ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕಾಪು: ಪಿರ್ಯಾದಿದಾರರಾದ ಶೈಲೇಶ ಶೆಟ್ಟಿ (36), ತಂದೆ : ದಿ.ಜಯರಾಮ ಶೆಟ್ಟಿ, ವಾಸ : ಕೊಡಮಜಲು, ಬಳಕಂಜೆ ಅಂಚೆ, ಮನೆ ಮಂಗಳೂರು ಇವರು ನವಯುಗ ಕಂಪೆನಿಯಲ್ಲಿ ಸೇಪ್ಟಿ ಆಫೀಸರ್ ಆಗಿ ಕೆಲಸ ನಿರ್ವಹಿಸಿಕೊಂಡಿದ್ದು, ದಿನಾಂಕ 18/12/2021 ರಂದು ರಾತ್ರಿ 11:30 ಗಂಟೆಗೆ ಪಿರ್ಯಾದಿದಾರರಿಗೆ ಸಿಬ್ಬಂದಿಯವರು ಕರೆ ಮಾಡಿ ರಾತ್ರಿ 0:45 ಗಂಟೆಯ ಸಮಯಕ್ಕೆ ಕಾಪುವಿನ ಪೊಲಿಪು ಜಂಕ್ಷನ್ ನ ಮಧ್ಯದ ಡಿವೈಡರ್ ಗೆ  ಅಳವಡಿಸಿರುವ ನವ ಯುಗ ಕಂಪೆನಿಗೆ ಸಂಬಂದಪಟ್ಟ METAL BEAM CRASH BARRIER, RED REFLECTOR, SOLAR BLINKER PANEL  ಹಾಗೂ ಪೊಲೀಸ್ ಇಲಾಖೆಯ ಕಾಪು ಠಾಣೆಗೆ ಸಂಬಂದಪಟ್ಟ ಸಿಸಿ ಟಿವಿ ಗಳಿಗೆ ಮಂಗಳೂರು- ಉಡುಪಿ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 66 ರ ರಸ್ತೆಯಲ್ಲಿ ಓರ್ವ ಟ್ಯಾಂಕರ್  ಚಾಲಕನು ತನ್ನ ಟ್ಯಾಂಕರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿರುವುದಾಗಿ ಮಾಹಿತಿ ತಿಳಿದು ಬಂದಿರುವುದಾಗಿ ತಿಳಿಸಿರುತ್ತಾರೆ. ದಿನಾಂಕ 19/12/2021 ರಂದು  ಪಿರ್ಯಾದಿದಾರರು ಬೆಳಿಗ್ಗೆ 08:00 ಗಂಟೆಯ ಸಮಯಕ್ಕೆ ಬಂದು ನೋಡಿದಾಗ, ನವಯುಗ ಕಂಪನಿಗೆ ಸಂಬಂಧಪಟ್ಟ ಮೇಲಿನ ಎಲ್ಲಾ ಸ್ವತ್ತುಗಳು ಜಖಂ ಗೊಂಡಿದ್ದು ಅದರ ಮೌಲ್ಯವು 1,05, 271/- ರೂಪಾಯಿ ಹಾಗೂ ಪೊಲೀಸ್ ಇಲಾಖೆಯ ಸಿಸಿ ಟಿವಿ ಮತ್ತು ಅದರ ಕಂಬವು ಜಖಂಗೊಂಡಿದ್ದು ಅದರ ಮೌಲ್ಯ 1,00, 000/- ಆಗಿರುತ್ತದೆ. ಒಟ್ಟು ಮೌಲ್ಯ ಸುಮಾರು 2,05, 271/- ರೂಪಾಯಿ ನವಯುಗ ಕಂಪೆನಿಗೆ ಮತ್ತು ಪೊಲೀಸ್ ಇಲಾಖೆಗೆ  ನಷ್ಟ ಉಂಟಾಗಿರುತ್ತದೆ. ಡಿಕ್ಕಿ ಹೊಡೆ ಟ್ಯಾಂಕರ್ ನ ನಂಬ್ರವನ್ನು ನೋಡಲಾಗಿ KA-19-AA-9651 ಆಗಿದ್ದು ಚಾಲಕನ ಹೆಸರು ಚೆನ್ನಯ್ಯ ಎಂದು ತಿಳಿದು ಬಂದಿರುತ್ತದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 185/2021  ಕಲಂ: 279, 427  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಬ್ರಹ್ಮಾವರ: ಪಿರ್ಯಾದಿದಾರರಾದ ಎನೂಸ್‌‌ ರೋಡ್ರಿಗಸ್‌‌‌(38), ತಂದೆ: ದಿ. ಜೋನ್‌‌ ರೋಡ್ರಿಗಸ್‌‌‌, ವಾಸ: ನಾಯ್ಕರ ತೋಟ ಮನೆ, 52 ನೇ ಹೇರೂರು ಗ್ರಾಮ, ಬ್ರಹ್ಮಾವರ ತಾಲೂಕು. ಉಡುಪಿ ಜಿಲ್ಲೆ ಇವರ ಪಕ್ಕದ ಊರಿನವರಾದ ಪರಿಚಯದ ವಿಠಲ ಕೋಟ್ಯಾನ್‌‌ (65) , ಕೊಳಂಬೆ ರಾಜೀವನಗರ ಎಂಬುವವರು ದಿನಾಂಕ 17/12/2021 ದಿಂದ ದಿನಾಂಕ 19/12/2021 ರಂದು ಮಧ್ಯಾಹ್ನ 1:00 ಗಂಟೆಯ ಮಧ್ಯಾವಧಿಯಲ್ಲಿ ಸ್ವರ್ಣ ನದಿಗೆ ಮೀನು ಹಿಡಿಯಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು ನೀರಿನಲ್ಲಿ ಮುಳುಗಿ ಅಥವಾ ಯಾವುದೋ ವೈಯುಕ್ತಿಕ ಸಮಸ್ಯೆಯಿಂದ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಸ್ವರ್ಣ ನದಿಗೆ ಹಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದಾಗಿದ್ದು, ವಿಠಲ ಕೋಟ್ಯಾನ್‌‌ರವರ ಮೃತ ದೇಹವು ದಿನಾಂಕ 19/12/2021 ರಂದು ಮಧ್ಯಾಹ್ನ 1:00 ಗಂಟೆಗೆ ಬ್ರಹ್ಮಾವರ  ತಾಲೂಕು 52 ನೇ ಹೇರೂರು ಗ್ರಾಮದ, ನಾಯ್ಕರ ತೋಟದ ಪಿರ್ಯಾದಿ ಮನೆಯ ಪಕ್ಕದ ಸ್ವರ್ಣನದಿಯ ಬದಿಯಲ್ಲಿ ದೊರೆತಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 74/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರತ್ತದೆ.
 • ಕಾರ್ಕಳ: ಪಿರ್ಯಾದಿದಾರರಾದ ಶ್ರೀಮತಿ ಚಂದ್ರಿಕಾ ಪೂಜಾರಿ (39), ಗಂಡ: ಗಣೇಶ್ ಎ.ಎಸ್, ವಾಸ: ಮನೆ ನಂಬ್ರ: 6236-1 ಕಾವೇರಿ ನಿವಾಸ, ಬ್ರಹ್ಮರಪಾಡಿ ಬೋಳ ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ ಇವರ ಗಂಡ ಗಣೇಶ್ ಎ.ಎಸ್ (44) ರವರು ನಿಟ್ಟೆ ಕಾಲೇಜಿನಲ್ಲಿ ಮ್ಯೆಕಾನಿಕಲ್ ಇಂಜಿನಿಯರಿಂಗ್ ಕೆಲಸ ಮಾಡಿಕೊಂಡಿದ್ದು ಕೆಲಸ ಮಧ್ಯೆ ಜಾಗ ಮಾರಾಟ ಮಾಡುವ ಬ್ರೋಕರ್ ಕೆಲಸ ಮಾಡಿಕೊಂಡಿದ್ದರು. ಸುಮಾರು 05 ವರ್ಷಗಳ ಹಿಂದೆ ಹಾಳೆಕಟ್ಟೆಯ ಕುಟ್ಟಿ ಪೂಜಾರಿ ಹಾಗೂ ಸಂದೀಪ್ ಪೂಜಾರಿ ಎಂಬುವವರ ಜಾಗವನ್ನು ಕೇರಳ ವಾಸಿ ಹರಿ ಭಟ್ ಎಂಬುವವರಿಗೆ ಮಾರಾಟ ಮಾಡಿದ್ದು ಕಳೆದ ಎರಡು ತಿಂಗಳಿನಿಂದ ಜಾಗದ ದಾರಿಯ ವಿಚಾರದಲ್ಲಿ ಮಾನಸಿಕವಾಗಿ ನೊಂದುಕೊಂಡಿದ್ದು ಹೆಂಡತಿಯಲ್ಲಿ ತನಗೆ ಜಾಗದ ವಿಚಾರದಲ್ಲಿ ಕಿರಿಕಿರಿಯಾಗುತ್ತಿದೆ ತಾನು ಸಾಯುತ್ತೇನೆ ಎಂಬುದಾಗಿ ಹೇಳುತ್ತಿದ್ದು ಮನೆಯವರೆಲ್ಲಾ ಸೇರಿ ಸಮಾಧಾನ ಮಾಡಿದ್ದು ಗಣೇಶ್ ಎ,ಎಸ್ ರವರು ಒಂದು ವಾರದಿಂದ ಮಾನಸಿಕವಾಗಿ ನೊಂದುಕೊಂಡಿದ್ದು ತಾನು ಸಾಯುತ್ತೇನೆ ಎಂದು ಹೇಳಿಕೊಂಡಿದ್ದು ದಿನಾಂಕ 19/12/2021 ರಂದು ಬೆಳಿಗ್ಗೆ 09:30 ಗಂಟೆಯಿಂದ ಸಂಜೆ 4:00 ಗಂಟೆಯ ನಡುವಿನ ಅವಧಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಜಾಗದ ವಿಚಾರದಲ್ಲಿ ಕಿರಿಕಿರಿ ತನಗೆ ಆಗುತ್ತಿದ್ದು ಬೈಕಿನಲ್ಲಿ ಬರುವಾಗ ಮೊಬೈಲ್ ಬಿದ್ದುಹೋಗಿದ್ದು ಅದೂ ಕೂಡ ತಲೆಬಿಸಿಯಾಗಿದ್ದು ಎರಡು ತಿಂಗಳಿನಿಂದ ಜೀವನವೇ ಬೇಡ ಆಗುತ್ತಿದೆ ಎಂಬುದಾಗಿ ಪತ್ರ ಬರೆದಿಟ್ಟು ಮನೆಯ ಹಾಲ್ ನ ಪಕ್ಕಾಸಿಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 48/2021  ಕಲಂ: 174 (3) (IV) ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

 • ಉಡುಪಿ: ಪಿರ್ಯಾದಿದಾರರಾದ ಜಯಪ್ರಕಾಶ್‌ ಮಾಣಿಯಾರು (75), ತಂದೆ: ಮಾಣಿಯಾರು ವಾಸುದೇವ ರಾವ್‌, ವಾಸ: ಫ್ಲಾಟ್‌ ನಂಬ್ರ: 003, ಜೆ.ಪಿ ರೆಸಿಡೆನ್ಸಿ, ಶಾರದಾ ಮಂಟಪದ ಬಳಿ, ಶಿವಳ್ಳಿ ಗ್ರಾಮ, ಉಡುಪಿ ತಾಲೂಕು ಇವರು ಟಿವಿಎಸ್‌ ಜುಪಿಟರ್‌ ಸ್ಕೂಟರ್‌ ನಂಬ್ರ: KA-20-EN-2735 (Chassis No: MD626BG47HIA30335, Engine No: BG4AH1023320) ನೇದರ ಆರ್‌.ಸಿ ಮಾಲಕರಾಗಿದ್ದು, ಪಿರ್ಯಾದಿದಾರರ ಮಗ ಎಂ.ವಿನಯ್‌ ಕುಮಾರ್‌ ರವರು ದಿನಾಂಕ 13/12/2021 ರಂದು ಬೆಳಿಗ್ಗೆ 05:30 ಗಂಟೆಗೆ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಆಲ್ವಿನ್‌ ಬೇಕರಿ ಎದುರು ನಿಲ್ಲಿಸಿ ಬೆಂಗಳೂರಿಗೆ ಹೋಗಿದ್ದು, ದಿನಾಂಕ 19/12/2021 ರಂದು ಬೆಳಿಗ್ಗೆ 07:00 ಗಂಟೆಗೆ ಪಿರ್ಯಾದಿದಾರರು ಸ್ಥಳಕ್ಕೆ ಹೋಗಿ ನೋಡಲಾಗಿ, ಸ್ಕೂಟರ್‌ ಇಟ್ಟ ಜಾಗದಲ್ಲಿ ಇಲ್ಲದೆ ಇದ್ದು, ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸ್ಕೂಟರ್‌ನ ಮೌಲ್ಯ ರೂಪಾಯಿ 40,000/- ಆಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 187/2021
  ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಜುಗಾರಿ ಪ್ರಕರಣ

 • ಮಲ್ಪೆ: ದಿನಾಂಕ 19/12/2021  ರಂದು ಸಕ್ತಿವೇಲು ಈ, ಪೊಲೀಸ್ ಉಪನಿರೀಕ್ಷಕರು, ಮಲ್ಪೆ ಪೊಲೀಸ್ ಠಾಣೆ ಇವರಿಗೆ ಕೊಡವೂರು ಗ್ರಾಮದ ಮಲ್ಪೆ ಬಂದರಿನ ಬೇಬಿ ಮೇರಿನ ಪ್ಯಾಕ್ಟರಿ ಬಳಿ ಸಾರ್ವಜನಿಕ ಖಾಲಿ ಸ್ಥಳದಲ್ಲಿ ಇಸ್ಪೀಟು ಜುಗಾರಿ ಆಟ ಆಡುತ್ತಿರುವುದಾಗಿ ಬಂದ ಮಾಹಿತಿಯಂತೆ  ದಾಳಿ ನಡೆಸಿದಾಗ ಜುಗಾರಿ ಆಟ ಆಡುತ್ತಿದ್ದ ಸಾರ್ವಜನಿಕರು ಓಡಿ ಹೋಗಿದ್ದು ಅವರಲ್ಲಿ 1) ವೀರಪ್ಪ, 2) ಯಮನೂರು 3) ಷಣ್ಮುಗ, 4) ಬೀರಪ್ಪ , 5) ಮರಿಸ್ವಾಮಿ, 6) ಬಸವರಾಜ್ , 7) ಲಿಂಗರಾಜು, 8) ರಮೇಶ, 9) ಫಜೀಲ್ , 10)  ರಫೀಕ್, 11) ಹನುಮಗೌಡ, 12) ಮೊಹಮ್ಮದ್ ರಫೀಕ್ , 13) ರಮೇಶ  ಇವರನ್ನು ವಶಕ್ಕೆ  ಪಡೆದು  ಅವರು ಜುಗಾರಿ ಆಟಕ್ಕೆ  ಬಳಸಿದ್ದ  ನಗದು  ರೂಪಾಯಿ  7,600 ,  ಇಸ್ಪೀಟ್  ಎಲೆ -52, ಮತ್ತು  ಹಳೆ   ದಿನ ಪತ್ರಿಕೆ ಯನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 137/2021 ಕಲಂ: 87 KP ACT ರಂತೆ ಪ್ರಕರಣ ದಾಖಲಾಗಿರುತ್ತದೆ. 

ಇತರ ಪ್ರಕರಣ

 • ಹೆಬ್ರಿ: ಪಿರ್ಯಾದಿದಾರರಾದ ವಿಶ್ವನಾಥ ಕುಲಾಲ (23), ತಂದೆ: ಜಯರಾಮ ಕುಲಾಲ, ವಾಸ: ಮುಲ್ಕಾಡಿನಂದಲು ಸೀತಾನದಿ ನಾಡ್ಪಾಲು ಗ್ರಾಮ ಇವರು ಉಡುಪಿಯಲ್ಲಿರುವ ಪ್ಯಾನಾಸೋನಿಕ್ ಶೋ ರೂಂ ನಲ್ಲಿ ಎಸಿ ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರ ಸ್ನೇಹಿತ ಸಂದೇಶ ರವರು ಮದ್ಯಪಾನ ಮಾಡುವ ಚಟವನ್ನು ಹೊಂದಿದ್ದು ಮದ್ಯಪಾನ ಮಾಡಿ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದರು ಆದುದರಿಂದ ಪಿರ್ಯಾದಿದಾರರು ಆತನ ಸಹವಾಸ ಬಿಟ್ಟು ಎರಡು ವರ್ಷಗಳಿಂದ ಸಂದೇಶರವರೊಂದಿಗೆ ಮಾತನಾಡುತ್ತಿರಲಿಲ್ಲ. ಇದೇ ವಿಚಾರದಲ್ಲಿ ದಿನಾಂಕ 19/12/2021 ರಂದು ಪಿರ್ಯಾದಿದಾರರು ಅವರ ಮೋಟಾರ್ ಸೈಕಲ್ ನಲ್ಲಿ ಮನೆಗೆ ಹೋಗುತ್ತಿರುವಾಗ ಸಂಜೆ 5:30 ಗಂಟೆಗೆ ನಾಡ್ಪಾಲು ಗ್ರಾಮದ ಸೀತಾನದಿ ಸ್ವಾತಿ ಹೋಟೆಲ್ ಬಳಿ ಸಂದೇಶ ರವರು ಒಂದು ಮೋಟಾರ್ ಸೈಕಲ್ ನಲ್ಲಿ  ಹಾಗೂ ಅಜೇಯ ಮತ್ತು ರಂಜನ್ ರವರು ಇನ್ನೊಂದು ಮೋಟಾರ್ ಸೈಕಲ್ ನಲ್ಲಿ ಪಿರ್ಯಾದಿದಾರರನ್ನು ಓವರ್ ಟೇಕ್ ಮಾಡಿ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದಾಗ ಅಜೇಯ ಮತ್ತು ರಂಜನ್ ರವರು ಬೈಕ್ ಮತ್ತು ಪಿರ್ಯಾದಿದಾರರನ್ನು ಹಿಡಿದುಕೊಂಡಿದ್ದು ಆಗ ಸಂದೇಶ ರವರು ಪಿರ್ಯಾದಿದಾರರನ್ನು ಕೊಲ್ಲುವ ಉದ್ದೇಶದಿಂದ ಅವರ ಕೈಯಲ್ಲಿರುವ ಚೂರಿಯಿಂದ ಹೊಟ್ಟೆಯ ಬಲಭಾಗಕ್ಕೆ ತಿವಿದಿರುರುವುದಾಗಿ ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 73/2021 ಕಲಂ: 341, 504,506, 307 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
 • ಮಲ್ಪೆ: ಪಿರ್ಯಾದಿದಾರರಾದ ಪರಶುರಾಮ (34), ತಂದೆ: ಓಬಳಪ್ಪ, ವಾಸ: ಬಾಡಿಗೆ ಮನೆ  ಕೊಳ, ಮಲ್ಪೆ ,ಕೊಡವೂರು ಇವರು 10 ವರ್ಷದಿಂದ ಮಲ್ಪೆ ಯಲ್ಲಿ ವಾಸವಾಗಿದ್ದು,  ಹನುಮಶ್ರೇಯಾ ಕನ್ನಿಪಾರ್ಟಿಯ ಶೇಖರ ರವರೊಂದಿಗೆ  ಕೆಲಸ ಮಾಡಿಕೊಂಡಿದ್ದು  ದಿನಾಂಕ  19/12/2021 ರಂದು ಎಂದಿನಂತೆ ಕೆಲಸ ಮಾಡಿಕೊಂಡಿರುವಾಗ ಬೆಳಿಗ್ಗೆ 11:00 ಗಂಟೆಗೆ ಬಂದರಿನಲ್ಲಿ ಹರಾಜು ಪ್ರಾಗಂಣದ ಎದುರಿನ ಧಕ್ಕೆಯಲ್ಲಿ ಪಿರ್ಯಾದಿದಾರರು ಕೆಲಸ ಮಾಡುತ್ತಿದ್ದ ಬೋಟಿನ ಪಕ್ಕದ ಬೋಟಿನಲ್ಲಿ ಕೆಲಸ ಮಾಡುತ್ತಿದ್ದ ಪಿರ್ಯಾದಿದಾರರ ಪರಿಚಯದ ಹೂಡೆಯ ಜಯ ಎಂಬುವವರು  ಬೋಟ್  ನಿಲ್ಲಿಸುವ ವಿಚಾರದಲ್ಲಿ ಪಿರ್ಯಾದಿದಾರರೊಂದಿಗೆ ತಗಾದೆ ತೆಗೆದು ಏಕಾಏಕಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ದೂಡಿ ಕೆಳಗೆ  ಬೀಳಿಸಿ ಅಲ್ಲೆ ಇದ್ದ ಕಬ್ಬಿಣದ ಚಾವೆಲ್ ನಿಂದ ಪಿರ್ಯಾದಿದಾರರ ಬಲ ಕಿಬ್ಬೊಟ್ಟಿಗೆ ,ಬಲ ಕೈಗೆ  ಹೊಡೆದಿದ್ದು ಅ ಸಮಯ ಅಲ್ಲೆ ಇದ್ದ ಕನ್ನಿ ಪಾರ್ಟಿಯಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ  ಕರ್ಕೆರಾ ಮತ್ತು ಶೇಖರ ಕರ್ಕೆರಾ  ರವರು  ಜಗಳವನ್ನು ಬಿಡಿಸಿ ರಕ್ತಗಾಯವಾಗಿದ್ದ  ಪಿರ್ಯಾದಿದಾರರನ್ನು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 136/2021 ಕಲಂ: 323, 324, 504  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 20-12-2021 10:20 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080