ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

 • ಬ್ರಹ್ಮಾವರ : ದಿನಾಂಕ: 13/03/2021 ರಂದು ರಾತ್ರಿ ಫಿರ್ಯಾದಿ ಸುನೀಲ್‌‌ ನಾಯ್ಕ ಇವರ ಹೆಂಡತಿ ಮನೆ ಪೇತ್ರಿ ಹುತ್ತಿ ಸಮೀಪ  ರಘು ಶೆಟ್ಟಿ ಎಂಬವರ ಮನೆಯಲ್ಲಿ ಕೋಲವಿದ್ದು  ಕೋಲ ನೋಡಲು ಹೋಗುವಾಗ  ಫಿರ್ಯಾದಿದಾರರ ಸಂಬಂಧಿ ರಾಮನಾಯ್ಕ್‌‌ ಸಿಕ್ಕಿದ್ದು  ಅವರ ಒಟ್ಟಿಗೆ  ರಾತ್ರಿ ಪೇತ್ರಿ  ಬ್ರಹ್ಮಾವರ ಮುಖ್ಯ ರಸ್ತೆ ಪಕ್ಕದಲ್ಲಿರುವ  ಕುಬೇರ ಹೋಟೇಲ್‌ಗೆ  ಬಂದು ವಾಪಾಸ್ಸು ಕೋಲ ಮನೆಗೆ  ಹೋಗಲು ರಾಮನಾಯ್ಕ್‌ ನನ್ನುಮೊದಲು ಕಳುಹಿಸಿ  ಹತ್ತಿರದ ಅಂಗಡಿಯಿಂದ ಹೊರಡುವಾಗ  ರಾಮನಾಯ್ಕ್‌‌ ರವರು ಮುಖ್ಯ ರಸ್ತೆಯನ್ನು ದಾಟಿದ್ದು ಫಿರ್ಯಾದಿದಾರರು  ಮುಖ್ಯ ರಸ್ತೆಯನ್ನು ದಾಟಲು  ಕುಬೇರ ಹೋಟೆಲ್‌‌ ಎದುರು ರಸ್ತೆಯ ಅಂಚಿನ ಬಳಿ ತಲುಪುವಾಗ ಪೇತ್ರಿ ಕಡೆಯಿಂದ  ಬ್ರಹ್ಮಾವರ ಕಡೆಗೆ  ಯಾವುದೋ ಒಂದು ವಾಹನವನ್ನು  ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ  ಫಿರ್ಯಾದಿದರರ ಬಲ ತೋಳಿಗೆ  ಹಾಗೂ ತೆಲೆಗೆ ರಕ್ತಗಾಯ ಉಂಟಾಗಿ ಮೂರ್ಚೆ ಬಂದಂತಾಗಿದ್ದು ಅಗ ಸಮಯ ಸುಮಾರು  ರಾತ್ರಿ 12:00 ಗಂಟೆ ಆಗಬಹುದು  ಬಳಿಕ ಫಿರ್ಯಾದಿದಾರರನ್ನು  ದಾರಿಯಲ್ಲಿ ಹೋಗುತ್ತಿದ್ದ ಯಾರೋ ಚಿಕಿತ್ಸೆಯ ಬಗ್ಗೆ ಬ್ರಹ್ಮಾವರ ಮಹೇಶ ಆಸ್ಪತ್ರೆಗೆ  ದಾಖಲಿಸಿದ ಬಗ್ಗೆ ಅನಂತರ ಫಿರ್ಯಾದಿದಾರರಿಗೆ ತಿಳಿದಿರುತ್ತದೆ. ಅಲ್ಲದೇ  ಫಿರ್ಯಾದಿದಾರರು ರಕ್ತ ಗಾಯಗೊಂಡು ರಸ್ತೆಯಲ್ಲಿ ಬಿದ್ದದ್ದ ಬಗ್ಗೆ ಹಾಗೂ ಚಿಕಿತ್ಸೆಗೆ ಕರೆದು ಕೊಂಡು ಹೋದ ಬಗ್ಗೆ ನಾಗರಾಜ ಎಂಬವರು ಫಿರ್ಯಾದಿದಾರರ ಹೆಂಡತಿಯ ಮೊಬೈಲ್‌‌ಗೆ ಪೋನ್‌ಮಾಡಿ ತಿಳಿಸಿದ ವಿಚಾರ ಚಿಕಿತ್ಸೆಯಿಂದ ಚೇತರಿಸಿಕೊಂಡ ನಂತರ ತಿಳಿಯಿತು  ದಿನಾಂಕ: 14/03/2021 ರಂದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿ ಆದರ್ಶ್‌ ಆಸ್ಪತ್ರೆಗೆ ದಾಖಲಿಸಿದ್ದು  ಪಿರ್ಯಾದಿದಾರರಿಗೆ ತಲೆಗೆ ಪೆಟ್ಟಾದ ಕಾರಣ ಗಾಯ ಹೇಗೆ ಆಗಿದೆ  ಎಂದು ನೆನಪಿಗೆ  ಬಾರಾದ ಕಾರಣ ಮನೆಯವರು  ವೈದ್ಯರಲ್ಲಿ ಬಿದ್ದು ಗಾಯವಾದ ಬಗ್ಗೆ  ತಿಳಿಸಿರುತ್ತಾರೆ. ಆನಂತರ ದಿನಾಂಕ: 17-03-2021 ರಂದು  ಫಿರ್ಯಾದಿದಾರರು ವೈದ್ಯರಲ್ಲಿ ರಸ್ತೆಯ ಅಪಘಾತದಿಂದ ರಕ್ತ ಗಾಯ ಎಂದು ತಿಳಿಸಿರುತ್ತಾರೆ.  ದಿನಾಂಕ:18-03-2021 ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಯಲ್ಲಿಇದ್ದು ಫಿರ್ಯಾದಿದಾರರಿಗೆ ಅಪಘಾತದ ಬಗ್ಗೆ ನೆನಪು ಬಂದಿದ್ದು  ಅಲ್ಲದೇ ಈ ಅಪಘಾತವಾದ ಬಗ್ಗೆ ಇದು ವರೆಗೆ  ದೂರು ದಾಖಲಾಗದೇ ಇರುವ ಬಗ್ಗೆ  ಈ ದಿನ ದೂರು ನೀಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 43/2021 ಕಲಂ 279, 338 IPC & ಸೆಕ್ಷನ್‌‌ 134(A)(B) R/W 187 IMV Act ನಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ದಿನಾಂಕ 20/03/2021 ರಂದು ಬೆಳಿಗ್ಗೆ  ಸುಮಾರು 9:20  ಗಂಟೆಗೆ, ಕುಂದಾಪುರ  ತಾಲೂಕಿನ, ಕಸಬಾ ಗ್ರಾಮದ  ಶಾಸ್ತ್ರಿಸರ್ಕಲ್‌‌ ಬಳಿ NH 66  ರಸ್ತೆಯಲ್ಲಿ,  ಆಪಾದಿತ ಕೆ. ನಿತ್ಯಾನಂದ ಎಂಬವರು KA51-C-1454ನೇ ಬಸ್‌‌‌ ನ್ನು ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ  ಹಾಗೂ  ನಿರ್ಲಕ್ಷ್ಯತನದಿಂದ ಚಾಲನೆ  ಮಾಡಿಕೊಂಡು  ಬಂದು, NH 66  FLY OVER  ನ ಅಂಡಾರ್‌  ಪಾಸ್‌  ಮುಖೇನ NH 66  ರಸ್ತೆಗೆ ತಿರುಗಿಸಿ,   ಕೋಡಿ  ಕನ್ಯಾನದಿಂದ ಕುಂದಾಪುರ ಕಡೆಗೆ ಪಿರ್ಯಾದಿದಾರರಾದ ರವಿ ಕುಂದರ್‌  KA20ES-2830  Suzuki Access ಸ್ಕೂಟರ್‌ ನಲ್ಲಿ   ಚೈತನ್ಯಳನ್ನು ಸಹ  ಸವಾರಳಾಗಿ ಕುಳ್ಳಿರಿಸಿಕೊಂಡು NH 66  ರಸ್ತೆಯಲ್ಲಿ ಸವಾರಿ  ಮಾಡಿಕೊಂಡು ಬರುತ್ತಿದ್ದ ಸದ್ರಿ ಸ್ಕೂಟರ್‌ ಗೆ  ಅಡ್ಡವಾಗಿ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರಾದ ರವಿ ಕುಂದರ್‌ ಹಾಗೂ ಚೈತನ್ಯಳು ಗಾಯಗೊಂಡು  ಕುಂದಾಪುರ ಚಿನ್ಮಯಿ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 36/2021 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಹೆಬ್ರಿ: ದಿನಾಂಕ: 19/03/2021 ರಂದು ಸಂತೋಷ್ ಇವರು ತನ್ನ ಬಾಬ್ತು ಸೈಕಲ್ ನಲ್ಲಿ ಮುನಿಯಲ್ – ವರಂಗ ರಸ್ತೆಯಲ್ಲಿ ಮುನಿಯಲ್ ಕಡೆಯಿಂದ ವರಂಗ ಕಡೆಗೆ ಚಲಾಯಿಸಿಕೊಂಡು ಸಮಯ ಸುಮಾರು ಸಂಜೆ 4-45 ಗಂಟೆಗೆ ವರಂಗ ಗ್ರಾಮದ ಮಾತಿಬೆಟ್ಟು ಪೆಟ್ರೋಲ್  ಬಂಕ್ ನ ಎದುರುಗಡೆ ರಸ್ತೆ ತಲುಪಿದಾಗ ಅವರ ಹಿಂದುಗಡೆಯಿಂದ ಅಂದರೆ ಮುನಿಯಲ್ ಕಡೆಯಿಂದ ವರಂಗ ಕಡೆಗೆ KA.19.MD.0678 ನೇ ಓಮ್ನಿ ಕಾರನ್ನು ಅದರ ಚಾಲಕ ಪಿ.ಕೆ ದಾಸನ್ ಎಂಬವರು ಕಾರನ್ನು ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಸಂತೋಷ್ ಇವರು ಚಲಾಯಿಸುತ್ತಿದ್ದ ಸೈಕಲ್ ಗೆ ಹಿಂದುಗಡೆಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಸೈಕಲ್ ಸಮೇತ ರಸ್ತೆಗೆ ಬಿದ್ದು ಅವರ ತಲೆಯ ಹಿಂಬದಿಗೆ ತೀವ್ರ ಸ್ವರೂಪದ ಗಾಯವಾಗಿರುವುದಾಗಿಯೂ ಗಾಯಾಳು ಪ್ರಸ್ತುತ ಮಣಿಪಾಲ ಕೆ.ಎಂ.ಸಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 15/2021 ಕಲಂ:,279,337,338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಪಡುಬಿದ್ರಿ: ದಿನಾಂಕ: 20.03.2021 ರಂದು ಮಧ್ಯಾಹ್ನ 13:15 ಗಂಟೆಯ ವೇಳೆಗೆ ಪಿರ್ಯಾದಿ ಅನಿಲ್ ಪಾಲನ್ ಇವರು KA 19 EG 3266  ನೇ ನಂಬ್ರದ ಹಿರೋ ಸ್ಪ್ಲಂಡರ್  ನಲ್ಲಿ ಉಮೇಶ್ ರೇ  ಎಂಬುವರನ್ನು ಸಹ ಸವಾರರನ್ನಾಗಿ ಹಿಂದುಗಡೆ ಕುಳ್ಳಿರಿಸಿಕೊಂಡು ಅಡ್ವೆಯಿಂದ ಪಲಿಮಾರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ, ಕಾಪು ತಾಲೂಕು ನಂದಿಕೂರು ಗ್ರಾಮದ  ನವಯುಗ ಕಂಪೆನಿಗೆ ಸೇರಿದ ಪ್ಲಾಂಟೆಕ್‌ ಕಂಪೆನಿಯ ಬಳಿ  ತಲುಪುತ್ತಿದಾಗ ಪಲಿಮಾರು ಕಡೆಗೆ ಹೋಗುತ್ತಿದ್ದ  KA 19 AD 2160  ನೇ ನಂಬ್ರದ ಟಿಪ್ಪರ್ ಲಾರಿ ಚಾಲಕ ಅಬ್ದುಲ್ ರಜಾಕ್   ಎಂಬುವರು ಟಿಪ್ಪರ್‌ ನ್ನು ನಿಧಾನಿಸಿ ನಂತರ ಒಮ್ಮೇಲೇ ಬಲಕ್ಕೆ ನಿರ್ಲಕ್ಷವಾಗಿ ಬಲಕ್ಕೆ  ಚಲಾಯಿಸಲು ತಿರುಗಿಸಿ ಪಿರ್ಯಾದಿದಾರರ ಮೋಟಾರ್ ಸೈಕಲ್‌ ಗೆ  ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಸಹಸವಾರ ಮೋಟಾರ್  ಸೈಕಲ್ ನೊಂದಿಗೆ ಕೆಳಗೆ ಬಿದ್ದು ಪಿರ್ಯಾದಿದಾರರ ಎಡಕೈ ಭುಜಕ್ಕೆ, ಎಡಕೈಗೆ, ಕಾಲಿಗೆ, ರಕ್ತಗಾಯ ಹಾಗೂ ಎಡ ಭುಜಕ್ಕೆ ಒಳ ಜಖಂ ಆಗಿರುತ್ತದೆ. ಅಲ್ಲದೇ ಹಿಂಬದಿ ಸವಾರರ ಎಡಕೈ ಭುಜಕ್ಕೆ, ಎಡ ಕೋಲು ಕಾಲಿಗೆ, ಎಡ ಭಾಗದ ಬೆರಳಿಗೆಮೂಳೆ ಮುರಿತದ ಒಳಜಖಂ  ಉಂಟಾಗಿದ್ದು ಉಮೇಶ್ ರೇ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಪಡುಬಿದ್ರಿ  ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 17/2021 ಕಲಂ: 279, 337, 338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಹಿರಿಯಡ್ಕ: ಫಿರ್ಯಾದಿ ಎಸ್.ಕೆ. ವಿಜಯ ಕುಮಾರ್ ಇವರು ಮಣಿಪಾಲದ ವರುಣ್ ಪೈಪಿಂಗ್ ಸಿಸ್ಟಮ್ ಪಿವಿಸಿ ಪೈಪ್ ಕಂಪನಿಯಲ್ಲಿ ಚಾಲಕನಾಗಿ ದುಡಿಯುತ್ತಿದ್ದು, ದಿನಾಂಕ: 20/03/2021 ರಂದು ಬೆಳಿಗ್ಗೆ 11:30 ಗಂಟೆಗೆ ಕಂಪನಿಯ ಬಾಬ್ತು ಕೆಎ 20 ಎಬಿ 1595 SML ವಾಹನದಲ್ಲಿ ಪಿವಿಸಿ ಪೈಪ್ ಗಳನ್ನು ಲೋಡ್ ಮಾಡಿ ಕಂಡಕ್ಟರ್ ರಾಮಕೃಷ್ಣ ಎಂಬವರೊಂದಿಗೆ  ತೀರ್ಥಹಳ್ಳಿಗೆ ಹೋಗಿ ಅಲ್ಲಿ ಅಂಗಡಿಯೊಂದರಲ್ಲಿ ಅನ್ ಲೋಡ್ ಮಾಡಿ ವಾಪಾಸ್ಸು ಮಣಿಪಾಲಕ್ಕೆ ರಾಹೆ 169 ಎ ರಲ್ಲಿ ವಾಪಾಸ್ಸು ಬರುತ್ತಿದ್ದು, ಸಂಜೆ ಸುಮಾರು 6:40 ಗಂಟೆಯ ಸಮಯಕ್ಕೆ ಪಕ್ಕಾಲು  ಕಲ್ಲಂಗಲ ಕ್ರಾಸ್ ಬಳಿ  ಬರುತ್ತಿದ್ದಾಗ ಹಿರಿಯಡ್ಕ ಕಡೆಯಿಂದ ಪೆರ್ಡೂರು ಕಡೆಗೆ ಕಾರು ನಂಬ್ರ ಕೆಎ 14 ಬಿ 5959 ನೇದನ್ನು ಅದರ ಚಾಲಕ ಆಶೀರ್ವಾದಂ ರಾಜೇಶ್ ಎಂಬವರು ಇನ್ನೊಂದು ವಾಹನವನ್ನು ಹಿಂದಿಕ್ಕುವ ಭರದಲ್ಲಿ ರಸ್ತೆಯ ತೀರಾ ಬಲಭಾಗಕ್ಕೆ ಬಂದು ಫಿರ್ಯಾದಿದರರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳು ಜಖಂಗೊಂಡಿದ್ದು,  ಯಾರಿಗೂ ಪೆಟ್ಟಾಗಿರುವುದಿಲ್ಲ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 12/2021   ಕಲಂ: 279  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾಪು: ಪಿರ್ಯಾದಿ ಮಕಳಪ್ಪ ಕೆಂದೂರು ಇವರು ದಿನಾಂಕ 20/03/2021 ರಂದು  ತನ್ನ  ಪರಿಚಯದ ವಿಜಯ ಅಂಟೋನಿ ಡಿಸೋಜ ರೊಂದಿಗೆ ಉಡುಪಿ ಕಡೆಯಲ್ಲಿ ಕೆಲಸ ಮುಗಿಸಿ,  ಪಿರ್ಯಾದಿದಾರರು ಅವರ ಮೋಟಾರ್‌ಸೈಕಲ್‌ ನಲ್ಲಿ, ವಿಜಯ ಅಂಟೋನಿ ಡಿಸೋಜರವರು ಅವರ ಬಾಬ್ತು KA19EE6040 ಮೋಟಾರು ಸೈಕಲ್‌ನಲ್ಲಿ ಉಡುಪಿ ಮಂಗಳೂರು ರಾ ಹೆ 66 ರಲ್ಲಿ ಮಂಗಳೂರು ಕಡೆಗೆ ಹೊರಟಿದ್ದು, ಸಮಯ ಸುಮಾರು ಬೆಳಗ್ಗೆ 10.00 ಗಂಟೆಯ ಸುಮಾರಿಗೆ ಪಾಂಗಾಳ ಬರೋಡಾ ಬ್ಯಾಂಕ ಹತ್ತಿರ ತಲುಪುತ್ತಿದ್ದಂತೆ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹಿದಾಯುತುಲ್ಲಾ ಎಂಬವರು  ತನ್ನ ಬಾಬ್ತು KA40.2866 ಲಾರಿಯನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆ ನೀಡದೇ ಒಮ್ಮೇಲೆ ಬಲಗಡೆ ತಿರುಗಿಸಿದ ಪರಿಣಾಮ ಲಾರಿಯ ಹಿಂದಿನ ಬಲಬದಿ ಬೋಡಿ ವಿಜಯ ಅಂಟೋನಿ ಡಿಸೋಜಾ ರವರ ಮೋಟಾರು ಸೈಕಲ್‌ಗೆ ಢಿಕ್ಕಿ ಹೊಡೆದು ವಿಜಯ ಅಂಟೋನಿ ಡಿಸೋಜಾರವರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು, ಪಿರ್ಯಾದಿದಾರರು  ಕೂಡಲೇ ಅವರ ಮೋಟಾರು ಸೈಕಲ್ ನಿಲ್ಲಿಸಿ ಸಾರ್ವಜನಿಕರ ಸಹಾಯದಿಂದ ವಿಜಯ ಅಂಟೋನಿ ಡಿಸೋಜಾರವರನ್ನು ಉಪಚರಿಸಿ ನೋಡುವಾಗ ಅವರ ತಲೆಗೆ, ಬಲಕೈಯ ಮೊಣಗಂಟಿಗೆ ಗಾಯ, ಬಲಭುಜಕ್ಕೆ ತರುಚಿದ ಗಾಯ ಮತ್ತು ಒಳ ಜಖಂ ಆಗಿದ್ದು, ಎಡಕಣ್ಣಿಗೆ ಗುದ್ದಿದ ಗಾಯ ಕೈ ಬೆರಳಿಗೆ ತರುಚಿದ ಗಾಯಗಳಾಗಿದ್ದು, ಪಿರ್ಯಾದಿದಾರರು ಕೂಡಲೇ ಚಿಕಿತ್ಸೆಯ ಬಗ್ಗೆ ಒಂದು ವಾಹನದಲ್ಲಿ ವಿಜಯ ಅಂಟೋನಿ ಡಿಸೋಜಾರವರನ್ನು ಉಡುಪಿಯ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ ಒಳರೋಗಿಯನ್ನಾಗಿ ದಾಖಲಿಸಿಕೊಂಡಿರುತ್ತಾರೆ.  ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 41/2021  ಕಲಂ 279 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಗಂಗೊಳ್ಳಿ: ದಿನಾಂಕ 20/03/2021 ರಂದು ಹೊಸಾಡು ಗ್ರಾಮದ ಅರಾಟೆ ಸೇತುವೆ ಕೆಳಗಡೆ ಹೊಳೆಯ ಬದಿಯಲ್ಲಿ ನಾಗರಾಜ ಮೊಗವೀರ ಎಂಬಾತನು ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಗಂಗೊಳ್ಳಿ ಪೊಲೀಸ್ ಠಾಣಾ ಪಿ.ಎಸ್‌.ಐ ರವರು ಠಾಣಾ ಸಿಬ್ಬಂದಿಯವರೊಂದಿಗೆ ಸದ್ರಿ ಸ್ಥಳಕ್ಕೆ ಹೋಗಿ ಮಾನ್ಯ ಕುಂದಾಪುರ ತಾಲೂಕು ದಂಡಾಧಿಕಾರಿಯವರ ಹಾಗೂ ಪಂಚರ ಸಮಕ್ಷಮದಲ್ಲಿ 17:00 ಗಂಟೆಗೆ ಧಾಳಿ ನಡೆಸಿ ಆಪಾದಿತ ನಾಗರಾಜ ಮೊಗವೀರ (35ವರ್ಷ), ತಂದೆ: ದಿ ನಾಗೇಶ ಮೊಗವೀರ, ವಾಸ: ವಿಜಯ ಗೇರುಬೀಜ ಫ್ಯಾಕ್ಟರಿ ಹತ್ತಿರ, ಹರೇಗೋಡು, ಕಟ್‌ಬೆಲ್ತೂರು ಗ್ರಾಮ, ಕುಂದಾಪುರ ತಾಲೂಕು ಈತನನ್ನು ವಶಕ್ಕೆ ಪಡೆದು ಆತನಿಂದ ಅಂದಾಜು 16,500/-ರೂ ಮೌಲ್ಯದ ಒಟ್ಟು 541 ಗ್ರಾಂ, 79 ಮಿಲಿ ಗ್ರಾಂ ತೂಕದ ಗಾಂಜಾ, ಗಾಂಜಾ ಸೇದುವ ಚಿಲಂ-1, ಒಡೆದ ಶಿವಾಜಿ ಬೀಡಿ ಕಟ್ಟು-1, ಗ್ಯಾಸ್‌ ಲೈಟರ್‌ -1, ಅರ್ಧ ಉರಿದ ಕ್ಯಾಂಡಲ್ -1, ಬಟ್ಟೆಯ ಚೀಲ -1, ನೆಲದಲ್ಲಿ ಹಾಸಿದ ಪ್ಲಾಸ್ಟಿಕ್‌ -1 ಹಾಗೂ ನಗದು 1,500/-ರೂ ನ್ನು ಸ್ವಾಧೀನಪಡಿಸಿಕೊಂಡು ಪ್ರಕರಣ ದಾಖಲಿಸಲಾಯಿತು.  ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 28/2021 ಕಲಂ 8(ಸಿ), 20(ಬಿ),(ii)(ಎ) ಎನ್‌.ಡಿ.ಪಿ.ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 21-03-2021 09:42 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080