ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಶಂಕರನಾರಾಯಣ: ದಿನಾಂಕ 21/04/2022 ರಂದು  ಬೆಳಿಗ್ಗೆ ಸುಮಾರು 07;50 ಗಂಟೆಗೆ ಹೆಬ್ರಿ ತಾಲೂಕಿನ ಬೆಳ್ವೆ ಗ್ರಾಮದ ಮರೂರು ಕ್ರಾಸ್ ಬಳಿ ಆರೋಪಿಯು KA-30 A-3572 ನೇ ನಂಬ್ರದ ಕಾರನ್ನು ಗೊಳಿಯಂಗಡಿ ಕಡೆಯಿಂದ ಅಲ್ಬಾಡಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು   ಗಾಯಾಳು ಶಂಕರ ನಾಯ್ಕ ಇವರು ಅಲ್ಬಾಡಿ ಕಡೆಯಿಂದ ಗೊಳಿಯಂಗಡಿ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದ, KA-20 EJ-1601 ನಂಬ್ರದ ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದಿದ್ದು,ಇದರ ಪರಿಣಾಮ ಮೋಟಾರು ಸೈಕಲ್ ಸವಾರ  ಶಂಕರನಾಯ್ಕ ಇವರ ತಲೆ ಮೂಗು ಮುಖಕ್ಕೆ ರಕ್ತಗಾಯವಾಗಿರುತ್ತದೆ, ಹಾಗೂ ಕೈ ಕಾಲುಗಳಿಗೆ ತರಚಿದ ಗಾಯವಾಗಿದೆ. ಗಾಯಾಳು ಶಂಕರ ನಾಯ್ಕ ಇವರಿಗೆ ಚಿಕಿತ್ಸೆಯ ಬಗ್ಗೆ  ಮಣಿಪಾಲದ  ಕೆ,ಎಮ್,ಸಿ ಆಸ್ಪತ್ರೆಗೆ ದಾಖಲು ಆಗಿರುತ್ತಾರೆ, ಹಾಗೂ ಮೋಟಾರು ಸೈಕಲ್  ಹಾಗೂ ಕಾರು    ಜಖಂಗೊಂಡಿರುತ್ತದೆ. ಎಂಬುದಾಗಿ ಲಕ್ಷ್ಮಣ ನಾಯ್ಕ (43) ತಂದೆ, ಪುರುಷ ನಾಯ್ಕ ವಾಸ. ಅಲ್ಬಾಡಿ ಅಂಗಡಿ ಮನೆ, ಅಲ್ಬಾಡಿ ಗ್ರಾಮ. ಹೆಬ್ರಿ ತಾಲೂಕು ಇವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 46/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬ್ರಹ್ಮಾವರ: ದಿನಾಂಕ 20/04/2022 ರಂದು ರಾತ್ರಿ 8:40 ಗಂಟೆಗೆ ಪಿರ್ಯಾದಿದಾರರಾದ ಪ್ರಭಾಕರ (46), ತಂದೆ: ದಿ| ಮುತ್ತ ಮುಂಡಾಳ, ವಾಸ: ಬಜೆ, ಮೇಲಂಗಡಿ, ಕುಕ್ಕೆಹಳ್ಳಿ ಗ್ರಾಮ & ಅಂಚೆ, ಉಡುಪಿ ಇವರು ತನ್ನ KA-20 EG-7229 ನೇ ಟಿವಿಎಸ್ ವೆಗೊ ಸ್ಕೂಟರ್‌ನಲ್ಲಿ ತನ್ನ ಅಣ್ಣನ ಮಗ ಸೃಜನ್ (15) ನನ್ನು ಸಹಸವಾರನನ್ನಾಗಿ ಕುಳ್ಳಿರಿಸಿಕೊಂಡು ಉಪ್ಪೂರು ಗ್ರಾಮದ  ಕೆಜಿ ರೋಡ್ U ತಿರುವು ಬಳಿ  ಕೊಳಲಗಿರಿ ಕಡೆಗೆ ಹೋಗಲು ರಾಷ್ಟ್ರೀಯ ಹೆದ್ದಾರಿ 66 ರ ಮಧ್ಯಬಾಗದ ಡಿವೈಡರ್ ಸಮೀಪ ನಿಲ್ಲಿಸಿಕೊಂಡಿರುವಾಗ ಆರೋಪಿಯು ತನ್ನ KA-20 MB-7685 ನೇ ಮಾರುತಿ ಸುಜುಕಿ ಸ್ವೀಪ್ಟ್ ಕಾರನ್ನು ಬ್ರಹ್ಮಾವರ ಕಡೆಯಿಂದ ಕುಂದಾಪುರ –ಉಡುಪಿ ಏಕಾಮುಖ ರಸ್ತೆಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಆತನ ಬಲಭಾಗದ ಇಂಡಿಕೇಟರನ್ನು ಹಾಕಿ ನೇರವಾಗಿ ಚಲಾಯಿಸಿಕೊಂಡು ಬಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದು, ಸ್ಕೂಟರ್‌ನ ಮುಂದಿನ ಎಡಭಾಗ ಜಖಂ ಗೊಂಡು ಡಿಕ್ಕಿ ಹೊಡೆದ ರಭಸಕ್ಕೆ ಮಧ್ಯದ ಡಿವೈಡರ್‌ನಲ್ಲಿ ನೆಟ್ಟಿದ್ದ ಕಬ್ಬಿಣದ ಸಂಚಾರಿ ಫಲಕಕ್ಕೆ ಸ್ಕೂಟರ್ ಹೋಗಿ ತಾಗಿ ಸ್ಕೂಟರ್‌ನ ಬಲಬದಿಯ ಬಾಡಿ ಪೂರ್ಣ ಜಖಂ ಗೊಂಡಿರುತ್ತದೆ. ಅಲ್ಲದೇ ಸದ್ರಿ ಅಪಘಾತದ ಪರಿಣಾಮ ಪ್ರಭಾಕರ ರವರ ಬೆನ್ನಿಗೆ, ಹಿಂಭಾಗಕ್ಕೆ ತೀವ್ರ ಒಳಜಖಂ ಉಂಟಾಗಿದ್ದು ಮತ್ತು ಸಹಸವಾರ ಸೃಜನ್‌ನ ಎಡಕಾಲಿನ ತೋರು ಬೆರಳಿಗೆ ರಕ್ತ ಗಾಯವಾಗಿ, ಬಲಕಾಲಿನ ಪಾದದ ಮೇಲ್ಭಾಗಕ್ಕೆ ಒಳ ಜಖಂ ಉಂಟಾಗಿರುತ್ತದೆ. ಗಾಯಗೊಂಡ ಇಬ್ಬರನ್ನೂ ಚಿಕಿತ್ಸೆ ಬಗ್ಗೆ  ಬ್ರಹ್ಮಾವರ ಮಹೇಶ್  ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 66/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
 • ಕುಂದಾಪುರ: ದಿನಾಂಕ 20/04/2022 ರಂದು ಸಂಜೆ ಪಿರ್ಯಾದಿದಾರರಾದ ಶ್ರೀಮತಿ  ಮಾಲತಿ  ಪೂಜಾರ್ತಿ, (46) ಗಂಡ: ಭಾಸ್ಕರ ಪೂಜಾರಿ, ವಾಸ: ವಿಘ್ನೇಶ್ವರ  ನಿಲಯ, ಮಾರ್ಗೊಳ್ಳಿ, ಬಸ್ರೂರು ಗ್ರಾಮ, ಕುಂದಾಪುರ  ಇವರು ಅವರ ತಮ್ಮ ಬಸವ ಪೂಜಾರಿ ರವರ ಮೋಟಾರ್‌ ಸೈಕಲ್‌ ನಂಬ್ರ KA-20 W-3275 ನೇದರಲ್ಲಿ  ಸಹಸವಾರಳಾಗಿ ಕುಳಿತುಕೊಂಡು ಗಂಡನ ಮನೆಯಾದ ಕಂಬದ ಕೋಣೆಗೆ ಮಾರ್ಗೊಳಿ ಕಡೆಯಿಂದ ಕಳಂಜಿ ಕಡೆಗೆ ಡಾಮಾರು ರಸ್ತೆಯಲ್ಲಿ ಹೊರಟಿದ್ದು ಮೋಟಾರ್‌ ಸೈಕಲನ್ನು ಬಸವ ಪೂಜಾರಿ ಸವಾರಿ  ಮಾಡಿಕೊಂಡಿದ್ದರು. ಸಮಯ ಸುಮಾರು 17:45 ಘಂಟೆಗೆ ಬ್ರಸೂರು ಗ್ರಾಮದ ಮಾರ್ಗೊಳಿ ನಾರಾಯಣ  ಶೆಟ್ಟಿಗಾರ್‌ರವರ ಮನೆಯ ಹತ್ತಿರ ಬಸವ ಪೂಜಾರಿ ರವರು ಮೋಟಾರ್‌ ಸೈಕಲನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡಿರುವಾಗ ನಾಯಿಯೊಂದು ಅಡ್ಡ ಬಂದಿದ್ದು ತಪ್ಪಿಸಲು ಹೋಗಿ ಒಮ್ಮೇಲೆ ಬ್ರೇಕ್‌ ಹಾಕಿದ ಪರಿಣಾಮ ಶ್ರೀಮತಿ  ಮಾಲತಿ  ಪೂಜಾರ್ತಿ ರವರು ಮೋಟಾರ್‌ ಸೈಕಲ್‌ನಿಂದ ಕೆಳಗೆ ಬಿದ್ದಿದ್ದು, ಅವರ ಕಾಲು ಮೋಟಾರ್‌ ಸೈಕಲನ್‌ ಹಿಂಬದಿಯ ಚಕ್ರಕ್ಕೆ ಸಿಕ್ಕಿದ್ದು ಬಸವ ಪೂಜಾರಿ ಮೋಟಾರ್‌ ಸೈಕಲ್‌ ಸಮೇತ ಬಿದ್ದಿದ್ದು ಬಸವ ಪೂಜಾರಿಗೆ ಯಾವುದೇ ಗಾಯಗಳಾಗಿರುವುದಿಲ್ಲ.  ಅಪಘಾತದಲ್ಲಿ ಶ್ರೀಮತಿ  ಮಾಲತಿ  ಪೂಜಾರ್ತಿ ರವರ ಬಲ ಕಾಲಿಗೆ ಮೂಳೆ  ಮುರಿತದ ತೀವ್ರ ಸ್ವರೂಪದ  ರಕ್ತಗಾಯ ಹಾಗೂ ಸೊಂಟಕ್ಕೆ ತರಚಿದ ಗಾಯ ಆಗಿರುತ್ತದೆ. ಗಾಯಗೊಂಡ ಶ್ರೀಮತಿ  ಮಾಲತಿ  ಪೂಜಾರ್ತಿ ರವರನ್ನು ಸ್ಥಳಕ್ಕೆ ಬಂದ ಅವರ ಮನೆಯವರು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯ  ಆಸ್ಪತ್ರೆಗೆ  ಕರೆದುಕೊಂಡು  ಹೋಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಕುಂದಾಫುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 54/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
 • ಮಲ್ಪೆ: ದಿನಾಂಕ 20/04/2022 ರಂದು ಪಿರ್ಯಾದಿದಾರರಾದ ಉದಯ ಟಿ ಬಂಗೇರ (48) ತಂದೆ:ತನಿಯ ಕುಂದರ್ ವಾಸ: ಶಶಿ ನಿವಾಸ ಕಲ್ಮಾಡಿ ಬ್ರಿಡ್ಜ್ ಹತ್ತಿರ  ಕೊಡವೂರು ಇವರು ಮತ್ತು ಇವರ  ಅಕ್ಕ ಗಂಗಾ ಮತ್ತು ಅಕ್ಕನ ಮಗ ಆಕರ್ಷ್ ರವರು  ಮೂಲಸ್ಥಾನ  ಬೇಂಗ್ರೆ  ಹೂಡೆಗೆ ಹೋಗಲು  ಬೆಳಿಗ್ಗೆ  ಸುಮಾರು 09:15 ಗಂಟೆಗೆ KA-20-EH-5403 ಬೈಕ್ ನಲ್ಲಿ ಮನೆಯಿಂದ ಹೊರಟು ಆಕರ್ಷ್ ಸವಾರನಾಗಿ ಉದಯ ಟಿ ಬಂಗೇರ ರವರ ಅಕ್ಕ ಗಂಗಾ ಸಹಸವಾರನಾಗಿ ಕುಳ್ಳಿರಿಸಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು 09:45 ಗಂಟೆಗೆ ಕೆಮ್ಮಣ್ಣು ಚರ್ಚ್ ಎದುರುಗಡೆ ಮುಂದೆ ಸ್ಕೂಟರನ್ನು  ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ರಸ್ತೆಯಲ್ಲಿ ಅಳವಡಿಸಿದ ಹಂಪ್ಸ್ ನಲ್ಲಿ ಒಮ್ಮೆಲೆ ಬ್ರೇಕ್ ಹಾಕಿದ  ಪರಿಣಾಮ ಉದಯ ಟಿ ಬಂಗೇರ ರವರ ಅಕ್ಕ ಗಂಗಾ ರವರು ರಸ್ತೆಗೆ ಬಿದ್ದು ಗಂಗಾರವರ ತಲೆಗೆ ತೀವ್ರ ಒಳ ಜಖಂ ಆಗಿರುತ್ತದೆ ಗಂಗಾರವರನ್ನು ಉಪಚರಿಸಿ ಚಿಕಿತ್ಸೆ ಯ ಬಗ್ಗೆ ಕೆಎಂಸಿ ಮಣಿಪಾಲ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆಯಲ್ಲಿದ್ದು. ದಿನಾಂಕ 21/04/2022 ರಂದು ರಾತ್ರಿ 1:30 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಈ ಅಫಘಾತಕ್ಕೆ KA-20 EH-5403 ನೇ ಸ್ಕೂಟರ್ ಸವಾರನ ಆಕರ್ಷ್ ರವರ ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯ ಚಾಲನೆಯೆ ಕಾರಣವಾಗಿದೆ, ಉದಯ ಟಿ ಬಂಗೇರ ರವರು ಆಸ್ಪತ್ರೆಯಲ್ಲಿ ಅಕ್ಕ ಗಂಗಾರವರ ಆರೈಕೆಯಲ್ಲಿರುವುದರಿಂದ ಬಂದು ದೂರು ನೀಡಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 33/2021 ಕಲಂ: 279, 304 (ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

 • ಬ್ರಹ್ಮಾವರ: ದಿನಾಂಕ 08/04/2022 ರಂದು ಪಿರ್ಯಾದಿದಾರರಾದ ರಿತೇಶ್‌ ನಾಯಕ್‌ (33) ತಂದೆ: ದಿ. ಪರಮೇಶ್ವರ ನಾಯಕ್‌ ವಾಸ: ಕೆಮ್ಮಣ್ಣುಕಡು, ನೀಲಾವರ ಗ್ರಾಮ, ಬ್ರಹ್ಮಾವರ ಇವರ ಮಾವನ ಮಗ ಅಖಿಲೇಶ್‌ನು ರಿತೇಶ್‌ ನಾಯಕ್‌ ಇವರ KA-19 EA-3757 ನೊಂದಣಿ ನಂಬ್ರದ ಕಪ್ಪು ಬಣ್ಣದ ಹೀರೊ ಹೊಂಡಾ ಪ್ಲಸ್‌ ಮೋಟಾರ್‌ ಸೈಕಲ್‌ನ್ನು ಹ್ಯಾಂಡ್‌ ಲಾಕ್‌ ಮಾಡಿ ಬೆಳಿಗ್ಗೆ 7:00 ಗಂಟೆಗೆ ಚಾಂತಾರು ಗ್ರಾಮದ ಬ್ರಹ್ಮಾವರ ಸುಂಕೇರಿ ಜನರಲ್‌ ಸ್ಟೋರ್‌ ಎದುರು ನಿಲ್ಲಿಸಿ ಮೂಡು ಬಿದಿರೆ ಕಾಲೇಜಿಗೆ ಬಸ್ಸಿನಲ್ಲಿ ಹೋಗಿ ವಾಪಾಸ್ಸು ಸಂಜೆ 6:00 ಗಂಟೆಗೆ ಬಂದು ನೋಡಿದಾಗ ಸದ್ರಿ ಮೋಟಾರ್‌ ಸೈಕಲ್‌ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಮೋಟಾರ್‌ ಸೈಕಲ್‌ನ ಅಂದಾಜು ಮೊತ್ತ 10 ರಿಂದ 15 ಸಾವಿರ ರೂಪಾಯಿ ಆಗಬಹುದುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 67/2021 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತರ ಪ್ರಕರಣ

 • ಪಡುಬಿದ್ರಿ: ದಿನಾಂಕ 12/04/2022 ರಂದು 12:00 ಗಂಟೆ ಸಮಯಕ್ಕೆ ಕಾರ್ಕಳ ತಾಲೂಕು ಇನ್ನಾ ಗ್ರಾಮದ ಮಡ್ಮಣ್‌ ದಾಸ್‌ ಬೈಲು ಎಂಬಲ್ಲಿ ಪಿರ್ಯಾದಿದಾರರಾದ ಅಶೋಕ್ ಶೆಟ್ಟಿ, (51) ತಂದೆ: ಸಾಧು ಶೆಟ್ಟಿ, ವಾಸ: “ಗಣೇಶ್ ಕೃಪಾ”, ದಾಸ್ ಬೈಲು ,ಮಡ್ಮಣ್, ಇನ್ನಾ ಅಂಚೆ ಮತ್ತು ಗ್ರಾಮ, ಕಾರ್ಕಳ ಇವರ ಜಾಗಕ್ಕೆ ಆರೋಪಿ ಸುಧಾಕರ್ ಸಾಲ್ಯಾನ್ ಎಂಬುವರು ಕೈಯಲ್ಲಿ ದೊಣ್ಣೆಯನ್ನು ಹಿಡಿದುಕೊಂಡು ಅಕ್ರಮ ಪ್ರವೇಶ ಮಾಡಿ, ಅಶೋಕ್ ಶೆಟ್ಟಿ ರವರ ತಾಯಿ ಮತ್ತು ತಮ್ಮನನ್ನು ಉದ್ದೇಶಿಸಿ ನೀವು ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದೀರಿ, ನಿಮ್ಮ ಮನೆಯನ್ನು ಕೆಡವಿ ನಿಮ್ಮನ್ನು ಬಿದಿ ಪಾಲು ಮಾಡುತ್ತೇನೆ ಎಂಬುದಾಗಿ ಬೈಯುತ್ತಾ ಇರುವಾಗ, ಇದನ್ನು ಕೇಳಿಸಿಕೊಂಡ ಅಶೋಕ್ ಶೆಟ್ಟಿ ರವರ ತಮ್ಮ ಸುದಾಕರ ಶೆಟ್ಟಿಯು ಎನಾಯಿತು ಎಂದು ಕೇಳಲು ಬಂದಾಗ ಅವರಿಗೂ ಕೂಡ ಅವಾಚ್ಯ ಶಬ್ಧಗಳಿಂದ ನಿಂದಿಸಿದಲ್ಲದೆ ಅಶೋಕ್ ಶೆಟ್ಟಿ ರವರು ಮನೆಯಿಂದ ಹೊರಗೆ ಬಂದು ಆರೋಪಿತರಲ್ಲಿ ಯಾಕೆ ಬಂದೆ ಎಂದು ಕೇಳಿದಾಗ ಆರೋಪಿಯು ಸಾಯಿಸುತ್ತೇನೆ ಎಂಬುದಾಗಿ ಹೇಳಿ ತನ್ನ ಕೈಯಲ್ಲಿದ್ದ ದೊಣ್ಣೆಯನ್ನು ಎತ್ತಿದಾಗ ತಪ್ಪಿಸುವ ಸಂದರ್ಭದಲ್ಲಿ  ಅಶೋಕ್ ಶೆಟ್ಟಿ ರವರು ನೆಲಕ್ಕೆ ಬಿದ್ದಿದ್ದು, ಆರೋಪಿತನು ದೊಣ್ಣೆಯಿಂದ ಅಶೋಕ್ ಶೆಟ್ಟಿ ರವರ ಮೈಗೆ, ಕಾಲಿಗೆ ಹೊಡೆದು ಮುಖಕ್ಕೆ ಗಾಯಗೊಳಿಸಿದಲ್ಲದೇ ನಿಮ್ಮ ಮನೆಗೆ ಬೆಂಕಿ ಕೊಡುತ್ತೇನೆ ಎಂಬುದಾಗಿ ಹೇಳಿದ್ದು, ಆ ಸಮಯ ನೆರೆಹೊರೆಯವರು ಬರುವುದನ್ನು ಕಂಡು ಕೈಯಲ್ಲಿದ್ದ ದೊಣ್ಣೆಯನ್ನು ಬಿಸಾಡಿ ಓಡಿ ಹೋಗಿರುತ್ತಾನೆ. ಅಶೋಕ್ ಶೆಟ್ಟಿ ಇವರು ಉಡುಪಿಯ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಆರೋಪಿಯು ಅಶೋಕ್ ಶೆಟ್ಟಿ ರವರ ಮೇಲೆ ಸುಳ್ಳು ದೂರನ್ನು  ನೀಡಿರುವುದರಿಂದ ಅಶೋಕ್ ಶೆಟ್ಟಿ ರವರು ನ್ಯಾಯಾಲಯದಿಂದ ಜಾಮೀನು ಪಡೆದು ಪ್ರತಿ ದೂರನ್ನು ದಾಖಲಿಸಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 45/2022 ಕಲಂ: 45/2022 ಕಲಂ: 447,504,506,324 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 21-04-2022 06:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080