ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಉಡುಪಿ: ದಿನಾಂಕ 18/04/2023ರಂದು ರಾತ್ರಿ ಪಿರ್ಯಾದಿದಾರರಾದ ಪೂಜಾರಿ ಯಕ್ಷಿತ್ ಸಂಜೀವ (18),ತಂದೆ: ದಿ.ಸಂಜೀವ ಪೂಜಾರಿ, ವಾಸ: ಮನೆ ನಂ:5/68 ಕುದ್ರಬೆಟ್ಟು ಹಸ್ಲುತೋಟ ಹೌಸ್, ಉಪ್ಪೂರು ಗ್ರಾಮ, ಬ್ರಹ್ಮಾವರ ತಾಲೂಕು ಉಡುಪಿ ಜಿಲ್ಲೆ ಇವರು KA-20-ER-7801ನೇ ಸ್ಕೂಟರಿನಲ್ಲಿ ಹಿಂಬದಿ ಸವಾರನಾಗಿಯೂ ಈ ಸ್ಕೂಟರ್‌ನ್ನು ಕುಮಾರಸ್ವಾಮಿರವರು ಚಲಾಯಿಸುತ್ತಿದ್ದು, ಅಂಬಾಗಿಲು ಅಮೃತಾಗಾರ್ಡನ್ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ-66 ನೇ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಉಪ್ಪೂರು ಕಡಗೆ ಬರುತ್ತಿರುವಾಗ ರಾತ್ರಿ 10:30 ಗಂಟೆಗೆ ಸಂತೆಕಟ್ಟೆ ಬ್ರಿಡ್ಜ್ ಹತ್ತಿರ ಇರುವ ಕೂಸ ಪೂಜಾರಿ ರವರ ಹೋಟೆಲ್ ಬಳಿ ತಲುಪುವಾಗ ಸ್ಕೂಟರ್ ಸವಾರ ಕುಮಾರಸ್ವಾಮಿಯು ತಾನು ಸವಾರಿ ಮಾಡುತ್ತಿದ್ದ ಸ್ಕೂಟರ್‌ನ್ನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿದ್ದರಿಂದ ಸ್ಕೂಟರ್ ನಿಯಂತ್ರಣ ತಪ್ಪಿ ಪಿರ್ಯಾದಿದಾರರು ಮತ್ತು ಆರೋಪಿ ಕುಮಾರ ಸ್ವಾಮಿ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ ಬಲಕಾಲಿಗೆ ಮತ್ತು ಎಡಕೈಗೆ ಮೂಳೆ ಮುರಿತದ ಜಖಂ ಮತ್ತು ಕೆಳತುಟಿಗೆ, ಬಾಯಿಗೆ ರಕ್ತಗಾಯವಾಗಿದ್ದು,ಅಲ್ಲದೇ ಆರೋಪಿ ಕುಮಾರಸ್ವಾಮಿರವರ ಬಲಕೈಗೆ ತರಚಿದ ರಕ್ತಗಾಯ ಆಗಿರುತ್ತದೆ. ಗಾಯಾಳುಗಳ ಪೈಕಿ ಆರೋಪಿ ಕುಮಾರಸ್ವಾಮಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿಯೂ ಪಿರ್ಯಾದಿದಾರರು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಈ  ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 35/2023 ಕಲಂ:  279 337, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ದಿನಾಂಕ 19/04/2023  ರಂದು  ಸಂಜೆ  6:00 ಗಂಟೆಗೆ, ಕುಂದಾಪುರ  ತಾಲೂಕಿನ, ಕೊಟೇಶ್ವರ ಗ್ರಾಮದ  ಬೀಚ್‌ ರಸ್ತೆಯ ಯೊಗೀಶ್‌ನಾಯಕ್‌ ರವರ ಮನೆಯ ಬಳಿ ರಸ್ತೆಯಲ್ಲಿ,  ಆಪಾದಿತ ನವೀನ್‌ KA-20-EU-3063ನೇ ಸ್ಕೂಟರ್‌ ನ್ನು ಕೊಟೇಶ್ವರ ಕಡೆಯಿಂದ ಕಿನಾರಾ ಬೀಚ್‌ಕಡೆಗೆ  ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡಿಕೊಂಡು, ಅದೇ ದಿಕ್ಕಿನಲ್ಲಿ  ಆಪಾದಿತನ ಸ್ಕೂಟರ್‌ನ ಮುಂಭಾಗದಲ್ಲಿ ಭಾಸ್ಕರ್‌ ಕಿಣಿ ರವರು KA-20-EH-4692ನೇ  ಸ್ಕೂಟರ್‌‌ನ್ನು ಸವಾರಿ ಮಾಡಿಕೊಂಡು  ಹೋಗಿ, ಇಂಡಿಕೇಟರ್‌ ಹಾಗೂ ಕೈ ಸನ್ನೆ ಮಾಡಿ  ರಸ್ತೆಯ ಬಲಬದಿಯ  ಯೊಗೀಶ್‌ನಾಯಕ್‌ ರವರ ಮನೆಗೆ ತಿರುಗಿಸುತ್ತಿರುವಾಗ, ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಭಾಸ್ಕರ್ ಕಿಣಿಯವರ ಹಣೆಗೆ, ತಲೆಗೆ, ಹಾಗೂ ಮುಖಕ್ಕೆ ರಕ್ತಗಾಯ ಹಾಗೂ ಒಳನೋವು ಆಗಿದ್ದು, ಹಾಗೂ ನವೀನ್‌ ರವರ ಎಡಕೈಗೆ  ತರಚಿದ ಗಾಯವಾಗಿದ್ದು, ಭಾಸ್ಕರ್ ಕಿಣಿಯವರು  ಕೊಟೇಶ್ವರ ಎನ್‌. ಆರ್‌ ಆಚಾರ್ಯ   ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು  ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ. ಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ನವೀನ್‌ರವರು ಕೊಟೇಶ್ವರ ಎನ್‌. ಆರ್‌ ಆಚಾರ್ಯ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 50/2023 ಕಲಂ: 279,  338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ಪಿರ್ಯಾದಿದಾರರಾದ ಅಯಿಲೀಸ್‌ ಶೇಕ್‌ ತಯ್ಯಬ್ (19), ತಂದೆ  ಸೇಕ್‌ ತಯ್ಯಬ್, ವಾಸ: ಫಝಲತ್‌ ಮಂಜೀಲ್‌ ಕುಂಟಲ್ಪಾಡಿ ಕಸಬಾ ಗ್ರಾಮ, ಕಾರ್ಕಳ ತಾಲೂಕು ಕಾರ್ಕಳ ಇವರು ದಿನಾಂಕ  20/04/2023  ರಂದು ತನ್ನ ಅಜ್ಜಿ ರಜಿಯಾಬಿ (65) ರವರೊಂದಿಗೆ ಕಾಪುವಿಗೆ ಹೋಗಲು ಬೆಳಿಗ್ಗೆ 11:15 ಗಂಟೆಗೆ ಕಾರ್ಕಳ ಕಸಬಾದ ಕುಂಟಲ್ಪಾಡಿ ಎಂಬಲ್ಲಿ ಕಾರ್ಕಳದಿಂದ ಕಾಪುವಿಗೆ  ಹೋಗುವ KA-20-B-1791 ನೋಂದಣಿ ಸಂಖ್ಯೆಯ ಬಸ್ಸನ್ನು ಹತ್ತಿದ್ದು, ಪಿರ್ಯಾದಿದಾರರು ಬಸ್ಸಿಗೆ ಹತ್ತಿದ  ನಂತರ ರಜಿಯಾಬಿರವರು ಬಸ್ಸಿಗೆ ಹತ್ತುತ್ತಿರುವ ಸಮಯ ಬಸ್ಸಿನ ಚಾಲಕ ಪೀಟರ್ ಮ್ಯಾಕ್ಸಿಂ ಮಥಾಯಸ್ ಎಂಬಾತನು ಬಸ್ಸನ್ನು  ನಿರ್ಲಕ್ಷ್ಯತನದಿಂದ ಮುಂದಕ್ಕೆ ಚಲಾಯಿಸಿದಾಗ ಬಸ್ಸಿಗೆ ಹತ್ತುತ್ತಿದ್ದ ರಜಿಯಾಬಿರವರು ಬಸ್ಸಿನಿಂದ ಕೆಳಗೆ ಬಿದ್ದು, ಅವರ  ಎಡಕಾಲಿನ ಪಾದದ ಮೇಲೆ ಬಸ್ಸಿನ  ಹಿಂದಿನ ಚಕ್ರ ಹರಿದುಹೋಗಿ ರಜಿಯಾಬಿರವರ ಎಡಕಾಲಿನ ಪಾದದ ಮೂಳೆ ಮುರಿತವಾಗಿದ್ದು ಗಾಯಾಳು ರಜಿಯಾಬಿರವರು  ಕಾರ್ಕಳದ ನಿಟ್ಟೆ ಗಾಜ್ರಿಯಾ ಆಸ್ಪತ್ರೆಯಲ್ಲಿ  ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ. ಈ ಬಗ್ಗೆ ಕಾರ್ಕಳ  ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ     48/2023 ಕಲಂ:  279 , 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ದಿನಾಂಕ 20/04/2023  ರಂದು  ಸಂಜೆ  4:20  ಗಂಟೆಗೆ ಕುಂದಾಪುರ  ತಾಲೂಕಿನ,  ಬೀಜಾಡಿ ಗ್ರಾಮದ ಪೂಜಾ ಟೈಲ್ಸ್‌ ಬಳಿ,  ಪೂರ್ವ ಬದಿಯ  NH 66  ರಸ್ತೆಯಲ್ಲಿ, ಆಪಾದಿತ ರಮನಾಥ ಶೆಟ್ಟಿ ಎಂಬುವವರು KA-51-P-0453ನೇ ಕಾರನ್ನು ಪೂರ್ವ ಬದಿಯ  ಸರ್ವಿಸ್‌ ರಸ್ತೆಯಿಂದ  ಯಾವುದೇ ಸೂಚನೆ ನೀಡದೇ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ NH 66  ರಸ್ತೆಗೆ  ತಿರುಗಿಸಿ, ಕುಂದಾಪುರ ಕಡೆಯಿಂದ ಬ್ರಹ್ಮಾವರ ಕಡೆಗೆ ಪಿರ್ಯಾದಿದಾರರಾದ ಶಶಾಂಕ್‌ಪಟೇಲ್‌‌ ಕೆ. ಜಿ (37), ತಂದೆ:  ಕೆ. ಜಿ.  ನಾರಾಯಣ, ವಾಸ: “ಸಾಕೇತಾ” ಆದರ್ಶನಗರ, ಬ್ರಹ್ಮಾವರ, ಬ್ರಹ್ಮಾವರ ತಾಲೂಕು ಇವರು NH 66  ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿದ್ದ  KA-20-EF-2041ನೇ ಬುಲೆಟ್‌ ಗೆ ಅಪಘಾತಪಡಿಸಿದ ಪರಿಣಾಮ,  ಶಶಾಂಕ್‌ ಪಟೇಲ್‌‌ ಕೆ. ಜಿರವರ ಬಲ ಕೈಗೆ ಮೂಳೆ ಮುರಿತವಾದ ಗಾಯ ಹಾಗೂ ಮೂಗಿಗೆ ಮತ್ತು ಎಡಕೈಗೆ ತರಚಿದ ಗಾಯವಾಗಿ ಕೊಟೇಶ್ವರ ಎನ್. ಆರ್ ಆಚಾರ್ಯ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆದುಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 51/2023 ಕಲಂ: 279,  338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಪಡುಬಿದ್ರಿ: ಪಿರ್ಯಾದಿದಾರರಾದ ಮಹಾಂತೇಶ ದೇವೇಂದ್ರಪ್ಪ ಬಿಂಗಿ (35), ತಂದೆ: ದೇವೇಂದ್ರಪ್ಪ ಬಿಂಗಿ, ವಾಸ: ಶರಣ ಬಸವೇಶ್ವರ, ಮಾಯಮ್ಮ ದೇವತೆ ಗುಡಿಯ ಹಿಂಭಾಗ, ಕಾಟಾಪುರ ಗ್ರಾಮ, ಕುಷ್ಟಗಿ ತಾಲೂಕು, ಕೊಪ್ಪಳ ಜಿಲ್ಲೆ ಇವರು ಕಳೆದ 5 ವರ್ಷಗಳಿಂದ ಉಡುಪಿಯ ಕಾಡಬೆಟ್ಟುವಿನಲ್ಲಿ ಬಾಡಿಗೆಗೆ ವಾಸವಾಗಿದ್ದು, ದಿನಾಂಕ 19/04/2023 ರಂದು ಬೆಳಿಗ್ಗೆ ಅವರ ಮೇಸ್ತ್ರಿ ಶಿವಪುತ್ರ ಎಂಬುವವರು ತಿಳಿಸಿದಂತೆ ಪಿರ್ಯಾದಿದಾರರ ತಂಗಿ ಗಂಗಮ್ಮ, ಅಕ್ಕ ಮಾಲಮ್ಮ ರವರ ಜೊತೆ ಕಾಪು ತಾಲೂಕು ಬಡಾ ಗ್ರಾಮ ಉಚ್ಚಿಲದಲ್ಲಿ ಕಾಂಕ್ರೀಟ್ ಕೆಲಸಕ್ಕೆಂದು ಬಸ್ಸಿನಲ್ಲಿ ಬಂದು 08:30 ಗಂಟೆಗೆ ಉಚ್ಚಿಲದಲ್ಲಿನ ಬಸ್ ನಿಲ್ದಾಣದ ಬಳಿ ರಾಷ್ಟ್ರೀಯ ಹೆದ್ದಾರಿ-66 ರ ಸರ್ವಿಸ್ ರಸ್ತೆಯಲ್ಲಿ ನಿಂತಿರುವ ಸಮಯ KA-20-EH-9885 ನೇ ನಂಬ್ರದ ಮೋಟಾರ್ ಸೈಕಲ್ ಸವಾರ ಬೆಳಪು ಗ್ರಾಮದ ಮೊಹಮ್ಮದ್ ಶರೀಫ್ ತನ್ನ ಮೋಟಾರ್‌ ಸೈಕಲನ್ನು ಪಣಿಯೂರು ಕ್ರಾಸ್ ಕಡೆಯಿಂದ ಬಸ್ ನಿಲ್ದಾಣದ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ತಂಗಿ ಗಂಗಮ್ಮ ರವರಿಗೆ ಡಿಕ್ಕಿ ಹೊಡೆದು ಮೋಟಾರ್‌ ಸೈಕಲ್ ಸಮೇತ ರಸ್ತೆಗೆ ಬಿದ್ದಿರುತ್ತಾನೆ. ಅಪಘಾತದಿಂದ ಗಂಗಮ್ಮ ರವರ ಬಲಕಾಲಿಗೆ ಮೂಳೆ ಮುರಿತ, ಮಂಡಿಯಲ್ಲಿ ತೀವ್ರಗಾಯ ಹಾಗೂ ತಲೆಯ ಹಿಂಭಾಗಕ್ಕೆ ಪೆಟ್ಟಾಗಿದ್ದು, ಆರೋಪಿತನ ಕೈ ಕಾಲು ಮತ್ತು ಸೊಂಟಕ್ಕೆ ಗಾಯ ನೋವು ಆಗಿರುತ್ತದೆ. ನಂತರ ಇಬ್ಬರನ್ನೂ ಚಿಕಿತ್ಸೆಯ ಬಗ್ಗೆ ಅಂಬ್ಯುಲೆನ್ಸ್ ಒಂದರಲ್ಲಿ ಉಡುಪಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಗಂಗಮ್ಮನನ್ನು ಒಳರೋಗಿಯಾಗಿ ದಾಖಲಿಸಿದ್ದು, ಆರೋಪಿತನು ಹೊರರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾನೆ.  ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 53/2023, ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಅಸ್ವಾಭಾವಿಕ ಮರಣ ಪ್ರಕರಣ

 • ಕಾಪು: ಪಿರ್ಯಾದಿದಾರರಾದ ಅನಿತಾ ಪಿರೇರಾ (49), ಗಂಡ: ಗೊಡ್ವಿನ್ ಪಿರೇರಾ, ವಾಸ:ಪಿರೇರಾ ವಿಲ್ಲಾ ಕೆಳ ನೇಜಾರು ಕಲ್ಯಾಣಪುರ, ಉಡುಪಿ ಇವರ ಅಣ್ಣ ಪ್ರೆಡ್ರಿಕ್ ಸ್ಟಾನಿ ಲುವಿಸ್ (59) ರವರು ಉದ್ಯಾವರ ಗ್ರಾಮದ ಪಿತ್ರೋಡಿಯಲ್ಲಿ ಫ್ರಾನ್ಸಿಸ್ ಜೋಸೆಫ್ ವಿಲ್ಲಾ ಎಂಬ ಮನೆಯಲ್ಲಿ ವಾಸಮಾಡಿಕೊಂಡಿದ್ದು ಕೃಷಿ ಕೆಲಸ ಮಾಡಿಕೊಂಡಿದ್ದರು. ಪ್ರೆಡ್ರಿಕ್ ಸ್ಟಾನಿ ಲುವಿಸ್ ರವರ ಹೆಂಡತಿ ಸಿಂತಿಯಾ ಹಾಗೂ ಅವರ ಮೂವರು ಮಕ್ಕಳು ಮುಂಬೈಯಲ್ಲಿ ವಾಸಮಾಡಿಕೊಂಡಿರುತ್ತಾರೆ. ಪ್ರೆಡ್ರಿಕ್ ಸ್ಟಾನಿ ಲುವಿಸ್ ರವರು ಮೊದಲಿನಿಂದಲೂ ವಿಪರೀತ ಕುಡಿತದ ಚಟವನ್ನು ಹೊಂದಿದ್ದು ಇತ್ತಿಚೆಗೆ ಕೂಡ ವಿಪರೀತ ಕುಡಿಯುತ್ತಿದ್ದರು. ಪ್ರೆಡ್ರಿಕ್ ಸ್ಟಾನಿ ಲುವಿಸ್ ರವರು ವಿಪರೀತ ಮದ್ಯ ಸೇವಿಸಿ  ದಿನಾಂಕ 19/04/2023 ರಂದು ರಾತ್ರಿ 8:00 ಗಂಟೆಯಿಂದ ದಿನಾಂಕ 20/04/2023 ರ 12:30 ಗಂಟೆಯ ಮಧ್ಯಾವಧಿಯಲ್ಲಿ ಮನೆಯಿಂದ ಹೊರಗೆ ಬಂದವರು ಕೆಳಗೆ ಬಿದ್ದು ಮರಣಹೊಂದಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 11/2023 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ಪಿರ್ಯಾದಿದಾರರಾದ ಜಯಲಕ್ಷ್ಮಿ (41), ಗಂಡ: ಸದಾನಂದ ಅಮೀನ್‌, ವಾಸ: ಮನೆ ನಂಬ್ರ: 1-37-13, ರಾಹುಲ್‌, ಬೀಡುಮಾರ್ಗ, ನಾಗೇಶ್‌ ನಗರ, ಅಂಬಲ್ಪಾಡಿ ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ ಇವರ ಗಂಡ ಸದಾನಂದ ಅಮೀನ್‌ (54) ರವರು ಚಿಕ್ಕ ವಯಸ್ಸಿನಲ್ಲಿಯೇ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದು, ಕೃತಕ ಕಾಲುಗಳನ್ನು ಜೋಡಿಸಿಕೊಂಡಿರುತ್ತಾರೆ. ಜೊತೆಗೆ ಮಗನಿಗೆ ಅನಾರೋಗ್ಯ ಇದ್ದುದರಿಂದ ಜೀವನದಲ್ಲಿ ನೊಂದು, ದಿನಾಂಕ 20/04/2023 ರಂದು ಬೆಳಿಗ್ಗೆ 03:30 ಗಂಟೆಯಿಂದ ಬೆಳಿಗ್ಗೆ 09:30 ಗಂಟೆ ನಡುವೆ ಉಡುಪಿ ತಾಲೂಕು ಅಂಬಲ್ಪಾಡಿ ಗ್ರಾಮದ ಬೀಡು ಮಾರ್ಗದಲ್ಲಿರುವ ಮನೆ ನಂಬ್ರ 1-37-13 ವಾಸ್ತವ್ಯದ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ರೂಮಿನ ಮಾಡಿನ ಕಬ್ಬಿಣದ ಹುಕ್ಕಿಗೆ ನೈಲಾನ್‌ ಸೀರೆ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 18/2023 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾಪು: ಪಿರ್ಯಾದಿದಾರರಾದ ಸುಧೀರ ಶೆಟ್ಟಿ (42),  ತಂದೆ : ಸೂರ್ಯಣ್ಣ ಶೆಟ್ಟಿ , ವಾಸ : ಮಾತೃಶ್ರೀ ಸಾನದ ಕೆಳಮನೆ, ಮಣಿಪುರ ವೆಸ್ಟ್, ಮಣಿಪುರ ಗ್ರಾಮ ಉಡುಪಿ ತಾಲ್ಲೂಕು ಉಡುಪಿ ಜಿಲ್ಲೆ ಇವರ ತಮ್ಮ ಸುನೀಲ್ ಶೆಟ್ಟಿ (39) ರವರು ಅವಿವಾಹಿತನಾಗಿದ್ದು, ತಾಯಿಯೊಂದಿಗೆ ಮಣಿಪುರ ಗ್ರಾಮ ಮಾತೃಶ್ರೀ ಸಾನದ ಕೆಳಮನೆ ಎಂಬಲ್ಲಿ ವಾಸವಾಗಿ, ಕಟಪಾಡಿಯಲ್ಲಿ ಆಟೋ ರಿಕ್ಷಾ ಚಾಲಕನಾಗಿ ಕೆಲಸ ಮಾಡಿಕೊಂಡಿರುತ್ತಾನೆ. ಸುನೀಲ್ ರವರಿಗೆ ವಿವಾಹವಾಗದ ಬಗ್ಗೆ ಮನನೊಂದು ದಿನಾಂಕ 20/04/2023 ರಂದು ಸಾಯಂಕಾಲ 5:00 ಗಂಟೆಯಿಂದ 6:15 ಗಂಟೆಯ ಮಧ್ಯಾವಧಿಯಲ್ಲಿ  ಮನೆಯ ರೂಮಿನ ಸಿಲಿಂಗ್ ಫ್ಯಾನ್‌ಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ     12/2023 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ವಂಚನೆ ಪ್ರಕರಣ  

 • ಉಡುಪಿ: ಪಿರ್ಯಾದಿದಾರರಾದ ಐನೇಶ್ ಡಿ’ಸೋಜಾ (33) ಇವರ ತಾಯಿಯವರ ಪಾಸ್‌ಪೋರ್ಟ್‌ ಅನ್ನು ವೀಸಾ ಸ್ಟಾಪಿಂಗ್  ಬಗ್ಗೆ ಕಳುಹಿಸಿದ್ದು,  ದಿನಾಂಕ 18/04/2023 ರಂದು ಪಿರ್ಯಾದಿದಾರರಿಗೆ 8046308930 ನೇ ನಂಬ್ರದಿಂದ ಕರೆ ಮಾಡಿ ಬೂಡಾರ್ಟ್‌ನವರು ಎಂದು ತಿಳಿಸಿ ನೀವು ನೀಡಿರುವು ವಿಳಾಸಕ್ಕೆ ಪಾರ್ಸೇಲ್ ಡೆಲಿವರಿ ಮಾಡಲು ಆಗುವುದಿಲ್ಲ ಬೇರೆ ವಿಳಾಸವನ್ನು ನೀಡುವಂತೆ ತಿಳಿಸಿ ವಿಳಾಸಕ್ಕೆ ಪಾರ್ಸೇಲ್ ಡೆಲಿವರಿ ಮಾಡಲು ಹೆಚ್ಚುವರಿ ಮೊತ್ತವನ್ನು ನೀಡಬೇಕಾಗಿರುತ್ತದೆ ಎಂದು ತಿಳಿಸಿ ಪಿರ್ಯಾದಿದಾರರ ಮೊಬೈಲ್‌ಗೆ https://courierservicerea5.wixsite.com/comlmy-site-1 ಹಾಗೂ base.apk ಎಂಬ ಲಿಂಕ್‌ ಕಳುಹಿಸಿದ್ದು ಲಿಂಕ್‌ನ್ನು ಪಿರ್ಯಾದಿದಾರರು ಕ್ಲಿಕ್ ಮಾಡಿದಲ್ಲಿ ಪಿರ್ಯಾದಿದಾರರ ಕರ್ನಾಟಕ ಬ್ಯಾಂಕ್ ಉಳಿತಾಯ ಖಾತೆಯಿಂದ  ಹಂತ ಹಂತವಾಗಿ ರೂಪಾಯಿ 1,08,811/- ಹಣ ಕಡಿತವಾಗಿ  ನಷ್ಠವಾಗಿರುತ್ತದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ  72/2023  ಕಲಂ: 66(C)   66(D)   ಐ.ಟಿ. ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಮಣಿಪಾಲ: ದಿನಾಂಕ 20/04/2023 ರಂದು  ಮಣಿಪಾಲ ಪೊಲೀಸ್ ಠಾಣಾ ಪೊಲೀಸ್‌ನಿರೀಕ್ಷಕರಾದ ದೇವರಾಜ್‌ ಟಿ.ವಿ ರವರು  ಇಂದ್ರಾಳಿ ರೈಲ್ವೆ ನಿಲ್ದಾಣದ ಬಳಿ ತಪಾಸಣೆ ಕರ್ತವ್ಯ ನಿರ್ವಹಿಸುತ್ತಿರುವಾಗ ಇಂದ್ರಾಳಿ ರೈಲ್ವೇ ನಿಲ್ದಾಣಕ್ಕೆ ಗೋವಾ ಕಡೆಯಿಂದ ಕೇರಳಕ್ಕೆ ಹೋಗುವ ಒಂದು ರೈಲು  ಬಂದು ನಿಂತಿದ್ದು ಆ ರೈಲಿನಿಂದ ಕೆಲವು ಪ್ರಯಾಣಿಕರು ಇಳಿದಿದ್ದು ಅವರಲ್ಲಿ ಓರ್ವ ವ್ಯಕ್ತಿಯು ಒಂದು ಹಸಿರು ಬಣ್ಣದ ಪ್ಲಾಸ್ಟಿಕ್‌ ಕವರನ್ನು ಹಿಡಿದುಕೊಂಡು ಅನುಮಾಸ್ಪದವಾಗಿ ನಡೆದುಕೊಂಡು ಬರುತ್ತಿರುವುದನ್ನು ಗಮನಿಸಿ ಆತನನ್ನು ಚೆಕ್ ಮಾಡಲು ಮುಂದಾದಾಗ ಆತನ ಕೈನಲ್ಲಿದ್ದ ಹಸಿರು ಬಣ್ಣದ ಪ್ಲಾಸ್ಟಿಕ್‌ಕವರನ್ನು ಎಸೆದು ಓಡಿ ಹೋಗಿರುತ್ತಾನೆ. ಸಿಬ್ಬಂದಿಗಳು ಆತನನ್ನು ಬೆನ್ನಟ್ಟಿ ಹೋಗಿ ಸುತ್ತ ಮುತ್ತ ಹುಡುಕಾಡಿದಲ್ಲಿ ಎಲ್ಲಿಯು ಪತ್ತೆಯಾಗಿರುವುದಿಲ್ಲ. ಸದ್ರಿ ಪ್ಲಾಸ್ಟಿಕ್‌ಕವರನ್ನು ತೆರೆದು ನೋಡಲಾಗಿ ಅದರಲ್ಲಿ ಮದ್ಯ ತುಂಬಿದ ಮೂರು  ಬಾಟಲಿಗಳಿದ್ದು ಅವುಗಳು ಗೋವಾ ರಾಜ್ಯದ ಮದ್ಯದ ಬಾಟಲಿಗಳಾಗಿದ್ದು ಸದರಿ ವ್ಯಕ್ತಿಯು ಯಾವುದೇ ಷಪರವಾನಿಗೆ ಇಲ್ಲದೆ ಅಕ್ರಮವಾಗಿ ಮದ್ಯದ ಬಾಟಲಿಯನ್ನು ತನ್ನ ವಶದಲ್ಲಿ ಇಟ್ಟುಕೊಂಡಿರುವುದು ದೃಢಪಟ್ಟಿರುತ್ತದೆ.  ಹಸಿರು ಬಣ್ಣದ ಪ್ಲಾಸ್ಟಿಕ್‌ ಕವರ್‌ನಲ್ಲಿದ್ದ ಮದ್ಯ ತುಂಬಿದ ಬಾಟಿಲಿಗಳನ್ನು ಪರಿಶೀಲಿಸಲಾಗಿ 1) ROYAL GRAND ಎಂದು ಬರೆದಿರುವ 2 ಲೀಟರ್‌ನ ವಿಸ್ಕಿ ಬಾಟಲಿ -1, ಇದರ ಬಾರ್‌ ಕೋಡ್‌ ನಂಬ್ರ 8908005089001 ಆಗಿರುತ್ತದೆ ಬೆಲೆ 800/- ರೂಪಾಯಿ ಆಗಿರುತ್ತದೆ. 2) BLACK BY BACARDI ಎಂದು ಬರೆದಿರುವ 750 ML ನ ವಿಸ್ಕಿ ಬಾಟಲಿ – 1, ಇದರ ಬಾರ್‌ಕೋಡ್‌ ನಂಬ್ರ 8902136825019 ಬೆಲೆ 300/- ರೂಪಾಯಿ ಆಗಿರುತ್ತದೆ. 3) BLACK BY BACARDI ಎಂದು ಬರೆದಿರುವ 750 ML ನ ವಿಸ್ಕಿ ಬಾಟಲಿ – 1, ಇದರ ಬಾರ್‌ಕೋಡ್‌ ನಂಬ್ರ 8902136825019 ಬೆಲೆ 300/- ರೂಪಾಯಿ ಆಗಿರುತ್ತದೆ ಒಟ್ಟು ಮದ್ಯ 3.5 ಲೀಟರ್‌ಆಗಿದ್ದು ಒಟ್ಟು ಮೌಲ್ಯ 1,400 /- ರೂಪಾಯಿ ಆಗಿರುತ್ತದೆ.  ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 102/2023 ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ 1965 ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ದಿನಾಂಕ 20/04/2023 ರಂದು ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಸರಸ್ವತಿ ಶಾಲೆಯ ಬಳಿಯ ಸಾರ್ವಜನಿಕ ಸ್ಥಳದಲ್ಲಿ ನಿಷೇದಿತ ಮಾದಕ ವಸ್ತು Methamphetamine Durg ಮಾರಾಟ ಮಾಡಲು ಹೊಂದಿದ್ದ ಮೊಹಮ್ಮದ್ ಅಫ್ವಾನ್ (21), ತಂದೆ: ಮೊಹಿದ್ದಿನ್, ವಾಸ: ಮನೆ ನಂಬ್ರ 1-4-97A, ದೊಡ್ಡನಗುಡ್ಡೆ ಮಸೀದಿ ರಸ್ತೆ, ಶಿವಳ್ಳಿ ಗ್ರಾಮ, ಕುಂಜಿಬೆಟ್ಟು ಪೋಸ್ಟ್, ಉಡುಪಿ ಎಂಬಾತನನ್ನು ಬಜಂತ್ರಿ, ಪೊಲೀಸ್ ನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ ಇವರು ದಸ್ತಗಿರಿಗೊಳಿಸಿ, ಆರೋಪಿಯಿಂದ 5.23 ಗ್ರಾಂ ತೂಕದ Methamphetamine Durg, ಮೊಬೈಲ್‌ ಪೋನ್- 1,  ಪೌಡರ್‌ ಪ್ಯಾಕ್‌ ಮಾಡಲು ಬಳಸುವ ಸಣ್ಣ ಪ್ಲಾಸ್ಟಿಕ್‌ ಕವರ್-10 ವಶಪಡಿಸಿಕೊಂಡಿರುವುದಾಗಿರುತ್ತದೆ. ಸ್ವಾಧೀನಪಡಿಸಿಕೊಂಡ Methamphetamine Durg ಮೌಲ್ಯ ರೂಪಾಯಿ 20,000/- ಆಗಿರುತ್ತದೆ. ಸ್ವಾಧೀನಪಡಿಸಿಕೊಂಡಿರುವ  ಮೊಬೈಲ್ ಪೋನ್‌ ಮೌಲ್ಯ 2000/-, ಸ್ವಾಧೀನಪಡಿಸಿಕೊಂಡಿರುವ ಎಲ್ಲಾ ಸ್ವತ್ತುಗಳ ಒಟ್ಟು  ಮೌಲ್ಯ  22,000/- ಆಗಿರುತ್ತದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 71/2023 ಕಲಂ : 22(B), ಎನ್.ಡಿ.ಪಿ. ಎಸ್. ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.   
 • ಅಮಾಸೆಬೈಲು: ಪಿರ್ಯಾದಿದಾರರಾದ ಕೆ ಭಾಸ್ಕರ ಶೆಟ್ಟಿ,  ಪಂಚಾಯತ್ ಅಭಿವೃದ್ಧಿ ಅಧಿಕಾರಿ  ಗ್ರಾಮ ಪಂಚಾಯತ್ ಮಡಾಮಕ್ಕಿ ಇವರು ದಿನಾಂಕ 20/04/2023 ರಂದು ಹೆಬ್ರಿ ತಾಲೂಕು ಪಂಚಾಯತು ಮಾನ್ಯ ಕಾರ್ಯ ನಿರ್ವಹಣಾಧಿಕಾರಿಯವರ ಸೂಚನೆಯ ಮೇರೆಗೆ ಕ್ಷೇತ್ರ ಕರ್ತವ್ಯಕ್ಕೆ ಹೋಗಿದ್ದ ಸಮಯದಲ್ಲಿ ಗ್ರಾಮ ಪಂಚಾಯತ್ ಕಛೇರಿಯಲ್ಲಿ ಮಹಿಳಾ ಸಿಬ್ಬಂದಿ ಡಾಟಾ ಎಂಟ್ರಿ ಆಪರೇಟರ್‌ ಶ್ರೀಮತಿ ಪವಿತ್ರಾ ಆರ್‌ ಶೆಟ್ಟಿ ಅವರು ಇರುವಾಗ ಶೇಡಿಮನೆ ಗ್ರಾಮದ ಅಗಳಿಬೈಲು ನಿವಾಸಿ  ಸತೀಶ್‌ ಹೆಗ್ಡೆ ಬಿನ್‌ ತಮ್ಮಣ್ಣ ಹೆಗ್ಡೆ ಇವರು 16:07 ಗಂಟೆಗೆ ಮಡಾಮಕ್ಕಿ ಗ್ರಾಮ ಪಂಚಾಯತ್ ಕಛೇರಿಗೆ ಮನೆ ನಂಬ್ರದ ಉದ್ದೇಶಕ್ಕೆ ಬಂದು  ಮಹಿಳಾ ಸಿಬ್ಬಂದಿಯವರಿಗೆ ಬೆದರಿಸಿ ಹೊರಗಿನಿಂದ ಬಾಗಿಲನ್ನು ಮುಚ್ಚಿ ಹೊರಗಿನಿಂದ ಬೀಗ ಹಾಕಿ ಪಂಚಾಯತಿನ ಮಹಿಳಾ ಸಿಬ್ಬಂದಿಯನ್ನು ಅಕ್ರಮ ಬಂಧನದಲ್ಲಿರಿಸಿ ಭಯ ಭೀತರನ್ನಾಗಿಸುವಂತೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು  ಈ ವಿಷಯವನ್ನು ಮಹಿಳಾ ಸಿಬ್ಬಂದಿ ದೂರವಾಣಿ ಮುಖಾಂತರ ಪಿರ್ಯಾದಿದಾರರಿಗೆ ಮಾಹಿತಿ ನೀಡಿದ್ದು ವಿಷಯ ತಿಳಿದು ಪಿರ್ಯಾದಿದಾರರು ಕಛೇರಿಗೆ ಬಂದಿದ್ದು ಸತೀಶ ಹೆಗ್ಡೆ ಅವರು ಕಛೇರಿ ಎದುರು ನಿಂತು ಪಿರ್ಯಾದಿದಾರರಿಗೆ ಮತ್ತು ಕಛೇರಿಯ ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದಿರುವುದಾಗಿ ನೀಡಿದ ದೂರಿನಂತೆ ಅಮಾಸೆಬೈಲು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 11/2023 ಕಲಂ: 186, 342,504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬೈಂದೂರು: ಪಿರ್ಯಾದಿದಾರರಾದ ವಿಶ್ವನಾಥ. ಇವರು  118 - ಬೈಂದೂರು ವಿಧಾನಸಭಾ ಕ್ಷೇತ್ರ ಚುನಾವಣೆಯ ಎಫ್.ಎಸ್.ಟಿ -1 ನೇದರ ಅಧಿಕಾರಿಯಾಗಿದ್ದು, ಸಾಮಾಜಿಕ ಜಾಲತಾಣಗಳಾದ ಪೇಸ್ಬುಕ್ ಹಾಗೂ ವಾಟ್ಸಪ್ ದುರ್ಬಳಕೆ ಮಾಡಿಕೊಂಡು ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಬಗ್ಗೆ ಮೂರ್ತಿ ಬಿ.ಎಸ್ ಹಾಗೂ ರಂಜಿತ್ (ಕೆಪಿಸಿಸಿಎಲ್ ಲೀಗಲ್ ಸೆಲ್) ಎನ್ನುವವರು ಮಾನ್ಯ ಮುಖ್ಯ ಚುನಾವಣಾಧಿಕಾರಿ ಬೆಂಗಳೂರು ಇವರಿಗೆ ನೀಡಿದ ದೂರಿನಂತೆ ಚುನಾವಣಾಧಿಕಾರಿಗಳು 118-ಬೈಂದೂರು ವಿಧಾನಸಭಾ ಕ್ಷೇತ್ರ ರವರ ಆದೇಶದಂತೆ ದೂರು ನೀಡಿದ್ದು, ಗುರುರಾಜ್ ಗಂಟಿಹೊಳೆ ಬೈಂದೂರಿನ ಶಾಸಕರಾಗಲಿ ಎಂಬ ಹೆಸರಿನಲ್ಲಿರುವ ಪೇಸ್ಬುಕ್ ಖಾತೆಯಲ್ಲಿ   ಪೋಸ್ಟ್ ಇದ್ದು ಅದನ್ನು Rajesh Kotari ಎಂಬ ಫೇಸ್ಬುಕ್ ಖಾತೆಯನ್ನು ಹೊಂದಿದ ವ್ಯಕ್ತಿಯು ತನ್ನ ಫೇಸ್ಬುಕ್ ಖಾತೆಯ ಮೂಲಕ ಶೇರ್ ಮಾಡಿರುತ್ತಾರೆ. ನವೀನ್ ಗಂಗೊಳ್ಳಿ  ಎಂಬ ಬರಹ ಇರುವ ಪೋಸ್ಟ್ ನ್ನು ಮೊಬೈಲ್ ನಲ್ಲಿ  ಶೇರ್ ಮಾಡಿ ಸಮಾಜದಲ್ಲಿ ವ್ಯಕ್ತಿಗಳ ಮಧ್ಯೆ ದ್ವೇಷ ಭಾವನೆ ಉಂಟು ಮಾಡಿ ಆ ಮೂಲಕ ಕಾನೂನು ವಿರುದ್ಧವಾದ ಯಾವುದೇ ಕೃತ್ಯವನ್ನು ಮಾಡುವ ಮೂಲಕ ಹಾಗೆ ಉದ್ರೇಕಿಸುವದರಿಂದ ಸಮಾಜದಲ್ಲಿ ದೊಂಬಿ ಉಂಟು ಮಾಡುವ ಕೃತ್ಯ ಮಾಡಿದ್ದು ಹಾಗೂ ಧರ್ಮದ ಹೆಸರಿನಲ್ಲಿ ಮತದಾರರನ್ನು ಎತ್ತಿಕಟ್ಟುವ ಮೂಲಕ ಸಮಾಜದಲ್ಲಿ ಶಾಂತಿಯನ್ನು ಕದಡುವ ಮತ್ತು ಸಾಮಾಜಿಕ ನೆಮ್ಮದಿಗೆ ಭಂಗವನ್ನುಂಟು ಮಾಡುವ ಮೂಲಕ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 62/2023 ಕಲಂ: 153, 171(ಜಿ) IPC ಮತ್ತು ಕಲಂ 123(3), 125  Representation of People Act ರಂತೆ ಪ್ರಕರಣ ದಾಖಲಾಗಿರುತ್ತದೆ.    
     

ಇತ್ತೀಚಿನ ನವೀಕರಣ​ : 21-04-2023 10:09 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080