ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಪಡುಬಿದ್ರಿ: ದಿನಾಂಕ 19/02/2022 ರಂದು ಮದ್ಯಾಹ್ನ  12:30 ಗಂಟೆಗೆ. ಕಾಪು ತಾಲೂಕು ಹೆಜಮಾಡಿ ಗ್ರಾಮ ಹೆಜಮಾಡಿ  ಟೋಲ್ ಗೇಟ್  ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ  ಉಡುಪಿ ಕಡೆಯಿಂದ ಮಂಗಳೂರು ಕಡೆಗೆ KA-63-3507  ನೇ ಲಾರಿಯನ್ನು ಅದರ ಚಾಲಕ ಶಿವಪ್ಪ ಕಲಘಟಗಿ ಎಂಬುವವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮಂಗಳೂರು ಕಡೆಗೆ ಹೋಗುತ್ತಿದ್ದ ನಂಬ್ರ ಪ್ಲೇಟ್ ಹೊಂದಿರದ KA-20-EX-6834  ನೇ  ಅಕ್ಸಸ್ ಸ್ಕೂಟರಿಗೆ  ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಮೊಯಿದ್ದಿನ್ ಯೂಸಪ್ ರವರು ಸ್ಕೂಟರ್ ನೊಂದಿಗೆ ರಸ್ತೆಗೆ ಬಿದ್ದು,ಅವರ ಎರಡೂ ಕಾಲುಗಳ ಮೇಲೆ ಲಾರಿಯ  ಬಲ ಭಾಗದ ಚಕ್ರಗಳು ಹಾದು ಹೋಗಿ  ಎರಡೂ ಕಾಲುಗಳ ಮೂಳೆ ಮುರಿತ ಹಾಗೂ ತೆರೆದ ಗಾಯ ಉಂಟಾದವರನ್ನು ಪಿರ್ಯಾದಿದಾರರಾದ ಮುಹಮ್ಮದ್ ಹನೀಫ್ ರವರು ಚಿಕಿತ್ಸೆಯ ಬಗ್ಗೆ  ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ  ಕರೆದುಕೊಂಡು ಹೋಗಿ ದಾಖಲಿಸಿದ್ದು ಬಳಿಕ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಎ ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲಿಸ್ ಠಾಣೆ ಅಪರಾಧ ಕ್ರಮಾಂಕ 202022 ಕಲಂ:279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ಗಣೇಶ ಭಂಡಾರಿ (35), ತಂದೆ: ಬಾಬು ಭಂಡಾರಿ, ವಾಸ: 1-243/1 ತೂದಳ್ಳಿ ಶಿರೂರು ಅಂಚೆ ಮತ್ತು ಗ್ರಾಮ,ಬೈಂದೂರು ತಾಲೂಕು ಇವರು ದಿನಾಂಕ 19/02/2022 ರಂದು ಬೆಳಿಗ್ಗೆ 10:00 ಗಂಟೆಗೆ ಮನೆಯಿಂದ ಮೀನನ್ನು ಖರೀದಿಸಿಕೊಂಡು ಬರಲು ಶಿರೂರು ಪೇಟೆಗೆ ಹೊರಡಲು ಅವರ ಮೋಟಾರ್ ಸೈಕಲ್ ನಲ್ಲಿ ಆಲಂದೂರು ಹಡವಿನಗದ್ದೆ ಕ್ರಾಸ್ ಬಳಿ ಹೋಗುತ್ತಿರುವಾಗ 10:15 ಗಂಟೆಗೆ ಪಿರ್ಯಾದಿದಾರರ ಎದುರಿನಿಂದ ಪರಿಚಯದ ರವೀಂದ್ರರವರು ಸಹಸವಾರರೊಬ್ಬರನ್ನು ಕುಳ್ಳಿರಿಸಿಕೊಂಡು ಮೋಟಾರ್ ಸೈಕಲ್ ನ್ನು ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಶಿರೂರು ಕಡೆಯಿಂದ ತೂದಳ್ಳಿ ಕಡೆಗೆ ಬರುತ್ತಿದ್ದು ಬೈಂದೂರು ತಾಲೂಕು ಯಡ್ತರೆ ಗ್ರಾಮದ  ಹಡವಿನಗದ್ದೆ ಕ್ರಾಸ್ ಬಳಿ ತಲುಪುವಾಗ್ಗೆ  ರಸ್ತೆಯ ಎಡಬದಿಯಿಂದ ದನವೊಂದು ಓಡಿ ಬಂದಿದ್ದು, ಆಗ ಮೋಟಾರ್ ಸೈಕಲ್ ಸವಾರನು ಮೋಟಾರ್ ಸೈಕಲ್ ನ್ನು ಒಮ್ಮೆಲೇ ಬಲಕ್ಕೆ ತಿರುಗಿಸಿದಾಗ ಮೋಟಾರ್ ಸೈಕಲ್ ಸವಾರನ  ನಿಯಂತ್ರಣ ತಪ್ಪಿ, ಮೋಟಾರ್ ಸೈಕಲ್ ಸಮೇತ ಇಬ್ಬರೂ ರಸ್ತೆಯ ಬದಿಯಲ್ಲಿರುವ ಬಲ ಬದಿಯ ಚರಂಡಿಗೆ ಬಿದ್ದಿದ್ದು ಪಿರ್ಯಾದಿದಾರರು ಕೂಡಲೇ ಬೈಕ್ ನ್ನು ನಿಲ್ಲಿಸಿ, ನೋಡಲಾಗಿ ಮೋಟಾರ್ ಸೈಕಲ್ ಸಹ ಸವಾರ ಪಿರ್ಯಾದಿದಾರರ ಚಿಕ್ಕಪ್ಪ ಸುಬ್ರಾಯ ಭಂಡಾರಿರವರಾಗಿದ್ದು, ಇಬ್ಬರನ್ನು ಎತ್ತಿ ಉಪಚರಿಸಿದ್ದು ಮೋಟಾರ್ ಸೈಕಲ್ ಸಹ ಸವಾರನಿಗೆ ಚರಂಡಿಯಲ್ಲಿದ್ದ ಒಣ ಮರದ ಕವಲು ಕೋಲು ತಾಗಿ ಕುತ್ತಿಗೆಯ ಬಲಬದಿಗೆ ತೀವ್ರ ತರಹದ ರಕ್ತಗಾಯ, ಬಲಕಾಲಿಗೆ ತರಚಿದ ಗಾಯವಾಗಿರುತ್ತದೆ. ಮೋಟಾರ್ ಸೈಕಲ್ ಸವಾರನಿಗೆ ಬಲಕಾಲಿಗೆ, ಎರಡೂ ಕೈಗಳ ಅಂಗೈಗೆ ಸಣ್ಣಪುಟ್ಟ ತರಚಿದ ಗಾಯವಾಗಿರುತ್ತದೆ. ಅಪಘಾತಪಡಿಸಿದ ಮೋಟಾರ್ ಸೈಕಲ್ ನಂಬ್ರ ನೋಡಲಾಗಿ KA-20-EC-7910 ಆಗಿರುತ್ತದೆ. ಪಿರ್ಯಾದಿದಾರರು ಚಿಕ್ಕಪ್ಪ ಸುಬ್ರಾಯ ಭಂಡಾರಿರವರನ್ನು ಒಂದು ಆಟೋ ರಿಕ್ಷಾದಲ್ಲಿ ಶಿರೂರಿನ ಕ್ಲಿನಿಕ್ ಗೆ ಕರೆದುಕೊಂಡು ಹೋಗಿ ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಕುಂದಾಪುರ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 46/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ಕೋಡಿ ಅಶೋಕ ಪೂಜಾರಿ (43), ತಂದೆ: ಬಡಿಯಾ ಪೂಜಾರಿ, ವಾಸ: ಗಂಗೆ ಹೌಸ್ ಕೋಡಿ ಪೋಸ್ಟ್ ಕುಂದಾಪುರ ತಾಲೂಕು ಇವರು ದಿನಾಂಕ 20/02/2022 ರಂದು ಬೆಳಿಗ್ಗೆ ಬಾಡಿಗೆಗಾಗಿ ಸಾಸ್ತಾನ ಕಡೆಗೆ ಹೋಗುತ್ತಿರುವಾಗ  ಬೆಳಿಗ್ಗೆ 7:00 ಗಂಟೆಯ ಸಮಯಕ್ಕೆ ಉಡುಪಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66 ರ ಚೇಂಪಿಯ ವಿಶ್ವ ಕರ್ಮ  ಸಭಾಂಗಣದ  ಎದುರು ಉಡುಪಿ ಕಡೆಯಿಂದ ಕುಂದಾಪುರದ ಕಡೆಗೆ  ಹೋಗುತ್ತಿದ್ದ KA-20-EV-4207 ನೇ ಮೋಟಾರ್ ಸೈಕಲ್  ಗೆ ಅದರ ಹಿಂಬದಿಯಿಂದ KA-20-ER-2576 ನೇ ಮೋಟಾರ್ ಸೈಕಲ್ ಸವಾರ ಆದಿತ್ಯ ಪ್ರಭು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹಿಂಬದಿಗೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಮೊಟಾರ್ ಸೈಕಲ್ ಸವಾರರು ರಸ್ತೆಗೆ ಬಿದ್ದಿದ್ದು, KA-20-EV-4207 ನೇ ಮೋಟಾರ್ ಸೈಕಲ್  ಸವಾರ ಚಂದ್ರ ಶೇಖರ ಎಂಬುವವರಾಗಿದ್ದು ಅವರಿಗೆ ಬಲ ಕಾಲಿಗೆ ಮೂಳೆ ಮುರಿತದ ಗಾಯವಾಗಿರುತ್ತದೆ ಚಿಕಿತ್ಸೆಯ ಬಗ್ಗೆ ಚಿನ್ಮಯಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 17/2022  ಕಲಂ:279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 20/02/2022 ರಂದು  ಬೆಳಿಗ್ಗೆ 11:30 ಗಂಟೆಗೆ, ಕುಂದಾಪುರ  ತಾಲೂಕಿನ ಕೆಂಚನೂರು ಗ್ರಾಮದ  ಗೋಪಾಲ ಶೆಟ್ಟಿಯವರ  ಪೆಟ್ರೋಲ್‌‌ ಬಂಕ್‌ ಬಳಿ  ರಸ್ತೆಯಲ್ಲಿ, ಆಪಾದಿತ ಮಂಜುನಾಥ  ಗಾಣಿಗ KA-20-EP-7403ನೇ ಬೈಕನ್ನು ತಲ್ಲೂರು ನೇರಳಕಟ್ಟೆ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ  ಸವಾರಿ  ಮಾಡಿಕೊಂಡು ಬಂದು,  ಪಿರ್ಯಾದಿದಾರರಾದ ಶೇಖರ ಶೆಟ್ಟಿ (70), ತಂದೆ:  ದಿ. ಮಂಜಯ್ಯ ಶೆಟ್ಟಿ, ವಾಸ: ಐತೂರು ಮನೆ, ದೇವಲ್ಕುಂದ  ಗ್ರಾಮ, ಕುಂದಾಪುರ ತಾಲೂಕು ಇವರು  KA-20-EB-5013ನೇ ಸುಜುಕಿ ಅಕ್ಸೆಸ್‌ ಸ್ಕೂಟರ್‌‌ಗೆ  ಕೆಂಚನೂರು ಗ್ರಾಮದ  ಗೋಪಾಲ ಶೆಟ್ಟಿಯವರ  ಪೆಟ್ರೋಲ್‌‌ ಬಂಕ್‌ನಲ್ಲಿ  ಪೆಟ್ರೋಲ್‌ ‌ಹಾಕಿಸಿಕೊಂಡು,  ರಸ್ತೆಯ ಎಡಬದಿಯಲ್ಲಿ  ಸವಾರಿ ಮಾಡಿಕೊಂಡು ಹೋಗುತ್ತಿರುವಾಗ  ಸುಜುಕಿ ಅಕ್ಸೆಸ್‌ ಸ್ಕೂಟರ್‌‌ಗೆ  ಹಿಂದಿನಿಂದ ಡಿಕ್ಕಿ  ಹೊಡೆದ ಪರಿಣಾಮ ಪಿರ್ಯಾದಿದಾರರು ವಾಹನ ಸಮೇತ  ರಸ್ತೆಗೆ ಬಿದ್ದು, ಅವರ ಬಲಕಾಲಿನ ಮುಂಗಾಲು ಗಂಟಿನ ಕೆಳಗೆ  ಮೂಳೆ ಮುರಿತವಾದ  ರಕ್ತಗಾಯವಾಗಿ ಕುಂದಾಪುರ  ಶ್ರೀದೇವಿ   ಆಸ್ಪತ್ರೆಯಲ್ಲಿ  ಒಳರೋಗಿಯಾಗಿ  ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 27/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ದಿನಾಂಕ 20/02/2022 ರಂದು ಪಿರ್ಯಾದಿದಾರರಾದ ರಜತ್‌ ಶೆಟ್ಟಿ (26), ತಂದೆ:ಸಂಜೀವ ಶೆಟ್ಟಿ, ವಾಸ: ನಾರ್ಕಳಿ ಗುಡಿಮನೆ, ಹರ್ಕೂರು ಗ್ರಾಮ ಕುಂದಾಪುರ ತಾಲೂಕು ಇವರು ತನ್ನ KA-01-ET-6880 ನೇ ಮೋಟಾರು ಸೈಕಲ್‌ ನಲ್ಲಿ ರಾಜೀವ ಶೆಟ್ಟಿ ರವರನ್ನು ಸಹಸವಾರರನ್ನಾಗಿ ಕುಳ್ಳಿಸಿಕೊಂಡು ಹರ್ಕೂರು ಕಟ್ಟಿನಮಕ್ಕಿ ಕಡೆಯಿಂದ ವಂಡ್ಸೆ  ಕಡೆಗೆ ನೂಜಾಡಿ ಡಾಂಬಾರು ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ 10:40 ಗಂಟೆಗೆ ನೂಜಾಡಿ ಗ್ರಾಮದ ಮೂಡಾರಿಗುಡ್ಡೆ ಎಂಬಲ್ಲಿ ತಲುಪುವಾಗ ಆರೋಪಿ ಮಧುಕರ ಪೂಜಾರಿ KA-20-C-7064 ನೇ ಆಟೋ ರಿಕ್ಷಾವನ್ನು ನೂಜಾಡಿ ಕಡೆಯಿಂದ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಬೈಕ್‌ಗೆ  ಎದುರುನಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸಮೇತವಾಗಿ ಪಿರ್ಯಾದಿದಾರರು ಹಾಗೂ ಸಹಸವಾರ ರಾಜೀವ ಶೆಟ್ಟಿ  ರವರು ರಸ್ತೆಗೆ ಬಿದ್ದು ರಕ್ತಗಾಯವಾಗಿ ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ  ದಾಖಲಾಗಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 18 /2022 ಕಲಂ:  279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.        

ಇತರ ಪ್ರಕರಣ

  • ಉಡುಪಿ: ದಿನಾಂಕ 20/02/2022 ರಂದು ಬೆಳಿಗ್ಗೆ 10:00 ಗಂಟೆಯಿಂದ 10:30 ಗಂಟೆಯ ವೇಳೆಗೆ ಪಿರ್ಯಾದಿದಾರರಾದ ಶ್ರೀಮತಿ ಮಮತ (36), ಗಂಡ: ರಾಜೇಂದ್ರ, ವಾಸ: ಮನೆ ನಂಬ್ರ: 7/27 ಕೊಡಂಕೂರು, ಪುತ್ತೂರು ಗ್ರಾಮ, ಉಡುಪಿ ತಾಲೂಕು ಇವರ ಗಂಡನ ಸಂಬಂಧಿಕರಾದ  ಆರೋಪಿತರಾ ಗೋಪಾಲ, ಅಶೋಕ, ಅರುಣ, ಆಶಾ ಹಾಗೂ ಇತರರು ಉಡುಪಿ ತಾಲೂಕು ಪುತ್ತೂರು ಗ್ರಾಮದ ಕೊಡಂಕೂರಿನಲ್ಲಿರುವ ಪಿರ್ಯಾದಿದಾರರ ಮನೆಗೆ ಬಂದು ಆಸ್ತಿ ವಿಚಾರಕ್ಕಾಗಿ ಒಟ್ಟು ಸೇರಿ ಏಕಾಏಕಿ ಪಿರ್ಯಾದಿದಾರರ ಗಂಡನನ್ನು ಹಾಗೂ ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಕೈಯಿಂದ ಹೊಡೆದಿದ್ದು ಹಾಗೂ ಕಾಲಿನಿಂದ ತುಳಿದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 33/2022, ಕಲಂ: 143, 147, 341, 323 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 21-02-2022 09:50 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080