ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 20/04/2022 ರಂದು ಮದ್ಯಾಹ್ನ 3:30 ಗಂಟೆಗೆ ಕುಂದಾಪುರ ತಾಲೂಕಿನ ಕುಂಭಾಶಿ  ಗ್ರಾಮದ ಆನೆಗುಡ್ಡೆ ದೇವಸ್ಥಾನದ ಹತ್ತಿರ NH 66 ರಸ್ತೆಯಲ್ಲಿ ಆಪಾದಿತ ಸಚಿನ್‌ ನಿಕಮ್‌‌ MH-11-AL-4556ನೇ ಲಾರಿಯನ್ನು ಕುಂದಾಪುರ  ಕಡೆಯಿಂದ ಉಡುಪಿ ಕಡೆಗೆ   ಅತೀವೇಗ ಹಾಗೂ  ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಾದ ಬೀಮಪ್ಪ ಎಸ್‌ ‌ನಂದ್ಯಾಳ (32), ತಂದೆ :  ಸಿದ್ದಪ್ಪ, ವಾಸ:  ಸರಕಾರಿ ಶಾಲೆಯ ಬಳಿ ನೀರಲಕರೆ ಗ್ರಾಮ ಮತ್ತು ಅಂಚೆ  ಬಾದಾಮಿ  ತಾಲೂಕು, ಬಾಗಲಕೋಟೆ ಜಿಲ್ಲೆ ಇವರು  NH 66 ರಸ್ತೆಯ ಬದಿಯಲ್ಲಿ  ನಿಲ್ಲಿಸಿಕೊಂಡಿದ್ದ  KA-29-B-7624ನೇ ಲಾರಿಗೆ ಹಿಂದಿನಿಂದ  ಡಿಕ್ಕಿ ಹೊಡೆದ ಪರಿಣಾಮ ಸಚಿನ್‌ನಿಕಮ್‌ ‌ರವರ ಮುಖಕ್ಕೆ, ಕೈ ಕಾಲುಗಳಿಗೆ  ತರಚಿದ ಗಾಯವಾಗಿ, ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ  ಬಗ್ಗೆ ಉಡುಪಿ ಜಿಲ್ಲಾ ಆಸ್ಪತ್ರೆಗೆ ಹೋಗಿರುವುದಾಗಿದೆ. ಎರಡೂ ವಾಹನಗಳು ಜಖಂ  ಆಗಿರುತ್ತದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 53/2022  ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
  • ಉಡುಪಿ: ದಿನಾಂಕ 20/04/2022 ರಂದು ಹೆಚ್ ಕೃಷ್ಣಪ್ಪ ರವರು ಕೃಷ್ಣ ಮತ್ತು ಅಂಜನಪ್ಪ ರವರೊಂದಿಗೆ ಕೆಲಸ ಮುಗಿಸಿಕೊಂಡು ಕೊರಂಗ್ರಪಾಡಿಯಲ್ಲಿ ರೇಶನ್ ತೆಗೆದುಕೊಂಡು ಕೊರಂಗ್ರಪಾಡಿ ಯಿಂದ ಕುಕ್ಕುಕಟ್ಟೆ ಕಡೆಗೆ ರಸ್ತೆ ಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ  ಕೊರಂಗ್ರಪಾಡಿಯ ಸುಧಾಕರವರ  ಹೆಬಿಟೆಟ್ಸ ಮನೆ ಎದುರುಗಡೆ  ತಲುಪುವಾಗ ರಾತ್ರಿ 08: 00 ಗಂಟೆಗೆ KA-20-R-2837 ನೇ ಮೋಟಾರ್ ಸೈಕಲ್  ಸವಾರ ಚಂದ್ರಕಾಂತ ಶೆಟ್ಟಿ ಎಂಬುವವರು ಕೊರಂಗ್ರಪಾಡಿ ಜಂಕ್ಷನ್ ಕಡೆಯಿಂದ ಕುಕ್ಕಿಕಟ್ಟೆ ಕಡೆಗೆ ದುಡುಕುತನ ಮತ್ತು ನಿರ್ಲಕ್ಷತನದಿಂದ  ತನ್ನ ಮೋಟಾರ್ ಸೈಕಲ್ ನ್ನು  ಸವಾರಿ ಮಾಡಿಕೊಂಡು ಬಂದು  ಹೆಚ್ ಕೃಷ್ಣಪ್ಪ ರವರಿಗೆ  ಹಿಂದಿನಿಂದ  ಡಿಕ್ಕಿ ಹೊಡೆದ ಪರಿಣಾಮ  ಹೆಚ್ ಕೃಷ್ಣಪ್ಪ ರವರು ಮತ್ತು ಮೊಟಾರ್ ಸೈಕಲ್ ಸವಾರ  ಮೋಟಾರ್ ಸೈಕಲ್ ಸಮೇತ ರಸ್ತೆ ಗೆ  ಬಿದ್ದು  ಹೆಚ್ ಕೃಷ್ಣಪ್ಪ ರವರಿಗೆ ಎರಡು ಕಾಲು ಮೂಳೆ ಮೂರಿತವಾಗಿದ್ದು ಹಾಗೂ ಮೋಟಾರ್ ಸೈಕಲ್ ಸವಾರ ಚಂದ್ರಕಾಂತ ಶೆಟ್ಟಿಯವರಿಗೆ ತಲೆಗೆ ಗಂಭೀರ ಗಾಯವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 38/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಸರೋಜಾ ಶೆಟ್ಟಿ, ಗಂಡ: ಭಾಸ್ಕರ ಶೆಟ್ಟಿ, ವಾಸ: ಕಾಡೇರಿ ಮನೆ, ಉಳ್ಳೂರು 11 ಗ್ರಾಮ, ಬೈಂದೂರು ತಾಲೂಕು, ಉಡುಪಿ ಜಿಲ್ಲೆ ಇವರ ಗಂಡ ಭಾಸ್ಕರ ಶೆಟ್ಟಿಯವರು ಪ್ರತಿದಿನ ಅಮಲು ಪದಾರ್ಥ ಸೇವಿಸಿಕೊಂಡು ಬಂದು ಪಿರ್ಯಾದಿದಾರರೊಂದಿಗೆ ಹಾಗೂ ಅವರ ಮಕ್ಕಳೊಂದಿಗೆ ಜಗಳವಾಡುತ್ತಿದ್ದು, ಒಂದು ತಿಂಗಳ ಹಿಂದೆ ಶಿರಸಿಗೆ ಹೋಗಿರುತ್ತಾರೆ. ಪಿರ್ಯಾದಿದಾರರು ಹೊಸ ಮನೆಯನ್ನು ಕಟ್ಟುವ ಸಲುವಾಗಿ ಅವರ ಹಳೆ ಮನೆಯನ್ನು ಕಡೆವಿ, ಅವರ ತಾಯಿಯ ಮನೆಯ ಪಕ್ಕದಲ್ಲಿ ವಾಸವಾಗಿರುತ್ತಾರೆ.  ದಿನಾಂಕ 20/04/2022 ರಂದು ಬೆಳಗ್ಗೆ 05:45 ರಿಂದ  06:00 ಗಂಟೆಯ ಮದ್ಯಾವಧಿಯಲ್ಲಿ ಪಿರ್ಯಾದಿದಾರರ ಹಳೆ ಮನೆಗೆ ಬಂದಾಗ ಆರೋಪಿ ಭಾಸ್ಕರ ಶೆಟ್ಟಿ ಅಲ್ಲಿಗೆ ಬಂದು ಪಿರ್ಯಾದಿದಾರರಲ್ಲಿ ಬಟ್ಟೆಗಳನ್ನು ಕೊಡು ಎಂದು ಗಲಾಟೆ ಮಾಡಿದಾಗ, ಪಿರ್ಯಾದಿದಾರರು ಕುಳಿತು ಕೊಳ್ಳಿ ಎಂದು ಹೇಳಿದ್ದು, ಆಗ ಭಾಸ್ಕರ ಶೆಟ್ಟಿಯು ತಾನು ಕುಳಿತು ಕೊಳ್ಳಲು ಬಂದಿಲ್ಲ ಎಂದು ಹೇಳಿ, ಪಿರ್ಯಾದಿದಾರರಿಗೆ ಕತ್ತಿಯನ್ನು ಬೀಸಿದ್ದು, ಆಗ ಪಿರ್ಯಾದಿದಾರರು ತಪ್ಪಿಸಿಕೊಳ್ಳಲು ಹೋಗಿ ಕೈಗಳನ್ನು ಅಡ್ಡ ಹಿಡಿದ ಪರಿಣಾಮ ಪಿರ್ಯಾಧಿದಾರರ ಎರಡು ಕೈಗಳಿಗೆ ಹಾಗೂ ಎಡಕೈ ಬೆರಳಿಗೆ ಮತ್ತು ತಲೆಯ ಎಡ ಭಾಗಕ್ಕೆ ತೀವೃ ತರಹದ ರಕ್ತಗಾಯವಾಗಿರುತ್ತದೆ. ಭಾಸ್ಕರ ಶೆಟ್ಟಿಯು ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದದಿಂದ ಬೈದು ಅಲ್ಲಿಂದ ಹೋಗಿರುತ್ತಾನೆ. ಪಿರ್ಯಾದಿದಾರರನ್ನು ಮಗ ಕಿರಣ ಹಾಗೂ ತಂಗಿಯ ಗಂಡ ವಿಠಲನು ಚಿಕಿತ್ಸೆಯ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 78/2022 ಕಲಂ: 326, 504 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    
  • ಕಾರ್ಕಳ: ಪಿರ್ಯಾದಿದಾರರಾದ ವಿಲ್ಫ್ರೆಡ್ ದೇಸ (66), ತಂದೆ: ದಿ. ಜಾನ್ ಡೇಸ, ವಾಸ: 169ಎ-ಡಬ್ಲ್ಯೂ, ಡೇಸ ವಿಲ್ಲಾ, ಕುಕ್ಕಿಲ ರಸ್ತೆ, ಜಾರ್ಕಳ,ಕೌಡೂರು ಗ್ರಾಮ, ಕಾರ್ಕಳ ತಾಲೂಕು ಇವರು ಕೌಡೂರು ಗ್ರಾಮದಲ್ಲಿ  ವಾಸವಾಗಿದ್ದು ಕುವೈಟ್‌ನಲ್ಲಿ ಅಲ್-ಬಹಾರ್ ಕಂಪೆನಿಯಲ್ಲಿ 1977 ರಿಂದ  2018 ರವರೆಗೆ ಉದ್ಯೋಗದಲ್ಲಿರುತ್ತಾರೆ. ಅಪಾದಿತರಾದ 1. ರೀಟಾ ಮಾರ್ಟಿಸ್ (50), 2. ಫೆಲಿಕ್ಸ್ ಮಾರ್ಟಿಸ್ (56), 3. ರೋಸ್ಟನ್ ಮಾರ್ಟಿಸ್(31) ಇವರು ಪಿರ್ಯಾದಿದಾರರ ಸಂಬಂಧಿಕರಾಗಿದ್ದು 1ನೇ ಅಪಾದಿತೆಯಾದ ರೀಟಾ ಮಾರ್ಟಿಸ್ ರವರು ಕೌಡೂರು ಗ್ರಾಮದ ಜಾರ್ಕಳದಲ್ಲಿ ಮನೆ ಕಟ್ಟುವ ಸಲುವಾಗಿ 7,10,000/ ರೂಪಾಯಿ ಹಣವನ್ನು ಸಾಲ ಕೇಳಿದ್ದು ಕೆಲವು ದಿನಗಳಲ್ಲಿ  ವಾಪಾಸು ಕೊಡುವುದಾಗಿ  ಹೇಳಿದಂತೆ ಪಿರ್ಯಾದಿದಾರರು ದಿನಾಂಕ 05/06/2012 ರಂದು ರೂಪಾಯಿ 5,00,000/ , ದಿನಾಂಕ 27/06/2012  ರಂದು ರೂಪಾಯಿ 2,00,000/ ದಿನಾಂಕ 29/11/2013 ರಂದು ರೂ 10,000/ನ್ನು ಅಪಾದಿತೆಯ ಕರ್ನಾಟಕ ಬ್ಯಾಂಕ್  ಕಾರ್ಕಳ ಶಾಖೆಯ ಖಾತೆಗೆ ವರ್ಗಾವಣೆ ಮಾಡಿರುತ್ತಾರೆ ಹಾಗೂ ದಿನಾಂಕ 23/01/2012 ರಂದು ಅಪಾದಿತ 1 ಮತ್ತು2 ನೇರವರ ಕೋರಿಕೆಯಂತೆ  ರೂಪಾಯಿ 1,00,000/ ನ್ನು ಪಿರ್ಯಾದಿದಾರರ ಹೆಂಡತಿ ಶ್ರೀಮತಿ ಅಗ್ನೆಸ್ ವಿಲ್ಫ್ರೆಡ್ ಡೇಸಾ ರವರ ಖಾತೆಯಿಂದ ಪಾವತಿಸಿದ್ದು  ಹಾಗೂ 3ನೇ ಅಪಾದಿತೆಯ ವಿಧ್ಯಾಭ್ಯಾಸದ ಖರ್ಚಿಗೆ ರೂಪಾಯಿ 2,00,000/ ಕೇಳಿದಂತೆ ದಿನಾಂಕ 02/02/2016 ರಂದು 1 ನೇ ಅಪಾದಿತೆಯ ಖಾತೆಗೆ ವರ್ಗಾವಣೆ ಮಾಡಿರುತ್ತಾರೆ. ದಿನಾಂಕ 24/01/2022 ರಂದು ಪಿರ್ಯಾದಿದಾರರು ಅಪಾದಿತರ ಮನೆಗೆ ಸಾಲದ ಹಣ ವಾಪಾಸು  ಕೇಳಲು ಹೋದಾಗ  ಅಪಾದಿತರು  ಸಾಲವನ್ನು ವಾಪಾಸು ಕೊಡುವುದಿಲ್ಲವೆಂದು ತಿಳಿಸಿದ್ದು,  ಪಿರ್ಯಾದಿದಾರರಿಂದ ಹಣವನ್ನು ವಾಪಾಸು ಕೊಡುತ್ತೇವೆಂದು ಸಾಲ ಪಡೆದುಕೊಂಡು ವಾಪಾಸು ನೀಡದೇ ಮೋಸ ಮಾಡಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 56/2022 ಕಲಂ: 415, 420 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ಡಾ. ಪ್ರಜೀತ್ ಸುಧಾಕರನ್ (33), ತಂದೆ: ಸಿ.ಕೆ ಸುಧಾಕರನ್  ನಂಬಿಯಾರ್, ವಾಸ:ಸೌಮ್ಯ , ರಾಷ್ಟ್ರೀಯ ಹೆದ್ದಾರಿ 66 ರ ಬಳಿ, ನಾವುಂದ ಗ್ರಾಮ, ಬೈಂದೂರು ತಾಲೂಕು ಇವರು ಕಿರಿಮಂಜೇಶ್ವರ ಗ್ರಾಮದ ಅರೆಹೊಳೆ ಎಂಬಲ್ಲಿ ಕೆ.ಜೆ.ಎಸ್ ಕಾಂಪ್ಲೆಕ್ಸ್ ನ  1 ನೇ ಮಹಡಿಯಲ್ಲಿ ನಂಬಿಯಾರ್ ಕ್ಲಿನಿಕ್ ನ್ನು ನಡೆಸಿಕೊಂಡಿದ್ದು, ದಿನಾಂಕ  13/04/2022 ರಂದು 10:45 ಗಂಟೆಗೆ ಆರೋಪಿಗಳಾದ 1) ಕಿರಣ್ ಪೂಜಾರಿ, 2)ಜನಾರ್ಧನ್ ಕೆ. ಎಂ ಮರವಂತೆ,  ಮತ್ತು 40 ವರ್ಷ ಪ್ರಾಯದ ಇನ್ನೊಬ್ಬ ವ್ಯಕ್ತಿ ಪಿರ್ಯಾದಿದಾರರ ಕ್ಲಿನಿಕ್ ಗೆ ಅಕ್ರಮ ಪ್ರವೇಶ  ಮಾಡಿ ಏರು ದ್ವನಿಯಲ್ಲಿ ಕೂಗಾಡಿ, ಕ್ಲಿನಿಕ್ ನಲ್ಲಿರುವ ಸ್ಟಾಪ್ ಮತ್ತು ಕ್ಲಿನಿಕ್ ಗೆ ಬಂದಿರುವ ರೋಗಿಗಳಿಗೆ ಭಯಹುಟ್ಟಿಸುವ ರೀತಿಯಲ್ಲಿ  ವರ್ತಿಸಿ ಪಿರ್ಯಾದಿದಾರರು ತಮ್ಮ ಕ್ಯಾಬಿನ್ ನಿಂದ ಹೊರಗೆ ಬಂದು ನೋಡಿದಾಗ 1 ನೇ ಆರೋಪಿಯು ತನ್ನನ್ನು ಕಿರಣ್ ಪೂಜಾರಿ ಎಂಬುದಾಗಿ ಹೇಳಿಕೊಂಡಿದ್ದು ಉಳಿದ ಇಬ್ಬರು ಆರೋಪಿತರು ವಿಡಿಯೋ ಮಾಡಿಕೊಂಡಿದ್ದು, ಆರೋಪಿತ 1 ನೇಯವನು ಕ್ಲಿನಿಕ್ ಬಂದ ರೋಗಿಗಳಲ್ಲಿ “ಈತನು ನಕಲಿ ಡಾಕ್ಟರ್, ಈತನಿಂದ ಚಿಕಿತ್ಸೆ ಪಡೆದು ಜೀವ ಕಳೆದುಕೊಳ್ಳಬೇಡಿ, ಇವರ ಮೆಡಿಸಿನ್ ತೆಗೆದುಕೊಂಡರೆ ಕಿಡ್ನಿ, ಲಿವರ್ ಫೈಲ್ ಆಗುತ್ತದೆ ಈತನಿಗೆ ಈ ಔಷಧಿ ಕೊಡಲು ಅಧಿಕಾರ ಇಲ್ಲ ನೀವೆಲ್ಲಾ ಇಲ್ಲಿಂದ ಹೋಗಿ”  ಎಂಬುದಾಗಿ ಹೇಳಿದ್ದಲ್ಲದೇ, ಪಿರ್ಯಾದಿದಾರರ ಕ್ಯಾಬಿನ್ ಒಳಗೆ ಬಂದು ಪಿರ್ಯಾದಿದಾರರು ಇರಿಸಿದ್ದ ಅಲೋಪತಿ ಮೆಡಿಸಿನ್ ಬಾಕ್ಸ್ ಗೆ ಕೈಹಾಕಿ ತೆಗೆದು ನೋಡಿ ಇದು ಇಂಗ್ಲೀಷ್ ಮೆಡಿಸಿನ್ ಅಥವಾ ಆಯುರ್ವೇದಿಕ್ ಮೆಡಿಸಿನ್ ಎಂಬುದಾಗಿ ಕೇಳಿ ಮೆಡಿಸಿನ್ ನ್ನು ಅದಕ್ಕೆ ಹಾಕಿರುತ್ತಾನೆ.  ಅಲ್ಲದೇ  ಕ್ಲಿನಿಕ್ ನಲ್ಲಿದ್ದ ವೃದ್ದರೊಬ್ಬರಲ್ಲಿ ವಿಚಾರಿಸುತ್ತಿದ್ದಾಗ ಉತ್ತರಿಸಿದ ಕ್ಲಿನಿಕ್ ನಲ್ಲಿ ಕೆಲಸ ಮಾಡುವ ಹುಡುಗಿಗೆ ಬೆದರಿಕೆ ಹಾಕಿರುತ್ತಾನೆ. ನಂತರ ಅದೇ ದಿನ ಪ್ರೈಮ್ ಟಿವಿ ಕನ್ನಡ ದ ವೆಬ್ಸೈಟ್ ನಲ್ಲಿ  ಸಾರ್ವಜನಿಕರಿಗೆ  ಪಿರ್ಯಾದಿದಾರರು ನಡೆಸಿಕೊಂಡಿರುವ ಕ್ಲಿನಿಕ್ ನ ಮೇಲೆ ತಪ್ಪು ಭಾವನೆ ಬರುವ ರೀತಿಯಲ್ಲಿ  ಸಾರ್ವಜನಿಕರಿಗೆ ತಪ್ಪು ಸಂದೇಶ ಗಳನ್ನು ಪೋಸ್ಟ್ ಮಾಡಿರುತ್ತಾರೆ. ಅಲ್ಲದೇ  ಆರೋಪಿ 1 ನೇಯವರು ಅಲ್ಲದೇ ತನ್ನ ಹೊಸಕಿರಣ ಎಂಬ ಪೇಸ್ ಬುಕ್ ಖಾತೆಯಲ್ಲಿಯೂ ನನ್ನ ಬಗ್ಗೆ ನನ್ನ ಕ್ಲಿನಿಕ್ ಬಗ್ಗೆ ಅವಹೇಳನಕಾರಿ ವಿಡಿಯೋ, ಬರಹ ಮತ್ತು ಮಾತುಗಳನ್ನು ಹಾಕಿರುತ್ತಾನೆ. ದಿನಾಂಕ 14/04/2022 ರಂದು ಆರೋಪಿ ಕಿರಣ್ ಪೂಜಾರಿಯು ಬೆದರಿಕೆ ಹೋಗಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 79/2022 ಕಲಂ: 447, 504, 506 ಜೊತೆ 34 ಐಪಿಸಿ ಮತ್ತು  ಕಲಂ: 4 The Karnataka Prohibition of violence against Medicare Service personnel and Damege of property in medicare service institution act 2009  ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 21-04-2022 10:32 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080