ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಕೋಟ: ದಿನಾಂಕ 19/11/2021ರಂದು  ರಾತ್ರಿ ಪಿರ್ಯಾದಿದಾರರು  ಕುಮಾರ್ ಪೀರಪ್ಪ ಆಚಾರಿ  ಪ್ರಾಯ 29 ವರ್ಷ ತಂದೆ: ಫೀರಪ್ಪ ಆಚಾರಿ  ವಾಸ: ದಮ್ಮುರು ಹೊಳ  ಯಲಬುರ್ಗಿ ತಾಲೂಕು ಇವರು ಸಾಲಿಗ್ರಾಮದ ಕರಾವಳಿ ಹೋಟೆಲ್ ನಲ್ಲಿ ಊಟವನ್ನು ಮಾಡಿ ವಾಪಾಸ್ಸು ತನ್ನ ಬಾಡಿಗೆ ಮನೆಯ ಕಡೆಗೆ ರಾ ಹೆ 66 ರ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಏಖಮುಖ ಡಾಮರು ರಸ್ತೆಯ ಪೂರ್ವ ಬದಿ ಮಣ್ಣು ರಸ್ತೆಯಲ್ಲಿ  ಸಾಲಿಗ್ರಾಮದ ಕಡೆಯಿಂದ ಕೋಟ ಕಡೆಗೆ ನಡೆದುಕೊಂಡು ಹೊರಟಿದ್ದು ರಾತ್ರಿ 9.30 ಗಂಟೆಯ ಸಮಯಕ್ಕೆ ಚಿತ್ರಪಾಡಿ ಗ್ರಾಮದ ನರ್ತಕಿ ಬಾರ್ ಆಂಡ್ ರೆಸ್ಟೋರೆಂಟ್ ಬಳಿ ತಲುಪುವಷ್ಟರಲ್ಲಿ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಡಾಮರು ರಸ್ತೆಯಲ್ಲಿ ಹೊಸದಾಗಿ ಖರೀದಿಸಿದ ಟೆಂಪರರಿ ರಿಜಿಸ್ಷ್ರೇಷನ್ ನಂಬ್ರ KA21090169656410 ನೇ TVS ಸ್ಕೂಟಿಯ ಸವಾರ ವೆಂಕಟೇಶ  ಎಂಬಾತನು ತನ್ನ ಸ್ಕೂಟಿಯನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ಒಮ್ಮೆಲೆ ಎಡಕ್ಕೆ ಸವಾರಿ ಮಾಡಿ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ  ಪಿರ್ಯಾದಿದಾರರಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದಿದ್ದು ಸ್ಕೂಟಿ ಪಿರ್ಯಾದಿದಾರರ  ಕಾಲ ಮೇಲೆ ಬಿದ್ದಿರುತ್ತದೆ ಸ್ಕೂಟಿ ಸವಾರನು ಕೂಡ ಮಣ್ಣು ರಸ್ತೆಗೆ ಬಿದ್ದಿರುತ್ತಾನೆ ಪರಿಣಾಮ ಪಿರ್ಯಾದಿದಾರರಿಗೆ ಎಡ ಕಾಲ ಮೊಣ ಗಂಟಿನ ಕೆಳಗೆ ತರಚಿದ  ರಕ್ತ ಗಾಯವಾಗಿರುತ್ತದೆ.  ಸ್ಕೂಟಿ ಸವಾರನಿಗೆ ಬಲ ಕಾಲ ಮೊಣ ಗಂಟಿನಲ್ಲಿ ಹಾಗೂ ಪಾದದಲ್ಲಿ ತರಚಿದ ರಕ್ತಗಾಯವಾಗಿರುತ್ತದೆ.ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 196/2021 ಕಲಂ: 279,338  IPC  ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣಗಳು:

  • ಶಂಕರನಾರಾಯಣ:   ಫಿರ್ಯಾದುದಾರ ರಂಜಿತ್ (25) ತಂದೆ: ಹೆರಿಯ ಮೊಗವೀರ, ವಾಸ: ಕಟ್ಟಿನಾಡಿ, ದೇವರಬಾಳು ಹಳ್ಳಿಹೊಳೆ ಗ್ರಾಮ ಬೈಂದೂರು ತಾಲೂಕು ಇವರ  ಅಣ್ಣ ಸಂತೋಷ ಪ್ರಾಯ 30ವರ್ಷ  ಇವರು ಕಳೆದ ಒಂದು ವರ್ಷದಿಂದ ಲಾಕ್ ಡೌನ್ ನಲ್ಲಿ ಕೆಲಸವಿಲ್ಲದೇ ಮನೆಯಲ್ಲಿ ಇದ್ದು ಯಾವುದೋ ಹುಡುಗಿಯೊಂದಿಗೆ ಪೋನ್ ನಲ್ಲಿ ಪ್ರೀತಿ ಸಲುಗೆಯಿಂದ ಮಾತಾನಾಡಿಕೊಂಡಿದ್ದು ಜೀವನದಲ್ಲಿ ಜಿಗುಪ್ಸೆಗೊಂಡು 19/11/2021  ರಂದು ರಾತ್ರಿ 21:00 ಗಂಟೆಯಿಂದ ದಿ: 20:11:2021 ರಂದು  ಬೆಳಿಗ್ಗೆ  06;30   ಗಂಟೆಯ ಮಧ್ಯಾವದಿಯಲ್ಲಿ ಬೈಂದೂರು ತಾಲೂಕು ಹಳ್ಳಿಹೊಳೆ ಗ್ರಾಮದ ಕಟ್ಟಿನಾಡಿ ದೇವರಬಾಳು ಎಂಬಲ್ಲಿ ತನ್ನ ವಾಸದ ಮನೆಯ ಮಲಗುವ  ಕೋಣೆಯ  ಮಾಡಿನ ಪಕಾಸಿಗೆ ಸೀರೆಯಿಂದ ನೇಣು ಬಿಗಿದುಕೊಂಡು ಅತ್ಮ ಹತ್ಯೆ ಮಾಡಿಕೊಂಡಿರುತ್ತಾರೆ. ಇವರ ಸಾವಿನಲ್ಲಿ ಸಂಶಯವಿದೆ ಎನ್ನುವುದಾಗಿ ದೂರು ದಾಖಲಾಗಿದ್ದು  ಈ ಬಗ್ಗೆ ಶಂಕರನಾರಾಯಣ  ಪೊಲೀಸ್‌ ಠಾಣಾ ಯುಡಿಆರ್   ನಂ 44/2021 ಕಲಂ  174(C)  ಸಿ.ಆರ್‌.ಪಿ.ಸಿ ಯಂತೆ ಪ್ರಕರಣದಾಖಲಿಸಲಾಗಿದೆ.
  • ಉಡುಪಿ ನಗರ : ಫಿರ್ಯಾದುದಾರ ಶೀನ ನಾಯ್ಕ ಪ್ರಾಯ: 63 ವರ್ಷ ತಂದೆ: ಮಿರ್ಗ ನಾಯ್ಕ  ವಾಸ: ಮನೆನಂಬ್ರ 11-1,  ತೆಂಕಬೆಟ್ಟು, ಶಿರೂರು-ಮುದ್ದುಮನೆ  ಗ್ರಾಮ, ಇವರ  ತಮ್ಮನಾದ ಗೋಪಾಲ ನಾಯ್ಕ ಪ್ರಾಯ 41 ವರ್ಷ ರವರು ಕಳೆದ  15 ವರ್ಷಗಳಿಂದ ಮರವೇರಿ ತೆಂಗಿನ  ಕಾಯಿ ಕೊಯ್ಯುವ  ವೃತ್ತಿ ಮಾಡಿಕೊಂಡಿದ್ದು, ದಿನಾಂಕ 20/11/2021 ರಂದು ಉಡುಪಿ  ತಾಲೂಕು  ಶಿವಳ್ಳಿ  ಗ್ರಾಮದ  ಕಡಿಯಾಳಿ  ಕಮಲಾಬಾಯಿ ಹೈಸ್ಕೂಲ್‌  ಬಳಿಯಿರುವ ನರೇಶ್‌ ಶೆಟ್ಟಿ ಎಂಬುವರ ಬಾಬ್ತು ಜಾಗದ ತೆಂಗಿನ ಮರವನ್ನೇರಿ ತೆಂಗಿನ ಕಾಯಿಗಳನ್ನು ಕೀಳುವಾಗ   ಬೆಳಿಗ್ಗೆ  09:00  ಗಂಟೆ ಸುಮಾರಿಗೆ ಆಕಸ್ಮಿಕವಾಗಿ  ಆಯತಪ್ಪಿ, ಅಂದಾಜು 25 ಅಡಿ  ಎತ್ತರದ  ತೆಂಗಿನ  ಮರದಿಂದ  ಕೆಳಗೆ  ಬಿದ್ದು,  ತಲೆಗೆ  ಗಂಭೀರ ಸ್ವರೂಪದ ಗಾಯಗಳಾದವರನ್ನು ಚಿಕಿತ್ಸೆಯ  ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ  ಸಾಗಿಸುವಾಗ ಮಾರ್ಗ ಮಧ್ಯೆ ಮೃತ ಪಟ್ಟಿದ್ದು, ಮೃತರ ಮರಣದಲ್ಲಿ ಬೇರೆ ಯಾವುದೇ ಸಂಶಯಗಳಿರುವುದಿಲ್ಲ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್  48/2021 ಕಲಂ 174  CrPCಯಂತೆ ಪ್ರಕರಣದಾಖಲಿಸಲಾಗಿದೆ. 

ಇತ್ತೀಚಿನ ನವೀಕರಣ​ : 20-11-2021 06:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080