ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿದಾರರಾದ ಮಣಿಕಂಟ ಆಚಾರ್ಯ (31) ತಂದೆ: ಕೃಷ್ಣಯ್ಯ ಆಚಾರ್ಯ, ವಾಸ: ಸಾಲಿಮಕ್ಕಿ, ಬಿಜೂರು ಗ್ರಾಮ, ಬೈಂದೂರು ರವರು ದಿನಾಂಕ 19/09/2022  ರಂದು ತನ್ನ ಖಾಸಗಿ ಕೆಲಸದ ನಿಮಿತ್ತ ಮೊಟಾರು ಸೈಕಲ್‌ನಲ್ಲಿ ಕುಂದಾಪುರಕ್ಕೆ ಹೋಗುವರೇ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ NH 66 ಎಕಮುಖ ರಸ್ತೆಯಲ್ಲಿ ಹೋಗುತ್ತೀರುವಾಗ  ಸಮಯ ಸುಮಾರು 09:30 ಗಂಟೆಗೆ ಕುಂದಾಪುರ ತಾಲೂಕು,  ಹೊಸಾಡು ಗ್ರಾಮದ ESSAR ಪೆಟ್ರೋಲ್‌ ಬಂಕ್‌ನಿಂದ ಸ್ವಲ್ಪ ಮುಂದಕ್ಕೆ NH 66 ರಸ್ತೆಯಲ್ಲಿ ಮಣಿಕಂಟ ಆಚಾರ್ಯ ರವರ ಎದುರಿನಲ್ಲಿ ಕುಂದಾಪುರ ಕಡೆಗೆ KA-20 EW-4468 ನೇ ಮೋಟಾರು ಸೈಕಲ್‌ನ್ನು  ರಾಘವೇಂದ್ರ ಎಂಬವರು ರಕ್ಷತ್‌ ಆಚಾರ್ಯ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಸವಾರಿ ಮಾಡಿಕೊಂಡು ಹೋಗುತ್ತೀರುವಾಗ ನಾಯಿಯೊಂದು ಅಡ್ಡಬಂದಿದ್ದು ಆಗ ಸದ್ರಿ ಮೋಟಾರು ಸೈಕಲ್‌ ಸವಾರ  ಒಮ್ಮೇಲೆ ಬ್ರೇಕ್‌ ಹಾಕಿದ  ಪರಿಣಾಮ ಮೋಟಾರು ಸೈಕಲ್‌, ಸವಾರನ ಹತೋಟಿ ತಪ್ಪಿ ರಸ್ತೆಗೆ ಬಿದ್ದು,  ಸವಾರ ರಾಘವೇಂದ್ರರವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸಹಸವಾರ ರಕ್ಷತ್‌ ರವರಿಗೆ  ಎಡಕೈ ಮತ್ತು ಎಡ ಕಾಲಿನ ಮೊಣಗಂಟಿಗೆ ರಕ್ತಗಾಯವಾಗಿರುತ್ತದೆ. ಈ ಅಪಘಾತಕ್ಕೆ  KA-20 EW-4468 ನೇ ಮೋಟಾರು ಸೈಕಲ್‌ ಸವಾರ ರಾಘವೇಂದ್ರನ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 90/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾಧ ಮಾದ (57) ತಂದೆ: ದಿ.ಪುಟ್ಟ ಪೂಜಾರಿ ವಾಸ: ದಾಸಿಖಾನ ಹಿತ್ಲು ಉಪ್ರಳ್ಳಿ, ಉಳ್ಳೂರು 11 ನೇ ಗ್ರಾಮ ಬೈಂದೂರು ಇವರು ದಿನಾಂಕ 16/09/2022 ರಂದು ಕಂಬಂದಕೋಣೆಯ ಸುಬ್ರಹ್ಮಣ್ಯ ಭಟ್ ರವರ ಮನೆಯ ಗಾರೆ ಕೆಲಸಕ್ಕೆ ಹೋಗಿ ಗಾರೆ ಕೆಲಸ ಮುಗಿಸಿ ತನ್ನೊಂದಿಗೆ ಕೆಲಸಕ್ಕೆ ಬಂದಿದ್ದ ಮಾಧವ ರವರೊಂದಿಗೆ ಅವರ KA-20 EL-2123 ನೇ ಮೋಟಾರು ಸೈಕಲ್ ನಲ್ಲಿ ಸಹ ಸವಾರಾಗಿ ಕಂಬದಕೋಣೆಯಿಂದ ಉಪ್ರಳ್ಳಿ ಕಡೆಗೆ ಹೊರಟು ರಾಹೆ 66 ರಲ್ಲಿ ಕಂಬದಕೋಣೆ  ಸೇತುವೆಯ ಬಳಿ ಹೋಗುತ್ತಿರುವಾಗ  ಸಂಜೆ  6:30 ಗಂಟೆಗೆ  ಮಾದೇವನು  ಮೋಟಾರು ಸೈಕಲ್ ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಿರುವಾಗ ನಾಯಿಯೊಂದು ಮೋಟಾರು ಸೈಕಲ್ ಗೆ ಅಡ್ಡ ಬಂದ ಕಾರಣ ಮಾದೇವನು ಮೋಟಾರು ಸೈಕಲ್ ಗೆ ಒಮ್ಮೇಲೆ ಬ್ರೇಕ್ ಹಾಕಿದ  ಪರಿಣಾಮ ಬೈಕ್ ಸ್ಕಿಡ್ ಆಗಿ  ಮಾದ ರವರು ಹಾಗೂ  ಮೋಟಾರು ಸೈಕಲ್ ಸವಾರ  ಮಾದೇವ ಮೋಟಾರು ಸೈಕಲ್ ಸಮೇತ ರಸ್ತೆ ಬಿದ್ದಿದ್ದು, ಅಪಘಾತದ ಪರಿಣಾಮ ಮಾದ ರವರಿಗೆ ಹಣೆಗೆ, ಎಡ  ಭುಜ  ಮೂಳೆ ಮುರಿತ ಉಂಟಾಗಿದ್ದು  ಮಾದೇವ ರವರಿಗೆ ತರಚಿದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರದ ನ್ಯೂ ಮೆಡಿಕಲ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 188/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಮಾಧಕ ವಸ್ತು ಸೇವನೆ ಪ್ರಕರಣ

  • ಕಾಪು: ಭರತೇಶ ಕಂಕಣವಾಡಿ ಪಿ.ಎಸ್.ಐ(ತನಿಖೆ) ಕಾಪು ಪೊಲೀಸ್ ಠಾಣೆ. ರವರು ದಿನಾಂಕ 17/09/2022 ರಂದು ಬೆಳಗ್ಗೆ ಸಮಯ 10:00 ಗಂಟೆಗೆ ಠಾಣಾ ಸಿಬ್ಬಂದಿಯೊಂದಿಗೆ ಇಲಾಖಾ ಮೋಟಾರು ಸೈಕಲ್‌ ನಲ್ಲಿ ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಠಾಣಾ ವ್ಯಾಪ್ತಿಯ ಮಣಿಪುರ ಗ್ರಾಮದ ಮಣಿಪುರ ಪೇಟೆಯ ಬಳಿ ಅನುಮಾನಾಸ್ಪದ ಓರ್ವ ವ್ಯಕ್ತಿ ಕಂಡು ಬಂದಿದ್ದು, ಆತನನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಮಾದಕ ಸೇವನೆಯ ನಶೆಯಲ್ಲಿರುವ ಬಗ್ಗೆ ಅನುಮಾನಗೊಂಡು ಆತನನ್ನು ಸ್ಥಳದಲ್ಲಿಯೇ ವಶಕ್ಕೆ ಪಡೆದುಕೊಂಡು ಆತನ ಹೆಸರು, ವಿಳಾಸ ವಿಚಾರಿಸಿಲಾಗಿ ಆತನ ಮೊಹಮ್ಮದ್ ಆರೀಷ್ ಎಂದು ತಿಳಿಸಿದ್ದು ಸದ್ರಿಯವರಿಗೆ ಪೊಲೀಸ್ ನೋಟಿಸ್ ನೀಡಿ ವೈದ್ಯಕೀಯ ಪರೀಕ್ಷೆಯ ಬಗ್ಗೆ ಸಿಬ್ಬಂದಿಯವರನ್ನು ನೇಮಕ ಮಾಡಿ  ಪ್ರೊಫೆಸರ್ ಅಂಡ್ ಹೆಡ್, ಕೆ.ಎಂ.ಸಿ ಪೊರೆನ್ಸಿಕ್ ವಿಭಾಗ ಮಣಿಪಾಲ  ಇವರ  ಮುಂದೆ ಹಾಜರುಪಡಿಸಲು ಕಳಿಸಿದ್ದು, ಅದರಂತೆ ಸದ್ರಿ ಸಿಬ್ಬಂದಿಯವರು ಪ್ರೊಫೆಸರ್ ಅಂಡ್ ಹೆಡ್ ಕೆ.ಎಂ.ಸಿ ಪೊರೆನ್ಸಿಕ್ ವಿಭಾಗ ಮಣಿಪಾಲ ಇವರ ಮುಂದೆ ಹಾಜರುಪಡಿದ್ದು, ಪರೀಕ್ಷಿಸಿದ ವೈದ್ಯರು ದಿನಾಂಕ 19/09/2022 ರಂದು ಮೊಹಮ್ಮದ್ ಆರೀಷ್ ಎಂಬಾತನು ಗಾಂಜಾ ಸೇವಿಸಿರುವ ಬಗ್ಗೆ ದೃಢ ಪತ್ರ ನೀಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 106/2022 ಕಲಂ : 27(ಬಿ) ಎನ್ ಡಿ ಪಿ ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ರಾಧಾಕೃಷ್ಣ ಶೆಟ್ಟಿ ಕುತ್ತಾಡಿ (75) ತಾಯಿ ಗಿರಿಜಮ್ಮ ಶೆಡ್ತಿ ವಾಸ: ಕೊತ್ತಾಡಿ ಪಟೇಲರ ಮನೆ ವಡ್ಡರ್ಸೆ  ಬ್ರಹ್ಮಾವರ ಇವರು ವಡ್ಡರ್ಸೆ ಗ್ರಾಮದಲ್ಲಿ ಸರ್ವೆ ನಂಬ್ರ 113.3 ರ ಕುಟುಂಬದ ಸ್ವಂತ ಹಕ್ಕಿನ ಪಟ್ಟಾ ಸ್ಥಳದಲ್ಲಿ ಮಣ್ಣಿನ ಧರೆ ಹಾಕಿದ್ದು ದಿನಾಂಕ 18/09/2022 ರಂದು 19:00 ರಿಂದ 20:00 ಗಂಟೆ ಯ ಮಧ್ಯಾವಧಿಯಲ್ಲಿ ಆರೋಪಿ 1.ಬಾಬು ದೇವಾಡಿಗ ತಂದೆ ಮೋನ ದೇವಾಡಿಗ 2. ಕಮಲ ಗಂಡ ಬಾಬು ದೇವಾಡಿಗ ಮತ್ತು ಇತರ ಮೂವರು ಇವರೆಲ್ಲರೂ  ಸೇರಿ  ಸದ್ರಿ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಮಣ್ಣಿನ  ಧರೆಯನ್ನು ನಾಶ  ಮಾಡಿ  ಅವರ ಮನೆಗೆ ಹೋಗಲು ಬೇರೆ ದಾರಿ ಇದ್ದರೂ  ರಸ್ತೆಗೆ  ಹತ್ತಿರ ವಾಗುತ್ತದೆ ಎಂಬ ಉದ್ದೇಶದಿಂದ  ದಾರಿ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 149/2022 ಕಲಂ: 447.427 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 20-09-2022 09:52 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080