ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

 • ಬ್ರಹ್ಮಾವರ: ಪಿರ್ಯಾದಿದಾರರಾದ ಸಂತೋಷ ಶೆಟ್ಟಿ (55), ತಂದೆ: ದಿ. ಅಚ್ಚಣ್ಣ ಶೆಟ್ಟಿ, ವಾಸ: ಅನುಗೃಹ, ಹೊಸಾಳ ಹೊಸಮನೆ, ಬಾರ್ಕೂರು ಅಂಚೆ, ಹೊಸಾಳ ಗ್ರಾಮ, ಬ್ರಹ್ಮಾವರ ತಾಲೂಕು ಇವರ ಅಣ್ಣ ಚಂದ್ರಶೇಖರ ಶೆಟ್ಟಿ (58) ರವರು ಹೆಂಡತಿ ಮಕ್ಕಳೊಂದಿಗೆ ಮುಂಬಯಿಯಲ್ಲಿ ವಾಸವಾಗಿದ್ದು, ಕಳೆದ ಒಂದು ತಿಂಗಳ ಹಿಂದೆ ಊರಿಗೆ ಬಂದಿರುವುದಾಗಿದೆ. ಅವರಿಗೆ ಇತ್ತೀಚೆಗೆ ಒಂದು ವರ್ಷದಿಂದ ಕಣ್ಣು ಸರಿಯಾಗಿ ಕಾಣದೇ ಇದ್ದು, ದೃಷ್ಠಿ ಕಡಿಮೆಯಾಗಿರುತ್ತದೆ. ಈ ಬಗ್ಗೆ ವೈಧ್ಯರಲ್ಲಿ ಚಿಕಿತ್ಸೆ ಕೊಡಿಸಿದರೂ ಸಹ ಸರಿಯಾಗಿ ಗುಣಮುಖವಾಗದೇ ಇದ್ದು, ಅದೇ ಚಿಂತೆಯಿಂದ ಅವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 19/07/2022 ರಂದು ಮಧ್ಯಾಹ್ನ 4:00  ಗಂಟೆಯಿಂದ ಸಂಜೆ 6:45 ಗಂಟೆಯ ಮಧ್ಯಾವಧಿಯಲ್ಲಿ  ಮನೆಯ ಹೊರಗಿನ ಸೀಟ್‌ ಮಾಡಿನ ಅಡ್ಡಪಟ್ಟಿಗೆ ನೈಲಾನ್‌ ಹಗ್ಗವನ್ನು ಕಟ್ಟಿ ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 34/2022 ಕಲಂ: 174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಕಳವು ಪ್ರಕರಣ

 • ಉಡುಪಿ: ಪಿರ್ಯಾದಿದಾರರಾದ ವಾಣಿ ವಿ ರಾವ್ (58), ಗಂಡ:ದಿ. ವಿಠಲ ರಾವ್‌, ವಾಸ: ಕೋರ್ಟ್ ಹಿಂಬದಿ ರಸ್ತೆಯ ರುಕ್ಮಿಣಿ ಕೃಷ್ಣ, ಮೂಡನಿಡಂಬೂರು ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಕೋರ್ಟ್ ಹಿಂಬದಿ ರಸ್ತೆಯ ರುಕ್ಮಿಣಿ ಕೃಷ್ಣ ಎಂಬ ಹೆಸರಿನ ಮನೆಯಲ್ಲಿ ವಾಸವಿದ್ದು, ದಿನಾಂಕ 19/07/2022 ರಂದು ಬೆಳಿಗ್ಗೆ 10:45 ಗಂಟೆಯಿಂದ 14:10 ಗಂಟೆ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಮನೆಯ ಒಳಪ್ರವೇಶಿಸಿ, ಬೆಡ್‌ರೂಂನಲ್ಲಿದ್ದ ಕಬ್ಬಿಣದ ಕಪಾಟಿನ ಲಾಕರ್‌ನಲ್ಲಿ ಇರಿಸಿದ್ದ ಬೂದು ಬಣ್ಣದ ಪರ್ಸ್ ನಲ್ಲಿದ್ದ  ರೂಪಾಯಿ 45,000/-  ನಗದು ಮತ್ತು ಕಪ್ಪು ಬಣ್ಣದ ವ್ಯಾನಿಟಿ ಬ್ಯಾಗ್‌ನಲ್ಲಿರಿಸಿದ್ದ 1) 5 ಪವನ್ ತೂಕದ ಪಚ್ಚೆಕಲ್ಲು ಇರುವ ಚಿನ್ನದ ಬ್ರೇಸ್‌ಲೇಟ್‌, 2) 6 ಪವನ್‌ ತೂಕದ ಮುತ್ತಿನ ಬಳೆ-2, 3) 5½ ಪವನ್‌ ತೂಕದ ಚಿನ್ನದ ಖಡಗ ಬಳೆಗಳು-2, 4) 6 ಪವನ್‌ ತೂಕದ ಚಿನ್ನದ ಸರ ಮತ್ತು 1 ಪವನ್‌ ತೂಕದ ಪೆಂಡೆಂಟ್‌, 5) 6 ಪವನ್‌ ತೂಕದ ಮಲ್ಲಿಗೆ ಮೊಗ್ಗು ಚಿನ್ನದ ಸರ, 6) 1½ ಪವನ್‌ ತೂಕದ ಚಿನ್ನದ ಸರ ಮತ್ತು ನೀಲಿ ಹರಳಿನ ಪೆಂಡೆಂಟ್‌, 7) ನೀಲಿ ಕಲ್ಲಿನ ಬೆಂಡೋಲೆ ಮತ್ತು ಕರಮಣಿ ಹರಳಿನ ಬೆಂಡೋಲೆ – 2 ಜೊತೆ, 8) ಜುಮ್ಕಿ ಮತ್ತು ಮಾಟಿ- 2 ಜೊತೆ, 9) 1 ಪವನ್‌ ತೂಕದ ಚಿನ್ನದ ತುಂಡುಗಳು ಮತ್ತು ಕೊಕ್ಕೆ, 10) 3 ಪವನ್‌ ತೂಕದ ಚಿನ್ನದ ನೆಕ್ಲೇಸ್‌, 11) 2½ ಪವನ್‌ ತೂಕದ ಗ್ರೇನೆಟ್‌ ಹರಳಿನ ನೆಕ್ಲೇಸ್‌ ಮತ್ತು 3 ಪವನ್‌ನ ಗ್ರೇನೆಟ್‌ ಹರಳಿನ ಬಳೆ, 12) 4 ಗ್ರಾಮ್‌ ನ ಚಿನ್ನದ ನಾಣ್ಯ-6 , 13) 4 ರೇಷ್ಮೆ ಸೀರೆಗಳು ಮತ್ತು 1 ಸಾಧಾರಣ ಸೀರೆಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತುಗಳ ಒಟ್ಟು ಮೌಲ್ಯ ರೂಪಾಯಿ 25,00,000/- ಆಗಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 113/2022 ಕಲಂ: 454,  380  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಲ್ಪೆ: ಪಿರ್ಯಾದಿದಾರರಾದ ಉಮೇಶ(44), ತಂದೆ: ಬಸವ ರಾಜ್, ವಾಸ: ದುರ್ಗನಿಲಯ ಎಲ್ಐಸಿ ಕಾಲನಿ ಶ್ರೀನಗರ  ತೆಂಕನಿಡಿಯೂರು ಇವರು ಸ್ವಂತ ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದು ,ಪಿರ್ಯಾದಿದಾರರ ಬಳಿ  600 ಸೆಂಟ್ರಿಂಗ್ ಸೀಟ್  ಮತ್ತು 5-6 ಸೆಟ್ ಪಿಲ್ಲರ ಬಾಕ್ಸ್  ಇದ್ದು ಪಿರ್ಯಾದಿದಾರರು  ಸಾಮಾಗ್ರಿಗಳನ್ನು  ತಮ್ಮ ಮನೆಯ ಕಂಪೌಂಡ್ ಹೊರಗೆ ಇಡುತ್ತಿದ್ದು ಕೆಲಸಕ್ಕೆ  ಬೇಕಾದ ಸಾಮಾಗ್ರಿಗಳನ್ನು ಕೆಲಸದ ಸ್ಥಳಗಳಿಗೆ ತೆಗೆದುಕೊಂಡು ಹೋಗುತ್ತಿದ್ದು, ಪಿರ್ಯಾದಿದಾರರು ತಮ್ಮ ಪಕ್ಕದ ಮನೆಯಾದ ಜಯಂತಿ  ರವರ  ಸೆಂಟ್ರಿಂಗ್ ಕೆಲಸ ವಹಿಸಿಕೊಂಡಿದ್ದು ,  ದಿನಾಂಕ 10/07/2022 ರಂದು ಸಂಜೆ 5:00 ಗಂಟೆಗೆ  80 ಶಿಟ್  ಹಾಗೂ 4 ಪಿಲ್ಲರ್  ಬಾಕ್ಸ್ ಗಳನ್ನು  ಪಕ್ಕದ ಮನೆಯ ಸೈಟ್  ಗೆ ತಂದು ಹಾಕಿದ್ದು, ದಿನಾಂಕ 19/07/2022 ರಂದು ಬೆಳಿಗ್ಗೆ 10:00 ಗಂಟೆಗೆ ಸೆಂಟ್ರಿಂಗ್ ಕೆಲಸ ಮಾಡಲು ಸೈಟ್ ಗೆ ಹೋದಾಗ ಅಲ್ಲಿ ಹಾಕಿದ್ದ 80 ಸೆಂಟ್ರಿಂಗ್ ಶಿಟ್ ಮತ್ತು 4 ಪಿಲ್ಲರ್  ಬಾಕ್ಸ್ ಗಳು ಇರದೆ ಇದ್ದು  ಯಾರೋ ಕಳ್ಳರು  ದಿನಾಂಕ 10/07/2022 ರಂದು ಸಂಜೆ 5:00  ಗಂಟೆಯಿಂದ ದಿನಾಂಕ 19/07/2022  ರ ಬೆಳಿಗ್ಗೆ  10:00  ಗಂಟೆಯ ಮಧ್ಯಾವಧಿ ಯಲ್ಲಿ ಕಳವು  ಮಾಡಿಕೊಂಡು  ಹೋಗಿದ್ದು, ಕಳವಾದ  80 ಸೆಂಟ್ರಿಂಗ್ ಶಿಟ್  ಮೌಲ್ಯ   80000/-  ರೂಪಾಯಿ ಮತ್ತು 4 ಪಿಲ್ಲರ್  ಬಾಕ್ಸ್ ಸೆಟ್ ಮೌಲ್ಯ  30000/- ರೂಪಾಯಿ ಆಗಿದ್ದು ಕಳವಾದ ಸಾಮಾಗ್ರಿಗಳ ಒಟ್ಟು ಮೌಲ್ಯ  1,10,000/- ಆಗಿರುತ್ತದೆ. ಈ ಬಗ್ಗೆ  ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 60/2022 ಕಲಂ: 379  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಟ್ಕಾ ಜುಗಾರಿ ಪ್ರಕರಣ

 • ಕೋಟ: ದಿನಾಂಕ 19/07/2022 ರಂದು ಮಧು ಬಿ.ಇ, ಪೊಲೀಸ್ ಉಪನಿರೀಕ್ಷಕರು, ಕೋಟ ಪೊಲೀಸ್ ಠಾಣೆ  ಇವರಿಗೆ ತೆಕ್ಕಟ್ಟೆ ಗ್ರಾಮದ ತೆಕ್ಕಟ್ಟೆ ಜಂಕ್ಷನ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿ ಆಡಿಸುತ್ತಿದ್ದ 1) ನರಸಿಂಹ (51), ತಂದೆ:ಬಚ್ಚು ನಾಯ್ಕ, ವಾಸ: ಸಿದ್ದಿ ಕೃಪಾ ಬೇಳೂರು ಕ್ರಾಸ್  ಉಳ್ತೂರು ಕುಂದಾಪುರ ತಾಲೂಕು, 2) ಬಾಬು ಪೂಜಾರಿ (53), ತಂದೆ: ಪಂಜು ಪೂಜಾರಿ, ವಾಸ: ಸಾನಿಧ್ಯ ನಿಲಯ ಕೊಮೆ ರಸ್ತೆ ತೆಕ್ಕಟ್ಟೆ  ಗ್ರಾಮ ಇವರನ್ನು ಹಿಡಿದು  ಮಟ್ಕಾ ಜುಗಾರಿ ಆಟಕ್ಕೆ ಬಳಸಿದ 3,150/- ರೂಪಾಯಿ, ಮಟ್ಕಾ ಚೀಟಿ, ಬಾಲ್‌ ಪೆನ್‌ ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ.  ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 112/2022 ಕಲಂ: 78 (i)(iii) ಕೆಪಿ ಆಕ್ಟ್‌ ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 20-07-2022 09:42 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080