ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಉಡುಪಿ: ಪಿರ್ಯಾದಿದಾರರಾದ ಎಮ್.ರಘುವೀರ್ (57) ತಂದೆ: ಜಿ. ಗೋವಿಂದ, ವಾಸ: ಪ್ರೇರಣ ನಿಲಯ,ಗರಡಿ ಲಕ್ಮೀ ನಗರ ಪುತ್ತೂರು ಗ್ರಾಮ, ಉಡುಪಿ ತಾಲೂಕು ಮತ್ತು ಉಡುಪಿ ಇವರು ದಿನಾಂಕ 19/02/2023 ರಂದು ತನ್ನ KA-20 L-1132 ನೇ ಮೋಟಾರು ಸೈಕಲ್ ನಲ್ಲಿ ಸಂತೆಕಟ್ಟೆಗೆ ಹೋಗಿ ವಾಪಾಸು ಮನೆ ಕಡೆಗೆ ಬರುತ್ತಿರುವಾಗ ಸಮಯ ಸುಮಾರು ಸಂಜೆ 4:15 ಗಂಟೆಗೆ ಪುತ್ತೂರು ಗ್ರಾಮದ ಗೋಪಾಲಪುರ 4ನೇ ಅಡ್ಡರಸ್ತೆಯ ಬಳಿ ಇರುವ ಅನುಗ್ರಹ ಮನೆಯ ಬಳಿ ತಲುಪುವಾಗ ಗೋಪಾಲಪುರ ಕಾಲನಿ ಕಡೆಯಿಂದ ಸಂತೆಕಟ್ಟೆ- ಮಲ್ಪೆ ಮುಖ್ಯ ರಸ್ತೆಗೆ ಕಡೆಗೆ KA-30 M-7851ನೇ ಕಾರು ಚಾಲಕ ಶೌಕತ್ ಆಲಿ ಎಂಬಾತನು ತಾನು ಚಲಾಯಿಸುತ್ತಿದ್ದ ಕಾರನ್ನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಎಮ್.ರಘುವೀರ್ ರವರು ಸವಾರಿ ಮಾಡಿಕೊಂಡು ಬರುತ್ತಿದ್ದ ಮೋಟಾರ್‌ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಎಮ್.ರಘುವೀರ್ ರವರು ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದು, ಎಡ ಕಣ್ಣಿನ ಬಳಿ,ಬಲಕಾಲಿನ ಮೊಣಗಂಟಿಗೆ ಬಳಿ ರಕ್ತಗಾಯವಾಗಿ ಉಡುಪಿ ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಅಪಘಾತಕ್ಕೆ ಕಾರು ಚಾಲಕ ಶೌಕತ್ ಆಲಿಯವರ ದುಡುಕುತನ ಮತ್ತು ನಿರ್ಲಕ್ಷ್ಯತನದ ಚಾಲನೆಯೇ ಕಾರಣವಾಗಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 17/2023 ಕಲಂ: 279, 337, ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಫುರ: ದಿನಾಂಕ 21/02/2023  ರಂದು  00:10 ಗಂಟೆಗೆ ಕುಂದಾಪುರ ತಾಲೂಕು, ಕಟ್‌ಬೇಲ್ತೂರು  ಗ್ರಾಮದ ಶ್ರೀ ಭದ್ರ ಮಹಾಕಾಳಿ ದೇವಸ್ಥಾನದ ಹತ್ತಿರ  ಚಂದ್ರ ಶೆಟ್ಟಿಯವರ ಮನೆಯ ಬಳಿ  ರಸ್ತೆಯಲ್ಲಿ, ಆಪಾದಿತ ಸತೀಶ  ಎಂಬವರು KA-20 EB-1025ನೇ ಬೈಕಿನಲ್ಲಿ ನಿತೀಶ್‌ಎಂಬವರನ್ನು ಸಹ ಸವಾರನಾಗಿ ಕುಳ್ಳಿರಿಸಿಕೊಂಡು ಶ್ರೀ ಭದ್ರ ಮಹಾಕಾಳಿ ದೇವಸ್ಥಾನದ ಕಡೆಯಿಂದ ಕಟ್‌ಬೇಲ್ತೂರು ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು  ಬಂದು, ಕಟ್‌ಬೇಲ್ತೂರು ಕಡೆಯಿಂದ ದೇವಸ್ಥಾನದ ಕಡೆಗೆ ಜೀವನ್‌ಮೋಗವೀರ ಎಂಬವರು KA-47-J-6653 ನೇ ಬೈಕಿನಲ್ಲಿ ನಾಗೇಂದ್ರ ಆಚಾರ್ಯ ಎಂಬವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಸವಾರಿ ಮಾಡಿಕೊಂಡು ಬರುತ್ತಿದ್ದ ಬೈಕಿಗೆ  ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ, ನಾಗೇಂದ್ರ ಆಚಾರ್ಯ  ರವರ ತಲೆಗೆ ಗಂಭೀರ ಗಾಯ ಹಾಗೂ ಆಪಾದಿತ ಸತೀಶ, ನಿತೀಶ್‌‌,  ಜೀವನ್‌ ಮೋಗವೀರ ಹಾಗೂ ರಸ್ತೆಯಲ್ಲಿ ಹೋಗುತ್ತಿದ್ದ ಪಾದಚಾರಿ ಅಕ್ಷಯ ಎಂಬವರ ಕೈ ಕಾಲುಗಳಿಗೆ  ತರಚಿದ ಗಾಯಗಳಾಗಿದ್ದು, ನಾಗೇಂದ್ರ ಆಚಾರ್ಯ ರವರು  ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಉಡುಪಿ ಆಸ್ಪತ್ರೆಗೆ ಹೋಗಿದ್ದು,  ಜೀವನ್‌ ಮೋಗವೀರ ರವರು ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಸತೀಶ,  ನಿತೀಶ್‌‌ಹಾಗೂ ಅಕ್ಷಯ ರವರು ಕುಂದಾಪುರ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 21/2023 ಕಲಂ: 279, 337, 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ದಿನಾಂಕ 20/02/2023 ರಂದು ಬೆಳಗ್ಗೆ ಸಮಯ ಸುಮಾರು 01:30 ಗಂಟೆಗೆ KA-20 N-0298 ನೇ ನೋಂದಣಿ ಸಂಖ್ಯೆಯ ಮಾರುತಿ ಓಮ್ನಿ ಕಾರಿನಲ್ಲಿ ಚಾಲಕ ಸಿರಾಜುದ್ದೀನ್‌ ನೊಂದಿಗೆ ಪಿರ್ಯಾದಿದಾರರಾದ ಉಮರಬ್ಬ, (41) ತಂದೆ: ಮೂಸ ಬ್ಯಾರಿ, ವಾಸ: ದರ್ಖಾಸು ಹೌಸ್‌, ವಾಮನ ಪದವು ಅಂಚೆ, ಚೆನ್ನಯ ತೋಡಿ ಗ್ರಾಮ, ಬಂಟ್ವಾಳ ತಾಲೂಕು. ಇವರು ಹಾಗೂ ಅಬ್ದುಲ್ಲಾ ರವರು ಸಹಪ್ರಯಾಣಿಕರಾಗಿ ವಾಮನಪದವುನಿಂದ ಅಜೆಕಾರಿಗೆ ಪ್ರಯಾಣಿಸುತ್ತಿದ್ದು ಬೆಳಗ್ಗೆ ಸಮಯ ಸುಮಾರು 03:00 ಗಂಟೆಗೆ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ನೆಲ್ಲಿಕಟ್ಟೆ ಎಂಬಲ್ಲಿ ತಲುಪಿದಾಗ ಕಾರನ್ನು ಚಾಲಕ ಸಿರಾಜುದ್ದೀನ್‌ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ರಸ್ತೆಯ ಬಲಬದಿಯ ಮಣ್ಣಿನ ದಿಬ್ಬಕ್ಕೆ ಹಾಗೂ ಕಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಅಬ್ದುಲ್ಲಾ ರವರಿಗೆ ಎಡಕೈ ಒಳ ಜಖಂ ಆಗಿದ್ದು ಹಾಗೂ ಉಮರಬ್ಬ ಇವರ ಕುತ್ತಿಗೆಗೆ ಗಾಯವಾಗಿರುತ್ತದೆ. ಗಾಯಗೊಂಡ ಉಮರಬ್ಬ ರವರು ಹಾಗೂ ಅಬ್ದುಲ್ಲಾ ರವರನ್ನು ಚಿಕಿತ್ಸೆಯ ಬಗ್ಗೆ ಕಾರ್ಕಳದ ನಿಟ್ಟೆ ಗಾಜ್ರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ವೈದ್ಯರು ಉಮರಬ್ಬ ರವರಿಗೆ ಔಷಧಿ ನೀಡಿದ್ದು ಹಾಗೂ ಅಬ್ದುಲ್ಲಾರವರಿಗೆ ಗಾಯ ಹೆಚ್ಚಾಗಿರುವುದರಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ  ತಿಳಿಸಿದ್ದು ನಂತರ ಅಬ್ದುಲ್ಲಾರವರನ್ನು ಮಂಗಳೂರು ವೆನ್‌ ಲಾಕ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 21/2023 ಕಲಂ: 279, 337, 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ದಿನಾಂಕ 20/02/2022 ರಂದು ಬೆಳಗ್ಗೆ 9:00 ಗಂಟೆಗೆ ಕಾರ್ಕಳ ತಾಲೂಕು, ದುರ್ಗಾ ಗ್ರಾಮದ ತೆಳ್ಳಾರ್-ಕೊಯಿಲ ಬೆಟ್ಟು ಕಡೆಗೆ ಹಾದು ಹೋಗುವ ಸಾರ್ವಜನಿಕ ಕಾಂಕ್ರಿಟ್ ರಸ್ತೆಯಲ್ಲಿ ಮೋಟಾರು ಸೈಕಲ್ KA-19 EQ-6524 ನೇಯದರ ಸವಾರ ಸೈಯ್ಯದ್ ಅಶ್ರಫ್ ಎಂಬಾತನು ಆತನ ಮೋಟಾರು ಸೈಕಲನ್ನು ಕೊಯಿಲಬೆಟ್ಟು ಕಡೆಯಿಂದ ತೆಳ್ಳಾರ್ ಕಡೆಗೆ ಅತಿವೇಗವಾಗಿ ಸವಾರಿ ಮಾಡಿಕೊಂಡು ಹೋದ ಪರಿಣಾಮ ಮೋಟಾರು ಸೈಕಲ್ ಸ್ಕಿಡ್ ಆಗಿ, ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು, ಮುಖಕ್ಕೆ ರಕ್ತ ಗಾಯಗೊಂಡು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಹೆಚ್ಚಿನ ಚಿಕಿತ್ಸೆಯ ಬಗ್ಗೆ ಜಿಲ್ಲಾ ವೆನ್ಲಾಕ್ ಆಸ್ಪತ್ರೆ, ಮಂಗಳೂರು ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾನೆ. ಎಂಬುದಾಗಿ ಕಬೀರ್ ದಸ್ತಗೀರ್ ಸಾಹೇಬ್ (32)ತಂದೆ: ದಸ್ತಗೀರ್ ಸಾಹೇಬ್ ವಾಸ: ಕೊಯಿಲಬೆಟ್ಟು ಮನೆ ತೆಳ್ಳಾರು ಅಂಚೆ ದುರ್ಗಾ ಗ್ರಾಮ ಕಾರ್ಕಳ ಇವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ  ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 21/2023 ಕಲಂ: 279, 337, ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 21-02-2023 05:57 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080