ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ದಿನಾಂಕ 18/11/2021 ರಂದು ಮಧ್ಯಾಹ್ನ 03:30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಕನಕಮ್ಮ ಶೆಡ್ತಿ    (59), ಗಂಡ: ಆನಂದ ಶೆಟ್ಟಿ, ವಾಸ: ಮೇಲ್ಮನೆ, ಉಪ್ರಳ್ಳಿ, ಮೂಡುಮಠ, 11ನೇ ಉಳ್ಳೂರು  ಗ್ರಾಮ ಬೈಂದೂರು ಇವರು ತಮ್ಮ ರಮೇಶನೊಂದಿಗೆ KA-20-EW-8191 ನೇ ಮೋಟಾರ್ ಸೈಕಲ್ ನಲ್ಲಿ ಸಹಸವಾರರಾಗಿ ಕುಳಿತುಕೊಂಡು ಮೇಕೋಡು ಹಾಲು ಡೈರಿಗೆ ಹಾಲು ಕೊಡಲು ಜಿ.ಪಿ.ಎಸ್,ಯು ಶಾಲೆ ಉಪ್ರಳ್ಳಿ ಹತ್ತಿರ ತಲುಪಿದಾಗ ಮೋಟಾರ್ ಸೈಕಲ್ ಸವಾರನು ಆತನ ಮೋಟಾರ್ ಸೈಕಲನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಿರುವಾಗ ಒಂದು ದನ ರಸ್ತೆಯಲ್ಲಿ ಹಠಾತ್ತಾಗಿ ಅಡ್ಡ ಬಂದ ಕಾರಣ ಮೋಟಾರ್ ಸೈಕಲನ್ನು ಒಮ್ಮಲೇ ಬ್ರೇಕ್ ಹಾಕಿದ ಪರಿಣಾಮ ಹಿಂಬದಿ ಕುಳಿತಿದ್ದ ಪಿರ್ಯಾದಿದಾರರು ಮೋಟಾರ್ ಸೈಕಲ್ ನಿಂದ ಕೆಳಗೆ ಬಿದ್ದ ಪರಿಣಾಮ ಪಿರ್ಯಾದಿದಾರರಿಗೆ ಸೊಂಟಕ್ಕೆ, ಬೆನ್ನು ಮೂಳೆಗೆ ಒಳ ಜಖಂ ಹಾಗೂ ಬಲಕಾಲಿಗೆ ತರಚಿದ ಗಾಯವಾಗಿದ್ದು, ಗಾಯಗೊಂಡ ಪಿರ್ಯಾದಿದಾರರನ್ನು ಪ್ರಭಾಕರ ಶೆಟ್ಟಿ ಹಾಗೂ ಮೋಟಾರ್ ಸೈಕಲ್ ಸವಾರ 108 ಅಂಬುಲೆನ್ಸ್ ನಲ್ಲಿ ಕಿರಿಮಂಜೇಶ್ವರ ಸರ್ಕಾರಿ  ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿರುತ್ತಾರೆ. ಮೋಟಾರ್ ಸೈಕಲ್ ಸವಾರನಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 186/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹೆಬ್ರಿ: ದಿನಾಂಕ 18/11/2021 ರಂದು ಮೂರ್ತಿ ಇವರು ತನ್ನ  KA-20-EH-3198 ನೇ ಮೋಟಾರ್ ಸೈಕಲ್ ನಲ್ಲಿ ಸಂತೋಷ್ ಇವರನ್ನು ಸಹ ಸವಾರನಾಗಿ ಕುಳ್ಳಿರಿಸಿಕೊಂಡು ಹೆಬ್ರಿ- ಸೋಮೇಶ್ವರ ಮುಖ್ಯ ರಸ್ತೆಯಲ್ಲಿ ಹೆಬ್ರಿ ಕಡೆಯಿಂದ ಸೋಮೇಶ್ವರ ಕಡೆಗೆ ಹೋಗುತ್ತಿದ್ದು ರಾತ್ರಿ 7:30 ಗಂಟೆಗೆ ಹೆಬ್ರಿ ಗ್ರಾಮದ ಜಟ್ಕಟ್ ಎಂಬಲ್ಲಿಗೆ ತಲುಪಿದಾಗ ಮೋಟಾರ್ ಸೈಕಲ್ ನ್ನು ಚಲಾಯಿಸುತ್ತಿದ್ದ ಸವಾರ ಮೂರ್ತಿ ಇವರು ಮೋಟಾರ್ ಸೈಕಲ್ ನ್ನು ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿದ ಪರಿಣಾಮ ಮೋಟಾರ್ ಸೈಕಲ್ ಹತೋಟಿ ತಪ್ಪಿ ಅವರಿಬ್ಬರು ಮೋಟಾರ್ ಸೈಕಲ್ ಸಮೇತ ರಸ್ತೆಯ ಎಡಬದಿಯಲ್ಲಿರುವ ಚರಂಡಿಗೆ ಬಿದ್ದ ಪರಿಣಾಮ ಸಹ ಸವಾರ ಸಂತೋಷ್ ಇವರಿಗೆ ಬಾಯಿಗೆ ಮತ್ತು ಮೂಗಿನ ಬಳಿ ಮತ್ತು ಕಾಲಿನ ಗಂಟಿನ ಬಳಿ ಗಾಯವಾಗಿದ್ದು. ಎಡಕೈಯ ಹೆಬ್ಬೆರಳಿಗೆ ತೀವ್ರ ಸ್ವರೂಪದ ಗಾಯವಾಗಿರುತ್ತದೆ. ಸವಾರ ಮೂರ್ತಿ ಇವರಿಗೆ ಯಾವುದೇ ಗಾಯವಾಗಿರುವುದಿಲ್ಲ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 67/2021 ಕಲಂ: 279, 337,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಕಾಶಿನಾಥ (38), ತಂದೆ: ದಿ. ನಾರಾಯಣ ದೇವಾಡಿಗ,  ವಾಸ: ಶಿವ ಸಾಗರ, ಮಹಾಲಿಂಗೇಶ್ವರ ದೇವಾಸ್ಥಾನದ ಬಳಿ, ಮಿಯಾರು. ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರ ಅಣ್ಣ ಮಂಜುನಾಥ (43) ಎಂಬುವವರು ವಾದ್ಯಗಾರಿಕೆ ಕೆಲಸ ಮಾಡುತ್ತಿದ್ದು ಒಂದು ವರ್ಷದಿಂದ  ನಂದಳಿಕೆಯಲ್ಲಿ ಹೊಸ ಮನೆ ಮಾಡಿ ವಾಸವಾಗಿದ್ದರು. ಮನೆ ಮಾಡಿದ ಸಾಲ ಬಾಕಿ  ಇರುವುದಾಗಿ ಈ ಹಿಂದೆ ತಿಳಿಸಿದ್ದು ಮಧ್ಯಪಾನ ಮಾಡುವ ಅಭ್ಯಾಸ ಹೊಂದಿದ್ದರು. ದಿನಾಂಕ 18/11/2021 ಮಧ್ಯಾಹ್ನ 2:00 ಗಂಟೆಗೆ ಮಿಯಾರಿನ ಮನೆಗೆ ಬಂದು ಬಜಗೋಳಿಗೆ ಹೋಗುವುದಾಗಿ ತಾಯಿ ವಾರಿಜಾರವರಲ್ಲಿ ಹೇಳಿಹೋದವರು ವಾಪಾಸು ಮನೆಗೂ ಬಾರದೇ ನಂದಳಿಕೆಯ ಮನೆಗೂ ಹೋಗದ ಕಾರಣ  ಹುಡುಕಾಡಿದಾಗ ಮನೆಯ ಒಂದು ಕಿ.ಮೀ ದೂರದಲ್ಲಿ ಮಿಯಾರು ಹೊಳೆಯ ಸಮೀಪ ಹಾಡಿಯಲ್ಲಿ  ಮರದ ಕೊಂಬೆಗೆ ನೈಲಾನ್ ಹಗ್ಗ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 40/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಪೂರ್ಣಿಮಾ (34), ತಂದೆ: ಪದ್ಮನಾಭ, ವಾಸ: ಎಲಿಮಲೆ ಮನೆ ನೆಲ್ಲೂರು, ಕೆಂಬ್ರಾಜೆ  ಪೋಸ್ಟ್,ಸುಳ್ಯ ತಾಲೂಕು, ದ.ಕ  ಜಿಲ್ಲೆ ಇವರ ವಾಟ್ಸ್ ಆ್ಯಪ್ ಗೆ ಯಾರೋ ಅಪರಿಚಿತರು ಸದೇಶ ಕಳುಹಿಸಿದ್ದು, ತನ್ನ ಮಗನಿಗೆ ಬೈಪಾಸ್‌ ಸರ್ಜರಿ ಆಗಬೇಕಾಗಿರುವುರಿಂದ ಹಣ ಸಹಾಯ ಮಾಡಬೇಕಾಗಿ ಕೇಳಿಕೊಂಡು ಅಪರಿಚಿತ ವ್ಯಕ್ತಿ ಫೋನ್ ಪೇ ಮುಖೇನ ರೂಪಾಯಿ 5,000/- ಹಣವನ್ನು ಪಿರ್ಯಾದಿದಾರರ ಖಾತೆ ಕಳುಹಿಸಿದ್ದು,  ಇದನ್ನು ನಂಬಿದ ಪಿರ್ಯಾದಿದಾರರು ತಾನು ರೂಪಾಯಿ 5000/- ಹಣವನ್ನು ಸೇರಿಸಿ ಆತನು ತಿಳಿಸಿರುವ ಖಾತೆಗೆ ಪೋನ್‌ ಪೇ ಮುಖೇನ ಒಟ್ಟು ರೂಪಾಯಿ 10,000/- ಹಣವನ್ನು ದಿನಾಂಕ 18/09/2021 ರಂದು ಕಳುಹಿಸಿರುತ್ತಾರೆ.  2021 ನೇ ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ಯಾರೋ ಅಪರಿಚಿತ ವ್ಯಕ್ತಿಗಳು ಪಿರ್ಯಾದಿದಾರರಿಗೆ ವಿದೇಶದಲ್ಲಿ ಉದ್ಯೋಗ ನೀಡುವುದಾಗಿ, ಹಾಗೂ ಗಿಫ್ಟ್ ನೀಡುವುದಾಗಿ ನಂಬಿಸಿ, ಪಿರ್ಯಾದಿದಾರರಿಂದ ಒಟ್ಟು ರೂಪಾಯಿ 4.31,500/- ಹಣವನ್ನು ಆರೋಪಿಗಳು ಜಮೆ ಮಾಡಿಸಿಕೊಂಡು ಪಿರ್ಯಾದಿದಾರರಿಗೆ  ಹಣವನ್ನು ವಾಪಾಸು ನೀಡದೇ ವಿದೇಶದಲ್ಲಿ ಕೆಲಸವನ್ನು ಕೊಡಿಸದೇ  ಮೋಸ ಮಾಡಿರುರುತ್ತಾರೆ. ಪಿರ್ಯಾದಿದಾರರಿಗೆ ಕರೆ ಮಾಡಿ ಉದ್ಯೋಗ ನೀಡುವುದಾಗಿ ಮತ್ತು ಗಿಫ್ಟ್ ಕಳುಹಿಸುವುದಾಗಿ  ನಂಬಿಸಿ ಹಣ ಪಡೆದ ಆರೋಪಿಗಳ ವಿರುದ್ದ ಮತ್ತು ಪಿರ್ಯಾದಿದಾರರ ಖಾತೆಗೆ ಯಾವುದೋ ವ್ಯಕ್ತಿಯಿಂದ ಹಣ ಹಾಕಿಸಿದ ವ್ಯಕ್ತಿಗಳ ವಿರುದ್ದ ಕಾನೂನು ಕ್ರಮಕ್ಕಾಗಿ ನೀಡಿದ ದೂರಿನಂತೆ ಸೆನ್ ಅಪರಾಧ ಪೊಲೀಸ್ ಠಾಣೆ ಅಪರಾದ ಕ್ರಮಾಂಕ 57/2021 ಕಲಂ: 66 (ಡಿ)  ಐ.ಟಿ. ಆಕ್ಟ್  420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಕುಂದಾಪುರ: ದಿನಾಂಕ 19/11/2021 ರಂದು  ರಮೇಶ್ ಆರ್. ಪವಾರ್, ಪೊಲೀಸ್ ಉಪನಿರೀಕ್ಷಕರು (ತನಿಖೆ), ಕುಂದಾಪುರ ಪೊಲೀಸ್ ಠಾಣೆ ಇವರು ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಕೊಡಿ ಹಬ್ಬದ  ಪ್ರಯುಕ್ತ ಕೋಟೇಶ್ವರ ಪೇಟೆಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿ ಇರುವಾಗ ರಾತ್ರಿ 9:50 ಗಂಟೆಗೆ ಕೋಟೇಶ್ವರ ಗ್ರಾಮದ ಕೋಟೇಶ್ವರ  ರಥಬೀದಿಯಲ್ಲಿರುವ ನಂಬಿಯಾರ್ ಜಂಕ್ಷನ್ ಬಳಿ ಸಾರ್ವಜನಿಕ ಸ್ಥಳದಲ್ಲಿ 3 ಜನ ವ್ಯಕ್ತಿಗಳು ಕೈ ಕೈ ಮಿಸಲಾಯಿಸಿಕೊಂಡು ಹೊಡೆದಾಡಿ ಕೊಳ್ಳುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ಸ್ಥಳಕ್ಕೆ ತಲುಪಿದಾಗ  3 ಜನ ವ್ಯಕ್ತಿಗಳು ಕೈ ಕೈ ಮಿಸಲಾಯಿಸಿಕೊಂಡು ಹೊಡೆದಾಡಿಕೊಂಡು ಕಾಲಿನಿಂದ ತುಳಿದುಕೊಳ್ಳುತ್ತಿದ್ದು ಕಂಡು ಬಂದಿದ್ದು ವಿಚಾರಿಸಲಾಗಿ 1) ಆಶೀಶ್ ಶ್ರೀಯಾನ್ (25), ತಂದೆ: ಕೊಸ ಸುವರ್ಣ, ವಾಸ: ಉಪ್ಪಿನಕೋಟೆ, ಹಾರಾಡಿ ಗ್ರಾಮ, ಬ್ರಹ್ಮಾವರ,  2) ಪ್ರೀತಮ್ (26), ತಂದೆ: ಪೀಟರ್ ಡಿಸೋಜ, ವಾಸ: ಹಂದಾಡಿ ಗ್ರಾಮ, ಬ್ರಹ್ಮಾವರ,  3) ಸಂದೀಪ (25), ತಂದೆ: ರಾಜು ಮೊಗವೀರ, ವಾಸ: ಕುಂಬ್ರಿ, ಕೋಟೇಶ್ವರ ಗ್ರಾಮ, ಕುಂದಾಪುರ ಎಂಬುದಾಗಿದ್ದು, ಆಪಾದಿತರು ಜಾತ್ರೆಯಲ್ಲಿ ನಡೆದುಕೊಂಡು ಹೋಗುವ ಸಮಯ ಮೈ ಕೈ ತಾಗಿದ ವಿಚಾರದಲ್ಲಿ ಒಬ್ಬರನ್ನೋಬ್ಬರು ನೋಡಿ ಗುರಾಯಿಸಿಕೊಂಡು ಸಾರ್ವಜನಿಕ ಸ್ಥಳದಲ್ಲಿ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿಕೊಂಡು ಕೈಯಿಂದ ಹೊಡೆದಾಡಿ ಕಾಲಿನಿಂದ ತುಳಿದುಕೊಂಡು ಸಾರ್ವಜನಿಕರ ನೆಮ್ಮದಿಗೆ ಭಂಗವನ್ನುಂಟು ಮಾಡಿದ್ದುದ್ದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾದ ಕ್ರಮಾಂಕ 124/2021 ಕಲಂ: 160 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 20-11-2021 10:38 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080