ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಬೈಂದೂರು: ಪಿರ್ಯಾದಿದಾರರಾದ ವಿಜಯ ಕುಮಾರ (39), ತಂದೆ: ಚಿಕ್ಕಯ್ಯ ಪೂಜಾರಿ, ವಾಸ: ನಿಸರ್ಗ ನಿವಾಸ ಸೌತೆಬೆಟ್ಟು, ಕೊಡೇರಿ, ಕಿರಿಮಂಜೇಶ್ವರ ಗ್ರಾಮ ಬೈಂದೂರು ತಾಲೂಕು ಇವರು ದಿನಾಂಕ 18/10/2022 ರಂದು ಸಂಜೆ 5:30 ಗಂಟೆಗೆ ನಾಗೂರು ರಿಕ್ಷಾ ನಿಲ್ದಾಣದ ಬಳಿ ನಿಂತುಕೊಂಡಿರುವಾಗ ಅವರ ಪರಿಚಯದ ರಾಮ ಖಾರ್ವಿ ಎಂಬುವವರು ಗಂಗೊಳ್ಳಿ ಕಡೆಗೆ ಹೋಗಲು ನಾಗೂರು ರಿಕ್ಷಾ ನಿಲ್ದಾಣದ ಬಳಿ ರಾಷ್ಟ್ರೀಯ ಹೆದ್ದಾರಿ 66 ರಸ್ತೆ ಬದಿಯ ಮಣ್ಣು ರಸ್ತೆಯಲ್ಲಿ ನಿಂತುಕೊಂಡಿದ್ದು  ಆ ಸಮಯ KA-20-ET-5345  ನೇ ಮೋಟಾರು ಸೈಕಲ್ ಸವಾರ  ವಿಜೇಂದ್ರ ಆತನ ಮೋಟಾರು ಸೈಕಲ್ ನಲ್ಲಿ ಹಿಂಬದಿ ಸಹ ಸವಾರನನ್ನು ಕುಳ್ಳಿರಿಸಿಕೊಂಡು ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಮೋಟಾರು ಸೈಕಲ್ ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿಮಾಡಿಕೊಂಡು ಬಂದು  ನಾಗೂರು ರಿಕ್ಷಾ ನಿಲ್ದಾಣದ ಬಳಿ ಮಣ್ಣು ರಸ್ತೆಯ ಬದಿಯಲ್ಲಿ  ನಿಂತುಕೊಂಡಿದ್ದ ರಾಮ ಖಾರ್ವಿಯವರಿಗೆ  ಡಿಕ್ಕಿ ಹೊಡೆದ ಪರಿಣಾಮ ರಾಮ ಖಾರ್ವಿ ಯವರು ಕೆಳಗಡೆ ಬಿದ್ದಿದ್ದು, ಪಿರ್ಯಾದಿದಾರರು  ಹಾಗೂ  ಅಲ್ಲಿದ್ದ ಸಾರ್ವಜನಿಕರು  ಎತ್ತಿ ಉಪಚರಿಸಿದ್ದು ಅಪಘಾತದ ಪರಿಣಾಮ  ರಾಮ ಖಾರ್ವಿ ಯವರಿಗೆ ಬಲ ಕೈಗೆ ರಕ್ತ ಗಾಯ ಮತ್ತು ಗುದ್ದಿದ ನೋವು ಉಂಟಾಗಿದ್ದು  ಮತ್ತು ಬಲ ಬದಿಯ ತಲೆಯ ಭಾಗಕ್ಕೆ  ರಕ್ತಗಾಯವಾಗಿದ್ದು  ಅವರನ್ನು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಪರೀಕ್ಷೀಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ . ಹಾಗೂ ಅಪಘಾತವೆಸಗಿದ ಮೋಟಾರು ಸೈಕಲ್ ಸವಾರ ಹಾಗೂ ಸಹ ಸವಾರನಿಗೂ ಸಣ್ಣಪುಟ್ಟ ತರಚಿದ ಗಾಯವಾಗಿದ್ದು  ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 210/2022 ಕಲಂ: 279 , 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಶಿರ್ವಾ: ದಿನಾಂಕ 19/10/2022 ರಂದು ಪಿರ್ಯಾದಿದಾರರಾದ ಕೆ. ವಾಸು (55), ತಂದೆ:ದಿ. ಕೋಟೆ ಮೇಸ್ತ್ರಿ, ವಾಸ: 3-58 ಕಮಲ ನಿವಾಸ, ಪಣಿಯೂರು ಅಂಚೆ ಮತ್ತು ಬೆಳಪು ಗ್ರಾಮ,ಕಾಪು ತಾಲೂಕು ಉಡುಪಿ ಜಿಲ್ಲೆ ಇವರು  ಮೋಟಾರು ಸೈಕಲ್ ನಂಬ್ರ KA-20-EF-5912 ನೇಯದರಲ್ಲಿ ಕಳತ್ತೂರು ಪೈಯ್ಯಾರು ಕರಿಯಣ್ಣ ಶೆಟ್ಟಿ ಪ್ರೌಡ ಶಾಲೆಗೆ ಕೆಲಸದ ನಿಮಿತ್ ತೆರಳುತ್ತಿರುವಾಗ ಸಮಯ 14:00 ಗಂಟೆಗೆ ಬೆಳಪು ಗ್ರಾಮದ KIDB ಸಮೀಪ ಸಾರ್ವಜನಿಕ ರಸ್ತೆಯಲ್ಲಿ  ತಲುಪುವಾಗ KA-21-P-2244 ನೇ ನಂಬ್ರದ ಕಾರಿನ ಚಾಲಕ ಬೆಳಪು ಕಡೆಯಿಂದ ಪಣಿಯೂರು ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ತೀರಾ ಬಲಬದಿಗೆ ಬಂದು ಪಿರ್ಯಾದಿದಾರರು ಸವಾರಿ ಮಾಡಿಕೊಂಡು ಹೋಗುತ್ತಿದ್ದ KA-20-EF-5912 ನೇ ಮೋಟಾರು ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ  ಪಿರ್ಯಾದಿದಾರರು ಮೋಟಾರು ಸೈಕಲ್‌ ಸಮೇತ ರಸ್ತೆಗೆ ಬಿದ್ದಿದ್ದು, ಅಪಘಾತದಿಂದ ಅವರ ಎಡ ಕಾಲಿನ ಮೊಣಗಂಟಿನ ಬಳಿ, ಪಾದದ ಬಳಿ ಒಳ ಜಖಂ, ತಲೆಗೆ ಹಾಗೂ ಎಡ ಕೈ ಬೆರಳಿಗೆ ತರಚಿದ ರಕ್ತಗಾಯವಾಗಿರುತ್ತದೆ. ಕೂಡಲೇ ಒಂದು ವಾಹನದಲ್ಲಿ ಚಿಕಿತ್ಸೆಯ ಬಗ್ಗೆ ಪಿರ್ಯಾದಿದಾರರ ಸಂಬಂಧಿ ಸುಧಾಕರ ಹಾಗೂ ಕಾರಿನ ಚಾಲಕ ಅಶ್ರಫ್‌ರವರು ಉಡುಪಿ ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ವೈದ್ಯರು ಒಳರೋಗಿಯಾಗಿ ದಾಖಲಸಿಕೊಂಡಿರುತ್ತಾರೆ.  ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 77/2022 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಅಸ್ವಾಭಾವಿಕ ಮರಣ ಪ್ರಕರಣ

 • ಕಾರ್ಕಳ: ಪಿರ್ಯಾದಿದಾರರಾದ ದಿಲೀಪ್.ಜಿ (47), ತಂದೆ: ಕೆ.ಕೆ. ಗೋಪಾಲಕೃಷ್ಣನ್, ವಾಸ: ನಿಹಾರಿಕಾ, ಹವಾಲ್ದಾರಬೆಟ್ಟು, ಕಸಬಾ ಗ್ರಾಮ, ಕಾರ್ಕಳ ತಾಲೂಕು ಇವರು ವಿವೇಕಾನಂದ ಶೆಣೈ ಎಂಬುವವರೊಂದಿಗೆ ಗೇರು ಬೀಜ ಕಾರ್ಖಾನೆಯ ಪಾಲುದಾರನಾಗಿ ಕೆಲಸ ಮಾಡಿಕೊಂಡಿದ್ದು, ವಿವೇಕಾನಂದ ಶೆಣೈರವರು ಸಾಣೂರು ಗ್ರಾಮದ ಶುಂಠಿಗುಡ್ಡೆ ಎಂಬಲ್ಲಿ ಕೇರಳದ ಬಿಜು ಥೋಮಸ್ ಎಂಬುವವರ ಜೊತೆ ಕರಾರು ಮೂಲಕ ರಬ್ಬರ್ ಪ್ಲಾಂಟೇಶನ್ ಪಡೆದುಕೊಂಡು ವ್ಯವಹಾರ ಮಾಡಿಕೊಂಡಿರುತ್ತಾರೆ. ಪ್ಲಾಂಟೇಶನ್ ನ ಉಸ್ತುವಾರಿಯನ್ನು ಪಿರ್ಯಾದಿದಾರರೇ ನೋಡಿಕೊಳ್ಳುತ್ತಿರುವುದಾಗಿದೆ. ದಿನಾಂಕ 19/10/2022 ರಂದು ಬೆಳಗ್ಗೆ 09:00 ಗಂಟೆಗೆ ಗ್ರಾಸ್ ಕಟ್ಟಿಂಗ್ ಮಾಡಲು ಬಂದ ವಸಂತ ಎಂಬುವವರು ಪಿರ್ಯಾದಿದಾರರಿಗೆ ಪೋನ್ ಮಾಡಿ ಗೇಟ್ ಒಳಗಿನಿಂದ ಬೀಗ ಹಾಕಿದ್ದು ಕೆಲಸದವರು ಕೂಗಿ ಕರೆದರೆ ಬಂದಿರುವುದಿಲ್ಲ ಗೇಟಿನ ಮುಂದೆ ಸ್ವಲ್ಪ ದೂರದಲ್ಲಿ ದಾರಿಯ ಬದಿಯಲ್ಲಿ ಮೃತದೇಹದಂತೆ ಕಾಣಿಸುತ್ತಿದೆ. ಎಂದು ತಿಳಿಸಿದ್ದು ಪಿರ್ಯಾದಿದಾರರು ಕೂಡಲೇ ಪೊಲೀಸ್ ಠಾಣೆಗೆ ಪೋನ್ ಮಾಡಿ ವಿವೇಕಾನಂದ ಶೆಣೈರವರೊಂದಿಗೆ ಸ್ಥಳಕ್ಕೆ ಬಂದು ಪೊಲೀಸರು ಬಂದ ನಂತರ ಗೇಟಿನ ಬೀಗ ತೆರೆದು ನೋಡಿದಾಗ ಕೆಲಸದವರಾದ ಗೋಪಿ (60), ವಾಸ: ಮಲಪ್ಪುರಂ, ಕೇರಳ ರವರ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಮೃತಪಟ್ಟು ಬಿದ್ದಿರುತ್ತದೆ. ಮೃತದೇಹದ ಹತ್ತಿರ ಸಿಗರ್ ಲೈಟರ್ ಹಾಗೂ ಪೆಟ್ರೋಲ್ ಕ್ಯಾನಿನ ಮುಚ್ಚಳ ಕಂಡು ಬಂದಿರುತ್ತದೆ. ಇನ್ನೊಬ್ಬ ಕಾರ್ಮಿಕ ಬಾಹುಲೇಯನ್ ಎಂಬುವವರಿಗೆ ಪೋನ್ ಮಾಡಿದಾಗ ಮೋಬೈಲ್ ಪೋನ್ ಸ್ವಿಚ್ಆಫ್ ಆಗಿರುತ್ತದೆ. ಪಿರ್ಯಾದಿದಾರರು ದಿನಾಂಕ 18/10/2022 ರಂದು ಸಂಜೆ 5:30 ಗಂಟೆಗೆ ಕೆಲಸದ ಕೆಲಸದ ಬಗ್ಗೆ ಗೋಪಿಗೆ ಪೋನ್ ಮಾಡಿದ್ದು ಪೋನ್ ತೆಗೆದಿರುವುದಿಲ್ಲ ನಂತರ ಸಂಜೆ 5:50 ಗಂಟೆಗೆ ಗೋಪಿ ವಾಪಾಸು ಪಿರ್ಯಾದಿದಾರರಿಗೆ ಪೋನ್ ಮಾಡಿ ಮಾತನಾಡಿರುತ್ತಾನೆ. ಗೋಪಿ ಹಾಗೂ ಬಾಹುಲೇಯನ್ ಒಂದು ವಾರದ ಹಿಂದೆ ಊರಿಗೆ ಹೋಗಿದ್ದು ಕಳೆದ ಮಂಗಳವಾರ ವಾಪಾಸು ಕೆಲಸಕ್ಕೆ ಬಂದಿರುತ್ತಾರೆ. ದಿನಾಂಕ 18/10/2022 ರಂದು ಸಂಜೆ 5:50 ಗಂಟೆಯಿಂದ  ದಿನಾಂಕ 19/10/2022 ರಂದು ಬೆಳಗ್ಗೆ 09:00 ಗಂಟೆಯ ಮದ್ಯಾವದಿಯಲ್ಲಿ ಗೋಪಿಯು ಯಾವುದೋ ಕಾರಣದಿಂದ ಬೆಂಕಿಯಿಂದ ಸುಟ್ಟು ಮೃತಪಟ್ಟಿರುತ್ತಾರೆ. ಜೊತೆಯಲ್ಲಿದ್ದ ಬಾಹುಲೇಯನ್ ಕಾಣೆಯಾಗಿರುವುದರಿಂದ ಗೋಪಿಯ ಮರಣದಲ್ಲಿ ಸಂಶಯ ಕಂಡುಬಂದಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್‌ ಠಾಣೆ ಯುಡಿಅರ್‌ ಕ್ರಮಾಂಕ 47/2022 ಕಲಂ: 174(ಸಿ) ಸಿಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತರ ಪ್ರಕರಣ


 • ಬ್ರಹ್ಮಾವರ: ಪಿರ್ಯಾದಿದಾರರಾದ ಶಾರದ ಗಾಣಿಗ (67), ಗಂಡ: ಶಿವರಾಮ ಗಾಣಿಗ, ವಾಸ: “ಶ್ರೇಷ್ಠ” ಶಾಲೆಯ ಹತ್ತಿರ, 52 ನೇ ಹೇರೂರು ಗ್ರಾಮ, ಬ್ರಹ್ಮಾವರ ತಾಲೂಕು ಇವರು ದಿನಾಂಕ 08/10/2022 ರಂದು ಮಧ್ಯಾಹ್ನ 3:00 ಗಂಟೆಯ ಸಮಯಕ್ಕೆ ಮನೆಯಲ್ಲಿ ಮಲಗಿದ್ದಾಗ ಅವರ ನೆರೆಕೆರೆವಾಸಿಯಾದ ಆರೋಪಿಗಳಾದ ಶಂಕರ ಗಾಣಿಗ ಹಾಗೂ ಅವರ ಮಗ ಸೃಜನ್ ಗಾಣಿಗ ಎಂಬುವವರು ಪಿರ್ಯಾದಿದಾರರ ಮನೆ ಬಳಿ ಬಂದು ಪಿರ್ಯಾದಿದಾರರನ್ನ ಕರೆದಿದ್ದು, ಆಗ ಪಿರ್ಯಾದಿದಾರರು ಎದ್ದು ಬಂದು ಮನೆಯ ಬಾಗಿಲನ್ನ ತೆರೆದಾಗ, ಆರೋಪಿಗಳು ಏಕಾ ಏಕಿ ಮನೆಯ ಒಳಗೆ ಅಕ್ರಮ ಪ್ರವೇಶ ಮಾಡಿ, ಆರೋಪಿ ಸೃಜನ್ ಗಾಣಿಗನು ಪಿರ್ಯಾದಿದಾರರನ್ನು ಉದ್ದೇಶಿಸಿ ಬೆದರಿಸಿರುತ್ತಾನೆ. ಅಲ್ಲದೇ ಆರೋಪಿ ಶಂಕರ ಗಾಣಿಗರವರು ಕೈಯಿಂದ ಪಿರ್ಯಾದಿದಾರರನ್ನು ದೂಡಿ ಹಾಕಿ, ಇಬ್ಬರೂ ಸೇರಿ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ಆಗ ಪಿರ್ಯಾದಿದಾರರು ಬೊಬ್ಬೆ ಹಾಕಿದಾಗ ಅದನ್ನು ಕೇಳಿ ರಸ್ತೆಯಲ್ಲಿ ಹೋಗುವವರು ಮನೆ ಬಳಿ ಬರುವುದನ್ನ ನೋಡಿ ಆರೋಪಿಗಳು ಪಿರ್ಯಾದಿದಾರರಿಗೆ ಬೆದರಿಕೆ ಹಾಕಿ ಹೋಗಿರುತ್ತಾರೆ. ಈ ಘಟನೆಗೆ ಆರೋಪಿ ಸೃಜನ್ ಗಾಣಿಗ ಹಾಗೂ ಸಂದೇಶ್ ಶೆಟ್ಟಿರವರ ನಡುವೆ ಆದ ಗಲಾಟೆಯ ಬಗ್ಗೆ ಆರೋಪಿಯು ಪಿರ್ಯಾದಿದಾರರ ಗಂಡ ಶಿವರಾಮ ಗಾಣಿಗರವರನ್ನು ಸಾಕ್ಷಿ ನುಡಿಯಲು ತಿಳಿಸಿದ್ದು, ಆದರೇ  ಘಟನೆಯ ವೇಳೆ ಪಿರ್ಯಾದಿದಾರರ ಗಂಡ ಹಾಜರಿಲ್ಲದ ಕಾರಣ ಸಾಕ್ಷಿ ಹೇಳಲು ಒಪ್ಪಿರಲಿಲ್ಲ.  ಇದೇ ಕಾರಣದಿಂದ ದ್ವೇಷಗೊಂಡು ಆರೋಪಿಗಳು ಹಲ್ಲೆ ನಡೆಸಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 172/2022 ಕಲಂ : 448, 354, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬ್ರಹ್ಮಾವರ: ಪಿರ್ಯಾದಿದಾರರಾದ ಸೃಜನ್ ಗಾಣಿಗ (26), ತಂದೆ:  ಶಂಕರ ಗಾಣಿಗ, ವಾಸ:2-152,  ಕೃಷ್ಣ ನಿವಾಸ, ಉಗ್ರಾಣಿ ಬೆಟ್ಟು, 52 ನೇ ಹೇರೂರು ಗ್ರಾಮ, ಬ್ರಹ್ಮಾವರ ತಾಲೂಕು ಇವರು ದಿನಾಂಕ 08/10/2022 ರಂದು ಅವರ ತಂಗಿಯ KA-20-ER-6570 ನೇ ಸ್ಕೂಟಿ ಯಲ್ಲಿ ಸಿನಿಮಾ ನೋಡಿಕೊಂಡು ಬೆಳಗ್ಗೆ 1:00 ಗಂಟೆಗೆ ಮನೆಯ ಬಂದು ಸ್ಕೂಟಿಯನ್ನು ಅಂಗಳದಲ್ಲಿ ನಿಲ್ಲಿಸಿ ಬೆಳಗ್ಗಿನ ಜಾವ 4:00 ಗಂಟೆಗೆ ಎದ್ದು ನೋಡಿದಾಗ ಅಂಗಳದಲ್ಲಿ ನಿಲ್ಲಿಸಿದ್ದ ಸ್ಕೂಟಿಗೆ ಚಾಕು ಮತ್ತು ಕೋಳಿಯ ಹರಿತವಾದ ಕತ್ತಿಯಿಂದ ಸೀಟ್‌ಕವರನ್ನು ಆರೋಪಿಗಳು ಹರಿದು ಹಾಕಿರುತ್ತಾರೆ. ಅಲ್ಲದೇ ಆರೋಪಿಗಳು ಅಕ್ರಮವಾಗಿ ಮನೆಗೆ ಬಂದು ಪಿರ್ಯಾದಿದಾರರ ರೂಪಾಯಿ 2000/- ಮೌಲ್ಯದ ಜೀನ್ಸ್‌ ಪ್ಯಾಂಟ್‌, ಅಂಗಿ, ಟವಲ್‌ಹಾಗೂ ಇನ್ನಿತರ ವಸ್ತುಗಳನ್ನು ಕಳವು ಕೂಡ ಮಾಡಿರುತ್ತಾರೆ. ಹಾಗೂ ಪಿರ್ಯಾದಿದಾರರ ಮನೆಯ ಕೋಳಿ ಗೂಡನ್ನು ಸಹ ದೂಡಿ ಹಾಕಿ ಹಾನಿ ಉಂಟು ಮಾಡಿರುತ್ತಾರೆ. ಈ ಕೃತ್ಯವನ್ನು ಆರೋಪಿಗಳಾದ 1] ಸುಧೀಂದ್ರ ಗಾಣಿಗ ಹೇರೂರು, 2]ಪ್ರಕಾಶ್, 3] ಚೇತನ್ 4] ಆಯುಷ್ 5] ಸುಹಾನ್, 6] ಮನೋಜ್, 7] ಸಂದೇಶ್ ಶೆಟ್ಟಿ, 8] ಪ್ರದೀಪ್, 9] ಪ್ರೀತಮ್, 10] ಶಿವ ಪ್ರಸಾದ್ 11] ರಕ್ಷಿತ್ ಮತ್ತು ಇತರರು ಸೇರಿ ಮಾಡಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 173/2022 ಕಲಂ : 143, 147, 148 447, 379, ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 20-10-2022 09:57 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080