ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಹಿರಿಯಡ್ಕ: ದಿನಾಂಕ 20/07/2021 ರಂದು ಪಿರ್ಯಾದಿದಾರರಾದ ಶಂಕರ ಸಾಲಿಯಾನ್ (45), ತಂದೆ: ಸುಬ್ಬ ಮಡಿವಾಳ, ವಾಸ: ‘’ಸಪ್ತಿಮಿ’’, ಕುಕ್ಕೆಹಳ್ಳಿ ಉಡುಪಿ ಇವರು ತನ್ನ ಕೆಲಸದ ನಿಮತ್ತಾ ಕುಕ್ಕೆಹಳ್ಳಿ ಜಂಕ್ಷನ ಬಳಿ ಇರುವಾಗ 11:30 ಗಂಟೆಗೆ ಪೆರ್ಡೂರು ಕಡೆಯಿಂದ ಕುಕ್ಕೆಹಳ್ಳಿ ಕಡೆಗೆ ಒರ್ವ ದ್ವಿಚಕ್ರ ವಾಹನ ಸವಾರನು ತನ್ನ ವಾಹನವನ್ನು ಸವಾರಿ ಮಾಡಿಕೊಂಡು ಬಂದು ಕುಕ್ಕೆಹಳ್ಳಿ ಶಾಲೆ ಬಳಿ  ಒಮ್ಮೇಲೆ ಯಾವುದೇ ಸೂಚನೆಯನ್ನು ನೀಡದೆ ಬಲಬದಿಗೆ ತಿರುಗಿಸಿದ್ದು  ಅ ಸಮಯ ಹಿಂದಿನಿಂದ ಬರುತ್ತಿದ್ದ ದ್ವಿಚಕ್ರ ವಾಹನ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ 2 ವಾಹನ  ಡಿಕ್ಕಿಯಾಗಿ ಒಂದಕ್ಕೊಂದು ಸಿಕ್ಕಿಕೊಂಡು ಎಳೆದುಕೊಂಡು ರಸ್ತೆಯ ಬಲಬದಿಗೆ ಬಂದು ಬಿದ್ದ ಪರಿಣಾಮ ಹಿಂಬದಿ ದ್ವಿಚಕ್ರ ಸವಾರನಿಗೆ ತಲೆಗೆ ಪೆಟ್ಟಾಗಿ ಕಿವಿ ಮತ್ತು ಮೂಗಿನಿಂದ ರಕ್ತ ಸೋರಿರುತ್ತದೆ. ಮತ್ತು ಡಿಕ್ಕಿ ಹೊಡೆದ ವಾಹನ ಸವಾರನಿಗೆ ತರಚಿದ ಗಾಯವಾಗಿದ್ದು  ಪಿರ್ಯಾದಿದಾರರು ಅಂಬ್ಯುಲನ್ಸ್ ನಲ್ಲಿ ಚಿಕಿತ್ಸೆ ಬಗ್ಗೆ ಕೆಎಂಸಿ ಅಸ್ಪತ್ರೆಗೆ ಕಳುಹಿಸಿಕೊಟ್ಟಿರುವುದಾಗಿದೆ. ವಾಹನಗಳ ನಂಬ್ರ ಪರಿಶೀಲಿಸಿಲಾಗಿ ಬಲಬದಿಗೆ ತಿರುಗಿಸಿದ ವಾಹನ ನಂಬ್ರ KA-20-W-7654 ಫ್ಯಾಶನ್ ಪ್ರೋ ಮತ್ತು ಹಿಂದಿನಿಂದ ಬಂದ ವಾಹನದ ನಂಬ್ರ  KA-20-EK-4833 ಸ್ಟಾರ್ ಸಿಟಿ  ಆಗಿರುತ್ತದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 40/2021 ಕಲಂ: 279 , 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     

ಇತರ ಪ್ರಕರಣ

 • ಗಂಗೊಳ್ಳಿ: ದಿನಾಂಕ 20/07/2021 ರಂದು ಅಕ್ರಮ ಗೋಸಾಗಾಟದ ಬಗ್ಗೆ ಗಂಗೊಳ್ಳಿ ನಂಜಾನಾಯ್ಕ್‌ ಎನ್‌, ಪೊಲೀಸ್ ಉಪನಿರೀಕ್ಷಕರು,ಗಂಗೊಳ್ಳಿ ಪೊಲೀಸ್ ಠಾಣೆ ಇವರಿಗೆ ದೊರೆತ ಮಾಹಿತಿಯಂತೆ ಸಿಬ್ಬಂದಿಯವರೊಂದಿಗೆ ಮೋವಾಡಿ ಕ್ರಾಸ್ ಬಳಿ ನಿಂತು ಕಾಯುತ್ತಿದ್ದಾಗ ಆಪಾದಿತರಾದ 1) ಈಸೂಬ್  ಬ್ಯಾರಿ, (42), ತಂದೆ: ದಿ. ಕೆ. ಹಸೈನಾರ್  ಬ್ಯಾರಿ,  ವಾಸ: ಆಲ್ ಅಮೀನ್ ಮಂಜಿಲ್,  5ನೇ ಕ್ರಾಸ್,  ಮಧ್ಯ ಕೋಡಿ, ಕೋಡಿ ಅಂಚೆ ಮತ್ತು ಗ್ರಾಮ, ಕುಂದಾಪುರ ತಾಲೂಕು, 2) ಮಹಮ್ಮದ್  ಮಸೂದ್ (28), ತಂದೆ : ಪಕೀರ್ ಸಾಹೇಬ್, ವಾಸ: ಶಾಕೀರ್ ಮಂಜಿಲ್, ಜುಮ್ಮಾ ಮಸೀದಿ ಹತ್ತಿರ,  ಎಂ ಕೋಡಿ, ಕುಂದಾಪರ, 3) ಅಬ್ದುಲ್ ಸಮದ್ (25), ತಂದೆ ಖಾದರ್ ಬಾಷಾ, ವಾಸ: ಸಮದ್ ಮಂಜಿಲ್, NMA ಆಸ್ಪತ್ರೆ ಹತ್ತಿರ  ಎಂ ಕೋಡಿ, ಕುಂದಾಪುರ, 4] ಭದ್ರ ಪೂಜಾರಿ  (70), ತಂದೆ: ದಿ, ಪಮ್ಮ ಪೂಜಾರಿ, ವಾಸ: ಕೆಳಮನೆ, ಜೋಯಿಸರಬೆಟ್ಟು, ಬಡಾಕೆರೆ, ಬಡಾಕೆರೆ ಗ್ರಾಮ, ಬೈಂದೂರು ತಾಲೂಕು ಎಂಬುವವರು ಬೆಳಿಗ್ಗಿನ ಜಾವ 5:30 ಗಂಟೆಗೆ KA-20-Z-4279 ನೇ ಒಮಿನಿ ಕಾರಿನಲ್ಲಿ ಚಿಕ್ಕ-ಚಿಕ್ಕ 3 ಗಂಡು ಹಸುಗಳನ್ನು ಉಸಿರುಗಟ್ಟುವಂತೆ ಹಿಂಸಾತ್ಮಕವಾಗಿ ಕಾಲು ಮತ್ತು ಕುತ್ತಿಗೆಗೆ ಹಗ್ಗ ಕಟ್ಟಿ, ಮಲಗಿಸಿಕೊಂಡು ಅವುಗಳನ್ನು ವಧೆ ಮಾಡುವ ಉದ್ದೇಶದಿಂದ ಅಕ್ರಮವಾಗಿ ಮೋವಾಡಿ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಸಾಗಿಸುತ್ತಿದ್ದಾಗ ವಾಹನವನ್ನು ತಡೆದು ನಿಲ್ಲಿಸಿ ಆಪಾದಿತರನ್ನು ವಶಕ್ಕೆ ಪಡೆದು, 3 ಗಂಡು ಹಸುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ KA-20-Z-4279 ನೇ ಒಮಿನಿ ಕಾರನ್ನು ಸ್ವಾಧೀನಪಡಿಸಿಕೊಂಡಿದ್ದು, 3 ಹಸುಗಳ ಅಂದಾಜು ಮೌಲ್ಯ 5,000/- ರೂಪಾಯಿ ಮತ್ತು ಕಾರಿನ  ಮೌಲ್ಯ 1,00,000/-  ರೂಪಾಯಿ ಆಗಿರುತ್ತದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 67/2021 ಕಲಂ: 4, 5, 7, 12 The Karnataka Prevention Of Slaughter And Preseravation Of Cattle Ordiance Act – 2020, ಕಲಂ 11 (1)(D) Prevention Of Cruelity To Animal Act ಮತ್ತು ಕಲಂ 66 ಜೊತೆಗೆ 192(A) IMV Act   ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ಪಿರ್ಯಾದಿ ಚಂದ್ರಹಾಸ ಇವರು ಟಿಪ್ಪರ್ ಡ್ರೈವರ್ ಕೆಲಸ ಮಾಡಿಕೊಂಡಿದ್ದು ದಿನಾಂಕ 17.07.2021 ರಂದು ಕೆಲಸ ಮುಗಿಸಿ ಲಾರಿಯನ್ನು ಪುಲ್ಕೇರಿ ಜಂಕ್ಷನ್ ಬಳಿಯ ಮೈದಾನದಲ್ಲಿ ನಿಲ್ಲಿಸಿ ಕಸಬ ಗ್ರಾಮದ ಪುಲ್ಕೇರಿ ಜಂಕ್ಷನ್ ಬಳಿ ನಡೆದುಕೊಂಡು ಬರುತ್ತಿರುವಾಗ ರಾತ್ರಿ 10.15 ಘಂಟೆಗೆ ಪರಿಚಯದ ಜರಿಗುಡ್ಡೆ ನಿವಾಸಿ ಅಫಾನ್ ಎನ್ನುವವನು ಪಿರ್ಯಾದಿದಾರರನ್ನು ದಾರಿ ಮದ್ಯ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈಯ್ದು ಮೈಗೆ ಕೈ ಹಾಕಿ ನೆಲಕ್ಕೆ ದೂಡಿ ಕಾಲಿನಿಂದ ಒದ್ದು ಕೊಂದು ಬಿಡುತ್ತೇನೆ ಎಂದು ಜೀವ ಬೆದರಿಕೆ ಹಾಕಿರುವುದಾಗಿದೆ.   ಆಪಾದಿತನ ತಂದೆ ಹಮೀದ್ ಎನ್ನುವವರು ಈ ಹಿಂದೆ ಪಿರ್ಯಾದಿದಾರರಿಗೆ ವಿದೇಶದಲ್ಲಿ ಕೆಲಸ ಕೊಡಿಸುತ್ತೆನೆಂದು ಹೇಳಿ ಹಣವನ್ನು ಪಡೆದು ಕೆಲಸವನ್ನು ಕೊಡಿಸದೇ ಹಣವನ್ನು ವಾಪಾಸು ನೀಡದೇ ಇದ್ದು, ಈ ಹಣವನ್ನು ಆಪಾದಿತನಲ್ಲಿ ಪಿರ್ಯಾದಿದಾರರು ವಾಪಾಸು ಕೇಳಿದ ಕಾರಣಕ್ಕೆ ಈ ಕೃತ್ಯವನ್ನು ನಡೆಸಿರುವುದಾಗಿದೆ ಎಂಬಿತ್ಯಾದಿ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 87/2021  ಕಲಂ 341,323, 504, 506  ಐಪಿಸಿ ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

 • ಕಾರ್ಕಳ: ಪಿರ್ಯಾದಿ ನಾಗವೇಣಿ  ಇವರು ಪ್ರದೀಪನ  ಜೊತೆಯಲ್ಲಿ ಕಾರ್ಕಳ  ಸಾಣೂರು ಗ್ರಾಮದ ಪುಲ್ಕೇರಿ  ಬೈಪಾಸ್‌  ಬಳಿ ಪಿಂಟೋ ಸ್ಟೋರ್‌ ಎಂಬ ಹೆಸರಿನ ದಿನಸಿ  ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಪಿರ್ಯಾದಿದಾರರು ತನ್ನ ಹೆಸರಿನಲ್ಲಿ ನಾಲ್ಕು ಲಕ್ಷ ಹಣವನ್ನು ಐಸಿಐಸಿಐ ಬ್ಯಾಂಕ್‌ನಲ್ಲಿ ಸಾಲ  ಪಡೆದು  ಈ ದಿನಸಿ ಅಂಗಡಿಗೆ ನೀಡಿರುತ್ತಾರೆ. ಈ ಅಂಗಡಿಗೆ  ಪ್ರದೀಪನು  ಸ್ಯಾಂಡರವರ ತಂದೆಯವರೊಂದಿಗೆ  ಬಾಡಿಗೆ ಕರಾರು ಪತ್ರ  ಮಾಡಿರುತ್ತಾರೆ.ಅಲ್ಲದೆ  ಈ ಅಂಗಡಿಗೆ ಮುಂಗಡವಾಗಿ  ಒಂದು  ಲಕ್ಷ ಹಣವನ್ನು ನೀಡಿದ್ದು ತಿಂಗಳ ಬಾಡಿಗೆ 18,000/- ಇರುತ್ತದೆ. ಕೊರೊನಾದ  ಸಮಸ್ಯೆಯಿಂದ ಅಂಗಡಿ ಹೆಚ್ಚಿನ ದಿನ ಬಂದ್‌  ಇದ್ದು ಆದಾಗಿಯೂ ಬಾಡಿಗೆ ಹಣವನ್ನು   ಪ್ರದೀಪನು ದಿನಾಂಕ:07/04/2021 ರವರೆಗೆ  ಪಾವತಿಸಿರುತ್ತಾರೆ. ಎಂದಿನಂತೆ  ಪ್ರದೀಪನು  ಈ ದಿನ ದಿನಾಂಕ:20.07.2021  ರಂದು ಅಂಗಡಿಗೆ  ಹೋಗಿದ್ದು   ಪಿರ್ಯಾದಿದಾರರು ಅಂಗಡಿಗೆ  ಹೋದಾಗ ಅಂಗಡಿಯ ಬಾಗಿಲು ತೆರೆಯದೇ   ಬಂದ್‌  ಇದ್ದು  ಬಾಗಿಲು  ತೆರೆದಿರುವುದಿಲ್ಲ ಪ್ರದೀಪನ  ಮೊಬೈಲಿಗೆ  ಕರೆ  ಮಾಡಿದಾಗ ಪ್ರತಿಕ್ರಿಯೇ  ಇರಲಿಲ್ಲ.ಅಂಗಡಿಯ ಹಿಂದುಗಡೆ  ಇದ್ದ ಮರದ  ಬಾಗಿಲನ್ನು  ದೂಡಿದ್ದು  ಬಾಗಿಲಿಗೆ  ಒಳಗಡೆಯಿಂದ ಚಿಲಕ ಹಾಕಿರುವುದು  ಕಂಡುಬಂತು. ಬದಿಯಲ್ಲಿದ್ದ  ಸುಜೀತನಲ್ಲಿ   ಅಂಗಡಿಯ   ಎದುರು ಇದ್ದ ಶಟರನ್ನುಮೇಲೆತ್ತಲು ತಿಳಿಸಿದ್ದುಶಟರ್‌ ತೆರೆಯದೇ ಒಳಗಡೆಯಿಂದ ಚಿಲಕ  ಹಾಕಿರುವುದು   ಕಂಡು ಬಂತು.ಪ್ರದೀಪನು   ಆತನ ಮನೆಗೆ  ಹೋಗಿರಬಹುದೆಂದು  ಅಂದಾಜಿಸಿ ಆತನ ಸ್ನೇಹಿತ  ಸಚಿನ್‌ಗೆ   ಪಿರ್ಯಾದಿದಾರರು ಕರೆ  ಮಾಡಿ ವಿಚಾರಿಸುವಂತೆ   ತಿಳಿಸಿದ್ದು  ಈವಿಚಾರವನ್ನು   ತಿಳಿದು ಸಚಿನ್‌  ಅಂಗಡಿ  ಬಳಿಗೆ   ಬಂದು ಆತನು  ಕೂಡ   ಪ್ರದೀಪನನ್ನು   ಕರೆದರು ಪ್ರತಿಕ್ರಿಯೇ  ಬಾರದೇ  ಇದ್ದುದರಿಂದ   ಸಚಿನ್‌   ಕೂಡ   ಬಾಗಿಲು ದೂಡಿ  ಒಳಹೋಗಲು  ಪ್ರಯತ್ನಿಸಿದ್ದರು ಆಗಲಿಲ್ಲ. ನಂತರ  ಸ್ಥಳಕ್ಕೆ ಬಂದ  ಲತೇಶನು ಅಂಗಡಿಯ ಮಾಡಿಗೆ ಹತ್ತಿ  ಮಾಡಿಗೆ ಅಳವಡಿಸಿದ ಶೀಟನ್ನು ಹೊಡೆದು   ಒಳಗೆ ಇಳಿದು ಅಂಗಡಿಯ ಹಿಂದಿನಬಾಗಿಲಿನಚಿಲಕವನ್ನು   ತೆರೆದನು. ಒಳ ಹೋಗಿ  ನೋಡಿದಾಗ ಪ್ರದೀಪನು ಮೇಲ್ಗಡೆ  ಅಳವಡಿಸಿದ  ರೀಪಿಗೆ  ಸಂಗೀಶ್‌ ಹಗ್ಗವನ್ನು   ಕಟ್ಟಿ ಕುತ್ತಿಗೆಗೆ ನೇಣು   ಬಿಗಿದು  ಆತ್ಮಹತ್ಯೆ  ಮಾಡಿಕೊಂಡಿದ್ದು  ಆತನನ್ನು ಚಿಕಿತ್ಸೆಯ ಬಗ್ಗೆ  ಬೆಳಿಗ್ಗೆ 9:05 ಗಂಟೆಗೆ  ಕಾರ್ಕಳ  ಸರಕಾರಿ  ಆಸ್ಪತ್ರೆಗೆ  ಕರೆದುಕೊಂಡು   ಬಂದಲ್ಲಿ ಪರೀಕ್ಷಿಸಿದ  ವೈದ್ಯರು   ಪ್ರದೀಪನು  ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿದರು. ಪಿರ್ಯಾದಿದಾರರು   ಪ್ರದೀಪನ  ಮೊಬೈಲನ್ನು  ಆತನ ಪ್ಯಾಂಟ್‌ ಕಿಸೆಯಲ್ಲಿ ಹುಡುಕಾಡಿದಾಗ ಒಂದು  ಕಾಗದ ಸಿಕ್ಕಿದ್ದು  ಕಾಗದದಲ್ಲಿ  ಪ್ರದೀಪನ  ಕೈ ಬರಹ ಇದ್ದ  ಬರವಣೆಗೆ   ಇದ್ದು  ಈ ಬರವಣಿಗೆಯಲ್ಲಿ ನಿನನ್‌‌ ಒರ್ತಿನೆ ಬುಡ್ದು  ಪೊವೊಂದುಲ್ಲೆ ಎನನ್‌  ಬದ್‌ಕೆರೆ ಬುಡ್ಜೆರ್‌ ಎನ್ನ ಸಾವುಗುನೇರ  ಹೊಣೆ ಶೋಪ್‌ಸ ಓನರ್‌ಸ್ಯಾಂಡ್ರ ಪಿಂಟೋಬೊಕ್ಕ ಜೆಎಮ್‌ಜೆ  ಹೋಟೆಲ್‌ದ   ಮಾಲೀಕ ಅಶೋಕ್‌ ಪುತ್ರನ್‌, ಲಾಕ್‌ಡೌನ್‌ದ  ಬಾಡಿಗೆ ಅರ್ಧಆಂಡಾಲದೆತೊನುವೆರೆಡ್‌  ಯಾನ್‌ ಆಡ್ಜಸ್ಟ್‌  ಮಲ್ತು ಕೊರ್ತುವೆ  ಆಂಡ  ಸ್ಯಾಂಡಿ ಚೂರುಲ ಬುಡ್‌ಜೆರ್‌  ಅತ್ತೆ ಎಂಕ್‌ಮಸ್ತ್‌ ಬೇಜಾರುಆಂಡು  ಅಶೋಕೆಲ ಬಿಸಿನೆಸ್‌ಗ್‌  ಮಸ್ತ್‌ ಉಪದ್ರ ಕೊರೊಂದು ಇತ್ತೆ ಎಂಬಿತ್ಯಾದಿಯಾಗಿ ಪ್ರದೀಪನ  ಕೈ ಬರಹದಲ್ಲಿ ಬರೆದಕಾಗದ   ಇರುತ್ತದೆ. ಆದುದರಿಂದ   ಪ್ರದೀಪನ  ಸಾವಿಗೆ ಮಾಲಕೀ ಸ್ಯಾಂಡ್ರ ಪಿಂಟೋ ಮತ್ತು ಜೆಎಮ್‌ಜೆ ಹೋಟೆಲ್‌ ಮಾಲೀಕ ಅಶೋಕ್‌ ಪುತ್ರನ್‌ಇವರುಗಳತೊಂದರೆಯಿಂದ ಪ್ರದೀಪನು   ನೇಣು  ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು  ಈಘಟನೆಯು   ದಿನಾಂಕ:20.07.2021ರಂದು ಬೆಳಿಗ್ಗೆ 7:30 ಗಂಟೆಯಿಂದ 9:05 ಗಂಟೆಯ  ಮದ್ಯಾವದಿಯಲ್ಲಿ  ಆಗಿದ್ದು   ಅವ ರುಗಳವಿರುದ್ದ   ಕಾನೂನು ಕ್ರಮಕ್ಕಾಗಿ ಪಿರ್ಯಾದಿ   ಎಂಬಿತ್ಯಾದಿ.    ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 88/2021  ಕಲಂ 306 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 22-07-2021 01:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080