ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಅಜೆಕಾರು: ಪಿರ್ಯಾದಿದಾರರಾದ ಉಪೇಂದ್ರ (35), ತಂದೆ:ದಿ. ಗೋಪಾಲ ಪೂಜಾರಿ, ವಾಸ:ಬೆನಕ, ಗರಡಿ ರಸ್ತೆ, ಬನ್ನಂಜೆ, ಮೂಡ ನಿಡಂಬೂರು, ಉಡುಪಿ ಇವರ ಅಣ್ಣ ಉಮೇಶ ಪೂಜಾರಿ (48) ರವರು ಕಾರ್ಕಳ ತಾಲೂಕು ಕೆರ್ವಾಶೆ ಗ್ರಾಮ ಅರ್ಥಬೆಟ್ಟು ಎಂಬಲ್ಲಿ ಕೃಷಿ ಕೆಲಸ ಮಾಡಿಕೊಂಡು ಒಬ್ಬಂಟಿಯಾಗಿ ವಾಸಿಸುತ್ತಿದ್ದು, ವಿಪರೀತ ಮದ್ಯ ಸೇವಿಸುವ ಚಟ ಹೊಂದಿರುತ್ತಾರೆ. ಇದೇ ಕಾರಣದಿಂದ ಜೀವನದಲ್ಲಿ ಬೇಸರಗೊಂಡು ಕೃಷಿಗೆ ಬಳಸುವ ಕೀಟನಾಶಕವನ್ನು ಸೇವಿಸಿ ಅಸ್ವಸ್ಥಗೊಂಡವರನ್ನು ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 20/04/2021 ರಂದು ಸಂಜೆ 6:30 ಗಂಟೆಗೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 03/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಬ್ರಹ್ಮಾವರ: ದಿನಾಂಕ 19/04/2021 ರಂದು ಪಿರ್ಯಾದಿದಾರರಾದ ಸಂತೋಷ ಶೆಟ್ಟಿ (34), ತಂದೆ: ಮೊನಪ್ಪ ಶೆಟ್ಟಿ, ವಾಸ: ಹೊಳೆಬಾಗಿಲು, ಕರ್ಜೆ, ಹಲುವಳ್ಳಿ ಗ್ರಾಮ, ಬ್ರಹ್ಮಾವರ ತಾಲೂಕು ಇವರು ತನ್ನ KA-19-ME-7576ನೇ ನಂಬ್ರದ ಸ್ವೀಪ್ಟ್ ಕಾರನ್ನು ಪೇತ್ರಿ ಕಡೆಯಿಂದ ಕರ್ಜೇ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಸಂಜೆ 7:45 ಗಂಟೆಗೆ ಹಲುವಳ್ಳಿ ಗ್ರಾಮದ ಹಳಮಳಿಗೆ ಎಂಬಲ್ಲಿ ಅವರ ಎದುರಿನಿಂದ ಕರ್ಜೇ ಕಡೆಯಿಂದ ಬರುತ್ತಿದ್ದ ಆರೋಪಿ ರಾಜೇಶ ಆಲ್ಟೋ ಕಾರು ಪಿರ್ಯಾದಿದಾರರ ಕಾರಿನ ಬಲಬದಿ ಸೈಡ್ ಮೀರರ್‌ಗೆ ತಾಗಿದ್ದು, ಆಗ ಪಿರ್ಯಾದಿದಾರರು ಕಾರನ್ನು ಮುಂದೆ ನಿಲ್ಲಿಸಿ ಕಾರಿನಿಂದ ಇಳಿದು ನೋಡಿದಾಗ ಅವರ ಕಾರಿನ ಮೀರರ್ ಸ್ವಲ್ಪ ತರಚಿ ಹೋಗಿರುತ್ತದೆ. ಆರೋಪಿ ಕಾರನ್ನು ನಿಲ್ಲಿಸದೇ ಹೋಗಿದ್ದು, ಆಗ ಪಿರ್ಯಾದಿದಾರರು ತನ್ನ ಕಾರಿಗೆ ಯಾವುದೇ ಜಖಂ ಆಗದೇ ಇರುವುದರಿಂದ  ಕಾರನ್ನು ಹತ್ತಿ ಚಲಾಯಿಸಿಕೊಂಡು ಸ್ವಲ್ಪ ಮುಂದಕ್ಕೆ ಹೋಗುತ್ತಿದ್ದಂತೆ ಆರೋಪಿಯು ಪಿರ್ಯಾದಿದಾರರ ಕಾರನ್ನು ಹಿಂಬಾಲಿಸಿ ಬಂದು ಅವರ ಆಲ್ಟೋ ಕಾರನ್ನು ಪಿರ್ಯಾದಿದಾರರ ಕಾರಿನ ಮುಂದೆ ಅಡ್ಡ ಇಟ್ಟು ತಡೆದು ನಿಲ್ಲಿಸಿರುತ್ತಾರೆ. ಆಗ ಪಿರ್ಯಾದಿದಾರರು ಕಾರಿನೀಂದ ಇಳಿಯುತ್ತಿದ್ದಂತೆ ಆರೋಪಿಯು ಅವರ ಕಾರಿನಿಂದ ಇಳಿದು ಬಂದು ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದಿದ್ದು, ಆ ಸಮಯ ಪಿರ್ಯಾದಿದಾರರು ಅವರ ಸ್ನೇಹಿತರಿಗೆ ಕರೆ ಮಾಡಲು ಮೊಬೈಲ್‌ನ್ನು  ತೆಗೆದಾಗ ಆರೋಪಿಯು ಪಿರ್ಯಾದಿದಾರರಿಗೆ ಬೈದು ಕೈಯಿಂದ ಪಿರ್ಯಾದಿದಾರರ ಕೆನ್ನೆಗೆ, ಮುಖಕ್ಕೆ, ಭುಜಕ್ಕೆ ಹೊಡೆದಿರುತ್ತಾನೆ. ಅದೇ ವೇಳೆಗೆ ಪಿರ್ಯಾದಿದಾರರ ಪರಿಚಯದವರು ಅಲ್ಲಿಗೆ ಬಂದಿದ್ದನ್ನು ನೋಡಿ ಬೆದರಿಕೆ ಹಾಕಿ ಅವರ ಕಾರಿನಲ್ಲಿ ಹೋಗಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 60/2021 ಕಲಂ: 341, 504, 506, 323 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 21-04-2021 09:49 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ