ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಶ್ರೀಮತಿ ಸರಸ್ವತಿ (44) , ಗಂಡ: ಭಾಸ್ಕರ ಬಂಗೇರ, ವಾಸ: ಸಂಜನಾ ನಿವಾಸ, ತೋಟದಬೆಟ್ಟು, ಕೊಮೆ ರಸ್ತೆ, ತೆಕ್ಕಟ್ಟೆ ಗ್ರಾಮ, ಕುಂದಾಪುರ ತಾಲೂಕು ಇವರು ದಿನಾಂಕ 20/02/2023 ರಂದು ಸಂಜೆ ಸಮಯ ದಿನಸಿ ಸಾಮಾನು ತರಲು ತೆಕ್ಕಟ್ಟೆ ಪೇಟೆಗೆ ಬಂದಿದ್ದು, ಸಂಜೆ 7:20 ಗಂಟೆಗೆ ಪಿರ್ಯಾದಿದಾರರ ತಾಯಿಯ ತಮ್ಮ  ಅಶೋಕ್‌ ಮೊಗವೀರ ಇವರು ಗಣೇಶ್‌ ಕ್ಲೋತ್‌ ಸ್ಟೋರ್ಸ್‌ ಎದುರು ರಾಷ್ಟ್ರೀಯ ಹೆದ್ದಾರಿ . 66 ಉಡುಪಿ - ಕುಂದಾಪುರ ಮುಖ್ಯರಸ್ತೆಯ ಪೂರ್ವ ಪಥವನ್ನು ಹಾಗೂ ಡಿವೈಡರ್‌ ಅನ್ನು ದಾಟಿ ಪಶ್ಚಿಮ ಪಥವನ್ನು ದಾಟುತ್ತಿರುವಾಗ ಉಡುಪಿ ಕಡೆಯಿಂದ ಬಿಳಿ ಬಣ್ಣದ ನಂಬ್ರ KA-20-D-8919 ನೇ ಸ್ವಿಫ್ಟ್‌ಡಿಸೈ ರ್‌ಕಾರನ್ನು ಅದರ ಚಾಲಕ ಚಂದ್ರಶೇಖರ ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ತನ್ನ ಬಲಭಾಗಕ್ಕೆ ಚಲಾಯಿಸಿಕೊಂಡು ಬಂದು, ರಸ್ತೆ ದಾಟುತ್ತಿದ್ದ ಪಾದಾಚಾರಿ ಅಶೋಕ್‌ ಮೊಗವೀರ ರವರಿಗೆ ಢಿಕ್ಕಿ ಹೊಡೆದಿದ್ದು, ಢಿಕ್ಕಿಯ ರಭಸಕ್ಕೆ ಪಾದಾಚಾರಿಯು ಸ್ವಲ್ಪ ದೂರಕ್ಕೆ ಚಿಮ್ಮಿ ರಸ್ತೆಯಲ್ಲಿ ಬಿದ್ದ ಪರಿಣಾಮ  ತಲೆಗೆ ತೀವ್ರ ತರದ ರಕ್ತಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ ಸಾಗಿಸುವ ಮಧ್ಯಾವಧಿಯಲ್ಲಿ ಮೃತಪಟ್ಟಿರುತ್ತಾರೆ.  ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 26/2023  ಕಲಂ: 279, 304 (A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಪಿರ್ಯಾದಿದಾರರಾದ ವಿಶ್ವಾಸ್ ರಾವ್ (43) , ತಂದೆ: ಹರೀಶ್  ಕುಮಾರ್,  ವಾಸ: “ಶಬರಿ”  6-7-81-A ಒಳಕಾಡು ಉಡುಪಿ ಚಿಟ್ಟಾಡಿ  ಉಡುಪಿ ತಾಲೂಕು  ಇವರು ದಿನಾಂಕ 20/02/2023 ರಂದು ಬೆಳಿಗ್ಗೆ  09:20 ಗಂಟೆಗೆ ಕೆಲಸದ ನಿಮಿತ್ತ ಅಲೆವೂರು ಗ್ರಾಮದ ರಾಂಪುರ ಜಂಕ್ಷನ್ ನಲ್ಲಿ ನಿಂತಿರುವಾಗ HMT ಹೆಸರಿನ KA-20-C-3609 ನೇ ಬಸ್ಸಿನ ಚಾಲಕ ಕಾಗನೂರು ಭರ್ಮಪ್ಪ  ಬಸ್ಸನ್ನು  ಉಡುಪಿ ಕಡೆಯಿಂದ  ದೆಂದೂರು ಕಟ್ಟೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದು ರಾಂಪೂರ ಜಂಕ್ಷನ್ ನಲ್ಲಿ  ಬಸ್ಸನ್ನು ನಿಲ್ಲಿಸಿದ್ದು  ಆಗ ಮಾಲಿನಿ ಎಂ ರಾವ್ (68) ರವರು ಸದ್ರಿ ಬಸ್ಸನ್ನು ಮುಂಬಾಗಿಲಿನಿಂದ ಹತ್ತಿದ್ದು ಆ  ಸಮಯ  ಬಸ್ಸಿನ ನಿರ್ವಾಹಕ ಬಸ್ಸನ್ನು ಹೊರಡಲು ಸೂಚನೆ ನೀಡದಿದ್ದರು ಸಹ ಬಸ್ಸ್ ನ ಚಾಲಕ ಒಮ್ಮೇಲೆ ಬಸ್ಸನ್ನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಮುಂದಕ್ಕೆ  ಚಲಾಯಿಸಿದ್ದು  ಆ ಸಮಯದಲ್ಲಿ ಮಾಲಿನಿ ಎಂ ರಾವ್ ರವರು ಆಯತಪ್ಪಿ ಬಸ್ಸಿನ  ಮುಂಬಾಗಿಲಿನಿಂದ ಕೆಳಗೆ ಬಿದ್ದ ಪರಿಣಾಮ ತಲೆಗೆ ತೀವ್ರ  ಗಾಯವಾಗಿರುತ್ತದೆ. ಕೂಡಲೇ ಪಿರ್ಯಾದಿದಾರರು ಮತ್ತು  ಅಲ್ಲಿದ್ದ ಸಾರ್ವಜನಿಕರು  ಉಪಚರಿಸಿದ್ದು ಮಾಲತಿಯವರು  ಮಾತನಾಡುತ್ತಿರಲಿಲ್ಲ  ನಂತರ ಅವರನ್ನು ಒಂದು ರಿಕ್ಷಾದಲ್ಲಿ ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.  ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 30/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಶಿರ್ವಾ: ಪಿರ್ಯಾದಿದಾರರಾದ ಗ್ಲ್ಯಾಡ್ಸನ್‌ ಸೈಮನ್‌ಅಂದ್ರಾದೆ  (32), ತಂದೆ: ಮಾರ್ಷಲ್‌ರಿಚರ್ಡ್‌ ಅಂದ್ರಾದೆ , ವಾಸ: ಮನೆ ನಂ 2/133 ಬಿ, ಕಣಜಾರು  ಚರ್ಚ್‌ ಬಳಿ ಕಣಜಾರು  ಅಂಚೆ, ಕಾರ್ಕಳ ತಾಲೂಕು ಉಡುಪಿ ಜಿಲ್ಲೆ ಇವರ ತಂದೆ  ಮಾರ್ಷಲ್‌ ರಿಚರ್ಡ್‌ ಅಂದ್ರಾದೆ (64) ರವರು ವಿಪರೀತ ಮದ್ಯಪಾನ ಮಾಡುವ ಮತ್ತು ಮಧುಮೇಹ ಖಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದರು.,ಅವರು  ಕಟ್ಟಿಂಗೇರಿ  ಗ್ರಾಮದ  ನಾಲ್ಕು ಬೀದಿ ಎಂಬಲ್ಲಿ ಸನ್‌ಶೈನ್‌ ಅಪಾರ್ಟ್‌ಮೆಂಟ್‌ ರೂಂ. ನಂಬ್ರ  103  ರಲ್ಲಿ  ಒಬ್ಬರೇ ವಾಸವಾಗಿದ್ದರು. ದಿನಾಂಕ  19/02/2023  ರಂದು  ಪಿರ್ಯಾದಿದಾರರ ಪರಿಚಯದವರಾದ ರುಡಾಲ್ಫ್‌ರವರು  ಸಂಜೆ  7:30  ಗಂಟೆಗೆ ಕರೆ  ಮಾಡಿ  ನಿಮ್ಮ  ತಂದೆಯವರು ಮಲಗಿದಲ್ಲಿಯೇ  ಇದ್ದು,  ಯಾವುದೇ ಪ್ರತಿಕ್ರಿಯಯನ್ನು ನೀಡುವುದಿಲ್ಲ ಎಂದು ತಿಳಿಸಿದಂತೆ   ಸನ್‌ಶೈನ್‌ ಅಪಾರ್ಟ್‌ಮೆಂಟ್‌ಗೆ ಬಂದು ನೋಡಿದಾಗ   ರೂಮ್‌ನೊಳಗೆ  ಮಂಚದಲ್ಲಿ  ಮಲಗಿದ ಸ್ಥಿತಿಯಲ್ಲಿಯೇ  ಇದ್ದು, ಮಾತನಾಡುತ್ತಿರಲಿಲ್ಲ. ಪಿರ್ಯಾದಿದಾರರು  ಕೂಡಲೇ ಆಂಬ್ಯುಲೆನ್ಸ್‌ನಲ್ಲಿ  ಉಡುಪಿ ಜಿಲ್ಲಾ ಸರಕಾರಿ  ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ  ವೈದ್ಯಾಧಿಕಾರಿಯವರು  ರಾತ್ರಿ 10:30  ಗಂಟೆಗೆ ಪರೀಕ್ಷಿಸಿ  ಮೃತ  ಪಟ್ಟಿರುವುದಾಗಿ ತಿಳಿಸಿರುತ್ತಾರೆ.  ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 04/2023 ಕಲಂ: 174  CRPC ಯಂತೆ ಪ್ರಕರಣ ದಾಖಲಾಗಿರುತದೆ.
  • ಪಡುಬಿದ್ರಿ: ಪಿರ್ಯಾದಿದಾರರಾದ ಸತೀಶ್ (27), ತಂದೆ: ಶಂಕರ, ವಾಸ: ರೈಲ್ವೆ ಬ್ರಿಡ್ಜ್ ಹತ್ತಿರ,ಪಡುಬಿದ್ರಿ ಅಂಚೆ, ಪಾದೆಬೆಟ್ಟು  ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರ ಚಿಕ್ಕಮ್ಮ ವಸಂತಿ(52) ಎಂಬುವವರು ಮಗಳು ಜಯಶ್ರೀ, ಅಕ್ಕ ಗಿರಿಜಾ, ಅವರ  ಗಂಡ ಗೋಪಾಲ ಮಕ್ಕಳಾದ ನಳಿನಾಕ್ಷಿ ಮತ್ತು  ಸುವಿತ್ ಜೊತೆ ಸಾಂತೂರಿನಲ್ಲಿ ವಾಸಮಾಡಿಕೊಂಡಿದ್ದು,ಬುಟ್ಟಿ ಹೆಣೆಯುವ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ 19/02/2023 ರಂದು 19:25 ಗಂಟೆಗೆ ಸಾಂತೂರಿನಲ್ಲಿ ಮೊಬೈಲ್ ನೋಡುತ್ತಿದ್ದಾಗ, ಆಕಸ್ಮಿಕವಾಗಿ ಕುಳಿತಲ್ಲೆ ಅಡ್ಡಬಿದ್ದು ಮಾತಾನಾಡುತ್ತಿರಲಿಲ್ಲ. ಕೂಡಲೇ ಒಂದು ಅಂಬುಲೇನ್ಸ್ ನಲ್ಲಿ ಪಿರ್ಯಾದಿದಾರರು, ಅಜ್ಜಿ ಮುಟ್ಟಿಯವರು  ಹಾಗೂ ಜಯಶ್ರೀರವರ ಜೊತೆ ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಆಸ್ಪತ್ರೆಗೆ 21:25 ಗಂಟೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ವಸಂತಿಯು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ವಸಂತಿಯವರಿಗೆ ಹೃದಯ ಸಂಬಂಧಿ ಖಾಯಿಲೆ ಇದ್ದು,  ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ  ಚಿಕಿತ್ಸೆ  ಪಡೆಯುತ್ತಿದ್ದರು. ವಸಂತಿಯವರು ಹೃದಯ ಸಂಬಂಧಿ ಖಾಯಿಲೆಯಿಂದ ತೀವೃ ಅಸ್ವಸ್ಥಗೊಂಡು  ದಿನಾಂಕ 19/02/2023 ರಂದು 19:25 ಗಂಟೆಯಿಂದ 21:25 ಗಂಟೆಯ ಮಧ್ಯಾವಧಿಯಲ್ಲಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 04/2023, ಕಲಂ:  174 CRPC ಯಂತೆ ಪ್ರಕರಣ ದಾಖಲಾಗಿರುತದೆ.
     

ಇತ್ತೀಚಿನ ನವೀಕರಣ​ : 21-02-2023 10:08 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080