ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

  • ಕಾರ್ಕಳ : ದಿನಾಂಕ 20/02/2021 ರಂದು ಸಂಜೆ 5:15 ಗಂಟೆಗೆ ಕಾರ್ಕಳ ತಾಲೂಕು, ಕುಕ್ಕೂಂದೂರು ಗ್ರಾಮದ ಮುಂರ್ಗಿ ಎಂಬಲ್ಲಿ ಹಾದು ಹೋಗುವ ಕಾರ್ಕಳ–ಪಳ್ಳಿ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ 407 ಟೆಂಪೋ ನಂಬ್ರ KA-20-AA-1645 ನೇಯದರ ಚಾಲಕ ಮಾರ್ಕ್ ಲೂಯಿಸ್ ಡಿಸೋಜಾ ತನ್ನ 407 ಟೆಂಪೋವನ್ನು ಕಾರ್ಕಳ ಕಡೆಯಿಂದ ಮೂಡುಬೆಳ್ಳೆ ಕಡೆಗೆ ತಿರುವಿನಲ್ಲಿ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಾದ ಸಂದೇಶ (28), ತಂದೆ: ಸ್ಯಾಮುಯಲ್ ಸುಧಾಕರ, ವಾಸ: #39, ಗುಂಡ್ಯಡ್ಕ, ಬೈಲೂರು ಅಂಚೆ, ಕೌಡೂರು ಗ್ರಾಮ, ಕಾರ್ಕಳ ತಾಲೂಕು ಇವರು ಗುಂಡ್ಯಡ್ಕ ಕಡೆಯಿಂದ ಕಾರ್ಕಳ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರು ಸೈಕಲ್ ನಂಬ್ರ KA-20-EW-6374 ನೇಯದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಎಡಭುಜದ ಬಳಿ ಒಳ ಜಖಂ, ಬಲಕಾಲಿನ ಮೊಣಗಂಟಿನ ಬಳಿ ರಕ್ತ ಗಾಯ ಹಾಗೂ ಕೈಕಾಲುಗಳಿಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 22/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ 

  • ಕಾಪು: ಪಿರ್ಯಾದಿದಾರರಾದ ಸುರೇಶ ಶೆಟ್ಟಿ( 40), ತಂದೆ : ಸಂಜೀವ ಶೆಟ್ಟಿ, ವಾಸ : ಮಂಡೇಡಿ, ಇನ್ನಂಜೆ ಗ್ರಾಮ & ಅಂಚೆ, ಕಾಪು ತಾಲೂಕು ಉಡುಪಿ ಜಿಲ್ಲೆ ಇವರಿಗೆ ದಿನಾಂಕ 21/02/2021 ರಂದು ಬೆಳಗ್ಗೆ 08.00 ಗಂಟೆ ಸಮಯಕ್ಕೆ ಸ್ಥಳೀಯರು ಒಬ್ಬರು ಪೋನ್ ಮಾಡಿ ಪಾಂಗಾಳ ಬಿಜಾಮಠ ನೀರಿನ ತೋಡಿನ ಸಮೀಪದ ವಲೇರಿಯನ್ ರವರ ಗದ್ದೆಯಲ್ಲಿ ಓರ್ವ ಗಂಡಸಿನ ಮೃತ ದೇಹ ಇರುವುದಾಗಿ ತಿಳಿಸಿದಂತೆ ಪಿರ್ಯಾದಿದಾರರು ಸ್ಥಳಕ್ಕೆ ಬಂದು ನೋಡುವಾಗ ಮೃತ ದೇಹವಾಗಿದ್ದು, ಮೃತ ದೇಹ ಕೊಳೆತ ಸ್ಥಿತಿಯಲ್ಲಿದ್ದು, ಎಡಕಾಲಿನ ಮಾಂಸವನ್ನು ಯಾವುದೋ ಪ್ರಾಣಿ ತಿಂದು ಹೋಗಿದ್ದು ಕಂಡು ಬಂದಿದ್ದು, ಗಂಡಸಿನ ಮೃತ ದೇಹ ಯಾರದೆಂದು ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 05/2021 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 21-02-2021 06:25 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ