ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

 • ಕೋಟ: ಪಿರ್ಯಾದಿದಾರರಾದ ರಾಜೇಂದ್ರ ಕುಮಾರ್ ಸೋನಿ (55), ತಂದೆ:ಬಯ್ಯಾಲಾಲ್ ಸೋನಿ,ವಾಸ: ಶಂಕರ ನಗರ ಭಗುದಾನ್ ಬೈತೂರ್ ಜಿಲ್ಲೆ, ಮದ್ಯಪ್ರದೇಶ್ ಇವರು MH-09-HH-8176 ನೇ ಅಶೋಕ್ ಲೈಲ್ಯಾಂಡ್ ಲಾರಿಯಲ್ಲಿ ಚಾಲಕನಾಗಿದ್ದು, ಲಾರಿಯಲ್ಲಿ ಜಿತೇಂದ್ರ ಭರಡೆ ಎಂಬುವವರು ಕಂಡೆಕ್ಟರ್ ಆಗಿದ್ದು, ಲಾರಿಯು ಗೂಡ್ಸ್ ವಾಹನವಾಗಿದ್ದು, ಮದ್ಯಪ್ರೇಶದ ನಸರುಲ್ ಗಂಜ್ ಎಂಬಲ್ಲಿಂದ ಹೆಸರುಬೇಳೆ ಲೋಡ್ ಮಾಡಿಕೊಂಡು ಕೇರಳದ ಕಣ್ಣೂರಿಗೆ ಹೊರಟಿದ್ದು, ಲಾರಿಯಲ್ಲಿ ದಿನಾಂಕ 13/08/2021 ರಂದು ಸಂಜೆ ರಾಷ್ಟ್ರೀಯ ಹೆದ್ದಾರಿ 66 ರಸ್ತೆಯಲ್ಲಿ ಭಟ್ಕಳ ಕಡೆಯಿಂದ ಮಂಗಳೂರು ಕಡೆಗೆ ಸಾಗುತ್ತಾ, ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ಕೋಟಾದ ಚಿತ್ರಪಾಡಿ ಶಾಲೆಯ ಬಳಿಯಲ್ಲಿನ ಪೂರ್ವ ಪಥದ ರಸ್ತೆಯ ಬದಿಯಲ್ಲಿ ಲಾರಿಯನ್ನು ಊಟ ಹಾಗೂ ವಿಶ್ರಾಂತಿಯ ಬಗ್ಗೆ ಬದಿಯಲ್ಲಿ ನಿಲ್ಲಿಸಿಕೊಂಡಿದ್ದು ಲಾರಿಯ ಕಂಡೆಕ್ಟರ್ ಜಿತೇಂದ್ರ ಭರಡೆ ಎಂಬುವವರು ಹತ್ತಿರದ ಚಿತ್ರಪಾಡಿ ಪೆಟ್ರೋಲ್ ಬಂಕಿನಿಂದ ನೀರನ್ನು ತರಲು ರಾಷ್ಟ್ರೀಯ ಹೆದ್ದಾರಿ 66 ರಸ್ತೆಯ ಪೂರ್ವ ಪಥದ ರಸ್ತೆಯ ತೀರ ಬದಿಯಲ್ಲಿ ದಿನಾಂಕ 13/08/2021 ರಂದು ಸಂಜೆ 7:20 ಗಂಟೆಯ ಸಮಯಕ್ಕೆ ರಸ್ತೆ ದಾಟಲು ನಿಂತುಕೊಂಡಿದ್ದಾಗ, ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಒಂದು ಮೋಟಾರು ಸೈಕಲ್ ಸವಾರನು ತನ್ನ ಬಾಬ್ತು ಮೋಟಾರು ಸೈಕಲ್ಲನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಾ ರಸ್ತೆಯ ತೀರ ಎಡ ಬದಿಗೆ ಚಲಾಯಿಸಿ, ರಸ್ತೆ ದಾಟಲು ನಿಂತುಕೊಂಡಿದ್ದ ಜಿತೇಂದ್ರ ಭರಡೆ ರವರಿಗೆ ಬಲ ಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಜಿತೇಂದ್ರ ಭರಡೆ ಮತ್ತು ಮೋಟಾರು ಸೈಕಲ್ ಸವಾರ ಮೋಟಾರು ಸೈಕಲ್ ಸಮೇತನಾಗಿ ರಸ್ತೆಗೆ ಬಿದ್ದಿದ್ದು, ಕೂಡಲೇ ಪಿರ್ಯಾದಿದಾರರು ಮತ್ತು ಅಲ್ಲಿ ಸೇರಿದ ಜನರು ಹತ್ತಿರಕ್ಕೆ ಹೋಗಿ ಉಪಚರಿಸಿ ನೋಡಲಾಗಿ ಈ ಅಪಘಾತದ ಪರಿಣಾಮ ಜಿತೇಂದ್ರ ಭರಡೆ ರವರಿಗೆ ಈ ಅಪಘಾತದಿಂದ ಬಲ ಕೈಯ ಬಲ ಭುಜಕ್ಕೆ, ಬಲಕಾಲಿಗೆ ತೀವೃ ಮೂಳೆ ಮುರಿತದ ಗಾಯ ಹಾಗೂ ದೇಹಕ್ಕೆ ನೋವು ಉಂಟಾಗಿದ್ದು, ಆಲ್ಲದೇ ಮೋಟಾರು ಸೈಕಲ್ ಸವಾರ ಚೇತನ್ ಎಂಬುವವರಿಗೆ ಮುಖಕ್ಕೆ ಕಣ್ಣಿನ ಕೆಳಗೆ ದೇಹಕ್ಕೆ ರಕ್ತಗಾಯವಾಗಿರುತ್ತದೆ. ಹಾಗೂ ಅಪಘಾತವನ್ನುಂಟು ಮಾಡಿದ ಮೋಟಾರು ಸೈಕಲ್ ನಂಬ್ರ KA-20-EH-1640 ನೇಯದಾಗಿದ್ದು, ಕೂಡಲೇ ಪಿರ್ಯಾದಿದಾರರು ಮತ್ತು ಅಲ್ಲಿ ಸೇರಿದ ಜನರು ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ 108 ಅಂಬುಲೈನ್ಸ್ ವಾಹನದಲ್ಲಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ ಗಾಯಗೊಂಡಿದ್ದ ಜಿತೇಂದ್ರ ಭರಡೆರವರು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವಾಗ, ತನಗೆ ಅಪಘಾತದಿಂದ ಉಂಟಾದ ಗಾಯದ ಬಗ್ಗೆ ತಾನು ಊರಿನಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯುವುದಾಗಿ ತಿಳಿಸಿ ಕೇಸಿನ ಅಗತ್ಯ ಇಲ್ಲವಾಗಿ ತಿಳಿಸಿದ್ದು, ಆದರೆ ಈಗ ಜಿತೇಂದ್ರ ಭರಡೆರವರಿಗೆ ಚಿಕಿತ್ಸೆಯ ಖರ್ಚು ಹೆಚ್ಚಾಗಿರುವುದರಿಂದ ಕಾನೂನು ಕ್ರಮ ಕೇಸಿನ ಅಗತ್ಯ ಇದ್ದು, ಈ ಬಗ್ಗೆ ಊರಿಗೆ ಹೋಗಿ ಅಲ್ಲಿನ ಮನೆಯವರಲ್ಲಿ ಚರ್ಚಿಸಿ ಇಲ್ಲಿಗೆ ಬಂದು ದೂರು ನೀಡಲು ತಡವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 154/2021 ಕಲಂ: 279,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.         
 •  ಉಡುಪಿ: ಪಿರ್ಯಾದಿದಾರರಾದ ಉಬೈದುಲ್ಲಾ ಮೊಹಮ್ಮದ್ ಆಲಿ (39) , ತಂದೆ: ಮೊಹಮ್ಮದ್ ಆಲಿ, ವಾಸ: ಫ್ಲಾಟ್ ನಂ: 502 “ಬಿ” ವಿಂಗ್ ಸಿಟಿ ಗೇಟ್ ವೇ ಶಾಂತಿನಗರ ಕ್ರಾಸ್, 76 ಬಡಗುಬೆಟ್ಟು ಗ್ರಾಮ ಉಡುಪಿ ಜಿಲ್ಲೆ ಇವರ ಮಗ ಮೊಹಮ್ಮದ್ ಉಜೈರ್ ಖಾದರ್ ದಿನಾಂಕ: 19/08/2021 ರಂದು ಮನೆಯ ಹತ್ತಿರದ 76 ಬಡಗುಬೆಟ್ಟು ಗ್ರಾಮದ ಪ್ರೆಶ್ ಫ್ರೂಟ್ಸ್ ಎಂಡ್ ವೆಜಿಟೇಬಲ್ ಅಂಗಡಿಗೆ ಹೋಗಿ ವಾಪಾಸು ಮನೆಗೆ ಬರಲು ರಸ್ತೆ ಬದಿಯಲ್ಲಿ ಸಂಜೆ 5:00 ಗಂಟೆಗೆ ನಿಂತಿದ್ದಾಗ, ಬೈಲೂರು ಕಡೆಯಿಂದ ಉಡುಪಿ ಕಡೆಗೆ KA-20-P-7627ನೇ ಕಾರಿನ ಚಾಲಕ ಸಂತೋಷ್ ಕುಮಾರ್ ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಿಂತಿದ್ದ ಮೊಹಮ್ಮದ್ ಉಜೈರ್ ಖಾದರ್ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಬಲಕಾಲಿನ ಮೂಳೆಮುರಿತವಾಗಿ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 48/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ 

 • ಕುಂದಾಪುರ: ಪಿರ್ಯಾದಿದಾರರಾದ ಉದಯ(37), ತಂದೆ: ದಿ ಅಂತ, ವಾಸ: ಏಕದಂತ ನಿಲಯ, ಭಂಡಾರ್‌ಕಾರ್ರ್ಸ್‌ ಕಾಲೇಜು ಹಿಂದೆ, ಸಲೀಂ ಆಲಿ ರಸ್ತೆ, ವಢೇರಹೋಬಳಿ ಗ್ರಾಮ, ಕುಂದಾಪುರ ಇವರ ತಂಗಿ ಶ್ರೀಮತಿ ವಿಜಯಲಕ್ಷ್ಮೀ (35) ಇವರು ಮದುವೆಯಾಗಿ ಸುಮಾರು 16 ವರ್ಷ ಕಳೆದಿದ್ದು ಗಂಟಲು ಬೇನೆ ಮತ್ತು ಬೆನ್ನಿನ ಹಿಂಬಾಗ ಗಡ್ಡೆ ಬೆಳೆದಿದ್ದು ಆರೋಗ್ಯ ಸಮಸ್ಯೆಯಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 20/08/2021 ರಂದು ಬೆಳಿಗ್ಗೆ 11:15 ಗಂಟೆಗೆ ತನ್ನ ಮನೆಯ ಒಳಗಡೆ ಮಾಡಿನ ಪಕ್ಕಾಸಿಗೆ ಚೂಡಿದಾರದ ವೇಲ್ ಕಟ್ಟಿಕೊಂಡು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 31/202 ಕಲಂ: 174 CrPC ಯಂತೆ ಪ್ರಕರಣ ದಾಖಲಾಗಿರುತ್ತದೆ.              

ಇತರ ಪ್ರಕರಣ 

 • ಗಂಗೊಳ್ಳಿ: ದಿನಾಂಕ 20/08/2021 ರಂದು ತ್ರಾಸಿ ಗ್ರಾಮದ ಪ್ರವಾಸಿ ಮಂದಿರದ ಬಳಿ ಗಾಳಿ ಮರದ ಕೆಳಗೆ 1) ನಿಶಾನ್‌ ಪ್ರಾಯ 21 ವರ್ಷ, ತಂದೆ: ಸುಕುಮಾರ ದೇವಾಡಿಗ ,ವಾಸ: ರಾ.ಹೆ 66 ರ ಬಳಿ ಮುಳ್ಳಿಕಟ್ಟೆ ಹೊಸಾಡು ಗ್ರಾಮ ಕುಂದಾಪುರ ತಾಲೂಕು, 2) ಪ್ರಥಮ್‌ ಕುಮಾರ್‌ ಪ್ರಾಯ 20 ವರ್ಷ, ತಂದೆ: ರಾಘವೇಂದ್ರ ವಾಸ: ಶಾಲೆಬೆಟ್ಟು ಕೇಶವ ಬೊಬ್ಬರ್ಯ ದೇವಸ್ಥಾನ ಬಳಿ ಮರವಂತೆ ಗ್ರಾಮ ಬೈಂದೂರು ತಾಲೂಕು ಇವರು ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ನಂಜಾನಾಯ್ಕ್‌ ಎನ್‌, ಪೊಲೀಸ್‌ ಉಪನಿರೀಕ್ಷಕರು, ಗಂಗೊಳ್ಳಿ ಪೊಲೀಸ್‌ ಠಾಣೆ ಇವರು ದಾಳಿ ನಡೆಸಿ ಆಪಾದಿತರನ್ನು ವಶಕ್ಕೆ ಪಡೆದು ಆಪಾದಿತರಿಂದ 5000/- ರೂಪಾಯಿ ಮೌಲ್ಯದ 120 ಗ್ರಾಂ ತೂಕದ ಗಾಂಜಾ, ಚಿಕ್ಕಚಿಕ್ಕ ಪ್ಲಾಸ್ಟಿಕ್‌ ಜಿಪ್‌ ಕವರ್‌-15, Wild Craft ಬ್ಯಾಗ್‌-1 ಹಾಗೂ ನಗದು 680/- ರೂಪಾಯಿ ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 76/2021 ಕಲಂ: 8(ಸಿ), 20(ಬಿ),(ii)(ಎ) ಎನ್‌.ಡಿ.ಪಿ.ಎಸ್ ಕಾಯ್ದೆ-1985 ರಂತೆ ಪ್ರಕರಣ ದಾಖಲಾಗಿರುತ್ತದೆ.            

ಇತ್ತೀಚಿನ ನವೀಕರಣ​ : 20-08-2021 06:25 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080