ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ : ದಿನಾಂಕ 19/01/2022 ರಂದು ರಾತ್ರಿ 8:30 ಗಂಟೆಗೆ ಪಿರ್ಯಾದಿದಾರರಾದ ಗಣೇಶ ಆಚಾರ್ಯ (32),  ತಂದೆ :  ಚಿನ್ನಯ್ಯ ಆಚಾರ್ಯ,  ವಾಸ:  ಹೋಯಿಗೆ ಸಾಲು ಮನೆ , ಉಳ್ತೂರು  ಗ್ರಾಮ  ಕುಂದಾಪುರ ತಾಲೂಕು ಇವರ ಅಣ್ಣ ರಾಮಚಂದ್ರ ಆಚಾರ್ಯ  ಎಂಬುವವರು ಅವರ KA-20-P-8685 ನೇ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ವಕ್ವಾಡಿ ಗ್ರಾಮದ ಕಳ್ಳಿಗುಡ್ಡೆ ಶೇಕರ ಮೋಗವೀರ ಅವರ ಮನೆಯ ಎದುರಿನ ಕಾಂಕ್ರೀಟ್ ರಸ್ತೆಯ ಎಡಬದಿಯ ಮಣ್ಣು ರಸ್ತೆಯಲ್ಲಿದ್ದ  ಸೋಲಾರ ದೀಪದ ಕಂಬಕ್ಕೆ ಡಿಕ್ಕಿ ಹೊಡೆದು ಪ್ರಜ್ಞಾಹೀನರಾಗಿದ್ದು, ಅವರನ್ನು ಅಲ್ಲಿ ಸೇರಿದ್ದ ಜನರು ಕೋಟೇಶ್ವರ ಎನ್ ಆರ್ ಆಚಾರ್ಯ ಆಸ್ಪತ್ರೆಗೆ ಕರೆದುಕೊಂಡು ಬಂದು ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ  ಕೆಎಂಸಿ ಆಸ್ಪತ್ರೆಗೆ  ಕರೆದುಕೊಂಡು  ಹೋದಾಗ  ಪರೀಕ್ಷಿಸಿದ ವೈದ್ಯರು ರಾತ್ರಿ 09:45 ಗಂಟೆಗೆ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 09/2022  ಕಲಂ: 279,304 (A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 19/01/2022 ರಂದು  ಪಿರ್ಯಾದಿದಾರರಾದ ಶಂಕರ ಮಡಿವಾಳ  (41), ತಂದೆ:  ಮಹಾಬಲ @ ಮರ್ಲ, ವಾಸ:ಕಾಳಿಗರಡಿ ಹತ್ತಿರ ಕೊಳ್ಕೆರೆ ಬಸ್ರೂರು ಗ್ರಾಮ ಮತ್ತು ಅಂಚೆ, ಕುಂದಾಪುರ ತಾಲೂಕು ಉಡುಪಿ ಜಿಲ್ಲೆ ಇವರ ತಂದೆ ಮಹಾಬಲ @ ಮರ್ಲ(72) ಎಂಬುವವರು 11:45 ಗಂಟೆಗೆ  ಅಂಬಾಗಿಲು ಜಂಕ್ಷನ್ ಬಳಿ ನಿಂತಿರುವಾಗ ಉಡುಪಿ ಕಡೆಯಿಂದ ಸಂತೆಕಟ್ಟೆ ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ KA-20-ET-0013 ನೇ ಮೋಟಾರ್ ಸೈಕಲ್ ಸವಾರ ರಾಘವೇಂದ್ರ ತನ್ನ ಮೋಟಾರ್ ಸೈಕಲನ್ನು ಸವಾರಿ ಮಾಡಿಕೊಂಡು ಬಂದು ಅಂಬಾಗಿಲು ಜಂಕ್ಷನ್ ಬಳಿ ದುಡುಕುತನ ಮತ್ತು ನಿರ್ಲಕ್ಷತನದಿಂದ  ಸವಾರಿ ಮಾಡಿ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ  ಮಹಾಬಲ ರವರು ರಸ್ತೆಗೆ ಬಿದ್ದು ಎಡಕಾಲಿಗೆ ಮೂಳೆ ಮುರಿತ ಉಂಟಾಗಿ ಗಂಭೀರ ಗಾಯವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 06/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿದಾರರಾದ ಶ್ರೀಮತಿ ಹೇಮಾ (37), ಗಂಡ: ನಾಗರಾಜ ಆಚಾರ್ಯ, ವಾಸ; ಸಿದ್ದಾಪುರ  ಸರ್ಕಲ್ ಬಳಿ  ಸಿದ್ದಾಪುರ  ಗ್ರಾಮ  ಕುಂದಾಪುರ  ತಾಲೂಕು ಇವರ ಗಂಡ ನಾಗರಾಜ ಅಚಾರ್ಯ (38) ಇವರು ವಿಪರೀತ ಶರಾಬು  ಕುಡಿಯುವ  ಚಟ  ಹೊಂದಿದ್ದು ಹಾಗೂ ಸರಿಯಾಗಿ  ಕಲಸಕ್ಕೆ ಹೋಗದೇ  ಇದ್ದು,  ಇದರಿಂದ ಮನನೊಂದು  ದಿನಾಂಕ 19/01/2022  ರಂದು  17:00 ಗಂಟೆಯಿಂದ ದಿನಾಂಕ  20/02/2022  ರಂದು  ಬೆಳಿಗ್ಗೆ 8:30 ಗಂಟೆಯ ಮಧ್ಯದ ಅವಧಿಯಲ್ಲಿ ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ಸಿದ್ದಾಪುರ  ರಂಗನಾಥಸಭಾಭವನದ  ಹಿಂಬದಿ ಹಾಡಿಯಲ್ಲಿ ಕುತ್ತಿಗೆಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 02/2022  ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಗಂಡಸು ಕಾಣೆ ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿದಾರರಾದ ಶ್ರೀಮತಿ  ಅಶ್ವಿನಿ (26),  ಗಂಡ. ಸಂತೋಷ  ಪೂಜಾರಿ, ವಾಸ: ಮುಡುವಳ್ಳಿ  ಮನೆ  ನಂ. 1-18 (ಎ)  ಹೈಕಾಡಿ  ಅಂಚೆ  ಹಾಲಾಡಿ  28 ಗ್ರಾಮ  ಕುಂದಾಪುರ  ತಾಲೂಕು ಇವರ  ಗಂಡ  ಸಂತೋಷ ಪೂಜಾರಿ(37) ಇವರು ದಿನಾಂಕ  15/08/2021 ರಂದು ಕುಂದಾಪುರ ತಾಲೂಕಿನ 28 ಹಾಲಾಡಿ ಗ್ರಾಮದ  ಹೈಕಾಡಿ  ಅಂಚೆಯ  ಮುಡವಳ್ಳಿ ಎಂಬಲ್ಲಿನ ಮನೆಯಿಂದ ಬೆಂಗಳೂರಿಗೆ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಹೋದವರು ವಾಪಾಸು ಮನೆಗೆ ಬಾರದೇ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 12/2022 ಕಲಂ:ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

  • ಬೈಂದೂರು:   ದಿನಾಂಕ 20/01/2022 ರಂದು ಸಮಯ ಬೆಳಿಗ್ಗೆ ಜನಾರ್ಧನ್,  ಸಹಾಯಕ ಪೊಲೀಸ್ ಉಪ ನಿರೀಕ್ಷಕರು, ಬೈಂದೂರ ಪೊಲೀಸ್ ಠಾಣೆ ಇವರು  ಸಿಬ್ಬಂದಿಗಳೊಂದಿಗೆ ಇಲಾಖಾ ಹೊಯ್ಸಳ ಜೀಪ್ ನಲ್ಲಿ ಬೈಂದೂರು ತಾಲೂಕು ಹೆರಂಜಾಲು ಕಡೆ ರೌಂಡ್ಸ್ ಕರ್ತವ್ಯ ದಲ್ಲಿರುವಾಗ ಕಂಬದಕೋಣೆ ಕಡೆಯಿಂದ ಹೆರಂಜಾಲು ಕಡೆಗೆ ಒಂದು ಮೋಟಾರು ಸೈಕಲ್ ಸವಾರನು ಯಾವುದೇ ನೋಂದಣಿ ಸಂಖೈ ಇಲ್ಲದ ಮೋಟಾರು ಸೈಕಲನ್ನು ಚಲಾಯಿಸಿಕೊಂಡು ಬರುತ್ತಿದ್ದು,  ಮೋಟಾರು ಸೈಕಲನ್ನು ನಿಲ್ಲಿಸುವಂತೆ ಸೂಚನೆ ನೀಡಿದಾಗ ಆತನು ನಿಲ್ಲಿಸದೇ ಮುಂದಕ್ಕೆ ಚಲಾಯಿಸಿಕೊಂಡು ಹೋಗುತ್ತಿರುವುದನ್ನು ಕಂಡು ಮೋಟಾರ್ ಸೈಕಲನ್ನು ಬೆನ್ನಟ್ಟಿ ನಿಲ್ಲಿಸಿ  ಮೋಟಾರು  ಸೈಕಲನ್ನು ಪರಿಶೀಲಿಸಿದಾಗ ಮೋಟಾರು ಸೈಕಲನ ಮುಂದೆ, ಹಿಂದೆ ಯಾವುದೇ ನೊಂದಣೆ ಸಂಖ್ಯೆ ಇರುವುದಿಲ್ಲ ಆತನ ಹೆಸರನ್ನು ವಿಚಾರಿಸಲಾಗಿ ರಂಜಿತ್ (20), ತಂದೆ: ನಾರಾಯಣ ಪೂಜಾರಿ, ವಾಸ: ಕ್ಯಾದಗಿಮನೆ, ಬೊಳಂಬಳ್ಳಿ, ಕಾಲ್ತೋಡು ಗ್ರಾಮ ಬೈಂದೂರು ತಾಲೂಕು ಎಂಬುದಾಗಿ ತಿಳಿದು ಬಂದಿದ್ದು , ನಂತರ ಆತನ ಮೋಟಾರು ಸೈಕಲ್ ನ ದಾಖಲಾತಿಯನ್ನು ಹಾಜರುಪಡಿಸುವಂತೆ ತಿಳಿಸಿದಕ್ಕೆ ದಾಖಲಾತಿ ಇರುವುದಿಲ್ಲವಾಗಿ ತಿಳಿಸಿದ್ದು ಸ್ಥಳದಲ್ಲಿ ಗಾಬರಿಯಾದವನಂತೆ ಕಂಡು ಬಂದಿದ್ದು,  ಆತನಲ್ಲಿ ಮೋಟಾರು ಸೈಕಲ್ ಬಗ್ಗೆ ವಿಚಾರಿಸಿದಾಗ ಸೂಕ್ತ ಉತ್ತರ ನೀಡದೇ ಇದ್ದುದರಿಂದ  ಮೋಟಾರು ಸೈಕಲನ್ನು ಎಲ್ಲಿಯೋ ಕಳವು ಮಾಡಿಕೊಂಡು ಬಂದಿರುವ ಬಗ್ಗೆ ಸಂಶಯ ಬಂದಿರುವುದರಿಂದ  ಮೋಟಾರ್ ಸೈಕಲನ್ನು ಸ್ವಾಧೀನಪಡಿಸಿಕೊಂಡಿದ್ದು, ಸ್ವಾಧೀನಪಡಿಸಿಕೊಂಡ ಮೋಟಾರು ಸೈಕಲ್ ನ  ಮೌಲ್ಯ ರೂಪಾಯಿ  80,000/- ಆಗಿರುತ್ತದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 19/2022 ಕಲಂ: 41 (1) (D), 102  CRPC ಮತ್ತು 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 21-01-2022 09:41 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080