ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

  • ಗಂಗೊಳ್ಳಿ : ಫಿರ್ಯಾದಿದಾರರಾದ ಡಿ ಮಹಾಬಲೇಶ್ವರ ಕಾರಂತರವರು ತನ್ನ ಸ್ಕೂಟರ್ ನಲ್ಲಿ  ದಿನಾಂಕ: 19-04-2022 ರಂದು ಬಂಟ್ವಾಡಿ ಕಡೆಯಿಂದ ಮುಳ್ಳಿಕಟ್ಟೆ ಕಡೆಗೆ ಬರುತ್ತಿರುವಾಗ ಕುಂದಾಪುರ ತಾಲೂಕು ಹೊಸಾಡು ಗ್ರಾಮದ ಹೊಸಾಡು ಹಿರಿಯ ಪ್ರಾಥಮಿಕ ಶಾಲೆ ಬಳಿ ತಲುಪುವಾಗ ಸಮಯ ಸುಮಾರು 19:15 ಗಂಟೆಗೆ ಉದಯ ದೇವಾಡಿಗ ಎಂಬವರು KA-20 B-987 ನೇ ಗೂಡ್ಸ್ ವಾಹನವನ್ನು ಬಂಟ್ವಾಡಿ ಕಡೆಯಿಂದ ಮುಳ್ಳಿಕಟ್ಟೆ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆ ನೀಡದೇ ಎಡಕ್ಕೆ ತಿರುಗಿಸಿದ ಪರಿಣಾಮ  ಅದರ ಹಿಂದುಗಡೆಯಿಂದ ಶ್ರೀಕರ ಐತಾಳ್ ರವರು ಸವಾರಿ ಮಾಡಿಕೊಂಡು ಬರುತ್ತಿದ್ದ KA-20 U-7901 ನೇ ಮೋಟಾರ್  ಸೈಕಲ್ ಗೆ  ಡಿಕ್ಕಿ ಹೊಡೆದಿದ್ದು  ಶ್ರೀಕರ  ಐತಾಳ್ ರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಮುಖಕ್ಕೆ ಹಾಗೂ ದವಡೆಗೆ ತೀವ್ರ ಜಖಂ ಉಂಟಾಗಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ  ಚಿಕಿತ್ಸೆ ಬಗ್ಗೆ  ಮಣಿಪಾಲ ಕೆ.ಎಂ.ಸಿ  ಆಸ್ಪತ್ರೆಗೆ ಕರೆದುಕೊಂಡು  ಹೋಗಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 36/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

 

ಇತರ ಪ್ರಕರಣ

  • ಗಂಗೊಳ್ಳಿ: ಫಿರ್ಯಾದಿದಾರರಾದ ಸುಬ್ರಹ್ಮಣ್ಯ ಹೆಬ್ಬಾರ್ ರವರು ತನ್ನ ಮದುವೆಯ ಬಗ್ಗೆ ಮದುವೆ ಬ್ರೋಕರ್ ಶಿರಸಿಯ ಗೀತಾ ಹೆಗಡೆಯವರನ್ನು ಫೋನ್ ಮೂಲಕ  ಸಂಪರ್ಕಿಸಿ ಮದುವೆಯ ಬಗ್ಗೆ ಹುಡುಗಿ ಇದ್ದಲ್ಲಿ ತಿಳಿಸುವಂತೆ ಹೇಳಿದಂತೆ  2021 ನೇ ನವೆಂಬರ್ ಮೊದಲ ವಾರದಲ್ಲಿ ಗೀತಾ ಹೆಗಡೆಯವರು ಫಿರ್ಯಾದಿದಾರರಿಗೆ ಫೋನ್ ಮಾಡಿ ಹುಡುಗಿ ಇರುವುದಾಗಿ  ಮದುವೆ ಮಾತುಕತೆ ಬರುವಂತೆ ತಿಳಿಸಿದಂತೆ ಫಿರ್ಯಾದಿದಾರರು ತನ್ನ ಅಕ್ಕ, ತಂದೆ ಹಾಗೂ ತಾಯಿ ಜೊತೆ ಗೀತಾ ಹೆಗಡೆಯವರ ಮನೆಗೆ ಹೋಗಿ ಮಾತುಕತೆ ನಡೆಸಿ ಮದುವೆಗೆ ಒಪ್ಪಿದ್ದು  ನೆಂಟಸ್ತಿಕೆ ಮಾಡಿಸಿಕೊಟ್ಟ ಬಗ್ಗೆ ಗೀತಾ ಹೆಗಡೆಯವರು ನಿಶ್ಚಿತಾರ್ಥ ಆದ ಕೂಡಲೇ 90,000/- ರೂಪಾಯಿ ಹಾಗೂ ಮದುವೆ ನಂತರ 90,000 ಹಣ ಒಟ್ಟು 1,80,000/- ಹಣ ಕೊಡುವಂತೆ ತಿಳಿಸಿರುತ್ತಾರೆ. ದಿನಾಂಕ: 17-011-2021 ರಂದು ಬೈಂದೂರು ತಾಲೂಕು ನಾಡ ಗ್ರಾಮದ ಪಡುಕೋಣೆ ವೆಂಕನಾಡಿ  ಫಿರ್ಯಾದಿದಾರರ ಮನೆಯಲ್ಲಿ ನಿಶ್ಚಿತಾರ್ಥವಾಗಿದ್ದು ಅದೇ ದಿನ ಬ್ಯಾಂಕ್ ಆಫ್ ಬರೋಡ ನಾಡ ಶಾಖೆಯಿಂದ ಅಕೌಂಟ್ ನಿಂದ ಗೀತಾ ಹೆಗಡೆಯವರ ಅಕೌಂಟ್ ಗೆ  90,000/- ಹಣವನ್ನು ಹಾಕಿರುವುದಾಗಿದೆ. ನಂತರ ದಿನಾಂಕ: 19-11-2021 ರಂದು ನಿಶ್ಚಿತಾರ್ಥವಾದ ಹುಡುಗಿ ಫಿರ್ಯಾದಿದಾರರಿಗೆ ಫೋನ್ ಮಾಡಿ ತಾನು ಬೇರೆ ಜಾತಿಯವಳು ಮದುವೆ ಇಷ್ಟವಿಲ್ಲ ಬೇರೆ ಮದುವೆ ಮಾಡಿಕೊಳ್ಳಿ ಎಂದು ತಿಳಿಸಿದ ಮೇರೆಗೆ ಮದುವೆ ಮುರಿದುಹೋಗಿರುತ್ತದೆ. ಗೀತಾ ಹೆಗಡೆಯವರಲ್ಲಿ 90,000/- ಹಣ ವಾಪಾಸ್ ಹಿಂತಿರುಗಿಸುವಂತೆ ಕೇಳಿದಾಗ ಹಣ ಕೊಡಲು ನಿರಾಕರಿಸಿರುತ್ತಾರೆ. ಗೀತಾ ಹೆಗಡೆಯವರು ಮೋಸ ಮಾಡುವ ಉದ್ದೇಶದಿಂದಲೇ ರೂಪಯಿ 90,000/- ಹಣವನ್ನು ಫಿರ್ಯಾದಿದಾರರಿಂದ ಪಡೆದು ಮೋಸ ಮಾಡಿರುತ್ತಾರೆ ಎಂಬಿತ್ಯಾದಿ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 37/2022 ಕಲಂ: 420  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಫಿರ್ಯಾದಿ ಮೋಹಿನಿ ಇವರು ಕಾರ್ಕಳ ತಾಲೂಕು ಮಿಯ್ಯಾರು ಗ್ರಾಮದ ಪಡ್ಡಾಯಿಗುಡ್ಡೆ ಎಂಬಲ್ಲಿ ಸಂಸಾರದೊಂದಿಗೆ ವಾಸವಾಗಿದ್ದು ತನ್ನಮನೆಗೆ ತಾಗಿಕೊಂಡಿರುವ ಟರ್ಪಲ್ ಶೀಟಿನ ಕೊಟ್ಟಿಗೆಯಲ್ಲಿ ಒಂದು ಕಪ್ಪು ಬಣ್ಣದ ದನವನ್ನು ಹಾಗೂ ಕೋಳಿಗಳನ್ನು ಸಾಕಿಕೊಂಡಿದ್ದು ದಿನಾಂಕ: 19.04.2022 ರಂದು ರಾತ್ರಿ 10:00 ಗಂಟೆಗೆ ಕೊಟ್ಟಿಗೆಯಲ್ಲಿ ದನವನ್ನು ಕಟ್ಟಿ, ಕೋಳಿಯನ್ನು ಕೂಡಿಹಾಕಿ ಮಲಗಿಕೊಂಡಿದ್ದು  ದಿನಾಂಕ: 20.04.2022 ರಂದು ಬೆಳಗ್ಗೆ 05:30 ಗಂಟೆಗೆ ದನವನ್ನು ಕರೆಯಲು ಹೋದಾಗ  ದನವು ಕಾಣದೇ ಇದ್ದು ಹಾಗೂ ಗೂಡಿನಲ್ಲಿದ್ದ 4 ಹುಂಜ ಹಾಗೂ 2 ಹೆಂಟೆಯನ್ನು ಅಲ್ಲದೇ ಮನೆಯ ಹೊರಗಡೆ ಇದ್ದ 2 ಕಪ್ಪು ಬಣ್ಣದ ನಾಯಿ ಮರಿ ಕಾಣದೇ ಇದ್ದು ಹುಡುಕಾಡಿದರು ಪತ್ತೆಯಾಗಿರುವುದಿಲ್ಲ ಯಾರೋ ಕಳ್ಳರು 25,000/- ಮೌಲ್ಯದ ದನವನ್ನು 12,000/- ಮೌಲ್ಯದ ಕೋಳಿಗಳನ್ನು  ಹಾಗೂ 100/- ರೂಪಾಯಿ ಮೌಲ್ಯದ ನಾಯಿ ಮರಿಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬಿತ್ಯಾದಿ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 54/2022 ಕಲಂ 379, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಅಸ್ವಾಭಾವಿಕ ಮರಣ ಪ್ರಕರಣ

  • ಕಾಪು: ಪಿರ್ಯಾದಿ ಗಣೇಶ ದೇವಾಡಿಗ ಇವರು ಹಾಗೂ ಅವರ ಅಣ್ಣನಾದ ರಮೇಶ ದೇವಾಡಿಗರ ಕುಟುಂಬವು ಕಾಪು ತಾಲೂಕಿನ ಇನ್ನಂಜೆ ಗ್ರಾಮದ ಕಲ್ಯಾಲು ಹರಿಕೃಪಾ ನಿವಾಸ ಎಂಬ ಮನೆಯಲ್ಲಿ  ಒಟ್ಟಿಗೆ ವಾಸವಾಗಿದ್ದು. ಪಿರ್ಯಾದಿದಾರರ  ಅಣ್ಣನಾದ ರಮೇಶ್ ದೇವಾಡಿಗರವರಿಗೆ ಪ್ರಾಯ ಸುಮಾರು 53 ವರ್ಷ ವಯಸ್ಸಾಗಿದ್ದು, ಅವರಿಗೆ ಕೆಲವು ವರ್ಷಗಳಿಂದ ಸಕ್ಕರೆ ಖಾಯಿಲೆ, ಗ್ಯಾಂಗರಿನ್, ಹಾಗೂ ಎದೆಗೆ ಸಂಬಂದಿಸಿದ ಖಾಯಿಲೆಗಳಿದ್ದು, ಈ ಬಗ್ಗೆ ಅವರು ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ದಿನಾಂಕ 19-04-2022 ರಂದು ರಾತ್ರಿ 11:00 ಗಂಟೆ ಸಮಯಕ್ಕೆ ಪಿರ್ಯಾದಿದಾರರ ಅಣ್ಣ ರಮೇಶ ದೇವಾಡಿಗನು  ಮನೆಯಲ್ಲಿ ಮಲಗಿದ್ದವನು ಮಾತನಾಡಿಸಿದರೂ ಮಾತನಾಡದೆ ಇದ್ದು ಕೂಡಲೇ ಆತನನ್ನು ಒಂದು ವಾಹನದಲ್ಲಿ ಉಡುಪಿಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ರಾತ್ರಿ 12:00 ಗಂಟೆಗೆ ಪರೀಕ್ಷಿಸಿ ಅಣ್ಣ ರಮೇಶ್  ದೇವಾಡಿಗನು ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 09/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 20-04-2022 05:55 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080