ಅಭಿಪ್ರಾಯ / ಸಲಹೆಗಳು

ವಂಚನೆ ಪ್ರಕರಣ

  • ಬ್ರಹ್ಮಾವರ: ಮಾನ್ಯ 1ನೇ ಎಸಿಜೆ & ಜೆಎಮ್‌ಎಫ್‌ಸಿ ನ್ಯಾಯಾಲಯ ಉಡುಪಿಯಿಂದ ಬಂದ ಖಾಸಗಿ ಪಿರ್ಯಾದಿ ನಂ. 32/2021ರ ರಂತೆ ಪಿರ್ಯಾದಿದಾರರಾದ ಶ್ರೀ ಪ್ರಶಾಂತ್ ಎಮ್, ಪ್ರಾಯ: 28 ವರ್ಷ, ತಂದೆ: ಶ್ರೀ ಮಂಜುನಾಥ, ಮಾಲಕರು, “ ಶ್ರೀ ಶಾಯ ಕ್ಯಾಶ್ಯುಸ್” ಕರ್ಜೆ ಅಂಚೆ, ಹೊಸೂರು ಗ್ರಾಮ, ಬ್ರಹ್ಮಾವರ ಇವರು ಗೇರು ಬೀಜ ಸಂಸ್ಕರಣೆ ಮತ್ತು ಮಾರಾಟ ಪ್ರಕ್ರಿಯೆ ವ್ಯವಹಾರವನ್ನು ನಡೆಸಿಕೊಂಡಿರುತ್ತಾರೆ. ಹೀಗಿರುತ್ತಾ ದಿನಾಂಕ: 20/02/2019 ರಂದು ಆರೋಪಿ ಶ್ರೀ ವಚನ ರಾಮ್ ಹಾಜ ರಾಮ್ ಚೌಧುರಿ, ಪ್ರಾಯ: 27 ವರ್ಷ, ಮಾಲಕರು, ಜಯಮಹಾದೇವ್ ಟ್ರೇಡಿಂಗ್ ಕಂಪೆನಿ, ಅಂಗಡಿ ಕೋಣೆ ಸಂಖ್ಯೆ; 9, ಎಫ್‌.ಪಿ ಸಂಖ್ಯೆ : 54 ಎಫ್, ಎನ್.ಆರ್ ಸಾವನಿ ಇಂಡಸ್ಟ್ರಿಯಲ್ ವರ್ಚಾ ರಸ್ತೆ, ಸೂರತ್, ಗುಜರಾತ್ ಎಂಬವರು ಪಿರ್ಯಾದಿದಾರರ ಗೇರು ಬೀಜ ಘಟಕಕ್ಕೆ ಭೇಟಿ ನೀಡಿ ತಾನು ಗುಜರಾತ್‌ನಲ್ಲಿರುವ “ಜಯಮಹಾದೇವ್ ಟ್ರೇಡಿಂಗ್ ಕಂಪೆನಿ” ಯ ಮಾಲಕನಾಗಿದ್ದು, ಸದ್ರಿ ಸಂಸ್ಥೆಯು ಆಹಾರ ವಸ್ತುಗಳ ಮಾರಾಟ ಮಾಡುವ ಸಂಸ್ಥೆಯಾಗಿರುವುದಾಗಿ ಪಿರ್ಯಾದಿದಾರರಿಗೆ ತನ್ನ ಪರಿಚಯ ಹಾಗೂ ವ್ಯವಹಾರದ ಬಗ್ಗೆ ತಿಳಿಸಿ, ತನಗೆ ಭಾರೀ ಪ್ರಮಾಣದ ಗೇರು ಬೀಜದ ಅಗತ್ಯ ವಿರುವುದಾಗಿ, ತನಗೆ ಗೇರು ಬೀಜ ಮಾರಾಟ ಮಾಡಿದರೆ ಫಿರ್ಯಾದಿದಾರರಿಗೆ ಯಾವುದೇ ರೀತಿಯ ತೊಂದರೆ ಇಲ್ಲದಂತೆಯೂ ಹಾಗೂ ಗೇರು ಬೀಜ ಖರೀದಿಸಿದ ಹಣವನ್ನು ಪಾವತಿ ಮಾಡುವುದಾಗಿ ಪಿರ್ಯಾದಿದಾರರೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಮುಂದಕ್ಕೆ ಲಿಖಿತ ಕರಾರು ಮಾಡಿಕೊಳ್ಳುವುದಾಗಿ ಆರೋಪಿಯು ಒಪ್ಪಿಕೊಂಡಿರುತ್ತಾರೆ. ಸದ್ರಿ ಎಲ್ಲಾ ವ್ಯವಹಾರಗಳು ಪಿರ್ಯಾದಿದಾರರ ಸಂಸ್ಥೆಯ ಮ್ಯಾನೆಜರ್ ಹರಿಪ್ರಸಾದ್ ಶೆಟ್ಟಿ ರವರ ಸಮಕ್ಷಮ ನಡೆದಿರುವುದಾಗಿದೆ. ಪಿರ್ಯಾದಿದಾರರನ್ನು ನಂಬಿಸುವ ಸಲುವಾಗಿ ಆರೋಪಿಯು ಮೊದ ಮೊದಲು ಅಂದರೆ ದಿನಾಂಕ: 13/03/2019 ರಿಂದ ದಿನಾಂಕ: 08/07/2019 ರವರೆಗೆ ಪಿರ್ಯಾದಿದಾರರ ಸಂಸ್ಥೆಯಿಂದ ಹಲವಾರು ಬಾರಿ ವಿವಿಧ ದಿನಾಂಕಗಳಂದು ಸುಮಾರು ಒಟ್ಟು ರೂ. 26,86,574/- ಮೌಲ್ಯದ ಗೇರು ಬೀಜ ಸರಕನ್ನು ಪಡೆದುಕೊಂಡು, ಪಿರ್ಯಾದಿದಾರರನ್ನು ನಂಬಿಸುವ ಸಲುವಾಗಿ ಆರೋಪಿಯು ಸದರಿ ಸರಕುಗಳ ಮೊತ್ತವನ್ನು ವಿವಿಧ ದಿನಾಂಕಗಳಂದು ಪಾವತಿಸಿ ಪಿರ್ಯಾದಿದಾರರ ನಂಬಿಕೆಯನ್ನು ಗಳಿಸಿಕೊಂಡಿರುತ್ತಾರೆ. ಆರೋಪಿಯು ಅಕ್ರಮ ಲಾಭಗಳಿಸುವ ಉದ್ದೇಶದಿಂದಲೇ ತನಗೆ ಗೇರು ಬೀಜದ ಅವಶ್ಯಕತೆ ಇರುವುದಾಗಿ ಸರಕನ್ನು ಮುಂಚಿತವಾಗಿ ಕಳುಹಿಸಿಕೊಡುವಂತೆಯೂ ಸರಕು ಸರಬರಾಜು ಆದ ಕೂಡಲೇ ಹಣ ಪಾವತಿಸುವುದಾಗಿಯೂ ಎಂದು ಪಿರ್ಯಾದಿದಾರರನ್ನು ನಂಬಿಸಿದ್ದು, ಅಲ್ಲದೇ ಪಿರ್ಯಾದಿದಾರರು ಮಾರಾಟದ ಬಗ್ಗೆ ಸೂಕ್ತ ಲಿಖಿತ ಒಪ್ಪಂದ/ಕರಾರು ಮಾಡಿಕೊಳ್ಳುವ ಬಗ್ಗೆ ಪ್ರಸ್ತಾಪನೆ ಮಾಡಿದಾಗಲೆಲ್ಲಾ ಆರೋಪಿಯು ಸುಳ್ಳು ಕಾರಣಗಳನ್ನು ನೀಡುತ್ತಾ ಮುಂದ ಹಾಕುತ್ತಾ ಬಂದಿರುತ್ತಾರೆ. ಆರೋಪಿಯ ಬೇಡಿಕೆಯಂತೆ ಅವರನ್ನು ನಂಬಿ ಪಿರ್ಯಾದಿದಾರರು ಅವರ ಸಂಸ್ಥೆಯಿಂದ ದಿನಾಂಕ:09/07/2019 ರಿಂದ ದಿನಾಂಕ:10/03/2020 ರವರೆಗೆ ಬೇರೆ ಬೇರೆ ದಿನಾಂಕಗಳಂದು ಒಟ್ಟು ರೂ. 99,95,604/- ಮೌಲ್ಯದ ಗೇರು ಬೀಜ ಸರಕನ್ನು ಆರೋಪಿಯ ಸಂಸ್ಥೆಗೆ ರವಾನಿಸಿದ್ದು, ಆದರೇ ಆರೋಪಿಯು ಫಿರ್ಯಾದಿದಾರರಿಗೆ ವಂಚಿಸುವ ಉದ್ಧೇಶದಿಂದಲೇ ದಿನಾಂಕ: 09/07/2019 ರಿಂದಲೂ ಗೇರು ಬೀಜ ಸರಕಿನ ಮೊತ್ತವನ್ನು ಬಾಕಿ ಉಳಿಸಿಕೊಳ್ಳತ್ತಾ ಬಂದಿದ್ದು, ಒಟ್ಟು ಬಾಕಿ ರೂ. 39,14,461/- ಮೊತ್ತವನ್ನು ಉದ್ಧೇಶಪೂರಕವಾಗಿ ಬಾಕಿ ಉಳಿಸಿಕೊಂಡು ಪಿರ್ಯಾದಿದಾರರ ನಂಬಿಕೆಗೆ ದ್ರೋಹವೆಸಗಿ ವಂಚಿಸಿರುತ್ತಾರೆ. ಪಿರ್ಯಾದಿದಾರರು ಆರೋಪಿಗೆ ಹಣ ಮುರುಪಾವತಿಸುವಂತೆ ಹಲವಾರು ಬಾರಿ ಫೋನ್ ಮಾಡಿ ಸಂಪರ್ಕಿಸಿದಾಗ ಸುಳ್ಳು ಕಾರಣಗಳನ್ನು ನೀಡುತ್ತಾ ದಿನ ಮುಂದುಡುತ್ತಾ ಬಂದಿದ್ದು, ನಂತರ ಉದ್ದೇಶ ಪೂರ್ವಕವಾಗಿ ಕರೆಗಳನ್ನುಸ್ವೀಕರಿಸದೆ ನೀರಾಕರಿಸಿರುತ್ತಾರೆ. ಆದ್ದರಿಂದ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿರುವ ಪಿರ್ಯಾದು ಆಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 121/2021 ಕಲಂ 405, 409, 415, 420 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಮಲ್ಪೆ: ಪಿರ್ಯಾದಿ ಉದಯ್ ಕುಮಾರ್, ಪ್ರಾಯ:52 ವರ್ಷ, ತಂದೆ: ಕೆ ಗೋಪಾಲ, ವಾಸ: ವಸುಂದರ ಅಪಾರ್ಟ್‌ಮೆಂಟ್, 3ನೇ ಫ್ಲೋರ್, ಅಜ್ಜರಕಾಡು, ಉಡುಪಿ ತಾಲೂಕು ಇವರ ಕೆಎ-52-9966 ನೇ ಟಾಟಾ ಇನ್ಸುಲೇಟರ್ ವಾಹನವನ್ನು ಮಲ್ಪೆ ಯಲ್ಲಿ ಮಂಜುಗಡ್ಡೆ ಸಾಗಿಸಲು ಉಪಯೋಗಿಸುತ್ತಿದ್ದು ,ಮೀನುಗಾರಿಕೆ ಕೆಲಸ ಮುಗಿದ ನಂತರ ದಿನಾಂಕ 04/06/21 ರಂದು ಮಲ್ಪೆ ಬಂದರಿನಲ್ಲಿ ಸದ್ರಿ ವಾಹನವನ್ನು ನಿಲ್ಲಿಸಿರುತ್ತಾರೆ . ದಿನಾಂಕ 10-06-21 ರಂದು ಬೆಳಿಗ್ಗೆ 10:00 ಗಂಟೆಗೆ ಪಿರ್ಯಾದಿದಾರರು ಮಲ್ಪೆ ಬಂದರಿಗೆ ಹೋಗಿ ವಾಹನವನ್ನು ಪರಿಶೀಲಿಸಿ , ಅದೇ ಸ್ಥಳದಲ್ಲಿ ನಿಲ್ಲಿಸಿರುವುದಕ್ಕೆ ಲಾಕ್ ಮಾಡಿ ಬಂದಿರುತ್ತಾರೆ . ದಿನಾಂಕ 19-06-21 ರಂದು ಬೆಳಿಗ್ಗೆ 09:00 ಗಂಟೆಗೆ ವಾಹನ ನಿಲ್ಲಿಸಿದ ಸ್ಥಳಕ್ಕೆ ಹೋಗಿ ನೋಡಿದಾಗ ವಾಹನವು ಕಾಣಿಸಿದೆ ಇದ್ದು , ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ , ಪಿರ್ಯಾದುದಾರರ ಕೆಎ 52-9966 ಟಾಟಾ ಇನ್ಸುಲೇಟರ್ ವಾಹನವನ್ನು ದಿನಾಂಕ 10-06-21 ರಂದು ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ : 19/06/2021 ರಂದು ಬೆಳಿಗ್ಗೆ 09:00 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದು , ವಾಹನದ ಅಂದಾಜು ಮೌಲ್ಯ 2,50,000 ಆಗಿರುತ್ತದೆ. ಈ ಬಗ್ಗೆ ಮಲ್ಪೆ ಠಾಣಾ ಅಪರಾಧ ಕ್ರಮಾಂಕ 79/2021 ಕಲಂ 379 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ 

  • ಪಡುಬಿದ್ರಿ: ದಿನಾಂಕ 19/06/2021 ರಂದು ಮಧ್ಯಾಹ್ನ 12:30 ಗಂಟೆಗೆ ಬಡಾ ಗ್ರಾಮದ ಬುದಗಿ ಪೆಟ್ರೋಲ್ ಬಂಕ್ ನಿಂದ ಸಲ್ಪ ಮುಂದೆ ಯು-ಟರ್ನ್‌ ಡಿವೈಡರ್ ಬಳಿ ರಾಹೆ 66 ರಲ್ಲಿ ಮಂಗಳೂರು ಉಡುಪಿ ರಸ್ತೆಯಲ್ಲಿ ಪಿರ್ಯಾದಿ ನೋರಾ ರೀಟಾ ಡಿಸೋಜಾ (50) ಗಂಡ: ಡೆನ್ನಿಸ್ ಪೌಲ್‌ಡಿಸೋಜಾ ವಾಸ: ಇಮೂನ್ಯುಯಲ್ ಬಂಡಸಾಲೆ, ಕೆಮ್ಮುಂಡೇಲು ಅಂಚೆ, ಎಲ್ಲೂರು ಗ್ರಾಮ, ಕಾಪು ಇವರ ಗಂಡ ಡೆನ್ನಿಸ್ ಪೌಲ್‌ ಡಿಸೋಜಾ (54 ವರ್ಷ) ಎಂಬವರು KA 20 EM 8639 ನೇ ನಂಬ್ರದ ಸ್ಕೂಟಿಯನ್ನು ಚಲಾಯಿಸಿಕೊಂಡು ಹೋಗುತ್ತಿರುವ ಸಮಯ ಆರೋಪಿ ಸುವಿನ್ ಎಂಬವನು ಅದೇ ರಸ್ತೆಯಲ್ಲಿ KA-19 MD-0493 ನೇ ಕಾರನ್ನು ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡೆನ್ನಿಸ್ ಪೌಲ್‌ ಡಿಸೋಜಾ ರವರು ಚಲಾಯಿಸುತ್ತಿದ್ದ ಸ್ಕೂಟಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಉಂಟು ಮಾಡಿದ ಪರಿಣಾಮ ಡೆನ್ನಿಸ್‌ ಪೌಲ್‌ ಡಿಸೋಜಾ ರವರ ತಲೆಗೆ ಗಂಭೀರ ಗಾಯ ಉಂಟಾಗಿ ಉಡುಪಿ ಆದರ್ಶ ಆಸ್ಪತ್ತೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ . ಈ ಬಗ್ಗೆ ಪಡುಬಿದ್ರಿ ಠಾಣಾ ಅಪರಾಧ ಕ್ರಮಾಂಕ 58/2021 ಕಲಂ 279,338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಮನುಷ್ಯ ಕಾಣೆ ಪ್ರಕರಣ

  • ಗಂಗೊಳ್ಳಿ: ಫಿರ್ಯಾದಿ ಶ್ರೀಮತಿ ಬಾಬಿ (39 ವರ್ಷ) , ಗಂಡ : ಚಂದ್ರ, ವಾಸ: ಹಳ್ಳಿ ಹೆಬ್ಬಾಗಿಲು ಮನೆ ಹತ್ತಿರ, ಆಲೂರು ಗ್ರಾಮ, ಕುಂದಾಪುರ ತಾಲೂಕು ಇವರು ತನ್ನ ಸಂಸಾರದೊಂದಿಗೆ ಆಲೂರು ಗ್ರಾಮದ ಹಳ್ಳಿ ಹೆಬ್ಬಾಗಿಲು ಮನೆ ಹತ್ತಿರ ವಾಸವಾಗಿದ್ದು, ಪಕ್ಕದಲ್ಲಿಯೇ ಫಿರ್ಯಾದುದಾರರ ಚಿಕ್ಕಮ್ಮ ಶೇಷಿ ಹಾಗೂ ಅವರ ಮಗಳು ವನಜ (29 ವರ್ಷ) ಎಂಬುವವರು ವಾಸವಾಗಿದ್ದರು. ಫಿರ್ಯಾದುದಾರರ ಗಂಡ ಚಂದ್ರ (42 ವರ್ಷ) ಹಾಗೂ ಅವಿವಾಹಿತೆ ವನಜ ರವರು ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದು, ದಿನಾಂಕ 07/06/2021 ಮಧ್ಯಾಹ್ನ 2:00 ಗಂಟೆಗೆ ಚಂದ್ರ ರವರು ಪೇಟೆಗೆ ಹೋಗುವುದಾಗಿ ಹೇಳಿ ಹೋಗಿದ್ದು, ಅದೇ ದಿನ ಮಧ್ಯಾಹ್ನ ವನಜಾ ರವರು ಸಹ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದು, ಇಬ್ಬರೂ ಕೂಡ ಈವರೆಗೆ ವಾಪಾಸು ಮನೆಗೆ ಬಂದಿರುವುದಿಲ್ಲ. ಚಂದ್ರ ಹಾಗೂ ವನಜ ರವರು ಪರಸ್ಪರ ಪ್ರೀತಿಸಿ ಮನೆ ಬಿಟ್ಟು ಹೋಗಿರಬಹುದು ಎಂಬಿತ್ಯಾದಿಯಾಗಿರುತ್ತದೆ.ಈ ಬಗ್ಗೆ ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ 54/2021 ಕಲಂ ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ ಗ್ರಾಮಾಂತರ ಪಿರ್ಯಾದಿ ಸಂಪತ್‌ ಪ್ರಾಯ: 37 ವರ್ಷ ತಂದೆ: ಸುಂದರ ಸುವರ್ಣ ವಾಸ ಕರಿಯಕಲ್ಲು, ಕೋಡೆಲು, ಮಿಯಾರು ಗ್ರಾಮ, ಸಾಣೂರು ಅಂಚೆಃ, ಕಾರ್ಕಳ ಇವರ ತಂದೆ ಸುಂದರ ಸುವರ್ಣ (74) ಇವರು ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಮಹಾಬಲ ಬೆಟ್ಟು, ಹೊಸಮನೆ ಎಂಬಲ್ಲಿ ಖಾಯಂ ವಾಸ ಮಾಡಿಕೊಂಡಿದ್ದು ಕಳೆದ 2 ತಿಂಗಳಿನಿಂದ ಒಬ್ಬಂಟಿಯಾಗಿ ವಾಸ ಮಾಡಿಕೊಂಡಿದ್ದವರು ಕಾಲುಗಂಟು ನೋವಿನಿಂದ ಬಳಲುತ್ತಿದ್ದು ಒಂಟಿತನ ಮತ್ತು ಕಾಲುನೋವಿನಿಂದ ಮಾನಸಿಕವಾಗಿ ಮನನೊಂದು ಈ ದಿನ ದಿನಾಂಕ 19/06/2021 ರಂದು ಸಂಜೆ 05.00 ಗಂಟೆಯಿಂದ 06:00 ಗಂಟೆಯ ನಡುವೆ ತನ್ನ ವಾಸ್ತವ್ಯದ ಮನೆಯ ಒಳಕೋಣೆಯ ಜಂತಿಗೆ ನೈಲಾನ್‌ ಹಗ್ಗ ಹಾಕಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣಾ ಯು,ಡಿ,ಆರ್ ನಂಬ್ರ: 17/2021 ಕಲಂ: 174 ಸಿ,ಆರ್,ಪಿ,ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 20-06-2021 11:11 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080