ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಅಜೆಕಾರು: ಪಿರ್ಯಾದಿದಾರರಾದ ಆನಂದ ಬಿ.ಎಸ್  (42), ತಂದೆ: ಸುಂದರ ನಾಯ್ಕ್,  ವಾಸ: ದೇವಿ ನಿವಾಸ ಮಾರಿಗುಡಿ ಬಳಿ ಬಂಡಶಾಲೆ ಮರ್ಣೆ  ಗ್ರಾಮ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ ಇವರು ಮರ್ಣೆ ಗ್ರಾಮದ ಮಾರಿ ಗುಡಿಯ ಬದಿಯಲ್ಲಿ ಗೂಡಂಗಡಿಯನ್ನು ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದು ದಿನಾಂಕ 21/02/2022 ತನ್ನ ಗೂಡಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವಾಗ  10:00 ಗಂಟೆಗೆ ಹೆಬ್ರಿ ಕಡೆಯಿಂದ ಕಾರ್ಕಳ ಕಡೆಗೆ ಲಾರಿಯೊಂದನ್ನು ಅದರ ಚಾಲಕನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರ ಎಡ ಬದಿಗೆ ಹೋಗಿ ಮಾರಿಗುಡಿಯ ಮುಂದಿನ ರಸ್ತೆ ಬದಿಯಲ್ಲಿನ ತೋಡಿನಲ್ಲಿ ಮುಗುಚಿ ಬಿದ್ದಿದ್ದು ಪಿರ್ಯಾದಿದಾರರು ಹಾಗೂ ಪಿರ್ಯಾದಿದಾರರ ಅಂಗಡಿಯ ಎದುರಿನ ಮನೆಯ ಸುದೀಪ್ ರವರು ಕೂಡ ಬಂದಿದ್ದು, ಇಬ್ಬರೂ ಸೇರಿ ಪಲ್ಟಿಯಾದ ಲಾರಿಯ ಕ್ಯಾಬಿನ್ ನೊಳಗಿದ್ದ ಇಬ್ಬರು ವ್ಯಕ್ತಿಗಳನ್ನು ಕ್ಯಾಬಿನ್ ನಿಂದ ಹೊರಗಡೆ ತೆಗೆದು ನೋಡಲಾಗಿ ಓರ್ವ ವ್ಯಕ್ತಿ ಬಲಗಾಲಿನ ಹಿಮ್ಮಡಿಯ ಬಳಿ ಒಳ ಜಖಂ ಆಗಿದ್ದು, ಆತನನ್ನು ವಿಚಾರಿಸಿದಾಗ ಲಾರಿಯ ಕ್ಲೀನರ್ ಎಂದು ತನ್ನ ಹೆಸರು ಸಾಬಣ್ಣ ಎಂಬುದಾಗಿಯೂ ಇನ್ನೋರ್ವ ವ್ಯಕ್ತಿಯನ್ನು ವಿಚಾರಿಸಿದಾಗ ಆತನ ಹೆಸರು ಶ್ರೀಕಾಂತ ಎಂಬುದಾಗಿ ತಿಳಿಸಿ ತಾನು ಲಾರಿ ಚಾಲಕನಾಗಿರುತ್ತಾನೆ ಎಂದು ತಿಳಿಸಿದ್ದು, ಆತನಿಗೆ ಯಾವುದೇ ಗಾಯಗಳಿರುವುದಿಲ್ಲ,ಕೂಡಲೇ 108 ಅಂಬುಲೆನ್ಸ್ ಬರಮಾಡಿಕೊಂಡು ಸಾಬಣ್ಣರವರನ್ನು ಚಿಕಿತ್ಸೆಯ ಬಗ್ಗೆ ಕಾರ್ಕಳ ಸರಕಾರಿ ಆಸ್ವತ್ರೆಗೆ ಕಳುಹಿಸಿದ್ದು,ನಂತರ ಪಲ್ಟಿಯಾದ ಲಾರಿಯ ನಂಬ್ರವನ್ನು ನೋಡಲಾಗಿ KA-25-C-0145 ನೇ Ashok Leyland ಅಗಿರುತ್ತದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 05/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ 20/02/2022 ರಂದು ಪಿರ್ಯಾದಿದಾರರಾದ ಹೇಮಂತ್ (22), ತಂದೆ: ಗಣೇಶ್ ಮೂಲ್ಯ, ವಾಸ : ಇಂದಿರಾನಗರ, ಕುಕ್ಕಿಕಟ್ಟೆ, 76 ಬಡಗಬೆಟ್ಟು ಗ್ರಾಮ, ಉಡುಪಿ ತಾಲೂಕು ಇವರು ಹೆಬ್ರಿ ವರಂಗದ ದೇವಸ್ಥಾನದ ಜಾತ್ರಾ ಮಹೋತ್ಸವ ಕ್ಕೆ ತನ್ನ ಸ್ನೇಹಿತ ಕಿಶನ್ ಶೆಟ್ಟಿಯವರ ಮೋಟಾರು ಸೈಕಲ್ ನಂಬರ್ KA-20-EK-1675 ರಲ್ಲಿ  ತಂಗಿ ಸುಮಲತಾಳನ್ನು ಸಹ ಸವಾರಳನ್ನಾಗಿ ಕುಳ್ಳಿರಿಸಿಕೊಂಡು ರಾಷ್ಟ್ರೀಯ ಹೆದ್ದಾರಿ 169(ಎ) ರಲ್ಲಿ ಹೋಗಿತ್ತಿದ್ದಾಗ ರಾತ್ರಿ 8:00 ಗಂಟೆಗೆ ಪರ್ಕಳ ಬಿ.ಎಂ ಸ್ಕೂಲ್ ಬಳಿ ತಲುಪಿದಾಗ ಹಿರಿಯಡ್ಕ ಕಡೆಯಿಂದ ಉಡುಪಿ ಕಡೆಗೆ KA-20-EV-3065 ಸ್ಕೂಟರ್ ನ್ನು ಅದರ ಸವಾರ ಆಶಿಷ್ ಶೆಟ್ಟಿ ಅತೀವೇಗ ಹಾಗು ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಸವಾರಿಕೊಂಡು ಬಂದು ಪಿರ್ಯಾದಿದರ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಎರಡೂ ಮೋಟಾರು ಸೈಕಲ್ ಸವಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದಿದಾರರ ಕೈ ಹಾಗೂ ಕಾಲಿಗೆ ಸುಮಲತಾ ರವರ ತಲೆ  ಮತ್ತು ಕಾಲಿಗೆ ತೀವ್ರ ಗಾಯ ಹಾಗೂ  ಆರೋಪಿತನಿಗೂ ತೀವ್ರ ತರಹದ ರಕ್ತಗಾಯವಾಗಿರುತ್ತದೆ. ಪಿರ್ಯಾದಿದರರು ಮತ್ತು ಸುಮಲತಾ ರವರನ್ನು ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ . ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 28/2022  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಹೆಬ್ರಿ: ಪಿರ್ಯಾದಿದಾರರಾದ ಕೃಷ್ಣಬಿ ಎಲ್ ಶೆಟ್ಟಿ (48), ತಂದೆ: ದಿ ಲೋಕೇಶ್ ಶೆಟ್ಟಿ,ವಾಸ: ಉಪ್ಪಳ ಶಾಲೆ ಹತ್ತೀರ, ಮುದ್ರಾಡಿ ಗ್ರಾಮ, ಹೆಬ್ರಿ ತಾಲೂಕು ಇವರು ರಾತ್ರಿ ಕುಬೇರಾ ಬಾರ್ ನಲ್ಲಿ ಕೆಲಸ ಮಾಡಿ ದಿನಾಂಕ 20/02/2022 ರಂದು  00:30 ಗಂಟೆಗೆ ಹೆಬ್ರಿ ಬಾರ್ ನಿಂದ ತನ್ನ  KA-20-EW-9704 ನೇ ಮೋಟಾರ್ ಸೈಕಲ್ ನ್ನು ಚಲಾಯಿಸಿಕೊಂಡು ಹೆಬ್ರಿ- ಉಡುಪಿ ರಸ್ತೆಯಲ್ಲಿ ಹೋಗುತ್ತಿದ್ದು, ರಾತ್ರಿ 01:00 ಗಂಟೆಗೆ ಶಿವಪುರ ಗ್ರಾಮದ ಕೊಳಗುಡ್ಡೆ ಕ್ರಾಸ್ ಬಳಿ ತಲುಪಿದಾಗ ಅವರ ಎದುರಿನಿಂದ ಉಡುಪಿ ಕಡೆಯಿಂದ ಹೆಬ್ರಿ ಕಡೆಗೆ KA-20-AA-3507 ನೇ ಬೊಲೇರೋ ಪಿಕಾಪ್ ವಾಹನವನ್ನು ಅದರ ಚಾಲಕ ಪ್ರಸಾದ್ ಅಚಾರ್ಯ ಇವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ರಸ್ತೆಯ ಬಲಬದಿಗೆ ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಅವರ ಬಲ ಮತ್ತು ಎಡ ಕಾಲಿನ ಬಳಿ ಮೂಳೆ ಮುರಿತವಾಗಿದ್ದು. ಹಣೆಯ ಬಳಿ ತೀವ್ರ ಸ್ವರೂಪದ ಗಾಯವಾಗಿರುತ್ತದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 07/2022 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ:ದಿನಾಂಕ: 20/02/2022 ರಂದು 21:00 ಗಂಟೆಗೆ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ನಿಟ್ಟೆ ನೆಲ್ಲಿ ಎಂಬಲ್ಲಿ ಪಿರ್ಯಾದಿದಾರರಾದ ಹರೀಶ್ ಕುಮಾರ್ (40), ವಾಸ: ತೊಡಲ್ಲಿ ದರ್ಖಾಸು ಹೌಸ್, ನಿಟ್ಟೆ ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು. ಉಡುಪಿ ಜಿಲ್ಲೆ ಇವರು ತನ್ನ KA-20-ES-5427 ನೇ ನಂಬ್ರದ ಸ್ಕೂಟಿಯಲ್ಲಿ ಮಗ ಹರ್ಷಲ್ (10) ರವರನ್ನು ಕುಳ್ಳಿರಿಸಿಕೊಂಡು ನಿಟ್ಟೆ ಪಂಚಾಯತ್ ಕಡೆಯಿಂದ ಬೋರ್ಗಲ್ ಗುಡ್ಡೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಎದುರುಗಡೆಯಿಂದ ಬೋರ್ಗಲ್ ಗುಡ್ಡೆ ಕಡೆಯಿಂದ ನಿಟ್ಟೆ ಪಂಚಾಯತ್ ಕಡೆಗೆ KA-19-D-8074 ನೇ ನಂಬ್ರದ ರಿಕ್ಷಾ ಚಾಲಕ ಸುರೇಶ್ ಆಚಾರ್ಯ ರವರು ತಮ್ಮ ರಿಕ್ಷಾವನ್ನು ತೀರಾ ನಿರ್ಲಕ್ಷನತನದಿಂದ ರಸ್ತೆಯ ತೀರಾ ಬಲಭಾಗಕ್ಕೆ ಚಲಾಯಿಸಿದ ಪರಿಣಾಮ ರಿಕ್ಷಾದ ಹಿಂಭಾಗದ ಶೇಪ್ ಹರ್ಷಲ್ ರವರ ಬಲಕಾಲಿನ ಮೊಣಗಂಟಿನ ಬಳಿ ತಾಗಿ ಮೂಳೆ ಮುರಿತದ ತೀವ್ರ ಗಾಯವಾಗಿದ್ದು ನಿಟ್ಟೆ ಗಾಜ್ರಿಯಾ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 20/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ಕೇಶವ.ಎಸ್.ನಾಯ್ಕ್ (27), ತಂದೆ: ಶಂಕರ.ಎಸ್.ನಾಯ್ಕ್, ವಾಸ: ಕೃಷ್ಣಪಾಲ ನೀರ್ಗದ್ದೆ ಬೈಲೂರು ಗ್ರಾಮ ಮತ್ತು ಅಂಚೆ, ಮುಡೇಶ್ವರ ಭಟ್ಕಳ ತಾಲೂಕು ಉತ್ತರ ಕನ್ನಡ ಜಿಲ್ಲೆ ಇವರು ದಿನಾಂಕ 20/02/2022ರಂದು ಮಣಿಪಾಲದಿಂದ ಕಲ್ಸಂಕದ ಕಡೆಗೆ ರಾಷ್ಟ್ರೀಯ ಹೆದ್ದಾರಿ 169(A) ರಲ್ಲಿ KA-20-MB-0626ನೇ ಕಾರಿನಲ್ಲಿ ಬರುತ್ತಿರುವಾಗ ರಾತ್ರಿ 11:45 ಗಂಟೆಗೆ ಕುಂಜಿಬೆಟ್ಟು ಆಟೋ ನಿರ್ವಾಹಕರ ಕ್ರೇಡಿಟ್ ಕೋ-ಆಪರೇಟಿವ್ ಸೊಸೈಟಿ ಬಳಿ ತಲುಪುವಾಗ KA-20-MB-0626ನೇ ಕಾರಿನ ಚಾಲಕ ನಿತೇಶ್ ಹೊನ್ನಯ್ಯ ನಾಯ್ಕ್ ರವರು ಕಾರನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ರಸ್ತೆಯ ತೀರಾ ಎಡ ಬದಿಗೆ ಚಲಾಯಿಸಿ ಕಬ್ಬಿಣದ ಪೈಪ್ ನ ರಾಶಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಬಲ ಕಾಲಿನ ಮೊಣಗಂಟಿನ ಕೆಳಗೆ ಮೂಳೆ ಮುರಿತದ ಗಂಭಿರ ಸ್ವರೂಪದ ಗಾಯವಾಗಿ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕಾರಿನ ಚಾಲಕ ನಿತೇಶ್ ಹೊನ್ನಯ್ಯ  ನಾಯ್ಕ್  ರವರಿಗೆ ಬಲಬದಿಯ ಗಲ್ಲ ಮತ್ತು ಎಡಬದಿಯ ಎದೆಗೆ ಗುದ್ದಿದ ಸಾದಾ ಸ್ವರೂಪದ ಗಾಯವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 17/2022 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 21/02/2022 ರಂದು  ಬೆಳಿಗಿನ ಜಾವ  12:45 ಗಂಟೆಗೆ, ಕುಂದಾಪುರ  ತಾಲೂಕಿನ ಬಳ್ಕೂರು  ಗ್ರಾಮದ  ಪಾನಕದಕಟ್ಟೆ ಬಳಿ  ರಸ್ತೆಯಲ್ಲಿ, ಆಪಾದಿತ ಪ್ರದೀಪ್ ಶೆಟ್ಟಿ KA-20-EW-5206ನೇ ಬೈಕನ್ನು BHರಸ್ತೆ ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ  ಹಾಗೂ ನಿರ್ಲಕ್ಷ್ಯತನದಿಂದ  ಸವಾರಿ  ಮಾಡಿಕೊಂಡು ಬಂದು, ಕುಂದಾಪುರದ ಕಡೆಯಿಂದ ಬಳ್ಕೂರು ಕಡೆಗೆ ರಸ್ತೆಯಲ್ಲಿ ಪಿರ್ಯಾದಿದಾರರಾದ ಗುರುರಾಜ್ (30), ತಂದೆ  ದಿ. ನಾರಾಯಣ ಮೊಗವೀರ, ವಾಸ: ಕಳ್ಳಿಗುಡ್ಡೆ , ಬಳ್ಕೂರು  ಗ್ರಾಮ, ಕುಂದಾಪುರ ತಾಲೂಕು ಇವರ ಮುಂದಿನಿಂದ KA-20-EH-3209 ನೇ ಮೋಟಾರು ಸೈಕಲ್ ನಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಕಾರ್ತಿಕ್ ರವರ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಬೈಕ್ ಸವಾರರು ಬೈಕ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದು ಸ್ಥಳಿಯರ ಸಹಕಾರದಿಂದ ಪಿರ್ಯಾದಿದಾರರು ಗಾಯಾಳುಗಳನ್ನು ಚಿಕಿತ್ಸೆಗೆ ಕುಂದಾಪುರದ ಆದರ್ಶ ಆಸ್ಪತ್ರೆಗೆ ದಾಖಲಿಸಿದ್ದು  ಗಂಭೀರವಾಗಿ ಗಾಯಗೊಂಡಿದ್ದ ಕಾರ್ತಿಕ್ ರವರನ್ನು ವೈದ್ಯರ ಸಲಹೆ ಮೇರೆಗೆ ನಂತರ ಉಡುಪಿ ಆದರ್ಶ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 28/2022 ಕಲಂ 279,  338   ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಅಸ್ವಾಭಾವಿಕ ಮರಣ ಪ್ರಕರಣ

  • ಹಿರಿಯಡ್ಕ: ಪಿರ್ಯಾದಿದಾರರಾದ ಕೃಷ್ಣ ಪೂಜಾರಿ (67), ತಂದೆ: ಕರಿಯ ಪೂಜಾರಿ, ವಾಸ:  ದೇವಿಪ್ರಸಾದ್ ನಿಲಯ, ಸಿಂಗಮನೆ, 41 ನೇ ಶೀರೂರು  ಉಡುಪಿ ಜಿಲ್ಲೆ ಇವರ ತಮ್ಮ ಚಂದ್ರಶೇಖರ (51) ಇವರು  ವಿಪರೀತ ಕುಡಿತದ ಚಟ ಅಲ್ಲದೆ ಮಾನಸಿಕ ಕಾಯಿಲೆಯಿಂದ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು  ದಿನಾಂಕ 20/02/2022 ರಂದು ರಾತ್ರಿ 10:00 ಗಂಟೆಯಿಂದ ದಿನಾಂಕ 21/02/2022 ರ ಮಧ್ಯಾಹ್ನ 1:00 ಗಂಟೆಯ ಮಧ್ಯಾವಧಿ ವಿಷದಾರ್ಥ ಸೇವಿಸಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 05/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಕಳವು ಪ್ರಕರಣ

  • ಬ್ರಹ್ಮಾವರ: ಹಾವಂಜೆ ಗ್ರಾಮದ ಗೋಳಿಕಟ್ಟೆ ಜಂಕ್ಷನನಲ್ಲಿರುವ ಶ್ರೀ ವೀರ ಕಲ್ಕುಡ  ದೈವಸ್ಧಾನದ ಬಾಗಿಲನ್ನು ಯಾರೋ ಕಳ್ಳರು ದಿನಾಂಕ 20/02/2022 ರಂದು ರಾತ್ರಿ 7:30 ಗಂಟೆಯಿಂದ ದಿನಾಂಕ:21/02/2022 ರಂದು ಬೆಳಿಗ್ಗೆ 5:00 ಗಂಟೆಯ ಮಧ್ಯಾವಧಿಯಲ್ಲಿ ದೈವಸ್ದಾನದ ಬಾಗಿಲು ಮುರಿದು ಒಳ ಪ್ರವೇಶಿಸಿ ಕಲ್ಕುಡ ದೈವದ ಪಂಚಲೋಹದ ಮುಖವಾಡ ಅದಕ್ಕೆ ಹೊಂದಿಕೊಂಡಂತೆ ಬೆಳ್ಳಿಯ ಪ್ರಭಾವಳಿ ಮೌಲ್ಯ  40,000/- ರೂಪಾಯಿ ಹಾಗೂ ಪರ್ತೆ – ಕಾಳಿ ದೈವದ ಬೆಳ್ಳಿಯ ಪ್ರಭಾವಳಿ  ಬೆಲೆ 25,000/- ರೂಪಾಯಿ ಓಟ್ಟು  65,000/- ಸಾವಿರ ಮೌಲ್ಯದ ಸ್ವತ್ತನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 26/2022 ಕಲಂ: 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 21-02-2022 05:57 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080