ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಪಡುಬಿದ್ರಿ:  ಪಿರ್ಯಾದಿದಾರರಾದ ಅಶೋಕ್ ಭಂಡಾರಿ (57), ತಂದೆ: ದಿ. ನಾರಾಯಣ ಭಂಡಾರಿ, ವಾಸ: ಬೀಡಿನ ಹತ್ತಿರ, ಪಡುಬಿದ್ರಿ ಅಂಚೆ, ನಡ್ಸಾಲು ಗ್ರಾಮ, ಕಾಪು ತಾಲೂಕು ಇವರು ಕಾಪು ತಾಲೂಕು ನಡ್ಸಾಲು ಗ್ರಾಮದ ಪಡುಬಿದ್ರಿ ಬೀಡಿನ ಹತ್ತಿರ ರಾಷ್ಟ್ರೀಯ ಹೆದ್ದಾರಿ 66 ರ ಬಳಿ  ಅರವಿಂದ್ ಮೋಟಾರ್ಸ್ ನಲ್ಲಿ ರಾತ್ರಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 18/09/2021 ರಂದು ಸಂಜೆ 18:00 ಗಂಟೆಯಿಂದ ಸೆಕ್ಯೂರಿಟಿ ಕೆಲಸ ಮಾಡುತ್ತಿರುವಾಗ ರಾತ್ರಿ 22:30 ಗಂಟೆಗೆ ಅರವಿಂದ್ ಮೋಟಾರ್ಸ್ ಎದರು ರಸ್ತೆಯ ಬದಿಯಲ್ಲಿ ದಾವೂದ್ ಎಂಬುವವರು ನಡೆದುಕೊಂಡು ಹೋಗುತ್ತಿರುವಾಗ ಅದೇ ಸಮಯಕ್ಕೆ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ MH-08-W-8170 ನೇ ಕ್ಯಾಂಟರ್ ವಾಹನ ಚಾಲಕನು ತನ್ನ ವಾಹನವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ದಾವೂದ್ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆ ಬದಿಯಲ್ಲಿ ಬಿದ್ದ ಪರಿಣಾಮ ಅವರ ಎಡಕಾಲು ಮೂಳೆ ಮುರಿತ, ತಲೆಗೆ ತರಚಿದ ಗಾಯವಾಗಿದ್ದು, ಗಾಯಗೊಂಡ ದಾವೂದ್ ರವರು ಮಂಗಳೂರು ವೆನ್ಲಾಕ್ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 95/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 17/09/2021 ರಂದು ಪಿರ್ಯಾದಿದಾರರಾದ ಗೋಪಾಲ ಶೇರಿಗಾರ್ (62), ತಂದೆ: ದಿ ಮೋಂಟ ದೇವಾಡಿಗ, ವಾಸ: ಶ್ರೀ ತೀರ್ಥ ನಿವಾಸ, ಅಂಗಡಿ ಬಾಕ್ಯಾರ್, ರೆಂಜಾಳ ಗ್ರಾಮ, ಕಾರ್ಕಳ ತಾಲೂಕು ಇವರು KA-20-A-8586 ನೇ ಆಟೋರಿಕ್ಷಾದಲ್ಲಿ  ಪ್ರಯಾಣಿಕರೊಂದಿಗೆ ರೆಂಜಾಳದಿಂದ ಮಿಯ್ಯಾರು ಗ್ರಾಮದ ಜೋಡುಕಟ್ಟೆ ಕಡೆ ಬಾಡಿಗೆ ನಿಮಿತ್ತ ಹೊರಟಿದ್ದು  ಸಂಜೆ 4:10 ಗಂಟೆಗೆ ಮಿಯಾರು ಗ್ರಾಮದ ಕುದ್ಕೋಳಿ ಕ್ರಾಸ್ ಬಳಿ ತಲುಪಿದಾಗ ಜೋಡುಕಟ್ಟೆ ಕಡೆಯಿಂದ ರೆಂಜಾಳ ಕಡೆಯಿಂದ KA-20-EV-5819 ನೇ ದ್ವಿಚಕ್ರ ವಾಹನ ಸವಾರನು ತಾನು ಸವಾರಿ ಮಾಡುತ್ತಿದ್ದ ದ್ವಿಚಕ್ರ ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಆಟೋರಿಕ್ಷಾ ಮಗುಚಿ ಬಿದ್ದು, ಪಿರ್ಯಾದಿದಾರಿಗೆ ತಲೆ ಮತ್ತು ಕಾಲಿಗೆ ಗುದ್ದಿದ ರೀತಿಯ ಗಾಯವಾಗಿದ್ದು, ರಿಕ್ಷಾ  ಪ್ರಯಾಣಿಕರಾದ ಗೋಪಾಲ ಹೆಗ್ಡೆಯರಿಗೆ ತಲೆಗೆ ರಕ್ತಗಾಯವಾಗಿದ್ದು, ಮತ್ತೊಬ್ಬ ಪ್ರಯಾಣಿಕ ಸಾಧು ಎಂಬುವವರಿಗೆ ಕೈಗೆ ಗುದ್ದಿದ ರೀತಿಯ ಗಾಯವಾಗಿದ್ದಲ್ಲದೇ, ದ್ವಿಚಕ್ರ ವಾಹನದ  ಸಹಸವಾರನಿಗೂ ಬಲಕೈ ಮತ್ತು ಬಲಕಾಲಿಗೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 119/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಗಂಡಸು ಕಾಣೆ ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿದಾರರಾದ ಶೈಲಾ (30), ತಂದೆ: ದಿನೇಶ್, ವಾಸ:  ಹೆಂಚಿನಮನೆ, ಹೋಲಿ ಕ್ರಾಸ್ ಹತ್ತಿರ, ಗುಜ್ಜಾಡಿ ಗ್ರಾಮ, ಕುಂದಾಪುರ ತಾಲೂಕು ಇವರ ತಮ್ಮ ಮಹೇಂದ್ರ ತನ್ನ ಸ್ನೇಹಿತರಾದ ಆಶಿಕ್ ಹಾಗೂ ಶರತ್ ಎಂಬುವವರೊಂದಿಗೆ ದಿನಾಂಕ 19/09/2021 ರಂದು ಮಧ್ಯಾಹ್ನ 12:30 ಗಂಟೆಗೆ ಸೌಪರ್ಣಿಕ ನದಿಯಲ್ಲಿ ಈಜಲು ಹೋಗಿದ್ದು, ಆಶಿಕ್ ಹಾಗೂ ಮಹೇಂದ್ರ ರವರು ತ್ರಾಸಿ ಗ್ರಾಮದ ಮೋವಾಡಿಯ ಸಮೀಪ ನಾಡಾ ಕ್ಕೆ ಹೋಗುವ ಸೇತುವೆ ಬಳಿ ಸೌಪರ್ಣಿಕ ನದಿಯಲ್ಲಿ ಈಜಲು ಇಳಿದಿದ್ದು, ಶರತ್ ನು ಈಜಲು ನೀರಿಗೆ ಇಳಿಯದೇ ಸೇತುವೆ ಮೇಲೆ ಇದ್ದು, ನದಿಯ ನೀರಿನಲ್ಲಿ ಈಜುತ್ತಿದ್ದ ಮಹೇಂದ್ರ(24) ನು ನೀರಿನ ಸುಳಿಗೆ ಸಿಕ್ಕಿ ನೀರಿನ ರಭಸಕ್ಕೆ ನೀರಿನಲ್ಲಿ ಮುಳುಗಿ ಕೊಚ್ಚಿಕೊಂಡು ಹೋಗಿದ್ದು ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 86/2021 ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಅಜೆಕಾರು: ದಿನಾಂಕ 19/09/2021 ರಂದು ಸುದರ್ಶನ ದೊಡಮನಿ, ಪೊಲೀಸ್ ಉಪನಿರೀಕ್ಷಕರು, ಅಜೆಕಾರು ಪೊಲೀಸ್ ಠಾಣೆ ಇವರು ಠಾಣಾ ಸರಹದ್ದಿನ ಶಿರ್ಲಾಲು ಗ್ರಾಮದ ಪಡಿಬೆಟ್ಟು, ಪೈಯಂದೆ, ಗುಡ್ಡೆಯಂಗಡಿ ಮೊದಲಾದ ಕಡೆಗಳಲ್ಲಿ  ರೌಂಡ್ಸ್ ಮಾಡುತ್ತಿರುವಾಗ ಅಜೆಕಾರು ಕಡೆಯಿಂದ ಶಿರ್ಲಾಲು ಕಡೆಗೆ ಮಾರುತಿ 800 ಕಾರಿನಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ತುಂಬಿಸಿಕೊಂಡು ಸಾಗಾಟ ಮಾಡಿಕೊಂಡು ಬರುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಶಿರ್ಲಾಲು ಗುಡ್ಡೆಯಂಗಡಿ ಕ್ರಾಸ್ ಬಳಿ ಇಲಾಖಾ ವಾಹವನವನ್ನು ನಿಲ್ಲಿಸಿ  ಅಂಡಾರು ಕಡೆಯಿಂದ ಬರುತ್ತಿದ್ದ ವಾಹನಗಳನ್ನು ನಿಲ್ಲಿಸಿ ತಪಾಸಣೆ ಮಾಡುತ್ತಿದ್ದಾಗ ಸಂಜೆ 7:00 ಗಂಟೆಗೆ ಅಂಡಾರು ಕಡೆಯಿಂದ ಅತೀ ವೇಗದಿಂದ ಬರುತ್ತಿದ್ದ KA-04-MA-3565 ಕಾರನ್ನು ನಿಲ್ಲಿಸಲು ಸೂಚಿಸಿದಾಗ ಅದರ ಚಾಲಕನು ನಿಲ್ಲಿಸದೇ ಜಾರ್ಕಳ ಮುಂಡ್ಲಿ ಕಡೆಗೆ ಚಲಾಯಿಸಿ  ಹೋಗುತ್ತಿದ್ದುದನ್ನು ಕಂಡು ಇಲಾಖಾ ಜೀಪಿನಲ್ಲಿ ಬೆನ್ನಟ್ಟಿದಾಗ ಆರೋಪಿತರು ಕಾರನ್ನು ಶಿರ್ಲಾಲಿನ ಅಸ್ವಾ ಆಬಾ ಜುಮ್ಮಾ ಮಸೀದಿ ಬಳಿಯ ಮರಕ್ಕೆ ಡಿಕ್ಕಿ ಹೊಡೆದು ಕಾರಿನಲ್ಲಿದ್ದ 3 ಜನರು ಹಾರಿ ಓಡಿ ಪರಾರಿಯಾಗಿರುತ್ತಾರೆ.  ಕಪ್ಪು & ಕಂದು ಬಣ್ಣದ 2 ಜಾನುವಾರುಗಳನ್ನು ಆರೋಪಿತರು ಎಲ್ಲಿಯೋ ಕಳವು ಮಾಡಿ ಕಾರಿನಲ್ಲಿ ಹಿಂಸಾತ್ಮಕವಾಗಿ ತುಂಬಿಸಿ ಅವುಗಳನ್ನು ಕಸಾಯಿ ಖಾನೆಗೆ ಇಲ್ಲವೇ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದುದ್ದಾಗಿದೆ. ಕಾರಿನ ಮೌಲ್ಯ 30,000/- ಜಾನುವಾರುಗಳ ಮೌಲ್ಯ  10,000/- ರೂಪಾಯಿ ಆಗಿರುತ್ತದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 26/2021  ಕಲಂ: 279, 379 ಐ.ಪಿ.ಸಿ ಮತ್ತು ಕಲಂ 8, 9, 11 ಕರ್ನಾಟಕ ಗೋಹತ್ಯೆ ನಿಷೇಧ ಕಾಯ್ದೆ 1964, ಕಲಂ. 11 (1) (ಡಿ) ಪ್ರಾಣಿ ಹಿಂಸೆ ಪ್ರತಿಬಂಧಕ ಕಾಯಿದೆ-1960 ಮತ್ತು ಕಲಂ 4,5,12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆದ್ಯಾದೇಶ-2020 ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 20-09-2021 09:44 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080