ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕಾರ್ಕಳ: ಪಿರ್ಯಾದಿ ಶುಭಶ್ರೀ (24), ತಂದೆ: ಶೇಖರ, ವಾಸ: ಎದುರುಪಲ್ಕೆ, ಕಡಾರಿ, ಮಾಳ ಅಂಚೆ ಮತ್ತು ಗ್ರಾಮ, ಕಾರ್ಕಳ ಇವರ ತಾಯಿ ಶ್ರೀಮತಿ ಪುಷ್ಪಾ ರವರು ದಿನಾಂಕ 19/06/2022 ರಂದು ಬೆಳಿಗ್ಗೆ ಮಾಳದಿಂದ ಇರ್ವತ್ತೂರು ವಡಿಯೂರು ಸಂಘದ ಹಣವನ್ನು ಸಂದಾಯ ಮಾಡುವ ಬಗ್ಗೆ ತನ್ನ ಅಕ್ಕನ ಮನೆಯಾದ ಇರ್ವತ್ತೂರು ಗ್ರಾಮದ ಬಗಲ್ತಕಟ್ಟೆ ಎಂಬಲ್ಲಿ ಬಂದಿದ್ದು,  ಹಣವನ್ನು ಸಂದಾಯ ಮಾಡಿ ವಾಪಾಸ್ಸು ಮಾಳಕ್ಕೆ ಹೋಗುವ ಬಗ್ಗೆ ಮಧ್ಯಾಹ್ನ 1:30 ಗಂಟೆಗೆ ತನ್ನ ಸಂಬಂಧಿ ಉಮೇಶರವರ ಬಾಬ್ತು KA19-HC-8296 ನೇ ನಂಬ್ರದ ದ್ವಿಚಕ್ರ ವಾಹನದಲ್ಲಿ ತನ್ನ ಅಕ್ಕ ಸುಂದರಿರವರ ಮನೆಯ ಬಳಿ ಹಾದುಹೋಗಿರುವ ಬಗಲ್ದಕಟ್ಟೆ-ಇರ್ವತ್ತೂರು ಸಾರ್ವಜನಿಕ ರಸ್ತೆಯಲ್ಲಿ ಸ್ಕೂಟಿಯ ಹಿಂಬದಿಯಲ್ಲಿ  ಕುಳಿತುಕೊಂಡ ಸಮಯ ದ್ವಿಚಕ್ರ ವಾಹನವನ್ನು ಅದರ ಸವಾರ ಉಮೇಶರವರು ಒಮ್ಮೆಲೇ ನಿರ್ಲಕ್ಷತನ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿದ್ದರಿಂದ, ಪುಷ್ಪರವರು ಹಿಮ್ಮುಖವಾಗಿ ರಸ್ತೆಗೆ ಬಿದ್ದಿದ್ದು ಈ  ಪರಿಣಾಮ ಪುಷ್ಪಾರವರ ತಲೆ ಮತ್ತು ಬೆನ್ನಿಗೆ ಒಳ ಜಖಂ ಆಗಿರುತ್ತದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾದ ಕ್ರಮಾಂಕ 87/2022 ಕಲಂ 279, 337 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

 • ಉಡುಪಿ: ಪಿರ್ಯಾದಿ ಯೋಗೇಶ ತಿಂಗಳಾಯ ಪ್ರಾಯ: 34 ವರ್ಷ ತಂದೆ: ಗಿರಿಯ ಮರಕಾಲ ವಾಸ: ನಿಸರ್ಗ ಸಿರಿ, ಮಣೂರು ಇವರ ಮಾಲೀಕತ್ವದ ಬಜಾಜ್‌ ಪಲ್ಸರ್‌ ಮೋಟಾರ್‌ ಸೈಕಲ್‌ ನಂಬ್ರ: KA20Y8542 (Chassis No: MD2DHDHZZUCC75212, Engine No: DHGBUC56437) ನೇದನ್ನು ದಿನಾಂಕ: 13/02/2021 ರಂದು 15:30 ಗಂಟೆಗೆ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಸಿಟಿ ಬಸ್‌ ನಿಲ್ದಾಣದ ವೈಶಾಲಿ ಬಾರ್‌ ಎದುರು ನಿಲ್ಲಿಸಿದ್ದು, ಮರುದಿನ ದಿನಾಂಕ 14/02/2021 ರಂದು ಬೆಳಿಗ್ಗೆ 08:00 ಗಂಟೆಗೆ ನೋಡಲಾಗಿ, ಬೈಕ್‌ ನಿಲ್ಲಿಸಿದ ಜಾಗದಲ್ಲಿ ಇಲ್ಲದೆ ಇದ್ದು, ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಮೋಟಾರ್‌ ಸೈಕಲ್‌ ಅಂದಾಜು ಮೌಲ್ಯ ರೂ. 25,000/- ಆಗಬಹುದು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  98/2022 ಕಲಂ:  379 IPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣಗಳು

 • ಶಂಕರನಾರಾಯಣ:: ಸುಮಾರು  3 ದಿನದ  ಹಿಂದೆ ಆರೋಪಿ   ಮೃತುಂಜಯ  ಇವನು   ಆತನ ಮೊಬೈಲ್‌‌ನಲ್ಲಿ ಸ್ಟೇಟಸ್ ಹಾಕಿದ್ದು, ಈ ಬಗ್ಗೆ  ಫಿರ್ಯಾದಿ ರಾಘವೇಂದ್ರ  ಕುಲಾಲ್   ಪ್ರಾಐ 27 ವರ್ಷ ತಂದೆ, ನರಸು   ಕುಲಾಲ್  ವಾಸ, ತೆಂಕಬೈಲ್ಲು  ಆಜ್ರಿ  ಗ್ರಾಮ   ಇವರು ಕಮೆಂಟ್ ಹಾಕಿದ್ದು,  ಇದೇ   ವಿಷಯದಲ್ಲಿ  ಆರೋಪಿಗಳಾದ   ಕಮಲಾಕರ ಹಾಗೂ  ವಿಕಾಸ್  ಇವರು  ದಿನಾಂಕ  19.06.2022  ರಂದು ಸುಮಾರು  20:30  ಘಂಟೆಗೆ   8217424529   ನಂಬ್ತದಿಂದ  ಪೋನ್  ಮಾಡಿ    ನೀನು  ಜಾಸ್ತಿ  ಮಾತನಾಡುತ್ತೀಯ ಇದ್ದೀಯ  ನೀನು  ಎಲ್ಲದಿಯಾ  ಎಂದು  ಹೇಳೀ   ಕೇಳಿ   ನೀನು   ಸಿದ್ದಾಪುರದಲ್ಲಿ ಇರು  ಅಲ್ಲಿಗೆ  ಬರುತ್ತೇನೆ ಎಂದು  ಹೇಳಿರುತ್ತಾರೆ, ಆ  ಬಳಿಕ ಪ್ರದೀಪ  ಎಂಬುವರು  9663833658   ನೇ  ನಂಬ್ರದಿಂದ   ಕಾಲ್  ಮಾಡಿ ನೀನು  ಸಿದ್ದಾಪುರಕ್ಕೆ  ಬಾ   ಎಂದು  ಹೇಳಿರುತ್ತಾರೆ, ಅಲ್ಲದೆ    ಸುಮಾರು 21;45  ಘಂಟೆಗೆ   ಆರೋಪಿ   ಅರುಣ್  ಶೆಟ್ಟಿ  ಇವರು  ಪೋನ್  ಮಾಡಿ    ನೀನು  ಸಿದ್ದಾಪುರ  ಹೈಸ್ಕೂಲ್  ಗ್ರೌಂಡಗೆ    ಬಾ   ಎಂದು   ಹೇಳೀದ್ದು, ಅದರಂತೆ   ಫಿರ್ಯಾದುದಾರರು   ಕುಂದಾಪುರ  ತಾಲೂಕಿನ ಸಿದ್ದಾಪುರ ಗ್ರಾಮದ  ಸಿದ್ದಾಪುರ  ಹೈಸ್ಕೂಲ್  ಗ್ರೌಂಡ್‌‌ಗೆ    ಹೋದಾಗ  ಅಲ್ಲಿ   ಆರೋಪಿಗಳು    ಸಮಾನ ಉದ್ದೇಶದಿಂದ ಅಕ್ರಮ ಕೂಟ  ಕೂಡಿಕೊಂಡು  ಮರದ  ದೊಣ್ಣೆಯಿಂದ  ಹಲ್ಲೆ   ಮಾಡಿ  ಚಾಕುವಿನಿಂದ  ಚುಚ್ಚಲು  ಬಂದಿರುತ್ತಾರೆ, ಈ   ಸಮಯ  ಆರೋಪಿಗಳು  ಸೇರಿ  ನೆಲದ  ಮೇಲೆ   ದೂಡಿಹಾಕಿ   ಕಾಲಿನಿಂದ    ತುಳಿದು   ಅವಾಚ್ಯ  ಶಬ್ದಗಳಿಂದ  ನಿಂದಿಸಿ  ನಿನ್ನ ಕೊಲೆ  ಮಾಡುತ್ತೇನೆ  ಎಂದು  ಜೀವ  ಬೆದರಿಕೆ  ಹಾಕಿರುತ್ತಾರೆ, ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  66/2022  ಕಲಂ:143,147,148,323,324,504,506, ಜೊತೆಗೆ  149   ಐ.ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಹೆಂಗಸು ಕಾಣೆ ಪ್ರಕರಣ

 • ಬೈಂದೂರು: ಫಿರ್ಯಾದಿ ನರಸಿಂಹ ಮರಾಠಿ ಪ್ರಾಯ: 50 ವರ್ಷ ತಂದೆ:ಕೃಷ್ಣ ಮರಾಠಿ ವಾಸ: ದ್ಯಾಸಮಕ್ಕಿ ಅರೆಶಿರೂರು, ಗೊಳಿಹೊಳೆ ಇವರ ಹೆಂಡತಿಯಾದ  ಭಾರತಿ ಮರಾಠಿ  ಪ್ರಾಯ: 40 ವರ್ಷ ರವರು  ಪಿರ್ಯಾದುದಾರರೊಂದಿಗೆ ಅರೆಶಿರೂರು ಗ್ರಾಮದ ದ್ಯಾಸಮಕ್ಕಿ ಎಂಬಲ್ಲಿ ವಾಸ ಮಾಡಿಕೊಂಡಿದ್ದವರು, ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಅದೇ ಚಿಂತೆಯಿಂದ ಮಾನಸಿಕವಾಗಿ ನೊಂದಿದ್ದು,  ದಿನಾಂಕ 19/06/2022 ರಂದು ಮಧ್ಯಾಹ್ನ  01:30 ಗಂಟೆಯಿಂದ 02:30 ಗಂಟೆಯ ಮದ್ಯಾವಧಿಯಲ್ಲಿ ಪಿರ್ಯಾದುದಾರರ ಹೆಂಡತಿ ಮನೆಯಿಂದ ಹೊದವರು ವಾಪಾಸ್ಸು ಬಾರದೇ ಕಾಣೆಯಾಗಿರುವುದಾಗಿದೆ. ಚಹರೆ: ಕೋಲು  ಮುಖ,ಗೊಧಿ ಮೈಬಣ್ಣ ಎತ್ತರ: 5 ಅಡಿ ಭಾಷೆ: ಕನ್ನಡ, ಮರಾಠಿ.  ಹಳದಿ ಬಣ್ಣದ ನೈಟಿ ಧರಿಸಿರುತ್ತಾಳೆಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ  ಕ್ರಮಾಂಕ 124/2022 ಕಲಂ: ಹೆಂಗಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
    

ಇತ್ತೀಚಿನ ನವೀಕರಣ​ : 20-06-2022 06:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080