ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಕುಮಾರ ನಾಯ್ಕ್ (32), ತಂದೆ: ಈರಪ್ಪ ನಾಯ್ಕ್, ವಾಸ: ಮನೆ ನಂಬ್ರ 40 ಬೆಸೆ, ಕೋಣಾರ ಅಂಚೆ ಮತ್ತು ಗ್ರಾಮ, ಭಟ್ಕಳ  ತಾಲೂಕು, ಉತ್ತರ ಕನ್ನಡ ಜಿಲ್ಲೆ ಇವರು ದಿನಾಂಕ 20/03/2022 ರಂದು  ಅವರ ಓಮ್ನಿ ಕಾರು ನಂಬ್ರ KA-02-AC-2294 ನೇದರಲ್ಲಿ ಕೃಷ್ಣ ರಾವ್ ಎಂಬುವವರನ್ನು ಕುಳ್ಳಿರಿಸಿಕೊಂಡು ಕೋಣಾರಿಂದ ಹೊರಟು ಬೆಳಿಗ್ಗೆ 11:00 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅರೆಹೊಳೆ ಬೈಪಾಸ್ ಬಳಿ ಹೋಗುತ್ತಿರುವಾಗ KA-13-A-0282 ನೇ ಟ್ಯಾಂಕರ ಚಾಲಕನು ಪಿರ್ಯಾದಿದಾರರ ಕಾರಿನ ಮುಂದಕ್ಕೆ ಹೋಗುತ್ತಿದ್ದವನು ಯಾವುದೇ ಸೂಚನೆ ನೀಡದೆ ಒಮ್ಮಲೇ ಅಜಾಗರೂಕತೆಯಿಂದ ರಸ್ತೆಯ ಬಲಬದಿಗೆ ಟ್ಯಾಂಕರನ್ನು ಯೂಟರ್ನ್ ಮಾಡಿದ್ದು ಪರಿಣಾಮ ಕಾರು ಪಿರ್ಯಾದಿದಾರರ ನಿಯಂತ್ರಣಕ್ಕೆ ಸಿಗದೇ ಟ್ಯಾಂಕರ್ ನ ಬಲಬದಿಯ ಡಿಸೇಲ್ ಟ್ಯಾಂಕಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಕೃಷ್ಣ ರಾವ್ ರವರಿಗೆ ತಲೆಯ ಎಡಭಾಗಕ್ಕೆ ರಕ್ತಗಾಯವಾಗಿರುತ್ತದೆ. ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯ್ರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಯ ಬಗ್ಗೆಕುಂದಾಪುರ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ. ಅಪಘಾತದಿಂದ ಕಾರಿನ ಎದುರು ಭಾಗ ಸಂಪೂರ್ಣ ಜಖಂಗೊಂಡಿರುತ್ತದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 63/2022 ಕಲಂ: 279, 337  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾದ ರೇಶ್ಮಾ (42), ಗಂಡ: ಉದಯ ಶೆಟ್ಟಿ, ವಾಸ: ಸನ್ ಶೈನ್, ಕಾರ್ಕಳರಸ್ತೆ, ಪಾದೆಬೆಟ್ಟು ಗ್ರಾಮ, ಪಡುಬಿದ್ರೆ, ಉಡುಪಿ ತಾಲೂಕು ಇವರು ದಿನಾಂಕ 20/03/2022 ರಂದು ಮದ್ಯಾಹ್ನ 3:00 ಗಂಟೆಗೆ ಮಗಳಾದ ಮನು ಶೆಟ್ಟಿಯವರೊಂದಿಗೆ ತನ್ನ KA-20-MD-1833 ನೇ ನೋಂದಣಿ ಸಂಖ್ಯೆಯ ಕಾರನ್ನು ಪಡುಬಿದ್ರೆ-ಕಾರ್ಕಳ ಹೆದ್ದಾರಿಯಲ್ಲಿ  ಕಾರ್ಕಳ ಕಡೆಗೆ ಚಲಾಯಿಸಿಕೊಂಡು ಮದ್ಯಾಹ್ನ 3:30 ಗಂಟೆಗೆ ಸಾಣೂರು ಗ್ರಾಮದ ಪರ್ಪಲೆ ಬಳಿ ಆ್ಯಂಜಲ್ ಅವೆನ್ಯು ಹೋಂ ಸ್ಟೇ ಹತ್ತಿರ ತಲುಪುವಾಗ ಕಾರ್ಕಳ ಕಡೆಯಿಂದ ಪಡುಬಿದ್ರೆ ಕಡೆಗೆ KA-20-EF-4137 ನೇ ನೋಂದಣಿ ಸಂಖ್ಯೆಯ ಮೋಟಾರ್ ಸೈಕಲ್ ಸವಾರ ದಿನೇಶ್ ಮೋಟಾರ್ ಸೈಕಲ್ ನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿಗೆ ಎದುರಿನಿಂದ ಡಿಕ್ಕಿಹೊಡೆದ ಪರಿಣಾಮ ಮೋಟಾರ್ ಸೈಕಲ್   ಸವಾರನು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು ಪಿರ್ಯಾದಿದಾರರು ಕಾರನ್ನು ರಸ್ತೆಯ ಬದಿ ನಿಲ್ಲಿಸಿ ಆತನನ್ನು ಉಪಚರಿಸಿದ್ದು ಮೋಟಾರ್ ಸೈಕಲ್  ಸವಾರ ಮಾತನಾಡುತ್ತಿರಲಿಲ್ಲ. ಈ ಅಪಘಾತದಿಂದ ಮೋಟಾರ್ ಸೈಕಲ್ ಸವಾರನ ಎಡಗಾಲು ಮುರಿತಗೊಂಡಿದ್ದು, ತಲೆಯ ಹಿಂಬದಿ ಹಾಗೂ ಹಣೆಯ ಬಳಿ ಗಾಯವಾಗಿರುತ್ತದೆ. ಹಾಗೂ ಪಿರ್ಯಾದಿದಾರರ ಬಲಗೈಗೆ ತರಚಿದ ರಕ್ತಗಾಯವಾಗಿರುತ್ತದೆ. ಬಳಿಕ ಮೋಟಾರ್ ಸೈಕಲ್  ಸವಾರನನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುತ್ತಾರೆ. ಬಳಿಕ ಪಿರ್ಯಾದಿದಾರರು ಸಿಟಿ ನರ್ಸಿಂಗ್ ಹೋಂ ನಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 38/2022 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 19/03/2022 ರಂದು ಪಿರ್ಯಾದಿದಾರರಾದ ಮಂಜೇಶ (27), ತಂದೆ: ಕುಮಾರ, ವಾಸ: ಶಾಂತಿಪಲ್ಕೆ,  ಜಾರ್ಕಳ, ಎರ್ಲಪಾಡಿ ಗ್ರಾಮ, ಕಾರ್ಕಳ ತಾಲುಕು ಇವರ ತಮ್ಮ ಸುರೇಶ (23) ರವರನ್ನು ತನ್ನ  ಮೋಟಾರು ಸೈಕಲನ್ನು KA-20-EX-0432 ನೇ ನೋಂದಣಿ ಸಂಖ್ಯೆಯ ಮೋಟಾರ್ ಸೈಕಲ್ ನಲ್ಲಿ ಸಹ ಸವಾರನಾಗಿ ಕುಳ್ಳಿರಿಸಿಕೊಂಡು ತನ್ನ ಮನೆಯಾದ ಶಾಂತಿಪಲ್ಕೆ ಜಾರ್ಕಳದಿಂದ ರಾತ್ರಿ ಹೊರಟು ಜಾರ್ಕಳ ಪೇಟೆಗೆ ಹೋಗಲು ರಾಜ್ಯ ಹೆದ್ದಾರಿಯಲ್ಲಿ ಸವಾರಿಮಾಡಿಕೊಂಡು ಹೋಗುತ್ತಾ ಕುಕ್ಕುಂದೂರು ಗ್ರಾಮದ ಜಾರ್ಕಳ ಯಲ್ಲಪ್ಪಣ್ಣನ ಅಂಗಡಿ ಬಳಿ ತಲುಪುವಾಗ ರಾತ್ರಿ 08:45 ಗಂಟೆ ಸಮಯಕ್ಕೆ ಬೈಲೂರು ಕಡೆಯಿಂದ ಕಾರ್ಕಳ ಕಡೆಗೆ ಒಂದು ಪಿಕಫ್ ವಾಹನ ಚಾಲಕನೂ ತನ್ನ ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ತೀರಾ ಬಲ ಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರು ಸೈಕಲಿಗೆ ಬಲ ಬದಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಸಹ ಸವಾರ ಸುರೇಶ ರವರು ಮೋಟಾರ್ ಸೈಕಲ್ ಸಮೇತ ರಸ್ತೆ ಬದಿಯ ಮಣ್ಣಿನ ರಸ್ತೆಗೆ ಎಡಬದಿಗೆ ಬಿದ್ದ ಪರಿಣಾಮ  ಸಹ ಸವಾರ ಸುರೇಶ ರವರ ಬಲ ಅಂಗೈ ಜಖಂಗೊಂಡು ಬಲಗೈಯ ಕೋಲು ಕೈಗೆ ರಕ್ತ ಗಾಯವಾಗಿ  ಎಡ ಪುಷ್ಠದ ಬಳಿ ತರಚಿದ ಗಾಯವಾಗಿ ಪಿರ್ಯಾದಿದಾರರಿಗೆ ಸಣ್ಣ ಪುಟ್ಟ ಗುದ್ದಿದ ಗಾಯವಾಗಿದ್ದು ಗಾಯಾಳು ಸುರೇಶರವರು ಚಿಕಿತ್ಸೆಯ ಬಗ್ಗೆ ಕಾರ್ಕಳ ಸಿಟಿ ನರ್ಸಿಂಗ್ ಹೋಮ್ ಮತ್ತು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ ಎಂ ಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅಪರಿಚಿತ ಪಿಕಫ್ ವಾಹನ ಚಾಲಕನ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಪಿರ್ಯಾದಿದಾರರ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದು  ಪರಾರಿಯಾಗಿರುತ್ತಾನೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 39/2022 ಕಲಂ: 279, 337, 338  ಐಪಿಸಿ ಮತ್ತು 134 (A&B) IMV ACT ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಕೆ ನಾಗರಾಜ ಶ್ಯಾನಭಾಗ (55), ತಂದೆ: ನರಸಿಂಹ ಶ್ಯಾನಭಾಗ, ವಾಸ: ಕೊಡೇರಿ, ಕಿರಿಮಂಜೇಶ್ವರ ಗ್ರಾಮ, ಬೈಂದೂರು ತಾಲೂಕು ಇವರು ಹಾಗೂ 2ನೇ ಆರೋಪಿ ಮೋಹನ್ ಶ್ಯಾನಭಾಗ ಇವರಿಗೂ ಆಸ್ತಿ ಪಾಲು ವಿಚಾರದಲ್ಲಿ ತಕರಾರು ನಡೆದಿದ್ದು ಆರೋಪಿ 2ನೇಯವರು ಜಾಗದಲ್ಲಿರುವ ಮರಗಳನ್ನು ಪಿರ್ಯಾದಿದಾರರಿಗೆ ತಿಳಿಸದೇ ಕಡಿದು ಮಾರಾಟ ಮಾಡುತ್ತಿದ್ದು ಪಿರ್ಯಾದಿದಾರರು ದಿನಾಂಕ 15/03/2022 ರಂದು ಜಾಗದಲ್ಲಿರುವ ಮರಗಳನ್ನು ಕಡಿಸಿ ಮಾರಾಟ ಮಾಡಿ ಬಂದ ಹಣದಿಂದ ಕಂಪೌಂಡ್ ಮಾಡಿಸಲು ಹೋದಲ್ಲಿ 2ನೇ ಆರೋಪಿ ಆಕ್ಷೇಪ ಮಾಡಿರುವ ಕಾರಣ ಪಿರ್ಯಾದಿದಾರರು ಮರಗಳನ್ನುಕಡಿಸದೇ ಹಾಗೇಯೇ ಬಿಟ್ಟು ಬಂದಿರುತ್ತಾರೆ. ನಂತರ ಪಿರ್ಯಾದಿದಾರರು ದಿನಾಂಕ 18/03/2022 ರಂದು ನಾಗೂರು ಪಂಚಾಯತ್ ಕಚೇರಿಗೆ ಹೋಗಲು ಬೈಂದೂರಿನಿಂದ ಅವರ ಮೋಟಾರು ಸೈಕಲನಲ್ಲಿ ಹೊರಟು 12:30 ಗಂಟೆಗೆ ನಾಗೂರಿನ ಮಸೀದಿ ಬಳಿ ಬಂದಾಗ 1 ನೇ ಆರೋಪಿ ಜಯರಾಮ್ ಮತ್ತು 2ನೇ ಆರೋಪಿತರು  ಪಿರ್ಯಾಧಿದಾರರನ್ನು ಹಿಂಭಾಲಿಸಿಕೊಂಡು ಹೋಗಿ  ನಾಗೂರು ಪಂಚಾಯತ್ ಕಚೇರಿ ಎದುರುಗಡೆ ಅಡ್ಡಹಾಕಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ. ನಂತರ  ಪಿರ್ಯಾದಿದಾರರು ಅವರಸರದಲ್ಲಿ ಅವರ ಮೋಟಾರು ಸೈಕಲ್ ನಲ್ಲಿ ನಾಗೂರು ರಿಕ್ಷಾ ಸ್ಟ್ಯಾಂಡ್ ಕಡೆಗೆ ಬರುತ್ತಿರುವಾಗ ಅವರ ಸ್ಯಾಮಸಾಂಗ್ ಮೊಬೈಲ್ ಹಾಗೂ ಅದಕ್ಕೆ ಅಳವಡಿಸಿದ ಏರಟೇಲ್ ಸಿಮ್ ಬಿದ್ದು ಹೋಗಿರುತ್ತದೆ.  ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 64/2022 ಕಲಂ: 341, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 21-03-2022 10:28 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080