ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ:

  • ಬ್ರಹ್ಮಾವರ:  ದಿನಾಂಕ 19/09/2021 ರಂದು ರಾತ್ರಿ ಪಿರ್ಯಾದಿದಾರರಾದ  ನಾಗರಾಜ,(27) ತಂದೆ:- ಕೃಷ್ಣಾ ಶೆಟ್ಟಿಗಾರ್, ವಾಸ: ಮಾಸ್ತಿ ಅಮ್ಮ, 5 ಸೆಂಟ್ಸ್,ಈಶ್ವರ ನಗರ, ಹೇರಿಂಜೆ, ಕುಂಜಾಲು ರವರು ಬಾರ್ಕೂರು ಕಡೆಯಿಂದ ಬ್ರಹ್ಮಾವರ ಕಡೆಗೆ ಅವರ ಬೈಕಿನಲ್ಲಿ ಸವಾರಿ ಮಾಡಿಕೊಂಡು ರಾತ್ರಿ ಸುಮಾರು 11:30 ಗಂಟೆಗೆ ಹಂದಾಡಿ ಗ್ರಾಮದ ದುರ್ಗಾ ಸಭಾ ಭವನದ ಬಳಿ ಬರುತ್ತಿರುವಾಗ ಅವರ ಎದುರಿನಲ್ಲಿ ಬ್ರಹ್ಮಾವರ ಕಡೆಗೆ KA-20-R-9146 ನೇ ಮೋಟಾರ್ ಸೈಕಲ್‌ನ್ನು ಸವಾರಿ ಮಾಡುತ್ತಿದ್ದ ಆರೋಪಿ ಸಾಗರ್‌ಎಂಬವರು ಅವರ ಮೋಟಾರ್‌ಸೈಕಲ್‌ನ್ನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಹೋಗಿ ರಸ್ತೆ ಬದಿಯಲ್ಲಿ ನಿಂತಿದ್ದ ಪದ್ಮಾನಾಭ ಚಡಗ ಎಂಬವರಿಗೆ  ಡಿಕ್ಕಿ ಹೊಡೆದಿದ್ದು, ಪರಿಣಾಮ ಪದ್ಮಾನಾಭ ಚಡಗ ರವರು  ಹಾಗೂ ಆರೋಪಿ ರಸ್ತೆಗೆ ಬಿದ್ದು ಪದ್ಮಾನಾಭ ಚಡಗ ರವರು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ, ಅವರಿಗೆ ತಲೆಗೆ ಹಾಗೂ ಕೈಕಾಲಿಗೆ ರಕ್ತಗಾಯವಾಗಿರುತ್ತದೆ. ಆರೋಪಿ ಸಾಗರ್ ರವರ ಮುಖಕ್ಕೆ, ಕೈ ಕಾಲಿಗೆ ತರಚಿದ ಗಾಯವಾಗಿರುತ್ತದೆ. ಗಾಯಾಳುಗಳನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಪ್ರಣವ್ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 169/2021 ಕಲಂ 279,337,338 ಐಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಶಂಕರನಾರಾಯಣ: ಪಿರ್ಯಾದುದಾರರು  ಜ್ಯೋತಿ  ಶಿವರಾಮ   ಪೂಜಾರಿ   ಪ್ರಾಯ 45 ವರ್ಷ  ಗಂಡ . ಶಿವರಾಮ   ಪೂಜಾರಿ  ವಾಸ, ಉದಯ  ನಿಲಯ  ದರ್ಖಾಸು  ತಾರೀಕಟ್ಟೆ  ಬೆಳ್ವೆ ಗ್ರಾಮ  ಇವರ ಗಂಡ ಶಿವರಾಮ   ಪೂಜಾರಿ ರವರು ರಾಯಬಾಗ್  ಎಂಬಲ್ಲಿ  ಹೊಟೇಲ್  ಕೆಲಸ   ಮಾಡಿಕೊಂಡಿದವರು,  ದಿನಾಂಕ   19.09.2021  ರಂದು ರಾಯಭಾಗ್ ನಿಂದ ಊರಿಗೆ  ಬಂದಿರುತ್ತಾರೆ, ಅವರಿಗೆ  ವಿಪರೀತ  ಶರಾಬು  ಕುಡಿಯುವ  ಚಟ ಹೊಂದಿದ್ದು, ಹಾಗೂ  ಮಾನಸಿಕ   ಸ್ಥಿಮಿತ   ಕಳೆದುಕೊಂಡಿದ್ದು,  ಈ  ವಿಷಯದಲ್ಲಿ  ಜೀವನದಲ್ಲಿ  ಜಿಗುಪ್ಸೆಗೊಂಡು  ದಿನಾಂಕ  20.09.2021  ರಂದು ಬೆಳಿಗ್ಗಿನ  ಜಾವ   ಸುಮಾರು   4:30 ಗಂಟೆಯಿಂದ   6;00  ಘಂಟೆಯ  ಮಧ್ಯದ  ಅವಧಿಯಲ್ಲಿ  ಹೆಬ್ರಿ ತಾಲೂಕಿನ ಬೆಳ್ವೆ ಗ್ರಾಮದ   ತಾರೀಕಟ್ಟೆ  ದರ್ಖಾಸು  ಎಂಬಲ್ಲಿ   ಮನೆಯ  ಬಳಿಯ   ಗೇರು  ಮರದ  ಹಾಡಿಯಲ್ಲಿ  ಇರುವ   ಮರಕ್ಕೆ   ಕುತ್ತಿಗೆಗೆ  ನೇಣು  ಬಿಗಿದು  ಆತ್ಮಹತ್ಯೆ   ಮಾಡಿಕೊಂಡಿರುತ್ತಾರೆ . ಈ ಬಗ್ಗೆ ಶಂಕರನಾರಾಯಣ ಠಾಣಾ ಯುಡಿಆರ್  ನಂ 34/2021 ಕಲಂ  174  ಸಿ.ಆರ್.ಪಿಸಿ   ಯಂತೆ ಪ್ರಕರಣ ದಾಖಲಿಸಲಾಗಿದೆ .
  • ಕಾರ್ಕಳ:  ಫಿರ್ಯಾದಿ ಮನೋಜ್ ಶೆಟ್ಟಿ, ಪ್ರಾಯ: 33 ವರ್ಷ, ತಂದೆ: ರಾಘು ಶೆಟ್ಟಿ, ವಾಸ: ಹೊಸಮನೆ, ಪಲಾಯಿಬಾಕ್ಯಾರು ಶಾಲೆಯ ಬಳಿ, ತೆಳ್ಳಾರು, ದುರ್ಗಾ ಗ್ರಾಮ, ಇವರ ಅಕ್ಕ ಮಮತಾ, ಪ್ರಾಯ: 41 ವರ್ಷ ಇವರು ಕಾರ್ಕಳ ತಾಲೂಕಿನ ಕಾರ್ಕಳದ  ಎಸ್.ವಿ.ಟಿ ಪಿಯುಸಿ ಕಾಲೇಜ್‌ನಲ್ಲಿ ಲೆಕ್ಚರರ್ ಆಗಿ ಕೆಲಸ ಮಾಡಿಕೊಂಡಿದ್ದು ಪೆರ್ವಾಜೆಯಲ್ಲಿ ಮನೆ ಮಾಡಿಕೊಡಿರುತ್ತಾರೆ. ಮಮತಾರವರು ಕಳೆದ 2 ತಿಂಗಳಿನಿಂದ ವಿಪರೀತ ಮಧುಮೇಹ ಹಾಗೂ ಮಾನಸಿಕ ಕಾಯಿಲೆ ಇದ್ದು ಈ ಬಗ್ಗೆ  ಉಡುಪಿಯ ವೈಕುಂಠ ಬಾಳಿಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತಿದ್ದು, ಆದರೂ ಫಿರ್ಯಾದಿದಾರರ ಅಕ್ಕ ಮಮತಾರವರು ಮಾನಸಿಕ ಒತ್ತಡದಲ್ಲಿ ಇದ್ದು ಸರಿಯಾಗಿ ಔಷಧಿಯನ್ನು ತೆಗೆದುಕೊಳ್ಳುತ್ತಿರಲಿಲ್ಲ ಹಾಗೂ ಕೆಲವು ದಿನದಿಂದ ಕಾಲೇಜಿಗೆ ಸಹ ಸರಿಯಾಗಿ ಹೋಗುತ್ತಿರಲಿಲ್ಲ. ಈ ದಿನ ದಿನಾಂಕ: 20.09.2021 ರಂದು ಮಧ್ಯಾಹ್ನ 01:00 ಗಂಟೆ ಸಮಯಕ್ಕೆ ಸರಿಯಾಗಿ ಫಿರ್ಯಾದಿದಾರರ ಅಕ್ಕನ ಮಗ ಅಶ್ವಿಜ್‌‌ನು ಫಿರ್ಯಾದಿಗೆ ಪೋನ್  ಮಾಡಿ ಶಾಲೆ ಮುಗಿಸಿ ಮನೆಗೆ ಬಂದಾಗ ಮನೆಯ ಬಾಗಿಲು ತೆರೆದಿದ್ದು ಒಳಗೆ ಹೋಗಿ ನೋಡುವಾಗ ಫಿರ್ಯಾದಿದಾರರ ಅಕ್ಕ ಮಮತಾರವರು ಕೊಠಡಿಯ ಪ್ಯಾನಿಗೆ ಚೂಡಿದಾರದ ಶಾಲ್‌‌ನಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ನೇತಾಡುತ್ತಿರುವ ಸ್ಥಿತಿಯಲ್ಲಿ ಇರುವುದಾಗಿ ಹೇಳಿದ್ದು, ಕೂಡಲೇ ಫಿರ್ಯಾದಿದಾರರು ಬಂದು ಫಿರ್ಯಾದಿದಾರರ ಅಕ್ಕ ಮಮತಾರವರ ಮೃತ ಶರೀರವನ್ನು ನೋಡಿರುತ್ತಾರೆ. ಫಿರ್ಯಾದಿದಾರರ ಅಕ್ಕ ಮಮತಾರವರು ಮಧುಮೇಹ ಹಾಗೂ ಮಾನಸಿಕ ಖಿನ್ನತೆಯಿಂದ ಮನನೊಂದು ಈ ದಿನ ದಿನಾಂಕ: 20.09.2021 ರಂದು ಬೆಳಗ್ಗೆ 09:00 ಗಂಟೆಯಿಂದ ಮಧ್ಯಾಹ್ನ 01:00 ಗಂಟೆ ನಡುವಿನ ಅವಧಿಯಲ್ಲಿ  ಮನೆಯ ಕೊಠಡಿಯ ಪ್ಯಾನಿಗೆ ಚೂಡಿದಾರದ ಶಾಲ್‌‌ನಿಂದ ಕುತ್ತಿಗೆಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್  ಠಾಣಾ  ಯುಡಿಆರ್‌ನಂ 29/2021 ಕಲಂ 174 ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಿಸಲಾಗಿದೆ .

ಇತ್ತೀಚಿನ ನವೀಕರಣ​ : 21-09-2021 06:20 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080