ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕೋಟ: ಪಿರ್ಯಾದಿದಾರರಾಧ ಶಂಕರ ಪೂಜಾರಿ (52) ತಂದೆ: ದಿ. ರಾಮ ಪೂಜಾರಿ ವಾಸ: ಗೋಳಿಗರಡಿ ಮನೆ ಹಂದಟ್ಟು ಕೊಟತಟ್ಟು  ಗ್ರಾಮ, ಬ್ರಹ್ಮಾವರ ಇವರು ದಿನಾಂಕ 20/01/2023 ರಂದು ತನ್ನ ಮನೆಗೆ ಸಾಮಾನು ತರಲು ಕೋಟ ಮೂರುಕೈಗೆ ಹೋಗಿ ವಾಪಾಸು ಮನೆ ಕಡೆಗೆ ಸೈಕಲ್ ನಲ್ಲಿ ಬರುತ್ತಿರುವಾಗ ಸಮಯ ಸುಮಾರು ರಾತ್ರಿ 08:30 ಗಂಟೆಗೆ ಕೋಟತಟ್ಟು ಗ್ರಾಮದ ಕೋಟ ಮೂರುಕೈ ಬಳಿ ಲಯನ್ಸ ಕಣ್ಣಿನ ಆಸ್ಪತ್ರೆಯ ಪಕ್ಕದಲ್ಲಿರುವ ಅಂಬಾಗಿಲು ಕೆರೆ ಸಾರ್ವಜಿನಿಕ ರಸ್ತೆಯಲ್ಲಿ ಹಂದಟ್ಟು ಕಡೆಗೆ ಹೋಗುತ್ತಾ ಇಳಿಜಾರಿನಲ್ಲಿ ಪ್ರಕಾಶ ಮಯ್ಯ ರವರ ಮನೆ ಬಳಿ ಹೋಗುತ್ತಿರುವಾಗ ಹಂದಟ್ಟು ಕಡೆಯಿಂದ ರಾಷ್ಟ್ರೀಯ ಹೆದ್ದಾರಿ 66 ರ ಕಡೆಗೆ ಆಟೋ ರಿಕ್ಷಾ ನಂಬ್ರ KA-19 D-0330 ನೇದರ ಚಾಲಕನಾದ ಸತೀಶ್ ಎಂಬುವವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ಬಲಬದಿಗೆ ಕ್ರಮದಂತೆ ಹೋಗುತ್ತಿದ್ದ ಶಂಕರ ಪೂಜಾರಿ ಇವರ ಸೈಕಲ್ ಗೆ ಡಿಕ್ಕಿ ಹೊಡೆದಿದ್ದು ಇವರು ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಅವರ ಬಲಕಣ್ಣಿನ ಮೇಲೆ , ತಲೆಗೆ, ಕುತ್ತಿಗೆ ಬಳಿ ಭುಜಕ್ಕೆ ರಕ್ತ ಗಾಯವಾಗಿದ್ದೂ ಬಲಕಾಲಿನ ಮೊಣಗಂಟಿನಲ್ಲಿ ಹಾಗೂ ಮೊಣಗಂಟಿನ ಮೇಲೆ ಮೂಳೆ ಮುರಿತದ ಗಾಯವಾಗಿರುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 09/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ದಿನಾಂಕ 20/01/2023 ರಂದು ಸಮಯ ಸುಮಾರು ಮದ್ಯಾಹ್ನ 3:45 ಗಂಟೆಗೆ ಅಂಬಲಪಾಡಿ ಗ್ರಾಮದ ಅಭಿನಂದನಾ ಪೆಟ್ರೋಲ್ ಬಂಕ್ ಹತ್ತಿರ ಇರುವ ರಾಯಲ್ ಎನ್‌ಫೀಲ್ಡ್ ಬುಲೆಟ್ ಶೋರೂಮ್ ಎದುರುಗಡೆ ಹಾದುಹೋಗಿರುವ ಸಾರ್ವಜನಿಕ ರಸ್ತೆಯಲ್ಲಿ ಆರೋಪಿ ರತನ್ ಎಂಬಾತನು KA-20 EW-1216 ನೇ ಬುಲೆಟ್ ನ್ನು ಬುಲೆಟ್ ಶೋರೂಮ್ ಕಡೆಯಿಂದ ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಏಕಾಏಕಿ ಸರ್ವಿಸ್ ರಸ್ತೆಗೆ ಬಂದ ಪರಿಣಾಮ ಅಂಬಲಪಾಡಿ ಕಡೆಯಿಂದ ಕರಾವಳಿ ಕಡೆಗೆ ಸುನಿಲ್ ರವರು KA-20 EJ-2199 ನೇ ಮೋಟಾರ್ ಸೈಕಲಿನಲ್ಲಿ ಪಿರ್ಯಾದಿದಾರರಾಧ ಪ್ರಮೋದ್ ಕುಮಾರ್ (35),ತಂದೆ: ಗುಣಪಾಲ ಶೆಟ್ಟಿ ವಾಸ: ಬಂಡಸಾಲೆ ಮನೆ, ಬಾಣಬೆಟ್ಟು, ಹಾವಂಜೆ ಗ್ರಾಮ ಬ್ರಹ್ಮಾವರ ತಾಲೂಕು ಉಡುಪಿ ಇವರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು  ಬರುತ್ತಿದ್ದವರಿಗೆ ಡಿಕ್ಕಿ ಹೊಡೆದ ಪರಿಣಾಮ ಸುನಿಲ್ ಮತ್ತು ಇವರು ಬೈಕ್ ಸಮೇತ ರಸ್ತೆಗೆ ಬಿದ್ದು ಪ್ರಮೋದ್ ಕುಮಾರ್ ರವರ ಎಡಕಾಲಿಗೆ ಗುದ್ದಿದ ಒಳಜಖಂ ಆಗಿದ್ದು ಅಲ್ಲದೇ ಸುನಿಲ್‌ರವರ ಎಡಕಾಲಿನ ಪಾದದ ಬಳಿ ರಕ್ತಗಾಯ ಮತ್ತು ಎಡಭುಜಕ್ಕೆ ಗುದ್ದಿದ ಒಳಜಖಂ ಆಗಿರುತ್ತದೆ. ಈ ಬಗ್ಗೆ ಚಿಕಿತ್ಸೆಗಾಗಿ ಉಡುಪಿ ಹೈಟೆಕ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿರುವುದಾಗಿದೆ. ಈ ಬಗ್ಗೆ  ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 05/2023 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಅಜೆಕಾರು: ಪಿರ್ಯಾದಿದಾರರಾದ ಗಿರೀಜಾ (65) ಗಂಡ: ಮಾಧವ ನಾಯ್ಕ್ ವಾಸ: ಮಾತ್ರಶ್ರೀ ನಿಲಯ ಮುಂಡುಜೆ ಮನೆ ಬೊಮ್ಮ್ರಬೆಟ್ಟು ಗ್ರಾಮ ಹಿರಿಯಡಕ  ಇವರು ಮನೆವಾರ್ತೆ ಕೆಲಸ ಮಾಡಿದ್ದು ದಿನಾಂಕ 20/01/2023 ರಂದು ಸಂಜೆ 7:30 ಗಂಟೆಗೆ ತನ್ನ ಅಳಿಯವಾದ ಶೇಖರ ನಾಯ್ಕ್ ರವರೊಂದಿಗೆ KA-03 EG-0640 ನೇ ಬೈಕಿನಲ್ಲಿ ಮನೆಯಿಂದ ಹೊರಟು ಹರಿಖಂಡಿಗೆ, ದೊಂಡೇರಂಗಡಿ ಮಾರ್ಗವಾಗಿ ಸಮಯ ಸುಮಾರು ರಾತ್ರಿ 8:00 ಗಂಟೆಗೆ ಬಂಗೇರು ಪಾದೆ ತಲುಪುವಾಗ ಎದುರಿನಿಂದ ಅಂದರೆ ಕಡ್ತಲದಿಂದ ದೊಂಡೇರಂಗಡಿ ಕಡೆಗೆ ಒಬ್ಬ ಮೋಟಾರ್ ಸೈಕಲ್ ನ್ನು ಅತೀ ವೇಗ ಅಜಾಗರುಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರ ಬಲಭಾಗಕ್ಕೆ ಬಂದು ಗಿರಿಜಾ ರವರು ಹೋಗುತ್ತಿದ್ದು ಬೈಕ್ ಗೆ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ ಇವರು ಹಾಗೂ ಶೇಖರ್ ರವರು  ರಸ್ತೆಗೆ ಬಿದ್ದು ಗಿರಿಜಾ ರವರಿಗೆ ಕೈಗೆ,ಮುಖಕ್ಕೆ ತರಚಿದ ಗಾಯ ಹಾಗೂ ಸೊಂಟಕ್ಕೆ ಗುದ್ದಿದ ಒಳನೋವು ಹಾಗೂ ಶೇಖರ ಬಲಗಾಲಿನ ಬೆರಳು ಜಖಂಗೊಂಡಿದ್ದು ಕೈ,ಕಾಲು ಮುಖಕ್ಕೆ ತರಚಿದ ಗಾಯವಾಗಿದ್ದು ಅಲ್ಲದೇ ಎದುರಿನ ಬೈಕ್ ಸವಾರನಿಗೆ ಗಾಯವಾಗಿದ್ದು ಸಾರ್ವಜನಿಕರು ಪಿರ್ಯಾದಿದಾರರನ್ನು ಹಾಗೂ ಶೇಖರನ್ನು ಕಡ್ತಲದ ಕ್ಲಿನಿಕ್ ನಲ್ಲಿ  ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ  ಚಿಕಿತ್ಸೆ ಬಗ್ಗೆ  ಮಣಿಪಾಲ ಕೆ.ಎಂ.ಸಿ. ಆಸ್ಪತ್ರಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಗಿರಿಜಾ ರವರನ್ನು ಹೊರ ರೋಗಿಯಾಗಿ ಚಿಕಿತ್ಸೆ ನೀಡಿ ಶೇಖರನನ್ನು ಒಳ ರೋಗಿಯಾಗಿ ದಾಖಲಿಸಿದ್ದು ಎದುರಿನಿಂದ ಬರುತ್ತಿದ್ದ ಮೋಟಾರ್ ಸೈಕಲ್ ನಂಬ್ರ KA- 20 X-5480   ಎಂದು ಸಾರ್ವಜನಿಕರಿಂದ ತಿಳಿದು ಬಂದಿದ್ದು ಈ  ಅಪಘಾತಕ್ಕೆ ಮೋಟಾರು ಸೈಕಲ್ ಸವಾರನು ಅತೀ ವೇಗ  ನಿರ್ಲಕ್ಷ್ಯತನದ ಚಾಲನೆಯೇ ಕಾರಣವಾಗಿರುವುದಾಗಿದೆ. ಈ ಬಗ್ಗೆ  ಅಜೆಕಾರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 04/2023 ಕಲಂ: 279, 338, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಪಡುಬಿದ್ರಿ: ಪಿರ್ಯಾದಿದಾರರಾಧ ಸಂತೋಷ್ ದೇವಾಡಿಗ, (41) ತಂದೆ: ಆನಂದ ದೇವಾಡಿಗ, ವಾಸ: ಅಬ್ಬೇಡಿ ಹೊಸಮನೆ, ಪಡುಬಿದ್ರಿ ಅಂಚೆ, ನಡ್ಸಾಲು ಗ್ರಾಮ, ಕಾಪು ಇವರ ಸಂಬಂಧಿ ಸದಾನಂದ ದೇವಾಡಿಗ(48) ಎಂಬುವರು ಕೆಲಸದ ಬಗ್ಗೆ ಬೆಳ್ಮಣ್ ನಿಂದ ಮೂಲ್ಕಿಗೆ ಹೋಗುತ್ತಾ, ಈ ದಿನ ದಿನಾಂಕ 03/01/2023 ರಂದು ಸಮಯ ಸುಮಾರು 08:52 ಗಂಟೆಗೆ ಕಾಪು ತಾಲೂಕು ನಡ್ಸಾಲು ಗ್ರಾಮ ಪಡುಬಿದ್ರಿ ಪೇಟೆಯ ಸನ್ನಿಧಿ ಮೆಡಿಕಲ್ ಬಳಿ ರಾಷ್ಟ್ರೀಯ ಹೆದ್ದಾರ-66 ರ ಮಂಗಳೂರು-ಉಡುಪಿ ಏಕಮುಖ ಸಂಚಾರ ರಸ್ತೆಯನ್ನು ದಾಟಿ, ರಾ.ಹೆ-66 ರ ಮಧ್ಯ ಡಿವೈಡರ್ ಬಳಿ ತಲುಪುತ್ತಿದ್ದಂತೆ KA-19-HG-7543  ನೇ ನಂಬ್ರದ  ಮೋಟಾರ್ ಸೈಕಲ್ ಸವಾರ ಯಶವಂತ್ ಎಂಬಾತನು ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಸಾಗುವ ಏಕಮುಖ ಸಂಚಾರ ರಸ್ತೆಯಲ್ಲಿ ತನ್ನ ಮೋಟಾರ್‌ಸೈಕಲ್ಲನ್ನು ಅತೀವೇಗ ಹಾಗೂ ಅಜಾರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಸದಾನಂದ ದೇವಾಡಿಗ ರವರಿಗೆ ಡಿಕ್ಕಿ ಹೊಡೆದಾಗ, ಸದಾನಂದ ದೇವಾಡಿಗ ರವರು ರಸ್ತೆಗೆ ಬಿದ್ದ ಪರಿಣಾಮ ಅವರ ತಲೆಯ ಹಿಂಭಾಗಕ್ಕೆ ಗಂಭೀರ ಸ್ವರೂಪದ ಗಾಯವಾಗಿದ್ದು, ಮಾತನಾಡುತ್ತಿರಲಿಲ್ಲ, ಸದ್ರಿ ಸಮಯ ಆರೋಪಿತನೂ ಸಹ ಮೋಟಾರ್‌ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು, ಆತನ ಬಲಭುಜಕ್ಕೆ ಹಾಗೂ ತುಟಿಗೆ ಗಾಯಗಳಾಗಿರುತ್ತವೆ. ನಂತರ ಗಾಯಾಳುಗಳಿಗೆ ಪಡುಬಿದ್ರಿಯ ಸಿದ್ದಿವಿನಾಯಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ್ದು, ಗಾಯಾಳು ಸದಾನಂದ ದೇವಾಡಿಗರವರನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ  ಪಡುಬಿದ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 21/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಬ್ರಹ್ಮಾವರ: ಪಿರ್ಯಾದಿದಾರರಾಧ ನರೇಶ  (41), ತಂದೆ: ದಿ. ನಾರಾಯಣ ರಂಗಪ್ಪ ಪೂಜಾರಿ, ವಾಸ: ದುರ್ಗು ನಿವಾಸ, ಮೂಡುತೋಟ, ಹನೇಹಳ್ಳಿ ಗ್ರಾಮ, ಬ್ರಹ್ಮಾವರ ಇವರ ತಮ್ಮನಾದ ಯೋಗೀಶ (39) ಎಂಬವನು 7 ವರ್ಷಗಳಿಂದ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಸುಮಾರು 15 ದಿನಗಳ  ಹಿಂದೆ ಊರಿಗೆ ಬಂದು ಬ್ರಹ್ಮಾವರ ತಾಲೂಕು, ಹಂದಾಡಿ ಗ್ರಾಮದ, ಬೆಣ್ಣೆಕುದ್ರು ಎಂಬಲ್ಲಿ ತಾಯಿಯೊಂದಿಗೆ ವಾಸವಾಗಿದ್ದನು. ಅವನು ದಿನಾಂಕ 21/01/2023 ರಂದು ಬೆಳಗ್ಗಿನ ಜಾವ 04:30 ಗಂಟೆಯ ಸುಮಾರಿಗೆ ಮನೆಯ ರೂಮ್‌ ನಲ್ಲಿ ಮಲಗಿದ್ದವನು ಒಮ್ಮೇಲೆ ಒದ್ದಾಡುತ್ತಿದ್ದು, ವಿಷಯ ತಿಳಿದು ಅವರ  ಚಿಕ್ಕಮ್ಮ ಮನೆಗೆ ಬಂದಾಗ ಯೋಗೀಶನು ಒಮ್ಮೇಲೆ ಅವರನ್ನು ನೋಡಿದ್ದು, ನಂತರ ಅವರ ಚಿಕ್ಕಮ್ಮ ಯೋಗೀಶನನ್ನು ಉಪಚರಿಸುತ್ತಿರುವಾಗಲೇ ಉಸಿರಾಟ ನಿಂತಂತಾಗಿದ್ದು. ಕೂಡಲೇ ಯೋಗೀಶನನ್ನು ಚಿಕಿತ್ಸೆ ಬಗ್ಗೆ  ಬ್ರಹ್ಮಾವರದ ಪ್ರಣವ್‌ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈಧ್ಯರು ಪರಿಕ್ಷೀಸಿ ಈಗಾಗಲೇ ಯೋಗೀಶನು ಮೃತಪಟ್ಟ ಬಗ್ಗೆ ಬೆಳಿಗ್ಗೆ 06:25 ಗಂಟೆಗೆ ತಿಳಿಸಿರುವುದಾಗಿದೆ.  ಯೋಗೀಶನಿಗೆ ಕಳೆದ 2-3 ದಿನಗಳಿಂದ ಜ್ವರ ಇದ್ದು, ಇದೇ ಕಾರಣದಿಂದಲೋ ಅಥವಾ ಬೇರೆ ದೈಹಿಕ ಖಾಯಿಲೆಯಿಂದ ಮನೆಯಲ್ಲಿಮಲಗಿದ್ದವನು ಮೃತಪಟ್ಟಿರ ಬಹುದು. ಆತನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಯು.ಡಿ.ಆರ್‌ ಕ್ರಮಾಂಕ 05/2023 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಉಡುಪಿ: ದಿನಾಂಕ 15/12/2022 ರಂದು ಪಿರ್ಯಾದಿದಾರರಾಧ ನಿತಿನ್ (26) ತಂದೆ: ಅಚ್ಚುತ ನಾಯ್ಕ, ವಾಸ: ಬಾಯರ್ ಬೆಟ್ಟು ಚೇರ್ಕಾಡಿ ಗ್ರಾಮ, ಪೇತ್ರಿ, ಬ್ರಹ್ಮಾವರ ಇವರು ಗೂಗಲ್ ನಲ್ಲಿ ಲವ್ ಲೋಕಲ್ ಎಂಬ ಆನ್ ಲೈನ್ ಜೋಬ್ ವೆಬ್‌‌ಸೈಟ್ ನಲ್ಲಿದ್ದ ಮೊಬೈಲ್ ನಂಬ್ರವನ್ನು ಸಂಪರ್ಕಿಸಿದಲ್ಲಿ ಸದ್ರಿ ಮೊಬೈಲ್ ನಂಬ್ರ ಬಳಸುತ್ತಿದ್ದ ಅನ್ಸುಲಾ ಗುಪ್ತಾ ಎಂಬ ಅಪರಿಚಿತ ವ್ಯಕ್ತಿ ತಾನು ಸದ್ರಿ ಕಂಪೆನಿಯ ಹೆಚ್.ಆರ್. ಎಂದು ಹೇಳಿ ಆನ್ ಲೈನ್ ಜಾಬ್ ನೀಡುವುದಾಗಿ ನಂಬಿಸಿ, ದಿನಾಂಕ 15/12/2022 ರಿಂದ ದಿನಾಂಕ 06/01/2023 ರ ಮಧ್ಯಾವದಿಯಲ್ಲಿ ಒಟ್ಟು ರೂಪಾಯಿ 1,40,744/- ಹಣವನ್ನು ನಿತಿನ್‌ ಇವರಿಂದ ಗೋಗಲ್ ಪೇ ಮುಖೇನ ವಿವಿಧ ಖಾತೆಗಳಿಗೆ ವರ್ಗಾಯಿಸಿಕೊಂಡು ಉಧ್ಯೋಗ ನೀಡದೇ, ಪಡೆದ ಹಣವನ್ನು ವಾಪಾಸು ನೀಡದೇ ಮೋಸ ಮಾಡಿ, ನಷ್ಟ ಉಂಟು ಮಾಡಿರುವುದಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 07/2023 ಕಲಂ: 66(C), 66(D) ಐ.ಟಿ. ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 21-01-2023 06:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080