ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ 20/04/2021 ರಂದು ಪಿರ್ಯಾದಿದಾರರಾದ ನಾಗರಾಜಪ್ಪ ಹೆಚ್ ಪಿ (38), ತಂದೆ: ಬೇವಿನಮರದ ಪುಟ್ಟಪ್ಪ, ವಾಸ: ಕಂಬದರ ಹೊಸೂರು ಭದ್ರಾವತಿ ಶಿವಮೊಗ್ಗ ಜಿಲ್ಲೆ ಇವರು ಶಿವಮೊಗ್ಗದಿಂದ ಕಾರ್ಕಳ ಕಡೆಗೆ ತನ್ನ ಲಾರಿಯಲ್ಲಿ ಸಿಲಿಂಡರ್ ನ್ನು ತುಂಬಿಸಿಕೊಂಡು ಶೃಂಗೇರಿ ಕಾರ್ಕಳ ತಾಲೂಕು ಮಾಳ ಘಾಟ್ ನಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಿದ್ದು ಪಿರ್ಯಾದಿದಾರರ ವಾಹನದ ಮುಂದಿನಿಂದ ವಿಶ್ವನಾಥ ಎಂಬುವವರು ಕೂಡ ಅವರ KA-14-B-8155 ನೇ ಲಾರಿಯಲ್ಲಿ ಸಿಲಿಂಡ ರ್ ನ್ನು ತುಂಬಿಸಿಕೊಂಡು ಕಾರ್ಕಳ ಕಡೆಗೆ ಚಲಾಯಿಸಿಕೊಂಡು ಬರುತ್ತ ಮಾಳ ಘಾಟಿಯಲ್ಲಿ ಇಳಿಯುತ್ತಿರುವಾಗ ಮಳೆ ಕೂಡ ಬರುತ್ತಿದ್ದು ವಿಶ್ವನಾಥ  ರವರು ಚಲಾಯಿಸುತ್ತಿದ್ದ ಲಾರಿ ಏಕಾಏಕಿ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಅಡ್ಡದಿಡ್ಡಿ ಚಲಿಸುತ್ತಿದ್ದು ಅದರ ಚಾಲಕ ವಿಶ್ವನಾಥರವರು ಲಾರಿಯಿಂದ ಹೊರಗೆ ಹಾರಿದು ಲಾರಿ ಎದುರಿಗೆ ಹೋಗಿ ರಸ್ತೆ ಬದಿಯ ಗೋಡೆಗೆ ಬಡಿದು ನಿಂತಿದ್ದು, ಪಿರ್ಯಾದಿದಾರರು ಲಾರಿಯಿಂದ ಹೋಗಿ ನೋಡಿದಾಗ ವಿಶ್ವನಾಥ ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 45/2021 ಕಲಂ: 279,304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಶಿರ್ವಾ: ಪಿರ್ಯಾದಿದಾರರಾದ ವಿಜಯ ಬರ್ಬೊಜಾ (53), ತಂದೆ: ಬಿಜೆಕ್ರೆಕೌಡ್ ಹೌಸ್, ಶಂಕರಪುರ ಪೋಸ್ಟ್,ಶಿರ್ವ ಗ್ರಾಮ ಹಾಲಿ ವಾಸ:ಲೀ ಮೆರಿಡಿಯನ್ ಎಪಾರ್ಟಮೆಂಟ್ ಕಾಪ್ರಿಗುಡ್ಡೆ,ಮಂಗಳೂರು ಇವರ ಅಣ್ಣ ರೋನಾಲ್ಡ್ ಬರ್ಬೊಜಾ (59) ರವರಿಗೆ ವಿಪರೀತ ಮದ್ಯಪಾನ ಮಾಡುವ ಚಟವಿದ್ದು ದಿನಾಂಕ 17/04/2021 ರಂದು ಬೆಳಿಗ್ಗೆ ಸುಮಾರು  11.50 ಗಂಟೆಗೆ ವಿಪರೀತವಾಗಿ ಮದ್ಯಪಾನ ಮಾಡಿಕೊಂಡು ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಅಸ್ವಸ್ಥರಾಗಿದ್ದವರನ್ನು ಚಿಕಿತ್ಸೆ ಬಗ್ಗೆ ಉಡುಪಿ ಸರಕಾರಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿದ್ದು, ಚಿಕಿತ್ಸೆ ಫಲಿಸದೇ ರೋನಾಲ್ಡ್ ಬರ್ಬೊಜಾರವರು ದಿನಾಂಕ 19/04/2021 ರಂದು ರಾತ್ರಿ 10.00 ಗಂಟೆಗೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 11 /2021 ಕಲಂ:  174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ಚೇತನ (24), ತಂದೆ:ದಾರ ಮೊಗವೀರ, ವಾಸ: ಕರ್ಕಿಕಳಿ ತಾರಾಪತಿ ಅಂಚೆ ಉಪ್ಪುಂದ ಗ್ರಾಮ ಬೈಂದೂರು ತಾಲೂಕು ಇವರ ತಾಯಿ ಶಶಿಕಲಾ (49) ರವರು ಮೀನು ಮಾರಾಟ ಮಾಡಿಕೊಂಡಿದ್ದು ಮೀನು ಮಾರಾಟದಲ್ಲಿ ವಿಪರೀತ ನಷ್ಠ ಉಂಟಾಗಿ ಕೆಲವು ಕಡೆ ಕೈ ಸಾಲ ಪಡೆದುಕೊಂಡಿದ್ದು ಕೈ ಸಾಲ ವಾಪಸ್ಸು ನೀಡಲಾಗದೇ ಇದ್ದು ಇದರಿಂದ ಮನನೊಂದು ದಿನಾಂಕ 19/04/2021 ರಂದು ರಾತ್ರಿ 10:00 ಗಂಟೆಗೆ  ಊಟ ಮಾಡಿ ಮಲಗಿದವರು ದಿನಾಂಕ 20/04/2021 ರಂದು ಬೆಳಿಗ್ಗೆ 6:30 ಗಂಟೆಗೆ ಮಲಗಿದಲ್ಲೆ  ಹೊರಳಾಡುತ್ತಿದ್ದವರನ್ನು ಪಿರ್ಯಾದಿದಾರರು ನೋಡಲಾಗಿ ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಹೆಚ್ಚಿನ ಚಿಕಿತ್ಸೆ ಬಗ್ಗೆ  ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ  ದಾಖಲು ಮಾಡಿದ್ದು ಇಲಿ ಪಾಷಣವನ್ನು ಸೇವಿಸಿ ತೀವೃ ಅಸ್ವಸ್ಥರಾದವರು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 20/04/2021 ರಂದು ರಾತ್ರಿ 09:00 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 14/2021 ಕಲಂ: 174  174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹೆಬ್ರಿ: ಪಿರ್ಯಾದಿದಾರರಾದ ರವೀಂದ್ರ ನಾಯಕ್ (43), ತಂದೆ: ಸುಬ್ಬಣ್ಣ ನಾಯಕ್, ವಾಸ: ಬೊಳಂಗಲ್ ಹೆಬ್ರಿ ಗ್ರಾಮ ಮತ್ತು ತಾಲೂಕು ಇವರ ತಮ್ಮ ಕೃಷ್ಣಮೂರ್ತಿ (30) ರವರು ಉಡುಪಿಯ ಗೀತಾಂಜಲಿ ಬಟ್ಟೆ ಅಂಗಡಿಯಲ್ಲಿ ಸೇಲ್ಸ್ ಮೆನ್ ಆಗಿ ಕೆಲಸ ಮಾಡಿಕೊಂಡಿದ್ದು ವಾರಕ್ಕೊಮ್ಮೆ ಮನೆಗೆ ಬಂದು ಹೋಗುವುದಾಗಿದೆ. ದಿನಾಂಕ 20/04/2021 ರಂದು ಅವರು ಮನೆಗೆ ಬಂದಿದ್ದು , ದಿನಾಂಕ 21/04/2021 ರಂದು ಬೆಳಿಗ್ಗೆ 06.30 ಗಂಟೆಗೆ ಮನೆಯ ಬಳಿ ಇರುವ ಹೆಬ್ರಿ ಗ್ರಾಮದ ಜರ್ವತ್ತು ಹೊಳೆಗೆ ಸ್ನಾನ ಮಾಡಲೆಂದು ಬಟ್ಟೆ ತೆಗೆದುಕೊಂಡು ಮನೆಯಿಂದ ಹೋದವರು ವಾಪಾಸು ಬಾರದೇ ಇದ್ದುದನ್ನು ನೋಡಿ ಅವರ ತಾಯಿ ಹಾಗೂ ಅಣ್ಣ ನವರು ಹೊಳೆಯ ಬದಿ ಹುಡುಕಾಡುತ್ತಿರುವಾಗ ಬೆಳಿಗ್ಗೆ 09:00 ಗಂಟೆಗೆ ಕೃಷ್ಣಮೂರ್ತಿಯವರು ಹೊಳೆಯ ದಡದಲ್ಲಿರುವ ಕಲ್ಲುಬಂಡೆಗೆ ಸಿಕ್ಕಿ ಹಾಕಿರುವುದನ್ನು ನೋಡಿ ದಡಕ್ಕೆ ತಂದು ಮಲಗಿಸಿ ನೋಡಿದಾಗ ಮೃತಪಟ್ಟಿರುತ್ತಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 12/2021 ಕಲಂ: 174  174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 21-04-2021 08:36 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080