ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾಪು: ಪಿಯಾ೯ದಿ ಅಬ್ದುಲ್‌ ರಝಾಕ್‌ ಇವರ ಮಗ  ಅಲ್ತಪ್‌ ರೆಹಮಾನ್‌ ಎಂಬವರು  ಸುಮಾರು 2 ವಷ೯ದಿಂದ ಕಾಪು ತಾಲೂಕು ಮಲ್ಲಾರು ಗ್ರಾಮದ ಕೋಟೆ ರಸ್ತೆಯಲ್ಲಿರುವ ಇಮಾಯಿತುಲ್ಲಾ ಇಸ್ಮಾಯಿಲ್‌ ಮದರಸದಲ್ಲಿ ಅರೇಬಿಕ್‌ ಶಿಕ್ಷಕನಾಗಿ ಕೆಲಸಮಾಡಿಕೊಂಡಿದ್ದು ನಿನ್ನೆ ದಿನ ದಿನಾಂಕ:19/08/2022 ರಂದು ಪಾದೂರು ಗ್ರಾಮದ ಚಂದ್ರನಗರದಲ್ಲಿರುವ ಮಜ್ಜಿದ್‌ ನೂರ್‌ ಮಸೀದಿಯಲ್ಲಿ ಧಾಮಿ೯ಕ ಪ್ರವಚನ ಮುಗಿಸಿಕೊಂಡು ತನ್ನ ಸ್ನೇಹಿತ ಅಹಮ್ಮದ್‌ ಶಾಕೀರ್‌ ಎಂಬವರ ಜೊತೆ ತಾನು ಮಮತಾ ಎಂಬವರಿಂದ ಖರೀದಿಸಿದ ಕೆ.ಎ-20- ಇ.ಪಿ 5235 ನೇ ಸ್ಕೂಟರ್‌ನಲ್ಲಿ ರಾತ್ರಿ ಸುಮಾರು 10:40 ಗಂಟೆಗೆ ಹೊರಟು 10:45 ಗಂಟೆಗೆ  ಮಲ್ಲಾರು ಗ್ರಾಮದ ಸ್ವಾಗತ ನಗರ ಎಂಬಲ್ಲಿ ಪಕೀರನಕಟ್ಟೆ ಕ್ರಾಸ್ ರಸ್ತೆ  ತಲುಪುವಾಗ  ಪಕೀರಣಕಟ್ಟೆ ಕಡೆಯಿಂದ ಕೆ.ಎ-19-ಎಂ. ಹೆಚ್.2385‌ ನೇ ಕಾರು ಚಾಲಕ ನಿತೇಶ್‌ ಎಂಬವರು ತನ್ನ ಬಾಬ್ತು ಕಾರನ್ನು ಅತೀವೆಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು  ಬಂದು ಚಂದ್ರನಗರದ ಕಡೆಯಿಂದ ಬರುತ್ತಿದ್ದ ಪಿಯಾ೯ದಿದಾರರ ಮಗ ಚಲಾಯಿಸಿಕೊಂಡು  ಹೋಗುತ್ತಿದ್ದ ಸ್ಕೂಟರ್‌ನ ಮುಂಭಾಗಕ್ಕೆ   ಡಿಕ್ಕಿ ಹೊಡೆದ ಪರಿಣಾಮ ಪಿಯಾ೯ದಿದಾರರ ಮಗ ಹಾಗೂ ಅಹಮ್ಮದ್‌ ಶಾಕೀರ್‌ ಇಬ್ಬರು ಸ್ಕೂಟರ್‌ ಸಹಿತ ರಸ್ತೆಗೆ ಬಿದ್ದಿದ್ದು ಈ ಅಪಘಾತದಿಂದ ಅಲ್ತಾಪ್‌ ರೆಹಮಾನ್‌ ನ  ಎಡ ಕಾಲಿನ ಮೂಳೆ, ಬಲಕೈಯ ಮೂಳೆ ಮುರಿತವಾಗಿದ್ದು, ಸೊಂಟದ ಹಿಂಬಂದಿ, ಹಾಗೂ ಎರಡು ಕೈಗಳಿಗೆ ತರಚಿದ ಗಾಯಗಳಾಗಿರುತ್ತದೆ. ಅಹಮ್ಮದ್‌ ಶಾಕೀರ್‌ ಗೆ ಸೊಂಟದ ಮುಂಭಾಗ ಮತ್ತು ಎರಡು ತೊಡೆಗಳ ಮುಂಭಾಗಕ್ಕೆ ತರಚಿದ ಗಾಯಗಳಾಗಿದ್ದು,ಹೊಟ್ಟೆಗೆ ಒಳನೋವಾಗಿರುವುದಾಗಿದೆ. ಅಪಘಾತದಿಂದ ಗಾಯಗೊಂಡ ಇವರುಗಳನ್ನು ಅವರ ಪರಿಚಯದವರಾದ ಇಬ್ರಾಹಿಂ ಮತ್ತು ತೌಪೀಕ್‌ ಎಂಬವರು ಉಡುಪಿಯ ಆದಶ೯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಚಿಕಿತ್ಸೆ ಪಡೆದುಕೊಂಡು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಗೆ ಬಂದು ದಾಖಲಾಗಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ : 86/2022 ಕಲಂ 279,337, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

 

ಇತರ ಪ್ರಕರಣ

  • ಗಂಗೊಳ್ಳಿ: ದಿನಾಂಕ: 19/08/2022 ರಂದು ಗಂಗೊಳ್ಳಿ ಠಾಣಾ ಪಿಎಸ್‌ಐ ವಿನಯ ಕೊರ್ಲಹಳ್ಳಿ ರವರು ಸಿಬ್ಬಂದಿಗಳೊಂದಿಗೆ ಠಾಣಾ ಸರಹದ್ದಿನಲ್ಲಿ ರೌಂಡ್ಸ್‌ ಕರ್ತವ್ಯದಲ್ಲಿರುವಾಗ ತ್ರಾಸಿ ಗ್ರಾಮದ ತ್ರಾಸಿ ಹೊಸಪೇಟೆ ಬಳಿ ಬೀಚ್‌ನಲ್ಲಿ ಕೆಲವು ಹುಡುಗರು ಕುಳಿತು ಗಾಂಜಾ ಸೇವಿಸುತ್ತಿರುವುದಾಗಿ ಬಾತ್ಮೀದಾರರಿಂದ ದೊರೆತ ಮಾಹಿತಿಯಂತೆ ಸಿಬ್ಬಂದಿಯವರೊಂದಿಗೆ ಸದ್ರಿ ಸ್ಥಳಕ್ಕೆ 19:30 ಗಂಟೆಗೆ ಹೋಗಿ  ಪರಿಶೀಲಿಸಲಾಗಿ 4 ಜನರು ಕುಳಿತುಕೊಂಡಿರುವುದು  ಕಂಡು ಬಂದಿದ್ದು, ಅವರ ಹೆಸರು ವಿಳಾಸ ಕೇಳಲಾಗಿ 1) ರಕ್ಷತ್‌ ವಿಕ್ಟರ್‌ ರೋಡಿಗ್ರಸ್‌, 2) ಶ್ರೀಧರ್‌ ಎಸ್‌ ಗೊಂಡಾ 3) ನಾಗೇಂದ್ರ ನಾಯ್ಕ್‌ 4) ದಿನೇಶ್‌ ಶನಿಯಾರ್‌ ನಾಯ್ಕ ಎಂಬುವುದಾಗಿ ತಿಳಿಸಿದ್ದು ಇವರುಗಳು ಗಾಂಜಾದಂತಹ ಅಮಲು ಪದಾರ್ಥ ಸೇವನೆ ಮಾಡಿರುವ ಬಗ್ಗೆ ಅನುಮಾನ ಬಂದಿರುವುದರಿಂದ  ಇವರುಗಳನ್ನು ಸಿಬ್ಬಂದಿಯವರೊಂದಿಗೆ ಕುಂದಾಪುರ ಶ್ರೀ ಮಾತಾ ಆಸ್ಪತ್ರೆ ವೈಧ್ಯಾದಿಕಾರಿಯವರ ಮುಂದೆ ಹಾಜರುಪಡಿಸಿ ವೈದ್ಯಕೀಯಾ ಪರೀಕ್ಷೆಗೊಳಪಡಿಸಿದಾಗ ಇವರುಗಳ ಪೈಕಿ ದಿನೇಶ್‌ ಶನಿಯಾರ್‌ ನಾಯ್ಕ,(32 ವರ್ಷ)  ತಂದೆ:ಶನಿಯಾರ್‌ ನಾಯ್ಕ,  ವಾಸ: ತೆಂಗಿನಗುಂಡಿ, ಹೆಬ್ಬಾಳೆ ಗ್ರಾಮ, ಭಟ್ಕಳ್‌, ಉತ್ತರ ಕನ್ನಡ ಜಿಲ್ಲೆ. ಎಂಬವರು ಗಾಂಜಾ ಸೇವನೆ ಮಾಡಿರುವ ಬಗ್ಗೆ ವರದಿ ನೀಡಿದಂತೆ ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ : 78/2022 ಕಲಂ: 27(B) NDPS Act ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 20-08-2022 06:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080