ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ದಿನಾಂಕ 18/12/2022 ರಂದು ಪಿರ್ಯಾದಿದಾರರಾದ ಶುಭ ಕೆ. (35), ಗಂಡ:ಜಯರಾಜ್ ಕೆ. ಎಸ್ , ವಾಸ: ಸುಬ್ರಾಯ ಸದನ ನೆಹರೂ ಕ್ರೀಡಾಂಗಣ ಎದುರು ವಡೇರ ಹೋಬಳಿ, ಕುಂದಾಪುರ  ತಾಲೂಕು, ಉಡುಪಿ ಜಿಲ್ಲೆ ಇವರು ತನ್ನ ಗಂಡ ಜಯರಾಜ್ ಕೆ ಎಸ್ ರವರೊಂದಿಗೆ ಪಲ್ಸರ್ ಬೈಕ್ ನಂ KA-47-E-4322 ನೇದರಲ್ಲಿ ಹಿಂಬದಿ ಸವಾರಳಾಗಿ ಕುಳಿತು ಮನೆಯಿಂದ ಹೊರಟು ಅಕ್ಕನ ಮನೆಗೆ ಹೋಗಲು ಕೊಟೇಶ್ವರದಿಂದ ಮಣೂರು ಕಡೆಗೆ ಹೊಗುತ್ತಿರುವಾಗ ಉಳ್ತೂರು ಕಡೆಯಿಂದ KA-20-Z-2014 ನೇದರ ಚಾಲಕ ತನ್ನ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪರ್ಯಾದಿದಾರರ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ  ಪಿರ್ಯಾದಿದಾರರು ಮತ್ತು ಗಂಡ ಜಯರಾಜ್ ಕೆ ರವರು ಬೈಕು ಸಮೇತ ರಸ್ತೆಗೆ ಬಿದ್ದು ಜಯರಾಜ್ ರವರಿಗೆ ಎಡಬದಿಯ ಕೈ ಯ ಮಣಿಗಂಟು ತೀವ್ರ ಒಳ ಜಖಂಗೊಂಡಿದ್ದು, ಬಲ ಬದಿಯ ಪಾದದ ಮೇಲ್ಭಾಗದ ಗಂಟಿನ ಬಳಿ ತರಚಿದ ಗಾಯವಾಗಿದ್ದೂ ಅಲ್ಲದೇ ಪಿರ್ಯಾದಿದಾರರಿಗೆ ಎಡಬದಿಯ ಕೈಯ ಮಣಿಗಂಟು ಒಳ ಜಖಂಗೊಂಡಿರುವುದಲ್ಲದೇ ಎಡ ಬದಿಯ ಪಾದದ ಮೇಲ್ಭಾಗದಲ್ಲಿ ತರಚಿದ ಗಾಯವಾಗಿದ್ದೂ ಎಡ ಹಾಗೂ ಬಲಬದಿಯ ಕಾಲಿನ ಎರಡೂ ಗಂಟುಗಳು ನೋವು ಉಂಟಾಗಿರುತ್ತದೆ. ಕಾರು ಚಾಲಕನ ಹೆಸರು ಪ್ರಕಾಶ್ ಶ್ಯಾನುಭಾಗ್ ಕುಂದಾಪುರ ಎಂಬುವುದಾಗಿ ತಿಳಿಯಿತು. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 227/2022 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ಗಣೇಶ್‌ ‌‌‌‌‌‌‌ಶೆಟ್ಟಿ  (37),  ತಂದೆ:  ಬಾಬು  ಶೆಟ್ಟಿ,   ಮೂಡುಬೆಟ್ಟು,  ಉಳ್ತೂರು,  ಉಳ್ತೂರು ಗ್ರಾಮ ಇವರು ದಿನಾಂಕ 19/12/2022 ರಂದು ಊಟಕ್ಕೆಂದು ಮನೆಗೆ ಹೋಗುತ್ತಿರುವಾಗ ಮಧ್ಯಾಹ್ನ 1:00 ಗಂಟೆಗೆ ಉಳ್ತೂರು ಗ್ರಾಮದ ಬೇಳೂರು  ಕ್ರಾಸ್‌‌‌‌ನ ಹತ್ತಿರ ಪರಿಚಯದ  ಮಹಾಬಲ  ದೇವಾಡಿಗ ರವರು  ಸೈಕಲಿನಲ್ಲಿ ಕೆದೂರು ಕಡೆಯಿಂದ ತೆಕ್ಕಟ್ಟೆ ಕಡೆಗೆ ಬರುತ್ತಿದ್ದು, ಅದೇ  ವೇಳೆಗೆ  ಅದೇ  ದಿಕ್ಕಿನಲ್ಲಿ  ಕೆದೂರು  ಕಡೆಯಿಂದ ತೆಕ್ಕಟ್ಟೆ ಕಡೆಗೆ KA-20-AA-4468 ನೇ 407  ಟೆಂಪೋ  ವಾಹನವನ್ನು  ಅದರ  ಚಾಲಕ  ಅತೀವೇಗ  ಹಾಗೂ  ಅಜಾಗರೂಕತೆಯಿಂದ  ಚಲಾಯಿಸಿಕೊಂಡು  ಬಂದು  ರಸ್ತೆಯ  ಬದಿಯಲ್ಲಿ  ಕ್ರಮದಂತೆ ಹೋಗುತ್ತಿದ್ದ ಮಹಾಬಲ ದೇವಾಡಿಗರವರ ಸೈಕಲಿಗೆ ಹಿಂದಿನಿಂದ ಡಿಕ್ಕಿ ಹೊಡೆದು ನಂತರ  ಸೈಕಲ್‌‌‌‌‌‌‌‌‌‌ಸವಾರನನ್ನು  ಎಳೆದುಕೊಂಡು  ರಸ್ತೆಯ ಬಲಬದಿಗೆ  ಬಂದು  ನಿಲ್ಲಿಸಿದ ಪರಿಣಾಮ ಮಹಾಬಲ  ದೇವಾಡಿಗರವರ  ತಲೆ,  ಕುತ್ತಿಗೆ,  ಬಾಯಿ, ಭುಜ,  ಎದೆಗೆ  ತೀವ್ರ  ತರದ  ಗಾಯವಾಗಿ  ರಕ್ತ  ಬರುತ್ತಿತ್ತು. ಟೆಂಪೋ ಚಾಲಕನ ಹೆಸರು ಪ್ರಮೋದ್‌‌ ‌‌‌‌‌‌ಎಂಬುದಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 228/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಉಡುಪಿ: ಪಿರ್ಯಾದಿದಾರರಾದ ಕವಿತ (21), ತಂದೆ: ನರೇಂದ್ರ ಚೌದರಿ, ವಾಸ: ತ್ರಿಪುಲಾ ಪವರ್ ಹೌಸ್, ಹಿಂಬದಿ, ದಂಸಿ ರಾಯ್ ಕ ಪುರ್ವ , ಕೊತ್ವಾಲಿ ನಗರ ರಾಯ್ ಬರೇಲಿ ಜಿಲ್ಲೆ ಉತ್ತರಪ್ರದೇಶ ರಾಜ್ಯ, ಹಾಲಿ : ಉಡುಪಿ ಚಂಪಾ ರೆಸಿಡೆನ್ಸಿ, ಗರಡಿ ರೋಡ್, ಬನ್ನಂಜೆ ಉಡುಪಿ ಇವರು ತನ್ನ ಗೆಳತಿ ಚಂದನಾರವರೊಂದಿಗೆ ದಿನಾಂಕ 17/12/2022 ರಂದು ಪುತ್ತೂರು ಗ್ರಾಮದ ಸಂತೆಕಟ್ಟೆ ರೋಬೋಸಾಪ್ಟ್ ಎದುರುಗಡೆ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ --6 ನೇ  ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ರಸ್ತೆ ದಾಟುತ್ತಿರುವಾಗ ಬೆಳಿಗ್ಗೆ 09:00 ಗಂಟೆಗೆ ರಸ್ತೆ ಮದ್ಯೆ ಇರುವ ಡಿವೈಡರ್ ಬಳಿ ತಲುಪುವಾಗ ಸಂತೆಕಟ್ಟೆ ಕಡೆಯಿಂದ ಅಂಬಾಗಿಲು ಕಡೆಗೆ KA-20-EF-131 ನೇ ಸ್ಕೂಟರ್ ಸವಾರ ತನ್ನ ಸ್ಕೂಟರ್ ನ್ನು ದುಡುಕುತನ ಮತ್ತು ನಿರ್ಲಕ್ಷ್ಯತದಿಂದ ಚಲಾಯಿಸಿಕೊಂಡು ತೀರಾ ಎಡಬದಿಗೆ ಬಂದು ರಸ್ತೆ ದಾಟಲು ಡಿವೈಡರ್ ಬಳಿ ನಿಂತಿದ್ದ ಕವಿತಾ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಕವಿತಾರವರು ರಸ್ತೆಗೆ ಬಿದ್ದು, ಎಡ ಕಾಲಿಗೆ ತರಚಿದ ಗಾಯ ಹಾಗೂ ಸೊಂಟದ ಎಡ ಭಾಗ ಮೂಳೆ ಮುರಿತದ ಜಖಂ ಆಗಿರುತ್ತದೆ. ನಂತರ ಚಿಕಿತ್ಸೆಯ ಬಗ್ಗೆ ಉಡುಪಿ ಹೈಟೆಕ್ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 105/2022 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ವಿಲ್ಸನ್ ಸೆಲ್ವರಾಜ್‌ (39), ತಂದೆ: ವಿ. ದೇವರಾಜ್, ವಾಸ: 2-ಬಿ, 29-ಬಿ ಇಂದಿರಾ ನಗರ 2 ನೇ ಕ್ರಾಸ್ ಕುಕ್ಕಿಕಟ್ಟೆ  ಉಡುಪಿ ತಾಲೂಕು ಇವರು ತನ್ನ ಹೆಂಡತಿ ಮರ್ಸಿ ಹಾಗು ಮಗು ಡಿಯಾನೊರವರೊಂದಿಗೆ  ದಿನಾಂಕ 19/12/2022 ರಂದು ಕಟಪಾಡಿಯ ಮಣಿಪುರ ಚರ್ಚ್ ಕಾರ್ಯಕ್ರಮ ಮುಗಿಸಿ ವಾಪಾಸು ಮನೆಗೆ ಹೋಗಲು ತನ್ನ ಕಾರು ನಂಬ್ರ KA-20-AA-7768 ನೇದರಲ್ಲಿ ಕುಂದಾಪುರ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬರುತ್ತಿರುವಾಗ ಅಂಬಲಪಾಡಿ ಜಂಕ್ಷನ್ ನಿಂದ ಅಜ್ಜರಕಾಡು ಮಾರ್ಗವಾಗಿ ತಿರುಗುವ ಸಮಯ 21:10 ಗಂಟೆಗೆ  ಕುಂದಾಪುರ ಕಡೆಯಿಂದ ಮಂಗಳೂರು ಕಡೆಗೆ ಹೋಗಲು KA-20-AA-6455 ನೇ ಇನ್ಸುಲೇಟರ್ ಚಾಲಕ ನಾಗರಾಜ ತನ್ನ ವಾಹನವನ್ನು ದುಡುಕುತನ ಮತ್ತು ನಿರ್ಲಕ್ಷ್ಯತದಿಂದ ಚಲಾಯಿಸಿಕೊಂಡು ಬಂದು ಅಜ್ಜರಕಾಡು ರಸ್ತೆ ಕಡೆ ಹೋಗುತ್ತಿದ್ದ ಪಿರ್ಯಾದಿದಾರರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಹಿಂಭಾಗ ಜಖಂ ಗೊಂಡಿದ್ದು ಕಾರಿನಲ್ಲಿ ಹೀಮದಿನ ಸೀಟಿನಲ್ಲಿ ಕುಳಿತಿದ್ದ ಪಿರ್ಯಾದಿದಾರರ ಹೆಂಡತಿಗೆ ಬಲಭುಜಕ್ಕೆ ಗುದ್ದಿದ ಒಳ ಜಖಂ ಆಗಿರುತ್ತದೆ. ನಂತರ ಚಿಕಿತ್ಸೆಯ ಬಗ್ಗೆ ಉಡುಪಿ ಮಿಷನ್ ಆಸ್ಪತ್ರೆಗೆ ಹೀಗಿ ಪ್ರಥಮ ಚಿಕಿತ್ಸೆ ಪಡೆದಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 106/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿದಾರರಾದ ಶೇಖರ  (48), ತಂದೆ: ದಿ. ಅಣ್ಣಯ್ಯ  ನಾಯ್ಕ,  ವಾಸ: ಭಾಗೀಮನೆ  ಕುಳ್ಳುಂಜೆ   ಗ್ರಾಮ ಕುಂದಾಪುರ  ತಾಲೂಕು ಇವರ ಮನೆಯವರಿಗೂ ಆರೋಪಿಗಳಾದ 1.ಜಯರಾಮ  ಹಾಲಂಬಿ , 2. ನವೀನ  ಹಾಲಂಬಿ    ಭಾಗೀಮನೆ ಕುಳ್ಳುಂಜೆ  ಗ್ರಾಮ ಇವರಿಗೂ ಕುಂದಾಪುರ  ತಾಲೂಕಿನ   ಕುಳ್ಳುಂಜೆ  ಗ್ರಾಮದ  ಭಾಗೀಮನೆ  ಎಂಬಲ್ಲಿ   ನಡೆದಾಡುವ  ದಾರಿಯ  ತಕರಾರು  ಇರುತ್ತದೆ. ದಿನಾಂಕ 19/12/2022 ರಂದು ಬೆಳಿಗ್ಗೆ 9:30 ಗಂಟೆಗೆ  ಆರೋಪಿಗಳು  ಪಿರ್ಯಾದಿದಾರರು ಹಾಗೂ ಅವರ  ಮನೆಯವರು  ನಡೆದಾಡುವ ದಾರಿಯನ್ನು  ಕಲ್ಲು ಕಂಬ  ಹಾಕಿ  ಬೇಲಿ ಮಾಡಲು  ತಯಾರು  ಮಾಡುತ್ತಿದ್ದರು. ಈ  ಸಮಯ ಪಿರ್ಯಾದಿದಾರರು  ಹಾಗೂ ಅವರ  ಸಹೋದರಿ  ಆರೋಪಿಗಳಲ್ಲಿ  ನಮ್ಮ ಜಾಗಕ್ಕೆ  ಬೇಲಿ  ಹಾಕಬೇಡಿ  ಎಂದಾಗ  ಅವರು ಅವಾಚ್ಯ ಶಬ್ದಗಳಿಂದ ಬೈದು  ಆರೋಪಿ  ಜಯರಾಮ ಹಾಲಂಬಿ  ಇವರು  ಮರದ  ದೊಣ್ಣೆಯಿಂದ  ಪಿರ್ಯಾದಿದಾರರ   ಹಣೆಯ  ಎಡಬದಿಗೆ   ಹಾಗೂ   ಬೆನ್ನಿಗೆ  ಹಲ್ಲೆ  ಮಾಡಿರುತ್ತಾರೆ.   ಆಗ  ಶ್ರೀಮತಿ ಶೈಲಜಾ ಇವರು  ಓಡಿ  ಹೋಗಿ ನನ್ನ  ಅಣ್ಣನಿಗೆ  ಯಾಕೇ  ಹೊಡೆಯುತ್ತೀರಿ  ಎಂದು  ಕೇಳಿದಾಗ  ಅವರಿಗೂ   ನವೀನ್  ಈತನು ದೊಣ್ಣೆಯಿಂದ ಬೆನ್ನಿಗೆ  ಹೊಡೆದಿರುತ್ತಾನೆ.  ಗಾಯಾಳುಗಳು ಚಿಕಿತ್ಸೆಯ ಬಗ್ಗೆ ಕುಂದಾಪುರ ಸರಕಾರಿ    ಆಸ್ಪತ್ರೆಯಲ್ಲಿ  ದಾಖಲಾಗಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 139/2022 ಕಲಂ: 504, 506, 324, 354, 354 (B)  ಜೊತೆಗೆ 34  ಐಪಿಸಿ, ಕಲಂ: 3(1)(r),(S),(w-1) (z-a 3(2)(v-a)SC AND THE ST (PREVENTION OF ATTROCITIES) ACT, 1989  ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 20-12-2022 09:54 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080