ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

  • ಕೋಟ: ಪಿರ್ಯಾದಿ ನಾಗರಾಜ ಇವರು ಗಾರೆ ಕೆಲಸ ಮಾಡಿಕೊಂಡಿದ್ದು ನಿನ್ನೆ ದಿನಾಂಕ 20/03/2022 ರಂದು ಕೆಲಸ ಮುಗಿಸಿ ತೆಕ್ಕೆಟ್ಟೆಯ ಹೀರೆ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಲ್ಲಿ ಅಂಗಡಿಯಲ್ಲಿರುವಾಗ ಸುಮಾರು 20.00 ಗಂಟೆಯ ಸಮಯಕ್ಕೆ  ತೆಕ್ಕಟ್ಟೆ ಹೀರೆ ಮಹಾಲಿಂಗೇಶ್ವರ ದೇವಸ್ಥಾನದ ಎದುರು  ರಾ ಹೆ 66 ರಲ್ಲಿ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ KA20ERE6715 ನೇ ಮೋಟಾರು ಸೈಕಲ್ ಸವಾರ ಮಧುಸೂದನ ಐತಾಳ ಎಂಬಾತನು ತನ್ನಬಾಬ್ತು ಮೋಟಾರ್ ಸೈಕಲ ನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಪಶ್ಚಿಮ ಅಂಚಿನ ಬಳಿ ರಸ್ತೆಯನ್ನು ದಾಟಲು ನಿಂತಿದ್ದ ಪಾದಾಚಾರಿ ಪಿರ್ಯಾದಿದಾರರ ಗುರುತು ಪರಿಚಯದ ರಾಜು ಎಂಬವರಿಗೆ ಢಿಕ್ಕಿ ಹೊಡೆದನು, ಕೂಡಲೇ ಉಪಚರಿಸಿದಲ್ಲಿ ತಲೆಗೆ ತೀವೃ ಸ್ವರೂಪದ ಗಾಯವಾಗಿದ್ದು ಮಾತನಾಡುವ ಸ್ಥಿತಿಯಲ್ಲಿ ಇಲ್ಲದೇ ಇದ್ದುದರಿಂದ  ಈ ವಿಷಯವನ್ನು ರಾಜುರವರ ಅಳಿಯ ಗಣೇಶರಿಗೆ ತಿಳಿಸಿರುತ್ತಾರೆ. ರಾಜು ಪೂಜಾರಿಯವರನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ದಾಖಲಿಸಿದ್ದು  ಹಾಗೂ ಮೋಟಾರ್ ಸೈಕಲ್ ಸವಾರನಿಗೆ ತರಚಿದ ಸಣ್ಣ ಪುಟ್ಟ ಗಾಯವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 36/2022  ಕಲಂ: 279,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

  • ಕಾರ್ಕಳ : ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಅತ್ತೂರು ಚರ್ಚ್ ಬಳಿ ಇರುವ ಪಿರ್ಯಾದಿ ಜೆನ್ನಿಫರ್ ಇವರರ ಮನೆಯಲ್ಲಿ ದಿನಾಂಕ 20/03/2022 ರಂದು ರಾತ್ರಿ 11:00 ಗಂಟೆಗೆ ಪಿರ್ಯಾದಿದಾರರ ಗಂಡ ಹಾಗೂ ತಮ್ಮ ರೋನಾಲ್ಡ್ ಜಾನ್ ಡಿ ಪೌಲ್ ಮಧ್ಯಪಾನ ಮಾಡುತ್ತಿದಾಗ, ಪಿರ್ಯಾದಿದಾರರು ಅವರ ತಮ್ಮನಿಗೆ ಮನೆಗೆ ಬರಬಾರದೆಂದು ತಿಳಿಸಿದಾಗ ಆತನು “ಅವಾಚ್ಯ ಶಬ್ದಗಳಿಂದ ಬೈದು ಅಲ್ಲೇ ಪಕ್ಕದಲ್ಲಿದ್ದ ರಾಡ್ ನಿಂದ ತಲೆಗೆ ಹೊಡೆದು ಹೊರಟು ಹೋಗಿದ್ದು, ಪಿರ್ಯಾದಿದಾರರ ತಲೆಗೆ ಹೊಡೆದ  ಪರಿಣಾಮ ತಲೆಗೆ ರಕ್ತ ಗಾಯವಾಗಿದ್ದು, ನಂತರ ಪಿರ್ಯಾದುದಾರರು ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 35/2022 ಕಲಂ: 504, 324 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿ ರಿಚರ್ಡ್‌ ಡಿ ಅಲ್ಮೇಡಾ ಇವರ ಚಿಕ್ಕಪ್ಪನಾದ  ರೇಮಂಡ್ ಡಿ ಅಲ್ಮೇಡಾ , ಪ್ರಾಯ: 53 ವರ್ಷ ಎಂಬವರು ಕೂಲಿ ಕೆಲಸ ಮಾಡಿಕೊಂಡು ಅವರ ತಂದೆಯ ಮೂಲ ಮನೆಯಲ್ಲಿ ವಾಸವಾಗಿರುವುದಾಗಿದೆ. ಅವರಿಗೆ ವಿಪರೀತ ಮದ್ಯಪಾನ ಚಟ ಇದ್ದು, ಇದೇ ಕಾರಣದಿಂದ ಅವರ ಹೆಂಡತಿ ಮತ್ತು ಮಗಳು ಸುಮಾರು 15 ವರ್ಷಗಳ ಹಿಂದೆ ಅವರನ್ನು ಬಿಟ್ಟು ಬೇರೆ ಯಾಗಿರುತ್ತಾರೆ. ಇತ್ತೀಚೆಗೆ ಮದ್ಯಪಾನ ಸೇವನೇ ಜಾಸ್ತಿಯಾಗಿ ರಸ್ತೆಯಲ್ಲಿ ಹಾಗೂ ಬೇರೆ ಬೇರೆ ಕಡೆ ಮಲಗುತ್ತಿದ್ದರು. ರೇಮಂಡ್ ಡಿ ಅಲ್ಮೇಡಾ ರವರು ದಿನಾಂಕ: 20.03.2022ರಂದು ಸಂಜೆ 5:00 ಗಂಟೆಯಿಂದ ದಿನಾಂಕ 21.03.2022 ರಂದು ಬೆಳಿಗ್ಗೆ 09:30 ಗಂಟೆಯ ಮಧ್ಯಾವಧಿಯಲ್ಲಿ ಚೇರ್ಕಾಡಿ ಗ್ರಾಮದ ಇಮ್ರಗುಳಿಯ ದೇವರುಗುಂಡಿ ಎಂಬಲ್ಲಿ ವಿಪರೀತ ಮದ್ಯಪಾನ  ಮಾಡಿಯೊ ಅಥವಾ ಆಕಸ್ಮಿಕವಾಗಿ ಕಾಲುಜಾರಿ ಮಡಿ ಹೊಳೆಯ ನೀರಿನಲ್ಲಿ ಬಿದ್ದು ಮುಳಿಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 15/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಬೈಂದೂರು: ಪಿರ್ಯಾದಿ ರಾಜೀವ ರಾಮ ಗಾಣಿಗ ಇವರ ಚಿಕ್ಕಮ್ಮ  ಚಂದು ಪ್ರಾಯ :60 ವರ್ಷ ರವರು ಪಿರ್ಯಾದುದಾರರೊಂದಿಗೆ ನಂದನವನ ಗ್ರಾಮದ ಉಪ್ಪರಿಗೆ ಮನೆ ಎಂಬಲ್ಲಿ ವಾಸವಾಗಿದ್ದು ಕಳೆದ 20 ವರ್ಷಗಳಿಂದ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಮಣಿಪಾಲ ಕೆ. ಎಂ .ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ  ಮಾಡಿಸುತ್ತಿದ್ದರು. ಮೃತ ಚಂದು ರವರು ಹೃದಯ ಸಂಬಂಧಿ ಖಾಯಿಲೆಯಿಂದ ಮನನೊಂದು  ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 21-03-2022 ರಂದು  ಬೆಳಿಗ್ಗೆ  2:30  ಗಂಟೆಯಿಂದ ಬೆಳಿಗ್ಗೆ 7:00 ಗಂಟೆಯ ಮಧ್ಯಾವಧಿಯಲ್ಲಿ ತಾನು ವಾಸವಾಗಿರುವ ನಂದನವನ ಗ್ರಾಮದ ಉಪ್ಪರಿಗೆ ಮನೆಯ ಬಾವಿಗೆ ಹಾರಿ ಬಾವಿಯ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ  ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 13/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಮನುಷ್ಯ ಕಾಣೆ ಪ್ರಕರಣ

  • ಕುಂದಾಪುರ: ಪಿರ್ಯಾದಿ ಉದಯ ಇವರು ದಿನಾಂಕ: 20-03-2022 ರಾತ್ರಿ 10:15 ಮನೆಗೆ ಬಂದಿದ್ದು ಮನೆಯಲ್ಲಿ ಹೆಂಡತಿ ಶಾಲಿನಿ ಮತ್ತು ಮಗ ಉಲ್ಲಾಸ ಮಲಕೊಂಡಿದ್ದು ಪಿರ್ಯಾದಿದಾರರು ಅವರನ್ನು ಎಚ್ಚರಿಸದೆ ಅವರು ಊಟ ಮಾಡಿಕೊಂಡು ಮಲಗಿದ್ದು ಪ್ರತಿ ದಿನ ಬೆಳಿಗ್ಗೆ 05:30 ಗಂಟೆಗೆ ಎಚ್ಚರವಾಗಿ ನೋಡುವಾಗ ಹೆಂಡತಿ ಮಗ ಮಲಗಿದಲ್ಲಿ ಕಾಣದೇ ಇದ್ದು ನೆರೆಕರೆ ಹಾಗೂ ಇತರ ಕಡೆಗಳಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ  ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 13/2022 ಕಲಂ: ಹೆಂಗಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 21-03-2022 06:18 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080