ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕೋಟ: ಪಿರ್ಯಾದಿದಾರರಾದ ಲವ ನಾಯ್ಕ (49) ತಂದೆ: ದಿ. ದೇವದಾಸ ನಾಯ್ಕ, ವಾಸ: ಶ್ರೀಗೌರಿ, ಮನೆ ನಂಬ್ರ 1-139(3), ಹಂಗಾರಕಟ್ಟೆ, ಬಾಳ್ಕುದ್ರು ಗ್ರಾಮ, ಬ್ರಹ್ಮಾವರ ತಾಲೂಕು ಇವರು ದಿನಾಂಕ 15/06/2021 ರಂದು ಮೀನುಗಾರಿಕೆ ಕೆಲಸಕ್ಕೆ ತನ್ನ ಸೈಕಲ್‌ನಲ್ಲಿ ಹೋಗುತ್ತಿರುವಾಗ ಸಮಯ 12:00 ಗಂಟೆಗೆ ಐರೋಡಿ ಗ್ರಾಮದ ಸಕಾಲಿಕ ಐಸ್‌ಕ್ರೀಮ್‌ ಪ್ಯಾಕ್ಟರಿಯ ಬಳಿ ತಲುಪುವಾಗ KA-20-ES-0135 ನಂಬ್ರದ ಸ್ಕೂಟಿಯನ್ನು ಸವಾರ ದಿನೇಶ್ ಖಾರ್ವಿ  ಎಂಬಾತನು  ಹಿಂಬದಿ ಸವಾರಿಣಿಯಾಗಿ ಜ್ಯೋತಿರವರನ್ನು ಮತ್ತು ಒಂದು ಮಗವನ್ನು ಕುಳ್ಳಿರಿಸಿಕೊಂಡು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಪರಿಣಾಮ ಸ್ಕೂಟಿಯು ರಸ್ತೆಯ ತಿರುವಿನಲ್ಲಿ ಸವಾರನ ಹತೋಟಿ ತಪ್ಪಿ ಸ್ಕೀಡ್‌ಆಗಿ ಬಿದ್ದ ಪರಿಣಾಮ ಸ್ಕೂಟಿಯಲ್ಲಿದ್ದ ಸಹ ಸವಾರಿಣೆ ಜ್ಯೋತಿ ರವರ  ತಲೆಗೆ ತೀವೃ ಸ್ವರೂಪದ ರಕ್ತ ಗಾಯ ಹಾಗೂ ಮೈ ಕೈ ತರಚಿದ ಗಾಯ, ಸವಾರ ದಿನೇಶ್ ಖಾರ್ವಿ ಹಾಗೂ ಮಗುವಿಗೆ ಸಣ್ಣಪುಟ್ಟ ತರಚಿದ ಗಾಯವಾಗಿದ್ದು, ತೀವೃ ಗಾಯಗೊಂಡಿದ್ದ ಸಹ ಸವಾರಿಣಿ ಜ್ಯೋತಿರವರನ್ನು ಚಿಕಿತ್ಸೆಗೆ ಬ್ರಹ್ಮಾವರ ಪ್ರಣವ್‌ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ವೈದ್ಯರ ಸಲಹೆಯಂತೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ, ಸದ್ರಿ  ಅಪಘಾತದ ಬಗ್ಗೆ ಗಾಯಾಳುವಿನ ಮನೆಯವರೇ ದೂರು ನೀಡಿರಬಹುದಾಗಿ ಭಾವಿಸಿ ಸುಮ್ಮನಿದ್ದು ದೂರು ದಾಖಲಾಗದ ವಿಚಾರ ತಿಳಿದು ಠಾಣೆಗೆ ಬಂದು ದೂರು ನೀಡಿದ್ದರಿಂದ ಪ್ರಕರಣ ದಾಖಲಾಗಲು ವಿಳಂಬವಾಗಿರುವುದಾಗಿದೆ.ಈ ಬಗ್ಗೆ ಕೋಟ ಪೊಲಿಸ್‌ ಠಾಣಾ ಅಪರಾಧ ಕ್ರಮಾಂಕ 121/2021 ಕಲಂ:279, 338 ಐ.ಪಿ.ಸಿಯಂತೆ ಪ್ರಕರಣ ಧಾಖಲಾಗಿರುತ್ತದೆ.

ಇತರ ಪ್ರಕರಣ

 • ಗಂಗೊಳ್ಳಿ: ಫಿರ್ಯಾದುದಾರರಾದ ರಾಹುಲ್‌ ಪೂಜಾರಿ (27) ತಂದೆ ರಾಜೀವಪೂಜಾರಿ, ವಾಸ: ಆನಗೋಡು, ತ್ರಾಸಿ ಗ್ರಾಮ, ಕುಂದಾಪುರ ತಾಲೂಕು ಇವರು ಸಿಲ್ಯಾಂಡ್‌ ಬಾರ್‌ & ರೆಸ್ಟೋರೆಂಟ್‌ ನಡೆಸಿಕೊಂಡಿದ್ದು, ಅವರು ದಿನಾಂಕ 19/06/2020 ರಂದು ಮನೆಯಲ್ಲಿರುವಾಗ ರಾತ್ರಿ 10:30 ಗಂಟೆಗೆ ಆಪಾದಿತ ಶ್ರೀಕಾಂತ ಎಂಬುವವನು ಮೋಬೈಲ್‌ಗೆ ಕರೆ ಮಾಡಿ ಕುಡಿಯಲು ಬಿಯರ್‌ ಬೇಕು ಎಂದು ಹೇಳಿದ್ದು, ಅದಕ್ಕೆ ಲಾಕ್‌ಡೌನ್‌ ಇರುವ ಕಾರಣ ಬಾರ್‌ ಬಂದ್‌ ಇದೆ, ಬಿಯರ್‌ ಇಲ್ಲ ಎಂದು ರಾಹುಲ್‌ ಇವರು ತಿಳಿಸಿದ್ದು, ಆಪಾದಿತನು ಇವರಿಗೆ“ ಅವಾಚ್ಯ ವಾಗಿ ಬೈದು ಜೀವ ಬೆದರಿಕೆ ಹಾಕಿರುತ್ತಾನೆ. ಇದರಿಂದ ಹೆದರಿದ ಇವರು ತಮ್ಮ KA-20-MC-7712 ಕಾರಿನಲ್ಲಿ ಪೊಲೀಸ್‌ ಠಾಣೆಗೆ ಬರುವಾಗ ಸಮಯ ಸುಮಾರು ರಾತ್ರಿ 11:00 ಗಂಟೆಗೆ ತ್ರಾಸಿಯ ಮಯೂರ ಡಾಬಾ ಬಳಿ ತಲುಪುವಾಗ ರಸ್ತೆಯ ಬದಿಯಲ್ಲಿ KA-30-M-7479 CITY HONDA ಕಾರನ್ನು ನಿಲ್ಲಿಸಿಕೊಂಡು ನಿಂತಿದ್ದ ಆಪಾದಿತರಾದ ಶ್ರೀಕಾಂತ, ದೀಪಕ್, ಸಂತೋಷಪೂಜಾರಿ, ಸುರೇಶಪೂಜಾರಿ, ಪ್ರಸಾದ ಪೂಜಾರಿ ಎಂಬುವವರು ಕಾರನ್ನು ಅಡ್ಡಗಟ್ಟಿ, ಅವಾಚ್ಛ್ಯ ಶಬ್ದದಿಂದ ಬೈದು, ಕುಡಿಯಲು ಬಿಯರ್‌ ಕೊಡು ಇಲ್ಲವಾದಲ್ಲಿ ಕೊಲ್ಲುವುದಾಗಿ ಹೇಳಿ ಜೀವ ಬೆದರಿಕೆಹಾಕಿ, ಹಲ್ಲೆಮಾಡಲು ಮುಂದಾಗಿದ್ದು, ಆಪಾದಿತರು ಗುಂಪು ಸೇರಿ ಸರ್ಕಾರ ಹಾಗೂ ಜಿಲ್ಲಾಡಳಿತದ ಲಾಕ್‌ಡೌನ್‌ ಆದೇಶವನ್ನು ಉಲ್ಲಂಘಿಸಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲಿಸ್‌ ಠಾಣಾ ಅಪರಾಧ ಕ್ರಮಾಂಕ 55/2021 ಕಲಂ:143, 147, 341, 504, 506, 269 ಜೊತೆಗೆ  149 ಐ.ಪಿ.ಸಿಯಂತೆ ಪ್ರಕರಣ ಧಾಖಲಾಗಿರುತ್ತದೆ.
 • ಶಂಕರನಾರಾಯಣ: ಪಿರ್ಯಾದಿದಾರರಾಧ ಶಂಕರ  ಶೆಟ್ಟಿ  (67) ತಂದೆ, ಶೀನಪ್ಪ  ಶೆಟ್ಟಿವಾಸ, ಗಡಿಬಚ್ಚಲು   ಸಿದ್ದಾಪುರ ಗ್ರಾಮ  ಕುಂದಾಪುರ  ತಾಲೂಕು ಇವರ  ಹೆಂಡತಿಗೆ ಹಾಗೂ  ಆರೋಪಿಗಳಾದ ಮಂಜು, ಸಂದೀಪ, ರಘುರಾಮ ಶೆಟ್ಟಿ ಇವ ಮನೆಯವರಿಗೆ  ಜಾಗದ   ಬಗ್ಗೆ   ಹಾಗೂ  ಕುಟುಂಬದ ದೈವದ  ಬಗ್ಗೆ   ತಕರಾರು  ಇರುತ್ತದೆ,   ಈ   ಬಗ್ಗೆ   ಹಲವು  ಸಲ   ಆರೋಪಿಗಳು  ಇವರ  ಹೆಂಡತಿಯವರಲ್ಲಿ  ಗಲಾಟೆ  ಮಾಡಿರುತ್ತಾರೆ, ಅದರಂತೆ  ದಿನಾಂಕ  19/06/2021 ರಂದು ರಾತ್ರಿ  ಸಮಯ  ಆರೋಪಿಗಳು  ಫಿರ್ಯಾಧುದಾರರ  ಹೆಂಡತಿಗೆ  ಪೋನ್  ಮಾಡಿ  ನಾಳೆ  ದಿನ  ನಮ್ಮ ಜಾಗವನ್ನು  ಜೆಸಿಬಿ  ತಂದು  ಕೆಲಸ  ಮಾಡುತ್ತೆವೆ, ಈ   ಸಮಯ  ನಿಮ್ಮ   ಪೈಪಲೈನ್  ಹಾಳಾದರೆ  ನಾವು ಜವಬ್ದಾರರು ಅಲ್ಲ ಎಂದು ಹೇಳಿರುತ್ತಾರೆ, ಆ ನಂತರ ಸುಮಾರು 23:30 ಘಂಟೆಗೆ   ಶಂಕರ  ಶೆಟ್ಟಿ  ರವರ  ವಾಸದ ಮನೆಯಾದ ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ಗಡಿಬಚ್ಚಲು ಎಂಬಲ್ಲಿ   ಮನೆಯ ಒಳಗಡೆ  ಮಲಗಿರುವಾಗ   ಆರೋಪಿಗಳು ಸಮಾನ ಉದ್ದೇಶದಿಂದ  ಮನೆಯ  ಅಂಗಳಕ್ಕೆ ಬಂದು ಅಲ್ಲಿ  ಮನೆಯ  ಮಾಡಿನ  ಹೆಂಚಿಗೆ  ಕಲ್ಲನ್ನು  ಹೊಡೆದು  ಹಾನಿ  ಮಾಡಿದ್ದು, ಆ  ಬಳಿಕ ಆರೋಪಿಯು  ಮನೆಯೊಳಗೆ  ಅಕ್ರಮ ಪ್ರವೇಶ  ಮಾಡಿ ಮರದ  ದೊಣ್ಣೆಯಿಂದ ಹಾಗೂ  ಕೈಯಿಂದ  ಹಲ್ಲೆ  ಮಾಡಿ ಕಾಲಿನಿಂದ  ತುಳಿದು   ಅವಾಚ್ಯ  ಶಬ್ದದಿಂದ ಬೈದು ಜೀವ ಬೆದರಿಕೆ ಹಾಕಿ ಹಲ್ಲೆ  ಮಾಡಲು ಉಪಯೋಗಿಸಿದ ಮರದ ದೊಣ್ಣೆಯನ್ನು ಅಲ್ಲಿಯೇ ಬಿಸಾಡಿ  ಹೋಗಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲಿಸ್‌ ಠಾಣಾ ಅಪರಾಧ ಕ್ರಮಾಂಕ 68 /2021  ಕಲಂ: 448,323, 324, 504 506  ಜೊತೆಗೆ 34  ಐ.ಪಿ.ಸಿಯಂತೆ ಪ್ರಕರಣ ಧಾಖಲಾಗಿರುತ್ತದೆ.
 • ಗಂಗೊಳ್ಳಿ: ಪಿರ್ಯಾದಿದಾರರಾದ ವಿಜಯ ಶೆಟ್ಟಿ (37) ತಂದೆ: ಆನಂದ, ವಾಸ: ಬಚ್ಚಯ್ಯ ಶೆಟ್ಟಿ ಮನೆ, ಕಟ್ಟಿನಮಕ್ಕಿ, ಹಕ್ಲಾಡಿ ಗ್ರಾಮ, ಕುಂದಾಪುರ ತಾಲೂಕು, ಇವರು ಕುಟುಂಬಸ್ಥರೊಂದಿಗೆ ಬಚ್ಚಯ್ಯ ಶೆಟ್ಟಿ ಮನೆ, ಕಟ್ಟಿನಮಕ್ಕಿ, ಹಕ್ಲಾಡಿ ಗ್ರಾಮಲ್ಲಿ ವಾಸವಾಗಿದ್ದು, ದಿನಾಂಕ 19/06/2021 ರಂದು ಸಂಜೆ 5:00 ಗಂಟೆಗೆ ಇವರು ತನ್ನ ಹೆಂಡತಿ ಪೂಜಾಳೊಂದಿಗೆ ತಮ್ಮ ಮನೆಯ ಅಡುಗೆ ಕೋಣೆಯಲ್ಲಿರುವಾಗ ಮನೆಯಲ್ಲಿಯೇ ಇದ್ದ ವಿಜಯ ಶೆಟ್ಟಿ ಇವರ ತಮ್ಮ ಜಯಪ್ರಕಾಶ ಶೆಟ್ಟಿ ಹಾಗೂ ತಂಗಿ ಜ್ಯೋತಿ ಶೆಟ್ಟಿ ಎಂಬುವವರು ಬಳಿ ಬಂದು ಜಗಳ ಮಾಡಿ “ ನೀವು ಈಗಲೇ ಮನೆ ಬಿಟ್ಟು ಹೋಗಿ” ಎಂದು ಹೇಳುತ್ತಾ ಜಯಪ್ರಕಾಶ ಶೆಟ್ಟಿಯು ಮರದ ದೊಣ್ಣೆಯಿಂದ ಇವರ ಮುಖ ಹಾಗೂ ಬಲಕೈ ಮೊಣಗಂಟಿಗೆ ಹೊಡೆದಿದ್ದು, ಆಗ ಜ್ಯೋತಿಯು ಅಲ್ಲೇ ಇದ್ದ ಸ್ಟೀಲ್‌ ಡ್ರಮ್‌ ಮುಚ್ಚಳದಿಂದ ಎಡ ಕಣ್ಣಿನ ಬಳಿ ಹೊಡೆದಿದ್ದು, ಬಳಿಕ ಆಪಾದಿತರು ವಿಜಯ ಶೆಟ್ಟಿ ರವರನ್ನು ಕೆಳಗೆ ಬೀಳಿಸಿದ್ದು, ಆ ಸಮಯ ಜ್ಯೋತಿಯು ಬಳೆಯ ತುಂಡಿನಿಂದ ವಿಜಯ ಶೆಟ್ಟಿ ರವರ ಎಡ ಕಾಲಿನ ಪಾದಕ್ಕೆ ಗೀರಿ ಗಾಯ ಮಾಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲಿಸ್‌ ಠಾಣಾ ಅಪರಾಧ ಕ್ರಮಾಂಕ 56/2021 ಕಲಂ: 324, 506 ಜೊತೆಗೆ  34 ಐ.ಪಿ.ಸಿಯಂತೆ ಪ್ರಕರಣ ಧಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 20-06-2021 06:35 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ