ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾದ ಸಯ್ಯದ್ (18), ತಂದೆ: ಅಬ್ದುಲ್ ರೆಹಮಾನ್ ಕಾರ್ಬಾರಿ , ವಾಸ: “ಪ್ರಸಾದ್ ನಗರ”, ಬೆಳಪು ಗ್ರಾಮ ಮತ್ತು ಅಂಚೆ ಕಾಪು ತಾಲೂಕು ಇವರ ಅಣ್ಣ ಅಬ್ದುಲ್ಲಾ (23) ಎಂಬುವವರು ಪಡುಬಿದ್ರಿಯ ಎಸ್.ಬಿ.ಐ. ಬ್ಯಾಂಕ್ ಎಟಿಎಮ್ ಬಳಿ ಇರುವ ಯಾಸಿನ್ ಬಾಯ್ ಎಂಬುವವರ ಮೊಬೈಲ್ ಕಾರ್ನರ್ ಎಂಬ ಮೊಬೈಲ್ ಅಂಗಡಿಯಲ್ಲಿ ಕಳೆದ ಮೂರು ವರ್ಷಗಳಿಂದ ಮೊಬೈಲ್ ಟೆಕ್ನಿಷಿಯನ್ ಆಗಿ ಕೆಲಸ ಮಾಡಿಕೊಂಡಿದ್ದು,  ದಿನಾಂಕ 19/07/2021 ರಂದು ಮೊಬೈಲ್ ಡಿಸ್‌ಪ್ಲೆ ತರಲು ಅವರ KA-20-ET-0327 ನೇ ನಂಬ್ರದ ಟಿವಿಎಸ್‌‌ ಸ್ಕೂಟಿಯಲ್ಲಿ ರಾಷ್ಟ್ರೀಯ ಹೆದ್ದಾರಿ-66 ರ ಪಡುಬಿದ್ರಿ ಕಡೆಯಿಂದ ಉಡುಪಿ ಕಡೆಗೆ ಸಾಗುವ ಏಕಮುಖ ಸಂಚಾರ ರಸ್ತೆಯಲ್ಲಿ ಹೋಗುತ್ತಾ 11:45 ಗಂಟೆಗೆ ಕಾಪು ತಾಲೂಕು ತೆಂಕ ಎರ್ಮಾಳು ಗ್ರಾಮದ ನಾರಳ್ತಾಯ ಗುಡಿಯ ಹತ್ತಿರ ನವಿಲೊಂದು ಅಡ್ಡ ಬಂದಿದ್ದು, ಆ ನವಿಲಿಗೆ ಸ್ಕೂಟಿಯು ಡಿಕ್ಕಿ ಹೊಡೆದುದರಿಂದ ಅಬ್ದುಲ್ಲಾ  ಚಲಾಯಿಸುತ್ತಿದ್ದ ಸ್ಕೂಟಿಯ ನಿಯಂತ್ರಣ ಕಳೆದುಕೊಂಡು ಸ್ಕೂಟಿ ಸಮೇತ ಕೆಳಗೆ ಬಿದ್ದು, ತಲೆಗೆ ಗಂಭೀರ ಗಾಯಗೊಂಡಿದ್ದವರಿಗೆ ಪಡುಬಿದ್ರಿಯ ಸಿದ್ದಿವಿನಾಯಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿಯ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ, ಅಲ್ಲಿನ ವೈದ್ಯಾಧಿಕಾರಿಯವರು ಪರೀಕ್ಷಿಸಿ ಅಬ್ದುಲ್ಲಾ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಮತ್ತು ಅಪಘಾತದಲ್ಲಿ ನವಿಲು ಕೂಡಾ ಮೃತಪಟ್ಟಿರುತ್ತದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 71/2021 ಕಲಂ: 279, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಪಡುಬಿದ್ರಿ: ಪಿರ್ಯಾದಿದಾರರಾದ ವಿಶ್ವನಾಥ ಕೆ ಶೆಟ್ಟಿ (52), ತಂದೆ: ದಿ. ಕುಪ್ಪ ಶೆಟ್ಟಿ, ವಾಸ: ಸಂದೋಳಿಗೆ ಹಾಡಿ ಮನೆ, ರಾಜೀವಿ ನಿವಾಸ, ಇನ್ನಾ ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರ ಹೆಂಡತಿಯ ತಂಗಿಯ ಮಗ ರೋಶನ್ ಶೆಟ್ಟಿ(23) ಎಂಬುವವರು ಯಾವುದೇ ಕೆಲಸವಿಲ್ಲದೇ ಇದ್ದು, ಹೊರಗಡೆ ದುಡಿಯಲೂ ಸಹ ಹೋಗುತ್ತಿರಲಿಲ್ಲ. ಹಾಗಾಗಿ ಊರಿನ ಕೆಲವರಲ್ಲಿ ಕೈಸಾಲ ಮಾಡಿಕೊಂಡಿದ್ದು, ಅದನ್ನು ಹಿಂತಿರುಗಿಸಲು ಆಗದೇ, ಅದೇ ಚಿಂತೆಯಲ್ಲಿ ಜೀವನಲ್ಲಿ ಜಿಗುಪ್ಸೆಗೊಂಡು ದಿನಾಂಕ 19/07/2021 ರಂದು 15:45 ಗಂಟೆಯಿಂದ 17:00 ಗಂಟೆಯ ಮದ್ಯಾವಧಿಯಲ್ಲಿ ಕಾರ್ಕಳ ತಾಲೂಕು ಇನ್ನಾ ಗ್ರಾಮದ ಸಂದೋಳಿಗೆ ಹಾಡಿಯಲ್ಲಿನ ಗೇರು ಮರದ ರೆಂಬೆಗೆ ನೈಲಾನ್ ಹಗ್ಗವನ್ನು ಕಟ್ಟಿ, ಮತ್ತೊಂದು ತುದಿಯಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 17/2021, ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ಸುಧಾಕರ (25), ಪೂಜಾರಿ, ವಾಸ; ಶ್ರೀ ಮಹಾಸತಿ ನಿಲಯ, ಮುದ್ರಮಕ್ಕಿ, ಶಿರೂರು ಗ್ರಾಮ, ಬೈಂದೂರು ತಾಲೂಕು ಇವರ ಮಾವ ವಿಠಲ ಪೂಜಾರಿ (50) ರವರು ದಿನಾಂಕ 19/07/2021 ರಂದು ಕೃಷಿ ಕೆಲಸದ ನಿಮಿತ್ತ ಗದ್ದೆಗೆ ಹೋಗಿ ಸಂಜೆ 05:30 ಗಂಟೆಗೆ ಕೃಷಿ ಕೆಲಸ ಮುಗಿಸಿಕೊಂಡು ವಾಪಾಸ್ ಮನೆ ಕಡೆಗೆ ಬರುತ್ತಿರುವಾಗ ವಿಪರೀತ ಮಳೆಯಿಂದಾಗಿ ದಾರಿ ಮಧ್ಯ ವೆಂಕಟರಮಣ ದೇವಸ್ಥಾನದ ಕೆರೆಯ ದಡದಲ್ಲಿ ನಡೆದುಕೊಂಡು ಬರುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 26/2021  ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತರ ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾದ ನವೀನ ಶೆಟ್ಟಿ (66),  ದಾಮೋದರ  ಎಂ ಶೆಟ್ಟಿ (61),  ಮನೆ ನಂಬ್ರ 8-30  ಬಲ್ಮಗಂಧ ಕಡೇಕಾರು ಅಂಚೆ  ಕುಟುಂಬಕ್ಕೆ ಉಡುಪಿ ತಾಲೂಕು ಇವರು ಕಡೇಕಾರು ಗ್ರಾಮದ 11 ಸೆಂಟ್ಸು ಮತ್ತು ಸ.ನಂ:11/17, ಪುಂಜ, 17 ಸೆಂಟ್ಸು ಸ್ಥಿರಾಸ್ತಿಯು ಅವರ ತಂದೆ-ತಾಯಿಯವರು ಕಾಲವಾದ ನಂತರ ಎಲ್ಲಾ ಸಹೋದರ ಸಹೋದರಿಯವರ ಜಂಟಿ ಅನುಭವಕ್ಕೆ ಬಂದಿರುತ್ತದೆ. ಪಿರ್ಯಾದಿದಾರರ  ಸಹೋದರಿಯಾದ ಆರೋಪಿ  ಹರಿಣಾಕ್ಷಿ ಜೆ ಶೆಟ್ಟಿ ರವರು 1) ಶಶಿಕುಮಾರ್ ಶೆಟ್ಟಿ, 2) ನವೀನ ಚಂದ್ರ ಶೆಟ್ಟಿ, 3) ಮಹೇಶ್ ಎಂ ಶೆಟ್ಟಿ, 4) ನಾಗೇಶ್ ಎಂ ಶೆಟ್ಟಿ, 5) ಜಗದೀಶ್ ಎಂ ಶೆಟ್ಟಿ, 6) ದಾಮೋಧರ ಎಂ ಶೆಟ್ಟಿ, 7) ಪವಿತ್ರಾ  ರವರಿಗೆ ಗೊತ್ತಿಲ್ಲದಂತೆ 7 ಜನರ ನಕಲಿ ಸಹಿಯನ್ನು ಮಾಡಿ ಮೇಲೆ ತಿಳಿಸಿದ ಸ್ಥಿರಾಸ್ತಿಗಳನ್ನು 1 ನೇ ಆರೋಪಿತರ ಹೆಸರಿಗೆ ವರ್ಗಾವಣೆ ಮಾಡಿಕೊಂಡಿರುತ್ತಾರೆ,  1 ನೇ ಆರೋಪಿತರ ಗಂಡ ಆರೋಪಿ 2 ಕೆ ಜಯರಾಮ ಶೆಟ್ಟಿ ಮತ್ತು ಮಗ ಆರೋಪಿ 4 ರಕ್ಷಿತ್ ಶೆಟ್ಟಿ ಯವರು ಸಾಕ್ಷಿ ಹಾಕಿರುತ್ತಾರೆ. ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಪಿರ್ಯಾದಿದಾರರು  ಆರೋಪಿತರಲ್ಲಿ ಮಾತುಕತೆ ನಡೆಸುವ ವೇಳೆ ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ನಮಗೆ ಜಾಗ ನಮ್ಮ ಹೆಸರಿನಲ್ಲಿ ಆಗಿದೆ ಮತ್ತು ಇನ್ನೊಮ್ಮೆ ಜಾಗದ ವಿಚಾರದಲ್ಲಿ ಮಾತುಕತೆ ಮಾಡಿದರೆ ನಿಮಗೊಂದು ಗತಿ ಕಾಣಿಸುತ್ತೇವೆ ಎಂದು ಬೆದರಿಸಿದ್ದು ಪೋರ್ಡ್ ಕಂಪೆನಿಯ KA-20-MD-0075 ಕಾರನ್ನು 1 ನೇ ಆರೋಪಿತರ ಮನೆಯ ದಾರಿಗೆ ತಡೆಯಾಗಿ ನಿಲ್ಲಿಸಿ ಮನೆಯಿಂದ ಹೊರ ಬಾರದಂತೆ ಪ್ರತಿಬಂಧಿಸಿರುತ್ತಾರೆ.  ಆರೋಪಿತರು ನಕಲಿ ದಸ್ತಾವೇಜು ತಯಾರಿಸಿ ವಂಚಿಸಿ ಅಕ್ರಮ ಲಾಭಗಳಿಸುವ ದುರುದ್ದೇಶದಿಂದ ಕೂಡಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 88/2021 ಕಲಂ: 268, 283, 416, 417, 419, 420, 425, 441, 463 , 464, 465, 468, 469, 471, 506  ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 20-07-2021 09:37 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080