ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಹೆಬ್ರಿ: ಫಿರ್ಯಾದಿದಾರರಾದ ವಿಶ್ವನಾಥ ಇವರು ಕರ್ನಾಟಕ ವಿಧಾನ ಸಭಾ ಚುನಾವಣೆ ಪ್ರಯುಕ್ತ  ಮಾನ್ಯ ಉಡುಪಿ ಜಿಲ್ಲಾಧಿಕಾರಿ ರವರ ಆದೇಶದಂತೆ  122 ನೇ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಹೆಬ್ರಿ ತಾಲೂಕು ನಾಡ್ಪಾಲು ಗ್ರಾಮದ ಸೋಮೇಶ್ವರ ಚಕ್ ಪೋಸ್ಟ್ ನಲ್ಲಿ S.S.T ಕರ್ತವ್ಯ ನಿರ್ವಹಿಸುತ್ತಿದ್ದು. ಅವರು ದಿನಾಂಕ: 19/04/2023 ರಂದು ರಾತ್ರಿ 10-00 ಗಂಟೆಯಿಂದ ಹೆಬ್ರಿ ಠಾಣೆಯ ಎ.ಎಸ್.ಐ ಮಹಾಲಿಂಗ, ಪಿ.ಸಿ 2589 ನೇ ರೆಹಮತ್ ಮತ್ತು ಅಬಕಾರಿ ಇಲಾಖೆಯ ಕೃಷ್ಣ ಅಚಾರಿ ರವರೊಂದಿಗೆ ವಾಹನ ತಪಾಸಣೆ ಮಾಡುತ್ತಿರುವಾಗ ಸಮಯ ಸುಮಾರು ರಾತ್ರಿ 11-30 ಗಂಟೆಗೆ ಅಗುಂಬೆ ಕಡೆಯಿಂದ KA.19.AD.2342 ನೇ ಆಶೋಕ್ ಲೈಲ್ಯಾಂಡ್ ಪಿಕಾಪ್ ವಾಹನವನ್ನು ಅದರ ಚಾಲಕ ರಾಜೇಂದ್ರ ಜೈನ್ ಇವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ವಾಹನವು ಚಾಲಕನ ಹತೋಟಿ ತಪ್ಪಿ ರಸ್ತೆಯ ತೀರಾ ಬಲಬದಿಗೆ ಬಂದು ರಸ್ತೆಯ ಬದಿಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಠಾಣಾ ಸಿಬ್ಬಂದಿ ರೆಹಮತ್ ಮತ್ತು ಅಬಕಾರಿ ಇಲಾಖೆಯ ಕೃಷ್ಣ ಅಚಾರಿ ಇವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಬಿದ್ದು.  ರೆಹಮತ್ ಇವರಿಗೆ ಬಲಕಾಲಿನ ಪಾದದ ಬಳಿ ಮೂಳೆ ಮುರಿತದ ಗಾಯವಾಗಿದ್ದು. ಕೃಷ್ಣ ಅಚಾರಿ ಇವರಿಗೆ ತಲೆಯ ಬಳಿ ಗಾಯವಾಗಿರುತ್ತದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 23/2023 ಕಲಂ: 279,337,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು: ಫಿರ್ಯಾದಿ ಕರುಣಾಕರ  ಕೊಠಾರಿ ಇವರ ತಮ್ಮ ಮೃತ ಶಾಂತರಾಮ ಕೊಠಾರಿವರು 6 ತಿಂಗಳಿಂದ ಕಾಲ್ತೋಡು ಗ್ರಾಮದ ರಾಜೀವ ಶೆಟ್ಟಿಯವರ ಮನೆಯಲ್ಲಿ  ಟಿಪ್ಪರ್ ಲಾರಿಯಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ: 17-04-2023 ರಂದು  ಸುಮಾರು 10:30 ಗಂಟೆಗೆ ಸಮಯಕ್ಕೆ ಪಿರ್ಯಾದಿದಾರರ  ಮನೆಗೆ ಬಂದಿದ್ದು 12:40 ಗಂಟೆಗೆ ಯಾರೋ ಪೋನ್ ಮಾಡಿ ಜೆ,ಸಿ,ಬಿ ಯವರಿಗೆ ಊಟ ತಂದು ಹೋಗಿ ಕೊಡುವಂತೆ ತಿಳಿಸಿದ್ದು ಮನೆಯಿಂದ ಹೊರಟು ಹೋಗಿರುತ್ತಾನೆ. ದಿನಾಂಕ: 18/04/2023 ಸಂಜೆ 18:00 ಗಂಟೆ ಸಮಯಕ್ಕೆ ರಾಜೀವ ಶೆಟ್ಟಿರವರು ದೂರವಾಣಿ ಕರೆ ಮಾಡಿ ಶಾಂತರಾಮ ತನ್ನ ಬಾಬ್ತು ಕೆ,ಎ,20/ವಿ/7677 ನೇ ಬೈಕನ್ನು ತೆಗದುಕೊಂಡು ಹೋಗಿರುತ್ತಾನೆ,. ನಿಮ್ಮಮನೆಗೆ ಬಂದಿರುತ್ತಾನೆಯೇ ಎಂದು ಕೇಳಿದ್ದು . ಪಿರ್ಯಾದಿದಾರರು ಮನೆಗೆ ಬಂದಿರುವುದಿಲ್ಲ ಎಂಬುವುದಾಗಿ ತಿಳಿಸಿರುತ್ತಾರೆ. ಈ ದಿನ ದಿನಾಂಕ: 19/04/2023 ರಂದು ಬೆಳಿಗ್ಗೆ 08:00 ಗಂಟೆಗೆ ಅಲಂದೂರು ಮುರಕೋಡಿ ಎಂಬಲ್ಲಿಂದ ಯಾರೋ ದೂರವಾಣಿ ಕರೆ ಮಾಡಿ ಸುಮಾರು 2 ದಿನದಿಂದ ಒಂದು ಮೋಟಾರು ಸೈಕಲ್ ಇರುವುದಾಗಿ ತಿಳಿಸಿದ್ದು ಪಿರ್ಯಾದಿದಾರರು ಹಾಗೂ ಇತರರು ಸೇರಿ ಅಲ್ಲಿಗೆ ಬಂದು ಹುಡುಕಾಡುವ ಸಮಯ  ಸರಕಾರಿ ಹಾಡಿಯಲ್ಲಿ ಪಿರ್ಯಾದಿದಾರ ತಮ್ಮ ಶಾಂತರಾಮ ಕೊಠಾರಿವರು ಕಾಟು ಮರಕ್ಕೆ ಹಗ್ಗಕಟ್ಟಿ ಕುತ್ತಿಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣಾ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ: 22/2023 ಕಲಂ 174    ಸಿ ಆರ್ ಪಿ ಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹಿರಿಯಡ್ಕ: ಪಿರ್ಯಾದಿ ರಂಜಿತ್ ಕುಮಾರ್ ಇವರ ತಂದೆ ರಾಜೀವ ಕುಲಾಲ್ (55) ರವರು ವಿಪರೀತ ಮದ್ಯಪಾನದ ಚಟವನ್ನು ಹೊಂದಿದ್ದು, ಮದ್ಯಪಾನ ಸೇವಿಸಿ ಆಗಾಗ ಮನೆಯಲ್ಲಿ ಗಲಾಟೆ ಮಾಡುತ್ತಿದ್ದರು. ಮದ್ಯಪಾನವನ್ನು ಬಿಡಲಾಗದೇ ಮಾನಸಿಕವಾಗಿ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿ:16-04-2023 ರಂದು ರಾತ್ರಿ 8:00 ಗಂಟೆಯಿಂದ ದಿ:19/04/2023 ರ ಬೆಳಿಗ್ಗೆ 10:30 ಗಂಟೆಯ ಮಧ್ಯಾವಧಿಯಲ್ಲಿ ಬೆಳ್ಳಂಪಳ್ಳಿ ಗ್ರಾಮದ ಕುಕ್ಕಿಕಟ್ಟೆಯ ಮೇಲಂತ ಹೆಗ್ಡೆ ರವರ ಬಾಬ್ತು ಜಾಗದ ಬಾವಿಯಲ್ಲಿ ಹಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣಾ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ: 15/2023 ಕಲಂ 174    ಸಿ ಆರ್ ಪಿ ಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಶಂಕರನಾರಾಯಣ: ದಿನಾಂಕ 18/04/2023 ರಂದು ರಾತ್ರಿ 23;30 ಗಂಟೆಯಿಂದ  ದಿನಾಂಕ 19/04/2023 ರಂದು ಬೆಳ್ಳಿಗೆ   10;00 ಗಂಟೆಯ ಮಧ್ಯಾವಧಿಯ್ಲಲಿ ಪಿರ್ಯಾದಿದಾರರಾದ ನಜಮುನ್ನೀಸಾ (53) ಗಂಡ. ಮೊಹಮ್ಮದ ರಪೀಕ್ ವಾಸ. ಮಾಶಾಅಲ್ಲಾ, ಹೈಕಾಡಿ, ಹಿಲಿಯಾಣ ಗ್ರಾಮ  ಬ್ರಹ್ಮಾವರ ರ ವಾಸ್ತವ್ಯದ ಮನೆಯ ಮೇಲಿನ ಮಹಡಿಯ ಬೆಡ್ ರೂಮಿನ ಒಳಗೆ ಕಬ್ಬಿಣದ ಕಪಾಟಿನ ಎರಡು ಬಾಗಿಲುಗಳನ್ನು ಯಾರೋ ಕಳ್ಳರು  ಮುರಿದು ಅದರ ಒಳಗೆ ಲಾಕರ್ ನಲ್ಲಿ  ಸಣ್ಣ  ಪೆಟ್ಟಿಗೆಯಲ್ಲಿ ಇಟ್ಟಿದ್ದ ಸುಮಾರು 9 ಪವನ್ ತೂಗದ ಬಂಗಾರ ಸರ ಒಂದು ಮತ್ತು ಒಂದು ಬಂಗಾರದ ಉಂಗುರ ಒಟ್ಟು ಸುಮಾರು 76 ಗ್ರಾಂ ಚಿನ್ನ, ಒಟ್ಟು ಅಂದಾಜು ಮೌಲ್ಯ ಸುಮಾರು 3 ಲಕ್ಷ 70 ಸಾವಿರ ಆಗಬಹುದು, ಸದ್ರಿ   ಬಂಗಾರವನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 41/2023 ಕಲಂ: 454,457,380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
    ಪಡುಬಿದ್ರಿ: ಪಿರ್ಯಾದಿದಾರರಾದ ಸಂತೋಷ್‌ (26) ತಂದೆ: ಭೋಜ ವಾಸ: ಮನೆ ನಂಬ್ರ 13/97, ತಂಕರಪಲ್ಕೆ ಮನೆ, ಶಿರ್ವ ಗ್ರಾಮ ಕಾಪು ತಾಲೂಕು, ಉಡುಪಿ ಇವರು ದಿನಾಂಕ 17/04/2023 ರಂದು ಬೆಳಿಗ್ಗೆ ಮನೆಯಿಂದ ತನ್ನ KA-20-ES-3243 ನೇ ಬಜಾಜ್‌ ಪಲ್ಸರ್‌ NS 200 ಬೈಕ್‌ನಲ್ಲಿ 11:45 ಗಂಟೆಗೆ ಕಾಪು ತಾಲೂಕು ಎರ್ಮಾಳು ಬಡಾ ಗ್ರಾಮದ ಉಚ್ಚಿಲಕ್ಕೆ ಬಂದು ಉಡುಪಿ ಹೋಗುವ ಬಸ್ಸು ನಿಲ್ದಾಣದ ಬಳಿ ಬೈಕ್‌ನ್ನು ನಿಲ್ಲಿಸಿ ಉಡುಪಿಗೆ ಆದರ್ಶ ಆಸ್ಪತ್ರೆಗೆ ಹೋಗಿ ಸಂಜೆ 5:45 ಗಂಟೆಗೆ ವಾಪಸ್ಸು ಬಂದಾಗ ತನ್ನ ಬೈಕ್‌ನಿಲ್ಲಿಸಿದ ಸ್ಥಳದಲ್ಲಿ ಇಲ್ಲದೇ ಇದ್ದು, ಯಾರೋ ಕಳ್ಳರು ದಿನಾಂಕ 17/04/2023 ರ 11:45 ಗಂಟೆಯಿಂದ ಸಂಜೆ 5:45 ಗಂಟೆಯ ಸಂತೋಷ್‌ ರವರ KA-20-ES-3243 ನೇ ಮೋಟಾರು ಸೈಕಲ್‌ನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳುವಾದ ಮೋಟಾರು ಸೈಕಲ್‌ನ ಅಂದಾಜು ಮೌಲ್ಯ ರೂಪಾಯಿ 50,000/- ಆಗಿದ್ದು, ಬೈಕ್‌ನ ಪತ್ತೆ ಬಗ್ಗೆ ಎಲ್ಲಾ ಕಡೆ ಹುಡುಕಾಡಿ ಬಂದು ದೂರು ನೀಡುವಾಗ ವಿಳಂಭವಾಗಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 52/2023 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಜುಗಾರಿ ಪ್ರಕರಣ

  • ಕುಂದಾಫುರ: ದಿನಾಂಕ 19/04/2023 ರಂದು 16:30 ಗಂಟೆ ಸಮಯಕ್ಕೆ ನೂತನ್ ಡಿ.ಈ ಪೊಲೀಸ್‌ ಉಪನಿರೀಕ್ಷಕರು (ತನಿಖೆ) ಕುಂದಾಪುರ ಗ್ರಾಮಾಂತರ ಪೊಲೀಸ್‌ಠಾಣೆ. ರವರಿಗೆ ಕುಂದಾಪುರ ತಾಲೂಕು ಕಂದಾವರ ಗ್ರಾಮದ ಹೇರಿಕೆರೆ ಎಂಬಲ್ಲಿ ಸಾರ್ವಜನಿಕ ಹಾಡಿಯಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಪಣವಾಗಿಟ್ಟು ತಮ್ಮ ಸ್ವಂತ ಲಾಭಕ್ಕಾಗಿ ಇಸ್ಪೀಟು ಎಲೆಗಳಿಂದ ಅಂದರ್ ಬಾಹರ್ ಎಂಬ ಇಸ್ಪೀಟು ಆಟವಾಡುತ್ತಿದ್ದಾರೆಂದು ಬಂದ  ಮಾಹಿತಿ ಮೇರೆಗೆ ಠಾಣೆಯಿಂದ ಸಿಬ್ಬಂದಿ ಹಾಗೂ ಪಂಚರೊಂದಿಗೆ ಇಲಾಖಾ ಜೀಪಿನಲ್ಲಿ ಹೊರಟು ಸದ್ರಿ ಸ್ಥಳಕ್ಕೆ ತಲುಪಿ ಮರೆಯಲ್ಲಿ ನಿಂತು ನೋಡಲಾಗಿ 5 ಜನರು ಹಣವನ್ನು ಪಣವಾಗಿಟ್ಟು ಇಸ್ಪೀಟು ಎಲೆಗಳಿಂದ ಅಂದರ್‌ ಬಾಹರ್‌ ಇಸ್ಪೀಟ್‌ ಆಟ ಆಡುತ್ತಿರುವುದನ್ನು ಖಚಿತಪಡಿಸಿಕೊಂಡು 17:05 ಗಂಟೆಗೆ ದಾಳಿ ನಡೆಸಿ 1).ದಿನೇಶ ದೇವಾಡಿಗ (42) ತಂದೆ: ನರಸಿಂಹ ದೇವಾಡಿಗ ವಾಸ:ಗುಂಡಾಡಿ ಮನೆ ಹೇರಿಕೆರೆ ಕಂದಾವರ ಗ್ರಾಮ ಕುಂದಾಪುರ ತಾಲೂಕು. 2).ಉದಯ ಪ್ರಾಯ 47 ವರ್ಷ ತಂದೆ: ಮಹಾಲಿಂಗ ವಾಸ: ಕಳಂಜೆ ಆನಗಳ್ಳಿ ಗ್ರಾಮ ಕುಂದಾಪುರ ತಾಲೂಕು. 3).ರೈಸ್ಅಹಮ್ಮದ್     ಪ್ರಾಯ 27 ವರ್ಷ ತಂದೆ: ರವೂಫ್ ವಾಸ:ಹೇರಿಕೆರೆ ಕಂದಾವರ ಗ್ರಾಮ ಕುಂದಾಪುರ ತಾಲೂಕು. 4.ದಿನೇಶ (40)  ತಂದೆ:ತಿಮ್ಮಪ್ಪ ವಾಸ:ಹೇರಿಕೆರೆ ಕಂದಾವರ ಗ್ರಾಮ ಕುಂದಾಪುರ ತಾಲೂಕು. 5.ನಾರಾಯಣ (62) ತಂದೆ: ಮೈದಾ ವಾಸ:ಗುಂಡಾಡಿ ಮನೆ ಹೇರಿಕೆರೆ ಕಂದಾವರ ಗ್ರಾಮ ಕುಂದಾಪುರ ತಾಲೂಕು. ಜನರನ್ನು ಸಿಬ್ಬಂದಿಯವರ ಸಹಾಯದಿಂದ ವಶಕ್ಕೆ ಪಡೆದುಕೊಂಡಿದ್ದು ಇಸ್ಪೀಟ್‌ಜುಗಾರಿ ಆಟಕ್ಕೆ ಬಳಸಿದ್ದ ನಗದು ರೂಪಾಯಿ. ನಗದು ರೂಪಾಯಿ 4,600/--, 2) ಬಿಳಿ ಬಣ್ಣದ ಪ್ಲಾಸ್ಟಿಕ್‌ಚೀಲ-1, 3) 52 ಇಸ್ಪೀಟ್ ಎಲೆಗಳನ್ನು ಸ್ವಾಧೀನ ಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಫುರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 24/20223 ಕಲಂ: 87 ಕೆ.ಪಿ ಆ್ಯಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಮಣಿಪಾಲ: ದಿನಾಂಕ 19/04/2023 ರಂದು 11:00 ಗಂಟೆಗೆ ಪಿರ್ಯಾದಿದಾರರಾದ ದೇವರಾಜ್‌ ಟಿ.ವಿ. ಪೊಲೀಸ್‌ ನಿರೀಕ್ಷಕರು, ಮಣಿಪಾಲ ಪೊಲೀಸ್‌ ಠಾಣೆ ಇವರಿಗೆ ಬಂದ ಖಚಿತ ವರ್ತಮಾನ ದಂತೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರ ಡಾ ವಿ ಎಸ್‌ ಆಚಾರ್ಯ ರಸ್ತೆ Mandavi Square ರೂಮ್‌ ನಂಬರ್‌ 03 The Smoke Co. ಎಂಬ ಅಂಗಡಿಯಲ್ಲಿ ಅಕ್ರಮವಾಗಿ ನಿಷೇದಿತ ಇ - ಸಿಗರೇಟ್‌  ಮಾರಾಟ ಮಾರುತ್ತಿರುವ ವ್ಯಕ್ತಿಗಳನ್ನು ದಾಳಿ ನಡೆಸಲು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ 11:55 ಗಂಟೆಗೆ ದಾಳಿ ನಡೆಸಿ ಆಪಾದಿತ ಮೊಹಮ್ಮದ್‌ ಉನೈಶ್, (24) ತಂದೆ: ಬಿ ಕೆ ಮೊಹಮ್ಮದ್‌ ವಾಸ: ಕಾಜೂರ್‌ ಹೌಸ್‌ ಬಡಜೆ ಗ್ರಾಮ ಮಂಜೇಶ್ವರ ತಾಲೂಕು ಕಾಸರಗೋಡು ಕೇರಳ ರಾಜ್ಯ ಆತನ ನಡೆಸುತ್ತಿದ್ದ ಅಂಗಡಿಯಲ್ಲಿದ್ದ ಅಕ್ರಮವಾಗಿರಿಸಿದ್ದ ನಿಷೇದಿತ 1) ELFBAR LOWIT 5500 ಎಂದು ನಮೂದು ಇರುವ 21 ಈ ಸಿಗರೇಟ್‌ ಗಳು ಅಂದಾಜು 31,500/- ಆಗಿರುತ್ತದೆ 2) YUOTO XXL  ಎಂದು ನಮೂದು ಇರುವ 49 ಈ ಸಿಗರೇಟ್‌ ಗಳು ಅಂದಾಜು ಮೌಲ್ಯ – 49,000/- ಆಗಿರುತ್ತದೆ. 3) YUOTO THANDS BANANA ICE ಎಂದು ನಮೂದು ಇರುವ 8 ಈ ಸಿಗರೇಟ್‌ ಗಳು ಅಂದಾಜು ಮೌಲ್ಯ – 10,000/- ಆಗಿರುತ್ತದೆ. 4) LUSH ICE ಎಂದು ನಮೂದು ಇರುವ 3 ಈ ಸಿಗರೇಟ್‌ ಗಳು ಅಂದಾಜು ಮೌಲ್ಯ – 3750/- ಆಗಿರುತ್ತದೆ. 5) YUOTO THANOS Blue berry Ice ಎಂದು ನಮೂದು ಇರುವ 8 ಈ ಸಿಗರೇಟ್‌ ಗಳು ಅಂದಾಜು ಮೌಲ್ಯ – 10,000/- ಆಗಿರುತ್ತದೆ 6) FLFBAR BC5000 ಎಂದು ನಮೂದು ಇರುವ 3 ಈ ಸಿಗರೇಟ್‌ ಗಳು ಅಂದಾಜು ಮೌಲ್ಯ – 4,500/- 7) YUOTO 5000 PIFFS ಎಂದು ನಮೂದು ಇರುವ 3 ಈ ಸಿಗರೇಟ್‌ ಗಳು ಅಂದಾಜು ಮೌಲ್ಯ – 3,750/- 8) CALIBURN ಎಂದು ನಮೂದು ಇರುವ  ಈ ಸಿಗರೇಟ್‌ 1 ಅಂದಾಜು ಮೌಲ್ಯ – 2,000/- 9) ELFBAR TE6000 ಎಂದು ನಮೂದು ಇರುವ  ಈ ಸಿಗರೇಟ್‌ 1 ಅಂದಾಜು ಮೌಲ್ಯ – 1,500/- 10) YUOTO THANDS BANANA ICE 5000 PUFFS ಎಂದು ನಮೂದು ಇರುವ 2 ಈ ಸಿಗರೇಟ್‌ ಗಳು ಅಂದಾಜು ಮೌಲ್ಯ – 2,000/- 11) ESSY ಎಂದು ಬರೆದಿರುವ ಸಿಗರೇಟ್‌-14 ಪ್ಯಾಕೇಟ್‌ ಗಳು ಅಂದಾಜು ಮೌಲ್ಯ 5500/- 12) Manchester ಎಂದು ಬರೆದಿರುವ ಸಿಗರೇಟ್‌-05 ಪ್ಯಾಕೇಟ್‌ ಗಳು ಅಂದಾಜು ಮೌಲ್ಯ  2000/- 13) Block ಎಂದು ಬರೆದಿರುವ ಸಿಗರೇಟ್‌-04 ಪ್ಯಾಕೇಟ್‌ ಗಳು ಅಂದಾಜು ಮೌಲ್ಯ 1600/- 14) Mond ಎಂದು ಬರೆದಿರುವ ಸಿಗರೇಟ್‌-3 ಪ್ಯಾಕೇಟ್‌ ಗಳು ಅಂದಾಜು ಮೌಲ್ಯ 1200/- 15) DUNHILL Switch ಎಂದು ಬರೆದಿರುವ ಸಿಗರೇಟ್‌-2 ಪ್ಯಾಕೇಟ್‌ ಗಳು ಅಂದಾಜು ಮೌಲ್ಯ 800/- ಆಗಿರುತ್ತದೆ,ಇವುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿರುತ್ತದೆ, ಸ್ವಾಧೀನಪಡಿಸಿಕೊಂಡ ಸಿಗರೇಟ್‌ ಮತ್ತು ಇ - ಸಿಗರೇಟ್‌ಗಳ ಒಟ್ಟು ಅಂದಾಜು ಮೌಲ್ಯ ರೂಪಾಯಿ 1,29,100/-ಆಗಿರುವುದಾಗಿದೆ.  ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 101/2023 ಕಲಂ: 7(iv) 7, 8 Prohibition of Electronic Cigarettes Act 2019 ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 20-04-2023 10:31 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080