ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಶಿರ್ವಾ: ದಿನಾಂಕ 19/02/2021 ರಂದು ಸಂಜೆ 7:00 ಗಂಟೆಗೆ ಕುರ್ಕಾಲು ಗ್ರಾಮ ಶಂಕರಪುರ ಚರ್ಚಿನ ಸ್ಮಶಾನದ ಎದುರುಗಡೆ ಹಾದು ಹೋಗಿರುವ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ  ಆರೋಪಿ KA-20-EU-7909 ನೇ ಹೋಂಡಾ ಆಕ್ಟೀವಾ ದ್ವಿಚಕ್ರ ವಾಹನ ಸವಾರ ಐವಾನ್ ರಾಜೇಶ್ ಕ್ಯಾಸ್ತಲಿನೋ ತಾನು ಚಲಾಯಿಸಿಕೊಂಡು ಬರುತ್ತಿದ್ದ  ದ್ವಿಚಕ್ರವಾಹನವನ್ನು  ಶಂಕರಪುರ ಕಡೆಯಿಂದ ಕುರ್ಕಾಲು ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬದಿಗೆ ಬಂದು ರಸ್ತೆಯ ಬದಿಯಲ್ಲಿ ಶಂಕರಪುರ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರಾದ ಕೃಷ್ಣ ಎಸ್ (60), ತಂದೆ: ದಿ. ಮುದ್ದು ಪೂಜಾರಿ, ವಾಸ: ಶಿವಾನಂದ ನಗರ ಮೂಡುಬೆಟ್ಟು ಗ್ರಾಮ ಶಂಕರಪುರ ಕಾಪು ತಾಲೂಕು ಇವರಿಗೆ  ಡಿಕ್ಕಿ ಹೊಡೆ ಪರಿಣಾಮ ಪಿರ್ಯಾದಿದಾರು ರಸ್ತೆಗೆ ಬಿದ್ದು, ಎಡಬದಿ ಕೆನ್ನಗೆ, ಎಡಬದಿ ಹೊಟ್ಟೆಗೆ ಹಾಗೂ ಎಡಕಾಲಿಗೆ ಗುದ್ದಿದ ಜಖಂ ಆಗಿರುತ್ತದೆ. ಅಲ್ಲದೇ ಆರೋಪಿ ದ್ವಿಚಕ್ರವಾಹನ ಸವಾರನ ಬಲಕಣ್ಣಿನ ಬಳಿ, ಮುಖಕ್ಕೆ ಬಾಯಿಗೆ ತರಚಿದ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 11/2021, ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತರ ಪ್ರಕರಣಗಳು

  • ಬ್ರಹ್ಮಾವರ: ದಿನಾಂಕ 20/02/2020 ರಂದು ಬೆಳಿಗ್ಗೆ ಪಿರ್ಯಾದಿದಾರರಾದ ಮಂಜಪ್ಪ ಪೂಜಾರಿ (63), ತಂದೆ: ದಿವಂಗತ ಜಾರು ಪೂಜಾರಿ, ವಾಸ: ಆರ್ಶಿವಾದ ನಿಲಯ ಕಾಳಿಕಾಂಬ ದೇವಸ್ದಾನದ ಹತ್ತಿರ ಹೊಸಾಳ ಬಾರಕೂರು  ಹೊಸಾಳ ಗ್ರಾಮ, ಬ್ರಹ್ಮಾವರ ತಾಲೂಕು ಇವರು ಬೆಳಿಗ್ಗೆ  ಮನೆಯ ಎದುರು ಇರುವ ಕಚ್ಚೂರು ಕಾಳಿಕಾಂಬ ದೇವಸ್ದಾನಕ್ಕೆ ಹೋಗಿ ದೇವಸ್ದಾನದ ಹಾಲ್‌ಗೆ 09:00 ಗಂಟೆಗೆ ಹೋದಾಗ ಅಲ್ಲಿ ಪ್ರವೀಣ್‌ ‌ಅಚಾರ್ಯ, ಪ್ರಸಾದ ಆಚಾರ್ಯ ಹಾಗೂ ಇತರರು ಅಲ್ಲಿ ಇದ್ದು ದೇವಸ್ದಾನದಲ್ಲಿ ಸಿಕ್ಕ ರಮೇಶ ಅಮೀನ್‌ರವರೊಂದಿಗೆ ಪ್ರವೀಣ್‌ ಅಚಾರ್ಯ ಬಳಿ ಹೋದಾಗ ಅಲ್ಲಿಗೆ ಶಂಕರ ಶಾಂತಿ ಬಂದು ಬೈದು ಕೈಯಲ್ಲಿದ್ದ ರಾಡ್‌‌ನಿಂದ ಪಿರ್ಯಾದಿದಾರರಿಗೆ ಹೊಡೆಯಲು ಬಿಸಿದಾಗ ತಪ್ಪಿಸಿಕೊಂಡು ಅದು ಪಿರ್ಯಾದಿದಾರರ ಬಲ ಭಾಗದ ಸೊಂಟದ ಮೇಲ್ಭಾಗಕ್ಕೆ ತಾಗಿತು. ಈ ಗಲಾಟೆಯನ್ನು ರಮೇಶ ಅಮೀನ್‌‌, ಪ್ರಸಾದ್‌ ಅಚಾರ್ಯ, ಪ್ರವೀಣ್‌ ಅಚಾರ್ಯರವರು ತಪ್ಪಿಸಲು ಬಂದಾಗ ಅವರಿಗೂ ಅದೇ ರಾಡ್‌ನಿಂದ ಹೊಡೆದು ಸಭಾ ಭವನದ ಕಿಟಕಿಯ ಗ್ಲಾಸಿಗೆ ರಾಡ್‌ನಿಂದ ಹೊಡೆದು  ಗ್ಲಾಸ್‌ ಪುಡಿ ಮಾಡಿದ್ದು, ನಂತರ ಬೆದರಿಕೆ ಹಾಕಿ ರಸ್ತೆ ಕಡೆ ಹೋಗಿರುವುದಾಗಿದೆ. ಈ ಹಲ್ಲೆಯಿಂದ ಪಿರ್ಯಾದಿದಾರರಿಗೆ, ರಮೇಶ ಅಮೀನ್‌‌, ಪ್ರಸಾದ್‌ ಅಚಾರ್ಯ, ಪ್ರವೀಣ್‌ ಅಚಾರ್ಯ ರವರಿಗೆ ಮೈ ಕೈ ನೋವಾಗಿದ್ದು ಪಿರ್ಯಾದಿದಾರರನ್ನು ಅವರ ಮಗ ನಿತಿನ್‌ ಕಾರಿನಲ್ಲಿ ಬ್ರಹ್ಮಾವರದ ಪ್ರಣಮ್‌ ‌ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಒಳ ರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ಪ್ರವೀಣ್‌ ಅಚಾರ್ಯ, ಪ್ರಸಾದ ಅಚಾರ್ಯ, ಮತ್ತು ರಮೇಶ ಅಮೀನ್‌‌ರವರು ಬ್ರಹ್ಮಾವರ ಸರಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 26/2021 ಕಲಂ: 504, 324, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಬ್ರಹ್ಮಾವರ: ದಿನಾಂಕ 20/02/2020 ರಂದು ಬೆಳಿಗ್ಗೆ ಪಿರ್ಯಾದಿದಾರರಾದ ಶಂಕರ ಶಾಂತಿ  (38), ತಂದೆ: ಅಯಿತ ಪೂಜಾರಿ, ವಾಸ: ಗಾಯತ್ರಿ ನಿಲಯ, ಕಾಳಿಕಾಂಬ ದೇವಸ್ದಾನದ ಹತ್ತಿರ  ಕಚ್ಚೂರು ಗ್ರಾಮ, ಬ್ರಹ್ಮಾವರ  ತಾಲೂಕು ಇವರು ಬೆಳಿಗ್ಗೆ 09:30 ಗಂಟೆಗೆ ಬಾರಕೂರು ಕಾಳಿಕಾಂಬ ದೇವಸ್ದಾನದ ಎದುರು ಇರುವ ವೆಂಕಟೇಶ ಪೈರವರ  ಹೋಟೇಲ್‌ಗೆ ಚಾ ಕುಡಿಯಲು ರಸ್ತೆಯಲ್ಲಿ ಮೋಟಾರ್‌ ಬೈಕ್‌ನಲ್ಲಿ ಹೋಗುತ್ತಿರುವಾಗ ಪ್ರವೀಣ್‌ ಅಚಾರ್ಯ, ಪ್ರಸಾದ್ ಅಚಾರ್ಯ,  ಮಂಜಪ್ಪ ಪೂಜಾರಿ, ಶಾಂತರಾಮ ಶೆಟ್ಟಿ, ದಿವಾಕರ, ಮಂಜಪ್ಪ ಪೂಜಾರಿಯವರ ಮಗ ಹಾಗೂ ಇತರರು ಪಿಕ್‌‌ಆಫ್‌ ವಾಹನವನ್ನು  ರಸ್ತೆಗೆ ಅಡ್ಡವಿಟ್ಟು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಬೈಕಿನಿಂದ ಇಳಿಸಿ ದೇವಸ್ದಾನದ ಸಭಾ ಭವನದ ಅಡಿಗೆ ಕೋಣೆಗೆ  ಕರೆದುಕೊಂಡು ಹೋಗಿ ಪ್ರವೀಣ್‌ ಅಚಾರ್ಯ, ಪ್ರಸಾದ್‌‌ ಅಚಾರ್ಯ, ಮಂಜಪ್ಪ ಪೂಜಾರಿ, ಶಾಂತಾರಾಮ ಶೆಟ್ಟಿ ಇವರುಗಳು ಅವರ ಕೈಯಲ್ಲಿದ್ದ  ಕಬ್ಬಿಣದ ರಾಡ್‌ನಿಂದ ಪಿರ್ಯಾದಿದಾರರ ಕಾಲು ಮತ್ತು ಕೈಗಳಿಗೆ  ಮತ್ತು ಬೆನ್ನಿಗೆ, ತಲೆಗೆ ಸರಿಯಾಗಿ ಹೊಡೆದರು ಉಳಿದವರು ಕೈಗಳಿಂದ ಕೆನ್ನೆಗೆ, ಮೈಕೈಗೆ ಗುದ್ದಿ ನೆಲಕ್ಕೆ ಬಿಳಿಸಿ ಕಾಲಿನಿಂದ ತುಳಿದರು ಅವರು  ಹೊಡೆಯುತ್ತಿರುವಾಗ  ನೋವು ತಡೆಯಲಾರದೇ ಬೊಬ್ಬೆ ಹಾಕುತ್ತಿದ್ದಾಗ ಅಲ್ಲಿಯೇ  ಹತ್ತಿರದಲ್ಲಿದ್ದ ಪಿರ್ಯಾದಿದಾರರ ಮನೆಯಿಂದ ಅವರ ಹೆಂಡತಿ ಓಡಿ ಬಂದಿರುತ್ತಾರೆ. ಅವರೆಲ್ಲರೂ ಪಿರ್ಯಾದಿದಾರರನ್ನು ಉದ್ದೇಶಿಸಿ ಬೆದರಿಕೆ  ಹಾಕಿ ಅಲ್ಲಿಂದ ಹೋಗಿರುತ್ತಾರೆ.  ಈ ಹಲ್ಲೆಯಿಂದ ಪಿರ್ಯಾದಿದಾರರ ಬಲಕಾಲಿನ ಮೊಣಗಂಟು ಹಾಗೂ ಕೆಳಗೆ  ಮತ್ತು ಎಡಕೈಗೆ ತೀವ್ರ ತರದ  ರಕ್ತಗಾಯ ಅಲ್ಲದೇ  ಎಡಕಾಲಿನ ಮಣಿಗಂಟಿನ ಮೇಲೆ ಮತ್ತು ಬಲಕೈ ಮೊಣಗಂಟಿನ ಬಳಿ ರಕ್ತಗಾಯವಾಗಿರುತ್ತದೆ. ಅಲ್ಲದೇ ಬೆನ್ನಿಗೆ  ಹೊಟ್ಟೆಗೆ ಗುದ್ದಿದ  ಒಳನೋವು ಉಂಟಾಗಿರುತ್ತದೆ. ಅಲ್ಲಿಂದ ಪಿರ್ಯಾದಿದಾರರ ಹೆಂಡತಿ ಪಿರ್ಯಾದಿದಾರರನ್ನು ಮನೆಗೆ ಕರೆದುಕೊಂಡು ಹೋಗಿ 108 ಅಂಬುಲೆನ್ಸ್‌‌ಗೆ  ಕರೆ ಮಾಡಿ ಅಂಬುಲೈನ್ಸ್‌ನಲ್ಲಿ ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ಕರೆದುಕೊಂಡುಬಂದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ಆರೋಪಿಗಳು ಪಿರ್ಯಾದಿದಾರರನ್ನು ಕೊಲೆ ಮಾಡುವ ಉದ್ದೇಶದಿಂದ ಈ ಹಲ್ಲೆ ಮಾಡಿರುವುದಾಗಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 27/2021 ಕಲಂ: 143, 147, 148, 341,  323, 324, 326, 307, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 21-02-2021 09:28 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080