ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕೋಟ: ಪಿರ್ಯಾದಿದಾರರಾದ ರಾಮ (65), ತಂದೆ: ಕೊರಗ ವಾಸ; ಬಡಾಹೊಳಿ ಕಾರ್ಕಡ ಗ್ರಾಮ ಬ್ರಹ್ಮಾವರ ತಾಲೂಕು ಇವರು ದಿನಾಂಕ 16/10/2021 ರಂದು ಸಂಜೆ 6:00 ಗಂಟೆಗೆ ಬ್ರಹ್ಮಾವರ ತಾಲೂಕು ಐರೋಡಿ ಗ್ರಾಮದ ಸಾಸ್ತಾನ ಬಸ್‌ನಿಲ್ದಾಣದ ಬಳಿ ಇರುವ ಕಾಮಧೇನು ಬೇಕರಿ ಬಳಿ ನಿಂತುಕೊಂಡಿರುವಾಗ ಸಾಸ್ತಾನ ಬಸ್‌ನಿಲ್ದಾಣದ ಬಳಿ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೋಗುತ್ತಿದ್ದ KA-20-C-4102 ನೇ ಆಟೋ ರಿಕ್ಷಾಕ್ಕೆ ರಾಂಗ್‌ ಸೈಡ್‌ನಲ್ಲಿ ಬಂದ ಮೋಟಾರು ಸೈಕಲ್‌ ನಂಬ್ರ KA-20-EU-0434 ನೇದನ್ನು ಅದರ ಸವಾರ ಮಂಜುನಾಥ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಆಟೋ ರಿಕ್ಷಾದ ಎದುರಿಗೆ ಡಿಕ್ಕಿ ಹೊಡೆದಿದ್ದು, ಇದರಿಂದ ರಿಕ್ಷಾ ಮಗುಚಿ ಬಿದ್ದು ರಿಕ್ಷಾ ಚಾಲಕ ರಸ್ತೆಯಲ್ಲಿ ಬಿದ್ದಿರುವುದನ್ನು ನೊಡಲಾಗಿ ಪಿರ್ಯಾದಿದಾರರ ತಮ್ಮ ಮಹಾಬಲ ಎಂಬುವವರಾಗಿದ್ದು, ಅವರನ್ನು ಉಪಚರಿಸಿ ನೋಡಲಾಗಿ ಅವರ ದವಡೆ, ಮುಖ ಹಾಗೂ ಭುಜಕ್ಕೆ ರಕ್ತ ಗಾಯವಾಗಿದ್ದು ಮಾತಾನಾಡುವ ಸ್ಥಿತಿಯಲ್ಲಿ ಇಲ್ಲದೇ ಇದ್ದವರನ್ನುಕೂಡಲೇ ಒಂದು ವಾಹನದಲ್ಲಿ ಬ್ರಹ್ಮಾವರ ಮಹೆಶ್‌ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲು ಮಾಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 180/2021 ಕಲಂ: 279,  338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬ್ರಹ್ಮಾವರ: ಪಿರ್ಯದಿದಾರರಾದ ಗುರುರಾಜ ಪೂಜಾರಿ(33), ತಂದೆ: ಶೇಖರ, ವಾಸ: 1-122 ಕಾರ್ತಿಬೆಟ್ಟು,ಕೊಳಲಗಿರಿ, ಹಾವಂಜೆ ಗ್ರಾಮ ಬ್ರಹ್ಮಾವರ ತಾಲೂಕು ಇವರು ದಿನಾಂಕ 18/10/2021 ರಂದು ಪೆರ್ಡೂರಿನಿಂದ ಕೆಜಿ ರಸ್ತೆ ಕಡೆಗೆ ತನ್ನ  ಮೋಟಾರ್‌ಸೈಕಲಿನಲ್ಲಿ ಬರುತ್ತಿರುವಾಗ ಹಾವಂಜೆ ಗ್ರಾಮದ ಶೆಟ್ಟಿಬೆಟ್ಟು ಸಮೀಪ್ ರಾಮಣ್ಣ ಶೆಟ್ಟಿ ಎಂಬುವವರ ಮನೆಯ ಬಳಿ ಪೆರ್ಡೂರು ಕೆಜಿ ರಸ್ತೆ ಮುಖ್ಯ ರಸ್ತೆಯಲ್ಲಿ ಬರುತ್ತಿರುವಾಗ ರಾತ್ರಿ 10:00 ಗಂಟೆಗೆ ಆರೋಪಿ ಮೆಲ್ವಿನ್‌‌ರವರು ಅವರ ಮಾರುತಿ ಓಮ್ನಿ ಕಾರು ನಂಬ್ರ KA-20-N-2162 ನೇದನ್ನು ಪೆರ್ಡೂರು ಕೆಜಿ ರಸ್ತೆ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರ ಬಲಭಾಗಕ್ಕೆ ಚಲಾಯಿಸಿ ಎದುರಿನಿಂದ ಕೆಜಿ ರಸ್ತೆ ಕಡೆಯಿಂದ ಪೆರ್ಡೂರು ಕಡೆಗೆ ಬರುತ್ತಿದ್ದ KA-20-EN-7635 ನೇ ಬಜಾಜ್‌ಪಲ್ಸರ್‌ ಮೋಟಾರ್‌ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್‌‌ಸೈಕಲ್‌ ‌ಸವಾರ  ಮಹೇಶ್‌ ನಾಯಕ್‌ ‌‌ರವರು ಮೋಟಾರ್‌ ಸೈಕಲಿನ ಅಡಿಬಾಗದಲ್ಲಿ ಸಿಕ್ಕಿ ಹಾಕಿಕೊಂಡು ಅವರ ಬಲಕಾಲಿನ ಎರಡು ಕಡೆ ಮೂಳೆಮುರಿತ ಉಂಟಾಗಿ ಬಲ ಮುಂಗೈಗೆ ರಕ್ತಗಾಯ, ಹಾಗೂ ಸಹಸವಾರ ಗಣಪತಿ ನಾಯಕ್‌‌‌‌‌‌ರವರು ಅಪಘಾತದಿಂದ ಎಸೆಯಲ್ಪಟ್ಟು ಪಕ್ಕದ ಚರಂಡಿ ಹಾಗೂ ಪೊದೆವೊಳಗೆ ಬಿದ್ದು ಬಲ ತೊಡೆಯ ಭಾಗಕ್ಕೆ ರಕ್ತಗಾಯ ಹಾಗೂ ಬೆನ್ನಿಗೆ ,ಮುಖಕ್ಕೆ ತರಚಿದ ಗಾಯವಾಗಿರುತ್ತದೆ. ಗಾಯಾಳುಗಳಿಬ್ಬ ರನ್ನು ಕೆಎಂಸಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 180/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ದಿನಾಂಕ 19/10/2021 ರಂದು 19:30 ಗಂಟೆಗೆ ಕಾರ್ಕಳ ತಾಲೂಕು, ನಿಟ್ಟೆ ಗ್ರಾಮದ ನಿಟ್ಟೆ ಪರಪ್ಪಾಡಿ ರತ್ನ ಹೊಟೇಲ್ ಪಾರೆವರ್ ಮುಂಭಾಗದಲ್ಲಿ ಹಾದು ಹೋಗುವ ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿಯಲ್ಲಿ ಮೋಟಾರು ಸೈಕಲ್ ನಂಬ್ರ KA-20-EA-7114 ನೇಯದರ ಸವಾರ ರೊನಾಲ್ಡ್ ವಿಲ್ಪ್ರೆಡ್  ಮೋಟಾರು ಸೈಕಲನ್ನು ಕಾರ್ಕಳ ಕಡೆಯಿಂದ ಬೆಳ್ಮಣ್ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರಾದ  ಗಣೇಶ ಶೆಟ್ಟಿ (47), ತಂದೆ: ಸಂಜೀವ ಶೆಟ್ಟಿ, ವಾಸ: ತೆಂಕಾಯಿಬೆಟ್ಟು, ಬೋಳ ಅಂಚೆ ಮತ್ತು ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರಿಗೆ ಢಿಕ್ಕಿ ಹೊಡೆದ ಪರಿಣಾಮ ಗಣೇಶ ಶೆಟ್ಟಿಯವರ ಎಡಕಾಲಿನ ಮೊಣಗಂಟಿನ ಕೆಳಗೆ ಒಳ ಜಖಂ ಆಗಿದ್ದು, ಅಲ್ಲದೆ ಢಿಕ್ಕಿ ಹೊಡೆದ ಮೋಟಾರು ಸೈಕಲ್ ಸವಾರನು ಮೋಟಾರು ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದು ಮೋಟಾರು ಸೈಕಲ್ ಸವಾರನಿಗೂ ರಕ್ತ ಗಾಯವಾಗಿರುತ್ತದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 122/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಕಳವು ಪ್ರಕರಣ

 • ಮಣಿಪಾಲ: ಪಿರ್ಯಾದಿದಾರರಾದ ಮಯೂರ್ ಎಮ್  ಶೇಟ್ (20), ತಂದೆ: ಕೆ ಮುಧುಕರ್, ವಾಸ:ಸಂತೋಷ ನಗರ ತಿಲಕೇಶ್ವರ ನಿಲಯ, ಪೋಸ್ಟ್ ಕುಂಜಿಬೆಟ್ಟು, ಶಿವಳ್ಳಿ ಗ್ರಾಮ, ಉಡುಪಿ. ತಾಲೂಕು ಮತ್ತು ಜಿಲ್ಲೆ ಇವರು  ನಿಟ್ಟೆಯಲ್ಲಿ ಇಂಜಿನಿಯರಿಂಗ್ ವಿದ್ಯಾಭಾಸ್ಯ ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರು ದಿನಾಂಕ 16/10/2021 ರಂದು ಸಂಜೆ 07:00 ಗಂಟೆಗೆ ಅವರ KA-20-EV-6056 ನೇ ಪಲ್ಸರ್  ಮೋಟಾರ್‌ಸೈಕಲ್‌‌‌‌‌ನ್ನು ಮನೆಯ ಪಕ್ಕದಲ್ಲಿರುವ ತಮ್ಮ ಅಜ್ಜನವರ ಮನೆಯ ಕಾರು ಇಡುವ ಸ್ಥಳದಲ್ಲಿ ನಿಲ್ಲಿಸಿ  ಹೋಗಿದ್ದು ದಿನಾಂಕ 19/10/2021 ರಂದು ಬೆಳಿಗ್ಗೆ 07:00 ಗಂಟೆಗೆ ಬಂದು ನೋಡಿದಾಗ ಪಿರ್ಯಾದಿದಾರರು ನಿಲ್ಲಿಸಿದ್ದ ಬೈಕ್ ಇರಲಿಲ್ಲ,  ಮೋಟಾರ್ ಸೈಕಲನ್ನು ದಿನಾಂಕ 16/10/2021 ರಂದು ಸಂಜೆ 07:00 ಗಂಟೆಯಿಂದ ದಿನಾಂಕ 19/10/2021 ರಂದು ಬೆಳಿಗ್ಗೆ 07:00 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಾಮಾಂಕ 138/2021 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಗಂಗೊಳ್ಳಿ: ಪಿರ್ಯಾದಿದಾರರಾದ ಶ್ರೀಮತಿ ಹೇಮಾವತಿ (40), ಗಂಡ: ನಾರಾಯಣ, ವಾಸ: ಶ್ರೀ ಮಂಜುನಾಥ ನಿಲಯ, ತ್ರಾಸಿ, ಹೊಸಪೇಟೆ, ಕುಂದಾಪುರ ತಾಲೂಕು ಇವರು ಕುಂದಾಪುರ ಚೈತನ್ಯ ವೃದ್ಧಾಶ್ರಮದಲ್ಲಿ ಕೆಲಸ ಮಾಡಿಕೊಂಡಿರುವ ಸಮಯ ದಿನಾಂಕ 19/10/2021 ರಂದು ಮದ್ಯಾಹ್ನ 12:45 ಗಂಟೆಗೆ  ಮಗಳು ಸಿಂಚನ ಫೋನ್ ಕರೆ ಮಾಡಿ   ಅಜ್ಜ  ಕರಿಯ ಮೊಗವೀರ (62) ರವರು ಕುಂದಾಪುರ ತಾಲೂಕು ತ್ರಾಸಿ ಗ್ರಾಮದ ತ್ರಾಸಿ ಹೊಸಪೇಟೆ ಶ್ರೀ ಮಂಜುನಾಥ ನಿಲಯ ಮನೆಯ ಸೌದೆ ಕೊಟ್ಟಿಗೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡಿದ್ದು ಮಾತನಾಡುತ್ತಿಲ್ಲವಾಗಿ ತಿಳಿಸಿದಂತೆ ಪಿರ್ಯಾದಿದಾರರು ಕೂಡಲೇ ಮನೆಗೆ ಬಂದಿದ್ದು ನೋಡಿ ಮಗಳಲ್ಲಿ ವಿಚಾರಿಸಿದಾಗ ಬೆಳಿಗ್ಗೆ 10:00 ಗಂಟೆಗೆ ಸಿಂಚನಾ ದೊಡ್ಡಮ್ಮನ ಮನೆಗೆ ಹೋಗುವಾಗ ಕರಿಯ ಮೊಗವೀರರವರು ಮನೆಯಲ್ಲಿ ಕುಳಿತುಕೊಂಡಿದ್ದು ನಂತರ ಮದ್ಯಾಹ್ನ 12:45 ಗಂಟೆಗೆ ವಾಪಾಸು ಮನೆಗೆ ಬಂದಾಗ ಕಾಣಿಸದೇ ಇದ್ದುದನ್ನು ನೋಡಿ ಕೊಟ್ಟಿಗೆಯಲ್ಲಿ ಹೋಗಿ ನೋಡಿದಾಗ ನೇಣು ಹಾಕಿಕೊಂಡು ನೇತಾಡುತ್ತಿರುವುದನ್ನು ನೋಡಿರುವುದಾಗಿ ತಿಳಿಸಿರುತ್ತಾಳೆ. ಪಿರ್ಯಾದಿದಾರರ ತಂದೆ ಕರಿಯ ಮೊಗವೀರರವರು ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು ಇತ್ತೀಚಿಗೆ ಸರಿಯಾಗಿ ಮೀನುಗಾರಿಕೆ ಇಲ್ಲದೇ ಇದ್ದು ಹಣಕಾಸಿನ ಅಡಚಣೆಯಿಂದಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಬೆಳಿಗ್ಗೆ 10:00 ಗಂಟೆಯಿಂದ 12:40 ಗಂಟೆ ಮಧ್ಯಾವಧಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ  ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಯುಡಿಅರ್‌ ಕ್ರಮಾಂಕ 31/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ವಂಚನೆ ಪ್ರಕರಣ

 • ಉಡುಪಿ: ದಿನಾಂಕ 18/10/2021 ರಂದು ಮಧ್ಯಾಹ್ನ 12:00 ಗಂಟೆಗೆ ಮೂಡನಿಡಂಬೂರು ಗ್ರಾಮದ ಕೋರ್ಟ ಎದುರು ಪ್ರಥಮ ಜನರಲ್ ಸ್ಟೋರ್ ಬಳಿ ಮುಖ್ಯ ರಸ್ತೆಯ ಬದಿಯಲ್ಲಿ ಪಿರ್ಯಾದಿದಾರರಾದ ಸಂಜಯ್‌ಕುಮಾರ್‌ಸಿನ್ಹಾ (58), ತಂದೆ: ಶ್ರೀ ಬಾಲೇಶ್ವರ ಪ್ರಸಾದ್‌, ವಾಸ: ನಂಬ್ರ: A-704, ಮಾಂಡವಿ ಎಮರಾಲ್ಡ್‌, ಎಂಡ್‌ಪಾಯಿಂಟ್‌ ರಸ್ತೆ, ಮಣಿಪಾಲ, ಉಡುಪಿ ತಾಲೂಕು ಇವರ ಕಾರು ನಂಬ್ರ DL-3-CCK-6489 ರಲ್ಲಿ ಇರುವಾಗ ಮಧ್ಯ ವಯಸ್ಸಿನ ಇಬ್ಬರು ಅಪರಿಚಿತ ವ್ಯಕ್ತಿಗಳು ಪಿರ್ಯಾದಿದಾರರಿಗೆ ವಂಚನೆ ಹಾಗೂ ಮೋಸ ಮಾಡುವ ಉದ್ದೇಶದಿಂದ ಬಂದು ಅವರುಗಳ ಪೈಕಿ ಒಬ್ಬ ಪಿರ್ಯಾದಿದಾರರ ಕಾರಿನ ಚಾಲಕನ ಸೀಟಿನ ಬಳಿ ನೆಲದಲ್ಲಿ ರೂಪಾಯಿ 10 ಬೆಲೆ ಬಾಳುವ 20-30 ನೋಟುಗಳು ಬಿದ್ದಿದ್ದು ಆ ವ್ಯಕ್ತಿ  ಪಿರ್ಯಾದಿದಾರರಲ್ಲಿ ಈ ನೋಟುಗಳು ನಿಮ್ಮದೆ ಎಂದು ಕೇಳಿ ಪಿರ್ಯಾದಿದಾರರು ತನ್ನದಲ್ಲ ಎಂದು ಹೇಳಿದ್ದು, ಆಗ ಆ ವ್ಯಕ್ತಿ ಪಿರ್ಯಾದಿದಾರರ ಜೊತೆ ಇಂಗ್ಲೀಷಿನಲ್ಲಿ ಮಾತನಾಡುತ್ತಾ ಗಮನವನ್ನು ನೋಟಿನ ಕಡೆಗೆ ಸೆಳೆಯುತ್ತಾ ಆ ನೋಟುಗಳನ್ನು ಆರಿಸುತ್ತಿದ್ದು, ಪಿರ್ಯಾದಿದಾರರು ಆ ನೋಟನ್ನು ಆರಿಸಲು ಆ ವ್ಯಕ್ತಿಗೆ ಸಹಕರಿಸುತ್ತಿದ್ದಾಗ, ಆ ವ್ಯಕ್ತಿ ಕೆಲವು ನೋಟುಗಳನ್ನು ಆರಿಸಿಕೊಂಡು ಸ್ವಲ್ಪ ಹೊತ್ತಿನಲ್ಲಿ ತೆರಳಿದ್ದು, ಉಳಿದ ನೋಟುಗಳನ್ನು ಪಿರ್ಯಾದಿದಾರರು ಆರಿಸುತ್ತಿದ್ದಾಗ ಮತ್ತೊಬ್ಬ ವ್ಯಕ್ತಿ ಪಿರ್ಯಾದಿಧಾರರ ಮೂಲ ದಾಖಲೆಪತ್ರಗಳಿದ್ದ ಕಾರಿನ ಹಿಂಭಾಗದ ಸೀಟಿನಲ್ಲಿ ಇರಿಸಿದ್ದ ಬ್ಯಾಗ್ ತೆಗೆದುಕೊಂಡು ಹೋಗಿರುವುದು ಪಿರ್ಯಾದಿದಾರರಿಗೆ ಕುಂಜಿಬೆಟ್ಟು ಎಂಬಲ್ಲಿಗೆ ಹೋಗಿ ನೋಡಿದಾಗ ಗಮನಕ್ಕೆ ಬಂದಿರುವುದಾಗಿ ನೀಡಿದ ಧೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 153/2021 ಕಲಂ: 417, 420 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಟ್ಕಾ ಜುಗಾರಿ ಪ್ರಕರಣ

 • ಪಡುಬಿದ್ರಿ: ದಿನಾಂಕ 19/10/2021 ರಂದು ಅಶೋಕ್ ಕುಮಾರ್, ಪೊಲೀಸ್ ಉಪನಿರೀಕ್ಷಕರು, ಪಡುಬಿದ್ರಿ ಪೊಲೀಸ್ ಠಾಣೆ ಇವರಿಗೆ ಕಾಪು ತಾಲೂಕು ನಡ್ಸಾಲು ಗ್ರಾಮ ಪಡುಬಿದ್ರಿ -ಕಾರ್ಕಳ  ಜಂಕ್ಷನ್ ಬಳಿ ಇರುವ ಟೆಂಪೋ ಸ್ಟಾಂಡ್  ಬಳಿ ಸಾರ್ವಜನಿಕ  ಸ್ಥಳದಲ್ಲಿ ಓರ್ವ ವ್ಯಕ್ತಿಯು ಮಟ್ಕಾ ಆಟದ ಬಗ್ಗೆ 1 ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ಹೇಳುತ್ತಾ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದಾನೆಂದು ಬಂದ ಮಾಹಿತಿಯಂತೆ ದಾಳಿ ನಡೆಸಿ ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರಿಗೆ ಚೀಟಿ ಬರೆದು ಕೊಡುತ್ತಿದ್ದ ಬಸವರಾಜ ಬಸವಣ್ಣ ತೊಟಗೇರ (34), ತಂದೆ:ದಿ. ಬಸವಪ್ಪ, ವಾಸ: ಬೊಮ್ಮನಕಟ್ಟಿ, ಬಸವಾಪುರ ಗ್ರಾಮ ಮತ್ತು ಅಂಚೆ, ಹಾವೇರಿ ತಾಲೂಕು ಮತ್ತು ಜಿಲ್ಲೆ ಎಂಬಾತನ ವಶದಲ್ಲಿದ್ದ ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರಿಂದ ಸಂಗ್ರಹಿಸಿದ ನಗದು ರೂಪಾಯಿ 1,040/-, ಮಟ್ಕಾ ನಂಬ್ರ ಬರೆದ ಚೀಟಿ-1, ಮತ್ತು ಬಾಲ್ ಪೆನ್ನು-1 ನ್ನು ಸ್ವಾಧೀನ ಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಪಡುಬದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 100/2021 ಕಲಂ: 78 (I) (III) ಕೆಪಿ ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.   

ಮನುಷ್ಯ ಕಾಣೆ ಪ್ರಕರಣ

 • ಬ್ರಹ್ಮಾವರ: ದಿನಾಂಕ 19/10/2021 ರಂದು ಪಿರ್ಯಾದಿದಾರರಾದ ಉದಯ ಕುಮಾರ್‌ ಪಿ (48),ತಂದೆ : ದಿ. ರಾಮ ಮುಖಾರಿ, ವಾಸ : ಪ್ರಿಯೋರಿಟಿ ಕ್ವಾರ್ಟರ್ಸ್‌‌,  ಲಿಟಲ್‌ರಾಕ್‌ ‌ಇಂಡಿಯನ್‌ ಇಂಗ್ಲೀಷ್‌ ಮೀಡಿಯಂ ಶಾಲೆಯ ಹಿಂಭಾಗ ಚಾಂತಾರು ಗ್ರಾಮ, ಬ್ರಹ್ಮಾವರ ತಾಲೂಕು ಇವರು ಕೆಲಸ ಮುಗಿಸಿ ರಾತ್ರಿ 9:00 ಗಂಟೆಗೆ ಮನೆಗೆ ಬಂದಾಗ ಮನೆಯಲ್ಲಿದ್ದ ಅವರ ಹೆಂಡತಿಯು ಮಗ  ಶ್ರೇಯಸ್‌ (18)ನು ಮದ್ಯಾಹ್ನ 12:30 ಗಂಟೆಗೆ ಆಟ ಆಡಲು ಹೋಗುವುದಾಗಿ ಹೇಳಿ ಹೋದವನು ಈವರೆಗೆ ಮನೆಗೆ ಬಾರದೇ ಇದ್ದು, ಈ ಬಗ್ಗೆ ತಾನು ಶ್ರೇಯಸ್‌ನ ಸ್ನೇಹಿತನಾದ ಸಂಜಯ್‌ರಾಜ್‌‌ನ ಮನೆಗೆ ರಾತ್ರಿ 8:45 ಗಂಟೆಗೆ ಹೋಗಿ ಶ್ರೇಯಸ್‌ನ ಬಗ್ಗೆ ವಿಚಾರಿಸಿದಾಗ ಶ್ರೇಯಸ್‌ನ ಬಗ್ಗೆ ತನಗೆ ಏನೂ ಗೊತ್ತಿಲ್ಲ ಎಂದು ಹೇಳಿದ್ದಾಗಿ ಹೇಳಿದ್ದು, ಈ ಬಗ್ಗೆ ಪಿರ್ಯಾದಿದಾರರು ಹಾಗೂ ಅವರ ಮನೆಯವರು ಆಸುಪಾಸಿನ ಎಲ್ಲಾ ಕಡೆ ವಿಚಾರಿಸಿ ಹುಡುಕಲಾಗಿ ಯಾವುದೇ ಮಾಹಿತಿ ತಿಳಿಯಲಿಲ್ಲ. ಎಲ್ಲಾ ಕಡೆ ವಿಚಾರಿಸುತ್ತಿರುವಾಗ ಉಪ್ಪೂರು ಗ್ರಾಮದ ಉಗ್ಗೇಲ್‌ಬೆಟ್ಟು ರೈಲ್ವೇ ಬ್ರಿಜ್‌ನ ಕೆಳಗೆ ಮಡಿಸಾಲು ಹೊಳೆಯಲ್ಲಿರುವ ರೈಲ್ವೇ ಬ್ರಿಜ್‌ನ ಪಿಲ್ಲರ್‌‌ ಪುಟ್ಟಿಂಗ್‌ ‌ಮೇಲೆ ಒಂದು ಬ್ಯಾಗ್‌, 2 ಜೊತೆ ಚಪ್ಪಲಿ, ಮಿರಿಂಡಾ ಬಾಟಲ್‌‌, ರಿಂಗ್‌ ‌ಆಗುತ್ತಿರುವ ಮೊಬೈಲ್‌ ‌ಇರುವ ಬಗ್ಗೆ ಸ್ಥಳೀಯರೊಬ್ಬರು ರಾತ್ರಿ 9:30 ಗಂಟೆಗೆ ಹೇಳಿದ್ದು,  ಅವರು ಸ್ಥಳೀಯ ಜನರ ಜೊತೆ ಅಲ್ಲಿಗೆ ಹೋಗಿ ನೋಡಲಾಗಿ ಮಡಿಸಾಲು ಹೊಳೆಯಲ್ಲಿರುವ ರೈಲ್ವೇ ಬ್ರಿಜ್‌ನ ಪಿಲ್ಲರ್‌ ‌ಪುಟ್ಟಿಂಗ್‌ ‌ಮೇಲೆ ಒಂದು ಬ್ಯಾಗ್‌, 2 ಜೊತೆ ಚಪ್ಪಲಿ, ಮಿರಿಂಡಾ ಬಾಟಲ್‌‌, 1 ಪ್ಯಾಂಟ್,  2 ಟಿ ಶರ್ಟ್‌‌ಹಾಗೂ ಮೊಬೈಲ್‌ ಪೋನ್‌ ‌ಇದ್ದಿತ್ತು ಅದರಲ್ಲಿ ಒಂದು ಜೊತೆ ಚಪ್ಪಲಿ,  1 ಪ್ಯಾಂಟ್, 1 ಟಿ ಶರ್ಟ್‌ ಹಾಗೂ ಮೊಬೈಲ್‌ ‌ಪೋನ್‌ ‌ಮಗ ಶ್ರೇಯಸ್‌‌ನದ್ದಾಗಿರುತ್ತದೆ. ಶ್ರೇಯಸ್‌ನ‌ ಜೊತೆ ಮನೆಯ ಹತ್ತಿರದ ವಾಸಿ ಸಂಜಯ್‌‌ ರಾಜ್‌ (16) ಹಾಗೂ ಇನ್ನೊಬ್ಬ ಹುಡುಗನು ಮದ್ಯಾಹ್ನ 1:45 ಗಂಟೆಗೆ ರೈಲ್ವೇ ಟ್ರಾಕ್‌ ಮೇಲೆ ನಡೆದುಕೊಂಡು ಹೊಳೆಯ ಕಡೆಗೆ ಹೋಗುತ್ತಿದ್ದ ಬಗ್ಗೆ ಮಾಹಿತಿ ತಿಳಿದು ಈ ಬಗ್ಗೆ ಸಂಜಯ್‌‌ರಾಜ್‌ನಲ್ಲಿ ಕೂಲಂಕುಷವಾಗಿ ಕೇಳಲಾಗಿ ನಿನ್ನೆ ದಿನಾಂಕ 19/10/2021 ರಂದು ಬೆಳಿಗ್ಗೆ 12:00 ಗಂಟೆಗೆ ಬ್ರಹ್ಮಾವರ ಕ್ರಾಸ್‌ಲ್ಯಾಂಡ್‌ ಕಾಲೇಜಿನ ಬಳಿ ತಾನು, ಶ್ರೇಯಸ್‌, ಹಾಗೂ ವಾರಂಬಳ್ಳಿಯ ಸ್ವರ್ಣನಗರ ಸನ್‌ಶೈನ್‌ ‌ಬಿಲ್ಡಿಂಗ್‌‌ನ ವಾಸಿ ಅನಾಸ್‌ (16) ರವರು ಒಟ್ಟಾಗಿ ಅಲ್ಲಿಂದ ಮಾತುಕತೆ ಮಾಡಿಕೊಂಡು ಮದ್ಯಾಹ್ನ 1:30 ಗಂಟೆಗೆ ಹೊರಟು ಹೆರಂಜೆ ರೈಲ್ವೇ ಗೇಟ್‌‌ ಮುಖಾಂತರ ಟ್ರಾಕ್‌ ‌ಮೇಲೆ ನಡೆದುಕೊಂಡು ಹೋಗಿ ಮದ್ಯಾಹ್ನ 2:00 ಗಂಟೆಗೆ ಉಪ್ಪೂರು ಗ್ರಾಮದ ಉಗ್ಗೇಲ್‌ಬೆಟ್ಟು ರೈಲ್ವೇ ಬ್ರಿಜ್‌ನ ಕೆಳಗೆ ಮಡಿಸಾಲು ಹೊಳೆಯಲ್ಲಿರುವ ರೈಲ್ವೇ ಬ್ರಿಜ್‌ನ ಪಿಲ್ಲರ್‌‌ಪುಟ್ಟಿಂಗ್‌ ‌ಮೇಲೆ ಹತ್ತಿ ಅನಾಸ್‌‌ನ ಬಳಿ ಇದ್ದ ಬ್ಯಾಗ್‌ ಹಾಗೂ ಇತರ ವಸ್ತುಗಳನ್ನು ಇಟ್ಟು ಬಟ್ಟೆಯನ್ನು ಕಳಚಿ ಚಡ್ಡಿಯಲ್ಲಿ ಮೂವರು ನೀರಿಗೆ ಇಳಿದು ಈಜಾಡುತ್ತಿರುವಾಗ, ಶ್ರೇಯಸ್‌ಮತ್ತು ಅನಾಸ್‌ರವರು ಸ್ವಲ್ಪ ಸ್ವಲ್ಪ ಮುಂದಕ್ಕೆ ಹೋಗಿ  ಆಳದ ನೀರಿನ ಜಾಗದಲ್ಲಿ ನೆಲೆಯಾಗದೇ ಮುಳುಗಿದ್ದು, ಇದನ್ನು ನೋಡಿ ತಾನು ಅವರನ್ನು ರಕ್ಷಣೆ ಮಾಡಲು ಪ್ರಯತ್ನಿಸಿ ಆಗದೇ ಇದ್ದಾಗ ತಾನು ಹೆದರಿ ಮೇಲೆ ಬಂದು ತನ್ನ ಬಟ್ಟೆಯನ್ನು ಹಾಕಿಕೊಂಡು ಅಲ್ಲಿಂದ ಹೊರಟು ಮನೆಗೆ ಹೋಗಿದ್ದಾಗಿ ಹಾಗೂ ಹೆದರಿಕೆಯಿಂದ ಈ ವಿಚಾರವನ್ನು ತಾನು ಯಾರಿಗೂ ಹೇಳಿಲ್ಲವಾಗಿ ತಿಳಿಸಿದ್ದು, ವಿಷಯ ತಿಳಿದು ಅದೇ ವೇಳೆಗೆ ಬಂದ ಅನಾಸ್‌‌ನ ತಂದೆ ಹಾಗೂ ಮನೆಯವರು ಅಲ್ಲಿರುವ ಬ್ಯಾಗ್‌, ಬಟ್ಟೆ ಮತ್ತು ಚಪ್ಪಲಿಯನ್ನು ನೋಡಿ ಇದು ಅನಾಸ್‌ನದ್ದೇ ಆಗಿರುತ್ತದೆ ಎಂಬುದಾಗಿ ಗುರುತಿಸಿರುತ್ತಾರೆ.  ಈ ಬಗ್ಗೆ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಬಂದು ಹೊಳೆಯಲ್ಲಿ ಹುಡುಕಾಡಿದ್ದು,  ಶ್ರೇಯಸ್‌ ಮತ್ತು ಅನಾಸ್‌‌ರವರು ಪತ್ತೆಯಾಗಿರುವುದಿಲ್ಲ. ಶ್ರೇಯಸ್‌ಮತ್ತು ಅನಾಸ್‌‌ರವರು ಹೊಳೆಯಲ್ಲಿ ಮುಳುಗಿ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 181/2021 ಕಲಂ: ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತರ ಪ್ರಕರಣ

 • ಹಿರಿಯಡ್ಕ: ಪಿಯಾದಿದಾರರಾದ ನವೀನ್ ಕೋಟ್ಯಾನ್ (26), ತಂದೆ: ಸುಂದರ ಮರಕಲ, ವಾಸ: 7-14/75 ಆರಾಧನ, ಶ್ರೀನಿವಾಸ ನಗರ , ಕಾಜರಗುತ್ತು, ಹಿರಿಯಡ್ಕ ಉಡುಪಿ ಇವರ ತಂದೆ ನೀಡಿದ ಮಾಹಿತಿಯಂತೆ ಮನೆಯ ಎದುರು ಇರುವ ಚರಂಡಿಗೆ ಪಕ್ಕದ ಮನೆಯ ಸುದರ್ಶನ ಎಸ್ ಶೆಟ್ಟಿ ಎಂಬುವವರು ಕಲುಷಿತ ತ್ಯಾಜ್ಯ ನೀರನ್ನು ಬಿಟ್ಟು ವಾಸನೆಯುಕ್ತವಾಗಿ ಮಾಡಿದ ಬಗ್ಗೆ ತಿಂಗಳ ಹಿಂದೆ ಪಂಚಾಯಿತಿ ಅಬಿವೃದ್ದಿ ಅಧಿಕಾರಿಯವರಿಗೆ ದೂರು ನೀಡಿದ್ದು ಅವರು ಸ್ಥಳ ಪರೀಶೀಲನೆ ಮಾಡಿ ಇನ್ನು ಮುಂದೆ ಈ ರೀತಿ ಮಾಡದಂತೆ ತಾಕಿತು ಮಾಡಿದ್ದು ತದನಂತರ  ದಿನಾಂಕ 19/10/2021 ರಂದು ಮಧ್ಯಾಹ್ನ 3:00 ಗಂಟೆಗೆ ಪಿರ್ಯಾದಿದಾರರ ತಂದೆ ಸುಂದರ ಮರಕಲ ಹಾಗೂ ಅಕ್ಕ ಅರುಣ ಕೋಟ್ಯಾನ್ ರವರು ದಿನನಿತ್ಯದ ಕಾರ್ಯದಲ್ಲಿ ತೊಡಗಿರುವಾಗ ಸುದರ್ಶನ್‌ರವರು  ಪಿರ್ಯಾದಿದಾರರ ಮನೆಯ ಕಾಂಪೌಂಡಿನ ಒಳಗೆ ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರ ತಂದೆಯನ್ನು ಬಲವಾಗಿ ನೂಕಿ, ಅವರ ಮುಖಕ್ಕೆ ಕಪಾಳಕ್ಕೆ ಹೊಡೆದಿದ್ದು ಅಲ್ಲದೆ ಸ್ಥಳಕ್ಕೆ ಬಂದ ಪಿರ್ಯಾದಿದಾರರ ಅಕ್ಕ ಅರುಣ ಕೋಟ್ಯಾನ್‌ ರವರಿಗೆ ಹಲ್ಲೆ ಮಾಡಿದ್ದು, ಪಿರ್ಯಾದಿದಾರರ ತಂದೆ ಹಾಗೂ ಅಕ್ಕ ಅಜ್ಜರಕಾಡು ಅಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 57/2021 ಕಲಂ: 447, 504, 323, 354 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
 • ಹಿರಿಯಡ್ಕ: ದಿನಾಂಕ 19/10/2021 ರಂದು ಮದ್ಯಾಹ್ನ 15:30 ಗಂಟೆಗೆ ಪಿರ್ಯಾದಿದುದಾರರಾದ ಭವ್ಯ, ಗಂಡ: ಸುನೀಲ್ ಶೆಟ್ಟಿ, ವಾಸ:   ಪಂಚ್ರತ್ನ, ಶ್ರೀನಿವಾಸ, ಕಾಜರಗುತ್ತು, ಅಂಜಾರು ಗ್ರಾಮ, ಉಡುಪಿ ತಾಲೂಕು ಇವರ ಅತ್ತೆ ಸುನೀತಾ, ಪಿರ್ಯಾದಿದಾರರ ಮೊಯ್ದುನ ಸುದರ್ಶನ ಶೆಟ್ಟಿರವರು ಮನೆಯಿಂದ ಒಂದು ಬುಟ್ಟಿ ಮರಳು ತರಲು ಪ್ಲಾಸ್ಟಿಕ್ ಚೀಲ ಹಿಡಿದುಕೊಂಡು ಹೋಗುತ್ತಿರುವ ಸಂದರ್ಭ ಪಿರ್ಯಾದಿದಾರರ ಎದುರುಗಡೆ ಮನೆಯ ಸುಂದರ ಹಾಗೂ ಆತನ ಮಗಳು ಅರುಣ ಪಿರ್ಯಾದಿದಾರರನ್ನು ಉದ್ದೇಶಿಸಿ  ಅವಾಚ್ಯ ಶಬ್ದಗಳಿಂದ ಬೈದು ಸುಂದರರವರು ಏಕಾಏಕಿ ಹಲ್ಲೆ ಮಾಡಿದ್ದು ತಡೆಯಲು ಬಂದ ಪಿರ್ಯಾದಿದಾರರ ಮೊಯ್ದುನ ಸುದರ್ಶನ ಶೆಟ್ಟಿ ಇವರಿಗೆ ಹಲ್ಲೆ ಮಾಡಿ ಕಲ್ಲನ್ನು ಹಿಡಿದು ಹೊಡೆಯಲು ಮನೆಯ ಗೇಟ್ ಬಳಿ ಬಂದಿದ್ದು, ಹಾಗೂ ಪಿರ್ಯಾದಿದಾರರನ್ನು ಹಾಗೂ ಅತ್ತೆ, ಮೊಯ್ದುನರವರನ್ನು ಉದ್ದೇಶಿಸಿ ಜೀವ ಬೆದರಿಕೆ ಹಾಕಿದ್ದು, ಹಲ್ಲೆಯಿಂದಾಗಿ ಪಿರ್ಯಾದಿದಾರರ ಮೊಯ್ದುನ ಸುದರ್ಶನರವರಿಗೆ ಎದೆ ನೋವು ಕಾಣಿಸಿಕೊಂಡು ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ನೀಡದಿ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 58 /2021 ಕಲಂ: 323, 504, 354, 506 ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತ್ತೀಚಿನ ನವೀಕರಣ​ : 20-10-2021 10:48 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080