ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣ

  • ಕಾರ್ಕಳ: ಮಧು ಬಿ.ಇ.  ಪೊಲೀಸ್ ಉಪ ನಿರೀಕ್ಷಕರು, ಕಾರ್ಕಳ ನಗರ ಪೊಲೀಸ್ ಠಾಣೆ ಇವರು ಠಾಣಾ ಸಿಬ್ಬಂದಿಯವರೊಂದಿಗೆ ದಿನಾಂಕ:19.05.2021 ರಂದು  ಠಾಣಾ ಸರಹದ್ದಿನಲ್ಲಿ ಇಲಾಖಾ ವಾಹನ ನಂಬ್ರ KA20G 0276 ನೇದರಲ್ಲಿ ರೌಂಡ್ಸು ಕರ್ತವ್ಯದಲ್ಲಿರುತ್ತಾ  ಸಮಯ ಸುಮಾರು  ಬೆಳಗ್ಗೆ  10:20  ಗಂಟೆಗೆ  ಕಾರ್ಕಳ ತಾಲೂಕು ಪಳ್ಳಿ ಗ್ರಾಮದ  ಜೋಡುರಸ್ತೆ ಬಳಿ ತಲುಪುವಾಗ ಡೆಲ್ಟಾ ಜೋನ್ ಎಂಬ ಹೆಸರಿನ ಮೊಬೈಲ್ ಶಾಪ್  ಅನ್ನು ಅಂಗಡಿ ಮಾಲಕ ಶೈಲೇಂದ್ರ ತೆರೆದು ವ್ಯಾಪಾರ ಮಾಡುತ್ತಿದ್ದುದ್ದನ್ನು ಕಂಡು ಮೊಬೈಲ್ ಶಾಪ್  ಮಾಲಕರಲ್ಲಿ  ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ಕೋವಿಡ್ ಕರ್ಪ್ಯೂ ವಿಧಿಸಿ ಆದೇಶ ಹೊರಡಿಸಿದ ಬಗ್ಗೆ  ವಿಚಾರಿಸಿದಾಗ  ಅಂಗಡಿ ಮಾಲಕ ಸಮಂಜಸವಾಗಿ ಉತ್ತರಿಸದೇ ಇದ್ದುದ್ದಲ್ಲದೆ  ಆತನು ಕರ್ನಾಟಕ ಸರಕಾರವು ಹೊರಡಿಸಿರುವ ಆದೇಶವನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದರಿಂದ ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ  62/2021 ಕಲಂ: 269 ಐಪಿಸಿಯಂತೆ ಪ್ರಕರಣ  ದಾಖಲಿಸಲಾಗಿರುತ್ತದೆ.
  • ಕಾಪು: ಕೋವಿಡ್-19 ಕೋರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ  ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ 12/05/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಹೊರಡಿಸಿರುವ ಆದೇಶವನ್ನು ಪರಿಷ್ಕರಿಸಿ ದಿನಾಂಕ 10/05/2021 ,  ಬೆಳಿಗ್ಗೆ 6:00 ಗಂಟೆಯಿಂದ ದಿನಾಂಕ 24/05/2021ರ ಬೆಳಿಗ್ಗೆ 6:00 ಗಂಟೆಯ ವರೆಗೆ ಲಾಕ್ ಡೌನ್ ಘೋಷಿಸಿದ್ದು ಈ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಈ ಬಗ್ಗೆ ವಾಹನ  ತಪಾಸಣೆ ನಡೆಸುವಂತೆ ಮೇಲಾಧಿಕಾರಿಯವರ ಆದೇಶದಂತೆ ರಾಘವೇಂದ್ರ ಸಿ.  ಪೊಲೀಸ್ ಉಪನಿರೀಕ್ಷಕರು, ಕಾಪು ಪೊಲೀಸ್ ಠಾಣೆ ಇವರು ಸಿಬ್ಬಂದಿಯವರೊಂದಿಗೆ  ದಿನಾಂಕ 19.05.2021 ರಂದು 12.00 ಗಂಟೆಯಿಂದ 14.00 ಗಂಟೆಯವರೆಗೆ ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಪಡು ಗ್ರಾಮದ ಕಾಪು ಪೇಟೆಯಲ್ಲಿ ಸಿಬ್ಬಂದಿಯವರ ಸಹಾಯದಿಂದ ಸಾರ್ವಜನಿಕ ರಸ್ತೆಯಲ್ಲಿ ವಾಹನ ತಪಾಸಣೆಯಲ್ಲಿರುತ್ತಾ  ಅಗತ್ಯ ವಸ್ತುಗಳ ಖರೀದಿ ಬಗ್ಗೆ ಸರಕಾರ ನಿಗದಿಪಡಿಸಿದ ಸಮಯ ಅವಕಾಶದ ಬಳಿಕವೂ  ಅನಗತ್ಯವಾಗಿ ಗುಂಪು ಸೇರಿ  ಸಂಚರಿಸುತ್ತಿರುವವರ ವಾಹನಗಳನ್ನು ತಪಾಸಣೆಗಾಗಿ ನಿಲ್ಲಿಸಿ ಪರಿಶೀಲಿಸಿದಲ್ಲಿ  1) KA-20-EM-5013 ನೇ ಸ್ಕೂಟರ್ ಸವಾರ ಪಾಲಾನ್  2) KA-20-EH-3593 ನೇ ಸ್ಕೂಟರ್ ಸವಾರ ಸಚಿನ್  3) KA-20-EG-1327 ನೇ ಕಪ್ಪು ಬಣ್ಣದ BAJAJ ಕಂಪನಿಯ PULSAR ಮೋಟಾರ್ ಸೈಕಲ್  ಸವಾರ ಸುರೇಶ್ ಪುತ್ರನ್  4) KA-20-EM-3923 ನೇ ಮೋಟಾರ್ ಸೈಕಲ್ ಸವಾರ ಸತೀಶ್ ಬಿ ಸಾಲಿಯಾನ್  5) KA-20-EG-9770 ನೇ ಸ್ಕೂಟರ್  ಸವಾರ ಸುಂದರ ಕೋಟ್ಯಾನ್  6)KA-20-EQ-6922 ನೇದರ ಸ್ಕೂಟರ್ ಸವಾರ ಖಡಕ್ ಸಿಂಘ್, ಸದ್ರಿಯವರ ಓಡಾಟದ ಕಾರಣವನ್ನು ವಿಚಾರಿಸಲಾಗಿ, ಯಾವುದೇ ತುರ್ತು ಕಾರಣವಿಲ್ಲದೇ, ಅನಗತ್ಯವಾಗಿ ಸಂಚರಿಸುವುದು ಕಂಡು ಬಂದಿರುತ್ತದೆ. ಸದ್ರಿ ಆರೋಪಿಗಳು  ಘನ ಕರ್ನಾಟಕ ಸರಕಾರವು ಕೋವಿಡ್‌ ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಕೋವಿಡ್‌ ನಿಯಮ ಉಲ್ಲಂಘಿಸಿ ಅನಗತ್ಯವಾಗಿ ವಾಹನದಲ್ಲಿ ಸಂಚರಿಸುತ್ತಿರುವುದರಿಂದ ಈ ಬಗ್ಗೆ ಕಾಪು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ  77/2021 ಕಲಂ: 269 ಐಪಿಸಿಯಂತೆ ಪ್ರಕರಣ  ದಾಖಲಿಸಲಾಗಿರುತ್ತದೆ.
  • ಕುಂದಾಪುರ: ದಿನಾಂಕ 19-05-2021 ರಂದು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕ ರವೀಶ್ ಹೊಳ್ಳ ಇವರು ಕೋವಿಡ್‌-19 ವೈರಾಣು ಸಾಂಕ್ರಾಮಿಕ ರೋಗದ ಹರಡುವಿಕೆ ನಿಯಂತ್ರಣದ ಸಂಬಂಧ ಮುಂಜಾಗ್ರತಾ ಕ್ರಮದ ಬಗ್ಗೆ ರೌಂಡ್ಸ್‌ ಕರ್ತವ್ಯದಲ್ಲಿರುವ ವೇಳೆ 09:00 ಗಂಟೆಗೆ ಬಸ್ರೂರು  ಗ್ರಾಮದ ಬಸ್ರೂರು ಪೇಟೆ ಬಳಿ  ಆಪಾದಿತ ಸಂತೋಷ (28) ತಂದೆ: ಬಾಬು ದೇವಾಡಿಗ ವಾಸ:ಜಾಡಿ ಕ್ರಾಸ್ ಕನ್ಯಾನ ಗ್ರಾಮ ಕುಂದಾಪುರ ತಾಲೂಕು ಮತ್ತು ಅಶೋಕ ತಂದೆ: ಚಂದ್ರ ಮರಕಾಲ ವಾಸ:ಕೊರವಡಿ ಕುಂಭಾಶಿ ಗ್ರಾಮ ಕುಂದಾಪುರ ತಾಲೂಕು ಇವರುಗಳು KA 20 EE O762 ಆಕ್ಟಿವ್ ಹೊಂಡ ಮತ್ತು  KA20 EV 8488 ಬಜಾಜ್ ಡಿಸ್ಕವರಿ  ವಾಹನದಲ್ಲಿ ಸಂಚಾರ ಮಾಡಿ  ಕೋವಿಡ್‌-19 ಸಂಬಂಧ ಜಿಲ್ಲಾಡಳಿತದ ಸೂಚನೆಗಳನ್ನು ಪಾಲಿಸದೆ, ನಿರ್ಲಕ್ಷತನ ತೋರಿಸಿರುತ್ತಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ  38/2021 ಕಲಂ: 269 ಐಪಿಸಿಯಂತೆ ಪ್ರಕರಣ  ದಾಖಲಿಸಲಾಗಿರುತ್ತದೆ.
  • ಕಾರ್ಕಳ: ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ಕೋವಿಡ್ ಕರ್ಪ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಪ್ಯೂ ಜಾರಿಗೊಳಿಸುವ ಬಗ್ಗೆ ಪೋಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಈ ಸಮಯದಲ್ಲಿ ಅನಗತ್ಯವಾಗಿ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ನಿಷೇಧ ಇರುತ್ತದೆ, ದಾಮೋದರ ಕೆ ಬಿ ಪೊಲೀಸ್ ಉಪನಿರೀಕ್ಷಕರು, ಕಾರ್ಕಳ ನಗರ ಠಾಣೆ ಇವರು ದಿನಾಂಕ 19/05/2021 ರಂದು ಠಾಣಾ ಸಿಬ್ಬಂದಿಯವರೊಂದಿಗೆ ಕಾರ್ಕಳ ನಗರ ಠಾಣಾ ಸರಹದ್ದಿನ ಕಾರ್ಕಳ ಕಸಬ  ಗ್ರಾಮದ  ಪುಲ್ಕೇರಿ ಜಂಕ್ಷನ್  ಬಳಿ  ಸಾರ್ವಜನಿಕ ರಸ್ತೆಯಲ್ಲಿ  ಸಂಜೆ 17:00 ಗಂಟೆಗೆ ಅನಗತ್ಯವಾಗಿ ವಾಹನಗಳ ಓಡಾಟದ ಬಗ್ಗೆ ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ ಅನಗತ್ಯವಾಗಿ ಓಡಾಡುತ್ತಿದ್ದ KA20EU 8619 ನೇ ನಂಬ್ರದ ಹೊಂಡಾ ಕಂಪೆನಿ  ತಯಾರಿಕೆಯ ಡಿಯೋ ಸ್ಕೂಟರ್ ನ್ನು ತಡೆದು ನಿಲ್ಲಿಸಿ ಧೀರಜ್ ಪ್ರಾಯ 20 ವರ್ಷ ತಂದೆ: ಭೋಜ ಪೂಜಾರಿ, ವಾಸ: ದರ್ಖಾಸು ಮನೆ, ಗುಂಡದಕೆರೆ, ನಕ್ರೆ ಅಂಚೆ, ಕುಕ್ಕೂಂದೂರು ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ, ಆತನಲ್ಲಿ ವಿಚಾರಿಸಲಾಗಿ ಸಮಂಜಸವಾಗಿ ಉತ್ತರಿಸದೇ ಇದ್ದುದ್ದಲ್ಲದೆ ಆಪಾದಿತನಿಗೆ ಘನ ಕರ್ನಾಟಕ ಸರಕಾರವು ಕೋವಿಡ್ ಮಹಾಮಾರಿ ಕರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ನಿಯಮಗಳ ಬಗ್ಗೆ ತಿಳುವಳಿಕೆ ಇದ್ದರೂ ಅನಗತ್ಯವಾಗಿ ಸರಕಾರ ಮತ್ತು ಜಿಲ್ಲಾಡಳಿತ ಆದೇಶ, ಕೋವಿಡ್ ನಿಯಮ ಉಲ್ಲಂಘಿಸಿರುತ್ತಾರೆ ಎಂಬಿತ್ಯಾದಿ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 63/2021 ಕಲಂ: 269 ಐಪಿಸಿಯಂತೆ ಪ್ರಕರಣ  ದಾಖಲಿಸಲಾಗಿರುತ್ತದೆ.

ಹಲ್ಲೆ ಪ್ರಕರಣ

  • ಕಾಪು: ಪಿರ್ಯಾದಿ ಆನಂದ ಪೂಜಾರಿ ಇವರು ಕೋಟೆ ಗ್ರಾಮದ ಅಂಬಾಡಿಯಲ್ಲಿರುವ ತನ್ನ ವಾಸದ ಮನೆಯಲ್ಲಿ ಹೆಂಡತಿ ಮಕ್ಕಳು ಮತ್ತು ಸೊಸೆಯಂದಿರೊಂದಿಗೆ ವಾಸವಾಗಿದ್ದು ಮನೆಯಲ್ಲಿಯೇ ಇರುವುದಾಗಿದೆ. ಪಿರ್ಯಾದಿದಾರರಿಗೂ ಹಾಗೂ ಅವರ ನೆರೆಮನೆಯ ಗಣೇಶ್ ಎಂಬವರಿಗೂ ಜಾಗದ ಗಡಿ ವಿಚಾರವಾಗಿ ಕೆಲವು ಸಮಯದಿಂದ ತಕರಾರಿದ್ದು ಈಗಾಗಲೇ ಜಾಗದ ಸರ್ವೇ ಮಾಡಿಸಿ ಗಡಿ ಗುರುತು ಮಾಡಿಕೊಂಡಿದ್ದು, ದಿನಾಂಕ: 19-05-2021 ರಂದು ಬೆಳಿಗ್ಗೆ 9:00 ಗಂಟೆ ಸುಮಾರಿಗೆ ಗಣೇಶ್ ಮತ್ತು ಆತನ ಹೆಂಡತಿ ವೀಣಾ ರವರು ಪಿರ್ಯಾದಿದಾರರ ಜಾಗಕ್ಕೆ ಬಂದು ನೀರು ಹರಿದು ಹೋಗುವ ಜಾಗಕ್ಕೆ ಮಣ್ಣು ಮತ್ತು ಕಲ್ಲು ಹಾಕಿದ್ದು ಈ ಬಗ್ಗೆ ಪಿರ್ಯಾದಿದಾರರು ಅವರ ಬಳಿ “ನಮ್ಮ ಜಾಗಕ್ಕೆ ಏಕೆ ಮಣ್ಣು ಹಾಕಿದ್ದು ಎಂದು ಕೇಳಿದ್ದಕ್ಕೆ ಗಣೇಶ್ ಮತ್ತು ಅವರ ಹೆಂಡತಿ  ವೀಣಾ ಪಿರ್ಯಾದಿದಾರರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ   ಪಿರ್ಯಾದಿದಾರರನ್ನು ತಡೆದು ಇದು ನಮ್ಮ ಜಾಗ ನಾವು ಏನಾದರೂ ಮಾಡುತ್ತೇವೆ” ಎಂದು ಪಿರ್ಯಾದಿದಾರರಿಗೆ ಬೈದು ಕೈಯಿಂದ ಹೊಡೆದು ದೂಡಿದ್ದು ಆ ಸಮಯ ಪಿರ್ಯಾದಿದಾರರ ಮಗ ಮತ್ತು ಸೊಸೆ ಅಲ್ಲಿಗೆ ತಡೆಯಲು ಬಂದಿದ್ದು, ತಡೆಯಲು ಬಂದ ಪಿರ್ಯಾದಿದಾರರ ಮಗ ಪ್ರಶಾಂತ್ ರವರಿಗೆ ಗಣೇಶ್ ಅಲ್ಲಿಯೇ ಇದ್ದ ಕಲ್ಲಿನಿಂದ ಪ್ರಶಾಂತ್ ರವರ ಮೂಗಿಗೆ ಹೊಡೆದಿದ್ದು ಅಲ್ಲದೇ ಗಣೇಶನ ಹೆಂಡತಿ ವೀಣಾ ಪಿರ್ಯಾದಿದಾರರ ಸೊಸೆ ಸೋನಿಕ ರವರಿಗೆ ಕೈ ಹಿಡಿದು ದೂಡಿದ್ದು ಪರಿಣಾಮ ಸೋನಿಕಾ ರವರು ಅಲ್ಲಿಯೇ ಬಿದ್ದು ನೋವಾಗಿದ್ದು ಆ ಸಮಯ ಪಿರ್ಯಾದಿದಾರರು ಬೊಬ್ಬೆ ಹಾಕಿದಾಗ ಗಣೇಶ್ ಮತ್ತು ವೀಣಾ ಪಿರ್ಯಾದಿದಾರರನ್ನು ಹಾಗೂ ಅವರ ಮಗ ಮತ್ತು ಸೊಸೆಯನ್ನು ಉದ್ದೇಶಿಸಿ ನಿಮ್ಮನ್ನು ಮುಂದಕ್ಕೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಹೋಗಿದ್ದು ಆ ವೇಳೆ ಗಣೇಶ್ ತನ್ನ ಕೈಯಲ್ಲಿದ್ದ ಕಲ್ಲನ್ನು ಅಲ್ಲಿಯೇ ಬಿಸಾಡಿ ಹೋಗಿದ್ದು ಈ ಘಟನೆಯಿಂದ ಪಿರ್ಯಾದಿದಾರರ ಮಗ ಪ್ರಶಾಂತ್ ರವರ ಮೂಗಿನ ಹತ್ತಿರ ಗಾಯವಾಗಿದ್ದ ಅವರು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ 76/2021 ಕಲಂ 447, 341,323, 324, 504, 506 R/W 34 ಐಪಿಸಿಯಂತೆ ಪ್ರಕರಣ  ದಾಖಲಿಸಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 20-05-2021 09:58 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080