ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

  • ಕಾರ್ಕಳ : ದಿನಾಂಕ 20/10/2021 ರಂದು ಬೆಳಗ್ಗೆ 9:30 ಗಂಟೆಗೆ ಕಾರ್ಕಳ ತಾಲೂಕು, ಕಲ್ಯಾ ಗ್ರಾಮದ ಪೂಪಾಡಿಕಲ್ಲು ರಕ್ತೇಶ್ವರಿ ದೈವಸ್ಥಾನದ ಬಳಿ ಹಾದು ಹೋಗುವ ಪಳ್ಳಿ-ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ಈಚರ್ ಟಿಪ್ಪರ್ ವಾಹನ ಸಂಖ್ಯೆ KA-21-B-2614 ನೇಯದ ಚಾಲಕನು ಟಿಪ್ಪರನ್ನು ಪಳ್ಳಿ ಕಡೆಯಿಂದ ಕಾಕ್ಳ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಆತನ ತೀರಾ ಬಲಬದಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ಪಳ್ಳಿ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದರಾರಾದ ಅನಿತ (28), ತಂದೆ: ದಿವಂಗತ ಸೋಮಯ್ಯ ನಾಯ್ಕ, ವಾಸ: ನಾಗನಿಧಿ ಮನೆ, ಮೀನಗುಂಡಿ, ಕುಂಟಾಡಿ, ಕಲ್ಯಾ ಗ್ರಾಮ, ಕಾರ್ಕಳ ತಾಲೂಕು ಹಾಗೂ ಅವರ ಸಹೋದರ ನಾಗರಾಜ @ ನಾಗರಾಜ ನಾಯ್ಕ್ ಇವರಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಬಲ ಕಾಲಿಗೆ ಗುದ್ದಿದ ರೀತಿಯ ನೋವು ಹಾಗೂ ನಾಗರಾಜ @ ನಾಗರಾಜ ನಾಯ್ಕ್ ಇವರಿಗೆ ಬಲಭುಜಕ್ಕೆ ರಕ್ತ ಗಾಯವಾಗಿರುತ್ತದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ 123/2021 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕುಂದಾಪುರ: ದಿನಾಂಕ 20/10/2021 ರಂದು ಬೆಳಿಗ್ಗೆ 9:15 ಗಂಟೆಗೆ ಕುಂದಾಪುರ ತಾಲೂಕಿನ, ತಲ್ಲೂರು ಗ್ರಾಮದ ಪ್ರವಾಸಿ ಹೊಟೇಲ್‌‌ ಬಳಿ ಪಶ್ಚಿಮ ಬದಿಯ NH 66 ರಸ್ತೆಯಲ್ಲಿ, ಆಪಾದಿತ ಜಯಂತ ಎಂಬುವವರು KA-53-MB-3452ನೇ ಕಾರನ್ನು ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು, ಪಶ್ಚಿಮ ಬದಿಯ NH 66 ರಸ್ತೆಯ ಪಶ್ಚಿಮ ಬದಿಯಲ್ಲಿ ಪಿರ್ಯಾದಿದಾರರಾದ ಮೋಹನ್‌ ಪ್ರಾಯ 43 ವರ್ಷ ,ತಂದೆ :ಜೋಗ ಪೂಜಾರಿ, ವಾಸ: ನಂಬ್ರ 1-102, ಕೆಳಕೇರಿ ರಸ್ತೆ, ಕೋಣಿ ಗ್ರಾಮ, ಕುಂದಾಪುರ ತಾಲೂಕು ಎಂಬವರು ಪೂರ್ವ ಬದಿಯ NH 66 ರಸ್ತೆಗೆ ಹೋಗಲು ನಿಲ್ಲಿಸಿಕೊಂಡಿದ್ದ KA-20-B-0957ನೇ ಅಟೋರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಟೋರಿಕ್ಷಾ ಸಮೇತ ಮೋಹನ್‌ ರವರು ರಸ್ತೆಗೆ ಬಿದ್ದು ಅವರ ಬಲಕಾಲಿನ ಮಣಿಗಂಟಿಗೆ, ಕುತ್ತಿಗೆಗೆ ಒಳಜಖಂ ಗಾಯ ಹಾಗೂ ಮುಖ, ತಲೆ, ಮತ್ತು ಎಡಕಾಲಿಗೆ ತರಚಿದ ಗಾಯವಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 82/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ವಂಚನೆ ಪ್ರಕರಣ 

  • ಉಡುಪಿ: ಪಿರ್ಯಾದಿದಾರರಾದ ಅಮಿಯ ಶೆಟ್ಟಿ (22), ತಂದೆ:ಗಿರೀಶ್ ಶೆಟ್ಟಿ, ವಾಸ: 4/5/13 ಪಾರ್ಕ್ ವೀವ್ಯೂ, ಎಸ್‌.ಬಿ.ಎಸ್‌ ಮಾರ್ಗ, ಅಜ್ಜರಕಾಡು, ಉಡುಪಿ, ತಾಲೂಕು, ಉಡುಪಿ ಜಿಲ್ಲೆ ಮತ್ತು ಅವರ ತಾಯಿ ಅನುರಾಧ ಸೂಡ ರವರು ಐ.ಡಿ.ಬಿ.ಐ ಬ್ಯಾಂಕ್ ಉಡುಪಿ ಶಾಖೆಯಲ್ಲಿ ಜಂಟಿ ಉಳಿತಾಯ ಖಾತೆ ಹೊಂದಿರುತ್ತಾರೆ. ದಿನಾಂಕ 19/10/2021 ರಂದು ಆರೋಪಿತ ಪ್ರವೀಣ್ ಕುಮಾರ್ ಪಿರ್ಯಾದಿದಾರರ ತಂದೆ ಡಾ. ಗಿರೀಶ್ ಶೆಟ್ಟಿ ರವರಿಗೆ ಕರೆ ಮಾಡಿ, ತನ್ನ ತಂದೆಯು ಮಣಿಪಾಲದಲ್ಲಿದ್ದು ಅವರ ದಂತ ಚಿಕಿತ್ಸೆಯ ಬಗ್ಗೆ ಅಂದಾಜು ದರಪಟ್ಟಿ ನೀಡುವಂತೆ ಕೇಳಿದ್ದು, ಈ ಬಗ್ಗೆ ಪಿರ್ಯಾದಿದಾರರ ತಂದೆ ಡಾ. ಗಿರೀಶ್ ಶೆಟ್ಟಿಯವರು ರೂಪಾಯಿ 30,000/- ಅಂದಾಜು ದರಪಟ್ಟಿಯನ್ನು ನೀಡಿರುತ್ತಾರೆ. ನಂತರ ಆರೋಪಿಯು ಹಣವನ್ನು ರೂಪಾಯಿ 30,000/- ವನ್ನು ಗೂಗಲ್ ಪೇ ಮಾಡುವುದಾಗಿ ತಿಳಿಸಿ, ಡಾ.ಗಿರೀಶ್ ಶೆಟ್ಟಿಯವರಲ್ಲಿ ಗೂಗಲೆ ಪೇ ನಂಬ್ರವನ್ನು ಕೇಳಿದ್ದು, ಅದಕ್ಕೆ ಡಾ: ಗಿರೀಶ್ ಶೆಟ್ಟಿಯವರು ಪಿರ್ಯಾದಿದಾರರ ಗೂಗಲೆ ಮಾಡಿರುತ್ತಾರೆ. ನಂತರ ಆರೋಪಿಯು ಪಿರ್ಯಾದಿದಾರರಿಗೆ ಕರೆ ಮಾಡಿ ರೂಪಾಯಿ. 1 ನ್ನು ಗೂಗಲ್ ಪೇ ಮಾಡುವಂತೆ ತಿಳಿಸಿ ಪಿರ್ಯಾದಿದಾರರು ಕೆಲಸದ ಒತ್ತಡದಲ್ಲಿ ಅರಿವಿಗೆ ಬಾರದೆ ಆರೋಪಿಯು ಕೇಳಿದ ಎಲ್ಲಾ ಮಾಹಿತಿಯನ್ನು ನೀಡಿದ್ದು, ನಂತರ ಪಿರ್ಯಾದಿದಾರ ಖಾತೆಯಿಂದ ಆರೋಪಿಯು ಕ್ರಮವಾಗಿ ಒಟ್ಟು ರೂಪಾಯಿ 79,000/- ಹಣವನ್ನು ಆನ್‌ಲೈನ್ ಮುಖೇನ ವರ್ಗಾವಣೆ ಮಾಡಿಕೊಂಡು ಪಿರ್ಯಾದಿದಾರರಿಗೆ ನಷ್ಟ ಉಂಟು ಮಾಡಿರುವುದಾಗಿ ನೀಡಿದ ದೂರಿನಂತೆ ಸೆನ್ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 50/2021 ಕಲಂ: 66(c), 66(d) ಐ.ಟಿ. ಆಕ್ಟ್ 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ 

  • ಬ್ರಹ್ಮಾವರ : ಪಿರ್ಯಾದಿದಾರರಾದ ಪ್ರದೀಪ ಪೂಜಾರಿ(34) ,ತಂದೆ: ಶೇಖರ ಪೂಜಾರಿ, ವಾಸ: ಶ್ರೀಲಕ್ಷ್ಮಿ ನಿಲಯ,ಚಾಂತಾರು ಗ್ರಾಮ, ಬ್ರಹ್ಮಾವರ ತಾಲೂಕು ಇವರ ಪರಿಚಯದವರ ಮಕ್ಕಳಾದ ಶ್ರೇಯಶ್‌‌ ಪ್ರಾಯ:18 ವರ್ಷ ಮತ್ತು ಅಹಮದ್‌ ರಝ್ಹಾ ಅನಸ್‌‌‌,ಪ್ರಾಯ:17 ವರ್ಷ, ಹಾಗೂ ಸಂಜಯ್‌‌‌ ರಾಜ್‌‌‌ (16) ಎಂಬುವವರು ದಿನಾಂಕ 19/10/2021 ರಂದು ಮಧ್ಯಾಹ್ನ 2:00 ಗಂಟೆಗೆ ಉಪ್ಪೂರು ಗ್ರಾಮದ ಉಗ್ಗೇಲ್‌‌ಬೆಟ್ಟು ರೈಲ್ವೇ ಸೇತುವೆಯ ಕೆಳಗೆ ಇರುವ ಮಡಿಸಾಲು ಹೊಳೆಯಲ್ಲಿ ಈಜಲು ಹೋದವರು ನೀರಿನಲ್ಲಿ ಇಳಿದು ಈಜುತ್ತಾ ಇವರ ಪೈಕಿ ಶ್ರೇಯಶ್‌‌ ಪ್ರಾಯ:18 ವರ್ಷ ಮತ್ತು ಅಹಮದ್‌ ರಝ್ಹಾ ಅನಸ್‌‌‌,ಪ್ರಾಯ:17 ವರ್ಷರವರು ನೀರಿನಲ್ಲಿ ಮುಂದೆ ಮುಂದೆ ಹೋಗಿ ನೀರಿನಲ್ಲಿ ನೆಲೆಯಾಗದೇ ಮುಳುಗಿ ಕಾಣೆಯಾಗಿದ್ದು, ಈ ಬಗ್ಗೆ ಶ್ರೇಯಸ್‌‌ ರವರ ತಂದೆ ಉದಯ ಕುಮಾರ್‌ ರವರು ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು, ಅದರಂತೆ ಪ್ರಕರಣ ದಾಖಲಾಗಿರುತ್ತದೆ. ಹೊಳೆಯಲ್ಲಿ ದಿನಾಂಕ 20/10/2021 ರಂದು ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಹೊಳೆಯಲ್ಲಿ ಹುಡುಕಾಡುತ್ತಿರುವಾಗ ಹೊಳೆಯ ನೀರಿನ ಆಳದಲ್ಲಿ ಬೆಳಿಗ್ಗೆ 10:00 ಗಂಟೆಗೆ ಶ್ರೇಯಶ್‌‌ ಪ್ರಾಯ:18 ವರ್ಷ ಮತ್ತು ಅಹಮದ್‌ ರಝ್ಹಾ ಅನಸ್‌‌‌,ಪ್ರಾಯ:17 ವರ್ಷರವರ ಮೃತದೇಹ ಸಿಕ್ಕಿರುವುದಾಗಿದೆ. ಸದ್ರಿಯವರು ಹೊಳೆಯ ನೀರಿನಲ್ಲಿ ಇಳಿದು ಈಜುತ್ತಾ ಮುಂದೆ ಮುಂದೆ ಹೋಗಿ ನೀರಿನಲ್ಲಿ ನೆಲೆಯಾಗದೇ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 63/2021 ಕಲಂ :174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ : ಕಾರ್ಕಳ ತಾಲೂಕು, ಇರ್ವತ್ತೂರು ಗ್ರಾಮದ ಹೆಂಟಾಣೆ ನಿವಾಸಿ, ಶ್ರೀಮತಿ ಸವಿತಾ, ಪ್ರಾಯ 40 ವರ್ಷ, ಇವರು ಕಳೆದ ಒಂದು ತಿಂಗಳಿನಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದವರು, ತನಗಿರುವ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು ಈ ಬಗ್ಗೆ ಉಡುಪಿಯ ಬಾಳಿಗ ಆಸ್ಪತ್ರೆಯಿಂದ ಔಷಧಿ ಮಾಡಿಸಿದರೂ ಖಾಯಿಲೆಯು ಗುಣವಾಗದ ಕಾರಣ ಮನನೊಂದು ದಿನಾಂಕ 19/10/2021 ರಂದು ರಾತ್ರಿ 10:00 ಗಂಟೆಯಿಂದ ದಿನಾಂಕ 20/10/2021 ರಂದು ಬೆಳಗ್ಗೆ 6:00 ಗಂಟೆಯ ಮಧ್ಯೆ ತಮ್ಮ ವಾಸ್ತವ್ಯದ ಮನೆಯೊಳಗೆ ಅಡ್ಡಕ್ಕೆ ಹಾಕಿದ್ದ ಜಂತಿಗೆ ನೈಲಾನ್ ಸೀರೆಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 37/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ : ಪಿರ್ಯಾದಿದಾರರಾದ ಇಲಮಾರನ್ (47),ತಂದೆ: ವಡಕ್ ಮಲೆಯಾನ್,214- ಮೋನ್ ಕೋಡ್ ತಿಡಿರ್ ಕೊಪ್ಪ ಅಕರ್ ಪೇಟೆ ನಾರಾಪಟ್ಟಣಂರಾಮಕೃಷ್ಣನ್ ಇವರು ಸೆಲ್ವಾ ರಾಜ್ ಎಂಬುವವರ IND –TN-06-MM- 6232 –MP-SRM ಪಾಪತಿ ಎಂಬ ಬೋಟಿನಲ್ಲಿ ತಾಂಡೇಲರಾಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ 16/10/2021 ರಂದು ಬೆಳಿಗ್ಗೆ 5:00 ಗಂಟೆಗೆ ಗೋವಾದ ಮಾಸ್ಕೋದಿಂದ ಮೀನುಗಾರಿಕೆ ಬಗ್ಗೆ ಬೋಟ್ ಮಾಲಕರಾದ ರಾಮಕೃಷ್ಣನ್ ಸಲ್ವಾರಾಜ್ (46), ವಿಕ್ಕಿ, ರಾಜೇಶ, ಶೇಖರ, ಇಲಾಮಾರನ್ , ಸುರೇಂದ್ರ,ಮಹಾವೀರ, ಸುಂದರ, ,ವೇಲು , ಸೆಲ್ವಾರಾಜ್ ಎಂಬುವವರೊಂದಿಗೆ ಹೊರಟು ಮೀನುಗಾರಿಕೆ ಮಾಡುತ್ತಾ ದಿನಾಂಕ 19/10/2021 ರಂದು ಬೆಳಿಗ್ಗೆ 5:00 ಗಂಟೆ ಸಮಯಕ್ಕೆ ಮಲ್ಪೆ ಯಿಂದ ಅರಬ್ಬಿಸಮುದ್ರದಲ್ಲಿ ಸುಮಾರು 155 ನಾಟಿಕಲ್ ದೂರ ಆಳ ಸಮುದ್ರ ದಲ್ಲಿ ಮೀನುಗಾರಿಕೆ ಮಾಡುತ್ತಿರುವಾಗ ರಾಮಕೃಷ್ಣನ್ ಸೆಲ್ವಾ ರಾಜ್ ಎಂಬುವವರು ಕುಸಿದು ಬಿದ್ದು ಅಸ್ವಸ್ಥ ಗೊಂಡವರನ್ನು ಮಲ್ಪೆ ಗೆ ಕರೆ ತಂದು ಅಜ್ಜರಕಾಡು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು 12:50 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 44/2021 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ 

  • ಮಣಿಪಾಲ: ದಿನಾಂಕ 20/10/2021 ರಂದು ಬೆಳಿಗ್ಗೆ 10:00 ಗಂಟೆಗೆ ಸುಧಾಕರ್ ತೋನ್ಸೆ, ಪೊಲೀಸ್‌ ಉಪನಿರೀಕ್ಷಕರು,ಮಣಿಪಾಲ ಪೊಲೀಸ್ ಠಾಣೆ ಇವರಿಗೆ ಉಡುಪಿ ಜಿಲ್ಲೆ ಹಿರೇಬೆಟ್ಟು, ಮುಡಾಯಿಕೋಡಿ ಎಂಬಲ್ಲಿನ ಹಾಡಿಯಲ್ಲಿ ಉಮೇಶ್ ನಾಯಕ್‌‌ (46), ತಂದೆ: ನಾಗೇಶ್ ನಾಯಕ್, ವಿಳಾಸ: ಶಿವಾನುಗ್ರಹ, ಅಗ್ರಬೈಲು, ಹಿರೇಬೆಟ್ಟು ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ ಎಂಬಾತನು ಅನಧಿಕೃತ ಕೋವಿಯನ್ನು ಹಿಡಿದುಕೊಂಡು ತಿರುಗಾಡುತ್ತಿದ್ದಾನೆ ಎಂದು ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿ ಆರೋಪಿ ಉಮೇಶ್ ನಾಯಕ್‌‌ ನನ್ನು ವಶಕ್ಕೆ ಪಡೆದು ಆತನ ಬಳಿಯಲ್ಲಿದ್ದ ಅನಧಿಕೃತ SBBL ಮಾದರಿಯ 1 ಕೋವಿ ಹಾಗೂ 2 ತೋಟೆ(ಮದ್ದುಗುಂಡು)ಗಳನ್ನು ಸ್ವಾಧೀನಪಡಿಸಿಕೊಂಡು ಆರೋಪಿಯನ್ನು ದಸ್ತಗಿರಿ ಮಾಡಲಾಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 139/2021 ಕಲಂ : 3(1), 25 Arms Act ರಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತ್ತೀಚಿನ ನವೀಕರಣ​ : 20-10-2021 06:44 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080