ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಮುಜಾಫರ್ (37), ತಂದೆ: ಬಿ.ಕೆ ಸಾದುಲ್ಲಾ, ವಾಸ: 4ನೇ ಕ್ರಾಸ್ ಯೋಜನಾ ನಗರ ಯಡ್ತರೆ ಗ್ರಾಮ ಬೈಂದೂರು ತಾಲೂಕು ಇವರು ದಿನಾಂಕ 19/06/2022 ರಂದು ಬೈಂದೂರು ನ್ಯೂ ಬಸ್ ನಿಲ್ದಾಣದ ಬಳಿ ಇರುವ ಕ್ಯಾಂಟೀನ್ ನಲ್ಲಿ  10:45 ಗಂಟೆಗೆ ಚಹಾ ಕುಡಿಯುತ್ತಿರುವಾಗ ಪಿರ್ಯಾದಿದಾರರ ಪರಿಚಯದ ಅಬ್ದುಲ್ ಹಮೀದ್ (65) ರವರು ಯೋಜನಾ ನಗರದಿಂದ ಬೈಂದೂರಿಗೆ ಹೋಗಲು ಬೈಂದೂರು ನ್ಯೂ ಬಸ್ ನಿಲ್ದಾಣ ಬಳಿ ರಾಷ್ಟ್ರೀಯ ಹೆದ್ದಾರಿ 66 ನ್ನು ದಾಟಲು ಪಕ್ಕದ ಡಿವೈಡರ್ ಬಳಿ ನಿಂತುಕೊಂಡಿರುವಾಗ ಭಟ್ಕಳ ಕಡೆಯಿಂದ ಕುಂದಾಪುರ ಕಡೆಗೆ KA-47-N-0884ನೇ ಕಾರು ಚಾಲಕನು ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಆತನ ಎದುರಿನಿಂದ ಹೋಗುತ್ತಿದ್ದ ವಾಹನವನ್ನು ಓವರ್ ಟೇಕ್ ಮಾಡಿ, ರಸ್ತೆಯ ತೀರಾ ಎಡಕ್ಕೆ ಚಲಾಯಿಸಿಕೊಂಡು ಬಂದು ರಸ್ತೆಯ ಎಡಬದಿಯಲ್ಲಿ ನಿಂತಿದ್ದ ಅಬ್ದುಲ್ ಹಮೀದ್ ರವರಿಗೆ ಢಿಕ್ಕಿ ಹೊಡೆದ ಪರಿಣಾಮ ಅಬ್ದುಲ್ ಹಮೀದ್ ರವರು ರಸ್ತೆಗೆ ಬಿದಿದ್ದು, ಅವರ ತಲೆಗೆ ಗಾಯವಾಗಿ ರಕ್ತ ಸೋರುತ್ತಿದ್ದು, ಪಿರ್ಯಾದಿದಾರರು ಹಾಗೂ ಇತರರು ಸೇರಿ ಅಬ್ದುಲ್ ಹಮೀದ್ ರವರನ್ನು ಎತ್ತಿ ಉಪಚರಿಸಿ ಒಂದು ಆಟೋ ರಿಕ್ಷಾದಲ್ಲಿ ಬೈಂದೂರು ಸಮುದಾಯ ಆರೋಗ್ಯ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆ ಬಗ್ಗೆ ಕುಂದಾಪುರಕ್ಕೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಅವರನ್ನು ಅವರ ಹೆಂಡತಿ ಹಾಗೂ ಮಗ ಸೇರಿ ಕುಂದಾಪುರಕ್ಕೆ ಕರೆದುಕೊಂಡು ಹೋಗಿರುತ್ತಾರೆ . ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 123/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ಪಿರ್ಯಾದಿದಾರರಾದ ಪ್ರವೀಣ್ ಶೆಟ್ಟಿ (33), ತಂದೆ: ಭೊಜ ಶೆಟ್ಟಿ, ವಾಸ; ಕೆಲ ಅಗವಾಡಿ ಅಮಾಸೆಬೈಲು ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 18/06/2022 ರಂದು KA-20-EK-6524 TVS Scooty ದ್ವಿ ಚಕ್ರ ವಾಹನದಲ್ಲಿ  ಸಿದ್ದಾಪುರ ಕಡೆಯಿಂದ ಅಮಾಸೆಬೈಲು ಕಡೆಗೆ ಬರುತ್ತಿರುವಾಗ 12:40 ಗಂಟೆ ಸಮಯಕ್ಕೆ ಕುಂದಾಪುರ ತಾಲೂಕು ಮಚ್ಚಟ್ಟು  ಗ್ರಾಮದ ಹೆಮ್ಮಣ್ಣು ಮೂರು ಕೈ ಎಂಬಲ್ಲಿಗೆ ತಲುಪುವಾಗ ಅಮಾಸೆಬೈಲು-ಸಿದ್ದಾಪುರ ರಸ್ತೆಯಲ್ಲಿ  ಎದುರುಗಡೆಯಿಂದ ಅಂದರೆ ಅಮಾಸೆಬೈಲು ಕಡೆಯಿಂದ KA-20-AA-8066 ನೇ ಡ್ಯುವೆಲ್ ಸ್ಟಾರ್ ಸ್ಕೂಲ್ ಬಸ್ ಚಾಲಕನು ಬಸ್ಸನ್ನು ಅತಿ ವೇಗ  ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ರಸ್ತೆಯಲ್ಲಿ ತನ್ನ ಬಲ ಬದಿಗೆ ಬಂದಿದ್ದು ಪಿರ್ಯಾದಿದಾರರು ಚಲಾಯಿಸಿಕೊಂಡು ಬರುತ್ತಿದ್ದ  ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಸ್ಕೂಟಿ ಸಮೇತ  ರಸ್ತೆಗೆ  ಬಿದ್ದು ಪಿರ್ಯಾದಿದಾರರ ಬಲಕೈ ಹಾಗೂ ಬಲ ಕಾಲಿಗೆ ರಕ್ತ ಗಾಯವುಂಟಾಗಿ ಚಿಕಿತ್ಸೆ ಬಗ್ಗೆ  ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 14/2022  ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 19/05/2022 ರಂದು 17:30 ಗಂಟೆಗೆ ಕಾರ್ಕಳ ತಾಲೂಕು ಮುಂಡ್ಕೂರು ಗ್ರಾಮದ ಸಂಕಲಕರಿಯ ದೊಡ್ಡಮನೆ ದ್ವಾರದ ಬಳಿ ಹಾದುಹೋಗಿರುವ ಕಿನ್ನಿಗೊಳಿ-ಬೆಳ್ಮಣ್ ಡಾಮಾರು ರಸ್ತೆಯಲ್ಲಿ KA-19-MB-5501 ನೇ ನಂಬ್ರದ ಬೊಲೆರೋ ಜೀಪಿನ ಚಾಲಕ ಭಾಸ್ಕರ್ ಮೂಲ್ಯ  ತನ್ನ ಜೀಪನ್ನು ಕಿನ್ನಿಗೊಳಿ ಕಡೆಯಿಂದ ಮುಂಡ್ಕೂರು ಕಡೆಗೆ ರಸ್ತೆಯ ತಿರುವಿನಲ್ಲಿ ಅತೀವೇಗ ಹಾಗೂ ಅಜಾಗರೂತೆಯಿಂದ ಚಲಾಯಿಸಿದ ಪರಿಣಾಮ ವಾಹನವು ಸ್ಕಿಡ್ ಆಗಿ ಪಲ್ಟಿಯಾಗಿದ್ದು  ವಾಹನದಲ್ಲಿ ಚಲಾಯಿಸುತ್ತಿದ್ದ ಪ್ರಯಾಣಿಕರ ಪೈಕಿ ಪಾವನಾ ಮೂಲ್ಯ (18)ರ್ಷ ಎಂಬುವವರು ತಲೆಗೆ ಆದ ತೀವ್ರ ಗಾಯದಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾ ದಾರಿ ಮಧ್ಯೆ ಮೃತಪಟ್ಟಿದ್ದು ಜೀಪಿನ ಚಾಲಕ ಭಾಸ್ಕರ್ ಮೂಲ್ಯ ಹಾಗೂ ಪ್ರಯಾಣಿಕರಾದ ಭಾರತಿ (55), ಪ್ರೀತಿ (20) ಇವರ ತಲೆಗೆ ತೀವ್ರ ಸ್ವರೂಪದ ಗಾಯವಾಗಿದ್ದು ಚಿಕತ್ಸೆ ಬಗ್ಗೆ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿದೆ.  ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 86/2022 ಕಲಂ: 279, 337, 338, 304(ಎ)  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 19/06/2022 ರಂದು ಸಂಜೆ  6:30 ಗಂಟೆಗೆ ಕುಂದಾಪುರ ತಾಲೂಕು, ಕನ್ಯಾನ ಗ್ರಾಮದ  ನಮ್ಮ ಭೂಮಿ ಸಂಸ್ಥೆಯ ಕ್ರಾಸ್‌ ಬಳಿ ರಸ್ತೆಯಲ್ಲಿ,  ಆಪಾದಿತ ಶ್ರೀನಿವಾಸ  KA-19-D-2835ನೇ ವಿಜಯಲಕ್ಷ್ಮಿ  ಬಸ್‌‌‌ನ್ನು ತಲ್ಲೂರು  ಕಡೆಯಿಂದ ನೇರಳಕಟ್ಟೆ  ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯ ತನದಿಂದ  ಚಾಲನೆ ಮಾಡಿಕೊಂಡು ಬಂದು, ಅದೇ ದಿಕ್ಕಿನಲ್ಲಿ ಪಿರ್ಯಾದಿದಾರರಾದ ಭಾಸ್ಕರ್‌ ಶೆಟ್ಟಿ ಎಂಬುವವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ KA-20-EV-6531 Honda Dio ಸ್ಕೂಟರ್‌‌‌ ನ್ನು ಓವರ್‌‌ಟೇಕ್‌‌ ಮಾಡುತ್ತ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಕೈ ಕಾಲುಗಳಿಗೆ, ಬಲ ಕೆನ್ನೆಗೆ ತರಚಿದ ಗಾಯ ಹಾಗೂ ಬಲ ಪಕ್ಕೆಲುಬಿಗೆ ಒಳನೋವು ಉಂಟಾಗಿ ಚಿಕಿತ್ಸೆ  ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ  ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 76/2022  ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ದಿನಾಂಕ 19/06/2022 ರಂದು ಸಂಜೆ 5:00 ಗಂಟೆಗೆ ಪಿರ್ಯಾದಿದಾರರಾದ ಜೀವನ್ ಪೆರ್ನಾಂಡಿಸ್, (33), ತಂದೆ: ಲಾರೆನ್ಸ್ ಪೆರ್ನಾಂಡಿಸ್, ವಾಸ: ಮನೆ ನಂ 5-112, ಕೆಮ್ಮಣ್ಣು ಚರ್ಚ್‌ಹಿಂಬದಿ, ಮೂಡುತೋನ್ಸೆ ಗ್ರಾಮ ಇವರು ತನ್ನ ಪರಿಚಯದ ವಿನಯ್ ಪಿರೇರಾ ಇವರೊಂದಿಗೆ ಕೆಮ್ಮಣ್ಣು ಗುಡ್ಯಾಂ ದೇವಸ್ಥಾನದ ಗುರುರಾಜ್ ಗೂಡಂಗಡಿ ಬಳಿ ನಿಂತುಕೊಂಡು ಮಾತನಾಡುತ್ತಿರುವಾಗ ಪಿರ್ಯಾದಿದಾರರ ಪರಿಚಯದ ಹ್ಯಾನಿಯಲ್ ಮಚಾದೋ ರವರು KA-20-EY-1759  ನಂಬ್ರದ ಸ್ಕೂಟರಿನಲ್ಲಿ ಹಂಪನಕಟ್ಟೆಯಿಂದ ಕೆಮ್ಮಣ್ಣು ಗುಡ್ಯಾಂ ಬಳಿ ಇರುವ ಮನೆಗೆ ಹೋಗಲು ರಸ್ತೆಯಲ್ಲಿ ಬರುತ್ತಿರುವಾಗ ಕೆಮ್ಮಣ್ಣು ಕಡೆಯಿಂದ ಹಂಪನಕಟ್ಟೆ ಕಡೆಗೆ KA-44-M-7273 ನಂಬ್ರದ ಬೊಲೆರೊ ಜೀಪಿನ ಚಾಲಕನು ಜೀಪನ್ನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹ್ಯಾನಿಯಲ್ ಮಚಾದೋ ರವರ ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ ಹ್ಯಾನಿಯಲ್ ಮಚಾದೋ ರವರ ತಲೆಯ ಬಲಬದಿ ರಕ್ತಗಾಯ, ಬಲಕಾಲಿಗೆ ತರಚಿದ ಗಾಯ ಹಾಗೂ ಹೊಟ್ಟೆಗೆ ಗುದ್ದಿದ ನೋವಾಗಿ ಗಾಯಗೊಂಡವರನ್ನು  ಜೀಪಿನ ಚಾಲಕ ಹಾಗೂ ಸ್ಥಳಿಯ ನಿವಾಸಿ ದೀಪಕ್ ರವರು ಚಿಕಿತ್ಸೆ ಬಗ್ಗೆ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ  ವೈದ್ಯರು ಹ್ಯಾನಿಯಲ್ ಮಚಾದೋ ರವರನ್ನು  ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 54/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಶಂಕರನಾರಾಯಣ: ದಿನಾಂಕ 18/06/2022 ರಂದು 20:10 ಗಂಟೆಯಿಂದ 20:50 ಗಂಟೆಯ ಮಧ್ಯಾವಧಿಯಲ್ಲಿ ಪಿರ್ಯಾದಿದಾರರಾದ ರಾಘವೇಂದ್ರ ಯಡಿಯಾಳ (41), ತಂದೆ: ದಿ ಭಾಸ್ಕರ ಯಡಿಯಾಳ, ವಾಸ:ಕೆಳಮದುರೆ ಮನೆ ಹಳ್ಳಿಹೊಳೆ ಅಂಚೆ ಕಮಲಶಿಲೆ ಗ್ರಾಮ ಕುಂದಾಪುರ ತಾಲೂಕು ಉಡುಪಿ ಜಿಲ್ಲೆ ಇವರ ಮನೆಗೆ  ಯಾರೋ ಕಳ್ಳರು ಮನೆಯ ಹಿಂಬದಿಯ ಹಟ್ಟಿಯ ಬಾಗಿಲನ್ನು ತೆರೆದು ಒಳ ಪ್ರವೇಶಿಸಿ ಪಿರ್ಯಾದಿದಾರರ ತಾಯಿ ಶ್ರೀಮತಿ ಸರಸ್ವತಿಯರು ಮಲಗುವ ಕೋಣೆಯ ಗೋಡ್ರೇಜ್ ಕಪಾಟಿನ ಬಾಗಿಲನ್ನು ತೆರೆದು ಒಳಗೆ  ಇರಿಸಿದ್ದ  ತಾಯಿಯವರ 1,30,000/- ಲಕ್ಷ ಬೆಲೆ ಬಾಳುವ 14 ಗ್ರಾಂ ತೂಕದ 2 ಚಿನ್ನದ ಬಳೆ ಒಟ್ಟು 28 ಗ್ರಾಂ ಮತ್ತು 1,50,000/- ಲಕ್ಷ  ಬೆಲೆ ಬಾಳುವ  ಮಲ್ಲಿಗೆ ಮಿಟ್ಟಿಯ 30 ಗ್ರಾಂ ನ ಉದ್ದ ಚಿನ್ನದ ಸರ -1, 20,000/-ಬೆಲೆ ಬಾಳುವ ಮೂರು ಹರಳಿನ 4 ಗ್ರಾಂ ಚಿನ್ನದ ಉಂಗುರ-1, ಇರುತ್ತದೆ. ಅಲ್ಲದೇ ಅದೇ ಕಪಾಟಿನ ಒಳಗೆ  ಪರ್ಸನಲ್ಲಿ ಇರಿಸಿದ್ದ  ನಗದು 5000/-, ಹಾಗೂ ತಂದೆಯವರ ಅಸ್ಥಿಯನ್ನು ಇರಿಸಿದ್ದ  ಹಿತ್ತಾಳೆ ಕರಡಿಗೆ-1ನ್ನು ಮನೆಗೆ ನುಗ್ಗಿ ರೂಪಾಯಿ 3,05,000/- ಮೌಲ್ಯ ಚಿನ್ನಾಭರಣ ಮತ್ತು ನಗದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.  ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 65 /2022  ಕಲಂ: 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಾಣೆ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಸೀತಾರಾಮ ಶೆಟ್ಟಿ (46), ತಂದೆ: ಮಂಜುನಾಥ ಶೆಟ್ಟಿ, ವಾಸ: ಶಿರಿಯಾರ ನಾಯ್ಕರ ಮನೆ  ಶಿರಿಯಾರ ಗ್ರಾಮ ಮತ್ತು ಅಂಚೆ  ಬ್ರಹ್ಮಾವರ ತಾಲೂಕು ಇವರ ತಮ್ಮ ಜಯಶೀಲ ಶೆಟ್ಟಿ(36) ಇವರಿಗೆ ಮದುವೆಯಾಗದೇ ಇದ್ದು ಮನೆಯಲ್ಲಿ ಕೃಷಿ ಕೆಲಸ ಮಾಡಿಕೊಂಡಿರುತ್ತಾರೆ.  ಶಿರಿಯಾರದಲ್ಲಿ ಪಿರ್ಯಾದಿದಾರರ ಮನೆಯಲ್ಲಿ ವಾಸ ಮಾಡಿಕೊಂಡಿದ್ದವರು ಅಕ್ಕ ದೇವಕಿಯವರು  ಜಯಶೀಲರಿಗೆ ಬಾರ್ಕೂರಿಗೆ  ಬರುವಂತೆ  ತಿಳಿಸಿದ್ದು ಅದರಂತೆ  ಜಯಶೀಲ ರವರು ಶಿರಿಯಾರದಿಂದ ಬಾರ್ಕೂರಿಗೆ  ಹೋಗುವುದಾಗಿ ಹೇಳಿ ಬಟ್ಟೆಗಳನ್ನು ಬ್ಯಾಗಿನಲ್ಲಿ ಹಾಕಿಕೊಂಡು  ಮದ್ಯಾಹ್ನ ಊಟ ಮಾಡಿ  12:00 ಗಂಟೆಗೆ ಬಸ್ಸಿನಲ್ಲಿ ಹೋಗಲು ಹೊರಟಿದ್ದು , ಬಾರ್ಕೂರಿಗೂ ಹೋಗದೇ ವಾಪಸ್ಸು ಶಿರಿಯಾರಕ್ಕೂ ಬಾರದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 94/2022 ಕಲಂ: ಮನುಷ್ಯ  ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ಪಿರ್ಯಾದಿದಾರರಾದ ಲಲಿತಾ(42), ತಂದೆ:ಕಲ್ಲಪ್ಪ, ವಾಸ: ಕೊರಗಜ್ಜ ದೇವಸ್ಥಾನದ ಹತ್ತಿರ ,ಕಲ್ಮಾಡಿ ಮಲ್ಪೆ ಕೊಡವೂರು ಗ್ರಾಮ ಇವರು 10 ವರ್ಷಗಳ ಹಿಂದೆ  ಕೊಪ್ಪಳ ಜಿಲ್ಲೆಯಿಂದ ಗಂಡ ಕಲ್ಲಪ್ಪ ರವರೊಂದಿಗೆ ಮಲ್ಪೆಗೆ ಕೆಲಸದ ಬಗ್ಗೆ ಬಂದಿದ್ದು , 7 ವರ್ಷಗಳ ಹಿಂದೆ ಪಿರ್ಯಾದಿದಾರರ ಗಂಡ ಪಿರ್ಯಾದಿದಾರರನ್ನು  ಬಿಟ್ಟು  ತಮ್ಮ ಸ್ವಂತ ಊರಿಗೆ ಹೋಗಿರುತ್ತಾರೆ. ಪಿರ್ಯಾದಿದಾರರ ಗಂಡ  ಕಲ್ಲಪ್ಪ (45) ರವರನ್ನು ದಿನಾಂಕ 11/06/2022 ರಂದು ತನ್ನ ಊರಿನಿಂದ ಮಕ್ಕಳನ್ನು ನೋಡಲು ಮಲ್ಪೆಗೆ  ಬಂದಿದ್ದು , ದಿನಾಂಕ 17/06/2022 ರಂದು  ಎಲ್ಲರೂ ರಾತ್ರಿ ಊಟ ಮಾಡಿ  10:30 ಗಂಟೆಗೆ ಮಲಗಿದ್ದು , ರಾತ್ರಿ 01:30 ಗಂಟೆಗೆ  ಪಿರ್ಯಾದಿದಾರರು  ಎಚ್ಚರಗೊಂಡಾಗ ಪಿರ್ಯಾದಿದಾರರ ಗಂಡ ಕಲ್ಲಪ್ಪ ಕಾಣಿಸದೆ ಇದ್ದು , ಹುಡುಕಾಡಿದ್ದಲ್ಲಿ ಕಂಡುಬಂದಿರುವುದಿಲ್ಲ,  ಊರಿಗೆ ಕರೆ ಮಾಡಿ ಸಂಬಂಧಿಕರಲ್ಲಿ ವಿಚಾರಿಸಿದ್ದಲ್ಲಿ ಇವರೆಗೆ  ಪತ್ತೆಯಾಗಿರುವುದಿಲ್ಲ .  ಕಲ್ಲಪ್ಪ ತನ್ನ ಸ್ವಂತ ಊರಿಗೂ ಹೋಗದೆ ಮಲ್ಪೆಯ ಮನೆಗೂ ಬಾರದೆ ಕಾಣೆಯಾಗಿರುತ್ತಾರೆ . ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 53/2022 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿದಾರರಾದ ದಯಾನಂದ ಖಾರ್ವಿ (50), ತಂದೆ: ರಾಜ್ ಗೋಪಾಲ ಖಾರ್ವಿ, ವಾಸ: ಮಾತೃಛಾಯ ನಿವಾಸ, ವೆಂಕಟರಮಣ ಮಲ್ಯರಮಠ ದೇವಸ್ಥಾನದ ಹತ್ತಿರ ರಥಬೀದಿ, ಗಂಗೊಳ್ಳಿ ಗ್ರಾಮ, ಕುಂದಾಪುರ ತಾಲೂಕು ಇವರು ಕುಂದಾಪುರ ತಾಲೂಕು ಗಂಗೊಳ್ಳಿ ಗ್ರಾಮದ ವೆಂಕಟರಮಣ ಮಲ್ಯರ ಮಠ ದೇವಸ್ಥಾನದ  ರಥಬೀದಿಯಲ್ಲಿ ಜಾಗ ಖರೀದಿ  ಮಾಡಿ ಹೊಸ ಮನೆ ನಿರ್ಮಾಣ ಮಾಡಿದ್ದು  ಜಾಗ ಖರೀದಿಸಿದ ದಿನದಿಂದ ಪಿರ್ಯಾದಿದಾರರ ಮನೆಯ ಪಕ್ಕದ ಸುರೇಂದ್ರ ದೇವಾಡಿಗ ಹಾಗೂ ಅವರ ಮನೆಯವರು ದಾರಿ ವಿಚಾರದಲ್ಲಿ ತಕರಾರು ಮಾಡುತ್ತಿದ್ದರು.  ದಿನಾಂಕ 19/06/2022 ರಂದು ಬೆಳಿಗ್ಗೆ 11:00 ಗಂಟೆಗೆ ಪಿರ್ಯಾದಿದಾರರು ತನ್ನ  ಮನೆಯ ಬಳಿಯ ದಾರಿಯಲ್ಲಿ ಬರುತ್ತಿರುವಾಗ ನೆರೆ ಮನೆಯ ಸುರೇಂದ್ರ ದೇವಾಡಿಗ, ಅವರ ಅಣ್ಣ ಸುಧೀರ ದೇವಾಡಿಗ ಹಾಗೂ ಸಂಬಂಧಿ ಪ್ರಶಾಂತ ದೇವಾಡಿಗರವರು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಅವರು ತಂದಿದ್ದ ದೊಣ್ಣೆ ಹಾಗೂ ಕಲ್ಲಿನಿಂದ ಪಿರ್ಯಾದಿದಾರರ ಕೈಕಾಲುಗಳಿಗೆ, ಬೆನ್ನಿಗೆ, ಸೊಂಟಕ್ಕೆ ಹೊಡೆದು ದೂಡಿದ್ದು ಪಿರ್ಯಾದಿದಾರರು ಕೆಳಗೆ ಬಿದ್ದಾಗ ಆರೋಪಿತರು  ಕಾಲಿನಿಂದ ತುಳಿದು ಜೀವ ಬೆದರಿಕೆ ಹಾಕಿದ್ದು ಅದೇ ಸಮಯ ಹತ್ತಿರದ ಮನೆಯ ಸಂದೀಪ ಖಾರ್ವಿಯವರು ಬಂದು ಯಾಕೆ ಹೊಡೆಯುತ್ತೀರಿ ಎಂದು ಕೇಳಿದಾಗ ಅವರಿಗೂ ದೊಣ್ಣೆ ಹಾಗೂ ಕಲ್ಲಿನಿಂದ ಹೊಡೆದು ಜೀವ ಬೆದರಿಕೆ ಹಾಕಿರುತ್ತಾರೆ.  ಆರೋಪಿತರು ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ಕೈಕಾಲುಗಳಿಗೆ, ಸೊಂಟಕ್ಕೆ, ಬೆನ್ನಿಗೆ ಪೆಟ್ಟಾಗಿದ್ದು ಸಂದೀಪ ಖಾರ್ವಿಯವರಿಗೆ ಬೆನ್ನಿಗೆ, ಕೈಕಾಲುಗಳಿಗೆ ಪೆಟ್ಟಾಗಿದ್ದು ಚಿಕಿತ್ಸೆ ಬಗ್ಗೆ  ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 55/2022 ಕಲಂ: 341, 323, 324, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ಪಿರ್ಯಾದಿದಾರರಾದ ಸುರೇಂದ್ರ ದೇವಾಡಿಗ (85), ತಂದೆ: ಬಾಬು ದೇವಾಡಿಗ, ವಾಸ: ಹೆಬ್ಬಾಗಿಲು ಮನೆ, ರಥಬೀದಿ, ಗಂಗೊಳ್ಳಿ ಗ್ರಾಮ, ಕುಂದಾಪುರ ತಾಲೂಕು ಇವರು ದಿನಾಂಕ 19/06/2022 ರಂದು ಬೆಳಿಗ್ಗೆ 11:00 ಹೋಟೆಲ್ ಕೆಲಸ ಮುಗಿಸಿ  ಕುಂದಾಪುರ ತಾಲೂಕು ಗಂಗೊಳ್ಳಿ  ಗ್ರಾಮದ ರಥಬೀದಿಯಲ್ಲಿರುವ ಹೆಬ್ಬಾಗಿಲು ಮನೆಗೆ ಹೋಗುತ್ತಿರುವಾಗ ಮನೆಯ  ಬಳಿ ದಾರಿಯಲ್ಲಿ ಮನೆ ಹತ್ತಿರದ ದಯಾನಂದ ಖಾರ್ವಿ, ಸಂದೀಪ ಖಾರ್ವಿ, ರಮೇಶ ಖಾರ್ವಿ, ಸಂದೀಪ ಖಾರ್ವಿ, ಸುರೇಶ ಖಾರ್ವಿ ಮತ್ತು ಇತರರು ಪಿರ್ಯಾದಿದಾರರನ್ನು ಅಡ್ಡಗಟ್ಟಿ ಆರೋಪಿತರು ದೊಣ್ಣೆ ಹಾಗೂ ರಾಡ್ ಗಳನ್ನು ಹಿಡಿದು ತಂದು ಹೊಡೆಯಲು ಬಂದಿದ್ದು ಸುರೇಶ್ ಖಾರ್ವಿ, ಸಂದೀಪ ಖಾರ್ವಿ, ದೇವರಾಯ ಖಾರ್ವಿ, ಸಂದೀಪ ಖಾರ್ವಿ, ಸಂದೀಪ ಖಾರ್ವಿಯವರು ದೊಣ್ಣೆಯಿಂದ ಪಿರ್ಯಾದಿದಾರರ ಕೈಕಾಲುಗಳಿಗೆ ಹೊಡೆದಿದ್ದು ಪಿರ್ಯಾದಿದಾರರು ಬೊಬ್ಬೆ ಹೊಡೆದಾಗ ಸುಧೀರ ದೇವಾಡಿಗ ಮತ್ತು  ಪ್ರಶಾಂತ ದೇವಾಡಿಗರವರು ತಪ್ಪಿಸಲು ಬಂದಿದ್ದು ಅವರಿಗೂ ದೊಣ್ಣೆಯಿಂದ ಹೊಡೆದು ದೂಡಿ ಜೀವ ಬೆದರಿಕೆ ಹಾಕಿರುತ್ತಾರೆ. ಆರೋಪಿತರು ಹೊಡೆದ ಪರಿಣಾಮ ಪಿರ್ಯಾದಿದಾರರ ಕೈಕಾಲುಗಳಿಗೆ, ಕುತ್ತಿಗೆ, ಬೆನ್ನಿಗೆ ಪೆಟ್ಟಾಗಿದ್ದು, ಸುಧೀರ ಖಾರ್ವಿಯವರಿಗೆ ಕೈಕಾಲುಗಳಿಗೆ ಪೆಟ್ಟಾಗಿದ್ದು ಹಾಗೂ ಪ್ರಶಾಂತವರಿಗೆ ಕೈಕಾಲುಗಳಿಗೆ ಪೆಟ್ಟಾಗಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 56/2022 ಕಲಂ: 143, 147,148, 341, 324, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     

ಇತ್ತೀಚಿನ ನವೀಕರಣ​ : 20-06-2022 06:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080