ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೊಲ್ಲೂರು: ಪಿರ್ಯಾದಿದಾರರಾಧ ಪ್ರಕಾಶ (37) ತಂದೆ: ಮಂಜ ನಾಯ್ಕ್ ವಾಸ: ಹಳ್ಳಿ ಬೇರು ಕೊಲ್ಲೂರು ಗ್ರಾಮ ಬೈಂದೂರು ತಾ. ಉಡುಪಿ ಇವರು ದಿನಾಂಕ 19/11/2022 ರಂದು 02:45 ಗಂಟೆಗೆ ತನ್ನ ಅಟೋ ರಿಕ್ಷಾವನ್ನು ದಳಿಯಿಂದ ಕೊಲ್ಲೂರು ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದಾಗ ಪ್ರಕಾಧ ರವರ ರಿಕ್ಷಾದ ಮುಂದಿನಿಂದ ದಳಿ ಕಡೆಯಿಂದ ಕೊಲ್ಲೂರು ಕಡೆಗೆ KA-20- EG-0506 ಮೋಟಾರು ಸೈಕಲನ್ನು ಅದರ ಸವಾರ ಮಂಜುನಾಥರವರು ಚಲಾಯಿಸಿಕೊಂಡು ಹೋಗುತ್ತಾ ಕೊಲ್ಲೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 766 ಸಿ ದಳಿ ಸೇತುವೆ ಮೇಲೆ ತಲುಪಿದಾಗ ಕೊಲ್ಲೂರು ಕಡೆಯಿಂದ ನಿಟ್ಟೂರು ಕಡೆಗೆ CNG-8371 ಜೀಪನ್ನು ಅದರ ಚಾಲಕ ಲಕ್ಷ್ಮಣರವರು ವೇಗವಾಗಿ ಅಜಾಗರೂ ಕತೆಯಿದ ಚಲಾಯಿಸಿ ಎದುರಿನ ವಾಹನ ವನ್ನುಓವರ್ ಟೇಕ್ ಮಾಡುವ ಬರದಲ್ಲಿ ಜೀಪನ್ನುತೀರಾ ಬಲಬದಿಗೆ ಚಲಾಯಿಸಿ ಮೋಟಾರ್ ಸೈಕಲಿಗೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರನ್ನು ಬೈಕ್ ಸಮೇತ ರಸ್ತೆಗ ಬಿದ್ದು, ಹಣೆಗೆ ಮತ್ತು ಬಲ ಕೈಗೆ ರಕ್ತಗಾಯ ಉಂಟಾಗಿದ್ದು , ಗಾಯಾಳುವನ್ನು 108 ವಾಹನದಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು, ಅಲ್ಲಿನ ವೈದ್ಯ್ರ ಸೂಚನೆಯಂತೆ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕೆ,ಎಂಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 51/2022 ಕಲಂ:279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಹೆಂಗಸು ಕಾಣೆ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾಧ ಲೀಲಾವತಿ, ಅಧೀಕ್ಷಕರು, ಸ್ತ್ರೀ ಸೇವಾನಿಕೇತನ, ರಾಜ್ಯ ಮಹಿಳಾ ನಿಲಯ, ನಿಟ್ಟೂರು, ಉಡುಪಿ ತಾಲೂಕು ಮತ್ತು ಇವರು ಉಡುಪಿ ತಾಲೂಕು ನಿಟ್ಟೂರಿನಲ್ಲಿರುವ ರಾಜ್ಯ ಮಹಿಳಾ ನಿಲಯದ ಸ್ತ್ರೀ ಸೇವಾನಿಕೇತನ ಇದರ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ಸದರಿ ಸಂಸ್ಥೆಯಲ್ಲಿರುವ ನಿವಾಸಿ ಕಿರಣ (31) ಎಂಬವರು ಮಾನಸಿಕ ಅಸ್ವಸ್ಥರಾಗಿದ್ದು, ದಿನಾಂಕ 19/11/2022 ರಂದು ಬೆಳಿಗ್ಗೆ 10:07 ಗಂಟೆಗೆ ಸಂಸ್ಥೆಯಿಂದ ತಪ್ಪಿಸಿಕೊಂಡು ಕಾಣೆಯಾಗಿದ್ದು, ಆಸುಪಾಸು ಎಲ್ಲಾ ಕಡೆ ಹುಡುಕಾಡಿದರೂ ಈವರೆಗೆ ಪತ್ತೆಯಾಗದೇ ಇರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 168/2022 ಕಲಂ: ಹೆಂಗಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕೊಲ್ಲೂರು: ಪಿರ್ಯಾದಿದಾರರಾಧ ಅನಿಲ್ (29) ತಂದೆ: ನರಸಿಂಹ ನಾಯ್ಕ ವಾಸ: ಮನೆ ನಂಬ್ರ:1-97 ಹೆಗ್ಡೆಹಕ್ಲು ಕೊಲ್ಲೂರು ಗ್ರಾಮ ಬೈಂದೂರು ಇವರ ತಾಯಿ ಶ್ರೀಮತಿಸವಿತಾ (51) ರವರುಕೊಲ್ಲೂರು ಶ್ರೀ. ಮೂಕಾಂಬಿಕಾ ದೇವಸ್ಥಾನದ ಗೋಶಾಲೆಯಲ್ಲಿ ನೌಕರರಾಗಿದ್ದು ಅವರ ತಮ್ಮ ಮಂಜುನಾಥರವರಿಗೆ ಸಂಭವಿಸಿದ ರಸ್ತೆ ಅಪಘಾತ ದಿಂದ ಅಘಾತಗೊಂಡು ಮನನೊಂದು ಅಥವಾ ವೈಯಕ್ತಿಕ ಕಾರಣಗಳಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 19/11/2022 ರಂದು ಮಧ್ಯಾಹ್ನ12:30 ಗಂಟೆ ಯಿಂದ 17:15 ಗಂಟೆಯ ನಡುವಿನ ಅವಧಿಯಲ್ಲಿ ಕೊಲ್ಲೂರು ಗ್ರಾಮದ ಹೆಗ್ಡೆಹಕ್ಲು ಎಂಬಲ್ಲಿ ತಾನು ವಾಸವಿರುವ ಮನೆಯಲ್ಲಿ ಒಬ್ಬಂಟಿಯಾಗಿದ ಸಮಯ ಮನೆಯ ಕೋಣೆಯ ಮರದ ಜಂತಿಗೆ ತಾನು ಧರಿಸಿಕೊಂಡಿರುವ ಸೀರೆಯನ್ನು ಸುತ್ತಿ ಇನ್ನೊಂದು ತುದಿಯನ್ನು ಕುತ್ತಿಗೆ ಉರುಳು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಮೃತರ ಮರಣದಲ್ಲಿ ಸಂಶಯ ಇರುವುದಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 16/2022 ಕಲಂ: 174 (C) ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 20-11-2022 10:35 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080