ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಆದಿತ್ಯ  (26), ತಂದೆ: ರಾಜು ದೇವಾಡಿಗ, ವಾಸ: ಮಂಜುನಾಥ ನಿಲಯ, ಹರ್ತಟ್ಟು ಗಿಳಿಯಾರು ಗ್ರಾಮ, ಬ್ರಹ್ಮಾವರ ತಾಲೂಕು ಇವರು ದಿನಾಂಕ 18/01/2023 ರಂದು ಮೊಬೈಲ್ ಕೆಲಸದ ಬಗ್ಗೆ ಕುಂದಾಪುರಕ್ಕೆ ಹೋಗಿ ವಾಪಾಸು ಕೋಟ ಕಡಗೆ ಬರುತ್ತಿರುವಾಗ ರಾತ್ರಿ 08:00 ಗಂಟೆಗೆ ತೆಕ್ಕಟ್ಟೆ ಗ್ರಾಮದ ಗಣೇಶ್ ವೈನ್ ಶಾಫ್ ಎದುರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ತಲುಪಿದಾಗ ಪಿರ್ಯಾದಿದಾರರ ಎದುರಿನಲ್ಲಿ ಅದೇ ಮಾರ್ಗವಾಗಿ ಉಡುಪಿ ಕಡೆಗೆ ಹೋಗುತ್ತಿದ್ದ ಲಾರಿ ನಂಬ್ರ KA-22-D-9366 ನೇದನ್ನು ಅದರ ಚಾಲಕನಾದ ಸೋಮಲಿಂಗಪ್ಪ ಅತೀವೇಗ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರ ಎಡಬದಿಗೆ ಹೋಗಿ ರಸ್ತೆ ದಾಟಲು ನಿಂತಿದ್ದ ಪಾದಾಚಾರಿ ಉಮೇಶ್ ತೀರ್ಥಹಳ್ಳಿ ಎಂಬುವವರಿಗೆ ಡಿಕ್ಕಿ ಹೊಡೆದ ಪರಿಣಾಮ ಪಾದಾಚಾರಿಯ ತಲೆ ಹಾಗೂ ಎದೆಗೆ ತೀವೃ ಗಾಯವಾಗಿರುತ್ತದೆ. ಗಾಯಾಳುವನ್ನು ಕೋಟೇಶ್ವರ ಎನ್.ಆರ್. ಆಚಾರ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 08/2023  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾದ ಶೇಖ್‌   ನಝೀರ್‌ ಅಹಮ್ಮದ್‌ (54), ತಂದೆ: ಫಕೀರ್‌  ಸಾಹೇಬ್‌, ವಾಸ:  ನಝೀರ್‌ ಮಂಝಿಲ್‌ ತಾಹೀರ್‌ ನಗರ , ಬೆಳ್ವಾಯಿ ಕಾರ್ಕಳ ಇವರು ದಿನಾಂಕ 17/01/2023 ರಂದು ಹೆಂಡತಿಯೊಂದಿಗೆ ಕೊಡವೂರು ಮೂಡುಬೆಟ್ಟು ಮುಖ್ಯಪ್ರಾಣ ರಸ್ತೆಯಲ್ಲಿ ಇರುವ ತನ್ನ ಬಾಡಿಗೆ ಮನೆಗೆ ಬೀಗ ಹಾಕಿ ತನ್ನ ಊರಾದ ಬೆಳುವಾಯಿಗೆ  ಹೋಗಿದ್ದು, ದಿನಾಂಕ 20/01/2023 ರಂದು ಬೆಳಿಗ್ಗೆ 7:00 ಗಂಟೆಗೆ ಪಿರ್ಯಾದಿದಾರರ ಬಾಡಿಗೆ ಮನೆಯ ಪಕ್ಕದ ನಿವಾಸಿ ಮೊಂತಿ ಡಿಕಾಸ್ತ ರವರು ಪಿರ್ಯಾದಿದಾರರ ಹೆಂಡತಿ ರೆಹನಾ ರವರಿಗೆ ಪೋನ್ ಕರೆ ಮಾಡಿ ಮೂಡುಬೆಟ್ಟು ಮುಖ್ಯ ಪ್ರಾಣ ರಸ್ತೆಯಲ್ಲಿ ಇರುವ ಪಿರ್ಯಾದಿದಾರರ ಬಾಡಿಗೆ ಮನೆಯಲ್ಲಿ ಕಳ್ಳತನ ಆಗಿರುವ ಬಗ್ಗೆ ಮಾಹಿತಿ ನೀಡಿದಂತೆ ಪಿರ್ಯದಿದಾರರು ಬೆಳುವಾಯಿಯಿಂದ ಹೊರಟು ಬೆಳಿಗ್ಗೆ 8:30 ಗಂಟೆಗೆ ಕೊಡವೂರು ಮೂಡುಬೆಟ್ಟು ಮುಖ್ಯ ಪ್ರಾಣ  ರಸ್ತೆಯಲ್ಲಿ ಇರುವ ಪಿರ್ಯಾದಿದಾರರ ಬಾಡಿಗೆ ಮನೆಗೆ ಬಂದು ನೋಡಿದಾಗ ಮನೆಯ ಮುಖ್ಯ ಬಾಗಿಲಿನ ಬೀಗವನ್ನು  ಯಾರೋ ಕಳ್ಳರು ಯಾವುದೋ ಆಯುಧದಿಂದ ಮೀಟಿ ಮುರಿದು ಮನೆಯ ಒಳಗೆ ಪ್ರವೇಶಿಸಿ ಮನೆಯ ಡೈನಿಂಗ್ ರೂಮಿನ ಉತ್ತರ ಬದಿ  ಇದ್ದ ಬೆಡ್ ರೂಮಿನಲ್ಲಿ ಇದ್ದ 3 ಗೋದ್ರೇಜ್ ಕಪಾಟಿನ ಬೀಗ ಮುಗಿದು ಬಟ್ಟೆ ಬರೆಗಳನ್ನು ಎಳೆದು ನೆಲದಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿ ಬೆಡ್ ರೂಮಿನ ಪೂರ್ವಬದಿಯ ಗೋಡೆಯ ಬಳಿ ಇದ್ದ ಗೋದ್ರೇಜ್ ಕಪಾಟಿನ ಲಾಕರ್ ನಲ್ಲಿ ಡಬ್ಬದಲ್ಲಿ ಇರಿಸಿದ್ದ 2 ಚಿನ್ನದ ಬಳೆಗಳು  30 ಗ್ರಾಂ, 3 ಚಿನ್ನದ ಉಂಗುರಗಳು 10 ಗ್ರಾಂ,ಉಂಗುರ ಸಹಿತ ಬ್ರಾಸ್ ಲೇಟ್ ತೂಕ 8 ಗ್ರಾಂ ಒಟ್ಟು 48 ಗ್ರಾಂ ತೂಕದ ಚಿನ್ನಾಭರಣ ಮೌಲ್ಯ ರೂಪಾಯಿ 2,00,000/- ಹಾಗೂ ಲಾಕರ್‌ ನಲ್ಲಿ  ಇದ್ದ 2 ರಾಡೋ ಕಂಪೆನಿಯ ವಾಚ್ ಮೌಲ್ಯ ರೂಪಾಐಿ 10,000/ , ಸಿ.ಕೆ  ಕಂಪೆನಿಯ ವಾಚ್ ಮೌಲ್ಯ ರೂಪಾಯಿ 12,000/-, ಹೈನೋಟಿಕ್ ಕಂಪೆನಿಯ ವಾಚ್  ಮೌಲ್ಯ ರೂಪಾಯಿ  3,000 ಒಟ್ಟು 2,25,000/- ಮೌಲ್ಯದ ಚಿನ್ನಾಭರಣ  ಹಾಗೂ ಸೊತ್ತನ್ನು ಯಾರೋ  ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 08/2023  ಕಲಂ: 45̧4, 45̧7, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಅಸ್ವಾಭಾವಿಕ ಮರಣ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಹೇಮಂತ್ ಕುಮಾರ್ (37), ತಂದೆ: ದಿ ಸಂಜೀವಪ್ಪ ವಾಸ: ಕಾಟಿಕೆರೆ ಪೊಸ್ಟ್, ಶೆಟ್ಟಿ ಹಳ್ಳಿ, ಶಿವಮೊಗ್ಗ ತಾಲೂಕು ಶಿವಮೊಗ್ಗ ಜಿಲ್ಲೆ ಇವರ ಅಣ್ಣ ಸುನೀಲ್ ಕುಮಾರ್ ಇವರು ದಿನಾಂಕ 17/01/2023 ರಂದು  ಕುಂದಾಪುರ ನಾಡ ಗುಡ್ಡೆ ಅಂಗಡಿಯ ವಾರ್ಷಿಕ ಗೆಂಡ ಸೇವೆಗೆಂದು  ಬಂದವರು ಕುಂದಾಪುರದ ರಾಜೇಂದ್ರ  ತೋಳಾರ್ ರವರ ಮಾಲಿಕತ್ವದ  ಶರೋನ್ ಹೊಟೇಲ್ ನಲ್ಲಿ ರೂಮ್ ನಂಬರ್ 207 ರಲ್ಲಿ  ವಾಸ್ತವ್ಯ  ಹೂಡಿದವರು ದಿನಾಂಕ 20/01/2023 ರವರೆಗೂ ಬಾಗಿಲು ತೆರೆಯದೆ ಇದ್ದು, ನಂತರ ಅನುಮಾನಗೊಂಡ ಮಾಲೀಕರು ಕಿಟಕಿಯಿಂದ ರೂಮ್ ಒಳಗೆ  ನೋಡಿದಾಗ ಸುನೀಲ ರವರು ರೂಮ್ ನ ಬೆಡ್ ಮೇಲೆ ಕವಚಿ ಮಲಗಿಕೊಂಡಿದ್ದು ದುರ್ವಾಸನೆ ಬರುತ್ತಿರುವ ಮಾಹಿತಿಯನ್ನು ಶೆರೋನ್ ಮಾಲೀಕರು ಪಿರ್ಯಾದಿದಾರರಿಗೆ ತಿಳಿಸಿದಾಗ ಪಿರ್ಯಾದಿದಾರರು ಸ್ಥಳೀಯ ಪೊಲೀಸರೊಂದಿಗೆ ಬಂದು  ಬಾಗಿಲು ಒಡೆದು ನೋಡಿದಾಗ ಪಿರ್ಯಾದಿದಾರರ ಅಣ್ಣ ಮೃತಪಟ್ಟಿದ್ದು, ಮೃತ ದೇಹವು ದುರ್ವಾಸನೆ ಬರುತ್ತಿದ್ದು ದೇಹದ ಮೇಲೆ ಯಾವುದೇ ಹೊಸದಾದ ಗಾಯಗಳು ಕಂಡು ಬಂದಿರುವುದಿಲ್ಲ, ಪಿರ್ಯಾದಿದಾರರ ಅಣ್ಣ ಸುನೀಲ್ ಕುಮಾರ್ ರವರು ವಿಪರಿತ ಶರಾಬು ಕುಡಿಯುವ ಚಟ ಹೊಂದಿದ್ದು,  17/01/2023 ರಂದು ರಾತ್ರಿ 09:30 ಗಂಟೆಯಿಂದ ದಿನಾಂಕ 20/01/2023 ರ ಬೆಳಿಗ್ಗೆ 08:30 ಗಂಟೆಯ ಮದ್ಯ ಅವಧಿಯಲ್ಲಿ ಯಾವುದೊ ಕಾರಣದಿಂದ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 04/2023 ಕಲಂ: 174 CrPC ಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 21-01-2023 09:35 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080