ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕುಂದಾಪುರ: ದಿನಾಂಕ 20/04/2023 ರಂದು ಮಧ್ಯಾಹ್ನ ಸುಮಾರು 2:30 ಗಂಟೆಗೆ, ಕುಂದಾಪುರ  ತಾಲೂಕಿನ, ಹೆಮ್ಮಾಡಿ ಗ್ರಾಮದ ಹೆಮ್ಮಾಡಿ ಜಂಕ್ಷನ್ ಬಳಿ NH 66 ರಸ್ತೆಯಲ್ಲಿ, ಪಿರ್ಯಾದಿದಾರರಾದ ವಿನಾಯಕ ಕುಪ್ಪಯ್ಯ   ನಾಯ್ಕ (23) ತಂದೆ  ಕುಪ್ಪಯ್ಯ ಜಿ  ನಾಯ್ಕ ವಾಸ: ನಾಜಗಾರ್‌ ಗ್ರಾಮ ಹೊಸಪಟ್ಟಣ ಅಂಚೆ ಹೊನ್ನಾವರ,  ತಾಲೂಕು ರವರು KA-47-A-1382ನೇ ಟಾಟಾ ವಿಂಗರ್‌ ಅಂಬುಲೆನ್ಸ್ ವಾಹನದಲ್ಲಿ ಹೃದಯ ಹಾಗೂ ಉಸಿರಾಟದ ಸಮಸ್ಯೆ ಇರುವ ರೋಗಿಯಾದ ಸಾವಿತ್ರಿ ಪರಮೇಶ್ವರ ನಾಯ್ಕ ಹಾಗೂ  ಅವರ ಮನೆಯವರಾದ ಜನಾರ್ಧನ್‌ ‌ಹಾಗೂ ಸುಧಾರವರನ್ನು ಕುಳ್ಳಿರಿಸಿಕೊಂಡು ಹೊನ್ನಾವರ ಸೈಂಟ್‌ ಇಗ್ನೇಶಿಯಸ್‌ ಆಸ್ಪತ್ರೆಯಿಂದ ಮಂಗಳೂರು ಎ.ಜೆ ಆಸ್ಪತ್ರೆಗೆ ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ, ಹೆಮ್ಮಾಡಿ ಜಂಕ್ಷನ್ ಬಳಿ, ಅಂಬುಲೆನ್ಸ್ ವಾಹನದ ಮುಂಭಾಗದಲ್ಲಿ NH 66 ರಸ್ತೆಯ ಬಲಬದಿಯಲ್ಲಿ, ಆಪಾದಿತ ಸಂದೀಪ ಎಂಬವರು KA-20-EZ-7542ನೇ ಸ್ಕೂಟರ್‌ ನಲ್ಲಿ ಶಶಿಧರ್‌ಎಂಬವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಹೋಗಿ,  ಯಾವುದೇ  ಸೂಚನೇ ನೀಡದೇ ರಸ್ತೆಯ ಎಡಬದಿಗೆ ತಿರುಗಿಸಿ, ಅಂಬುಲೆನ್ಸ್ ವಾಹನಕ್ಕೆ ಅಪಘಾತಪಡಿಸಿದ ಪರಿಣಾಮ ಅಂಬುಲೆನ್ಸ್ ವಾಹನ ರಸ್ತೆಯ ಎಡಬದಿಯ ಟೆಲಿಪೋನ್ ಕಂಬಕ್ಕೆ ಡಿಕ್ಕಿ ಹೊಡೆದು, ವಿನಾಯಕ ಕುಪ್ಪಯ್ಯ ನಾಯ್ಕ, ಸಾವಿತ್ರಿ ಪರಮೇಶ್ವರ ನಾಯ್ಕ ಜನಾರ್ಧನ್‌ ‌ಹಾಗೂ ಸುಧಾರವರು ಸಣ್ಣಪುಟ್ಟ ಗಾಯಗೊಂಡು, ಕುಂದಾಪುರ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು,   ಹಾಗೂ ವಿನಾಯಕ ಕುಪ್ಪಯ್ಯ   ನಾಯ್ಕ  ಹಾಗೂ ಸಾವಿತ್ರಿ ಪರಮೇಶ್ವರ ನಾಯ್ಕ ರವರು ಮಣಿಪಾಲ ಕೆ.ಎಂ. ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿದೆ. ಈ ಬಗ್ಗೆ ಕುಂದಾಫುರ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 52/2023 ಕಲಂ: 279,  337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಕಾಪು: ಪಿರ್ಯಾದಿದಾರರಾದ ಯು ಶಿವರಾಯ, ತಂದೆ: ಸುಬ್ಬಪ್ಪ ಗಾಣಿಗ, ವಾಸ: ಮನೆ ನಂಬ್ರ 2-10 ಚಿತ್ರಾ ಮಠದಂಗಡಿ, ಉದ್ಯಾವರ ಇವರೊಂದಿಗೆ ಗಿರಿಜಾ ಎಂಬುವರ ಮಗನಾದ ವೆಂಕಟೇಶ (62) ಎಂಬಾತನು ಸುಮಾರು 2 ವರ್ಷಗಳಿಂದ ವಾಸವಾಗಿದ್ದು, ಆತನು ಯು ಶಿವರಾಯ ಇವರ ಮನೆಯಲ್ಲಿ ಅಡುಗೆ ಕೆಲಸ ಹಾಗೂ ತೋಟದ ಕೆಲಸ ಮಾಡಿಕೊಂಡಿದ್ದನು.  ಆತನ ಹೆಂಡತಿ ಮಕ್ಕಳು ಐರೋಡಿಯ ಅಜ್ಜನ ಮನೆಯೆಲ್ಲಿ ವಾಸ ಮಾಡಿಕೊಂಡಿದ್ದರು. ವೆಂಕಟೇಶನು 2-3 ದಿನಗಳಿಂದ ಸುಸ್ತಾಗುತ್ತಿದೆಯೆಂದು ಶಿವಾರಾಯ ರವರಲ್ಲಿ ಹೇಳುತ್ತಿದ್ದನು. ಎಂದಿನಂತೆ ದಿನಾಂಕ 21/04/2023 ರಂದು ವೆಂಕಟೇಶನು ಮನೆಯಲ್ಲಿ ಕೆಲಸ ಮಾಡುತ್ತಿರುವ ಸಮಯ ಸುಮಾರು ಬೆಳಿಗ್ಗೆ 7:30 ಗಂಟೆಗೆ ಎದೆನೋವು ಎಂದು ಹೇಳುತ್ತಾ ನೆಲಕ್ಕೆ ಬಿದ್ದನು. ಆತನನ್ನು ಟಿ.ಎಂ.ಎ ಪೈ ಆಸ್ಪತ್ರೆಗೆ ದಾಖಲಿಸುವ ಮೊದಲೇ ಆತನು ದಾರಿ ಮಧ್ಯೆ ಮೃತಪಟ್ಟಿರುತ್ತಾನೆ. ವೆಂಕಟೇಶನು ತೀವ್ರ ಎದೆ ನೋವುನಿಂದ ಮೃತಪಟ್ಟಿದ್ದು ಆತನ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಕಾಫು ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 13/2023 ಕಲಂ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬ್ರಹ್ಮಾವರ: ಪಿರ್ಯಾದಿದಾರರಾಧ ಲೂವಿಸ್‌ಡಿಸೋಜಾ(54) ತಂದೆ: ಸಲ್ವಡೊರ್‌ಡಿಸೋಜಾ, ವಾಸ: ನೂಜಿನ ಬೈಲು, ದರ್ಖಾಸು ಮನೆ, ಚೇರ್ಕಾಡಿ ಗ್ರಾಮ & ಅಂಚೆ, ಬ್ರಹ್ಮಾವರ ತಾಲೂಕು ಇವರ ತಂದೆಯಾದ ಸಲ್ವಡೊರ್‌ಡಿಸೋಜಾ, (80) ಎಂಬವರು  ಕೃಷಿ ಕೆಲಸ ಮಾಡಿಕೊಂಡಿದ್ದು, ಪ್ರತಿ ದಿನ ಅವರು ತೋಟಕ್ಕೆ ನೀರು ಬಿಡುವಾಗ ಬಾವಿಯ ನೀರನ್ನು ನೋಡಿ ಪಂಪ್‌ ಚಾಲನೆ  ಮಾಡುತ್ತಿರುವುದಾಗಿದೆ. ಎಂದಿನಂತೆ ಅವರು ದಿನಾಂಕ 21/04/2023 ರಂದು ಬೆಳಿಗ್ಗೆ 07:30 ಗಂಟೆಯಿಂದ ದಿನಾಂಕ ಬೆಳಿಗ್ಗೆ 09:00 ಗಂಟೆಯ ಮಧ್ಯಾವಧಿಯಲ್ಲಿ  ಪಂಪ್‌ ಚಾಲನೆ ಮಾಡುವ ಬಗ್ಗೆ ಮನೆಯ ಬಾವಿಯ ನೀರು ನೋಡಲು ಹೋಗಿ ಕಾಲು ಜಾರಿ ಅಥವಾ ಆಯತಪ್ಪಿ ಬಾವಿಯ ನೀರಿಗೆ ಬಿದ್ದು ಮೃತಪಟ್ಟಿರುವುದಾಗಿದೆ.  ಅವರ ಮರಣದಲ್ಲಿ ಬೇರೆ ಯಾವುದೇ ಸಂಶಯ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 31/2023 ಕಲಂ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ : ಪಿರ್ಯಾದಿದಾರರಾದ ಪ್ರಮೀಳಾ (29) ಗಂಡ: ಧೀರಜ್‌ ವಾಸ: ಮನೆ ನಂಬ್ರ: 2-63, ಕೊರಂಗ್ರಪಾಡಿ ಗ್ರಾಮ, ಉಡುಪಿ ತಾಲೂಕು ಇವರ ಗಂಡ ಧೀರಜ್‌ (32) ಎಂಬವರು ವೆಲ್ಡಿಂಗ್‌ ಕೆಲಸ ಮಾಡಿಕೊಂಡಿದ್ದು, ಇತ್ತಿಚೆಗೆ ಸರಿಯಾದ ಕೆಲಸ ಇಲ್ಲದೆ ಇರುವ ಕಾರಣದಿಂದ ಕುಡಿತದ ಚಟವನ್ನು ಹೊಂದಿದ್ದು,ಇದರಿಂದ ನೊಂದು ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು, ಸಾಲ ಕೂಡ ಮಾಡಿಕೊಂಡಿದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 20/04/2023 ರಂದು 22:00 ಗಂಟೆಯಿಂದ ದಿನಾಂಕ 21/04/2023 ರಂದು ಬೆಳಿಗ್ಗೆ 07:28 ಗಂಟೆ ನಡುವಿನ ಸಮಯದಲ್ಲಿ ಉಡುಪಿ ತಾಲೂಕು ಕೊರಂಗ್ರಪಾಡಿ ಎಂಬಲ್ಲಿರುವ ತನ್ನ ವಾಸ್ತವ್ಯದ ಮನೆಯ ರೂಮಿನಲ್ಲಿ ಕಬ್ಬಿಣದ ಜಂತಿಗೆ ನೈಲಾನ್‌ ಸೀರೆ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಇವರ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 19/2023 ಕಲಂ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಹೆಬ್ರಿ: ಕರ್ನಾಟಕ 2023 ರ ವಿಧಾನ ಸಭಾ ಚುನಾವಣೆಯ ಸಲುವಾಗಿ 122 ನೇ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಚುನಾವಣೆಯ ಬಗ್ಗೆ ಮಾನ್ಯ ಜಿಲ್ಲಾಧಿಕಾರಿ ರವರ ಆದೇಶದಂತೆ ಪಿರ್ಯಾದಿದಾರರಾದ ಮಹಾಲಿಂಗ: ಎ.ಎಸ್.ಐ ಹೆಬ್ರಿ ಪೊಲೀಸ್‌ ಠಾಣೆ ಇವರಿಗೆ ಹಾಗೂ ಠಾಣಾ ಪಿ.ಸಿ 2589 ನೇ ರಾಮತ್‌ ವುಲ್ಲಾ ಪಿ.ಸಿ 2418 ನೇ ಸುರೇಶ್ ಐನ್ ಮತ್ತು ಪಿ.ಸಿ 11 ಹಾಲೇಶಪ್ಪ ಇವರಿಗೆ ನಾಡ್ಪಾಲು ಗ್ರಾಮದ ಸೋಮೇಶ್ವರ ಚಕ್ ಪೋಸ್ಟ್ ಕರ್ತವ್ಯ ನೇಮಿಸಲಾಗಿದ್ದು ಇವರೊಂದಿಗೆ SST  ಅಧಿಕಾರಿ ಮತ್ತು  ಅಬಕಾರಿ  ಇಲಾಖೆಯ ಸಿಬ್ಬಂದಿ ಮತ್ತು ಅರೆ ಸೇನಾ ಪಡೆಯವರು ಕರ್ತವ್ಯದಲ್ಲಿ ಇರುತ್ತಾರೆ ದಿನಾಂಕ 19/04/2023 ರಂದು ಪಿರ್ಯಾದಿದಾರರಿಗೆ  ಮತ್ತು ಪಿ.ಸಿ 2589 ನೇ ರಾಮತ್‌ ವುಲ್ಲಾ ಇವರಿಗೆ ರಾತ್ರಿ 10:00 ಗಂಟೆಯಿಂದ ಮರುದಿನ ಬೆಳಿಗ್ಗೆ  06:00 ಗಂಟೆಯ ತನಕ ಮೂರನೇ ಪಾಳಿಯ ಕರ್ತವ್ಯ ಇದ್ದು ಅದರಂತೆ ಅವರುಗಳು ದಿನಾಂಕ 19/04/2023 ರಂದು ರಾತ್ರಿ 10:00 ಗಂಟೆಗೆ ಕರ್ತವ್ಯಕ್ಕೆ ಹಾಜರಾಗಿದ್ದು. ಅವರೊಂದಿಗೆ SST ಅಧಿಕಾರಿ ವಿಶ್ವನಾಥ, ಅಬಕಾರಿ ಇಲಾಖೆಯ ಕೃಷ್ಣ ಆಚಾರಿ ಮತ್ತು ಅರೆ ಸೇನಾ ಪಡೆಯವರು ಕರ್ತವ್ಯದಲ್ಲಿದ್ದರು. ಅವರುಗಳು ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ ರಾತ್ರಿ 11:30 ಗಂಟೆಗೆ ಆಗುಂಬೆ ಕಡೆಯಿಂದ KA-19 AD-2342 ನೇ ಆಶೋಕ್ ಲೈಲ್ಯಾಂಡ್ ಪಿಕಪ್ ವಾಹನವನ್ನು ಅದರ ಚಾಲಕ ರಾಜೇಂದ್ರ ಇವರು ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿ ರಸ್ತೆಯ ಬಲಬದಿಗೆ ಬಂದು ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಮತ್‌ ವುಲ್ಲಾ ಮತ್ತು ಕೃಷ್ಣ ಆಚಾರಿ ಇವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರುಗಳಿಗೆ ಗಾಯವಾಗಿದ್ದು. ಕೂಡಲೇ ಮಹಾಲಿಂಗ ರವರು ಗಾಯಾಳುವನ್ನು ಆರೈಕೆ ಮಾಡಿ ಅವರನ್ನು ಬದಿಯಲ್ಲಿ ಕುಳ್ಳಿರಿಸಿ 108 ಅಂಬುಲೈನ್ಸ್ ವಾಹನಕ್ಕೆ ಕರೆ ಮಾಡಿದಾಗ ಅದು ಪೆರ್ಡೂರುನಲ್ಲಿರುವುದಾಗಿ ತಿಳಿದಂತೆ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸುವ ಸಲುವಾಗಿ ವಾಹನವನ್ನು ಕಾಯುತ್ತಿರುವಾಗ  ಸಮಯ ಸುಮಾರು ರಾತ್ರಿ 11:35 ಗಂಟೆಗೆ ಅಗುಂಬೆ ಕಡೆಯಿಂದ ಒಂದು ಕಾರು ಬರುತ್ತಿದ್ದು. ಅದನ್ನು ನಿಲ್ಲಿಸಿದಾಗ ಕಾರನ್ನು ಅದರ ಚಾಲಕನು ಸ್ವಲ್ಪ ಮುಂದೆ ಕೊಂಡು ಹೋಗಿ ನಿಲ್ಲಿಸಿದ್ದು. ಅದರಲ್ಲಿದ್ದ ಎರಡು ಜನ ವ್ಯಕ್ತಿಗಳಲ್ಲಿ ಪಿರ್ಯಾದಿದಾರರು ಈ ಘಟನೆಯ ವಿಚಾರ ತಿಳಿಸಿ ಗಾಯಾಳುವನ್ನು ಅಸ್ಪತ್ರೆಗೆ ಸಾಗಿಸಲು ನೆರವಾಗುವಂತೆ ವಿನಂತಿಸಿದಾಗ ಅವರು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ “ ನೀವು ನಮ್ಮ ಸಂಬಳದಲ್ಲಿ ಬದುಕುವವನು. ನೀನು ಯಾರ...!  ನಮ್ಮ ಕಾರನ್ನು ನಿಲ್ಲಿಸಲು ಎಂದು ಅವಾಚ್ಯ ಶಬ್ದದಿಂದ ಬೈದು ಗಲಾಟೆ ಮಾಡಿ ನಮ್ಮನ್ನು ಕೈಯಿಂದ ಹಿಂದಕ್ಕೆ ದೂಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದು. ಅಗ ಅಲ್ಲಿ ಸ್ಥಳೀಯರು ಸೇರಿದ್ದನ್ನು ಆರೋಪಿಗಳು ನೋಡಿ ಕಾರನ್ನು ಚಲಾಯಿಸಿಕೊಂಡು ಉಡುಪಿ ಕಡೆಗೆ ಹೋಗಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 24/2023 ಕಲಂ: 341,353,504 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾಪು: ಪಿಯಾ೯ದಿದಾರರಾದ ಸಂತೋಷ್‌ ವಿ ಸಾಲ್ಯಾನ್‌ (40)  ತಂದೆ:ದಿ! ವಾಮನ ಸಾಲ್ಯಾನ್‌   ವಾಸ: 5-107(1) “ಏಕ ಪಣಿ೯ಕಾ” ಮುಖ್ಯರಸತೆ ಕಿದಿಯೂರು ಗ್ರಾಮ ಉಡುಪಿ ತಾಲೂಕು ಇವರ ಅಣ್ಣ ದಯಾನಂದ ಸಾಲ್ಯಾನ್ ಹಾಗೂ ಭರತ್‌ ಎಂಬವರಿಗೂ ದಿನಾಂಕ 20/04/2023 ರ ರಾತ್ರಿ 23:00 ಗಂಟೆ ಸಮಯಕ್ಕೆ ಉಡುಪಿ ತಾಲೂಕು ಉದ್ಯಾವರ ಗ್ರಾಮದ ಪಿತ್ರೋಡಿಯ ದತ್ತಾತ್ರೆಯ ಭಜನಾ ಮಂದಿರದ ರಸ್ತೆಯಲ್ಲಿ ಯಾವುದೋ ಕ್ಷುಲಕ ಕಾರಣಕ್ಕೆ ಗಲಾಟೆಯಾಗಿದ್ದು, ಭರತನು ಪಿಯಾ೯ದಿದಾರರ ಅಣ್ಣನಿಗೆ ಯಾವುದೋ ಸಾಧನದಿಂದ ಬಲವಾಗಿ ಅವರ ಮುಖಕ್ಕೆ ಹೊಡೆದ ಪರಿಣಾಮ ಅವರ ಮುಖಕ್ಕೆ ಗಾಯವಾಗಿ ಕೆಳಗೆ ಬಿದ್ದಿದ್ದು, ಭರತನು ಅಲ್ಲಿಂದ ಓಡಿ ಹೋಗಿರುತ್ತಾನೆ. ಕೆಳಗೆ ಬಿದ್ದು ಗಾಯಗೊಂಡ ದಯಾನಂದ ಸಾಲ್ಯಾನ್‌ ರವರನ್ನು ಸ್ಥಳೀಯರಾದ ಉಮೇಶ್‌ ಕಕೆ೯ರಾ  ಎಂಬವರು ಒಂದು ವಾಹನದಲ್ಲಿ ಉಡುಪಿಯ ಆದಶ೯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ದಯಾನಂದ ಸಾಲ್ಯಾನ್‌ ರವರನ್ನು ಪರೀಕ್ಷಿಸಿದ ವೈಧ್ಯರು ದಿನಾಂಕ 21/04/2023 ರಂದು ರಾತ್ರಿ 00:30 ಗಂಟೆಗೆ ದಯಾನಂದ ಸಾಲ್ಯನ್‌ ರವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಆದ್ದರಿಂದ ದಯಾನಂದ ಸಾಲ್ಯಾನ್‌ ರವರ ಮೇಲೆ ಹಲ್ಲೆ ಮಾಡಿ ಅವರನ್ನು ಭರತನು ಕೊಲೆ ಮಾಡಿರುವುದಾಗಿದೆ. ಈ ಬಗ್ಗೆ ಕಾಫು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 70/2023 ಕಲಂ: 302 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 21-04-2023 06:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080