ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕಾಪು: ಪಿರ್ಯಾದಿದಾರರಾದ ಮಹೇಶ್ ಶೆಟ್ಟಿ (34), ತಂದೆ: ಉಮೇಶ್ ಶೆಟ್ಟಿ, ವಾಸ: ಶ್ರೀನಿಧಿ, ಸಾಯಿನಾಥ್, ಮಯ್ಯೊಟ್ಟು, ರೈಲ್ವೆ ಬ್ರಿಡ್ಜ್ ಹತ್ತಿರ ಮಜೂರು ಗ್ರಾಮ, ಕಾಪು ತಾಲೂಕು ಇವರು ಕಾಪು ಪಡು ಗ್ರಾಮದಲ್ಲಿರುವ ಮಾರಿಗುಡಿಯ ಹಿಂಭಾಗದಲ್ಲಿರುವ ಮಹೇಶ್ ಶೆಟ್ಟಿಯವರ ಮನೆಗೆ ಹೋಗಲು ಅಣ್ಣನ KA-20-EH-6111 ನೇ ಯಮಹಾ ಬೈಕ್ ನಲ್ಲಿ ಕಾಪುವಿನಿಂದ ಹೊರಟು ಬರುತ್ತಾ ಮಾರಿಗುಡಿ ದ್ವಾರವನ್ನು ತಲುಪಿದಂತೆ ಕಾಪು ಲೈಟ್ ಹೌಸ್ ಕಡೆಗೆ ಹೋಗುವ ಡಾಮರು ರಸ್ತೆಗೆ ಬೈಕನ್ನು ತಿರುಗಿಸಿದಾಗ  ಎದುರುಗಡೆಯಿಂದ ಪರಿಚಯದ  ಅನಿಲ್ ಶೆಟ್ಟಿಯವರು ಅವರ  ಬೈಕ್ ನಲ್ಲಿ ಬಂದಿದ್ದು ಇಬ್ಬರು ಕೂಡ ರಸ್ತೆಯ ಬಲಬದಿಯ ಮಣ್ಣು ರಸ್ತೆಯಲ್ಲಿ ಬೈಕ್ ಗಳನ್ನು ನಿಲ್ಲಿಸಿ ಬೈಕ್ ನಲ್ಲಿ ಕುಳಿತುಕೊಂಡು ಮಾತನಾಡುತ್ತಿರುವ ಸಮಯ ಸಂಜೆ  7:15 ಗಂಟೆಯ ಸುಮಾರಿಗೆ ಮಂಗಳೂರು –ಉಡುಪಿ ರಾಷ್ಟ್ರೀಯ ಹೆದ್ದಾರಿ 66 ಕ್ಕೆ ಸಂರ್ಪಕದ ಬದಿಯ ಸರ್ವಿಸ್ ರಸ್ತೆಯಲ್ಲಿ ಮಂಗಳೂರು ಕಡೆಯಿಂದ KA-04-MB-0792 ನೇ ಕಾರನ್ನು ಅದರ ಚಾಲಕನು ಅತೀ ವೇಗ ಹಾಗೂ ತೀವ್ರ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಒಮ್ಮೇಲೇ ಕಾರನ್ನು ಬೀಚ್ ರಸ್ತೆ ಕಡೆಗೆ ತಿರುಗಿಸಿ ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿಕೊಂಡು ಮಾತನಾಡುತ್ತಿದ್ದ ಪಿರ್ಯಾದಿದರಾರರ  ಬೈಕ್ ಗೆ ಒಮ್ಮೇಲೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದರಾರರು ಬೈಕ್ ಸಮೇತ ರಸ್ತೆಗೆ ಬಿದ್ದು ಎಡಭುಜಕ್ಕೆ ತೀವ್ರ ಗುದ್ದಿದ ನೋವಾಗಿದ್ದು, ಕೈಕಾಲುಗಳಿಗೆ ತರಚಿದ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಕೂಡಲೇ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುವುದಾಗಿದೆ. ಅಪಘಾತದಿಂದ 2 ವಾಹನಗಳು ಜಖಂ ಗೊಂಡಿರುತ್ತದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 47/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬೈಂದೂರು: ಪಿರ್ಯಾದಿದಾರರಾದ ಸತೀಶ್ ಕುಮಾರ್ ಶೆಟ್ಟಿ (45), ತಂದೆ: ಮಹಾಬಲ ಶೆಟ್ಟಿ,  ವಾಸ:  ಶ್ರೀ ವಿನಯ , ಉಪ್ರಳ್ಳಿ, 11ನೇ ಉಳ್ಳೂರು ಗ್ರಾಮ, ಬೈಂದೂರು  ತಾಲೂಕು ಇವರು ದಿನಾಂಕ 19/03/2023 ರಂದು  ಮಧ್ಯಾಹ್ನ  12:30 ಗಂಟೆಗೆ  ನಾಗೂರು ಮಸೀದಿ ಬಳಿ ನಿಂತುಕೊಂಡಿರುವಾಗ ಕಿರಿಮಂಜೇಶ್ವರ ಗ್ರಾಮದ ನಾಗೂರು ಜಂಕ್ಷನ್ ರಾಷ್ಟ್ರೀಯ  ಹೆದ್ದಾರಿ 66 ರಲ್ಲಿ ಕುಂದಾಪುರ ಕಡೆಯಿಂದ ಭಟ್ಕಳ  ಕಡೆಗೆ KL-34-D-4305  ನೇ ಲಾರಿ ಚಾಲಕ ರಜಿಮೋನ್  ಆರ್   ಆತನ ಲಾರಿಯನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು  ಬಂದು ಬೈಂದೂರು ಕಡೆಗೆ  KA-20-ES-4387 ನೇ ಮೊಟಾರು ಸೈಕಲ್ ನ್ನು  ಸವಾರಿಮಾಡಿಕೊಂಡು ಹೋಗುತ್ತಿದ್ದ  ಪಿರ್ಯಾದಿದಾರರ ಪರಿಚಯದ ಶಂಕರ ಭಟ್ಟ ರವರ  ಮೋಟಾರು  ಸೈಕಲ್ ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಶಂಕರ ಭಟ್ಟ ರವರಿಗೆ ತಲೆಗೆ ಒಳ ಜಖಂ, ಕಿವಿ ಮತ್ತು ಮೂಗಿನಿಂದ ರಕ್ತ ಬಂದಿದ್ದು ,ಕೈ ಗೆ , ಎದೆಗೆ, ತರಚಿದ ರಕ್ತಗಾಯವಾದವರನ್ನು ಪಿರ್ಯಾದಿದಾರರು ಎಂ ಕೃಷ್ಣಭಟ್ ರವರೊಂದಿಗೆ  108 ಅಂಬುಲೆನ್ಸ್  ವಾಹನದಲ್ಲಿ ಚಿಕಿತ್ಸೆ  ಬಗ್ಗೆ  ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆ ತಂದಲ್ಲಿ ವೈದ್ಯರು  ಪ್ರಥಮ ಚಿಕಿತ್ಸೆನೀಡಿ  ಹೆಚ್ಚಿನ ಚಿಕಿತ್ಸೆಬಗ್ಗೆ  ಸೂಚಿಸಿದ ಮೇರೆಗೆ  ಮಣಿಪಾಲ ಕೆ ಎಂ ಸಿ ಅಸ್ಪತ್ರೆಗೆ ಕರೆ ತಂದು ದಾಖಲಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 44/2023 ಕಲಂ: 279, 337  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
 • ಮಲ್ಪೆ: ಪಿರ್ಯಾದಿದಾರರಾದ ಸತೀಶ್‌ ಕೆ , ತಂದೆ: ದಿ. ವಿಠ್ಠಲ್‌, ವಾಸ: ನಿಟ್ಟೂರು, ಪುತ್ತೂರು ಗ್ರಾಮ ಇವರು KA-20-D-8734 ಆಟೋ ರಿಕ್ಷಾ ಹೊಂದಿದ್ದು, ದಿನಾಂಕ 20/03/2023 ರಂದು ಪಿರ್ಯಾದಿದಾರರು ಬಾಡಿಗೆ ಬಗ್ಗೆ ರಿಕ್ಷಾದಲ್ಲಿ ಪ್ರಯಾಣಿಕರಾದ ಏಕನಾಥ ಮತ್ತು ಅವರ ಪತ್ನಿ ಜಯಲಕ್ಷ್ಮೀ ರವರನ್ನು ಕುಳ್ಳಿರಿಸಿಕೊಂಡು ಮಧ್ಯಾಹ್ನ 12:05 ಗಂಟೆಗೆ  ಉಡುಪಿ ಹೊರಟು  ಕರಾವಳಿ ಜಂಕ್ಷನ್‌  ನಿಟ್ಟೂರು ಮಾರ್ಗವಾಗಿ  ಲಕ್ಷ್ಮೀನಗರ ಕ್ಕೆ ಬರುತ್ತಾ 12:20 ಗಂಟೆಗೆ  ಕೊಡವೂರು ಲಕ್ಷ್ಮೀನಗರ ಮುಖ್ಯರಸ್ತೆಯಲ್ಲಿ  ಪಿರ್ಯಾದಿದಾರರು  ಲಕ್ಷ್ಮೀನಗರ 2 ನೇ ಅಡ್ಡರಸ್ತೆಗೆ ತಿರುಗಲು ಇಂಡಿಕೇಟರ್‌ ಹಾಕಿ  ರಿಕ್ಷಾದಲ್ಲಿ  ಹೋಗುತ್ತಿರುವಾಗ  ಹಿಂದಿನಿಂದ ಸಂತೆಕಟ್ಟೆ ಕಡೆಯಿಂದ  ಕೊಡವೂರು  ಕಡೆಗೆ   KA-19-ME-1471  ನಂಬ್ರದ ಕಾರು ಚಾಲಕ  ಕಾರನ್ನು ನಿರ್ಲಕ್ಷ್ಯತನ  ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು  ಬಂದು  ಪಿರ್ಯಾದಿದಾರರ ರಿಕ್ಷಾಕ್ಕೆ  ಹಿಂಬದಿಯ ಎಡಬದಿಗೆ  ಢಿಕ್ಕಿ ಹೊಡೆದ ಪರಿಣಾಮ  ಆಟೋ ರಿಕ್ಷಾ ಪಲ್ಟಿಯಾಗಿ ಬಿದ್ದಿದ್ದು , ಕಾರು ಚಾಲಕನು ಆಟೋ ರಿಕ್ಷಾ ವನ್ನು ಎಳೆದುಕೊಂಡು ಹೋದ  ಪರಿಣಾಮ ಪಿರ್ಯಾದಿದಾರರಿಗೆ  ಬಲಕಾಲಿನ ಮೊಣಗಂಟಿಗೆ  ರಕ್ತಗಾಯ , ಪಾದದ ಬಳಿ ತರಚಿದ ಗಾಯ ,ಎಡಕಾಲಿನ ಮೊಣಗಂಟಿನ ಬಳಿ  ರಕ್ತಗಾಯವಾಗಿರುತ್ತದೆ. ಹಾಗೂ ಪ್ರಯಾಣಿಕರಾದ ಏಕನಾಥ ರವರ  ಎಡಕಾಲಿಗೆ ರಕ್ತಗಾಯ ,ಸೊಂಟಕ್ಕೆ  ಗುದ್ದಿದ ನೋವು , ಬೆನ್ನಿಗೆ ಗುದ್ದಿದ ನೋವು ಆಗಿರುತ್ತದೆ, ಜಯಲಕ್ಷ್ಮೀ ರವರಿಗೆ ಮುಖಕ್ಕೆ, ತಲೆಗೆ ಗುದ್ದಿದ ಗಾಯವಾಗಿರುತ್ತದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 27/2023 ಕಲಂ: 279,337  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಣಿಪಾಲ: ದಿನಾಂಕ 20/03/2023 ರಂದು ಸಂಜೆ 04:45 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಅನ್ಸಿಟಾ ಲೋಬೋ (25), ತಂದೆ: ದಿ ಅನಿಲ್ ಲೋಬೋ,  ವಾಸ: 5-23-4 ಎಂಜಲ್ ಮನೆ ಸಂಕಲಕರಿಯ ಮುಂಡ್ಕೂರು ಗ್ರಾಮ ಕಾರ್ಕಳ ತಾಲ್ಲೂಕು ಉಡುಪಿ ಜಿಲ್ಲೆ ಇವರು ಕಾರು ನಂಬ್ರ KA-20-MB-4869 ನೇದರಲ್ಲಿ ಉಡುಪಿ ಇಂದ್ರಾಳಿ ಕಡೆಯಿಂದ ಹೊರಟು ಸಿಂಡಿಕೇಟ್‌ ಸರ್ಕಲ್‌ ಮಾರ್ಗವಾಗಿ ವಾಪಾಸ್‌ ಉಡುಪಿ ಕಡೆಗೆ ಹೋಗಲು, ಮಣಿಪಾಲ ಸಿಂಡಿಕೇಟ್‌ ಸರ್ಕಲ್‌ ನಲ್ಲಿ ಯು ಟರ್ನ್‌ ಮಾಡಲು ಕಾರನ್ನು ನಿಲ್ಲಿಸಿದ್ದು ಆ ಸಮಯ KA-19-AB-8796 ನೇದರ ಚಾಲಕ ಉದಯ್‌ ಕುಮಾರ್‌  ತನ್ನ ಪಿಕಪ್‌ ವಾಹನವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತನ್ನ ಬಲ ಭಾಗಕ್ಕೆ ಡಿಸಿ ಆಫೀಸ್‌ ಕಡೆಗೆ ಪಿಕಪ್‌ ವಾಹನವನ್ನು ತಿರುಗಿಸಿದ ಪರಿಣಾಮ ಪಿಕಪ್‌ ವಾಹನದ ಮುಂದಿನ ಭಾಗ ಪಿರ್ಯಾದಿದಾರರ ಕಾರಿನ ಹಿಂದಿನ ಬಲ ಭಾಗಕ್ಕೆ ಡಿಕ್ಕಿ ಹೊಡೆದಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 57/2023 ಕಲಂ: 279  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

 ಮಟ್ಕಾ ಜುಗಾರಿ ಪ್ರಕರಣ

 • ಉಡುಪಿ: ದಿನಾಂಕ 20/03/2023 ರಂದು ಮಂಜಪ್ಪ ಡಿ.ಆರ್‌, ಪೊಲೀಸ್‌ ನಿರೀಕ್ಷಕರು, ಉಡುಪಿ ನಗರ ಪೊಲೀಸ್‌ ಠಾಣೆ ಇವರು ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಉಡುಪಿ ತಾಲೂಕು ಕೊರಂಗ್ರಪಾಡಿ ಗ್ರಾಮದ ವಿಷ್ಣುಮೂರ್ತಿ ದೇವಸ್ಥಾನದ ಹಿಂಬದಿ ಕರುಣಾಕರ ಶೆಟ್ಟಿ ರವರ ಮನೆ ಬಳಿ ಸಾರ್ವಜನಿಕ ಖಾಲಿ ಸ್ಥಳದಲ್ಲಿ ಅಂದರ್‌ ಬಾಹರ್‌ ಇಸ್ಪೀಟು ಜುಗಾರಿ ಆಟ ಆಡುತ್ತಿರುವ ಬಗ್ಗೆ ದೊರೆತ ಮಾಹಿತಿಯಂತೆ ದಾಳಿ ನಡೆಸಿ, ಅಂದರ್‌ಬಾಹರ್‌ ಇಸ್ಪೀಟು ಜುಗಾರಿ ಆಟವಾಡುತ್ತಿದ್ದ ಮಹಮ್ಮದ್ ಆಶ್ರಫ್ (37), ತಂದೆ:ಅಬ್ದುಲ್ ಹಮೀದ್,  ವಾಸ:ಮನೆ ನಂಬ್ರ  2 ಬಿ -58 ಸಿ  ಇಂದಿರ ನಗರ ಕುಕ್ಕಿಕಟ್ಟೆ ಗ್ರಾಮ ಉಡುಪಿ ತಾಲೂಕು, 2. ಬಾಲಕೃಷ್ಣ ಶೆಣೈ (49), ತಂದೆ: ದಿ. ಪ್ರಭಾಕರ ಶೆಣೈ, ವಾಸ: ಆಶೀರ್ವಾದ  ಕಾಳಿಕಾಂಬ ವರ್ಕ್ ಶಾಪ್ ಉದ್ಯಾವರ ಉಡುಪಿ ತಾಲೂಕು, 3. ಮಂಜುನಾಥ ಆಚಾರ್ಯ (42), ತಂದೆ:ಜವರಪ್ಪ, ವಾಸ: ಪುಷ್ಪ ನಿಲಯ ಒಡರಬೆಟ್ಟು ಕೊರಂಗ್ರಪಾಡಿ ಗ್ರಾಮ ಮತ್ತು ಅಂಚೆ  ಉಡುಪಿ ತಾಲೂಕು, 4. ಶ್ರೀಧರ (52), ತಂದೆ: ದಿ ಬಾಬ, ವಾಸ:  ವಿಜಯ ಬ್ಯಾಂಕ್ ಹತ್ತಿರ ಕೊರಂಗ್ರಪಾಡಿ ಗ್ರಾಮ ಮತ್ತು ಅಂಚೆ ಉಡುಪಿ ತಾಲೂಕು, 5. ಲೊಕೇಶ್ (59), ತಂದೆ: ದಿ. ಪದ್ದು , ವಾಸ: ಉದ್ಯಾವರ ಚರ್ಚ್ ಹಿಂಬದಿ ಗುಡ್ಡ ಅಂಗಡಿ ಉಡುಪಿ ತಾಲೂಕು. 6) ಕರುಣಾಕರ ಶೆಟ್ಟಿ (58), ತಂದೆ:ಮಹಾಬಲ ಶೆಟ್ಟಿ, ವಾಸ:ವಿಷ್ಣು ಮೂರ್ತಿ ದೇವಸ್ಥಾನದ ಹಿಂಬದಿ  ಕೊರಂಗ್ರಪಾಡಿ ಅಂಚೆ ಮತ್ತು ಗ್ರಾಮ ಉಡುಪಿ ತಾಲೂಕು ಇವರನ್ನು ವಶಕ್ಕೆ ಪಡೆದು, ಆಟಕ್ಕೆ ಬಳಸಿದ ನಗದು ರೂಪಾಯಿ 8,380/-, ಹಳೆಯ ದಿನಪತ್ರಿಕೆ-1, ಇಸ್ಪೀಟು ಎಲೆಗಳು -52 ನ್ನು  ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 39/2023 ಕಲಂ: 87 ಕರ್ನಾಟಕ ಪೊಲೀಸ್ ಕಾಯಿದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಣಿಪಾಲ: ದಿನಾಂಕ 20/03/2023 ರಂದು ರುಕ್ಮಾ ನಾಯ್ಕ್, ಪೊಲೀಸ್‌ ಉಪನಿರೀಕ್ಷಕರು, ಮಣಿಪಾಲ ಪೊಲೀಸ್ ಠಾಣೆ ಇವರಿಗೆ ಉಡುಪಿ ತಾಲೂಕು ಮಣಿಪಾಲ ಶಿವಳ್ಳಿ ಗ್ರಾಮದ ಮಾದವ ನಗರ ಟೆಂಪೋ ಸ್ಟ್ಯಾಂಡ್‌ ಬಳಿ ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ  ದಾಳಿ ನಡೆಸಿ ಆರೋಪಿ ಮೆಹಬೂಬ್‌ (24), ತಂದೆ: ಮತ್ತೂಬ್‌ ಸಾಬ್‌, ವಿಳಾಸ:‌ಅಂಗನವಾಡಿ ಹತ್ತಿರ, ಅಸೂಕಿ ಗ್ರಾಮ ರೋಣಾ ತಾಲೂಕು ಗದಗ ಜಿಲ್ಲೆ.  ಪ್ರಸ್ತುತ ವಾಸ: ಆಂತೋನಿರವರ ಬಾಡಿಗೆ ಮನೆ, ಮಣಿಪಾಲ ಟೈಗರ್‌ ಸರ್ಕಲ್‌ ಶಿವಳ್ಳಿ ಗ್ರಾಮ ಎಂಬಾತನನ್ನು ವಶಕ್ಕೆ ಪಡೆದು ಹಾಗೂ ಆರೋಪಿ ಬಳಸುತ್ತಿದ್ದ ಮಟ್ಕಾ ಚೀಟಿ, ಬಾಲ್‌ ಪೆನ್‌, ನಗದು ರೂಪಾಯಿ 720/-  ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 56/2023 ಕಲಂ: 78(I)(III) KP Act ರಂತೆ ಪ್ರಕರಣ ದಾಖಲಾಗಿರುತ್ತದೆ.  

 ಇತರ ಪ್ರಕರಣ

 • ಬೈಂದೂರು: ದಿನಾಂಕ 20/03/2023 ರಂದು ಸಂತೋಷ್ ಎ ಕಾಯ್ಕಿಣಿ, ಪೊಲೀಸ್ ವೃತ್ತ ನಿರೀಕ್ಷಕರು, ಬೈಂದೂರು ವೃತ್ತ  ಇವರು ಉಪ್ಪುಂದ ಗ್ರಾಮದ ಉಪ್ಪುಂದ ಪೇಟೆಯಲ್ಲಿ ರೌಂಡ್ಸ್  ಕರ್ತವ್ಯದಲ್ಲಿರುವಾಗ ಉಪ್ಪುಂದ ಮಾರ್ಕೆಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ತೂರಾಡಿಕೊಂಡಿದ್ದ ಆರೋಪಿತ ಹರ್ಷ(23) ಎಂಬಾತನನ್ನು ವಶಕ್ಕೆ ಪಡೆದು ಆರೋಪಿಯು   ಮಾಧಕ ವಸ್ತುವನ್ನು ಸೇವಿಸಿರುವ ಬಗ್ಗೆ ವೈದ್ಯಕೀಯ ತಪಾಸಣೆಗೆ  ಶ್ರೀ ಮಾತಾ ಆಸ್ಪತ್ರೆ ಕುಂದಾಪುರ ರವರ ಮುಂದೆ ಹಾಜರು ಪಡಿಸಿದ್ದು, ಪರೀಕ್ಷಿಸಿದ ವೈದ್ಯಾಧಿಕಾರಿಯವರು ಹರ್ಷ ಗಾಂಜಾ ಸೇವಿಸಿರುವುದು ದೃಢ ಪಟ್ಟಿರುವುದಾಗಿ ವರದಿ ನೀಡಿರುತ್ತಾರೆ . ಈ ಬಗ್ಗೆ  ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 45/2023  ಕಲಂ: 27 (ಬಿ)  ಎನ್.ಡಿ.ಪಿ.ಎಸ್. ಕಾಯ್ದೆ-1985 ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಬೈಂದೂರು: ದಿನಾಂಕ 20/03/2023 ರಂದು ಸಂತೋಷ್ ಎ ಕಾಯ್ಕಿಣಿ, ಪೊಲೀಸ್ ವೃತ್ತ ನಿರೀಕ್ಷಕರು, ಬೈಂದೂರು ವೃತ್ತ  ಇವರು ಉಪ್ಪುಂದ ಗ್ರಾಮದ ಉಪ್ಪುಂದ ಕಡೆಯಲ್ಲಿ ರೌಂಡ್ಸ್  ಕರ್ತವ್ಯದಲ್ಲಿರುವಾಗ ಉಪ್ಪುಂದ ಜಂಕ್ಷನ್  ಬಳಿ ಸಾರ್ವಜನಿಕ ಸ್ಥಳದಲ್ಲಿ ತೂರಾಡಿಕೊಂಡಿದ್ದ ಆರೋಪಿತ ಅವಿನಾಶ್(25) ಎಂಬಾತನನ್ನು ವಶಕ್ಕೆ ಪಡೆದು  ಆರೋಪಿಯು  ಮಾಧಕ ವಸ್ತುವನ್ನು ಸೇವಿಸಿರುವ ಬಗ್ಗೆ ವೈದ್ಯಕೀಯ ತಪಾಸಣೆಗೆ ಶ್ರೀ ಮಾತಾ ಆಸ್ಪತ್ರೆ ಕುಂದಾಪುರ ರವರ ಮುಂದೆ ಹಾಜರು ಪಡಿಸಿದ್ದು, ಪರೀಕ್ಷಿಸಿದ ವೈದ್ಯಾಧಿಕಾರಿಯವರು ಅವಿನಾಶ್  ಗಾಂಜಾ ಸೇವಿಸಿರುವುದು  ದೃಢ ಪಟ್ಟಿರುವುದಾಗಿ ವರದಿ ನೀಡಿರುತ್ತಾರೆ . ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 46/2023  ಕಲಂ: 27 (ಬಿ)  ಎನ್.ಡಿ.ಪಿ.ಎಸ್. ಕಾಯ್ದೆ-1985 ರಂತೆ ಪ್ರಕರಣ ದಾಖಲಾಗಿರುತ್ತದೆ .
 • ಮಣಿಪಾಲ: ದಿನಾಂಕ 20/03/2023 ರಂದು ದೇವರಾಜ್‌ ಟಿ.ವಿ, ಪೊಲೀಸ್ ನಿರೀಕ್ಷಕರು, ಮಣಿಪಾಲ ಪೊಲೀಸ್ ಠಾಣೆ ಇವರಿಗೆ ಬಂದ ವರ್ತಮಾನದಂತೆ ಉಡುಪಿ ತಾಲೂಕು ಹೆರ್ಗಾ ಗ್ರಾಮದ ಸರಳೆಬೆಟ್ಟು ಈಶ್ವರ ನಗರ ಎಂಬಲ್ಲಿರುವ ಆನ್ವಿತಾ  ರೆಸಿಡೆನ್ಸಿಯ ಪ್ಲಾಟ್‌ ನಂ  102 ರಲ್ಲಿ ಮಾದಕವಸ್ತು ಹಾಗೂ ಗಾಂಜಾ ಮಾರಾಟ ಮಾಡಲು ಇಟ್ಟಿರುವ  ಸ್ಥಳಕ್ಕೆ ದಾಳಿ ನಡೆಸಿ  ಆಪಾದಿತ ಸಿದ್ದಾರ್ಥ ರಾಜ್‌ಮೋಹನ್‌ (21), ತಂದೆ :  ಎನ್‌. ರಾಜ್‌ ಮೋಹನ್‌ , ಖಾಯಂ ವಾಸ :  iv/248 ಮಡಿತ್ತಾಲ್‌ಹೌಸ್‌  ಪತ್ತೆರಿಪುರಂ  ಪುಲಿಂಚೋಡು  ಹತ್ತಿರ  ಅಲ್ವಾ  ಎರ್ನಾಕುಲಂ  ಜಿಲ್ಲೆ   ಕೇರಳ  ರಾಜ್ಯ ಎಂಬಾತನ ರೂಂನ ಕಬಾಟಿನಲ್ಲಿದ್ದ 2.55 ಗ್ರಾಂ ಎಂ ಡಿ ಎಂ ಎ ಹರಳುಗಳು  (ಪ್ಲಾಸ್ಟಿಕ್ ಕವರ್‌ಸಮೇತ),  16 ಗ್ರಾಂ ಗಾಂಜಾ (ಪ್ಲಾಸ್ಟಿಕ್ ಕವರ್‌ಸಮೇತ)‌,  ಮತ್ತು ಆತನ ವಶದಲ್ಲಿದ್ದ 1 ONE PLUS NORD 2T ಮೊಬೈಲ್ ಪೋನ್ ನ್ನು ಸ್ವಾಧೀನಪಡಿಸಿಕೊಂಡಿದ್ದು, ಸ್ವಾಧೀನಪಡಿಸಿಕೊಂಡ ಸ್ವತ್ತಿನ ಮೌಲ್ಯ ರೂಪಾಯಿ 13,000/-  ಆಗಿರುತ್ತದೆ.  ಮಾದಕ ವಸ್ತುಗಳನ್ನು ಮಣಿಪಾಲದ ತನಯ ಎಂಬಾತ ಆಪಾದಿತ ಸಿದ್ದಾರ್ಥ ರಾಜ್‌ಮೋಹನ್‌ ಗೆ ಮಾರಾಟ ಮಾಡಲು ನೀಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 55/2023 ಕಲಂ: 8(c) 20(b)(II)(A) 22(b) NDPS ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಬ್ರಹ್ಮಾವರ: ಪಿರ್ಯಾದಿದಾರರಾದ ಶ್ರೀಮತಿ ದುರ್ಗಿ (57), ಗಂಡ: ದಿವಂಗತ ಗೋಪಾಲ, ವಾಸ: ಮಕ್ಕಳಕಟ್ಟೆ, ಚೇರ್ಕಾಡಿ ಗ್ರಾಮ, , ಬ್ರಹ್ಮಾವರ ತಾಲೂಕು ಇವರು ಚೇರ್ಕಾಡಿ ಗ್ರಾಮದ ಸರ್ವೆ ನಂಬ್ರ: 342/ 4ಪಿ2 ರಲ್ಲಿನ 0.90 ಸೆಂಟ್ಸ್ ಜಾಗದಲ್ಲಿ ಅಕೇಶಿಯಾ ಹಾಗೂ ಗೇರು ಕೃಷಿ ಮಾಡಿಕೊಂಡು ಜಾಗದ ಅನುಭೋಗದಾರರಾಗಿರುತ್ತಾರೆ.  ಜಾಗವನ್ನು ಅತಿಕ್ರಮಣ ಮಾಡುವ ಉದ್ದೇಶದಿಂದ ಆರೋಪಿಗಳಾದ 1 ನೇ ಶಶಿಧರ ಶೆಟ್ಟಿ, 2 ನೇ ಶಶಿಧರ ಶೆಟ್ಟಿ ಮಗ, 3 ನೇ ನಾಗರಂಜಾನ್‌ ಹಾಗೂ ಇತರರು 1 ವರ್ಷದಿಂದ ಕಿರುಕುಳ ನೀಡುತ್ತಿದ್ದು, ದಿನಾಂಕ 16/03/2023 ರಂದು ಮಧ್ಯಾಹ್ನ 3:00 ಗಂಟೆಯ ಸುಮಾರಿಗೆ ಜಾಗದಲ್ಲಿ ಮರ ಕಡಿಯುವ ಶಬ್ದ ಕೇಳಿ ಪಿರ್ಯಾದಿದಾರರು ನೋಡಲು ಹೋದಾಗ ಅಲ್ಲೇ ನಿಂತಿದ್ದ 1 ನೇ ಆರೋಪಿಯು ಪಿರ್ಯಾದಿದುದಾರರನ್ನು ಉದ್ಧೇಶಿಸಿ ಅವಾಚ್ಯ ಶಬ್ದಗಳಿಂದ ಬೈಯುತ್ತಾ, ಹಲ್ಲೆ ಮಾಡಲು ಯತ್ನಿಸಿ ಹೋಗಿರುತ್ತಾರೆ. ಅಲ್ಲದೇ ದಿನಾಂಕ 20/03/2023 ರಂದು ಬೆಳಿಗ್ಗೆ 06:00 ಗಂಟೆಗೆ ಮತ್ತೆ ಪುನಃ ಶಬ್ದ ಕೇಳುವುದನ್ನು ಗಮನಿಸಿ ಪಿರ್ಯಾದಿದಾರರು ಜಾಗಕ್ಕೆ ಹೋದಾಗ, 1ನೇ ಆರೋಪಿಯ ಸಹಚರನಾದ 4 ನೇ ಆರೋಪಿಯು ಅಕ್ರಮವಾಗಿ ಮತ್ತೆ ಪುನಃ ಸಂಪೂರ್ಣವಾಗಿ ಬೇಲಿ ಬಂದ್‌ ಮಾಡುತ್ತಿದ್ದು, ಅದನ್ನು ತಡೆಯಲು ಹೋದ ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದು ಅಲ್ಲೇ ನಿಂತಿದ್ದ ಕೆಂಪು ಬಣ್ಣದ ಕಾರನ್ನು ಪಿರ್ಯಾದಿದಾರರ ಮೈಮೇಲೆ ಹಾಯಿಸಲು ಬಂದಾಗ ಪಿರ್ಯಾದಿದಾರರು ಕೂಗುತ್ತಾ ತಪ್ಪಿಸಿಕೊಂಡಿರುತ್ತಾರೆ. ಆರೋಪಿಗಳಾದ 5ನೇ ಸುಂದರಿ & 6ನೇ ಕುಸುಮ ರವರು ಪಿರ್ಯಾದಿದಾರರ ಕುಟುಂಬದ ಜಂಟಿ ಆಸ್ತಿಯನ್ನು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ತಮ್ಮ  ಹೆಸರಿನಲ್ಲಿ T.C ಮಾಡಿಸಿಕೊಂಡು, ಈಗ 1 ನೇ ಆರೋಪಿಗೆ ಕಾನೂನು ಬಾಹಿರವಾಗಿ PTCL  ಭೂಮಿಯನ್ನು ಮಾರಾಟ ಮಾಡಲು ಹುನ್ನಾರ  ನಡೆಸಿರುತ್ತಾರೆ. ಪಿರ್ಯಾದಿದಾರರಿಗೆ ಸೇರಿದ ಭೂಮಿಯನ್ನು ಲಪಾಟಿಯಿಸುವ ಉದ್ಧೇಶದಿಂದ ಅವರನ್ನು ಬೈದು ಹಲ್ಲೆ ಮಾಡಲೆತ್ನಿಸಿ, ಕೊಲೆ ಮಾಡಲೆತ್ನಿಸಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 56/2023 : ಕಲಂ 447, 504, 506, 307   r/w 149 IPC &  3(1)(f), 3(1)(g), 3(1)(r), 3(1)(s), 3(2)(VA) THE SC/ST (PREVENTION OF ATROCITIES ACT) AMMENDMENT ACT 2015 ರಂತೆ ಪ್ರಕರಣ ದಾಖಲಾಗಿರುತ್ತದೆ.

 

 

 

ಇತ್ತೀಚಿನ ನವೀಕರಣ​ : 21-03-2023 06:46 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080