ಅಭಿಪ್ರಾಯ / ಸಲಹೆಗಳು

ಮಾಧಕ ವಸ್ತು ಸೇವನೆ ಪ್ರಕರಣ

  • ಕಾರ್ಕಳ: ದಿನಾಂಕ 16/09/2022 ರಂದು ಬೆಳಿಗ್ಗೆ ಜನಾರ್ದನ ಕೆ. ಪಿಎಸ್ಐ (ತನಿಖೆ) ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಆದ ನಾನು ಠಾಣಾ ಗುಪ್ತ ಮಾಹಿತಿ ಸಂಗ್ರಹ ಸಿಬ್ಬಂದಿ ಹೆಚ್.ಸಿ 88 ಪ್ರವೀಣ ರೈ, ಇವರೊಂದಿಗೆ ಖಾಸಾಗಿ ಮೋಟಾರ್ ಸೈಕಲಿನಲ್ಲಿ ಠಾಣೆಯಿಂದ ಬೆಳಿಗ್ಗೆ 10:15 ಗಂಟೆಗೆ ಹೊರಟು ಠಾಣಾ ಸರಹದ್ದಿನ ಇರ್ವತ್ತೂರು ಕಡೆ ರೌಂಡ್ಸ್ ಮಾಡುತ್ತಿರುವಾಗ ಬೆಳಿಗ್ಗೆ 11:00 ಗಂಟೆ ಸಮಯಕ್ಕೆ ರೆಂಜಾಳ ಗ್ರಾಮದ ಬೀಟ್ ಸಿಬ್ಬಂದಿ ಪಿಸಿ 251 ಶ್ರೀನಿವಾಸ ಇವರು ನನ್ನ ಮೊಬೈಲಿಗೆ ಕರೆ ಮಾಡಿ  ರೆಂಜಾಳ ಗ್ರಾಮದ ರೆಂಜಾಳ ಹಾಲಿನ ಡೈರಿ ಬಳಿಯಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಓರ್ವ ವ್ಯಕ್ತಿಯು ನಶೆಯಲ್ಲಿ ರಸ್ತೆ ಬದಿ ತೇಲಾಡುತ್ತಿರುವುದಾಗಿ ಮಾಹಿತಿ ನೀಡಿದ್ದು, ಅದರಂತೆ ನಾನು ಬೆಳಿಗ್ಗೆ 11:15 ಗಂಟೆ ವೇಳೆಗೆ ರೆಂಜಾಳ  ಗ್ರಾಮದ ಹಾಲಿನ ಡೈರಿ ಬಳಿ ಹೋದಾಗ ಅಲ್ಲಿ ಬೀಟ್ ಸಿಬ್ಬಂದಿ ಪಿಸಿ 251 ಶ್ರೀನಿವಾಸ ಹಾಜಾರಿದ್ದು, ನಶೆ ಮಾಡಿದ ವ್ಯಕ್ತಿಯು ಈತನೇ ಎಂದು ತೋರಿಸಿಕೊಟ್ಟಂತೆ, ನೋಡಲಾಗಿ ಆ ವ್ಯಕ್ತಿಯು ನಶೆಯಲ್ಲಿ ತೇಲಾಡುತ್ತಿದ್ದು, ಆ ವ್ಯಕ್ತಿಯ ಬಳಿ ಹೋಗಿ ಆತನಲ್ಲಿ ನೀನು ಮಾದಕ ವಸ್ತು/ಗಾಂಜಾವನ್ನು  ಸೇವನೆ ಮಾಡಿದ್ದೀಯಾ ಎಂದು ವಿಚಾರಿಸಲಾಗಿ, ಹೌದು ತಾನು ‌ಗಾಂಜಾದಂತ ವಸ್ತುವನ್ನು ಸೇವನೆ  ಮಾಡಿರುವುದಾಗಿ ಒಪ್ಪಿದ್ದು .ಆತನಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸುವುದಾಗಿ ತಿಳಿಸಿದಾಗ ಆತ ಒಪ್ಪಿಕೊಂಡಿದ್ದು, ಆ ಸಮಯದಲ್ಲಿ ಹಾಜರಿದ್ದ ಬೀಟ್  ಸಿಬ್ಬಂದಿ ಮತ್ತು ನನ್ನೊಂದಿಗೆ ಬಂದಿದ್ದ ಸಿಬ್ಬಂದಿಯ ಸಹಾಯದಿಂದ ಸದ್ರಿ ವ್ಯಕ್ತಿಯನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಆತನ ಬಾಯಿಯಲ್ಲಿ ಘಾಟು ವಾಸನೆ ಬರುತ್ತಿದ್ದು, ಅಸಂಬದ್ದ ರೀತಿಯಲ್ಲಿ ವರ್ತಿಸುತ್ತಿದ್ದ. ಆತ ಗಾಂಜಾ ಅಥವಾ ಮನೋದ್ರೇಕ ಅಮಲು ಪದಾರ್ಥ ಸೇವನೆ ಮಾಡಿರಬಹುದು ಎಂದು ಸಂಶಯ ಬಂದು ಆತನ ಹೆಸರು ವಿಳಾಸ ವಿಚಾರಿಸಲಾಗಿ ಮೆಹರೂಪ್ , (30) ತಂದೆ ಅಬ್ದುಲ್ ಖಾದರ್ ವಾಸ: ಬದ್ರಿಯ ಮಂಜಿಲ್ ರೆಂಜಾಳ ಪಂಚಾಯತ್ ಬಳಿ, ರೆಂಜಾಳ ಗ್ರಾಮ ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಎಂದು ತಿಳಿಸಿದ. ಸದ್ರಿಯವನು ಗಾಂಜಾ ಅಥವಾ ಮನೋದ್ರೇಕ ಅಮಲು ಪದಾರ್ಥ ಸೇವನೆ ಮಾಡಿರಬಹುದು ಎಂದು ಬಲವಾದ ಸಂಶಯ ಬಂದು ಸದ್ರಿಯವನ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಪಿಸಿ ಶ್ರೀನಿವಾಸ ಇವರ  ಮೋಟಾರ್ ಸೈಕಲಿನಲ್ಲಿ ಕುಳ್ಳಿರಿಸಿಕೊಂಡು ಅಪರಾಹ್ನ 12:10 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದೆನು. ಬಳಿಕ ಮೆಹರೂಪ್ ಈತನನ್ನು ಮಾದಕ ವಸ್ತು ಯಾ ಗಾಂಜಾ ಸೇವನೆ ಮಾಡಿದ ಬಗ್ಗೆ ಖಚಿತಪಡಿಸಿಕೊಳ್ಳಲು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ದೃಢಪತ್ರ ಒದಗಿಸಿಕೊಡಲು ಸಿಬ್ಬಂದಿ ಪಿಸಿ ಭೋಪಾಲ ಇವರ ಭದ್ರಿಕೆಯಲ್ಲಿ ಪ್ರೊಪೆಸರ್‌ ಮತ್ತು ಮುಖ್ಯಸ್ಥರು, ಪೊರೆನ್ಸಿಕ್‌ ಮೆಡಿಸಿನ್‌ ವಿಭಾಗ ಕೆಎಂಸಿ ಮಣಿಪಾಲರವರ ಮುಂದೆ ಹಾಜರುಪಡಿಸಿ ವರದಿ ತರುವಂತೆ ಅಪರಾಹ್ನ 12:15 ಗಂಟೆಗೆ ಕಳುಹಿಸಿ ಕೊಟ್ಟಿರುತ್ತೇನೆ ದಿನಾಂಕ 20/09/2022 ರಂದು ಪ್ರೊಪೆಸರ್‌ ಮತ್ತು ಮುಖ್ಯಸ್ಥರು, ಪೊರೆನ್ಸಿಕ್‌ ಮೆಡಿಸಿನ್‌ ವಿಭಾಗ ಕೆಎಂಸಿ ಮಣಿಪಾಲ ಇವರಿಂದ ವೈದ್ಯಕೀಯ ವರದಿ ಬಂದಿದ್ದು ವರದಿಯಲ್ಲಿ ಮೆಹರೂಪ್  ಎಂಬಾತನು  ಗಾಂಜಾ ಎಂಬ ಮನೋ ಉದ್ರೇಕ ಮಾದಕ ಪದಾರ್ಥ ಸೇವಿಸಿರುವುದು ವರದಿಯಲ್ಲಿ ದೃಢಪಟ್ಟಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 121/2022 ಕಲಂ : 27(ಬಿ) ಎನ್ ಡಿ ಪಿ ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಯು. ಗಣೇಶ್‌ (53) ತಂದೆ: ದಿ. ವಾಸು ಭಂಡಾರಿ ವಾಸ: ಡೋರ್‌ ನಂಬ್ರ 2-3-92ಸಿ1ಎ, ಗರಡಿ ರಸ್ತೆ, ಬನ್ನಂಜೆ, ಮೂಡನಿಡಂಬೂರು ಗ್ರಾಮ, ಉಡುಪಿ ಇವರ ತಮ್ಮ ವಾಸ್ತವ್ಯದ ಮನೆಯಾದ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಬನ್ನಂಜೆ ಗರಡಿ ರಸ್ತೆಯ ಡೋರ್‌ ನಂಬ್ರ 2-3-92ಸಿ1ಎ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಅವರ ಮಾಲೀಕತ್ವದ ಹೊಂಡಾ ಆ್ಯಕ್ಟೀವಾ 5ಜಿ ಸ್ಕೂಟರ್‌ ನಂಬ್ರ: KA-20 ES-2263 (Chassis No: ME4JF50BKJT262152 & Engine No: JF50ET8262231) ನೇದನ್ನು ದಿನಾಂಕ 13/09/2022 ರಂದು 15:40 ಗಂಟೆಯಿಂದ 16:15 ಗಂಟೆ ನಡುವಿನ ಸಮಯದಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸ್ಕೂಟರ್‌ನ ಅಂದಾಜು ಮೌಲ್ಯ ರೂಪಾಯಿ. 60,000/- ಆಗಬಹುದುದಾಗಿದೆ.  ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 143/2022 ಕಲಂ:  379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಗಂಡಸು ಕಾಣೆ ಪ್ರಕರಣ

  • ಕೋಟ: ಪಿರ್ಯಾದಿದಾರರಾಧ ವಿಜಯ ಕಾಂಚನ್ (52) ತಂದೆ: ರಾಮ ತಿಂಗಳಾಯ ವಾಸ: ಮಧ್ಯಸ್ಥರ ತೋಟ  ಸಾಲಿಗ್ರಾಮ ಪಾರಂಪಳ್ಳಿ ಗ್ರಾಮ ಬ್ರಹ್ಮಾವರ ಇವರ ತಮ್ಮ ಉದಯ ಕಾಂಚನ್ (43) ರವರು  ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು ದಿನಾಂಕ 17/09/2022 ರಂದು ಕೋಡಿಕನ್ಯಾನದ  ಮನೆಯಿಂದ ಮೀನು ಗಾರಿಕೆ ಕೆಲಸಕ್ಕೆಂದು ಸುಮಾರು 19:00 ಗಂಟೆಗೆ ಹೋಗಿದ್ದು ಈ ವರೆಗೂ ಮನೆಗೆ ಬಾರದೇ ಇದ್ದು . ಸಂಬಂಧಿಕರು ಹಾಗೂ ಸ್ನೇಹಿತರಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲವಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 150/2022 ಕಲಂ: ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತರ ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿದಾರರಾಧ ಸುಧರ್ಶನ್  ಶೆಟ್ಟಿ  (38) ತಂದೆ,  ರಾಜೀವ  ಶೆಟ್ಟಿ  ವಾಸ, ಬಾಳೆಬೇರು ಸಿದ್ದಾಪುರ ಗ್ರಾಮ ಕುಂದಾಪುರ ಇವರಿಗೆ  ಆರೋಪಿಗಳಿಗೆ  ಕುಂದಾಪುರ  ತಾಲೂಕಿನ  ಸಿದ್ದಾಪುರ   ಗ್ರಾಮದಲ್ಲಿ  ಜಾಗದ  ತಕರಾರು  ಇರುತ್ತದೆ, ಸದ್ರಿ ಜಾಗದ  ತಕರಾರು ಮಾನ್ಯ  ಉಚ್ಚ  ನ್ಯಾಯಾಲಯ  ಬೆಂಗಳೂರು ಇಲ್ಲಿ ವಿಚಾರಣೆಯಲ್ಲಿ  ಇರುತ್ತದೆ, ಮಾನ್ಯ ಉಚ್ಚ   ನ್ಯಾಯಾಲಯವು  ಕುಂದಾಪುರ  ತಾಲೂಕು  ತಹಶೀಲ್ದಾರರಿಗೆ  ಸದ್ರಿ  ತಕರಾರು  ಇರುವ  ಜಾಗವನ್ನು  ದಿನಾಂಕ  21/09/2022  ರಂದು  ಸರ್ವೇ   ಮಾಡಿ ವರದಿ  ನೀಡುವಂತೆ  ಆದೇಶ  ಮಾಡಿರುತ್ತದೆ, ಈ ಜಾಗದ  ತಕರಾರಿನ ಬಗ್ಗೆ   ಸುಧರ್ಶನ್  ಶೆಟ್ಟಿ ರವರು ಹೆಚ್ಚಾಗಿ  ಓಡಾಡುತ್ತಿದ್ದು, ಇದರಿಂದ  ತಮ್ಮಗೆ  ತೊಂದರೆ  ಆಗಬಹುದು  ಎಂದು  ತಿಳಿದು  ಆರೋಪಿ 1.ರಾಜರಾಮ  ಶೆಟ್ಟಿ 2.ರಘುರಾಮ ಶೆಟ್ಟಿ  3.ಶ್ರೀಧ ರ  ಶೆಟ್ಟಿ  ಮಂಗನಸಾಲು  4. ಬಿ. ಪ್ರಕಾಶ್ಚಂದ್ರ  ಶೆಟ್ಟಿ ಇವರುಗಳು ದಿನಾಂಕ 18/09/2022  ರಂದು ಸುಧರ್ಶನ್  ಶೆಟ್ಟಿ ರವರು ಕೆಎ-20 ಇಎಸ್-4781  ನೇ  ನಂಬ್ರದ  ಸ್ಕೂಟಿಯಲ್ಲಿ ಸಿದ್ದಾಪುರ ಗ್ರಾಮದ   ಬಾಳೆಬೇರು ಎಂಬಲ್ಲಿ ಮನೆಯ ಬಳಿ ಸುಮಾರು 16:45 ಘಂಟೆಗೆ ಸ್ಕೂಟಿ ನಿಲ್ಲಿಸಿಕೊಂಡು ಮೊಬೈಲ್‌‌ನಲ್ಲಿ  ಮಾತನಾಡಿಕೊಂಡಿರುವಾಗ 3 ಮತ್ತು 4 ನೇ ಆರೋಪಿಯ ಪ್ರೇರಣೆಯಿಂದ ಕೆಎ-20 ಎಮ್.ಸಿ-.0569 ನೇ  ನಂಬ್ರದ  ಕಾರನ್ನು 1 ನೇ ಆರೋಪಿ ಮಂಗನಸಾಲು ಕಡೆಯಿಂದ ಚಲಾಯಿಸಿಕೊಂಡು ಬರುತ್ತಿದ್ದು,ಈ   ಸಮಯ   ಕಾರಿನಲ್ಲಿ ಇದ್ದ  2  ನೇ ಆರೋಪಿ 1 ನೇ ಆರೋಪಿಯಲ್ಲಿ ಅವನಿಗೆ ಗುದ್ದು. ಗುದ್ದು ಎಂದು ಹೇಳಿ  ಸುಧರ್ಶನ್  ಶೆಟ್ಟಿ ರವರನ್ನು ಕೊಲ್ಲುವ ಉದ್ದೇಶದಿಂದ ಅವರ ಸ್ಕೂಟಿಯ ಮೇಲೆ ಹಾರಿಸಿದ್ದು, ಇದರಿಂದ  ಸುಧರ್ಶನ್  ಶೆಟ್ಟಿ ರವರು ಜೋರಾಗಿ ಬೊಬ್ಬೆ ಹಾಕಿದಾಗ ಆರೋಪಿಗಳು ಕಾರನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾರೆ,    ಇದರಿಂದ ಗಾಯಗೊಂಡ ಸುಧರ್ಶನ್ ಶೆಟ್ಟಿ ರವರನ್ನು ಕೂಡಲೇ 108 ವಾಹನದಲ್ಲಿ ಚಿಕಿತ್ಸೆಯ ಬಗ್ಗೆ  ಕುಂದಾಪುರ ಚಿನ್ಮಯಿ ಅಸ್ಪತ್ರೆಗೆ ಕರೆದುಕೊಂಡು ಬಂದಿರುತ್ತಾರೆ, ಅಲ್ಲಿ ಸುಧರ್ಶನ್  ಶೆಟ್ಟಿ ಇವರನ್ನು ಪರೀಕ್ಷಿಸಿದ ವೈದ್ಯರು  ಎಡ ಕಾಲು, ಎಡಕೈ  ಸೊಂಟ  ತಲೆಗೆ   ಗಾಯವಾಗಿದೆ ಎಂದು ಹೇಳಿ  ಚಿಕಿತ್ಸೆ  ನೀಡಿ  ಒಳರೋಗಿಯಾಗಿ   ದಾಖಲು ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 92/2022 ಕಲಂ:  307, 109, ಜೊತೆಗೆ  34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 20-09-2022 06:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080