಹನ  ತಪಾಸಣೆ ನಡೆಸುವಂತೆ ಮೇಲಾಧಿಕಾರಿಯವರ ಆದೇಶದಂತೆ ರಾಘವೇಂದ್ರ ಸಿ.  ಪೊಲೀಸ್ ಉಪನಿರೀಕ್ಷಕರು, ಕಾಪು ಪೊಲೀಸ್ ಠಾಣೆ ಸಿಬ್ಬಂದಿಯವರೊಂದಿಗೆ  ದಿನಾಂಕ 21.05.2021 ರಂದು ಬೆಳಗ್ಗೆ 10.30 ಗಂಟೆಯಿಂದ 11.00 ಗಂಟೆಯವರೆಗೆ ಉಡುಪಿ ತಾಲೂಕಿನ ಮಣಿಪುರ ಗ್ರಾಮದ ದೆಂದೂರಕಟ್ಟೆ ಜಂಕ್ಷನ್‌ನಲ್ಲಿ ಸಿಬ್ಬಂದಿಯವರ ಸಹಾಯದಿಂದ ಸಾರ್ವಜನಿಕ ರಸ್ತೆಯಲ್ಲಿ ವಾಹನ ತಪಾಸಣೆಯಲ್ಲಿರುತ್ತಾ  ಅಗತ್ಯ ವಸ್ತುಗಳ ಖರೀದಿ ಬಗ್ಗೆ ಸರಕಾರ ನಿಗದಿಪಡಿಸಿದ ಸಮಯ ಅವಕಾಶದ ಬಳಿಕವೂ  ಅನಗತ್ಯವಾಗಿ ಗುಂಪು ಸೇರಿ  ಸಂಚರಿಸುತ್ತಿರುವವರ ವಾಹನಗಳನ್ನು ತಪಾಸಣೆಗಾಗಿ ನಿಲ್ಲಿಸಿ ಪರಿಶೀಲಿಸಿದಲ್ಲಿ  1. ಟಾಟಾ ಸುಮೋ ಗೋಲ್ಡ್  ವಾಹನ ನಂಬ್ರ ಕೆ.ಎ. 20 ಸಿ. 8897 ನೇದರ ಚಾಲಕ  ಹೆಸರು ಹರ್ಮಾನ್ ನರೋನ್ಹಾ ಪ್ರಾಯ : 45 ವರ್ಷ ತಂದೆ : ತೋಮಸ್ ನರೋನ್ಹಾ ವಾಸ : ಮೂಡಬೆಟ್ಟು ಹೌಸ್ ಮಣಿಪುರ ಗ್ರಾಮ  2. ಸ್ಕೂಟರ್ ನಂಬ್ರ ಕೆ.ಎ. 20 ಇ.ಸಿ. 2207 ನೇದರ  ಸವಾರನ  ಹೆಸರು ಅತೀಶ್ ಡಿ ಸೋಜಾ  ಪ್ರಾಯ : 50 ವರ್ಷ ತಂದೆ : ಸಿರಿಲ್ ಡಿಸೋಜಾ ವಾಸ : ದೆಂದೂರಕಟ್ಟೆ ಮಣಿಪುರ ಗ್ರಾಮ ಉಡುಪಿ, ಸದ್ರಿಯವರ ಓಡಾಟದ ಕಾರಣವನ್ನು ವಿಚಾರಿಸಲಾಗಿ, ಯಾವುದೇ ತುರ್ತು ಕಾರಣವಿಲ್ಲದೇ, ಅನಗತ್ಯವಾಗಿ ಸಂಚರಿಸುವುದು ಕಂಡು ಬಂದಿರುತ್ತದೆ. ಸದ್ರಿ ಆರೋಪಿಗಳು  ಘನ ಕರ್ನಾಟಕ ಸರಕಾರವು ಕೋವಿಡ್‌ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಕೋವಿಡ್‌ನಿಯಮ ಉಲ್ಲಂಘಿಸಿ ಅನಗತ್ಯವಾಗಿ ವಾಹನದಲ್ಲಿ ಸಂಚರಿಸುತ್ತಿರುವುದರಿಂದ ಈ ಬಗ್ಗೆ ಕಾಪು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ  81/2021 ಕಲಂ: 269 ಐಪಿಸಿಯಂತೆ ಪ್ರಕರಣ  ದಾಖಲಿಸಲಾಗಿರುತ್ತದೆ.
 • ಬ್ರಹ್ಮಾವರ: ಜಗದೀಶ್ ಭಟ್, ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್, ಫ್ಲೈಯಿಂಗ್ ಸ್ಕ್ವಾಡ್,ಬ್ರಹ್ಮಾವರ  ಇವರು ಮಾನ್ಯ ಉಡುಪಿ ಜಿಲ್ಲಾಧಿಕಾರಿಯವರ ಆದೇಶದಂತೆ ಕೋವಿಡ್ 19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಬ್ರಹ್ಮಾವರ ವಲಯದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅದರಂತೆ ಅವರು ದಿನಾಂಕ: 21.05.2021 ರಂದು ಇಲಾಖಾ ವಾಹನದಲ್ಲಿ ಬ್ರಹ್ಮಾವರ ತಾಲೂಕು, ಉಪ್ಪೂರು ಗ್ರಾಮದ, ಸಾಲ್ಮರ ಎಂಬಲ್ಲಿ ಗಸ್ತು ತಿರುಗುತ್ತಿರುವಾಗ ಬೆಳಿಗ್ಗೆ 08:55 ಗಂಟೆಯ ಸಮಯದಲ್ಲಿ ಆರೋಪಿ ಪ್ರಶಾಂತ , ನಿಸರ್ಗ ಫೂಟ್‌ವೇರ್ & ಗಾರ್ಮೆಂಟ್ಸ್, ಮೇಘನಾ ಕಾಂಪ್ಲೆಕ್ಸ್,  ಸಾಲ್ಮರ, ಉಪ್ಪೂರು ಗ್ರಾಮ, ಬ್ರಹ್ಮಾವರ ತಾಲೂಕು. ರವರು ಘನ ಕರ್ನಾಟಕ ಸರಕಾರವು ಕೋವಿಡ್ 19 ಸೋಂಕು ತಡೆಗಟ್ಟುವ ಸಂಬಂಧ ಹೊರಡಿಸಿದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಮೇಘನಾ ಕಾಂಪ್ಲೆಕ್ಸ್ ನಲ್ಲಿರುವ  ತಮ್ಮ ನಿಸರ್ಗ ಫೂಟ್‌ವೇರ್ & ಗಾರ್ಮೆಂಟ್ಸ್ ಅಂಗಡಿಯನ್ನು ವ್ಯಾಪಾರದ  ಬಗ್ಗೆ ತೆರೆದು  ಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ  85/2021 ಕಲಂ 269,188  ಐಪಿಸಿಯಂತೆ ಪ್ರಕರಣ  ದಾಖಲಿಸಲಾಗಿರುತ್ತದೆ.
 • ಬ್ರಹ್ಮಾವರ : ಜಗದೀಶ್ ಭಟ್, ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್, ಫ್ಲೈಯಿಂಗ್ ಸ್ಕ್ವಾಡ್,ಬ್ರಹ್ಮಾವರ  ಇವರು  ಮಾನ್ಯ ಉಡುಪಿ ಜಿಲ್ಲಾಧಿಕಾರಿಯವರ ಆದೇಶದಂತೆ ಕೋವಿಡ್ 19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಬ್ರಹ್ಮಾವರ ವಲಯದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅದರಂತೆ ಅವರು ಈ ದಿನ ದಿನಾಂಕ: 21.05.2021 ರಂದು ಇಲಾಖಾ ವಾಹನದಲ್ಲಿ ಬ್ರಹ್ಮಾವರ ತಾಲೂಕು, ಉಪ್ಪೂರು ಗ್ರಾಮದ, ಕೊಳಲಗಿರಿ ಎಂಬಲ್ಲಿ ಗಸ್ತು ತಿರುಗುತ್ತಿರುವಾಗ ಬೆಳಿಗ್ಗೆ 09:00 ಗಂಟೆಯ ಸಮಯದಲ್ಲಿ ಆರೋಪಿ ಮೊಯಿದ್ದೀನ್, ಸಿಟಿ ಫರ್ನಿಚರ್, ಕೊಳಲಗಿರಿ  ಉಪ್ಪೂರು ಗ್ರಾಮ, ಬ್ರಹ್ಮಾವರ ತಾಲೂಕು. ರವರು ಘನ ಕರ್ನಾಟಕ ಸರಕಾರವು ಕೋವಿಡ್ 19 ಸೋಂಕು ತಡೆಗಟ್ಟುವ ಸಂಬಂಧ ಹೊರಡಿಸಿದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ತಮ್ಮ ಸಿಟಿ ಫರ್ನಿಚರ್ ಅಂಗಡಿಯನ್ನು ವ್ಯಾಪಾರದ  ಬಗ್ಗೆ ತೆರೆದು  ಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ  86/2021 ಕಲಂ 269,188  ಐಪಿಸಿಯಂತೆ ಪ್ರಕರಣ  ದಾಖಲಿಸಲಾಗಿರುತ್ತದೆ.
 • ಬ್ರಹ್ಮಾವರ : ಜಗದೀಶ್ ಭಟ್, ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್, ಫ್ಲೈಯಿಂಗ್ ಸ್ಕ್ವಾಡ್,ಬ್ರಹ್ಮಾವರ  ಇವರು  ಮಾನ್ಯ ಉಡುಪಿ ಜಿಲ್ಲಾಧಿಕಾರಿಯವರ ಆದೇಶದಂತೆ ಕೋವಿಡ್ 19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಬ್ರಹ್ಮಾವರ ವಲಯದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅದರಂತೆ ಅವರು ಈ ದಿನ ದಿನಾಂಕ: 21.05.2021 ರಂದು ಇಲಾಖಾ ವಾಹನದಲ್ಲಿ ಬ್ರಹ್ಮಾವರ ತಾಲೂಕು, ಉಪ್ಪೂರು ಗ್ರಾಮದ, ಕೊಳಲಗಿರಿ ಎಂಬಲ್ಲಿ ಗಸ್ತು ತಿರುಗುತ್ತಿರುವಾಗ ಬೆಳಿಗ್ಗೆ 09:04 ಗಂಟೆಯ ಸಮಯದಲ್ಲಿ ಆರೋಪಿ ಯೋಗೇಂದ್ರ ಆಚಾರಿ, ಕಾಳಿಕಾಂಬ ವುಡ್‌ ವರ್ಕ್ಸ್ , ಕೊಳಲಗಿರಿ  ಉಪ್ಪೂರು ಗ್ರಾಮ, ಬ್ರಹ್ಮಾವರ ತಾಲೂಕು. ರವರು ಘನ ಕರ್ನಾಟಕ ಸರಕಾರವು ಕೋವಿಡ್ 19 ಸೋಂಕು ತಡೆಗಟ್ಟುವ ಸಂಬಂಧ ಹೊರಡಿಸಿದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ತಮ್ಮ ಕಾಳಿಕಾಂಬ ವುಡ್‌ ವರ್ಕ್ಸ್ ಅಂಗಡಿಯನ್ನು ವ್ಯಾಪಾರದ  ಬಗ್ಗೆ ತೆರೆದು  ಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ  87/2021 ಕಲಂ 269,188  ಐಪಿಸಿಯಂತೆ ಪ್ರಕರಣ  ದಾಖಲಿಸಲಾಗಿರುತ್ತದೆ.
 • ಬ್ರಹ್ಮಾವರ:  ಪಿರ್ಯಾದಿ ಜಗದೀಶ್ ಭಟ್, ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್, ಫ್ಲೈಯಿಂಗ್ ಸ್ಕ್ವಾಡ್,ಬ್ರಹ್ಮಾವರ ಇವರು ಮಾನ್ಯ ಉಡುಪಿ ಜಿಲ್ಲಾಧಿಕಾರಿಯವರ ಆದೇಶದಂತೆ ಕೋವಿಡ್ 19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಬ್ರಹ್ಮಾವರ ವಲಯದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅದರಂತೆ ಅವರು ಈ ದಿನ ದಿನಾಂಕ: 21.05.2021 ರಂದು ಇಲಾಖಾ ವಾಹನದಲ್ಲಿ ಬ್ರಹ್ಮಾವರ ತಾಲೂಕು, ಉಪ್ಪೂರು ಗ್ರಾಮದ, ಕೊಳಲಗಿರಿ ಎಂಬಲ್ಲಿ ಗಸ್ತು ತಿರುಗುತ್ತಿರುವಾಗ ಬೆಳಿಗ್ಗೆ 09:16 ಗಂಟೆಯ ಸಮಯದಲ್ಲಿ ಆರೋಪಿ ಅವಿನಾಶ, ಪ್ರೀತಿ ಎಂಟರ್‌ಪ್ರೈಸಸ್, ಇಲೆಕ್ಟ್ರಿಕಲ್ & ಹಾರ್ಡ್‌ ವೆರ್ ಅಂಗಡಿ,  ಕೊಳಲಗಿರಿ  ಉಪ್ಪೂರು ಗ್ರಾಮ, ಬ್ರಹ್ಮಾವರ ತಾಲೂಕು ರವರು ಘನ ಕರ್ನಾಟಕ ಸರಕಾರವು ಕೋವಿಡ್ 19 ಸೋಂಕು ತಡೆಗಟ್ಟುವ ಸಂಬಂಧ ಹೊರಡಿಸಿದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ತಮ್ಮ ಪ್ರೀತಿ ಎಂಟರ್‌ಪ್ರೈಸಸ್, ಇಲೆಕ್ಟ್ರಿಕಲ್ & ಹಾರ್ಡ್‌ ವೆರ್  ಅಂಗಡಿಯನ್ನು ವ್ಯಾಪಾರದ  ಬಗ್ಗೆ ತೆರೆದು  ಕೊಂಡಿರುವುದಾಗಿದೆ. ಈ ಬಗ್ಗೆ ಕ್ರಮಾಂಕ 88/2021 ಕಲಂ 269,188 ಐಪಿಸಿ ರಂತೆ ಪ್ರಕರಣ ದಾಖಲಿಸಲಾಗಿದೆ.

 • ಬ್ರಹ್ಮಾವರ : ಪಿರ್ಯಾದಿ ಜಗದೀಶ್ ಭಟ್, ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್, ಫ್ಲೈಯಿಂಗ್ ಸ್ಕ್ವಾಡ್,ಬ್ರಹ್ಮಾವರ, ಇವರು ಮಾನ್ಯ ಉಡುಪಿ ಜಿಲ್ಲಾಧಿಕಾರಿಯವರ ಆದೇಶದಂತೆ ಕೋವಿಡ್ 19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಬ್ರಹ್ಮಾವರ ವಲಯದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅದರಂತೆ ಅವರು ಈ ದಿನ ದಿನಾಂಕ: 21.05.2021 ರಂದು ಇಲಾಖಾ ವಾಹನದಲ್ಲಿ ಬ್ರಹ್ಮಾವರ ತಾಲೂಕು, ನೀಲಾವರ ಗ್ರಾಮದ, ಕುಂಜಾಲು ಪೇಟೆಯಲ್ಲಿ  ಗಸ್ತು ತಿರುಗುತ್ತಿರುವಾಗ ಬೆಳಿಗ್ಗೆ 09:43 ಗಂಟೆಯ ಸಮಯದಲ್ಲಿ ಆರೋಪಿ ಶರತ್ , ಓಂ ಇಲೆಕ್ಟ್ರಿಕಲ್ & ಇಲೆಕ್ಟ್ರಾನಿಕ್ಸ್  ಅಂಗಡಿ,  ಕುಂಜಾಲು ಪೇಟೆ, ನೀಲಾವರ ಗ್ರಾಮ, ಬ್ರಹ್ಮಾವರ ತಾಲೂಕು ರವರು ಘನ ಕರ್ನಾಟಕ ಸರಕಾರವು ಕೋವಿಡ್ 19 ಸೋಂಕು ತಡೆಗಟ್ಟುವ ಸಂಬಂಧ ಹೊರಡಿಸಿದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ತಮ್ಮ ಓಂ ಇಲೆಕ್ಟ್ರಿಕಲ್ & ಇಲೆಕ್ಟ್ರಾನಿಕ್ಸ್ ಅಂಗಡಿಯನ್ನು ವ್ಯಾಪಾರದ  ಬಗ್ಗೆ ತೆರೆದು  ಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 89/2021 ಕಲಂ 269,188 ಐಪಿಸಿ ರಂತೆ ಪ್ರಕರಣ ದಾಖಲಿಸಲಾಗಿದೆ.

 • ಬ್ರಹ್ಮಾವರ: ಪಿರ್ಯಾದಿ ಜಗದೀಶ್ ಭಟ್, ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್, ಫ್ಲೈಯಿಂಗ್ ಸ್ಕ್ವಾಡ್,ಬ್ರಹ್ಮಾವರ, ಇವರು ಮಾನ್ಯ ಉಡುಪಿ ಜಿಲ್ಲಾಧಿಕಾರಿಯವರ ಆದೇಶದಂತೆ ಕೋವಿಡ್ 19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಬ್ರಹ್ಮಾವರ ವಲಯದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅದರಂತೆ ಅವರು ಈ ದಿನ ದಿನಾಂಕ: 21.05.2021 ರಂದು ಇಲಾಖಾ ವಾಹನದಲ್ಲಿ ಬ್ರಹ್ಮಾವರ ತಾಲೂಕು, ಚಾಂತಾರು ಗ್ರಾಮದ, ಚಾಂತಾರು, ಬ್ರಹ್ಮಾವರ –ಹೆಬ್ರಿ  ಮುಖ್ಯ ರಸ್ತೆಯಲ್ಲಿ ಗಸ್ತು ತಿರುಗುತ್ತಿರುವಾಗ ಬೆಳಿಗ್ಗೆ 09:53 ಗಂಟೆಯ ಸಮಯದಲ್ಲಿ ಆರೋಪಿ ಪ್ರಸನ್ನ, ಪುತ್ರನ್ ಅಲ್ಯೂಮಿನಿಯಮ್ , ಅಭಿನೇತ್ರಿ ಕಾಂಪ್ಲೆಕ್ಸ್, ಚಾಂತಾರು ಗ್ರಾಮ, ಬ್ರಹ್ಮಾವರ ತಾಲೂಕು ರವರು ಘನ ಕರ್ನಾಟಕ ಸರಕಾರವು ಕೋವಿಡ್ 19 ಸೋಂಕು ತಡೆಗಟ್ಟುವ ಸಂಬಂಧ ಹೊರಡಿಸಿದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಅಭಿನೇತ್ರಿ ಕಾಂಪ್ಲೆಕ್ಸ್ ನಲ್ಲಿರುವ  ತಮ್ಮ ಪುತ್ರನ್ ಅಲ್ಯೂಮಿನಿಯಮ್ ಅಂಗಡಿಯನ್ನು ವ್ಯಾಪಾರದ  ಬಗ್ಗೆ ತೆರೆದು  ಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 90/2021 ಕಲಂ 269,188 ಐಪಿಸಿ ರಂತೆ ಪ್ರಕರಣ ದಾಖಲಿಸಲಾಗಿದೆ.

ಅಫಘಾತ ಪ್ರಕರಣ

 • ಉಡುಪಿ: ಪಿರ್ಯಾದಿ ವಿನ್ಸನ್  ವರ್ಗಿಸ್ ಇವರು ದಿನಾಂಕ 21-05-2021  ರಂದು  ತನ್ನ  KA 01 Z 5561  ನೇ  ಕಾರಿನಲ್ಲಿ   ಉಡುಪಿಯಿಂದ  ಉದ್ಯಾವರದ ಕಡೆಗೆ  ರಾಷ್ಟ್ರೀಯ  ಹೆದ್ದಾರಿ  66  ರಲ್ಲಿ   ಚಲಾಯಿಸಿಕೊಂಡು ಹೋಗುತ್ತಿರುವಾಗ    ಸಮಯ ಸುಮಾರು  ಬೆಳಿಗ್ಗೆ  7.00 ಗಂಟೆಗೆ  ಉಡುಪಿ  ಕಿನ್ನಿಮೂಲ್ಕಿ   ಕಾವೇರಿ  ಪೋರ್ಡ  ಶೋರೂಂ  ಎದುರು ತಲುಪುವಾಗ   ಹಿಂದಿನಂದ KA 20  D 1442  ನೇ  ಬೊಲೋರೋ  ಮ್ಯಾಕ್ಷೀ  ಟ್ರಕ್  ಚಾಲಕ  ಸದಾನಂದ  ಎಂಬಾತ  ತನ್ನ  ವಾಹನವನ್ನು  ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಫಿರ್ಯಾದುದಾರರ ಕಾರಿನ  ಹಿಂಬದಿಗೆ  ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದುದಾರರ ಕಾರಿನ  ಹಿಂಬದಿ  ಸಂಪೂರ್ಣ  ಜಖಂಗೊಂಡಿರುತ್ತದೆ. ಈ ಬಗ್ಗೆ ವಿನ್ಸನ್  ವರ್ಗಿಸ್  ಪ್ರಾಯ  35  ವರ್ಷ  ತಂದೆ: ವರ್ಗಿಸ್ . ರಾಮೋಜಿ ರಾವ್ , ಬೈದರಬೆಟ್ಟು   ಪರ್ಕಳ  ಅಂಚೆ  ಹೆರ್ಗಾ ಗ್ರಾಮ  ಉಡುಪಿ ಇವರು ನೀಡಿದ ದೂರಿನಂತೆ ಉಡುಪಿ ಸಂಚಾರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ  33/2021 ಕಲಂ:279 ಐಪಿಸಿಯಂತೆ ಪ್ರಕರಣ  ದಾಖಲಿಸಲಾಗಿರುತ್ತದೆ.

ವಂಚನೆ ಪ್ರಕರಣ

 • ಉಡುಪಿ: ಈ ಪ್ರಕರಣದ ಸಾರಾಂಶವೆನೆಂದರೆ ಪ್ರಕರಣದ 1 ನೇ ಆರೋಪಿ ಉದಯ ಕುಮಾರ ಶೆಟ್ಟಿ ತಂದೆ: ದಿ: ತೇಜಪ್ಪ ಶೆಟ್ಟಿ M/s ನೀಲಿಮಾ ಕ್ಯಾಶ್ಯೂ ಇಂಡಸ್ಟ್ರಿ, ಸಾಗಿನದಂಡೆ, ಸಟ್ವಾಡಿ, ಕಂದಾವರ ಗ್ರಾಮ ಮೂಡ್ಲಕಟ್ಟೆ,ಕುಂದಾಪುರ ತಾಲೂಕು ಇವರು ಕಂದಾವರ ಗ್ರಾಮದ ಸರ್ವೆ ನಂಬ್ರ 120/30L ಜಾಗದಲ್ಲಿ M/sನೀಲಿಮಾ ಕ್ಯಾಶ್ಯೂ ಇಂಡಸ್ಟ್ರಿ ಪ್ರಾರಂಭಿಸಲು 2016 ನೇ ಇಸವಿಯಲ್ಲಿ SBI ಬ್ಯಾಂಕ್ ಕುಂದಾಪುರದಲ್ಲಿ ರೂ. 70 ಲಕ್ಷ ಸಾಲ ಹಣವನ್ನು ಪಡೆದುಕೊಂಡಿದ್ದು, ಈ ಸಾಲಕ್ಕೆ 2 ನೇ ಆರೋಪಿತ ಶ್ರೀಮತಿ ಸ್ಮಿತಾ ಶೆಟ್ಟಿ ಗಂಡ: ಉದಯ ಕುಮಾರ ಶೆಟ್ಟಿ ಇವರು ಗ್ಯಾರೆಂಟರ್ ಆಗಿರುತ್ತಾರೆ. ಆದರೆ 1 ನೇ ಆರೋಪಿಯು S.NO: 120/30L ರಲ್ಲಿ ಕ್ಯಾಶ್ಯೂ ಇಂಡಸ್ಟ್ರಿಯನ್ನು ನಿರ್ಮಾಣಗೊಳಿಸದೇ 2 ನೇ ಆರೋಪಿತರು ಕುಂದಾಪುರ ಎಸ್‌ಸಿಡಿಸಿಸಿ ಬ್ಯಾಂಕಿನಲ್ಲಿ ಸೆಕ್ಯುರಿಟಿ ಆಗಿ ಅಡಮಾನ ಇರಿಸಿ, ಸಾಲ ಪಡೆದಿರುವ ಆರೋಪಿ 3 ನೇ  ಶ್ರೀಮತಿ ಸರಸ್ವತಿ ಶೆಡ್ತಿ,ಸ್ಮಿತಾ ಶೆಟ್ಟಿಯವರ ತಾಯಿ, ಉದಯ ಕುಮಾರ್ ಶೆಟ್ಟಿಯವರ ಅತ್ತೆ ವಾಸ: ಕಂದಾವರ ಗ್ರಾಮ ಕುಂದಾಪುರ ಇವರ ಹೆಸರಿನಲ್ಲಿರುವ ಮತ್ತು 3 ನೇ ಆರೋಪಿಗೆ ತಿಳಿದಿರುವ ಸರ್ವೆ ನಂಬ್ರ 152 ರ ಜಾಗದಲ್ಲಿ ಕ್ಯಾಶ್ಯೂ ಇಂಡಸ್ಟ್ರೀಯನ್ನು ನಿರ್ಮಾಣಗೊಳಿಸಿದ್ದು, ಈ ಕೆಲಸ ಕಾರ್ಯಗಳಿಗೆ 4 ನೇ ಆರೋಪಿ ಚೇತನ್ ಕುಮಾರ್ ಶೆಟ್ಟಿ (Bank appointed Valuator), 1ನೇ ಮಹಡಿ, ಸಾಯಿ ಸೆಂಟರ್, ಲಕ್ಷ್ಮೀನಾರಾಯಣ ದೇವಸ್ಥಾನ ಎದುರು, ಮುಖ್ಯರಸ್ತೆ, ಕುಂದಾಪುರ ಇವರು ಸಹಕರಿಸಿ, ಜಾಗ ಮತ್ತು ಫ್ಯಾಕ್ಟರಿಗೆ ನಿಗದಿತ ಮೌಲ್ಯಕ್ಕಿಂತ ಹೆಚ್ಚಿನ ಮೌಲ್ಯವನ್ನು ನಿಗದಿ ಪಡಿಸಿ, ಫಿರ್ಯಾದಿ ಬ್ಯಾಂಕ್ ನಂಬುವಂತೆ ಮಾಡಿ, 1 ನೇ ಆರೋಪಿಯು ಸಾಲ ಪಡೆಯಲು ಸಹಕರಿಸಿರುತ್ತಾನೆ. ಅಲ್ಲದೇ ಆರೋಪಿ 1 ನೇಯವರು ಮೇಲೆ ತಿಳಿಸಿದ ಕ್ಯಾಶ್ಯೂ ಇಂಡಸ್ಟ್ರಿ ನಡೆಸುವ ಸಲುವಾಗಿ ಸಬ್ಸಿಡಿ ಹಣವನ್ನು ಪಡೆದುಕೊಂಡಿರುತ್ತಾರೆ. ಒಟ್ಟಿನಲ್ಲಿ ಎಲ್ಲಾ ಆರೋಪಿಗಳೂ ಸಮಾನ ಉದ್ದೇಶದಿಂದ ಒಳ ಸಂಚು ನಡೆಸಿ, ನಂಬಿಕೆ ದ್ರೋಹ, ಅಪ್ರಾಮಾಣಿಕತನ, ಮೋಸ ನಡೆಸಿ, ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ, ಅವುಗಳನ್ನು ನೈಜವಾದುದೆಂದು ನಂಬಿಸಿ, ಫಿರ್ಯಾದಿ ಬ್ಯಾಂಕಿಗೆ ರೂ. 70,00,000/-ನಷ್ಟ ಉಂಟು ಮಾಡಿದ್ದಲ್ಲದೇ ಸರಕಾರದಿಂದ ಸಬ್ಸಿಡಿ ಹಣ ಪಡೆದು ದುರುಪಯೋಗಪಡಿಸಿಕೊಂಡಿದ್ದು ಈ ಬಗ್ಗೆ ಪ್ರಶಾಂತ ವಶಿಷ್ಠ ಬ್ರಾಂಚ್ ಮೆನೇಜರ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕುಂದಾಪುರ ಬ್ರಾಂಚ್, ಇವರು ನೀಡಿದ ದೂರಿನಂತೆ  ಉಡುಪಿ ಸೆನ್ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ  32/2021 ಕಲಂ 120(ಬಿ), 406, 420, 465, 468, 471 ಐಪಿಸಿಯಂತೆ ಪ್ರಕರಣ  ದಾಖಲಿಸಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 21-05-2021 06:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080