ಅಭಿಪ್ರಾಯ / ಸಲಹೆಗಳು

ಮಟ್ಕಾ ಜುಗಾರಿ ಪ್ರಕರಣ

 • ಕುಂದಾಪುರ: ದಿನಾಂಕ 19/04/2022 ರಂದು ಸದಾಶಿವ ಆರ್ ಗವರೋಜಿ, ಪೊಲೀಸ್‌ ಉಪನಿರೀಕ್ಷಕರು, ಕುಂದಾಪುರ ಪೊಲೀಸ್ ಠಾಣೆ  ಇವರು ಸಿಬ್ಬಂದಿಯವರೊಂದಿಗೆ  ರೌಂಡ್ಸ್ ಕರ್ತವ್ಯದಲ್ಲಿರುವಾಗ 10:30 ಗಂಟೆಗೆ ಕುಂದಾಪುರ ತಾಲೂಕು ಕೋಟೇಶ್ವರ ಗ್ರಾಮದ ಕಾಗೇರಿಯ  ನಂದಿ ಹೋಟೇಲ್ ಬಳಿ ಮಟ್ಕಾ ಜುಗಾರಿ ಆಟ ಆಡುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ಕೋಟೇಶ್ವರ ಗ್ರಾಮದ ಕಾಗೇರಿಯ  ನಂದಿ ಹೋಟೇಲ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರನ್ನು ಸೇರಿಸಿಕೊಂಡಿದ್ದು ಮಟ್ಕಾ ಜುಗಾರಿ ಆಟ ಆಡುತ್ತಿದ್ದುದನ್ನು  ಖಚಿತಪಡಿಸಿಕೊಂಡು ದಾಳಿ ಮಾಡಿದಾಗ ಸಾರ್ವಜನಿಕರು ಓಡಿ ಹೋಗಿದ್ದು , ಮಟ್ಕಾ ಬರೆಯುತ್ತಿದ್ದು ವ್ಯಕ್ತಿಯನ್ನು ವಶಕ್ಕೆ ಪಡೆದು ಆತನಿಂದ  ಮಟ್ಕಾ ಜುಗಾರಿ ಆಟದಿಂದ ಸಂಗ್ರಹಿಸಿದ  ನಗದು ರೂಪಾಯಿ 430/-, ಬಾಲ್ ಪೆನ್-1 ಮತ್ತು ಮಟ್ಕಾ ನಂಬ್ರ ಬರೆದ ಚೀಟಿ -1 ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 41/2022 ಕಲಂ: 78 (i) (iii) KP ACT ರಂತೆ ಪ್ರಕರಣ ದಾಖಲಾಗಿರುತ್ತದೆ. 

ಇತರ ಪ್ರಕರಣ

 • ಉಡುಪಿ: ಪಿರ್ಯಾದಿದಾರರಾದ ನಿತಿನ್‌ (28), ತಂದೆ: ಮಾಧವ ಪೂಜಾರಿ, ವಾಸ: ನಡುಮನೆ, 2-92(A), ಪರಿಯಾಳ, ಅಂಬ್ಲಮೊಗರು, ಮಂಗಳೂರು, ದ.ಕ ಜಿಲ್ಲೆ ಇವರ ಅಣ್ಣ ಶರಣ್‌ ಕುಮಾರ್‌ (31) ರವರು ಒರ್ವ ಹುಡುಗಿಯನ್ನು ಪ್ರೀತಿಸುತ್ತಿದ್ದು, ಆಕೆಗೆ 3 ತಿಂಗಳ ಹಿಂದೆ ಮದುವೆ ನಿಶ್ಚಿತಾರ್ಥವಾಗಿದ್ದು, ತದನಂತರ ದಿನಾಂಕ 17/04/2022 ರಂದು ಆರೋಪಿತರಾದ ತಿಲಕ್‌ರಾಜ್‌, ಸೋಮನಾಥ್‌, ತಾರಾನಾಥ್‌, ಲತಾ ಹಾಗೂ ಇನ್ನೊರ್ವ ಸಂಬಂಧಿ ರವರು ಸಮಾನ ಉದ್ದೇಶದಿಂದ ಅವರ ಮನೆಗೆ ಕರೆಯಿಸಿಕೊಂಡು ಹುಡುಗಿಯ ಸಹವಾಸ ಬಿಡಬೇಕೆಂದು ತಾಕಿತು ಮಾಡಿ ಬೈದು, ಅವಳ ಸಹವಾಸ ಬಿಡದಿದ್ದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದು, ಇದರಿಂದ ಶರಣ್‌ ಕುಮಾರ್‌  ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 18/04/2022 ರಂದು ಬೆಳಿಗ್ಗೆ 08:30 ಗಂಟೆಯಿಂದ ದಿನಾಂಕ 19/04/2022 ರಂದು 13:00 ಗಂಟೆ ನಡುವಿನ ಸಮಯದಲ್ಲಿ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಕೆ.ಎಸ್‌.ಆರ್‌.ಟಿ.ಸಿ ಬಸ್‌ ನಿಲ್ದಾಣದ ಬಳಿ ಇರುವ ಶಾಂಭವಿ ಹೋಟೇಲ್‌ನ ರೂಮ್‌ ನಂಬ್ರ: 118 ರಲ್ಲಿ ಸೀಲಿಂಗ್‌ ಫ್ಯಾನ್‌ಗೆ ಬೆಡ್‌ಶೀಟ್‌ ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಆರೋಪಿತರು ಜೀವ ಬೆದರಿಕೆ ಹಾಕಿ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 59/2022 ಕಲಂ: 306 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ:  ಪಿರ್ಯಾದಿದಾರರಾದ ರಂಜಿತ(35), ಗಂಡ: ವಿಕ್ರಮ ರಾಜ್‌,ವಾಸ: ಮಮತಾ ನಿಲಯ, ಗರಡಿ ರಸ್ತೆ, ಬನ್ನಂಜೆ, ಉಡುಪಿ  ಇವರು ಆಪಾದಿತ 1) ವಿಕ್ರಮ ರಾಜ್‌ ಎಂಬುವವರನ್ನು ದಿನಾಂಕ 27/04/2012 ರಂದು ಗುರುಹಿರಿಯರು ನಿಶ್ಚಿಯಿಸಿದಂತೆ ಸೆಬಸ್ಟಿನ್ ಚರ್ಚ್‌ಹಾಲ್‌ನಲ್ಲಿ ಶಾಸ್ತ್ರೋಕ್ತವಾಗಿ  ವಿವಾಹವಾಗಿದ್ದು ವಿವಾಹದ ಸಂಪೂರ್ಣ  ವೆಚ್ಚವನ್ನು ಪಿರ್ಯಾದಿದಾರರ ತಂದೆ ತಾಯಿ ಮಾಡಿರುತ್ತಾರೆ. ಪಿರ್ಯಾದಿದಾರರು ವಿವಾಹದ ನಂತರ 6 ತಿಂಗಳು ಆರೋಪಿಯ ಮನೆಯಾದ ಕುದ್ರೋಳಿಯಲ್ಲಿ  ವಾಸವಾಗಿದ್ದು ಆ ಸಮಯದಲ್ಲಿ ಆರೋಪಿ 1ನೇಯವರು  ವಿದೇಶದಲ್ಲಿದ್ದು ಆಪಾದಿತ 2) ಸುಧಾಕರ ಕುದ್ರೋಳಿ  ಪಿರ್ಯಾದಿದಾರರಿಗೆ ವಿವಿಧ ರೀತಿಯಲ್ಲಿ ಚುಚ್ಚು ಮಾತುಗಳಿಂದ  ಮಾನಸಿಕ ಹಿಂಸೆಯನ್ನು ನೀಡುತ್ತಿದ್ದರು. ದಿನಾಂಕ 29/11/2012ರಂದು ಪಿರ್ಯಾದಿದಾರರು ಅಬುದಾಬಿಗೆ ಹೋಗಿ ಆಪಾದಿತ 1ನೇಯವರೊಂದಿಗೆ ವಾಸ ಮಾಡಿಕೊಂಡಿದ್ದು ಅಲ್ಲಿ ಕೆಲಸಕ್ಕೆ ಸೇರಿದ್ದು ಆಪಾದಿತ 1ನೇಯವನು ಪಿರ್ಯಾದಿದಾರರ ಸಂಪೂರ್ಣ ಸಂಬಳವನ್ನು  ಬಲವಂತವಾಗಿ ತೆಗೆದುಕೊಂಡು ಕೊಡದಿದ್ದರೆ ವಿಚ್ಚೇದನ ನೀಡುವುದಾಗಿ ಹೆದರಿಸುತಿದ್ದನು. 1ನೇ ಆರೋಪಿಯ ಕಿರುಕುಳದಿಂದ ಬೇಸತ್ತು  ಭಾರತಕ್ಕೆ ಬಂದು  ತನ್ನ ಹೆತ್ತವರಿಗೆ ಹಾಗೂ 2ನೇ ಆಪಾದಿತನಿಗೂ ತಿಳಿಸಿದ್ದು ಆಗ 1 ನೇ ಆಪಾದಿತ ಪಿರ್ಯಾದಿದಾರರಿಗೆ ಫೋನ್ ಮಾಡಿ ತನ್ನ ಮನೆಗೆ ಹೋಗಬೇಕು ಇಲ್ಲದಿದ್ದರೆ ನಿನ್ನ ಮನೆಯವರನ್ನು ಕತ್ತಿಯಿಂದ ಕಡಿದು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾನೆ. ಪಿರ್ಯಾದಿದಾರರು ಆಪಾದಿತ 1ನೇಯವನಿಗೆ ಹೆದರಿ ಪುನಃ ವಿದೇಶಕ್ಕೆಹೋಗಿದ್ದು 2017 ರಲ್ಲಿ ಗರ್ಭೀಣಿಯಾಗಿ  ವಾಪಾಸು ಭಾರತಕ್ಕೆ ಬಂದು ದಿನಾಂಕ 21/07/2018 ರಂದು ಗಂಡು ಮಗುವಿಗೆ ಜನ್ಮ ನೀಡಿರುತ್ತಾರೆ. ಆದರೂ ಆಪಾದಿತ 1ನೇಯವನು  ಮಾನಸಿಕ ಹಿಂಸೆಯನ್ನು ನೀಡುತ್ತಿದ್ದ. 2018 ರ ಡಿಸೆಂರ್ ತಿಂಗಳಲ್ಲಿ  ಪಿರ್ಯಾದಿದಾರರು ಅವರ ತಾಯಿ ಮನೆಯಲ್ಲಿರುವಾಗ  ಆರೋಪಿಯು ಪಿರ್ಯಾದಿದಾರರ ಮನೆಗೆ ಬಂದು ಗಲಾಟೆ ಮಾಡಿ ತಾನು ಹೇಳಿದ ಹಾಗೇ ಕೇಳದಿದ್ದರೆ ಜೀವ ಸಹಿತ ಬಿಡುವುದಿಲ್ಲವಾಗಿ  ಜೀವ ಬೆದರಿಕೆ ಒಡ್ಡಿರುತ್ತಾನೆ. ಆಪಾದಿತ 1ನೇಯವನ ಎಲ್ಲಾ ಕೃತ್ಯಗಳಿಗೆ 2ನೇ ಆರೋಪಿ ಕುಮ್ಮಕ್ಕು ನೀಡಿ  ಪಿರ್ಯಾದಿದಾರರಿಗೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಉಡುಪಿ ಮಹಿಳಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 31/2022 ಕಲಂ: 498(A), 506 ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾಪು: ಪಿರ್ಯಾದಿದಾರರಾದ ರಾಜೇಶ್ ಕಾಮತ್ (47), ತಂದೆ:ದಿ. ನಾಗೇಶ್ ಕಾಮತ್ ,ವಾಸ: ಮಹಾದೇವಿ. ಕಟಪಾಡಿ ಕೋಟೆ ಗ್ರಾಮ ಕಾಪು ತಾಲೂಕು ಉಡುಪಿ ಜಿಲ್ಲೆ ಇವರು ಮೂಡಬೆಟ್ಟು ಗ್ರಾಮದ ಕಟಪಾಡಿ ಹಳೇರಸ್ತೆ ಜಂಕ್ಷನ್‌ನಲ್ಲಿ ಮಹಾದೇವಿ ಟ್ರೇಡರ್ಸ್ ಹೆಸರಿನ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದು ದಿನಾಂಕ 19/04/2022 ರಂದು ರಾತ್ರಿ 00:45 ಗಂಟೆಗೆ ಪಿರ್ಯಾದಿದಾರರ ಪರಿಚಯದವರೊಬ್ಬರು ಪೋನ್ ಮಾಡಿ ನಿಮ್ಮ ಅಂಗಡಿ ಹಂಚಿನ ಮಾಡಿನ ಮೇಲೆ ಓರ್ವ ವ್ಯಕ್ತಿ ಇರುವುದಾಗಿ ತಿಳಿಸಿದಂತೆ ಪಿರ್ಯಾದಿದಾರರು 01:00 ಗಂಟೆ ಸಮಯಕ್ಕೆ  ಅಂಗಡಿಗೆ ಬಂದು ಟಾರ್ಚ ಬೆಳಕಿನಲ್ಲಿ  ನೋಡುವಾಗ ಓರ್ವ ವ್ಯಕ್ತಿ ಪಿರ್ಯಾದಿದಾರರ ಅಂಗಡಿಯ ಮೇಲ್ಚಾವಣಿಯ ಹಂಚನ್ನು ತೆಗೆದು  ಅಂಗಡಿಯ ಒಳಗೆ ಹೋಗಲು ಪ್ರಯತ್ನಿಸುತ್ತಿದ್ದು, ಪಿರ್ಯಾದಿದಾರರನ್ನು ನೋಡಿ  ಓಡಿ ಹೋಗಿದ್ದು   ವ್ಯಕ್ತಿಯು ಪಿರ್ಯಾದಿದಾರರ ಪರಿಚಯದ ಪ್ರವೀಣ್ ಎಂಬುವವನಾಗಿದ್ದು ಈತನು ಪಿರ್ಯಾದಿದಾರರ ಅಂಗಡಿಯ ಮೇಲ್ಚಾವಣಿಯ ಹಂಚನ್ನು ತೆಗೆದು  ಒಳಹೋಗಲು ಪ್ರಯತ್ನಿಸಿ ಕಳ್ಳತನಕ್ಕೆ ಪ್ರಯತ್ನಿಸಿರುವುದಾಗಿ ನೀಡಿದ ದೂರಿನಂತೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 39/2022 ಕಲಂ: 457, 380, 511 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 20-04-2022 10:23 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080