ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಉಡುಪಿ: ದಿನಾಂಕ 19/05/2023 ರಂದು ಬೆಳಿಗ್ಗೆ 11:00 ಗಂಟೆಗೆ 76 ನೇ ಬಡಗುಬೆಟ್ಟು ಗ್ರಾಮದ ಕಿನ್ನಿಮುಲ್ಕಿ ಪೃಥ್ವಿ ಎಂಟರ್‌ಪ್ರೈಸಸ್ ಎದುರುಗಡೆ ಹಾದುಹೋಗಿರುವ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಆರೋಪಿ KA-20 EN-2889 ನೇ ಸ್ಕೂಟರ್ ಸವಾರ ನಿತಿನ್ ಎಂಬಾತನು ತಾನು ಸವಾರಿ ಮಾಡುತ್ತಿದ್ದ ಸ್ಕೂಟರ್‌ನ್ನು ಕಿನ್ನಿಮುಲ್ಕಿ ಕಡೆಯಿಂದ ಜೋಡುಕಟ್ಟೆ ಕಡೆಗೆ ಏಕಮುಖ ಸಂಚಾರ ಇರುವ ರಸ್ತೆಯಲ್ಲಿ ವಿರುದ್ದ ದಿಕ್ಕಿನಲ್ಲಿ ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು  ಬಂದು ಅದೇ ರಸ್ತೆಯಲ್ಲಿ ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರಾಧ ಕುಸುಮ (40) ವರ್ಷತಂದೆ:ದಿ. ಬೂದ,ವಾಸ:ಶೋಭ ನಿಲಯ ಲೇಬರ್ ಕಾಲೋನಿ ಕನ್ನರ್ ಪಾಡಿ ಕಿನ್ನಿಮುಲ್ಕಿ ಕಡೆಕಾರು ಗ್ರಾಮ, ಉಡುಪಿ ಇವರಿಗೆ ಡಿಕ್ಕಿ ಹೊಡೆದ ಪರಿಣಾಮ ಇವರು ರಸ್ತೆಗೆ ಬಿದ್ದು, ಬಲಕಾಲಿಗೆ ಗಂಬೀರ ಸ್ವರೂಪದ ಮೂಳೆ ಮುರಿತದ ಜಖಂ ಆಗಿ ಚಿಕಿತ್ಸೆಯ ಬಗ್ಗೆ ಹೈಟೆಕ್ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 54/2023 ಕಲಂ 279,338 ಐ.ಪಿ.ಸಿ ಜೊತೆಗೆ 218 r/w 177 ಐ.ಎಮ್.ವಿ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 20/05/2023 ರಂದು ಬೆಳಿಗ್ಗೆ ಸಮಯ ಸುಮಾರು 8:11 ಗಂಟೆಗೆ, ಕುಂದಾಪುರ  ತಾಲೂಕಿನ ಕೊಟೇಶ್ವರ  ಗ್ರಾಮದ ಅಂಕದಕಟ್ಟೆಯ ಸರ್ಜನ್‌ ಆಸ್ಪತ್ರೆಯ ಬಳಿ,  ಆಪಾದಿತ ಎಂ ಪ್ರಭಾಕರ ಶೆಟ್ಟಿ ಎಂಬವರು KA-20 MB-5455-  ಕ್ರೇಟಾ ಕಾರನ್ನು ಎನ್‌‌‌. ಹೆಚ್‌66 ಸರ್ವಿಸ್‌ರಸ್ತೆಯ ಎಡಬದಿಯ ಗೋಪಲಾಡಿ ರಸ್ತೆಯಿಂದ ಯಾವುದೇ ಸೂಚನೆ ನೀಡದೇ ಅತೀವೇಗ  ಹಾಗೂ ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಸರ್ವಿಸ್‌ರಸ್ತೆಗೆ ತಿರುಗಿಸಿ, ಕುಂದಾಪುರ ಕಡೆಯಿಂದ ಕೊಟೇಶ್ವರ ಕಡೆಗೆ ಪಿರ್ಯಾದಿದಾರರಾದ ಮೊಹಮ್ಮದ್‌ ರೀಯಾನ್‌ (25)ತಂದೆ ಮೊಹಮ್ಮದ್‌ ರಫೀಕ್‌ ವಾಸ: ರಾಧೀಕಾ ಗೇರುಭೀಜದ ಫ್ಯಾಕ್ಟರಿ ಬಳಿ, ಬೆಳ್ವೆ ಗ್ರಾಮ ಕುಂದಾಪುರ ಎಂಬವರು ಪೂರ್ವ  ಬದಿಯ  NH 66  ಸರ್ವಿಸ್‌ರಸ್ತೆಯಲ್ಲಿ,  ಸವಾರಿ ಮಾಡಿಕೊಂಡು ಹೋಗುತ್ತಿದ್ದ  KA-20-Q-7064 – TVS  VICTOR ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೊಹಮ್ಮದ್‌ ರೀಯಾನ್‌ ರವರ ಎಡಕಾಲಿನ ಮುಂಗಾಲು ಗಂಟಿನ ಕೆಳಗೆ ಚರ್ಮ ಹರಿದು ಹೋದ ರಕ್ತಗಾಯ ಹಾಗೂ ಎಡ ಕೈಗೆ ತರಚಿದ ಗಾಯವಾಗಿ   ಅಂಕದಕಟ್ಟೆಯ ಸರ್ಜನ್‌ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು  ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ. ಸಿ ಆಸ್ಪತ್ರೆಗೆ ಹೋಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 65/2023 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕುಂದಾಫುರ: ಪಿರ್ಯಾದಿದಾರರಾದ ಬಡಿಯ ಶೆಟ್ಟಿ (67), ತಂದೆ: ದಿ. ಪುಟ್ಟಯ್ಯ ಶೆಟ್ಟಿ  ವಾಸ: ಚಿತ್ತೂರ್‌ ನೀರ್‌ ಕೊಡ್ಲು, ಚಿತ್ತೂರ ಗ್ರಾಮ ಕುಂದಾಪುರ ತಾಲೂಕು ಉಡುಪಿ ಇವರ   ಸಂಬಂದಿಯಾದ ಪ್ರಕಾಶ್‌ ಶೆಟ್ಟಿ (45)ಇವರು ತನ್ನ ಸಂಸಾರದೊಂದಿಗೆ ಕುಂದಾಪುರ ತಾಲೂಕಿನ ಚಿತ್ತೂರು ಗ್ರಾಮದ ನೀರ್‌ ಕೊಡ್ಲು ಎಂಬಲ್ಲಿ ವಾಸ ಮಾಡಿಕೊಂಡಿದ್ದು, ಕೆಲವು ವರ್ಷಗಳಿಂದ ಶರಾಬು ಕುಡಿಯುವ ಅಭ್ಯಾಸವಿದ್ದು, ಇತ್ತಿಚೆಗೆ ಕುಂದಾಪುರ ಪರಿಸರದ ಹೊಟೇಲ್ ನಲ್ಲಿ ಕೆಲಸ ಮಾಡಿಕೊಂಡಿದ್ದು, ರಾತ್ರಿ ಅಂಗಡಿ ಸಮೀಪ , ಬಸ್‌ ನಿಲ್ದಾಣ ಸಮೀಪ ಮಲಗುತ್ತಿರುವ ವಿಚಾರ ಬಡಿಯ ಶೆಟ್ಟಿ ರವರಿಗೆ ತಿಳಿದಿದ್ದು, ದಿನಾಂಕ 20/05/2023 ರಂದು ಬೆಳಿಗ್ಗೆ 10:00 ಗಂಟೆ ಸಮಯಕ್ಕೆ ಸ್ಥಳಿಯರೊಬ್ಬರು ಪೋನ್‌ ಮಾಡಿ ಪ್ರಕಾಶ್‌ ಶೆಟ್ಟಿ ಹೆಮ್ಮಾಡಿಯ ಆದರ್ಶ ಯುವಕ ಮಂಡಲದ ಎದುರು ಚರಂಡಿಯಲ್ಲಿ ಮೃತಪಟ್ಟಿರುವ ಸ್ಥಿತಿಯಲ್ಲಿ ಬಿದ್ದಿರುವುದಾಗಿ ತಿಳಿಸಿದಂತೆ ಬಡಿಯ ಶೆಟ್ಟಿ ರವರು ಸದ್ರಿ ಸ್ಥಳಕ್ಕೆ ಬಂದು ನೋಡಿದಾಗ ಪ್ರಕಾಶ್‌ ಅವರು ಆದರ್ಶ ಯುವಕ ಮಂಡಲದ ಹತ್ತಿರದ ಚರಂಡಿಯಲ್ಲಿ ಎಡ ಮಗ್ಗಲಾಗಿ ಮುಖ ಕೆಳಗಾಗಿ ಬಿದ್ದು ಕೊಂಡು ಮೃತ ಪಟ್ಟಿದ್ದು, ಕಂಡು ಬಂದಿದ್ದು,  ಪ್ರಕಾಶ್‌ ಶೆಟ್ಟಿಯವರು ವೀಪರೀತ ಶರಾಬು ಕುಡಿತದ ಅಭ್ಯಾಸ ಹೊಂದಿದ್ದು, ಸರಿಯಾಗಿ ಅನ್ನ ನೀರನ್ನು ಸೇವಿಸದೆ ಇದ್ದು ಇದರಿಂದಾಗಿ ಯಾವುದೋ ಕಾಯಿಲೆ ಉಲ್ಬಣಗೊಂಡು ದಿನಾಂಕ 20/05/2023 ರಂದು ಬೆಳಿಗ್ಗೆ 09:00 ಗಂಟೆಯಿಂದ 10:00 ಗಂಟೆಯ ನಡುವಿನ ಸಮಯದಲ್ಲಿ ಮೃತ ಪಟ್ಟಿರುವ ಸಾಧ್ಯತೆ ಇದ್ದು, ಮೃತ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಕುಂದಾಫುರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 25/2023 ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 20-05-2023 06:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080