ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಮಲ್ಪೆ: ಪಿರ್ಯಾದಿ ಭಾಲಕೃಷ್ಣ ಬಿ ಮೆಂಡನ್ (50)  ಇವರು ದಿನಾಂಕ:19-10-2022 ರಂದು ಸಂಜೆ 4:45 ಗಂಟೆ ಸಮಯಕ್ಕೆ ತನ್ನ ಬಾಬ್ತು KA-20-EZ-0949 ನಂಬ್ರದ ಟಿವಿಎಸ್ ಸ್ಕೂಟರಿನಲ್ಲಿ ತನ್ನ ಪತ್ನಿ ಮಾಲತಿಯವರನ್ನು ಹಿಂಬದಿ  ಕುಳ್ಳಿರಿಸಿಕೊಂಡು ಕೊಡವೂರು ರಸ್ತೆಯಿಂದಾಗಿ ಸಿಟಿಜನ್ ಸರ್ಕಲ್ ಕಡೆಗೆ ಹೋಗುತ್ತಿರುವಾಗ  ಸಮಯ ಸುಮಾರು 5:00 ಗಂಟೆಗೆ ಶೋಭಾ ಆಟೋ ವಾಶ್ ಎದುರು ಪಿರ್ಯಾದಿದಾರರ ಸ್ಕೂಟರಿಗೆ ಹಿಂದಿನಿಂದ ಬಂದ 407 ಟಿಪ್ಪರ್ ವಾಹನವು ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಯ ತೀರ ಬಲ ಭಾಗಕ್ಕೆ ಹೋಗಿ ಎದುರು ಕಡೆಯಿಂದ ಬರುತ್ತಿದ್ದ ಒಂದು ರಿಕ್ಷಾಕ್ಕೆ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಬಲಕಾಲು, ಬಲಕೈ ಗೆ ತರಚಿದ ಗಾಯ ಆಗಿರುತ್ತದೆ.  ಸ್ಕೂಟರಿನ ಹಿಂದೆ ಕುಳಿತಿದ್ದ ಪಿರ್ಯಾದಿದಾರರ ಪತ್ನಿ ಮಾಲತಿ ರವರು ಟಿಪ್ಪರಿನ ಬಲಭಾಗದ ಚಕ್ರದ ಬಳಿ ಬಿದ್ದು ಅವರ ಬಲ ಕಾಲು, ಬಲ ಕೈ, ಎಡಪಾದ, ತಲೆಯ ಎಡಭಾಗದ ಬಳಿ ತೀವ್ರ ತರಹದ ರಕ್ತಗಾಯವಾಗಿದ್ದು , ಟಿಪ್ಪರಿನ ಚಾಲಕನು ತನ್ನ ಟಿಪ್ಪರನ್ನು ಹಿಂಭಾಗಕ್ಕೆ ಚಲಾಯಿಸಿದ ಪರಿಣಾಮ ಟಿಪ್ಪರಿನ ಚಕ್ರ ಮಾಲತಿಯವರ ಬಲಭಾಗದ ತೊಡೆಯ ಮೇಲೆ ಹರಿದು ಪಿರ್ಯಾದಿದಾರರು ಹಾಗೂ ಮಾಲತಿ ರವರು ಕೆಎಂಸಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 84/2022 . ಕಲಂ 279,337 338 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.
  • ಶಿರ್ವಾ: ದಿನಾಂಕ 19/10/2022 ರಂದು ಪಿರ್ಯಾದಿ ನಿತ್ಯಾನಂದ ಶೆಟ್ಟಿ ಇವರು ತನ್ನ ಸ್ನೇಹಿತ ಶ್ಯಾಮ್ ಸನ್ ರಾಜಕುಮಾರ  ಕರ್ಕಡರವರೊಂದಿಗೆ ಮೋಟಾರು ಸೈಕಲ್ ನಂಬ್ರ KA20EZ0176  ನೇಯದರಲ್ಲಿ ಸಹಸವಾರನಾಗಿ ಕುಳಿತುಕೊಂಡು ಮುದರಂಗಡಿಯಿಂದ  ಕುತ್ಯಾರು ಕಡೆಗೆ ಬರುತ್ತಿರುವಾಗ ಸಂಜೆ  ಸುಮಾರು 04:30 ಗಂಟೆಗೆ ಕಾಪು ತಾಲೂಕಿನ ಕುತ್ಯಾರು ಗ್ರಾಮದ ಕುತ್ಯಾರು ಶಾಲೆಯ ಬಳಿ ತಲಪುವಾಗ  ಎದುರುನಿಂದ ಅಂದರೆ  ಕುತ್ಯಾರಿನಿಂದ ಮುದರಂಗಡಿ ಕಡೆಗೆ ನೋಂದಣಿ ನಂಬರ್ ಅಳವಡಿಸದ ಹೊಸ ಮೋಟಾರ್ ಸೈಕಲ್ ಸವಾರ ಗೌರಿಶಂಕರನು ತನ್ನ ವಾಹನವನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಓವರ್ ಟೇಕ್ ಮಾಡಿ ರಸ್ತೆಯ ತೀರಾ ಬಲ ಬದಿಗೆ ಬಂದು  ಪಿರ್ಯಾದಿದಾರರು ಕುಳಿತಿದ್ದ  ಮೋಟಾರು ಸೈಕಲ್ ಗೆ ಢಿಕ್ಕಿ ಹೊಡೆದು ಪರಿಣಾಮ  ಎರಡೂ ಮೋಟಾರು ಸೈಕಲ್ ಸಮೇತ ಮೂರು ಜನರು ರಸ್ತೆಗೆ ಬಿದ್ದಿದ್ದು, ಪಿರ್ಯಾದಿದಾರರ ಬಲಕಾಲಿನ ಬೆರಳು ತುಂಡಾಗಿದ್ದು, ಬಲಕೈ ಅಂಗೈ, ಬಲಕೈಗಂಟಿನ ಬಳಿ ತರಚಿದ ಗಾಯವಾಗಿದ್ದು, ಸ್ಯಾಮ್ ಸನ್ ರಾಜಕುಮಾರ ಕರ್ಕಡರವರಿಗೆ ತೀವ್ರತರಹದ ಗಾಯವಾಗಿದ್ದು,ಕಾಲುಬೆರಳುಗಳಿಗೂ ಗಾಯವಾಗಿರುತ್ತದೆ. ಎರಡೂ ಮೋಟಾರು ಸೈಕಲ್ ಗಳು ಜಖಂಗೊಂಡಿರುತ್ತವೆ. ಹಾಗೂ ಡಿಕ್ಕಿ ಹೊಡೆದ ಮೋಟಾರು ಸೈಕಲ್ ಸವಾರ ಗೌರಿಶಂಕರನಿಗೂ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 78/22 ಕಲಂ 279, 337, 338 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

 ಮನುಷ್ಯ ಕಾಣೆ ಪ್ರಕರಣ

  • ಮಲ್ಪೆ: ಪಿರ್ಯಾದಿ ಪ್ರಕಾಶ್ ಇವರ ಚಿಕ್ಕಮ್ಮನ ಮಗ ಪ್ರವೀಣ್ ಬೆಲ್ಚಾಡ  ಪ್ರಾಯ 44 ವರ್ಷ  ಇವರು  ನೇಜಾರ್  ನಿಡಂಬಳ್ಳಿ  ರಸ್ತೆಯ  ಬಂಗ್ಲೆ ಮನೆ ಬಳಿಯಲ್ಲಿ ಸ್ವಂತ ಮನೆಯಲ್ಲಿ ವಾಸ ಮಾಡಿಕೊಂಡಿದ್ದು ಅವರು 6 ವರ್ಷಗಳ ಹಿಂದೆ  ಮದುವೆಯಾಗಿದ್ದು  ಪ್ರವೀಣ  ಊಟ ಮತ್ತು ಉಪಹಾರಕ್ಕೆ ಪ್ರತಿ  ದಿನ ಪಿರ್ಯಾದಿದಾರರ  ಮನೆಗೆ  ಬಂದು ಹೋಗುತಿದ್ದ.   ದಿನಾಂಕ 18-10-2022  ರಂದು ರಾತ್ರಿ 9-00 ಗಂಟೆಗೆ  ಪಿರ್ಯಾದಿದಾರರ ಅಕ್ಕ ಜಯಂತಿ ರವರು  ಪ್ರವೀಣ್ ಬೆಳ್ಚಾಡ ಮೊಬೈಲ್ ಗೆ  ಕರೆ ಮಾಡಿ  ಊಟಕ್ಕೆ  ಬರುವಂತೆ  ತಿಳಿಸಿದಾಗ ತಾನು  ಬಂದ್ರೆ   10-15 ನಿಮಿಷದ  ಒಳಗೆ  ಬರುತ್ತೇನೆ  ಇಲ್ಲವಾದರೆ  ಬೆಳಿಗ್ಗೆ   ತಿಂಡಿ  ತಿನ್ನಲ್ಲು  ಬರುತ್ತೇನೆ  ಎಂದು  ಹೇಳಿದ್ದು  ರಾತ್ರಿ  ಊಟಕ್ಕೆ  ಬಂದಿರುವುದಿಲ್ಲ .  ದಿನಾಂಕ 19-10-2022  ರಂದು  ಬೆಳಿಗ್ಗೆ 8-00 ಗಂಟೆಗೆ   ಜಯಂತಿ ರವರು    ಪ್ರವೀಣ್  ರವರ ಮೊಬೈಲ್ ಗೆ   ಕರೆ ಮಾಡಿದಾಗ  ಪೊನ್ ಸ್ವೀಚ್ ಆಫ್  ಆಗಿರುತ್ತದೆ.  ಆತನು  ಈ ತನಕ  ಮನೆಗೆ ಬಾರದೆ ಕಾಣೆಯಾಗಿರುತ್ತಾನೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 85/2022  ಕಲಂ: ಮನುಷ್ಯ ಕಾಣೆ ಯಂತೆ   ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 20-10-2022 06:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080