ಅಭಿಪ್ರಾಯ / ಸಲಹೆಗಳು

ಕೊಲೆ ಪ್ರಕರಣ

  • ಅಜೆಕಾರು : ಫಿರ್ಯಾದಿದಾರರಾದ ಗಣೇಶ್ ರಾವ್ (46) ತಂದೆ: ಎ. ರಘುಪತಿ ವಾಸ: ಶೆಣೈ ನಿವಾಸ, ಹಾಡಿಯಂಗಡಿ, ಶಿರ್ಲಾಲು ಗ್ರಾಮ, ಕಾರ್ಕಳ ತಾಲೂಕು ಎಂಬವರು ತನ್ನ ಹೆಂಡತಿ ಶಿಲ್ಪಾ ಯು. ಎಂಬವರೊಂದಿಗೆ ವಾಸವಾಗಿದ್ದು, ಬೆಂಗಳೂರಿನ ಐಟಿ ಕಂಪೆನಿಯಲ್ಲಿ ಉದ್ಯೋಗಿಯಾಗಿರುತ್ತಾರೆ. ಅವರು ಇದೇ ವರ್ಷದ ಮಾರ್ಚ್‌ ತಿಂಗಳಲ್ಲಿ ಊರಿಗೆ ಬಂದು ಮಂಗಳೂರಿನ ಅವರ ಸಂಬಂಧಿಕರ ಮನೆಗೆ ಹೋಗಿ ನಿನ್ನೆ ದಿನ ದಿನಾಂಕ: 19/05/2021 ರಂದು ಬೆಳಿಗ್ಗೆ ಊರಿಗೆ ಬಂದು ಕಾರ್ಕಳ ತಾಲೂಕು ಶಿರ್ಲಾಲು ಗ್ರಾಮದ ಹಾಡಿಯಂಗಡಿ ಎಂಬಲ್ಲಿ ವಾಸ ಮಾಡಿಕೊಂಡಿರುತ್ತಾರೆ. ಅವರ ವಾಸದ ಮನೆಯಿಂದ ಸುಮಾರು 100 ಮೀಟರ್ ದೂರದಲ್ಲಿ ಆನಂದ ಸೇರ್ವೆಗಾರ್ ಎಂಬವರು ಒಬ್ಬಂಟಿಯಾಗಿ ಒಂದು ಮನೆಯಲ್ಲಿ ವಾಸ ಮಾಡಿಕೊಂಡಿದ್ದು, ಸದ್ರಿ ಮನೆ ಹಾಗೂ ಸುಮಾರು 4 ಎಕ್ರೆ ಜಮೀನನ್ನು ಪಿರ್ಯಾದಿ ಹಾಗೂ ಇತರ ಇಬ್ಬರು ಸೇರಿ ಇದೇ ವರ್ಷದ ಮೊದಲ ತಿಂಗಳಲ್ಲಿ ಖರೀದಿ ಮಾಡಿರುತ್ತಾರೆ. ಆನಂದ ಸೇರ್ವೆಗಾರ್‌ರವರು ಅದೇ ಮನೆಯಲ್ಲಿ ಪಿರ್ಯಾದುದಾರರ ಅನುಮತಿ ಮೇರೆಗೆ ವಾಸವಾಗಿದ್ದರು, ಆನಂದ ಸೇರ್ವೆಗಾರ್‌ರವರ ಹೆಂಡತಿ ಹಾಗೂ ಮಕ್ಕಳೆಲ್ಲ ಬೇರೆ ಕಡೆ ವಾಸವಾಗಿದ್ದರು, ಅವರ ಹೆಂಡತಿಯ ಅಕ್ಕನ ಮಗ ಹರೀಶ್ ಎಂಬವರು ಸದ್ರಿ ಜಾಗದಲ್ಲಿ ಕೆಲಸ ಮಾಡಿಕೊಂಡು ವಾಸವಾಗಿದ್ದು, ಆತನಿಗೆ ಮದ್ಯಪಾನ ಮಾಡುವ ಚಟವಿರುತ್ತದೆ ಹಾಗೂ ರಾತ್ರಿ ವೇಳೆ ಕುಡಿದು ಬಂದು ಆನಂದ ಸೇರ್ವೆಗಾರ್ ರವರ ಜೊತೆ ಗಲಾಟೆ ಮಾಡುತ್ತಿರುವ ವಿಚಾರ ಪಿರ್ಯಾದುದಾರರಿಗೆ ಇತರರಿಂದ ತಿಳಿದುಬಂದಿರುತ್ತದೆ. ದಿನಾಂಕ: 19/05/2021 ರಂದು 17:30 ಗಂಟೆಗೆ ಹರೀಶನು ಕೆಲಸ ಮುಗಿಸಿ ಪಿರ್ಯಾದಿದದಾರರ ಮನೆಗೆ ಬಂದು ಸಂಬಳ ತೆಗೆದುಕೊಂಡು ಹೋಗಿ ನಂತರ ರಾತ್ರಿ 23:40 ಗಂಟೆಗೆ ವಾಪಾಸು ಪಿರ್ಯಾದುದಾರರ ಮನೆಗೆ ಬಂದು, ಆನಂದ ಸೇರ್ವೆಗಾರ್‌ರವರು ಮನೆಯ ಹೊರಗಡೆ ಬಿದ್ದಿದ್ದು, ತಲೆಗೆ ಗಾಯವಾಗಿರುತ್ತದೆ, ಹಾಗೂ ಮಾತನಾಡುತ್ತಿಲ್ಲ ಎಂಬುದಾಗಿ ತಿಳಿಸಿದ ಮೇರೆಗೆ ಪಿರ್ಯಾದುದಾರರು ಆನಂದ ಸೇರ್ವೆಗಾರ್‌ರವರ 2 ನೇ ಮಗಳ ಗಂಡ ಸುರೇಶ್ ಹಾಗೂ ಎದುರು ಮನೆಯ ಪ್ರಭಾಕರ ಎಂಬವರನ್ನು ಜೊತೆಗೆ ಕರೆದುಕೊಂಡು ಹೋಗಿ ನೋಡಲಾಗಿ ಆನಂದ ಸೇರ್ವೆಗಾರ್‌ ರವರು ತಾನು ವಾಸವಾಗಿದ್ದ ಮನೆಯ ಅಂಗಳದಲ್ಲಿ ಅಂಗಾತನೆ ಬಿದ್ದಿದ್ದು, ಯಾರೋ ಅವರ ತಲೆಗೆ ಯಾವುದೋ ಆಯುಧದಿಂದ ಹಲ್ಲೆ ಮಾಡಿದ ರಕ್ತಗಾಯವಾಗಿದ್ದು, ಎಡಕೈಯ ಮಣಿಗಂಟಿಗೆ ನೈಲಾನ್ ರೋಪನ್ನು ಸುತ್ತಿ ಕಟ್ಟಿದ್ದು ಕಂಡುಬಂದಿರುತ್ತದೆ, ನೋಡಲಾಗಿ ಆನಂದ ಸೇರ್ವೆಗಾರ್‌ರವರು ಮೃತಪಟ್ಟಿದ್ದರು, ಇವರನ್ನು ಯಾರೋ ಯಾವುದೋ ಉದ್ದೇಶಕ್ಕಾಗಿ ಯಾವುದೋ ಮಾರಕ ಆಯುಧದಿಂದ ದಿನಾಂಕ: 19/05/2021 ರಂದು 19:00 ಗಂಟೆಯಿಂದ 23:40 ಗಂಟೆಯ ಮದ್ಯಾವಧಿಯಲ್ಲಿ ಹಲ್ಲೆ ನಡೆಸಿ ಕೊಲೆ ಮಾಡಿರುವುದಾಗಿದೆ . ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 15/2021  ಕಲಂ 302   ಐಪಿಸಿ ರಂತೆ ಪ್ರಕರಣ ದಾಖಲು ಮಾಡಲಾಗಿದೆ.

ಅಪಘಾತ ಪ್ರಕರಣ

  • ಹೆಬ್ರಿ : ಆರೋಪಿತ ಅನೂಪ್‌ಸೂರ್ಯ(31) ಇವನು ದಿನಾಂಕ: 20/05/2021 ರಂದು KA.19.EE.5293 ನೇ ಮೋಟಾರ್ ಸೈಕಲ್ ನ್ನು ಕಾರ್ಕಳ ಕಡೆಯ ರಸ್ತೆಯಿಂದ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಸಮಯ ಸುಮಾರು ಬೆಳಿಗ್ಗೆ 08-40 ಗಂಟೆಗೆ ವರಂಗ ಗ್ರಾಮದ ಮುನಿಯಲ್ ಪೇಟೆ ತಲುಪಿದಾಗ ಮೋಟಾರ್ ಸೈಕಲ್ ಸವಾರನ ಹತೋಟಿ ತಪ್ಪಿ ರಸ್ತೆಯ ಎಡಬದಿಗೆ ಹೋಗಿ ಕಚ್ಚಾ ರಸ್ತೆಯಲ್ಲಿ ಮುನಿಯಲ್ ಕಡೆಗೆ ನಡೆದು ಕೊಂಡು ಹೋಗುತ್ತಿದ್ದ ರಾಮಣ್ಣ ಶೆಟ್ಟಿ (76 ವರ್ಷ) ಇವರಿಗೆ ಹಿಂದುಗಡೆಯಿಂದ ಡಿಕ್ಕಿ ಪಡಿಸಿದ ಪರಿಣಾಮ ಅವರು ಕಳಗೆ ಬಿದ್ದು ಅವರಿಗೆ ತಲೆಯ ಹಿಂಬದಿಗೆ ತೀವ್ರ ಸ್ವರೂಪದ ಗಾಯವಾಗಿ ಎರಡು ಕಾಲಿನ ಹೆಬ್ಬೆರಳಿಗೆ ಗಾಯವಾಗಿರುತ್ತದೆ. ಮೋಟಾರ್ ಸೈಕಲ್ ಸವಾರ ಅನುಪ್ ಸೂರ್ಯ ಇವರಿಗೆ ಎಡಕಣ್ಣಿನ ಕಳಗೆ ಗಾಯವಾಗಿರುತ್ತದೆ. ಗಾಯಾಳು ರಾಮಣ್ಣ ಶೆಟ್ಟಿ ಇವರು ಮಾತನಾಡುತ್ತಿರದ ಕಾರಣ ಅವರನ್ನು ಚಿಕಿತ್ಸೆಯ ಬಗ್ಗೆ ಬೆಳಿಗ್ಗೆ 09-00 ಗಂಟೆಗೆ ಮುನಿಯಲ್ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ತಂದು ವೈದ್ಯರಲ್ಲಿ ತೋರಿಸಿದಾಗ ವೈದ್ಯರು ಪರೀಕ್ಷಿಸಿ ಅವರು ಮೃತ ಪಟ್ಟಿರುತ್ತಾರೆಂದು ತಿಳಿಸಿರುತ್ತಾರೆ. . ಈ ಬಗ್ಗೆ ಹೆಬ್ರಿ  ರಾಣಾ ಅಪರಾಧ ಕ್ರಮಾಂಕ 28/2021 US 279,304(A) IPC  ರಂತೆ ಪ್ರಕರಣ ದಾಕಲಿಸಿರುತ್ತಾರೆ.
  • ಬ್ರಹ್ಮಾವರ  : ದಿನಾಂಕ: 20.05.2021 ರಂದು ಬ್ರಹ್ಮಾವರ ತಾಲೂಕು, ವಾರಂಬಳ್ಳಿ ಗ್ರಾಮದ, ಉಪ್ಪಿನಕೋಟೆ, ನಡುಹಿತ್ಲು ಎಂಬಲ್ಲಿ, ಪಿರ್ಯಾದಿ ರಾಜು ಕುಂದರ್ (42 ವರ್ಷ), ತಂದೆ: ಕುಷ್ಟು ಕುಂದರ್, ವಾಸ: ಪಾರ್ವತಿ ನಿಲಯ, ನಡುಹಿತ್ಲು, ಉಪ್ಪಿನಕೋಟೆ, ವಾರಂಬಳ್ಳಿ ಗ್ರಾಮ, ಬ್ರಹ್ಮಾವರ ತಾಲೂಕು ರವರು ಮನೆಯಲ್ಲಿ ಹೊರಗಡೆ ನಿಂತಿರುವಾಗ ಬೆಳಿಗ್ಗೆ 09:45 ಗಂಟೆಗೆ ಅವರ ಮನೆಯಿಂದ ಸ್ವಲ್ಪ ದೂರದಲ್ಲಿರುವ ರಾಹೆ 66 ರಲ್ಲಿ  ಅಪಘಾತವಾದ ಶಬ್ದ ಕೇಳಿ ಕೂಡಲೇ ಹೋಗಿ ನೋಡಿದಾಗ ಅವರ ದೊಡ್ಡಪ್ಪ ಶೀನ ಮರಕಾಲ ( 80 ವರ್ಷ) ರವರು ಗಾಯಗೊಂಡು ರಸ್ತೆಯ ಮೇಲೆ ಬಿದ್ದುಕೊಂಡಿದ್ದು, ಪಕ್ಕದಲ್ಲಿ ಮೋಟಾರ್ ಸೈಕಲ್ ಬಿದ್ದು ಕೊಂಡಿರುವುದನ್ನು ನೋಡಿರುತ್ತಾರೆ, ಅವರು ಸದ್ರಿ ಅಪಘಾತದ ಬಗ್ಗೆ ಅಲ್ಲಿ ಸೇರಿದ ಜನರಲ್ಲಿ ಕೇಳಿದಾಗ ಶೀನ ಮರಕಾಲ ರವರು ಬೆಳಿಗ್ಗೆ ಅಗತ್ಯ ಸಾಮಾನು ತರಲು ಮನೆಯಿಂದ ಉಪ್ಪಿನಕೋಟೆ ಪೇಟೆಗೆ ಹೋದವರು ವಾಪಾಸ್ಸು ಮನೆಗೆ ಬರಲು ಪಿರ್ಯಾದಿದಾರರ ಮನೆಯ ಹತ್ತಿರ ಇರುವ ಉಡುಪಿ-ಕುಂದಾಪುರ ರಾಹೆ 66 ರ ರಸ್ತೆಯನ್ನು ದಾಟಲು ರಸ್ತೆಯ ಎಡ ಅಂಚಿನಲ್ಲಿ ನಿಂತು ಕೊಂಡಿರುವಾಗ ಉಡುಪಿ ಕಡೆಯಿಂದ  ಆರೋಪಿ ಮನವೀರನು ಆತನ ಬಾಬ್ತು GA04J8610 ನೇ PULSAR RS200 ಮೋಟಾರ್ ಸೈಕಲ್‌ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಶೀನ ಮರಕಾಲ ರವರಿಗೆ ಡಿಕ್ಕಿ ಹೊಡೆದು ಮೋಟಾರ್ ಸೈಕಲ್ ಸಮೇತ ಇಬ್ಬರೂ ರಸ್ತೆಯ ಮೇಲೆ ಬಿದ್ದಿರುವುದಾಗಿ ಗೊತ್ತಾಗಿರುತ್ತದೆ. ಈ ಅಪಘಾತದ ಪರಿಣಾಮ ಶೀನ ಮರಕಾಲ ರವರು ರಸ್ತೆಗೆ ಬಿದ್ದು ಅವರ ತಲೆಗೆ, ಕೈ ಕಾಲುಗಳಿಗೆ ತೀವ್ರ ರಕ್ತಗಾಯವಾಗಿದ್ದು ಅವರನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಮಹೇಶ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈಧ್ಯರಿಂದ ಚಿಕಿತ್ಸೆ ನೀಡಿ ಅಲ್ಲಿಂದ ವೈಧ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಚಿಕಿತ್ಸೆಯಲ್ಲಿರುವಾಗ ಚಿಕಿತ್ಸೆ ಫಲಕಾರಿ ಆಗದೇ ಮಧ್ಯಾಹ್ನ 12:12 ಗಂಟೆಗೆ ಶೀನ ಮರಕಾಲ ರವರು ಮೃತಪಟ್ಟಿರುವುದಾಗಿದೆ. ಅಲ್ಲದೇ ಸದ್ರಿ ಅಪಘಾತದಿಂದ ಆರೋಪಿ ಮನವೀರನಿಗೂ ಸಣ್ಣ ಪುಟ್ಟ ಗಾಯವಾಗಿರುತ್ತದೆ.   ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ : 83/2021 ಕಲಂ. 279, 304(A) ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತರ ಪ್ರಕರಣ:

  • ಬ್ರಹ್ಮಾವರ: :ಪಿರ್ಯಾದಿ ಜಗದೀಶ್ ಭಟ್, ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್, ಫ್ಲೈಯಿಂಗ್ ಸ್ಕ್ವಾಡ್,ಬ್ರಹ್ಮಾವರ, ಇವರು ಮಾನ್ಯ ಉಡುಪಿ ಜಿಲ್ಲಾಧಿಕಾರಿಯವರ ಆದೇಶದಂತೆ ಕೋವಿಡ್ 19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಬ್ರಹ್ಮಾವರ ವಲಯದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅದರಂತೆ ಅವರು  ದಿನಾಂಕ: 20.05.2021 ರಂದು ಇಲಾಖಾ ವಾಹನದಲ್ಲಿ ಬ್ರಹ್ಮಾವರ ತಾಲೂಕು, ಉಪ್ಪೂರು ಗ್ರಾಮದ, ಸಾಲ್ಮರ ಎಂಬಲ್ಲಿ ಗಸ್ತು ತಿರುಗುತ್ತಿರುವಾಗ ಬೆಳಿಗ್ಗೆ 08:25 ಗಂಟೆಯ ಸಮಯದಲ್ಲಿ ಆರೋಪಿ ಶ್ರೀ  ವಿರೇಂದ್ರ ಆಚಾರ್ಯ ರವರು ತಮ್ಮ ಶ್ರೀ ಕಾಳಿಕಾಂಬ ಆಟೋ ವರ್ಕ್ಸ್ ಮೋಟಾರ್ ಸೈಕಲ್ ಗ್ಯಾರೇಜ್‌ನ್ನು ತೆರೆದು ಕೊಂಡು ಕೆಲಸ ಮಾಡುತ್ತಿದ್ದು ಘನ ಕರ್ನಾಟಕ ಸರಕಾರವು ಕೋವಿಡ್ 19 ಸೋಂಕು ತಡೆಗಟ್ಟುವ ಸಂಬಂಧ ಹೊರಡಿಸಿದ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವುದಕ್ಕೆ ಬ್ರಹ್ಮಾವರ ಠಾಣಾ ಅಪರಾಧ 82/2021 ಕಲಂ 269,188 ಐಪಿಸಿ ರಂತೆ ಪ್ರಕರಣ ದಾಖಲು ಮಾಡಲಾಗಿದೆ.
  • ಹಿರಿಯಡ್ಕ : ದಿನಾಂಕ: 19/05/2021 ಸಂಜೆ 16:೦೦ ಗಂಟೆಗೆ ಪಿ,ಎಸ್‌,ಐ ಹಿರಿಯಡ್ಕ ಠಾಣೆ ರವರಿಗೆ ಬಂದ ಮಾಹಿತಿ ಮೇರೆಗೆ ಠಾಣಾ ಸಿಬ್ಬಂದಿ ಹಾಗೂ ಪಂಚರೊಂದಿಗೆ ಬೆಳ್ಳಂಪಳ್ಳಿ ವಿಶ್ವಕರ್ಮ ಶಾಲೆಯ ಬಳಿ ಸ್ವಲ್ಪ ದೂರದಲ್ಲಿ  ಹಂಚು ಛಾವಣಿಯ ಮನೆಯ ಹಿಂಬದಿ ಒಬ್ಬ ವ್ಯಕ್ತಿ ಅನುಮಾನಾಸ್ಪದವಾಗಿ ರಟ್ಟಿನ ಬಾಕ್ಸ್‌ ಗಳನ್ನು ಇಟ್ಟುಕೊಂಡಿದ್ದ  ಸ್ಥಳಕ್ಕೆ 17:00 ಗಂಟೆಗೆ ದಾಳಿ ಮಾಡಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಗಣೇಶ (40), ತಂದೆ:ಗೋಪು ಮುಕಾರಿ, ವಾಸ: ರಾಧ ಗೋಪ ನಿಲಯ, ಪುಣ್ಚೂರು, ಕುಕ್ಕಿಕಟ್ಟೆ, ಬೆಳ್ಳಂಪಳ್ಳಿ ಗ್ರಾಮ, ಉಡುಪಿ ತಾಲೂಕುರವರನ್ನು ವಶಕ್ಕೆ ಪಡೆದು ಸದ್ರಿ ಬಾಕ್ಸಗಳನ್ನು ಪರಿಶೀಲಿಸಲಾಗಿ McDowell’s  NO 1 DELUX  XXX RUM ಎಂದು ಬರೆದಿರುವ 180 ML ನ 28 ಟೆಟ್ರಾ ಪ್ಯಾಕೇಟ್ ಗಳು, Amrut Prestige fine WHISKY ಎಂದು ಬರೆದಿರುವ 180 ML ನ 22 ಪ್ಲಾಸ್ಟಿಕ್ ಬಾಟಲಿಗಳು, Officers Choice STAR SUPREME WHISKY ಎಂದು ಬರೆದಿರುವ 180 MLನ 8 ಟೆಟ್ರಾ ಪ್ಯಾಕೇಟ್ ಗಳು, BAGPIPER DELUX WHISKY ಎಂದು ಬರೆದಿರುವ 180 MLನ 48 ಟೆಟ್ರಾ ಪ್ಯಾಕೇಟ್ ಗಳು, TUBORG PREMIUM BEER ಎಂದು ಬರೆದಿರುವ 500 ಎಂಎಲ್ ಕ್ಯಾನ್‌ಗಳು25, UB EXPORT STRONG BEER ಎಂದು ಬರೆದಿರುವ 33O ಎಂಎಲ್ ಗಾಜಿನ ಬಾಟಲಿಗಳು 22, KINGFISHER STORM STRONG BEER ಎಂದು ಬರೆದಿರುವ 65೦ ಎಂಎಲ್ ಗಾಜಿನ ಬಾಟಲಿಗಳು 8 ಕಂಡು ಬಂದಿರುತ್ತದೆ. DSP Black DELUX WHISKY  ಎಂದು ಬರೆದಿರುವ 180 ML ನ  ಗಾಜಿನ ಬಾಟಲ್‌ಗಳು-8 ಒಟ್ಟು ಮದ್ಯದ ಪ್ರಮಾಣ ಅಂದಾಜು 40 ಲೀಟರ್‌ ಅಂದಾಜು ಮೌಲ್ಯ 17163/- ರೂಪಾಯಿ ಆಗಿರುತ್ತದೆ ಮದ್ಯ ಮಾರಾಟ ಮಾಡಲು ಪರವಾನಗಿ ಇದೆಯೇ ಎಂದು ಕೇಳಿದ್ದು  ತನಗೆ ಮದ್ಯ ಮಾರಾಟ ಮಾಡಲು ಯಾವುದೇ ಪರವಾನಗಿ ಇಲ್ಲವಾಗಿ ತಾನು ಕ್ವಾಲಿಟಿ ವೈನ್ ಶಾಪ್‌ನ ಕಿರಣ್‌ ಉದಯ್‌ ಶೆಟ್ಟಿಯವರಲ್ಲಿ ಸದ್ರಿ ಮದ್ಯವನ್ನು ತಂದಿರುವುದಾಗಿ  ತಿಳಿಸಿದ್ದು. ಆತನ ಅಂಗ ಜಪ್ತಿ ಮಾಡಲಾಗಿ ಆತನ ಅಂಗಿಯ ಕಿಸೆಯಲ್ಲಿ ಮದ್ಯ ಮಾರಾಟ ಮಾಡಿದ ನಗದು ರೂಪಾಯಿ 810/ ರೂಪಾಯಿ ಇರುತ್ತದೆ ಆಪಾದಿತನು ಘನ ಕರ್ನಾಟಕ ಸರಕಾರವು ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಕೋವಿಡ್‌ ನಿಯಮ ಉಲ್ಲಂಘಿಸಿ ಮದ್ಯವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಲಾಭ ಗಳಿಸುವ  ಮಾಡುವ ಉದ್ದೇಶದಿಂದ ಅಕ್ರಮ ಮದ್ಯ ಮಾರಾಟ ಮಾಡಿದ್ದು  ಆಪಾದಿತನನ್ನು ವಶಕ್ಕೆ ಪಡೆದು ಸೊತ್ತುಗಳನ್ನು ಮಹಜರು ಮುಖೇನ ಸ್ವಾಧಿನಪಡಿಸಿದ್ದು ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣಾ 35/2021 ಕಲಂ: 32 , 34 ಕರ್ನಾಟಕ ಅಬಕಾರಿ ಕಾಯ್ದೆ ಮತ್ತು 269  IPC ರಂತೆ ಪ್ರಕರಣ ದಾಖಲು ಮಾಡಲಾಗಿದೆ.
  • ಶಂಕರನಾರಾಯಣ: ಆರೋಪಿತ . ಕೆಎ,19  ಇ ಬಿ , 3361   ಹೊಂಡ  ಕಂಪೆನಿಯ   ಅವೇಚರ್ ಮೋಟಾರ್ ಸೈಕಲ್ ಸವಾರ  ನು ದಿನಾಂಕ.20.05.2021 ರಂದು 11;10  ಘಂಟೆಗೆ  ಕುಂದಾಪುರ ತಾಲೂಕಿನ 28  ಹಾಲಾಡಿ  ಗ್ರಾಮದ ಹಾಲಾಡಿ  ಸರ್ಕಲ್ ಬಳಿ  ಕೋವಿಡ್ -19 ಸೋಂಕು ಪ್ರಕರಣಗಳು ಉಲ್ಬಣಗೊಳ್ಳುತ್ತಿರುವ ಕಾರಣದಿಂದ ಕರೋನಾ ಸೊಂಕನ್ನು ತಡೆಗಟ್ಟಲು ಉಡುಪಿ ಜಿಲ್ಲೆಯಾದ್ಯಂತ ಉಡುಪಿ ಜಿಲ್ಲಾಡಳಿತ  ನಿಷೇದಾಜ್ಜೆಯನ್ನು ಜಾರಿಗೊಳಿಸಿದ್ದು, ಉಡುಪಿ ಜಿಲ್ಲಾಡಳಿತದ ಹಾಗೂ ಘನ  ಸರಕಾರದ ಆದೇಶವನ್ನು ಉಲ್ಲಂಘಿಸಿ ಮುಖಕ್ಕೆ  ಮಾಸ್ಕ  ಧರಿಸದೇ , ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ,  ಕೆಎ,19  ಇಬಿ, 3361   ಹೊಂಡ  ಕಂಪೆನಿಯ   ಅವೇಚರ್ ಮೋಟಾರ್ ಸೈಕಲ್  ನಲ್ಲಿ  ಸಾರ್ವಜನಿಕ  ರಸ್ತೆಯಲ್ಲಿ    ಓಡಾಡಿಕೊಂಡಿರುತ್ತಾನೆ,  ಈ ಬಗ್ಗೆ ಶಂಕರನಾರಾಯಣ ಠಾಣಾ ಅಪರಾಧ  ಕ್ರಮಾಂಕ 57/2021ಕಲಂ: 269, ಐ.ಪಿಸಿ ರಂತೆ ಪ್ರಕರಣ ದಾಖಲು ಮಾಡಲಾಗಿದೆ.
  • ಕಾಪು: ಕೋವಿಡ್-19 ಕೋರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ  ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ 12/05/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಹೊರಡಿಸಿರುವ ಆದೇಶವನ್ನು ಪರಿಷ್ಕರಿಸಿ ದಿನಾಂಕ 10/05/2021 ,  ಬೆಳಿಗ್ಗೆ 6:00 ಗಂಟೆಯಿಂದ ದಿನಾಂಕ 24/05/2021ರ ಬೆಳಿಗ್ಗೆ 6:00 ಗಂಟೆಯ ವರೆಗೆ ಲಾಕ್ ಡೌನ್ ಘೋಷಿಸಿದ್ದು ಈ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಈ ಬಗ್ಗೆ ವಾಹನ  ತಪಾಸಣೆ ನಡೆಸುವಂತೆ ಮೇಲಾಧಿಕಾರಿಯವರ ಆದೇಶದಂತೆ ಪಿರ್ಯಾದಿ ಪ್ರಕಾಶ್  ಪೊಲೀಸ್ ವೃತ್ತ ನಿರೀಕ್ಷಕರು   ಕಾಪು ವೃತ್ತ ಇವರು ಸಿಬ್ಬಂದಿಯವರೊಂದಿಗೆ  ದಿನಾಂಕ 20.05.2021 ರಂದು 10:35  ಗಂಟೆಯಿಂದ 10:40 ಗಂಟೆಯ ಮದ್ಯಾವಧಿಯಲ್ಲಿ ಕಾಪು ತಾಲ್ಲೂಕಿನ ಪಡು ಗ್ರಾಮದ ಕಾಪು ವೃತ್ತ ಕಛೇರಿ ಜಂಕ್ಷನ್‌‌ನಲ್ಲಿ ಸಾರ್ವಜನಿಕ ರಸ್ತೆಯಲ್ಲಿ ವಾಹನ ತಪಾಸಣೆಯಲ್ಲಿರುತ್ತಾ  ಅಗತ್ಯ ವಸ್ತುಗಳ ಖರೀದಿ ಬಗ್ಗೆ ಸರಕಾರ ನಿಗದಿಪಡಿಸಿದ ಸಮಯ ಅವಕಾಶದ ಬಳಿಕವೂ  ಅನಗತ್ಯವಾಗಿ ಗುಂಪು ಸೇರಿ  ಸಂಚರಿಸುತ್ತಿರುವವರ ವಾಹನಗಳನ್ನು ತಪಾಸಣೆಗಾಗಿ ನಿಲ್ಲಿಸಿ ಪರಿಶೀಲಿಸಿದಲ್ಲಿ  1) KA 20 EH 0529 ನೇ ಸ್ಕೂಟರ್ ಸವಾರ ಸಲೀಂ (21) ತಂದೆ: ಇಬ್ರಾಹಿಂ ವಾಸ: ಬಿಸ್ಮಿಲ್ಲಾ ಮಂಜಿಲ್, ಮನೆ ನಂಬ್ರ-1-16-18 ಜಿ ಹಿಮ್ಮಂಜೆ ರಸ್ತೆ, ಕಜೆ ಜೋಡುರಸ್ತೆ, ಕಾರ್ಕಳ, 2) KA 20 MC 8957  Maruti Swift Car ಚಾಲಕ  ಎಂ ನಾಗಭೂಷಣ (26) ತಂದೆ: ಯು.ಕೆ ಮಂಜು ವಾಸ: 12-37 ಬಿ ಶ್ಯಾಮ್ ಕಾಂಪೌಂಡು ಶಿವಳ್ಳಿ ಗ್ರಾಮ  ಕುಂಜಿಬೆಟ್ಟುಉಡುಪಿ  ರವರಲ್ಲಿ ಓಡಾಟದ ಕಾರಣವನ್ನು ವಿಚಾರಿಸಲಾಗಿ, ಯಾವುದೇ ತುರ್ತು ಕಾರಣವಿಲ್ಲದೇ, ಅನಗತ್ಯವಾಗಿ ಸಂಚರಿಸುವುದು ಕಂಡು ಬಂದಿರುತ್ತದೆ. ಸದ್ರಿ ಆರೋಪಿತರು  ಘನ ಕರ್ನಾಟಕ ಸರಕಾರವು ಕೋವಿಡ್‌ ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಕೋವಿಡ್‌ ನಿಯಮ ಉಲ್ಲಂಘಿಸಿರುತ್ತಾರೆ. ಈ ಬಗ್ಗೆ ಕಾಪು ರಾಣಾ ಅಪರಾಧ ಕ್ರಮಾಂಕ 79/2021 ಕಲಂ 269 IPC ರಂತೆ ಪ್ರಕರಣ ದಾಕಲಿಸಿರುತ್ತಾರೆ.
  • ಕೋಟ : ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ 23/05/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಫ್ಯೂ ಜ್ಯಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಈ ಸಮಯದಲ್ಲಿ ಅವಶ್ಯ ವಸ್ತುಗಳ ಖರೀದಿಯ ಬಗ್ಗೆ ಇರುವ ಜಿಲ್ಲಾಧಿಕಾರಿಗಳ ಆದೇಶದಂತೆ ಅಂಗಡಿಗಳ ತಪಾಸಣೆಯ ಬಗ್ಗೆ ಪಿರ್ಯಾದಿ ಸಂತೋಷ ಬಿ.ಪಿ ಪೊಲೀಸ್ ಉಪನಿರೀಕ್ಷಕರು, ಕೋಟ ಪೊಲೀಸ್‌ ಠಾಣೆ ಇವರು 20/05/2021 ರಂದು ಠಾಣಾ ಸಿಬ್ಬಂದಿಯವರೊಂದಿಗೆ ಹಾಗೂ ಇಲಾಖಾ ವಾಹನ ನಂಬ್ರ ಕೆಎ. 20. ಜಿ. 238ರಲ್ಲಿ ಚಾಲಕನಾಗಿ ಎ.ಹೆಚ್.ಸಿ 21 ನೇ ಮಂಜುನಾಥ ಇವರೊಂದಿಗೆ ಬ್ರಹ್ಮಾವರ ತಾಲೂಕು ಪಾಂಡೇಶ್ವರ ಗ್ರಾಮದ ಸಾಸ್ತಾನ  ಬಳಿ  ತೆರಳಿ ಅವಶ್ಯ ವಸ್ತುಗಳ ಖರೀದಿಯ ಅಂಗಡಿಯನ್ನು ತಪಾಸಣೆ ಮಾಡುತ್ತಿರುವಾಗ ಸಮಯ ಬೆಳಿಗ್ಗೆ 09.00 ಗಂಟೆಗೆ ಬ್ರಹ್ಮಾವರ ತಾಲೂಕು ಪಾಂಡೇಶ್ವರ ಗ್ರಾಮದ ಸಾಸ್ತಾನದ ಶ್ರೀ ಕೃಷ್ಣ ಉಪಾಧ್ಯಾಯ ಕಾಂಪ್ಲೆಕ್ಷ ನಲ್ಲಿರುವ ಮೂಕಾಂಬಿಕಾ ಪ್ಯಾನ್ಸಿ ಆಂಡ್ ಗಿಪ್ಟ ಸೆಂಟರ್ ಮತ್ತು ಯುವರ್ ಚಾಯ್ಸ್ ಪೂಟ್ ವೇರ್ ಅಂಗಡಿಯು ತೆರೆದುಕೊಂಡಿದ್ದು, ಗ್ರಾಹಕರೊಂದಿಗೆ ವ್ಯವಹಾರ ನಡೆಸುತ್ತಿರುವುದು ಕಂಡು ಬಂದಿರುತ್ತದೆ. ಅಂಗಡಿಯ ಒಳಗಡೆ ಕುಳಿತುಕೊಂಡಿದ್ದ ವ್ಯಕ್ತಿಗಳಲ್ಲಿ ವಿಚಾರಿಸಲಾಗಿ ತಾನು ಅಂಗಡಿಯ ಮಾಲಕರಾದ 1.ಸತೀಶ  ಪ್ರಾಯ: 35 ವರ್ಷ ತಂದೆ: ಕರುಣಾಕರ ವಾಸ: ಮೈತ್ರಿ ಬೆಟ್ಟು ಪಾಂಡೇಶ್ವರ ಗ್ರಾಮ, ತಾಲೂಕು ಬ್ರಹ್ಮಾವರ ತಾಲೂಕು 2.ಸುರೇಶ ಪ್ರಾಯ 38 ವರ್ಷ ತಂದೆ: ಕುಷ್ಟ ಪೂಜಾರಿ ವಾಸ:ತೀರ್ಥ ಬೈಲು ಪಾಂಡೇಶ್ವರ ಗ್ರಾಮ  ಬ್ರಹ್ಮಾವರ ತಾಲೂಕು ಆಗಿರುವುದಾಗಿ ತಿಳಿಸಿರುತ್ತಾರೆ. ಆಪಾದಿತರುಗಳು ಕೋವಿಡ್‌ ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಕೋವಿಡ್‌ ನಿಯಮ ಉಲ್ಲಂಘಿಸಿ ತನ್ನ ಪ್ಯಾನ್ಸಿ ಆಂಡ್ ಗಿಪ್ಟ ಸೆಂಟರ್ ಮತ್ತು ಪೂಟ್ ವೇರ್ ಅಂಗಡಿಯನ್ನು  ತೆರೆದುಕೊಂಡಿದ್ದು, ಪಂಚನಾಮೆಯೊಂದಿಗೆ ವರದಿ ನೀಡಿದ್ದನ್ನು  ಸ್ವೀಕರಿಸಿ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 102 /2021 ಕಲಂ: 269 IPC ರಂತೆ  ದಾಖಲಿಸಿಕೊಳ್ಳಲಾಗಿದೆ.
  • ಕೋಟ : ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ 23/05/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಫ್ಯೂ ಜ್ಯಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಈ ಸಮಯದಲ್ಲಿ ಅವಶ್ಯ ವಸ್ತುಗಳ ಖರೀದಿಯ ಬಗ್ಗೆ ಇರುವ ಜಿಲ್ಲಾಧಿಕಾರಿಗಳ ಆದೇಶದಂತೆ ಅಂಗಡಿಗಳ ತಪಾಸಣೆಯ ಬಗ್ಗೆ ಪಿರ್ಯಾದಿ ಸಂತೋಷ ಬಿ.ಪಿ ಪೊಲೀಸ್ ಉಪನಿರೀಕ್ಷಕರು, ಕೋಟ ಪೊಲೀಸ್‌ ಠಾಣೆ ಇವರರು 20/05/2021 ರಂದು ಠಾಣಾ ಸಿಬ್ಬಂದಿಯವರೊಂದಿಗೆ ಹಾಗೂ ಇಲಾಖಾ ವಾಹನ ನಂಬ್ರ ಕೆಎ. 20. ಜಿ. 238ರಲ್ಲಿ ಚಾಲಕನಾಗಿ ಎ.ಹೆಚ್.ಸಿ 21 ನೇ ಮಂಜುನಾಥ ಇವರೊಂದಿಗೆ ಬ್ರಹ್ಮಾವರ ತಾಲೂಕು ಪಾಂಡೇಶ್ವರ ಗ್ರಾಮದ ಸಾಸ್ತಾನದ  ಬಳಿ ತೆರಳಿ ಅವಶ್ಯ ವಸ್ತುಗಳ ಖರೀದಿಯ ಅಂಗಡಿಯನ್ನು ತಪಾಸಣೆ ಮಾಡುತ್ತಿರುವಾಗ ಸಮಯ ಬೆಳಿಗ್ಗೆ 09.15 ಗಂಟೆಗೆ ಬ್ರಹ್ಮಾವರ ತಾಲೂಕು ಪಾಂಡೇಶ್ವರ ಗ್ರಾಮದ ಸಾಸ್ತಾನದ  ಸಾಯಿ ಪ್ಯಾನ್ಸಿ ಸ್ಟೋರ್ ಅಂಗಡಿ ತೆರೆದುಕೊಂಡಿದ್ದು ಗ್ರಾಹಕರೊಂದಿಗೆ ವ್ಯವಹಾರ ನಡೆಸುತ್ತಿರುವುದು ಕಂಡು ಬಂದಿರುತ್ತದೆ. ಅಂಗಡಿಯ ಒಳಗಡೆ ಕುಳಿತುಕೊಂಡಿದ್ದ ವ್ಯಕ್ತಿಯಲ್ಲಿ ವಿಚಾರಿಸಲಾಗಿ ತಾನು ಅಂಗಡಿಯ ಮಾಲಕ ನಾಗರಾಜ ಪ್ರಾಯ: 49 ವರ್ಷ ತಂದೆ: ಕೂಸ ಪೂಜಾರಿ ವಾಸ: ಪಾಂಡೇಶ್ವರ ಗ್ರಾಮ ಬ್ರಹ್ಮಾವರ ತಾಲೂಕು ಆಗಿರುವುದಾಗಿ ತಿಳಿಸಿರುತ್ತಾನೆ. ಆತನ ಕೋವಿಡ್‌ ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಕೋವಿಡ್‌ ನಿಯಮ ಉಲ್ಲಂಘಿಸಿ ತನ್ನ ಪ್ಯಾನ್ಸಿ ಸ್ಟೋರ್  ಅಂಗಡಿಯನ್ನು ತೆರೆದುಕೊಂಡಿದ್ದು, ಪಂಚನಾಮೆಯೊಂದಿಗೆ ವರದಿ ನೀಡಿದ್ದನ್ನು  ಸ್ವೀಕರಿಸಿ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 103/2021 ಕಲಂ: 269 IPC ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಮಲ್ಪೆ : ಪಿರ್ಯಾದಿ ಪರಮೇಶ್ವರ(53), ತಂದೆ: ದಿವಂಗತ  ನಾಗಪ್ಪ ಅಂಬಿಗ,ವಾಸ: 765 ದುಂಡುಕುಳಿ ಕುಮಟಾ, ದೀವಗಿ, ಉತ್ತರಕನ್ನಡ ಇವರ ತಮ್ಮ ರಮೇಶ ನಾಗಪ್ಪ ಹರಿಕಾಂತ (41 ವರ್ಷ) ರವರು ಸೀವಿಂಗ್ಸ್ ಬೋಟಿನಲ್ಲಿ ಕಲಾಸಿಯಾಗಿ ಕೆಲಸಮಾಡಿಕೊಂಡಿದ್ದು, ನಿನ್ನೆ ದಿನ ದಿನಾಂಕ 19-05-2021 ರಂದು ರಮೇಶ ನಾಗಪ್ಪ ಹರಿಕಾಂತ ಹಾಗೂ ಇತರ  ಮೀನುಗಾರರಾದ  ರಾಘು, ಭಾಸ್ಕರ, ಆನಂದ ಮತ್ತು ಶೇಖರ ಮೀನುಗಾರಿಕೆ ಬಗ್ಗೆ ಹೊರಡುವ ಸಮಯ ಮದ್ಯಾಹ್ನ 12:10  ಗಂಟೆಗೆ ಪಿರ್ಯಾಧಿದಾರರ ತಮ್ಮ ಬೋಟಿನಲ್ಲಿ ಬಲೆಯನ್ನು ರೆಡಿ ಮಾಡುತ್ತಿದ್ದ ಸಮಯ ಆಯತಪ್ಪಿ ನೀರಿಗೆ ಬಿದ್ದು ಕಾಣೆಯಾಗಿರುತ್ತಾರೆ, ಈ ವಿಷಯವನ್ನು ಬೋಟಿನ ತಾಂಡೇಲ ವಿನಾಯಕ ಪಿರ್ಯಾದಿದಾರರಿಗೆ ಕರೆ ಮಾಡಿ ತಿಳಿಸಿದ್ದು, ಪಿರ್ಯಾದಿದಾರರು ಮಲ್ಪೆ ಬಂದರಿಗೆ ಬಂದು ಈಜುಗಾರ ಈಶ್ವರನನ್ನು ಕರೆಯಿಸಿ ನೀರಿನಲ್ಲಿ ಹುಡುಕಾಡಿಸಿದರೂ ಸಿಕ್ಕಿರುವುದಿಲ್ಲ, ದಿನಾಂಕ 20-02-2021 ರಂದು ಬೆಳಿಗ್ಗೆ 06:30 ಗಂಟೆಗೆ ಸೀವಾಕ್ ಹೊರ ಸಮುದ್ರದಲ್ಲಿ ಮೃತದೇಹ ತೇಲುತ್ತಿರುವುದಾಗಿ ತಾಂಡೇಲ ವಿನಾಯಕ ಕರೆ ಮಾಡಿದಾಗ ಪಿರ್ಯಾದಿದಾರರು ಬಂದು ನೋಡಿದ್ದು, ಪಿರ್ಯಾಧಿದಾರರ ತಮ್ಮ ಹರೀಶನ ಮೃತದೇಹವೆಂದು ಗುರುತಿಸಿರುತ್ತಾರೆ, ರಮೇಶ ನಾಗಪ್ಪ ಅಂಬಿಗ ಬೋಟಿನಲ್ಲಿ ಬಲೆ ಎಳೆಯುವಾಗ ಆಯತಪ್ಪಿ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿರುವುದಾಗಿದೆ.  ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಯುಡಿಆರ್‌ ಕ್ರಮಾಂಕ 25/21 ಕಲಂ. 174 ಸಿರ್‌ ಪಿಸಿಯಂತೆ ಪ್ರಕರಣ ದಾಖಲಿಸಕೊಳ್ಳಲಾಗಿದೆ.
  • ಮಲ್ಪೆ: ಪಿರ್ಯಾದಿ ಜಯಕರ ದೇವಾಡಿಗ( ಪ್ರಾಯ: 46 ವರ್ಷ), ತಂದೆ:  ರಮೇಶ ದೇವಾಡಿಗ, ವಾಸ:  ಶಿವಾನಿ 21-43, 3 ನೇ ಕ್ರಾಸ್ ಮದ್ವನಗರ, ಕೊಡವೂರು ಗ್ರಾಮ ಇವರ ತಮ್ಮನಾದ ಹರೀಶ ದೇವಾಡಿಗ (45 ವರ್ಷ) ಅಂಬಾಗಿಲಿನಲ್ಲಿ  ಟೈಲರಿಂಗ್ ಕೆಲಸ ಮಾಡಿಕೊಂಡಿದ್ದು  ಓಂ ಶಾಂತಿಯಲ್ಲಿ  ಸದಸ್ಯನಾಗಿರುವುದರಿಂದ  ಈವರೆಗೂ ಮದುವೆ ಆಗಿರುವುದಿಲ್ಲ.  ಪ್ರಸ್ತುತ ಲಾಕ್ ಡೌನ್ ಅದ ಕಾರಣ  ಮನೆಯಲ್ಲಿದ್ದರು, ಸುಮಾರು 1 ವಾರದಿಂದ  ಹರೀಶನಿಗೆ ಎದೆನೋವು ಆರಂಭವಾಗಿ, ಆ  ಬಗ್ಗೆ  2 ಬಾರಿ ಅಂಬಲಪಾಡಿ ಶೆಣೈ ರವರ ಕ್ಲಿನಿಕ್  ಗೆ ಹೋಗಿ  ಚಿಕಿತ್ಸೆ ಯನ್ನು ಪಡೆದುಕೊಂಡಿರುತ್ತಾರೆ, ದಿನಾಂಕ 19-05-2021 ರಂದು  ರಾತ್ರಿ 09:30 ಗಂಟೆ ಯಿಂದ ದಿನಾಂಕ 20-05-21 ರಂದು ಬೆಳಿಗ್ಗೆ 06:00 ಗಂಟೆಯ ಮಧ್ಯಾವಧಿಯಲ್ಲಿ ಪಿರ್ಯಾದುದಾರರ ತಮ್ಮ ಹರೀಶ ಎದೆ ನೋವು ಇರುವುದರಿಂದಲೋ ಅಥವಾ ಇನ್ಯಾವುದೋ ಕಾರಣದಿಂದ ಜೀವನದಲ್ಲಿ  ಜಿಗುಪ್ಸೆಗೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಯುಡಿಆರ್‌ ಕ್ರಮಾಂಕ 26/21 ಕಲಂ. 174 ಸಿರ್‌ ಪಿಸಿಯಂತೆ ಪ್ರಕರಣ ದಾಖಲಿಸಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 20-05-2021 06:34 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080