ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ:

 • ಗಂಗೊಳ್ಳಿ: ದಿನಾಂಕ 19.08.2021 ರಂದು ಪಿರ್ಯಾದಿ ರೋಹಿತ್‌ ಪ್ರಾಯ 20 ತಂದೆ: ಜಯರಾಮ ಮೋಗವೀರವಾಸ:ಹವಳಜ್ಜಿ ಮನೆ ತೊಪ್ಲು ಹಕ್ಲಾಡಿ ಅಂಚೆ ಮತ್ತು ಗ್ರಾಮ ಇವರು ತನ್ನ ಮನೆಯಾದ ಹಕ್ಲಾಡಿ ತೊಪ್ಲುವಿನಿಂದ ತನ್ನ ಬಾಬ್ತು KA.20.K.6245.ನೇ ಮೋಟಾರ್‌ ಸೈಕಲ್ ನಲ್ಲಿ ಧನುಷ್‌ ರವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ನಾಡಾ ಐಟಿಐ ಕಾಲೇಜಿಗೆ ಗುಡ್ಡಮ್ಮಾಡಿ ಮಾರ್ಗವಾಗಿ ಹೋಗುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 9:45 ಗಂಟೆಗೆ ಸೇನಾಪುರ ಗ್ರಾಮದ ತೆಂಗಿನಗುಂಡಿ ಎಂಬಲ್ಲಿ ತಲುಪುವಾಗ್ಗೆ ನಾಡಾ ಕಡೆಯಿಂದ ಬಂಟ್ವಾಡಿ ಕಡೆಗೆ KA.20.MC.0193 ನೇ  ಕಾರನ್ನು ಅದರ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ತಿರುವು ರಸ್ತೆಯಲ್ಲಿ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್‌ ಸೈಕಲ್‌ ಗೆ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಸಹಸವಾರ ಧನುಷ್‌ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಬಲಕಾಲಿ ಹೆಬ್ಬೆರಳು ಮುರಿದಿದ್ದು, ಬಲಕೈಗೆ ಗಾಯ ಹಾಗೂ ಸಹ ಸವಾರ ಧನುಷ್‌ ಗೆ ಬಲಕಾಲು ಹಾಗೂ ಬಲಕಣ್ಣಿಗೆ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರ ಆದರ್ಶ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ 75/2021 ಕಲಂ 279, 337, 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣಗಳು:

 • ಮಲ್ಪೆ: ದಿನಾಂಕ  16-08-2021   ರಂದು  ಸಂಜೆ 18-00  ಗಂಟೆಗೆ  ಪಿರ್ಯಾದಿ ಶರತ್  ಪ್ರಾಯ   24  ವರ್ಷ ತಂದೆ  ಶೇಖರ ವಾಸ   ಈಶ್ವರ ನಗರ  ಮಾಹಲಿಂಗೇಶ್ವರ ದೇವಸ್ಥಾನ  ಬಳಿ  ತೆಂಕನಿಡಿಯೂರು  ಗ್ರಾಮ ಇವರು  ತನ್ನ  ಮನೆಯ ಹತ್ತಿರ  ಇರುವ  ತನ್ನ  ಸ್ನೇಹಿತ  ಕಾರ್ತಿಕ್  ರವರ ಮನೆಯ ಅಂಗಳಕ್ಕ  ಬಂದು   ಕಾರ್ತಿಕ್ ನನ್ನು   ಕರೆದಾಗ  ಕಾರ್ತಿಕನ ಅಕ್ಕನ ಗಂಡ  ರೋಹಿತ್  ಎಂಬವನು ಒಮ್ಮೇಲೆ  ಮನೆಯಿಂದ  ಹೊರೆಗೆ  ಬಂದು  ಪಿರ್ಯಾದಿದಾರರ ಎದೆಗೆ  ಕೈ ಹಾಕಿ ದೂಡಿದ  ಪರಿಣಾಮ  ಪಿರ್ಯಾದಿದಾರರು     ಅಂಗಳಕ್ಕೆ ಬಿದ್ದು  ಬೊಬ್ಬೆ  ಹಾಕಿದಾಗ  ಪಿರ್ಯಾದಿದಾರರ  ತಂದೆ  ಶೇಖರ   ಎಂಬವರು ಅಲ್ಲಿಗೆ  ಬಂದಾಗ  ಆರೋಪಿ  ಪಿರ್ಯಾದಿದಾರರಿಗೆ  ಹೊಡಯಲು  ಬೀಸಿದ ಕತ್ತಿ   ಪಿರ್ಯಾದಿದಾರರ ತಂದೆಯ  ಬಲ ಕಾಲಿನ ಪಾದಕ್ಕೆ  ತಾಗಿ  ರಕ್ತ ಗಾಯ ಆಗಿರುತ್ತದೆ. ಪಿರ್ಯಾದಿದಾರರು ಬಿದ್ದ  ಪರಿಣಾಮ   ಪಿರ್ಯಾದಿದಾರರ  ಬಲ ಕಾಲಿನ ಮೊಣಗಂಟಿಗೆ  ಒಳ ಗುದ್ದಿದ ನೋವು ಆಗಿರುತ್ತದೆ. ಎಡ ಕೈಯ  ಹೆಬ್ಬೆಳರಿಗೆ   ಮೂಳೆ ಮುರಿತದ ಗಾಯ  ಹಾಗೂ  ಎಡ ಕೈಯ ಮೊಣಗಂಟಿಗೆ  ಗಾಯ ಆಗಿರುತ್ತದೆ. ಆರೋಪಿ ಪಿರ್ಯಾದಿದಾರರಿಗೆ ,  ಪಿರ್ಯಾದಿದಾರರ ತಾಯಿ, ತಂದೆಗೆ   ಅವಾಚ್ಯ ಶಬ್ದಗಳಿಂದ  ಬೈದು    ಜೀವ ಬೆದರಿಕೆ  ಹಾಕಿರುತ್ತಾನೆ. ಗಾಯಗೊಂಡ ಪಿರ್ಯಾದಿದಾರರನ್ನು  ದಿನಾಂಕ 17-08-2021  ರಂದು ಪಿರ್ಯಾದಿದಾರರ ತಾಯಿ   ಉಡುಪಿ  ಹೈಟೆಕ್ ಆಸ್ಪತ್ರೆಗೆ  ಕರೆದುಕೊಂಡು ಬಂದು ದಾಖಲಿಸಿದ್ದು ,  ಪಿರ್ಯಾದಿದಾರರ ತಂದೆ ಶೇಖರ  ಇವರನ್ನು  ದಿನಾಂಕ 18-08-2021  ರಂದು  ಉಡುಪಿ  ಜಿಲ್ಲಾ ಆಸ್ಪತ್ರೆಗೆ   ದಾಖಲಿಸಿರುತ್ತಾರೆ. ಪಿರ್ಯಾದಿದಾರರಿಗೆ   ಹಾಗೂ ಆರೋಪಿಗೆ   ಹಳೆಯ ದ್ವೇಷ ಇದ್ದು   ಇದೇ ಕಾರಣದಿಂದ  ಹಲ್ಲೆ ಮಾಡಿರುವುದಾಗಿದೆ. ಈ ಬಗ್ಗೆ ಮಲ್ಪೆ ಠಾಣಾ ಅಪರಾಧ ಕ್ರಮಾಂಕ  96/2021 ಕಲಂ 323 325 324 504 506  ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಉಡುಪಿ : ಮಾನ್ಯ ನ್ಯಾಯಾಲಯದ ಖಾಸಗಿ ಪಿರ್ಯಾದು ನಂಬ್ರ 53/2021 ರಂತೆ  ಪಿರ್ಯಾದಿ : ನಿತಿನ್‌ (28) ತಂದೆ: ಜಯ ಪೂಜಾರಿ ವಾಸ: ಮನೆ ನಂಬ್ರ: 6-118ಕೆ5, ಸರಿತಾ ನಿಲಯ, ಹನುಮಂತ ನಗರ, ಪುತ್ತೂರು ಗ್ರಾಮ ಇವರು ಇನ್ನೋವಾ ಕಾರು ನಂಬ್ರ: KA 50 T 3429 ನೇದನ್ನು ಹೊಂದಿದ್ದು, ಆರೋಪಿಯು ಸದ್ರಿ ಕಾರನ್ನು ಖರೀದಿಸಲು ಪ್ರಸ್ತಾಪಿಸಿ, ದಿನಾಂಕ 01/08/2019 ರಂದು ರೂ. 9,00,000/- ಕ್ಕೆ ಉಭಯತ್ರರರು ವಾಹನ ವಿಕ್ರಯದ ಕುರಿತು ಕರಾರು ಮಾಡಿಕೊಂಡು, ಅದರಂತೆ ಆರೋಪಿಯು ರೂ. 1,36,000/- ಹಣವನ್ನು ಪಿರ್ಯಾದುದಾರರಿಗೆ ನೀಡಿದ್ದು, ಉಡುಪಿ ಮುದ್ರಾಂಕ ಸೌಹಾರ್ದ ಸಹಕಾರಿ ನಿ. ಯಲ್ಲಿರುವ ವಾಹನ ಸಾಲದ ಬಾಬ್ತು ಉಳಿದ ಹಣ ರೂ. 7,64,000/- ವನ್ನು ಕಟ್ಟುವುದಾಗಿ ಒಪ್ಪಿಕೊಂಡು, ಕರಾರಿನಂತೆ ಆರೋಪಿಯು ಸಾಲದ ಕಂತನ್ನು ಕಟ್ಟದೇ ಇದ್ದು, ಈ ಬಗ್ಗೆ ಪಿರ್ಯಾದುದಾರರು ವಿಚಾರಿಸಿದಾಗ ಆರೋಪಿಯು ಪಿರ್ಯಾದುದಾರರಿಗೆ, ನೀನು ಏನು ಬೇಕಾದರೂ ಮಾಡು ನಾನು ಹಣವನ್ನು ಕಟ್ಟುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ಬೈದು, ಪಿರ್ಯಾದುದಾರರಿಗೆ ಮೋಸ, ವಂಚನೆ ಎಸಗಿರುವುದಾಗಿದೆ.ಈ ಬಗ್ಗೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ  117/2021 ಕಲಂ: 403,  415, 420, 421, 504   ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣಗಳು:

 • ಕಾರ್ಕಳ  ಪಿರ್ಯಾದಿದಾರರ ತಮ್ಮ ರಾಜೇಂದ್ರ ಪ್ರಸಾದ ಪ್ರಾಯ 47 ವರ್ಷ ಇವರು ಕಾರ್ಕಳ ತಾಲೂಕು, ನಂದಳಿಕೆ ಗ್ರಾಮದ ನಿವಾಸಿಯಾಗಿದ್ದು, ಮೃತರು ಕಳೆದ 17 ವರ್ಷಗಳಿಂದ ದುಬೈಯಲ್ಲಿ ಕೆಲಸಮಾಡಿಕೊಂಡಿದ್ದು, ರಜೆಯಲ್ಲಿ ಬಂದಿದ್ದು, ಕೋವಿಡ್  19 ಹಿನ್ನೆಲೆಯಲ್ಲಿ ವಾಪಸ್ಸು ಹೋಗಲು ಆಗದೇ ಇದ್ದು, ಇದರಿಂದ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಇದೇ ಕಾರಣದಿಂದ ಮನನೊಂದು ದಿನಾಂಕ 17/08/2021 ರಂದು 12:15 ಗಂಟೆಯಿಂದ 19/08/2021 ರ 11:30 ಗಂಟೆಯ ಮಧ್ಯಾವಧಿಯಲ್ಲಿ ಮನೆಯ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣಾ ಯು.ಡಿ.ಆರ್‌ ಸಂಖ್ಯೆ 28/2021 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 20-08-2021 06:32 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080